Tag: Pub G

  • ರೈಲಲ್ಲಿ ಊರಿಗೆ ಹೊರಟ್ಟಿದ್ದ ಪಬ್‌ಜಿ ಪಾರ್ಟ್ನರ್‌ಗಾಗಿ ಹುಸಿ ಬಾಂಬ್‌ ಕರೆ ಮಾಡಿದ ಬಾಲಕ

    ರೈಲಲ್ಲಿ ಊರಿಗೆ ಹೊರಟ್ಟಿದ್ದ ಪಬ್‌ಜಿ ಪಾರ್ಟ್ನರ್‌ಗಾಗಿ ಹುಸಿ ಬಾಂಬ್‌ ಕರೆ ಮಾಡಿದ ಬಾಲಕ

    ಬೆಂಗಳೂರು: ರೈಲಲ್ಲಿ ಊರಿಗೆ ಹೊರಟ್ಟಿದ್ದ ಪಬ್‌ಜಿ ಪಾರ್ಟ್ನರ್‌ಗಾಗಿ ಬಾಲಕನೊಬ್ಬ ಹುಸಿ ಬಾಂಬ್‌ ಕರೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    12 ವರ್ಷದ ಬಾಲಕನ ಸ್ನೇಹಿತ ಯಲಹಂಕದಿಂದ ಕಾಚಿಗುಡ  ಎಕ್ಸ್‌ಪ್ರೆಸ್‌ನಲ್ಲಿ ತೆರಳಬೇಕಿತ್ತು. ಆದರೆ ಸ್ನೇಹಿತ ಹೋದರೆ ತನಗೆ ಪಬ್ ಜಿ ಪಾರ್ಟ್ನರ್‌ ಇರುವುದಿಲ್ಲವೆಂದು ರೈಲ್ವೇ ಸಹಯವಾಣಿಗೆ ಕರೆ ಮಾಡಿ, ರೈಲಿನಲ್ಲಿ ಬಾಂಬ್ ಇರೋದಾಗಿ ಸುಳ್ಳು ಹೇಳಿದ್ದಾನೆ. ಇದರಿಂದ ಪೊಲೀಸರು ಬಾಂಬ್‍ಗಾಗಿ ಸುಮಾರು 90 ನಿಮಿಷಗಳ ಕಾಲ  ರೈಲಿನ ಪೂರ್ತಿ ಹುಡುಕಾಡಿದ್ದಾರೆ. ಕೊನೆಗೆ ಇದು ಹುಸಿ ಕರೆ ಎಂಬುದು ಸ್ಪಷ್ಟವಾಗಿದೆ. ಇದನ್ನೂ ಓದಿ: ರಾಜ್ ಠಾಕ್ರೆ ಮನೆಗೆ ಭೇಟಿ ನೀಡಿದ ನಿತಿನ್ ಗಡ್ಕರಿ – ಉದ್ದೇಶವೇನು?

    ನಟಡೆದಿದ್ದೇನು?
    ಮಾರ್ಚ್ 30ರಂದು ಬಾಲಕ ತನ್ನ ಸ್ನೇಹಿತ ರೈಲಿನಲ್ಲಿ ಹೋದರೆ ಪಬ್‌ಜಿ ಪಾರ್ಟ್ನರ್‌ ಇರುವುದಿಲ್ಲವೆಂದು ಯಲಹಂಕ ರೈಲ್ವೇ ಸಹಯವಾಣಿಗೆ ಹುಸಿ ಕರೆ ಮಾಡಿದ್ದಾನೆ. ಈ ಕರೆಯಲ್ಲಿ ಬಾಲಕ ಯಲಹಂಕದಿಂದ ಕಾಚಿಗುಡ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಾಂಬ್ ಇರೋದಾಗಿ ಹೇಳಿದ್ದಾನೆ.

    ಈ ಒಂದು ಸುಳ್ಳು ಕರೆಯಿಂದ 90 ನಿಮಿಷಗಳ ಕಾಲ ರೈಲಿನಲ್ಲಿ ಪೊಲೀಸರು ಬಾಂಬ್‍ಗಾಗಿ ತಡಕಾಡಿದ್ದಾರೆ. ಒಂದುವರೆ ಎರಡು ಗಂಟೆ ರೈಲು ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಆದರೆ ಎಷ್ಟೇ ತಡಕಾಡಿದ್ರು ಮಾಹಿತಿ ಸಿಗದ ಹಿನ್ನಲೆ ಇದೊಂದು ಹುಸಿ ಕರೆ ಎಂದು ಪೊಲೀಸರಿಗೆ ಖಾತರಿಯಾಗುತ್ತೆ. ಹುಸಿ ಕರೆಯ ಬೆನ್ನು ಹತ್ತಿದ ಪೊಲೀಸರಿಗೆ ಬಾಗಲೂರು ವಿನಾಯಕ ನಗರದಿಂದ ಕರೆ ಬಂದಿರುವುದು ತಿಳಿದುಬರುತ್ತೆ. ಈ ಹಿನ್ನೆಲೆ ಪೊಲೀಸರು ಪರಿಶೀಲನೆ ಮಾಡಿದಾಗ ಬಾಲಕನೊಬ್ಬ ಕರೆ ಮಾಡಿರೊದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸೌದಿ ಮಿನಿಸ್ಟರ್ ಜೊತೆ ಔತಣ ಸವಿದ ಶಾರೂಖ್, ಸಲ್ಮಾನ್, ಅಕ್ಷಯ್ – ಅಸಲಿ ಕಾರಣವೇನು

    ಬಾಲಕನ್ನ ವಿಚಾರಿಸಿದಾಗ ಪಬ್ ಜಿ ಕಥೆ ಹೇಳಿದ್ದಾನೆ. ಅಪ್ರಾಪ್ತ ಬಾಲಕನಾದ್ದರಿಂದ ಪ್ರಕರಣ ದಾಖಲಿಸದೇ ಪೋಷಕರನ್ನ ಕರೆದು ಬುದ್ದಿ ಹೇಳಿ ಕಳಿಸಿಕೊಟ್ಟಿದ್ದಾರೆ.

  • ಪಬ್‍ಜಿ ಆಡುವ ವೇಳೆ ಡಿಸ್ಟರ್ಬ್ ಮಾಡಿದ್ದಕ್ಕೆ ಕೊಲೆಗೈದವನ ಕಾಲಿಗೆ ಗುಂಡೇಟು

    ಪಬ್‍ಜಿ ಆಡುವ ವೇಳೆ ಡಿಸ್ಟರ್ಬ್ ಮಾಡಿದ್ದಕ್ಕೆ ಕೊಲೆಗೈದವನ ಕಾಲಿಗೆ ಗುಂಡೇಟು

    ಬೆಂಗಳೂರು: ಪಬ್ ಜಿ ಆಡುವ ವೇಳೆ ಡಿಸ್ಟರ್ಬ್ ಮಾಡಿದ್ದಕ್ಕೆ ಗೆಳೆಯನನ್ನು ಕೊಲೆಗೈದಿದ್ದ ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡೇಟು ತಗುಲಿದೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಂಡೇಟು ಸದ್ದು ಕೇಳಿದೆ.

    ಪಬ್ ಜಿ ಆಡುವ ವೇಳೆ ಡಿಸ್ಟರ್ಬ್ ಮಾಡಿದ್ದ ಅನ್ನೋ ಕಾರಣಕ್ಕೆ ಕರಣ್ ಸಿಂಗ್ ಎಂಬವನ್ನ ರೌಡಿ ಶೀಟರ್ ಪ್ರಭು ಕೊಲೆ ಮಾಡಿದ್ದನು. ಇಂದು ಪೊಲೀಸರು ಆಚಾರ್ಯ ಕಾಲೇಜ್ ಬಳಿಯ ಸಾಸಿವೆಘಟ್ಟದಲ್ಲಿ ಪ್ರಭು ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಪೇದೆ ಹನುಮಂತೇಗೌಡರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಪ್ರಭು ಪ್ರಯತ್ನಿಸಿದ್ದನು.

    ಕೊನೆಗೆ ಆತ್ಮರಕ್ಷಣೆಗಾಗಿ ಬಾಗಲಗುಂಟೆಯ ಸಬ್ ಇನ್‍ಸ್ಪೆಕ್ಟರ್ ಶ್ರೀಕಂಠೇಗೌಡರು ಫೈರಿಂಗ್ ಮಾಡಿದ್ದಾರೆ. ಪ್ರಭು ಕಾಲಿಗೆ ಗುಂಡು ತಗುಲಿದ್ದು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕರಣ್ ಸಿಂಗ್ ಕೊಲೆ ಸಂಬಂಧ ಬಾಗಲಗುಂಟೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ನೀವು ಇನ್ನೂ ಸಿಂಗಲ್ ?-  ಪ್ರಶ್ನೆಗೆ ರಾತ್ರಿ 1 ಗಂಟೆವರೆಗೆ ಪಬ್‍ಜಿ ಆಡ್ತೀನಿ ಎಂದ ಚಹಲ್

    ನೀವು ಇನ್ನೂ ಸಿಂಗಲ್ ?- ಪ್ರಶ್ನೆಗೆ ರಾತ್ರಿ 1 ಗಂಟೆವರೆಗೆ ಪಬ್‍ಜಿ ಆಡ್ತೀನಿ ಎಂದ ಚಹಲ್

    -ಅದೃಶ್ಯನಾದ್ರೆ ಧೋನಿ ಮನೆಗೆ ಹೋಗ್ತೀನಿ

    ನವದೆಹಲಿ: ಕ್ರಿಕೆಟ್ ಟೀಂ ಇಂಡಿಯಾದ ಸ್ಪಿನ್ನರ್ ಆಟಗಾರ ಯುಜವೇಂದ್ರ ಚಹಲ್ ಲೈವ್ ನಲ್ಲಿಯೇ ನೀವು ಇನ್ನೂ ಸಿಂಗಲ್ ಅನ್ನೋ ಪ್ರಶ್ನೆ ಎದುರಾಗಿದೆ. ಪ್ರಶ್ನೆಗೆ ಜಾಣತನದಿಂದ ಉತ್ತರಿಸಿರೋ ಚಹಲ್, ನಾನು ರಾತ್ರಿ ಒಂದು ಗಂಟೆವರೆಗೂ ಪಬ್ ಜೀ ಆಡುತ್ತೇನೆ ಎಂದು ಹೇಳಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲ ಪಂದ್ಯಗಳು ಸ್ಥಗಿತಗೊಂಡಿವೆ. ಎಲ್ಲ ಆಟಗಾರರು ಮನೆಗಳಲ್ಲಿ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿದ್ದಾರೆ. ಕೆಲ ಕ್ರಿಕೆಟಿಗರು ಅಭಿಮಾನಿಗಳಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬರೋ ಮೂಲಕ ಹೊಸ ಹೊಸ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಲಾಕ್‍ಡೌನ್ ಆರಂಭಗೊಂಡ ದಿನದಿಂದಲೂ ಚಹಲ್ ಟಿಕ್‍ಟಾಕ್, ಇನ್‍ಸ್ಟಾಗ್ರಾಂನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಟಿಕ್ ಟಾಕ್ ವಿಡಿಯೋಗಳ ಮೂಲಕ ತನ್ನ ಗೆಳೆಯರ ಕಾಲನ್ನು ಎಳೆಯುತ್ತಿದ್ದಾರೆ.

    ಇನ್‍ಸ್ಟಾಗ್ರಾಂನಲ್ಲಿ ಗೆಳೆಯರ ಜೊತೆ ಚಹಲ್ ಲೈವ್ ಬಂದಿದ್ರು. ಚಹಲ್ ಆಪ್ತರಾಗಿರುವ ಗೆಳೆತಿಯರು ಲೈವ್ ನಲ್ಲಿ ಗೆಳೆಯನಿಗೆ ಫನ್ನಿ ಫನ್ನಿ ಪ್ರಶ್ನೆಗಳನ್ನ ಕೇಳುತ್ತಿದ್ದರು. ಈ ವೇಳೆ ಒಬ್ಬರು ನೀವು ಇನ್ನೂ ಸಿಂಗಲ್ ಆಗಿದ್ದೀರಾ ಎಂದು ಪ್ರಶ್ನೆ ಮಾಡಿದ್ರು. ಲೈವ್ ನಲ್ಲಿ ದಿಢೀರ್ ಅಂತಾ ಎದುರಾದ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ಚಹಲ್, ಹೌದು ನಾನು ಸಿಂಗಲ್. ನಾನು ಇನ್ನೂ ರಾತ್ರಿ ಒಂದು ಗಂಟೆವರೆಗೂ ಪಬ್ ಜಿ ಆಡುತ್ತೇನೆ. ಎಂಗೇಜ್ ಆದವರು ಯಾರು ಅಷ್ಟೊತ್ತು ಪಬ್ ಜಿ ಆಡಲ್ಲ ಎಂದಿದ್ದಾರೆ.

    ಒಂದು ವೇಳೆ ಅದೃಶ್ಯನಾದ್ರೆ ಏನ್ ಮಾಡ್ತೀರಿ ಪ್ರಶ್ನೆಗೆ ಉತ್ತರಿಸಿದ ಚಹಲ್, ಮಹೇಂದ್ರ ಸಿಂಗ್ ಧೋನಿಯವರ ಮನೆಗೆ ಹೋಗುತ್ತೇನೆ. ಲಾಕ್‍ಡೌನ್ ಸಮಯದಲ್ಲಿ ಧೋನಿ ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ.

  • ಮೋರಿ ನೀರಿನಲ್ಲಿ ಶತ್ರುವನ್ನು ಹುಡುಕಿದ ಪಬ್‍ಜಿ ವೀರ

    ಮೋರಿ ನೀರಿನಲ್ಲಿ ಶತ್ರುವನ್ನು ಹುಡುಕಿದ ಪಬ್‍ಜಿ ವೀರ

    ವಿಜಯಪುರ: ಇತ್ತೀಚೆಗೆ ಬೆಳಗಾವಿಯಲ್ಲಿ ಪಬ್‍ಜಿ ಆಡಲು ಇಂಟರ್ನೆಟ್ ಪ್ಯಾಕ್ ಹಾಕಿಸಲು ಹಣ ಕೊಡಲಿಲ್ಲವೆಂದು ತಂದೆಯನ್ನೇ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಮಾಸುವ ಮುನ್ನವೇ ಇದೀಗ ಪಬ್‍ಜಿ ಗೇಮ್ ಮತ್ತೊಮ್ಮೆ ಸದ್ದು ಮಾಡಿದೆ.

    ಹೌದು. ಈ ಬಾರಿ ಯುವಕನೊಬ್ಬ ಕಂದಕದ ಚರಂಡಿಯಲ್ಲಿ ಬಿದ್ದು ಪಬ್‍ಜಿ ಆಟದಂತೆ ಈಜಾಡುವ ಮೂಲಕ ತನ್ನ ಶತ್ರುಗಳನ್ನು ಹುಡುಕಿದ್ದಾನೆ. ಈ ಘಟನೆ ವಿಜಯಪುರ ನಗರದ ಗಗನ ಮಹಲ್ ನ ಹಿಂದಿರುವ ಚರಂಡಿಯಲ್ಲಿ ನಡೆದಿದೆ. ಯುವಕ ವಿಜಯಪುರ ನಗರದ ಶಿವಾಜಿ ಕಾಲೋನಿಯ ನಿವಾಸಿಯಾಗಿದ್ದು, ಹೆಸರು ತಿಳಿದುಬಂದಿಲ್ಲ. ಚರಂಡಿ ನೀರಿನಲ್ಲಿ ಯುವಕ ಈಜಾಡುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲೇನಿದೆ..?
    ಯುವಕ ಚರಂಡಿ ನೀರಿನಲ್ಲಿ ಮುಳುಗಿ, ಮೇಲೇಳುತ್ತಾ ಪಬ್‍ಜಿ ಆಟದಂತೆ ಈಜಾಡಿದ್ದಾನೆ. ಅಲ್ಲದೆ ಮೋರಿಯಲ್ಲಿ ಈಜಾಡುತ್ತಾ ಶತ್ರುಗಳನ್ನು ಹುಡುಕಾಡಿದ್ದಾನೆ. ಈತನನ್ನು ನೋಡಿದ ಸ್ಥಳೀಯರು ಮೇಲಕ್ಕೆ ಬಾರೋ ಪಕ್ಕದಲ್ಲಿ ಹಾವು ಬರುತ್ತಿದೆ ಹುಷಾರ್.. ಹುಷಾರ್.. ಛೀ.. ಥೂ.. ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಕೇಳಬಹುದು. ಆದರೂ ಯುವಕ ಸ್ಥಳೀಯರ ಮಾತುಗಳನ್ನು ಲೆಕ್ಕಿಸದೇ ತನ್ನ ಪಾಡಿಗೆ ಗಬ್ಬುವಾಸನೆ ಬರುತ್ತಿರುವ ನೀರಿನಲ್ಲಿ ಈಜಾಡಿದ್ದಾನೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕರು ಕಮೆಂಟ್ ಮಾಡಿದ್ದಾರೆ. ಅದರಲ್ಲಿ ಕೆಲವರು ಯುವಕ ಮದ್ಯವ್ಯಸನಿಯಾಗಿದ್ದು ಹೀಗೆ ಹುಚ್ಚಾಟ ನಡೆಸಿದ್ದಾನೆಂದು ಹೇಳಿದ್ದಾರೆ. ಆದರೆ ಯುವಕ ಮನೆಯವರ ವಿರೋಧದ ನಡುವೆಯೂ ಪಬ್‍ಜಿ ಆಡುತ್ತಿದ್ದನು. ಹೀಗೆ ಆಟವಾಡಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ವರ್ತಿಸಿದ್ದಾನೆ ಎಂಬ ಕೆಲವರು ಹೇಳುತ್ತಿದ್ದಾರೆ.

    ತಂದೆಯನ್ನೇ ಕೊಂದ ಮಗ!
    ಇತ್ತೀಚೆಗೆ ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಮಗನೇ ತನ್ನ ತಂದೆಯನ್ನು ಬರ್ಬರವಾಗಿ ಕೊಲೆಗೈದ ಭಯಾನಕ ಘಟನೆ ನಡೆದಿತ್ತು. ಕಾಕತಿಯ ನಿವಾಸಿ ಶಂಕ್ರಪ್ಪ ಕಮ್ಮಾರ(59) ಅವರನ್ನು ರಘುವೀರ್ ಕಮ್ಮಾರ(21) ಕೊಲೆ ಮಾಡಿದ್ದಾನೆ. ಡಿಪ್ಲೊಮಾ ಮೆಕ್ಯಾನಿಕಲ್ ಎಂಜಿನಿಯರ್ ಎರಡನೇ ವರ್ಷ ಓದುತ್ತಿದ್ದ ಆರೋಪಿ ರಘುವೀರ್ ಕಳೆದ ನಾಲ್ಕೈದು ವರ್ಷಗಳಿಂದ ಮೊಬೈಲ್ ಗೇಮ್‍ಗಳನ್ನು ಆಡುವ ಗೀಳಿಗೆ ಬಿದ್ದಿದ್ದನು. ಪಾಲಕರು ಎಷ್ಟೇ ಕಿವಿ ಮಾತು ಹೇಳಿದರೂ ಕೇಳದ ಯುವಕ ಗೇಮ್ ಹುಚ್ಚಿಗೆ ಜೀವನವನ್ನೇ ಹಾಳು ಮಾಡಿಕೊಂಡಿದ್ದನು.

    ಪಬ್ ಜಿ ಆಡಲು ತಂದೆಗೆ ಇಂಟರ್ನೆಟ್ ಪ್ಯಾಕ್ ಹಾಕಿ ಎಂದು ಕೇಳಿಕೊಂಡಿದ್ದಾನೆ. ಆದರೆ ಮಗನ ಮಾತನ್ನು ತಂದೆ ನಿರಾಕರಿಸಿದ್ದು ಮಾತ್ರವಲ್ಲದೆ ಮಗನಿಗೆ ಬುದ್ಧಿವಾದ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದ ರಘುವೀರ್ ತನ್ನ ತಾಯಿಯನ್ನು ಕೋಣೆಯಲ್ಲಿ ಕೂಡಿಹಾಕಿದ್ದಾನೆ. ಬಳಿಕ ತರಕಾರಿ ಕತ್ತರಿಸುವ ಹಾಗೆ ತಂದೆಯ ರುಂಡವನ್ನು, ಕಾಲನ್ನು ಪಾಪಿ ಮಗ ಕತ್ತರಿಸಿದ್ದಾನೆ. ಮೊದಲು ಕತ್ತರಿಯಿಂದ ತಂದೆಯ ಕುತ್ತಿಗೆಯನ್ನು ಕತ್ತರಿಸಲು ರಘುವೀರ್ ಪ್ರಯತ್ನಿಸಿ, ಇಳಿಗೆ ಮಣೆ ತಂದು ತಂದೆಯ ರುಂಡವನ್ನು ಕಟ್ ಮಾಡಿದ್ದಾನೆ. ನಂತರ ತಂದೆಯ ದೇಹವನ್ನು ಛಿದ್ರಛಿದ್ರ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

  • ವರ್ಲ್ಡ್ ಕಪ್ ಗೂ ಮುನ್ನ ಪಬ್‍ಜಿ ಆಡಿದ ಟೀಂ ಇಂಡಿಯಾ ಆಟಗಾರರು

    ವರ್ಲ್ಡ್ ಕಪ್ ಗೂ ಮುನ್ನ ಪಬ್‍ಜಿ ಆಡಿದ ಟೀಂ ಇಂಡಿಯಾ ಆಟಗಾರರು

    ನವದೆಹಲಿ: ಟೀಂ ಇಂಡಿಯಾ ಆಟಗಾರರು ವರ್ಲ್ಡ್ ಕಪ್ ಪಂದ್ಯಕ್ಕೂ ಮುನ್ನ ಪಬ್ ಜಿ ಗೇಮ್ ಆಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಮೇ 30ರಿಂದ ವಿಶ್ವಕಪ್ ಪಂದ್ಯಗಳು ಆರಂಭಗೊಳ್ಳಲಿವೆ. ಟೀಂ ಇಂಡಿಯಾ ಸಹ ಈ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಲಿದ್ದು, ಮಂಗಳವಾರ ಇಂಗ್ಲೆಂಡ್ ನತ್ತ ತನ್ನ ಪ್ರಯಾಣ ಬೆಳೆಸಿದೆ. ಪ್ರವಾಸಕ್ಕೂ ಮುನ್ನ ವೇಟಿಂಗ್ ಲಾಂಜ್ ನಲ್ಲಿ ಆಟಗಾರರು ಕುಳಿತಿರುವ ಫೋಟೋಗಳನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. ಬಹುತೇಕ ಕ್ರಿಕೆಟ್ ಆಟಗಾರರು ತಮ್ಮ ಟ್ಯಾಬ್ಲೆಟ್‍ಗಳಲ್ಲಿ ಪಬ್ ಜಿ ಆಡುತ್ತಿರೋದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ವಿಶ್ವಕಪ್‍ಗೆ ಹೊರಟ ಕೊಹ್ಲಿಗೆ ಪೂಮಾದಿಂದ ವಿಶೇಷ ವಿನ್ಯಾಸದ ಶೂ – ವಿಡಿಯೋ ನೋಡಿ

    ಬಿಸಿಸಿಐ ಹಂಚಿಕೊಂಡಿರುವ ಫೋಟೋಗಳಲ್ಲಿ ಯುಜುವೇಂದ್ರ ಚಹಲ್, ಮೊಹಮ್ಮದ್ ಶಮಿ, ಎಂ.ಎಸ್.ಧೋನಿ ಮತ್ತು ಭುವನೇಶ್ವರ್ ಕುಮಾರ್ ಇಂಟರ್‍ನೆಟ್ ಟ್ರೆಂಡಿಂಗ್ ಗೇಮ್ ಪಬ್ ಜಿ ಆಡೋದರಲ್ಲಿ ಬ್ಯುಸಿಯಾಗಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆ.ಎಲ್.ರಾಹುಲ್, ವಿಜಯ್ ಶಂಕರ್ ಎಲ್ಲರು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಈ ಫೋಟೋಗಳಿಗೆ ಟ್ವಿಟ್ಟಿಗರು ಎಲ್ಲರು ಪಬ್ ಜಿ ಲವರ್ ಎಂದು ಕಮೆಂಟ್ ಮಾಡಿದ್ರೆ, ಇಷ್ಟು ರಾತ್ರಿಯಲ್ಲಿ ಪಬ್ ಜಿ ಆಡೋದಾ, ಪರವಾಗಿಲ್ಲ ಗುಡ್ ಲಕ್ ಎಂದು ಬರೆದಿದ್ದಾರೆ. ಇದನ್ನೂ ಓದಿ: ಕೊನೆ ಗಳಿಗೆಯಲ್ಲಿ ಪಂದ್ಯವನ್ನು ಗೆಲ್ಲಿಸುವ ಧೋನಿಯನ್ನು ಹೊಗಳಿದ ರವಿಶಾಸ್ತ್ರಿ

    https://twitter.com/AdilMdziyau/status/1130962838791610369

  • ಪಬ್‍ಜಿ ಗೇಮ್‍ನಲ್ಲಿ ಬ್ಯುಸಿಯಾದ ವರ-ಹೊಸ ಟಿಕ್ ಟಾಕ್ ವಿಡಿಯೋ ವೈರಲ್

    ಪಬ್‍ಜಿ ಗೇಮ್‍ನಲ್ಲಿ ಬ್ಯುಸಿಯಾದ ವರ-ಹೊಸ ಟಿಕ್ ಟಾಕ್ ವಿಡಿಯೋ ವೈರಲ್

    ಬೆಂಗಳೂರು: ಪಬ್‍ಜಿ ಗೇಮ್ ಆಸಕ್ತರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಜೊತೆಯೇ ಕಳೆಯುತ್ತಾರೆ. ಪಬ್ ಜೀ ಆಡುತ್ತಾ ತಾವು ಏಲ್ಲಿದ್ದೇವೆ? ಸಮಯ ಕಳೆಯುತ್ತಿರೋದ ಕಡೆ ಗಮನವೇ ನೀಡಲ್ಲ. ಯುವಕನೊಬ್ಬ ತನ್ನ ಮದುವೆಯಲ್ಲಿ ಪಬ್ ಜಿ ಆಡುತ್ತಿರುವ ಟಿಕ್ ಟಾಕ್ ವಿಡಿಯೋ ವೈರಲ್ ಆಗಿದೆ.

    ಅದ್ಧೂರಿ ಮದುವೆ ನಡೆಯುತ್ತಿದ್ದು, ವೇದಿಕೆ ಮೇಲೆ ವಧು-ವರ ಆಸೀನರಾಗಿದ್ದಾರೆ. ಬಂಧು, ಸ್ನೇಹಿತರು ಆಗಮಿಸಿ ಗಿಫ್ಟ್ ನೀಡಿ ಶುಭಾಶಯ ಕೋರುತ್ತಿದ್ದರೆ ವರ ಮಾತ್ರ ನನಗೇನೂ ಸಂಬಂಧವಿಲ್ಲವಂತೆ ಪಬ್ ಜಿ ಆಡುವಲ್ಲಿ ಮಗ್ನನಾಗಿದ್ದಾನೆ. ತನ್ನ ಪತಿ ಗೇಮ್ ಆಡೋದನ್ನ ಪತ್ನಿ ಬೇಸರದಿಂದ ನೋಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಆದ್ರೆ ಈ ಮದುವೆ ಎಲ್ಲಿ ನಡೆದಿದೆ ಎಂಬುವುದು ವರದಿಯಾಗಿಲ್ಲ. ಇದನ್ನೂ ಓದಿ: ಪ್ರತಿ ದಿನ ಬರೋಬ್ಬರಿ 20 ಕೋಟಿ ಗಳಿಸುತ್ತೆ ಪಬ್‍ಜಿ!

    8ಕೆ ವಾಲ್ ಪೇಪರ್ ಎಂಬ ಫೇಸ್‍ಬುಕ್ ಪೇಜ್ ನಲ್ಲಿ ಈ ಟಿಕ್ ಟಾಕ್ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಕಮೆಂಟ್ ನಲ್ಲಿ ನಿಮಗೆ ಗೊತ್ತಿರುವ ಪಬ್‍ಜಿ ಲವರ್ ಹೆಸರನ್ನು ಕಮೆಂಟ್ ಮಾಡಿ ಎಂದು ಬರೆಯಲಾಗಿದೆ. ಇದೂವರೆಗೂ 600ಕ್ಕೂ ಹೆಚ್ಚು ಶೇರ್, 1.8 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಇದನ್ನೂ ಓದಿ: ಪಬ್‍ಜಿ ಆಡುವ ಭರದಲ್ಲಿ ನೀರೆಂದು ಆ್ಯಸಿಡ್ ಕುಡಿದ ಯುವಕ!

    https://www.facebook.com/Ishare4/videos/579163512603324/