Tag: Psychological abuse

  • ಯುವತಿಯನ್ನು ಮದುವೆಯಾಗುವಂತೆ ಬೆದರಿಕೆ – ವಿಷಸೇವಿಸಿ ಯುವಕ ಆತ್ಮಹತ್ಯೆ

    ಯುವತಿಯನ್ನು ಮದುವೆಯಾಗುವಂತೆ ಬೆದರಿಕೆ – ವಿಷಸೇವಿಸಿ ಯುವಕ ಆತ್ಮಹತ್ಯೆ

    ಹಾವೇರಿ: ಯುವತಿ ಮನೆಯವರಿಂದ ಮಾನಸಿಕ ಕಿರುಕುಳದ ಹಿನ್ನೆಲೆ ಯುವಕನೊಬ್ಬ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಬನ್ನಿಹಟ್ಟಿ ತಾಂಡಾದಲ್ಲಿ ನಡೆದಿದೆ.

    ಪ್ರಸನ್ನ ಲಮಾಣಿ 20 ವರ್ಷ ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕ. ಕಳೆದ ಒಂದು ವರ್ಷದ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಯುವತಿಯನ್ನ ಮದುವೆ ಆಗುವಂತೆ ಯುವತಿ ಮನೆಯವರು ಮಾನಸಿಕ ಕಿರುಕುಳ ನೀಡಿದ್ದಾರೆ. ಮದುವೆಯಾಗಿ ಆಕೆಯನ್ನು ಕರೆದುಕೊಂಡು ಹೋಗದಿದ್ದರೆ ಜೀವಸಹಿತ ಬಿಡೋದಿಲ್ಲ ಅಂತಾ ಯುವತಿ ಮನೆಯವರು ಜೀವಬೆದರಿಕೆ ಹಾಕುತ್ತಿದ್ದರು. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು

    whatsapp

    ಪ್ರಸನ್ನ ತನ್ನ ಸಾವಿಗೆ ಯುವತಿಯೇ ವಾಟ್ಸಪ್ ಸ್ಟೇಟಸ್ ನಲ್ಲಿ ಯುವತಿಯ ಹೆಸರು ಮತ್ತು ಆಕೆಯೊಂದಿಗೆ ಓಡಾಡಿದ್ದ ಫೋಟೋಗಳನ್ನಿಟ್ಟು ಆತ್ಮಹತ್ಯೆ ಮಾಡುಕೊಂಡಿದ್ದಾನೆ. ಯುವತಿಯು ಫೋಕ್ಸೋ ಪ್ರಕರಣ ದಾಖಲಾದಾಗ ಅಪ್ರಾಪ್ತಳಾಗಿದ್ದಳು. ಯುವಕನು ಒಂದೂವರೆ ತಿಂಗಳು ಜೈಲಿನಲ್ಲಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಈತ ಗ್ರಾಮದಲ್ಲಿ ವಾಟರಮನ್ ಆಗಿ ಕೆಲಸ ಮಾಡುತ್ತಿದ್ದನು. ಇದನ್ನೂ ಓದಿ: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ

    ಯುವಕನು ನಿನ್ನೆ ಸಂಜೆ ಮನೆಯಲ್ಲಿ ವಿಷಸೇವಿಸಿ ಮಾಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದಾನೆ. ಯುವತಿ ಸೇರಿ ಯುವತಿ ಮನೆಯ ವಿಜಯ ದೀವಿಗಿಹಳ್ಳಿ, ಮಂಜು ದೀವಿಗಿಹಳ್ಳಿ ಎಂಬುವರ ವಿರುದ್ಧ ಮೃತನ ತಂದೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.