Tag: Psychological Thriller

  • ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್‍ನಲ್ಲಿ ಗಮನ ಸೆಳೆಯಲಿದೆ ಸೈಕಲಾಜಿಕಲ್ ಥ್ರಿಲ್ಲರ್ ‘ರುಗ್ನ’

    ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್‍ನಲ್ಲಿ ಗಮನ ಸೆಳೆಯಲಿದೆ ಸೈಕಲಾಜಿಕಲ್ ಥ್ರಿಲ್ಲರ್ ‘ರುಗ್ನ’

    ಬೆಂಗಳೂರು: ಸ್ಯಾಂಡಲ್‍ವುಡ್ ಅಂಗಳದಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ವೆಂಕಟ್ ಭಾರಧ್ವಜ್ ಪ್ರತಿಭಾನ್ವಿತ ತಂಡದ ಚಿತ್ರವೊಂದಕ್ಕೆ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.

    ವೆಂಕಟ್ ಭಾರಧ್ವಜ್ ಅವರ ‘ಅಮೃತ ಫಿಲ್ಮಂ ಸೆಂಟರ್’ ಬ್ಯಾನರ್ ನಡಿ ನಿರ್ಮಾಣವಾಗಿ ತೆರೆಗೆ ಬರಲು ಸಜ್ಜಾಗಿರುವ ಚಿತ್ರದ ಹೆಸರು ‘ರುಗ್ನ’. ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಬಿಲ್ಡ್ ಮಾಡಿರುವ ‘ರುಗ್ನ’ ಸೈಕಲಾಜಿಕಲ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡಿದೆ. ಅಷ್ಟಕ್ಕು ‘ರುಗ್ನ’ ಅಂದ್ರೇನು ಎಂದು ನಿರ್ಮಾಪಕರನ್ನು ಕೇಳಿದ್ರೆ ಅವರು ಹೇಳೋದಿಷ್ಟು. ಇದೊಂದು ಹಳೆಯ ಸಂಸ್ಕೃತ ಪದ. ಇದರರ್ಥ ಒಡೆದು ಹೋಗಿರೋದು ಎಂದು. ಚಿತ್ರದ ಕಥಾಹಂದರಕ್ಕೆ ಸೂಕ್ತ ಎನಿಸಿದ್ದರಿಂದ ಇದನ್ನೇ ಟೈಟಲ್ ಆಗಿ ಇಡಲಾಗಿದೆ ಎನ್ನುತ್ತಾರೆ ವೆಂಕಟ್ ಭಾರಧ್ವಜ್. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್

    ‘ರುಗ್ನ’ ಚಿತ್ರಕ್ಕೆ ಸೂತ್ರಧಾರ ಸುನೀಲ್.ಎಸ್.ಭಾರಧ್ವಜ್. ಮೊದಲ ಬಾರಿ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಇವರಿಗೆ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಸಾಥ್ ನೀಡಿದ್ದಾರೆ ಸುಹಾಸ್ ಕೆಎಸ್ ರಾವ್. ಜೀವನದಲ್ಲಿ ಸಾಕಷ್ಟು ಕಷ್ಟ ನಷ್ಟ ಅನುಭವಿಸಿ ಬದಲಾವಣೆಗೆ ಹಾತೊರೆಯುವ ವ್ಯಕ್ತಿಯೊಬ್ಬನ ಜೀವನದ ಸುತ್ತ ತೆರೆದುಕೊಳ್ಳುವ ಕಥೆ ಚಿತ್ರದಲ್ಲಿದೆ. ಅದು ಸಲೀಸಾಗಿರದೇ ನೋಡುಗರಿಗೆ ಥ್ರಿಲ್ ನೀಡುತ್ತ, ಕೌತುಕ ಮೂಡಿಸುತ್ತ ಒಂದೊಳ್ಳೆ ಮನರಂಜನೆ ನೀಡುವ ಕಥೆ ಚಿತ್ರದಲ್ಲಿದೆ. ಮೊದಲೇ ಹೇಳಿದಂತೆ ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಅದಕ್ಕೆ ಬೇಕಾದ ಎಲ್ಲ ರೀತಿಯ ಎಲಿಮೆಂಟ್ ಚಿತ್ರದಲ್ಲಿದ್ದು, ತಾಂತ್ರಿಕವಾಗಿಯೂ ಅಷ್ಟೇ ಸ್ಟ್ರಾಂಗ್ ಆಗಿದೆ ಚಿತ್ರ. ಸಿಂಕ್ ಸೌಂಡ್ ಬಳಿಸಿಕೊಂಡಿರೋದು ಚಿತ್ರದ ಮತ್ತೊಂದು ಸ್ಪೆಷಾಲಿಟಿ.

    ಕಳೆದ ಏಪ್ರಿಲ್‍ನಲ್ಲಿ ಸೆಟ್ಟೇರಿ ಚಿತ್ರೀಕರಣಕ್ಕೆ ಹೊರಟಿದ್ದ ಚಿತ್ರತಂಡ ಬೆಂಗಳೂರು, ಮಂಗಳೂರು, ಪಡುಬಿದ್ರೆಯಲ್ಲಿ ಯಶಸ್ವಿ 28 ದಿನಗಳ ಚಿತ್ರೀಕರಣ ಮುಗಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನೂ ಮುಗಿಸಿ ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ಈ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದೆ. ಚಿತ್ರತಂಡ ಕೂಡ ಮೇನಲ್ಲಿ ಸಿನಿಮಾ ತೆರೆ ಮೇಲೆ ತರಲು ಸಜ್ಜಾಗಿದೆ. ಈ ನಡುವೆ ಚಿತ್ರತಂಡಕ್ಕೆ ಸಿಹಿ ಸುದ್ದಿಯೂ ಸಿಕ್ಕಿದೆ.

    ಹೌದು, ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ‘ರುಗ್ನ’ ಸಿನಿಮಾ ಆಯ್ಕೆಯಾಗಿದೆ. ಬೇರೆ-ಬೇರೆ ದೇಶದ ಸಿನಿಮಾಗಳು ತೆರೆಕಾಣುವ, ನುರಿತ ಸಿನಿಮಾ ತಜ್ಞರು ಇರುವ ವೇದಿಕೆಯಲ್ಲಿ ನಮ್ಮ ಸಿನಿಮಾ ಕೂಡ ಆಯ್ಕೆ ಆಗಿ ತೆರೆ ಕಾಣುತ್ತಿರುವುದು ಚಿತ್ರತಂಡದ ಸಂತಸವನ್ನು ನೂರ್ಮಡಿಗೊಳಿಸಿದೆ ಎನ್ನುತ್ತಾರೆ ನಿರ್ಮಾಪರು.

    ತಾಂತ್ರಿಕವಾಗಿಯೂ ಶ್ರೀಮಂತವಾಗಿ ಮೂಡಿ ಬಂದಿರುವ ಈ ಚಿತ್ರಕ್ಕೆ ನಿರ್ದೇಶಕ ಸುನೀಲ್.ಎಸ್.ಭಾರಧ್ವಜ್ ಸಂಕಲನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಉಳಿದಂತೆ ನಚಿಕೇತ್ ಶರ್ಮಾ ಸಂಗೀತ ನಿರ್ದೇಶನ, ಸಂಜಯ್ ಎಲ್ ಚೆನ್ನಪ್ಪ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಇದನ್ನೂ ಓದಿ: ಬಿಯರ್ ಬಾಟ್ಲಿಗಳು ಹಸಿರು, ಕಂದುಬಣ್ಣದಲ್ಲಿ ಮಾತ್ರ ಏಕೆ?- ಇದಕ್ಕಿದೆ ಐತಿಹಾಸಿಕ ಹಿನ್ನೆಲೆ

    ಉದಯ್ ಆಚಾರ್, ಸುಪ್ರಿತ ಸತ್ಯನಾರಾಯಣ್, ಸುಗ್ರೀವ್ ಗೌಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸ್ಮಿತ ಕುಲ್ಕರ್ಣಿ, ಬಾಲ ರಾಜ್ವಾಡಿ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದ ತಾರಬಳಗದಲ್ಲಿದ್ದಾರೆ. ಚಿತ್ರಕ್ಕೆ ವೆಂಕಟ್ ಭಾರಧ್ವಜ್ ಜೊತೆಗೆ ಮನಿಮಾರನ್ ಸುಬ್ರಮಣಿಯನ್ ಕೂಡ ಬಂಡವಾಳ ಹೂಡಿ ಚೆಂದವಾಗಿ ತೆರೆ ಮೇಲೆ ತರಲು ಕೈ ಜೋಡಿಸಿದ್ದಾರೆ.

  • ರಂಗಿತರಂಗ ನಿರ್ಮಾಪಕರಿಂದ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ

    ರಂಗಿತರಂಗ ನಿರ್ಮಾಪಕರಿಂದ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಇತ್ತೀಚೆಗೆ ಥ್ರಿಲ್ಲರ್ ಕಥಾ ಹಂದರವುಳ್ಳ ಸಿನಿಮಾಗಳು ಹೆಚ್ಚು ಮೂಡಿಬರುತ್ತಿದ್ದು, ಪ್ರೇಕ್ಷಕರಿಗೂ ಈ ರೀತಿಯ ಸಿನಿಮಾಗಳು ಹಿಡಿಸುತ್ತವೆ. ಹೀಗಾಗಿ ಜನಪ್ರಿಯತೆ ಪಡೆಯುತ್ತವೆ. ಇದಕ್ಕೆ ಉದಾಹರಣೆಯೇ ರಂಗಿತರಂಗ ಸಿನಿಮಾ. ಈ ಸಿನಿಮಾವನ್ನು ಕರಾವಳಿ ಭಾಗದಲ್ಲಿ ಚಿತ್ರೀಕರಿಸಲಾಗಿದ್ದು, ಯಕ್ಷಗಾನದ ಮೂಲಕವೇ ಥ್ರಿಲ್ಲರ್ ಕಥೆಯನ್ನು ಹೆಣೆಯಲಾಗಿದೆ. ಹೀಗಾಗಿ ಈ ಸಿನಿಮಾ ಭಾರೀ ಸದ್ದು ಮಾಡಿತ್ತು. ಇದೀಗ ಅದೇ ಸಿನಿಮಾದ ನಿರ್ಮಾಪಕರು ಇಂತಹದ್ದೇ ಮತ್ತೊಂದು ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ.

    ರಂಗಿತರಂಗ ಸಿನಿಮಾ ಬಳಿಕ ನಟ ರಕ್ಷಿತ್ ಶೆಟ್ಟಿ ಜೊತೆ ಸೇರಿ ಅವನೇ ಶ್ರೀಮನ್ನಾರಾಯಣ ಸಿನಿಮಾಗೆ ಬಂಡವಾಳ ಹೂಡಿದ್ದ ಎಚ್.ಕೆ.ಪ್ರಕಾಶ್ ಇದೀಗ ಅವರದ್ದೇ ಶ್ರೀ ದೇವಿ ಎಂಟರ್‍ಟೈನರ್ಸ್ ಬ್ಯಾನರ್ ಅಡಿ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ನಿರ್ಮಿಸಲು ಮುಂದಾಗಿದ್ದು, ನಿರ್ದೇಶಕ ಭರತ್ ಜಿ.ಜೊತೆ ಸೇರಿ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    ಹೊಸ ನಿರ್ದೇಶಕರ ಮೂಲಕ ಸಿನಿಮಾ ಮಾಡಲು ಎಚ್.ಕೆ.ಪ್ರಕಾಶ್ ಅವರು ಮುಂದಾಗಿದ್ದು, ರೇಡಿಯೋ ಹಾಗೂ ಜಾಹೀರಾತಿನಲ್ಲಿ ಕೆಲಸ ಮಾಡಿದ್ದ ಭರತ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹಾರರ್ ಕಾಮಿಡಿ ಸಿನಿಮಾ ಮೂಲಕ ನಿರ್ದೇಶನದ ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ. ಇದೊಂದು ನಿಗೂಢ ಕಥೆಯಾಗಿದ್ದು, ಇದಕ್ಕಾಗಿ ಕಾಡಿನ ಮಧ್ಯ ಇರುವ ಬ್ರಿಟಿಷ್ ವಾಸ್ತುಶಿಲ್ಪದ 103 ವರ್ಷಗಳ ಹಳೆಯ ಕಟ್ಟಡವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಚಿತ್ರ ಬಗ್ಗೆ ತಿಳಿಸಿದ್ದಾರೆ.

    ಚಿತ್ರವು ಹಾಸ್ಯದ ಮೂಲಕವೇ ಭಯವನ್ನು ಉಂಟು ಮಾಡುತ್ತದೆ. ಆ ರೀತಿಯ ಥ್ರಿಲ್ಲರ್ ಕಥೆಯನ್ನು ಹೆಣೆದಿದ್ದೇನೆ. ಅಲ್ಲದೆ ದೆವ್ವಗಳ ಅಸ್ಥಿತ್ವದ ಕುರಿತು ಹಾಗೂ ಪುನರ್‍ಜನ್ಮದ ಕುರಿತು ಸಹ ಪ್ರಶ್ನಿಸುತ್ತದೆ. ಚಿತ್ರಕ್ಕಾಗಿ ಈಗಾಗಲೇ ಲೋಕೇಶನ್ ಗುರುತಿಸಿದ್ದು, ಊಟಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಪ್ರಸ್ತುತ ಗ್ರೌಂಡ್ ವರ್ಕ್ ಮಾಡುತ್ತಿದ್ದೇವೆ. ಲಾಕ್‍ಡೌನ್ ಮುಗಿದ ಬಳಿಕ ಚಿತ್ರೀಕರಣ ಪ್ರಾರಂಭಿಸಲು ಚಿಂತನೆ ನಡೆಸಿದ್ದೇವೆ ಎಂದು ನಿರ್ದೇಶಕ ಭರತ್ ಮಾಹಿತಿ ನೀಡಿದ್ದಾರೆ.

    ನಿರ್ಮಾಪಕರು ಸಹ ಚಿತ್ರದ ಟೆಕ್ನಿಸಿಯನ್ಸ್ ಗಾಗಿ ಹುಡುಕಾಟ ನಡೆಸಿದ್ದು, ನಿರ್ದೇಶಕರು ಪ್ರಮುಖ ಪಾತ್ರ ನಿರ್ವಹಿಸುವ ನಟರಿಗಾಗಿ ಹುಡುಕಾಟ ನಡೆಸಿದ್ದಾರಂತೆ. ಸೋಮವಾರದಿಂದಲೇ ಆಡಿಶನ್ಸ್ ನಡೆಯುತ್ತಿದೆಂತೆ. ಒಟ್ನಲ್ಲಿ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ಸೆಟ್ಟೇರಲು ಚಿತ್ರತಂಡ ಎಲ್ಲ ರೀತಿಯ ಸಿದ್ಧತೆ ನಡೆಸಿದ್ದು, ಪ್ರಮುಖ ಪಾತ್ರಗಳಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.

  • ಕತ್ತಲು ತುಂಬಿದ್ದರೂ ಕುತೂಹಲಕ್ಕೆ ಕೊನೆಯಿಲ್ಲ!

    ಕತ್ತಲು ತುಂಬಿದ್ದರೂ ಕುತೂಹಲಕ್ಕೆ ಕೊನೆಯಿಲ್ಲ!

    ಕೆಲವೊಮ್ಮೆ ಭಾರೀ ಪ್ರಚಾರದ ಒಡ್ಡೋಲಗದಲ್ಲಿ ತೆರೆ ಕಾಣೋ ಚಿತ್ರಗಳು ನಿರಾಸೆಯನ್ನು ಹೊತ್ತು ತಂದಿರುತ್ತವೆ. ಹೇಳಿಕೊಳ್ಳುವಂಥಾ ಯಾವ ಪ್ರಚಾರವೂ ಇಲ್ಲದೆ ತಣ್ಣಗೆ ತೆರೆ ಕಾಣುವ ಚಿತ್ರಗಳು ಎಲ್ಲರನ್ನು ಆವರಿಸಿಕೊಂಡು ಏಕಾಏಕಿ ಸದ್ದು ಮಾಡುತ್ತವೆ. ಇಮದು ಬಿಡುಗಡೆಯಾಗಿರೋ `ಕಾರ್ನಿ’ ಚಿತ್ರ ನಿಸ್ಸಂದೇಹವಾಗಿ ಎರಡನೇ ಕೆಟಗರಿಗೆ ಸೇರೋ ಅರ್ಹತೆ ಹೊಂದಿದೆ!

    ದುನಿಯಾ ರಶ್ಮಿ ಬಹು ಕಾಲದ ನಂತರ ಈ ಚಿತ್ರದ ಮೂಲಕ ವಾಪಾಸಾಗಿದ್ದಾರೆ. ಈ ವಿಚಾರವಾಗಿಯೇ ಕಡೇ ಘಳಿಗೆಯಲ್ಲಿ ಗಮನ ಸೆಳೆದಿದ್ದ ಈ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವಲ್ಲಿ ಯಶ ಕಂಡಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಎಂದ ಮೇಲೆ ಕುಂತಲ್ಲೇ ಅದುರುವಂಥಾ ಹಿನ್ನೆಲೆ ಸಂಗೀತ, ಪ್ರತೀ ಸೀನಿಗೂ ಬಿಲ್ಡಪ್ಪುಗಳು ಮಾಮೂಲಿ. ಈ ಚಿತ್ರವನ್ನು ನಿರ್ದೇಶಕ ವಿನೀ ಸಿದ್ಧ ಸೂತ್ರಗಳಾಚೆಗೆ ಕಟ್ಟಿ ಕೊಟ್ಟಿದ್ದಾರೆ. ತಣ್ಣಗಿನ ವಾತಾವರಣದಲ್ಲಿಯೇ ದೃಷ್ಯಗಳಿಂದಲೇ ಎಲ್ಲ ಭಾವಗಳನ್ನೂ ಹೊಮ್ಮಿಸಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಅವರು ಗೆದ್ದಿದ್ದಾರೆ.

    ಕಾದಂಬರಿಗಾರ್ತಿಯೊಬ್ಬಳ ಸುತ್ತಾ ಈ ಕಥೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಪ್ರಸಿದ್ಧ ಕಾದಂಬರಿಕಾರ್ತಿಯಾದ ಈ ಕೆ ಬರೆದು ಕಾದಂಬರಿಯ ಪಾತ್ರಗಳು ರಿಯಲ್ ಆಗಿಯೇ ಕಾಣೆಯಾಗುತ್ತಾ ಸಾಗುತ್ತಾರೆ. ಇಂಥಾ ರಿಯಲ್ ಕಾಣೆ ಪ್ರಸಂಗದ ಬೆಂಬಿದ್ದ ಪೊಲೀಸರು ಅತ್ತ ತನಿಖೆಗಿಳಿಯುವ ಸಂದರ್ಭದಲ್ಲಿಯೇ ಈ ಕಾದಂಬರಿಕಾರ್ತಿ ಎರನೇ ಆವೃತ್ತಿಯ ಕಾದಂಬರಿ ರಚನೆಗೆ ಚಿಕ್ಕಮಗಳೂರಿಗೆ ಧಾವಿಸುತ್ತಾಳೆ. ಅಲ್ಲಿಂದಾಚೆಗೆ ಇಡೀ ಚಿತ್ರದ ದಿಕ್ಕೇ ಬದಲಾಗುತ್ತೆ.

    ಹಾಗೆ ಚಿಕ್ಕ ಮಗಳೂರಿಗೆ ಬರೆಯಲು ಬಂದ ಕಾದಂಬರಿಕಾರ್ತಿಯ ಮೇಲೆ ಅನಾಮಿಕನ ಅಟ್ಯಾಕ್, ನಿಜವಾದ ಕಾಣೆ ಪ್ರಸಂಗಗಳಿಗೂ ಈಕೆಗೂ ಸಂಬಂಧವಿದೆಯಾ ಎಂಬ ನಿಗೂಢದೊಂದಿಗೆ ಇಡೀ ಕಥೆ ಕ್ಷಣ ಕ್ಷಣವೂ ಕುತೂಹಲ ಉಳಿಸಿಕೊಂಡು ಮುಂದುವರೆಯುತ್ತದೆ.

    ಇಡೀ ಚಿತ್ರದ ಬಹು ಭಾಗ ಕತ್ತಲಲ್ಲಿಯೇ ನಡೆಯುತ್ತದೆ. ಇದರಿಂದಾಗಿ ಕೆಲ ದೃಶ್ಯಗಳೂ ಮಾಸಲಾದಂತೆ, ಮಬ್ಬು ಮಬ್ಬು ಭಾವ ಪ್ರೇಕ್ಷಕರನ್ನು ಆವರಸಿಕೊಳ್ಳುತ್ತದೆಯಾದರೂ ಇದರ ಹೊಸ ಪ್ರಯೋಗಗಳು ಎಲ್ಲವನ್ನೂ ಮರೆಸಲು ಶಕ್ತವಾಗಿವೆ. ಅರಿಂದಂ ಗೋಸ್ವಾಮಿ ವಿಭಿನ್ನ ಪ್ರಯೋಗದ ಹಿನ್ನೆಲೆ ಸಂಗೀತ ನೀಡಿದ್ದಾರೆ. ವಿನಯ್ ಆಲೂರ್ ಸಂಕಲನದಲ್ಲಿಯೂ ನವೀನ ಪ್ರಯೋಗ ಮಾಡಿದ್ದಾರೆ.

    ಒಟ್ಟಾರೆಯಾಗಿ ಕಾರ್ನಿ ಚಿತ್ರ ಕುತೂಹಲದೊಂದಿಗೆ ಮನಸು ಗೆಲ್ಲುತ್ತೆ. ಬಹಳಷ್ಟು ಕಾಲದಿಂದ ಮತ್ತೆ ವಾಪಾಸಾಗಿರುವ ರಶ್ಮಿಯ ಪಾತ್ರ ಮತ್ತು ನಟನೆ ಇಷ್ಟವಾಗುವಂತೆದೆ. ಎಲ್ಲ ಪಾತ್ರಗಳಿಗೂ ಮಹತ್ವ ಇದೆ. ಅದನ್ನೆಲ್ಲ ಆಯಾ ಕಲಾವಿದರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾರ್ನಿ ಚಿತ್ರದ ಮೂಲಕ ಅಚ್ಚರಿ ಹುಟ್ಟಿಸಲಿದ್ದಾರೆ ದುನಿಯಾ ರಶ್ಮಿ!

    ಕಾರ್ನಿ ಚಿತ್ರದ ಮೂಲಕ ಅಚ್ಚರಿ ಹುಟ್ಟಿಸಲಿದ್ದಾರೆ ದುನಿಯಾ ರಶ್ಮಿ!

    ಬೆಂಗಳೂರು: ದುನಿಯಾ ಚಿತ್ರದ ಸಾದಾ ಸೀದಾ ಹುಡುಗಿಯಾಗಿ ಚಿತ್ರರಂಗಕ್ಕೆ ಪರಿಚಯವಾದವರು ರಶ್ಮಿ. ಈ ಚಿತ್ರದ ಮೂಲಕ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದ್ದ ರಶ್ಮಿ ಆ ಬಳಿಕವೂ ಒಂದಷ್ಟು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಹತ್ತಿರಾಗಿದ್ದರು. ಆದರೆ ಅದ್ಯಾಕೋ ಸುದೀರ್ಘ ಅವಧಿಯಲ್ಲಿ ಚಿತ್ರರಂಗದಿಂದ ದೂರವೇ ಉಳಿದಿದ್ದ ರಶ್ಮಿ ಇದೀಗ ಕಾರ್ನಿ ಚಿತ್ರದ ಮೂಲಕ ಪಕ್ಕಾ ಡಿಫರೆಂಟ್ ಲುಕ್ಕಿನಲ್ಲಿ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ. ಈ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣಲಿದೆ.

    ಗೋವಿಂದರಾಜ್ ನಿರ್ಮಾಣದ ಕಾರ್ನಿ ಚಿತ್ರ ಈಗಾಗಲೇ ಪ್ರೇಕ್ಷಕರನ್ನು ಸೆಳೆದುಕೊಡಿದೆ. ವಿನೋದ್ ಕುಮಾರ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕಾರ್ನಿ ಎಂಬ ಹೆಸರೇ ನಿಗೂಢವಾದುದೇನನ್ನೋ ಧ್ವನಿಸುವಂತಿದೆ. ದುರ್ಗಾ ಮಾತೆಯ ಕೈಲಿರುವ ದುಷ್ಟ ಸಂಹಾರ ಮಾಡೋ ಅಸ್ತ್ರಕ್ಕೆ ಕಾರ್ನಿ ಎಂಬ ಹೆಸರಿದೆ. ಈ ಪದ ಈ ಚಿತ್ರದ ಕಥೆಗೆ ಪಕ್ಕಾ ಸೂಟ್ ಆಗೋದರಿಂದ ಶೀರ್ಷಿಕೆಯಾಗಿಡಲಾಗಿದೆಯಂತೆ.

    ಇದುವರೆಗೂ ದುನಿಯಾ ರಶ್ಮಿ ಪಕ್ಕದ ಮನೆ ಹುಡುಗಿಯಂಥಾ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ. ಆದರೆ ಈ ಚಿತ್ರದಲ್ಲವರು ಸಂಪೂರ್ಣ ಭಿನ್ನವಾದ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆಂಬುದು ಚಿತ್ರ ತಂಡದ ಭರವಸೆ. ನಿರ್ದೇಶಕರು ಈ ಚಿತ್ರದಲ್ಲಿನ ಮುಖ್ಯ ಪಾತ್ರಕ್ಕೆ ಆರಂಭದಲ್ಲಿಯೇ ರಶ್ಮಿಯವರನ್ನು ಆಯ್ಕೆ ಮಾಡಿದ್ದರಂತೆ, ಈ ಪಾತ್ರದ ಬಗ್ಗೆ ತಿಳಿದುಕೊಂಡ ರಶ್ಮಿ ಕಷ್ಟಪಟ್ಟು ಸ್ಲಿಂ ಆಗಿ ಇಡೀ ಪಾತ್ರವನ್ನು ನಿರ್ವಹಿಸಿದ್ದಾರಂತೆ.

    ಕಾರ್ನಿ ಮಹಿಳಾ ಪ್ರಧಾನ ಚಿತ್ರ, ಹಾರರ್ ಚಿತ್ರ ಅಂತೆಲ್ಲ ಸುದ್ದಿ ಹರಿದಾಡುತ್ತಿದೆ. ಅಸಲಿಗೆ ಇದು ಪಕ್ಕಾ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ. ಖಂಡಿತಾ ಇದು ಹಾರರ್ ವೆರೈಟಿಯ ಚಿತ್ರವಲ್ಲವಂತೆ. ಆದರೆ ಇಡೀ ಕಥೆ ಮಲೆನಾಡು ವಾತಾವರಣದ ಕಾಡೊಳಗೆ ನಡೆಯುತ್ತೆ. ಐವರು ಹುಡುಗೀರು ನಾಪತ್ತೆಯಾಗಿ ಅದರ ಸುತ್ತಾ ಬಿಚ್ಚಿಕೊಳ್ಳೋ ರೋಚಕ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಿಯಾಂಕ ಉಪೇಂದ್ರ ಡಬಲ್ ಆಕ್ಟಿಂಗ್!

    ಪ್ರಿಯಾಂಕ ಉಪೇಂದ್ರ ಡಬಲ್ ಆಕ್ಟಿಂಗ್!

    ಬೆಂಗಳೂರು: ಮಮ್ಮಿ ಚಿತ್ರದ ಯಶಸ್ಸಿನ ನಂತರ ಹೌರಾ ಬ್ರಿಡ್ಜ್ ಚಿತ್ರದಲ್ಲಿ ನಟಿಸುತ್ತಿರೋ ಪ್ರಿಯಾಂಕ ಉಪೇಂದ್ರ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದು ಸೈಕಾಲಾಜಿಕಲ್ ಥ್ರಿಲ್ಲರ್ ಕಥಾನಕ ಹೊಂದಿರೋ ಚಿತ್ರ. ವಿಶೇಷವೆಂದರೆ ಈ ಚಿತ್ರದಲ್ಲಿ ಮತ್ತಿಬ್ಬರು ಸ್ಯಾಂಡಲ್ ವುಡ್ ನಟಿಯರು ಪ್ರಿಯಾಂಕಗೆ ಜೊತೆಯಾಗಲಿದ್ದಾರೆ.

    ಭುವನ್ ನಿರ್ದೇಶನದ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ತಾಂತ್ರಿಕ ವರ್ಗ ಮತ್ತು ತಾರಾಗಣದ ಆಯ್ಕೆ ಕಾರ್ಯ ಚಾಲ್ತಿಯಲ್ಲಿದೆ. ಆದರೆ ಪ್ರಿಯಾಂಕ ಉಪೇಂದ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಇದರ ಜೊತೆಗೇ ಮತ್ತೆರಡು ಮುಖ್ಯ ಪಾತ್ರಗಳಿಗೂ ಇಬ್ಬರು ಆಯ್ಕೆಯಾಗಿದ್ದಾರೆ. ಭಾವನಾ ರಾವ್ ಮತ್ತು ಶರ್ಮಿಳಾ ಮಾಂಡ್ರೆ ಈ ಚಿತ್ರದಲ್ಲಿ ಪ್ರಿಯಾಂಕ ಸ್ನೇಹಿತೆಯರಾಗಿ ಕಾಣಿಸಿಕೊಳ್ಳಲಿದ್ದಾರೆ.

    ಭುವನ್ ಇದೀಗ ಗಮ್ಯ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರ ಮುಗಿಯುತ್ತಿದ್ದಂತೆಯೇ ಹೊಸಾ ಥ್ರಿಲ್ಲರ್ ಕಥೆ ಶುರುವಾಗಲಿದೆ. ಸೈಕಾಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿರೋ ಈ ಚಿತ್ರವನ್ನು ಪ್ರಿಯಾಂಕಾ ಕೂಡಾ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ. ಒಂದಷ್ಟು ಕಾಲದಿಂದ ಮರೆಯಾದಂತಿದ್ದ ಶರ್ಮಿಳಾ ಮಾಂಡ್ರೆ ಮತ್ತು ಭಾವನಾ ರಾವ್ ಈ ಚಿತ್ರದ ಮುಖ್ಯ ಪಾತ್ರಗಳ ಮೂಲಕ ವಾಪಾಸಾಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv