Tag: PSLV-C47

  • ಇಸ್ರೋ ಸಾಧನೆ- ಕಾರ್ಟೊಸ್ಯಾಟ್-3, ಅಮೆರಿಕದ 13 ನ್ಯಾನೋ ಉಪಗ್ರಹ ಉಡಾವಣೆ ಯಶಸ್ವಿ

    ಇಸ್ರೋ ಸಾಧನೆ- ಕಾರ್ಟೊಸ್ಯಾಟ್-3, ಅಮೆರಿಕದ 13 ನ್ಯಾನೋ ಉಪಗ್ರಹ ಉಡಾವಣೆ ಯಶಸ್ವಿ

    ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ) ಭೂಮಿ ಚಿತ್ರಣ ಹಾಗೂ ಮ್ಯಾಪ್‍ಗೆ ಸಂಬಂಧಿಸಿದ ಕಾರ್ಟೊಸ್ಯಾಟ್-3 ಸೇರಿದಂತೆ ಅಮೆರಿಕದ 13 ಮೈಕ್ರೋ ಉಪಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾಯಿಸಿದೆ.

    ಕಾರ್ಟೊಸ್ಯಾಟ್-3 ಹಾಗೂ ಅಮೆರಿಕದ 13 ಸಣ್ಣ ಉಪಗ್ರಹಗಳು ಸೇರಿ 14 ಉಪಗ್ರಹಗಳನ್ನು ಹೊತ್ತ ಪಿಎಸ್‍ಎಲ್‍ವಿ-ಸಿ47 ರಾಕೆಟ್ ಇಂದು ಬೆಳಗ್ಗೆ 9.28ಕ್ಕೆ ನಭಕ್ಕೆ ಚಿಮ್ಮಿದೆ. ಕಾರ್ಟೊಸ್ಯಾಟ್-3 ಅತ್ಯಂತ ಸ್ಪಷ್ಟವಾಗಿ ಫೋಟೊಗಳನ್ನು ಸೆರೆಹಿಡಿಯುವ ಸಾಮರ್ಥ್ಯದ ಮೂರನೇ ತಲೆಮಾರಿನ ಉಪಗ್ರಹವಾಗಿದೆ. ಒಟ್ಟು 1,625 ಕೆಜಿ ಭಾರವುಳ್ಳ ಉಹಗ್ರಹಗಳನ್ನು ಪಿಎಸ್‍ಎಲ್‍ವಿ-ಸಿ47 ರಾಕೆಟ್ ಹೊತ್ತೊಯ್ದಿದೆ.

    ಉಡಾವಣೆಯಾಗಿ ಅಂತರಿಕ್ಷ ಸೇರಿದ ಬಳಿಕ 27 ನಿಮಿಷಗಳಲ್ಲಿ ಕಾರ್ಟೊಸ್ಯಾಟ್ ಮತ್ತು ಇತರೆ ಉಪಗ್ರಹಗಳನ್ನು ನಿಗದಿತ ಕ್ಷಕೆಗೆ ಇಸ್ರೋ ಸೇರಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣೆ ವಲಯದಿಂದ ಪಿಎಲ್‍ಎಲ್‍ವಿ ಉಡಾವಣೆಗೊಂಡಿದೆ. ಇದು ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳುತ್ತಿರುವ 74ನೇ ಯೋಜನೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ.

    ಈ ಬಗ್ಗೆ ಇಸ್ರೋ ಮುಖ್ಯಸ್ಥ ಡಾ.ಕೆ.ಶಿವನ್ ಮಾತನಾಡಿ. ನನಗೆ ಸಂತೋಷವಾಗಿದೆ, ಪಿಎಸ್‍ಎಲ್‍ವಿ-ಸಿ 47 ಇತರೆ 13 ಉಪಗ್ರಹಗಳೊಂದಿಗೆ ನಿಖರವಾಗಿ ಕಕ್ಷೆಯಲ್ಲಿ ಉಡಾವಣೆಯಾಗಿದೆ. ಕಾರ್ಟೊಸಾಟ್ -3 ಅತ್ಯುನ್ನತ ರೆಸಲ್ಯೂಶನ್ ಹೊಂದಿರುವ ಸಿವಿಲಿಯನ್ ಉಪಗ್ರಹವಾಗಿದೆ. ನಾವು ಮಾರ್ಚ್‍ವರೆಗೆ 13 ಯೋಜನೆಗಳು, 6 ದೊಡ್ಡ ವಾಹನ ಯೋಜನೆಗಳು ಮತ್ತು 7 ಉಪಗ್ರಹ ಯೋಜನೆಗಳ ಮೇಲೆ ನಾವು ಕಾರ್ಯ ನಿರ್ವಹಿಸಬೇಕಿದೆ ಎಂದರು.

    714 ಕೆಜಿ ಭಾರವುಳ್ಳ ಕಾರ್ಟೋಸ್ಯಾಟ್-3 ಉಪಗ್ರಹ, ಹೈ ರೆಸ್ಯೂಲೇಷನ್ ಚಿತ್ರಗಳನ್ನು ಕಳುಹಿಸಿಕೊಡಲಿದೆ. ಭೂ ವಾತಾವರಣ, ಅಂತರ್ಜಲ ಮಟ್ಟ, ನಗರ ಯೋಜನೆ, ವ್ಯವಸಾಯ ಕ್ಷೇತ್ರ, ಇನ್ನಿತರೆ ಕಾರ್ಯಗಳಿಗೆ ಕಾರ್ಪೊಸ್ಯಾಟ್-3 ಉಪಗ್ರಹ ಬಳಕೆಯಾಗಲಿದೆ. ವಿಜ್ಞಾನಿಗಳ ಸಾಧನೆಗೆ ಇಸ್ರೋ ಮುಖ್ಯಸ್ಥ ಅಭಿನಂದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ತೆಲಂಗಾಣ ಸಿ.ಎಂ ಕೆ.ಸಿ.ಆರ್ ಸೇರಿದಂತೆ ಹಲವು ಗಣ್ಯರು ಶುಭಹಾರೈಸಿ, ವಿಜ್ಞಾನಿಗಳಿಗೆ ಅಭಿನಂದಿಸಿದ್ದಾರೆ.

    ಈ ಉಪಗ್ರಹಗಳ ಬಗ್ಗೆ ಇಸ್ರೋ ನಿರಂತರ ಮಾಹಿತಿಗಳನ್ನು ನೀಡುತ್ತಿರುತ್ತದೆ. ಕಾರ್ಟೊಸ್ಯಾಟ್-3 ಹಾಗೂ ಇತರೆ ಉಪಗ್ರಹಗಳು ಹೇಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವ ಬಗ್ಗೆ ಅಪ್‍ಡೇಟ್ ನೀಡಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.