Tag: Pub

  • ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳಿಗೆ ಶಾಕ್ – ಸ್ಮೋಕಿಂಗ್ ಝೋನ್ ಇರದಿದ್ರೆ ಲೈಸನ್ಸ್ ರದ್ದು

    ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳಿಗೆ ಶಾಕ್ – ಸ್ಮೋಕಿಂಗ್ ಝೋನ್ ಇರದಿದ್ರೆ ಲೈಸನ್ಸ್ ರದ್ದು

    – ಮೊದಲು ನೋಟಿಸ್, ಆಮೇಲೆ ದಂಡಂ ದಶಗುಣಂ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪಬ್, ಕ್ಲಬ್, ಹೋಟೆಲ್, ಬಾರ್‌ಗಳಿಗೆ ಬಿಬಿಎಂಪಿ (BBMP) ಬಿಗ್‌ಶಾಕ್ ನೀಡಿದೆ. ಬಿಬಿಎಂಪಿ ನೋಟಿಸ್ ಜಾರಿ ಮಾಡಿದರೂ ಪ್ರತಿಕ್ರಿಯಿಸದ ಹೋಟೆಲ್‌ಗಳು, ಪಬ್, ಕ್ಲಬ್, ರೆಸ್ಟೋರೆಂಟ್ ಪರವಾನಗಿ (Licence) ರದ್ದು ಮಾಡಲು ಬಿಬಿಎಂಪಿ ಮುಂದಾಗಿದೆ.

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಳೆದ 15 ದಿನಗಳ ಹಿಂದೆ ಸುಮಾರು 300ಕ್ಕೂ ಹೆಚ್ಚು ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಿತ್ತು. ಸ್ಮೋಕಿಂಗ್ ಝೋನ್  (Smoking Zone) ನಿರ್ಮಾಣ ಮಾಡಿಲ್ಲ ಅಂತಾ ನೋಟಿಸ್ ನೀಡಿ ಎಚ್ಚರಿಸಿತ್ತು. ನೋಟಿಸ್ ಜಾರಿ ಮಾಡಿದರೂ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳು ಸರಿಪಡಿಸಿಕೊಂಡಿಲ್ಲ ಎಂಬ ಮಾಹಿತಿ ಬಿಬಿಎಂಪಿ ಪರಿಶೀಲನೆ ವೇಳೆ ಗೊತ್ತಾಗಿದೆ. ಹೀಗಾಗಿ ಅಂತಹ ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್‌ಗಳಿಗೆ ಬಿಸಿ ಮುಟ್ಟಿಸಲು ಪಾಲಿಕೆ ಮುಂದಾಗಿದೆ. ಇದನ್ನೂ ಓದಿ: ಪ್ರವಾಸಿಗರಿಗೆ ಹುಡುಗಿಯರು ಮತ್ತು ಮಹಿಳೆಯರು ಲಭ್ಯವಿದ್ದಾರೆ – ಸಾಮಾಜಿಕ ಜಾಲತಾಣದಲ್ಲಿ ಕೊಡಗಿನ ಬಗ್ಗೆ ಅಪಪ್ರಚಾರ

    ಇನ್ನೂ ಬಿಬಿಎಂಪಿ ಮುಂದಿನ ವಾರ ನೋಟಿಸ್ ನೀಡಿದ್ದ ಸ್ಥಳಗಳನ್ನು ಪರಿಶೀಲನೆ ನಡೆಸಲಿದೆ. ಪರಿಶೀಲನೆ ನಡೆಸಿ ನೋಟಿಸ್ ಕೊಟ್ಟ ಮೇಲೂ ಸ್ಮೋಕಿಂಗ್ ಝೋನ್ ಅಳವಡಿಸಿಕೊಂಡಿಲ್ಲ ಎಂಬುದು ಕಂಡು ಬಂದರೆ ಪರವಾನಗಿ ರದ್ದು ಮಾಡಲಿದ್ದಾರೆ. ಇದನ್ನೂ ಓದಿ:ಬುರುಡೆ ಗ್ಯಾಂಗ್‌ ಹೇಳಿದಂತೆ ನಾನು ಮಾಡಿದ್ದೇನೆ – ಎಸ್‌ಐಟಿ ಪ್ರಶ್ನೆಗಳಿಗೆ ಸುಜಾತ ಥಂಡಾ

    ಬೆಂಗಳೂರಿನಲ್ಲಿರುವ ಎಲ್ಲಾ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳು ನಿಯಮಾನುಸಾರ ಕ್ರಮವಹಿಸಬೇಕು. ಸ್ಮೋಕಿಂಗ್ ಝೋನ್ ಕಡ್ಡಾಯ ಇರಲೇಬೇಕು. ಇಲ್ಲದೇ ಹೋದರೆ ಕೇಸ್ ಹಾಕಿ ಪರವಾನಗಿ ರದ್ದು ಮಾಡಲು ಬಿಬಿಎಂಪಿ ಮುಂದಾಗಿದೆ. ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ದೇಗುಲವಲ್ಲದೇ ಇದ್ದಿದ್ರೆ ಮುಜರಾಯಿ ವ್ಯಾಪ್ತಿಗೆ ತರುತ್ತಿರಲಿಲ್ಲ – ಪ್ರಮೋದಾ ದೇವಿ ಒಡೆಯರ್‌

  • ಪಬ್‌ನಲ್ಲಿ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ – ಟೆಕ್ಕಿ ಅರೆಸ್ಟ್‌

    ಪಬ್‌ನಲ್ಲಿ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ – ಟೆಕ್ಕಿ ಅರೆಸ್ಟ್‌

    ಬೆಂಗಳೂರು: ಕಬ್ಬನ್ ಪಾರ್ಕ್ (Cubbon Park) ಬಳಿಯ ಪಬ್‌ (Pub) ಒಂದರಲ್ಲಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದಲ್ಲಿ ಟೆಕ್ಕಿಯೊಬ್ಬನನ್ನು (Techie) ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಅನುರಾಗ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಯುವತಿ ಮತ್ತು ಬಂಧಿತ ಅನುರಾಗ್ ಇಬ್ಬರು ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಪರಿಚಯದ ಮೇಲೆ ಕಬ್ಬನ್ ಪಾರ್ಕ್ ಬಳಿಯ ಪಬ್‌ವೊಂದಕ್ಕೆ ಪಾರ್ಟಿಗೆ ಹೋಗಿದ್ದರು. ಪಾರ್ಟಿ ವೇಳೆ ಕುಡಿತದ ಮತ್ತಿನಲ್ಲಿ, ಯುವತಿ ಮೇಲೆ ದೌರ್ಜನ್ಯವೆಸಗಲು ಯತ್ನಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಇದನ್ನೂ ಓದಿ: ಓವರ್ ಟೇಕ್ ಮಾಡಿದ್ದಕ್ಕೆ ಹಲ್ಲೆ ಆರೋಪ – ಅನಂತ್ ಕುಮಾರ್ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್

    ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಳು. ಇಬ್ಬರು ಪರಿಚಿತರಾಗಿದ್ದು, ಕುಡಿತದ ನಶೆಯಲ್ಲಿ ಈ ಕೃತ್ಯಕ್ಕೆ ಯತ್ನ ನಡೆಸಲಾಗಿದೆ ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: 2 ಕೋಟಿಗೂ ಅಧಿಕ ಮೌಲ್ಯದ ಫ್ಲ್ಯಾಟ್‌ ಸೇರಿ ʻಬಂಗಾರಿʼಗೌಡಳ 3.98 ಕೋಟಿ ಆಸ್ತಿ ಜಪ್ತಿ

  • ಐಪಿಎಲ್ ಫೈನಲ್ ಹಣಾಹಣಿ – ಬೆಂಗ್ಳೂರಲ್ಲಿ ಅವಧಿಗೂ ಮೀರಿ ಪಬ್ ಓಪನ್ ಮಾಡಿದ್ರೆ FIR

    ಐಪಿಎಲ್ ಫೈನಲ್ ಹಣಾಹಣಿ – ಬೆಂಗ್ಳೂರಲ್ಲಿ ಅವಧಿಗೂ ಮೀರಿ ಪಬ್ ಓಪನ್ ಮಾಡಿದ್ರೆ FIR

    – ನಗರ ಪೊಲೀಸ್ ಆಯುಕ್ತರ ಖಡಕ್ ಎಚ್ಚರಿಕೆ

    ಬೆಂಗಳೂರು: ಆರ್‌ಸಿಬಿ (RCB) ಹಾಗೂ ಪಂಜಾಬ್ (Punjab Kings) ನಡುವೆ ಇಂದು ಐಪಿಎಲ್ ಫೈನಲ್ ಹಣಾಹಣಿ ನಡೆಯಲಿದೆ. ಈ ಹಿನ್ನೆಲೆ ಅವಧಿಗೂ ಮೀರಿ ಬೆಂಗಳೂರು ನಗರದ ಪಬ್‌ಗಳನ್ನು ಓಪನ್ ಮಾಡದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರು ನಗರದ ಪಬ್‌ಗಳ ಸ್ವರ್ಗವಾಗಿರುವ ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ಹಲವಡೆ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಗುಜರಾತ್ ರಾಜಧಾನಿ ಅಹಮದಾಬಾದ್‌ನಲ್ಲಿ ಮಳೆ ಇರುವ ಕಾರಣ ಪಂದ್ಯ ತಡವಾಗಿ ಆರಂಭವಾಗಿ ತಡ ರಾತ್ರಿ ಮುಕ್ತಾಯವಾಗಿತ್ತು. ಅದೇ ರೀತಿ ಇಂದು ಕೂಡ ನಡೆಯುವ ಆರ್‌ಸಿಬಿ – ಪಂಜಾಬ್ ಫೈನಲ್ ಪಂದ್ಯ ಮಳೆ ಬಂದು ತಡವಾದರೆ ಪಬ್‌ಗಳನ್ನ ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಕ್ಲೋಸ್ ಮಾಡಬೇಕು. ಮ್ಯಾಚ್ ಮುಗಿದಿಲ್ಲ ಎಂದು ತಡರಾತ್ರಿಯ ತನಕ ಪಬ್ ಓಪನ್ ಮಾಡಿಕೊಂಡಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: IPL Final: ಆರ್‌ಸಿಬಿ ಚಾಂಪಿಯನ್‌ ಆದ್ರೆ ಸಿಗಲಿದೆ 20 ಕೋಟಿ!

    ಒಂದು ವೇಳೆ ಪೊಲೀಸರ ಖಡಕ್ ಸೂಚನೆ ಮೀರಿ ಅವಧಿ ಮುಗಿದರೂ ಪಬ್ ಓಪನ್ ಮಾಡಿಕೊಂಡರೆ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಪಬ್ ಮಾಲೀಕರಿಗೆ ಎಚ್ಚರಿಸಲಾಗಿದೆ. ಇದನ್ನೂ ಓದಿ: ಬಂದಿದ್ದು ಸಾಮಾನ್ಯ ಆಟಗಾರನಾಗಿ – ಕಟ್ಟಿದ್ದು RCB ಮಹಾ ಸಾಮ್ರಾಜ್ಯ!

  • ಬೆಂಗಳೂರಿನಲ್ಲಿ ಪಬ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೂ ಅವಕಾಶ? – ಡಿಕೆಶಿ ಸುಳಿವು

    ಬೆಂಗಳೂರಿನಲ್ಲಿ ಪಬ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೂ ಅವಕಾಶ? – ಡಿಕೆಶಿ ಸುಳಿವು

    ಬೆಂಗಳೂರು: ನಗರದಲ್ಲಿ ಪಬ್‌ಗಳಿಗೆ (Pub) ಮಧ್ಯರಾತ್ರಿ 1 ಗಂಟೆವರೆಗೂ ಅನುಮತಿ ‌ಕೊಡೋ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಪರೋಕ್ಷ ಸುಳಿವು ಕೊಟ್ಟಿದ್ದಾರೆ‌. ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ಮಾಡೋದಾಗಿ ತಿಳಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸದಸ್ಯ ಗೋಪಿನಾಥ್ ಪ್ರಶ್ನೆ ಕೇಳಿದ್ರು. ಬೆಂಗಳೂರಿನಲ್ಲಿ (Bengaluru) ಪಬ್‌ಗಳು ರಾತ್ರಿ 11.30ಕ್ಕೆ ಮುಚ್ಚುವ ನಿಯಮ ಇದೆ. ಆದ್ರೆ ಮಧ್ಯರಾತ್ರಿವರೆಗೂ ಪಬ್ ಗಳು ನಡೆಯುತ್ತಿವೆ. ಇಂದಿರಾ‌ನಗರ ಸೇರಿ ಅನೇಕ ಕಡೆ ನಿಯಮ ಮೀರಿ ಪಬ್ ನಡೆಯುತ್ತಿವೆ. ಇದನ್ನೇ ನೆಪ ಇಟ್ಟುಕೊಂಡು ಪೊಲೀಸರು ಪಬ್ ಅವರಿಗೆ ಕಿರುಕುಳಕೊಡುವ ಕೆಲಸ ಮಾಡ್ತಿದ್ದಾರೆ. ರೆಸ್ಟೋರೆಂಟ್‌ಗಳಿಗೆ ರಾತ್ರಿ 1 ಗಂಟೆವರೆಗೂ ಸರ್ಕಾರ ಅವಕಾಶ ಕೊಟ್ಟಿದೆ. ಅದರಂತೆ ಬೆಂಗಳೂರಿನಲ್ಲಿ ಪಬ್ ಗಳಿಗೂ ರಾತ್ರಿ 1 ಗಂಟೆವರೆಗೂ ಅವಕಾಶ ಕೊಡಿ ಎಂದು ಮನವಿ ಮಾಡಿದರು.‌ ಇದನ್ನೂ ಓದಿ: ಅಪ್ಪ-ಮಗನ ಮೇಲೆ ಹನಿಟ್ರ್ಯಾಪ್‌ ಯತ್ನ – ಸಿಎಂಗೆ ದೂರು ನೀಡಿದ ಸಚಿವ ರಾಜಣ್ಣ ಪುತ್ರ

    ಇದಕ್ಕೆ ಅಬಕಾರಿ ಸಚಿವ ತಿಮ್ಮಾಪುರ್ ಉತ್ತರ ನೀಡಿ, ಅಬಕಾರಿ ಇಲಾಖೆಯಲ್ಲಿ ಎರಡು ರೀತಿ ಪಬ್ ಗಳಿಗೆ ನಾವು ಅನುಮತಿ ಕೊಡ್ತೀವಿ. ಸ್ವತಂತ್ರ ಪಬ್ ಗಳಿಗೆ ರಾತ್ರಿ 11.30ವರೆಗೆ ಅವಕಾಶ ಇದೆ‌. CL9 ಜೊತೆ ಹೊಂದುಕೊಂಡಿರೋ ಪಬ್ ಗಳಿಗೆ ಮಧ್ಯರಾತ್ರಿ 1 ಗಂಟೆ ಒಳಗೆ ಅವಕಾಶ ಕೊಡಲಾಗಿದೆ. ಒಂದು ವೇಳೆ ನಿಯಮ ಮೀರಿ ಪಬ್ ನಡೆಸುತ್ತಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು‌. ಇದನ್ನೂ ಓದಿ: ನನ್ನ ಮೇಲೆ ಹನಿಟ್ರ್ಯಾಪ್‌ಗೆ ಯತ್ನ ಆಗಿದೆ – ಸದನದಲ್ಲೇ ಸಚಿವ ಕೆ.ಎನ್‌ ರಾಜಣ್ಣ ಬಾಂಬ್‌

    ಸಚಿವ ತಿಮ್ಮಾಪುರ್ ಮಾತಿಗೆ ಡಿಸಿಎಂ ಡಿಕೆಶಿವಕುಮಾರ್ ಮಧ್ಯ ಪ್ರವೇಶ ಮಾಡಿ ಮಾತನಾಡಿದರು. ಅಬಕಾರಿ ಸಚಿವರು ಅಬಕಾರಿ ನಿಯಮದ ಆದೇಶದ ಬಗ್ಗೆ ಮಾತಾಡ್ತಿದ್ದಾರೆ. ಸಚಿವರು ಹೇಳಿದಂತೆ ಈಗ ಯಾರು ರಾತ್ರಿ 11.30ಕ್ಕೆ ಪಬ್ ಕ್ಲೋಸ್ ಮಾಡೊಲ್ಲ. ಇದನ್ನೇ ಪೊಲೀಸರು ಬಂಡವಾಳ ಮಾಡಿಕೊಂಡು ಕಿರುಕುಳ ‌ಕೊಡ್ತಿದ್ದಾರೆ‌. ಬೆಂಗಳೂರು ಇಂಟರ್ ನ್ಯಾಷನಲ್ ಸಿಟಿ. ಬೆಂಗಳೂರನ್ನ ಲೈವ್ ಆಗಿ ಇಡಬೇಕು. ನನಗೂ ಕೂಡ ಪಬ್ ಅವಧಿ ವಿಸ್ತರಣೆ ಮಾಡೊ ಬಗ್ಗೆ ಡಿಮ್ಯಾಂಡ್ ಬಂದಿವೆ. ರಾತ್ರಿ ಒಂದು ಗಂಟೆವರೆಗೂ ಪಬ್‌ಗಳಿಗೆ ಅವಕಾಶ ಕೊಡುವ ಗೋಪಿನಾಥ್ ಸಲಹೆ ಕರೆಕ್ಟ್ ಇದೆ. ನಾನು ಅದನ್ನ ಒಪ್ಪುತ್ತೇನೆ. ನಾನು, ಗೃಹ ಸಚಿವರು ಅಬಕಾರಿ ಸಚಿವರು ಸಭೆ ಮಾಡಿ ಇದಕ್ಕೆ ಒಂದು ಪರಿಹಾರ ಮಾಡ್ತೀವಿ ಅನ್ನೋ ಮೂಲಕ ಪಬ್ ಗಳ ಅವಧಿ ವಿಸ್ತರಣೆ ಮಾಡೋ ಬಗ್ಗೆ ಪರೋಕ್ಷ ಸುಳಿವು ಕೊಟ್ಟರು. ಇದನ್ನೂ ಓದಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವೈಟಿಪಿಎಸ್‌ನ 1,500 ಗುತ್ತಿಗೆ ನೌಕರರಿಂದ ಉಗ್ರ ಹೋರಾಟ

  • ಪಬ್‌ನಲ್ಲಿ ಮತ್ತೆ ಶುರುವಾಯ್ತು ಕನ್ನಡ ಹಾಡುಗಳಿಗಾಗಿ ಕಿರಿಕ್

    ಪಬ್‌ನಲ್ಲಿ ಮತ್ತೆ ಶುರುವಾಯ್ತು ಕನ್ನಡ ಹಾಡುಗಳಿಗಾಗಿ ಕಿರಿಕ್

    ಬೆಂಗಳೂರು: ಕೋರಮಂಗಲದ ಪಬ್‌ವೊಂದರಲ್ಲಿ ಸೌತ್ ಇಂಡಿಯಾ (South India) ಹಾಡುಗಳನ್ನು ಹಾಕುವುದಕ್ಕೆ ಪಬ್ (Pub) ಸಿಬ್ಬಂದಿ ನಿರಾಕರಿಸಿದ್ದರಿಂದ ಗ್ರಾಹಕ ಮತ್ತು ಸಿಬ್ಬಂದಿ ನಡುವೆ ಕಿರಿಕ್ ನಡೆದಿದೆ.

    ಪಬ್‌ನಲ್ಲಿ ಪ್ರಾದೇಶಿಕ ಭಾಷೆಯ (Regional Language) ಹಾಡುಗಳನ್ನು ಹಾಕಿ ಎಂದು ಗ್ರಾಹಕರೊಬ್ಬರು ಒತ್ತಾಯ ಮಾಡಿದ್ದರು. ಆವಾಗ, ಇಲ್ಲ ಬರೀ ಇಂಗ್ಲಿಷ್ ಹಾಡುಗಳನ್ನು ಮಾತ್ರ ಹಾಕ್ತೀವಿ, ಇಂಗ್ಲಿಷ್ ಬಿಟ್ಟು ಬೇರೆ ಹಾಡುಗಳನ್ನು ಹಾಕುವುದಿಲ್ಲ ಎಂದು ಪಬ್‌ನ ಮಹಿಳಾ ಸಿಬ್ಬಂದಿ ಪಟ್ಟು ಹಿಡಿದಿದ್ದರು.  ಇದನ್ನೂ ಓದಿ: ಕಾರ್ಕಳ ಅತ್ಯಾಚಾರ ಪ್ರಕರಣ- ಆರೋಪಿಗಳು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ

    ಈ ಘಟನೆಯನ್ನು ಗ್ರಾಹಕ ವೀಡಿಯೋ ಮಾಡಲು ಮುಂದಾದರು. ವೀಡಿಯೋ ಮಾಡುವುದನ್ನು ನೋಡಿದ ಪಬ್‌ನ ಮತ್ತೊಬ್ಬ ಸಿಬ್ಬಂದಿ ವೀಡಿಯೋ ಹೊರಗಡೆ ಬಂದರೆ ಕನ್ನಡಪರ ಸಂಘಟನೆಯವರು ಹೋರಾಟ ಮಾಡ್ತಾರೆ, ಪೊಲೀಸ್ ಕೇಸ್ ಆಗುತ್ತೆ ಎಂದು ಭಯಪಟ್ಟು ಕನ್ನಡ ಹಾಡು ಹಾಕುವುದಕ್ಕೆ ಒಪ್ಪಿಗೆ ನೀಡಿದ್ದರು. ಕನ್ನಡ ಹಾಡು ಮಾತ್ರ ಹಾಕುತ್ತೇವೆ. ಆದರೆ ತೆಲುಗು ಮತ್ತು ತಮಿಳು ಹಾಡುಗಳನ್ನು ಹಾಕುವುದಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದರು. ಇದನ್ನೂ ಓದಿ: ಎಸ್‌ಸಿಒ ಸಭೆಗೆ ಮೋದಿಗೆ ಆಹ್ವಾನ ನೀಡಿದ ಪಾಕ್‌ – ಪ್ರಧಾನಿ ಭಾಗವಹಿಸೋದು ಡೌಟ್‌

    ಒಂದು ವೇಳೆ ವೀಡಿಯೋ ಮಾಡಿ ಗಟ್ಟಿ ಧ್ವನಿಯಲ್ಲಿ ಕೇಳಿದರೆ ಮಾತ್ರ ಕನ್ನಡ ಹಾಡುಗಳನ್ನು ಹಾಕುತ್ತಾರೆ ಎಂದು ಗ್ರಾಹಕ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಕಾರಿಗೆ KSRTC ಬಸ್ ಡಿಕ್ಕಿ – ಐವರಿಗೆ ಗಾಯ

  • ಬೆಂಗಳೂರಲ್ಲಿ ತಡರಾತ್ರಿ 2 ಗಂಟೆಯವರೆಗೆ ಹೋಟೆಲ್, ಬಾರ್&ರೆಸ್ಟೋರೆಂಟ್ ಓಪನ್‌ಗೆ ಮನವಿ

    ಬೆಂಗಳೂರಲ್ಲಿ ತಡರಾತ್ರಿ 2 ಗಂಟೆಯವರೆಗೆ ಹೋಟೆಲ್, ಬಾರ್&ರೆಸ್ಟೋರೆಂಟ್ ಓಪನ್‌ಗೆ ಮನವಿ

    – ಅಬಕಾರಿ ಸಚಿವರಿಗೆ ಮನವಿ ಸಲ್ಲಿಸಿದ ಹೋಟೆಲ್ ಅಸೋಸಿಯೇಷನ್

    ಬೆಂಗಳೂರು: ತಡರಾತ್ರಿ 2 ಗಂಟೆಯವರೆಗೆ ಬಾರ್, ಪಬ್ ಮತ್ತು ರೆಸ್ಟೋರೆಂಟ್‌ಗಳ (Bar And Restaurant) ಓಪನ್‌ಗೆ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘವು (Hotel Association) ಅಬಕಾರಿ ಸಚಿವರಿಗೆ ಮನವಿ ಮಾಡಿದೆ.

    ಪಬ್, ಬಾರ್ & ರೆಸ್ಟೋರೆಂಟ್ ಲೈಸೆನ್ಸ್ ನವೀಕರಣಕ್ಕೆ ಆನ್‌ಲೈನ್ ಸಮಸ್ಯೆಯಾಗಿದೆ. ಹೆಚ್ಚುವರಿ ಶುಲ್ಕ ಕಟ್ಟಿದರೂ ಲೈಸೆನ್ಸ್ ನೀಡುತ್ತಿಲ್ಲ ಎಂದು ಹೋಟೆಲ್ ಅಸೋಸಿಯೇಷನ್ ಆರೋಪಿಸಿದೆ. ಇದನ್ನೂ ಓದಿ: ಶಕ್ತಿ ಯೋಜನೆಯಿಂದ ನಷ್ಟದಲ್ಲಿದ್ದೇವೆ, ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆ: ರಾಜು ಕಾಗೆ

    ಅಲ್ಲದೇ ಅಬಕಾರಿ ಇಲಾಖೆಯಲ್ಲಿ (Excise Department) ಕಾನೂನು ತೊಡಕಿನ ಆರೋಪವನ್ನೂ ಹೋಟೆಲ್ ಅಸೋಸಿಯೇಷನ್ ಹೊರಿಸಿದೆ. ಕಾನೂನು ಸಬಲೀಕರಣ ಮಾಡದೆ ನಮಗೆ ನೋಟಿಸ್ ಕೊಟ್ಟು ಸಮಸ್ಯೆ ಮಾಡುತ್ತಿದ್ದಾರೆ. ನಗರದಲ್ಲಿ ತಡರಾತ್ರಿ 2 ಗಂಟೆವರೆಗೆ ಹೋಟೆಲ್, ಬಾರ್ & ರೆಸ್ಟೋರೆಂಟ್ ಓಪನ್‌ಗೆ ಅನುಮತಿ ನೀಡುವಂತೆ ಬೃಹತ್ ಬೆಂಗಳೂರು ಹೋಟೆಲ್ ಸಂಘಟನೆಗಳು ಅಬಕಾರಿ ಸಚಿವರಲ್ಲಿ ಮನವಿ ಮಾಡಿದೆ. ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಶಂಕರ್‌ ನಾಗ್‌, ಅಪರ್ಣಾ ಹೆಸರಿಡಿ: ಸರ್ಕಾರಕ್ಕೆ ಯತ್ನಾಳ್‌ ಆಗ್ರಹ

  • ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ಮೇಲೆ ಎಫ್‌ಐಆರ್

    ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ಮೇಲೆ ಎಫ್‌ಐಆರ್

    ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಮಾಲೀಕತ್ವದ ಪಬ್‌ವೊಂದರ (Pub) ಮೇಲೆ ಎಫ್‌ಐಆರ್ ದಾಖಲಾಗಿದೆ.

    ಅವಧಿಗೂ ಮೀರಿ ಪಬ್ ತೆರೆದಿದ್ದಕ್ಕೆ ಕಸ್ತೂರಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್ ಪಬ್ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಈ ಪಬ್, ಟಾನಿಕ್ ಬಿಲ್ಡಿಂಗ್‌ನ ಕೊನೆಯ ಮಹಡಿಯಲ್ಲಿದೆ. ಇದನ್ನೂ ಓದಿ: ಮುಡಾ ಭ್ರಷ್ಟಾಚಾರ ಪ್ರಕರಣ – ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

    ಜುಲೈ 6 ರಂದು ರಾತ್ರಿ 1:20 ರ ವರೆಗೆ ಪಬ್ ತೆರೆದಿತ್ತು. ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಪಬ್ ಓಪನ್ ಇರುವುದಾಗಿ ಮಾಹಿತಿ ಇತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅವಧಿ ಮುಗಿದಿದ್ದರೂ ಗ್ರಾಹಕರು ಇದ್ದರು. ಹೀಗಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಉಪ ಪೊಲೀಸ್ ಆಯುಕ್ತ (ಕೇಂದ್ರ) ಶೇಖರ್ ಹೆಚ್.ತೆಕ್ಕಣ್ಣನವರ್ ಮಾತನಾಡಿ, ನಾವು ಕಳೆದ ರಾತ್ರಿ 1:30 ರವರೆಗೆ ತೆರೆದಿರುವಂತೆ ಸುಮಾರು 3-4 ಪಬ್‌ಗಳನ್ನು ಕಾಯ್ದಿರಿಸಿದ್ದೇವೆ. ಜೋರಾಗಿ ಸಂಗೀತವನ್ನು ನುಡಿಸಲಾಗುತ್ತಿದೆ ಎಂಬ ದೂರುಗಳನ್ನು ನಾವು ಸ್ವೀಕರಿಸಿದ್ದೇವೆ. ಪಬ್‌ಗಳು ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ತೆರೆದಿರಲು ಅನುಮತಿಸಲಾಗಿದೆ. ಈ ಅವಧಿ ಮೀರಿ ತೆರೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ನಿಖಿಲ್ ಕುಮಾರಸ್ವಾಮಿಯನ್ನು ಎಳೆದಾಡಿದ ಪೊಲೀಸರು

  • ನಟ ‘ದರ್ಶನ್’ಗೆ ಟಾರ್ಗೆಟ್ ಮಾಡಲಾಗ್ತಿದೆ : ರಾಕ್ ಲೈನ್ ಕಿಡಿಕಿಡಿ

    ನಟ ‘ದರ್ಶನ್’ಗೆ ಟಾರ್ಗೆಟ್ ಮಾಡಲಾಗ್ತಿದೆ : ರಾಕ್ ಲೈನ್ ಕಿಡಿಕಿಡಿ

    ಡರಾತ್ರಿ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟರೊಂದಿಗೆ ಸುಬ್ರಮಣ್ಯನಗರ ಪೊಲೀಸ್ ಠಾಣೆಗೆ ಆಗಮಿಸಿದ್ದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (RockLine Venkatesh), ವಿಚಾರಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ನಟ ದರ್ಶನ್ (Darshan) ಅವರಿಗೆ ಟಾರ್ಗೆಟ್ ಮಾಡಲಾಗುತ್ತಿದೆ. ಹೀಗಾಗಿ ಇದನ್ನು ದೊಡ್ಡದು ಮಾಡಲಾಗುತ್ತಿದೆ. ನಾವು ತಡರಾತ್ರಿ ಪಾರ್ಟಿ ಮಾಡಲಿಲ್ಲ. ಊಟಕ್ಕೆ ಕುಳಿತಿದ್ದೆವು. ಅಡುಗೆ ಮಾಡೋದು ತಡವಾಗಿದ್ದರಿಂದ ತಡರಾತ್ರಿ ಆಗಿದೆ ಎಂದರು.

    ತಡರಾತ್ರಿ ಎಷ್ಟೋ ಬಾರ್ ಗಳು ಓಪನ್ ಇರುತ್ತವೆ. ಆದರೆ, ಈವರೆಗೂ ಯಾವುದೇ ಗ್ರಾಹಕನಿಗೆ ಈ ರೀತಿ ನೋಟಿಸ್ ಕೊಟ್ಟಿಲ್ಲ. ಸಾಮಾನ್ಯ ಜನರಿಗೂ, ಸೆಲೆಬ್ರಿಟಿಗಳಿಗೂ ಒಂದೇ ಕಾನೂನು. ನಮಗೆ ಅವತ್ತು ಯಾವ ಪೊಲೀಸರೂ ಕೇಳಿಲ್ಲ. ಯಾರಿಗೂ ತೊಂದರೆ ಆಗುವಂತೆ ನಡೆದುಕೊಂಡಿಲ್ಲವೆಂದು ಇದೇ ಸಂದರ್ಭದಲ್ಲಿ ರಾಕ್ ಲೈನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

    ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋ ಮುಗಿಯುತ್ತಿದ್ದಂತೆಯೇ ಅಂದೇ ದರ್ಶನ್ ಅಂಡ್ ಟೀಮ್ ಸಕ್ಸಸ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಚಿಕ್ಕಣ್ಣ, ಡಾಲಿ ಧನಂಜಯ್ಯ,  ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್, ನಿರ್ದೇಶಕ ತರುಣ್ ಸುಧೀರ್ ಹಾಗು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಮಣ್ಯ ನಗರ ಪೊಲೀಸ್ (Police) ವಿಚಾರಣೆಗೆ ಹಾಜರಾಗುವಂತೆ ನಟರಿಗೆ ಮತ್ತು ನಿರ್ಮಾಪಕರಿಗೆ ನೋಟಿಸ್ ನೀಡಿದ್ದರು. ನೋಟಿಸ್ ವಿಚಾರವಾಗಿ ಇಂದು ಎಲ್ಲ ನಟರೂ ವಿಚಾರಣೆಗೆ ಹಾಜರಿದ್ದರು.

  • ಸುಬ್ರಮಣ್ಯನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ನಟರು

    ಸುಬ್ರಮಣ್ಯನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ನಟರು

    ಡರಾತ್ರಿ ಪಾರ್ಟಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟರಾದ ದರ್ಶನ್ (Darshan), ಚಿಕ್ಕಣ್ಣ, ಡಾಲಿ ಧನಂಜಯ್ಯ,  ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್, ನಿರ್ದೇಶಕ ತರುಣ್ ಸುಧೀರ್ ಹಾಗು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಗೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಸುಬ್ರಮಣ್ಯ ನಗರ ಪೊಲೀಸ್ (Police) ಠಾಣೆಗೆ ಹಾಜರಾಗಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ ಮಾಲೀಕರು ಹಾಗೂ ಮ್ಯಾನೇಜರ್ ಮೇಲೆ ಎಫ್.ಐ. ಆರ್ ದಾಖಲಾಗಿತ್ತು. ಪಾರ್ಟಿ ಮಾಡಿದ ನಟರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು ಪೊಲೀಸರು. ಇಂದು ಎಲ್ಲರೂ ಒಟ್ಟಾಗಿ ಸುಬ್ರಮಣ್ಯ ನಗರ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.

    ಪಬ್ ವೊಂದರಲ್ಲಿ ತಡರಾತ್ರಿವರೆಗೂ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಇತರ ನಟರಿಗೆ ಪೊಲೀಸರು ನೋಟಿಸ್ ನೀಡಿದ್ದರು. ದುಬೈ ಪ್ರವಾಸದ ನಿಮಿತ್ತ ವಿಚಾರಣೆಗೆ ದರ್ಶನ್ ಹಾಜರಾಗಿರಲಿಲ್ಲ. ಪಾರ್ಟಿಯಲ್ಲಿ ಭಾಗವಹಿಸಿದ ಚಿತ್ರತಂಡ ಹಾಗೂ ಇತರ ನಟರು ವಿಚಾರಣೆಗಾಗಿ ಇಂದು ಸ್ಟೇಶನ್ ಗೆ ಬಂದಿದ್ದಾರೆ.

  • ವಿಚಾರಣೆಗೆ ಹೊರಟ ದರ್ಶನ್: ಸ್ಟೇಶನ್ ಮುಂದೆ ಪೊಲೀಸ್ ಭದ್ರತೆ

    ವಿಚಾರಣೆಗೆ ಹೊರಟ ದರ್ಶನ್: ಸ್ಟೇಶನ್ ಮುಂದೆ ಪೊಲೀಸ್ ಭದ್ರತೆ

    ಬೆಂಗಳೂರಿನ ಪ್ರತಿಷ್ಠಿತ ಪಬ್ ‍ನಲ್ಲಿ ತಡರಾತ್ರಿವರೆಗೂ ಪಾರ್ಟಿ ಮಾಡಿದ್ದಾರೆ ಎನ್ನುವ ಆರೋಪ ಹೊತ್ತಿರುವ ನಟ ದರ್ಶನ್ (Darshan) ಮತ್ತು ಸ್ಯಾಂಡಲ್ ವುಡ್ ಕೆಲ ನಟರು ಇಂದು ಪೊಲೀಸ್ ವಿಚಾರಣೆಗಾಗಿ (Inquiry) ಸುಬ್ರಹ್ಮಣ್ಯ ಪೊಲೀಸ್ (Police) ಠಾಣೆಗೆ ಬರಲಿದ್ದಾರೆ. ಈಗಾಗಲೇ ದರ್ಶನ್ ಅಂಡ್ ಟೀಮ್ ಮನೆಯಿಂದ ಸ್ಟೇಶನ್ ನತ್ತ ಹೊರಟಿದೆ.

    ಪಬ್ ವೊಂದರಲ್ಲಿ ತಡರಾತ್ರಿವರೆಗೂ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಇತರ ನಟರಿಗೆ ಪೊಲೀಸರು ನೋಟಿಸ್ ನೀಡಿದ್ದರು. ದುಬೈ ಪ್ರವಾಸದ ನಿಮಿತ್ತ ವಿಚಾರಣೆಗೆ ದರ್ಶನ್ ಹಾಜರಾಗಿರಲಿಲ್ಲ. ಪಾರ್ಟಿಯಲ್ಲಿ ಭಾಗವಹಿಸಿದ ಚಿತ್ರತಂಡ ಹಾಗೂ ಇತರ ನಟರು ವಿಚಾರಣೆಗಾಗಿ ಇಂದು ಸ್ಟೇಶನ್ ಗೆ ಬರುತ್ತಿದ್ದಾರೆ.

     

    ನಿಯಮ ಬಾಹಿರವಾಗಿ ಪಬ್ ನಲ್ಲಿ ಪಾರ್ಟಿ ನಡೆಸಿರೋ ಆರೋಪ ಹೊತ್ತಿರುವ ನೀನಾಸಂ ಸತೀಶ್, ಡಾಲಿ ಧನಂಜಯ, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ ಕೂಡ ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ. ಪೊಲೀಸ್ ಠಾಣೆ ಮುಂದೆ ಅಭಿಮಾನಿಗಳು ಸೇರಿದ್ದು, ಸ್ಟೇಷನ್ ಬಳಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಮಧ್ಯಾಹ್ಮ 3:30 ಗಂಟೆ ಸುಮಾರಿಗೆ ದರ್ಶನ್ ಮತ್ತು ಟೀಮ್ ಸ್ಟೇಶನ್ ಗೆ ಬರಲಿದೆ.