Tag: PSI

  • ಶ್ರೀಗಳ ಪುಣ್ಯಾರಾಧನೆಯಲ್ಲಿ ನಿರ್ಲಕ್ಷ್ಯ- ಭಕ್ತಾದಿಗಳು ಕುಸಿದು ಬಿದ್ದರೂ ಸಹಾಯಕ್ಕೆ ಬಾರದ ಪಿಎಸ್‍ಐ

    ಶ್ರೀಗಳ ಪುಣ್ಯಾರಾಧನೆಯಲ್ಲಿ ನಿರ್ಲಕ್ಷ್ಯ- ಭಕ್ತಾದಿಗಳು ಕುಸಿದು ಬಿದ್ದರೂ ಸಹಾಯಕ್ಕೆ ಬಾರದ ಪಿಎಸ್‍ಐ

    ತುಮಕೂರು: ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ದಿನ ಹಾಗೂ ಪುಣ್ಯಾರಾಧನೆ ದಿನವನ್ನು ಬಿಗಿ ಬಂದೋಬಸ್ತ್ ನೀಡಿ ಯಾವುದೇ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಿದ ಪೊಲೀಸರಿಗೆ ಧನ್ಯವಾದ ಹೇಳಲೇಬೇಕು. ಆದರೆ ಇದಕ್ಕೆ ಅಪವಾದ ಎಂಬಂತೆ ಪುಣ್ಯಾರಾಧನೆಯ ದಿನ ಪಿಎಸ್‍ಐ ಬಂದೋಬಸ್ತ್ ಮಾಡೋದನ್ನು ಬಿಟ್ಟು ಪ್ರೋಬೆಷನರಿ ಮಹಿಳಾ ಡಿವೈಎಸ್‍ಪಿ ಜೊತೆ ಸುಧೀರ್ಘ ಸಂಭಾಷಣೆ ನಡೆಸಿ ನಿರ್ಲಕ್ಷ್ಯ ತೋರಿದ್ದ ವಿಡಿಯೋ ಈಗ ವೈರಲ್ ಆಗಿದೆ.

    ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಠಾಣಾ ಪಿಎಸ್ ನವೀನ್ ಕುಮಾರ್, ಪ್ರೋಬೇಷನರಿ ಮಹಿಳಾ ಡಿವೈಎಸ್‍ಪಿ ಜೊತೆ ನಿರಂತರ ಮಾತುಕತೆ ನಡೆಸುತ್ತಾ, ಮೊಬೈಲಿನಲ್ಲಿ ಕಾಲಹರಣ ಮಾಡಿ ಸಾರ್ವಜನಿಕರ ವಿರೋಧಕ್ಕೆ ತುತ್ತಾಗಿದ್ದಾರೆ. ಪಿಎಸ್‍ಐ ನವೀನ್‍ನನ್ನು ಶ್ರೀಗಳ ಗದ್ದುಗೆ ಮುಂದೆ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು.

    ಮಧ್ಯಾಹ್ನದ ವೇಳೆ ಬಿರುಬಿಸಿಲಿನಲ್ಲಿ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಹಲವರು ತಲೆ ಸುತ್ತಿನಿಂದಾಗಿ ಕುಸಿದು ಬಿದ್ದಿದ್ದರು. ನೂಕಾಟ ತಳ್ಳಾಟ ಜೋರಾಗಿತ್ತು. ಇವೆಲ್ಲವೂ ಪಿಎಸ್‍ಐ ನವೀನ್ ಮುಂದೆ ನಡೆಯುತಿತ್ತು. ಇದ್ಯಾವುದರ ಪರಿವೇ ಇಲ್ಲದ ನವೀನ್ ಪ್ರೋಬೇಷನರಿ ಮಹಿಳಾ ಡಿವೈಎಸ್‍ಪಿ ಜೊತೆ ಸುಧೀರ್ಘ ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದರು.

    ನವೀನ್ ಕುಮಾರ್ ಎದುರಲ್ಲೇ ಹಲವು ಭಕ್ತಾದಿಗಳು ಕುಸಿದು ಬಿದಿದ್ದಾರೆ. ಅವರ ಸಹಾಯಕ್ಕೂ ನವೀನ್ ಹೋಗಲಿಲ್ಲ. ಅಷ್ಟೇ ಅಲ್ಲದೇ ಈ ಇಬ್ಬರೂ ಪೊಲೀಸ್ ಅಧಿಕಾರಿಗಳು ಒರಗಿಕೊಂಡಿದ್ದ ಬ್ಯಾರಿಕೇಡ್ ನ ಕ್ಯೂನಲ್ಲಿ ಜನರ ನೂಕಾಟ ತಳ್ಳಾಟ ಜೋರಾಗಿತ್ತು. ಸ್ವಲ್ಪ ಯಾಮಾರಿದರೂ ಕಾಲ್ತುಳಿತ ನಡೆಯುತಿತ್ತು.

    ಈ ಸನ್ನಿವೇಶವನ್ನು ಕಂಡು ಕಾಣದಂತಿದ್ದ ನವೀನ್ ಸುದೀರ್ಘ ಮಾತುಕತೆಯಲ್ಲಿ ತೊಡಗಿದ್ದನು. ಮೊಬೈಲ್ ಫೋನಿನಲ್ಲಿ ಬ್ಯುಸಿಯಾಗಿದ್ದ. ಕರ್ತವ್ಯ ಮರೆತು ಬೇರೆಯದ್ದೇ ಲೋಕದಲ್ಲಿದ್ದ ಈ ಅಧಿಕಾರಿಗಳ ವಿಡಿಯೋ ಈಗ ವೈರಲ್ ಆಗಿದ್ದು, ಇವರಿಬ್ಬರ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬೇಲ್ ಪಡೆದ ರೌಡಿಶೀಟರ್‌ಗಳ ಜೊತೆಯೇ ಪಿಎಸ್‍ಐ ಡ್ಯಾನ್ಸ್ – ವಿಡಿಯೋ ನೋಡಿ

    ಬೇಲ್ ಪಡೆದ ರೌಡಿಶೀಟರ್‌ಗಳ ಜೊತೆಯೇ ಪಿಎಸ್‍ಐ ಡ್ಯಾನ್ಸ್ – ವಿಡಿಯೋ ನೋಡಿ

    ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಬೇಲ್ ಪಡೆದ ರೌಡಿಶೀಟರ್‌ಗಳ ಜೊತೆ ರಸ್ತೆ ಮಧ್ಯೆಯೇ ಪಿಎಸ್‍ಐ ಒಬ್ಬರು ಡ್ಯಾನ್ಸ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಡಿಸೆಂಬರ್ 18ರಂದು ನಗರದ ಅಶೋಕನಗರ ಪೊಲೀಸ್ ಠಾಣೆಯ ಪಿಎಸ್‍ಐ ಬಸವರಾಜ್ ಹೂಗಾರ್, ರೌಡಿಶೀಟರ್ ಗಳಾದ ದುರ್ಗಪ್ಪ ಬಿಜವಾಡ, ಶಿವರಾಜ್ ಗೌರಿ ಹಾಗೂ ತಂಡದವರ ಜೊತೆಗೆ ನಡುರಸ್ತೆಯಲ್ಲೇ ಕುಣಿದು ಕುಪ್ಪಳಿಸಿದ್ದಾರೆ. ಪಿಎಸ್‍ಐ ಹೂಗಾರ್ ಖಾಕಿ ಸಮವಸ್ತ್ರದಲ್ಲೇ ತೂರಾಡಿರುವ ವಿಡಿಯೋ ವಾಟ್ಸಪ್ ಗಳಲ್ಲಿ ವೈರಲ್ ಆಗಿದೆ. ಪಿಎಸ್‍ಐ ಡ್ಯಾನ್ ವೈರಲ್ ಆದ ಬೆನ್ನಲ್ಲೇ ಪ್ರಕರಣ ಬೆಳಕಿಗೆ ಬಂದಿದೆ.

    2011ರ ಸಬ್ ಜೈಲ್ ಗಲಾಟೆ ಪ್ರಕರಣದಲ್ಲಿ ದುರ್ಗಪ್ಪ ಬಿಜವಾಡ ಹಾಗೂ ಶಿವರಾಜ್ ಗೌರಿ ಎಂಬವರ ವಿರುದ್ಧ ಇದೇ ಅಶೋಕ ನಗರ ಪೆÇಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಸುದೀರ್ಘ ವಿಚಾರಣೆಯ ಬಳಿಕ ಡಿಸೆಂಬರ್ 16 ರಂದು ಹುಬ್ಬಳ್ಳಿಯ ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ ವಿರುದ್ಧ ತೀರ್ಪು ನೀಡಿತ್ತು. ಅಲ್ಲದೇ ಮೂರು ವರ್ಷ ಜೈಲು ಹಾಗೂ 5 ಸಾವಿರ ರೂಪಾಯಿ ದಂಡವನ್ನು ಸಹ ವಿಧಿಸಿತ್ತು. ಆದರೆ ಆರೋಪಿಗಳಿಗೆ ಶಿಕ್ಷೆ ನೀಡಿದ್ದ ದಿನವೇ, ಬೇಲ್ ಮಂಜೂರಾಗಿತ್ತು.

    https://www.youtube.com/watch?v=QrKJScyZEnM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೂರುದಾರ ಮಹಿಳೆಗೆ ಅವಾಚ್ಯವಾಗಿ ಪಿಎಸ್‍ಐ ನಿಂದನೆ!

    ದೂರುದಾರ ಮಹಿಳೆಗೆ ಅವಾಚ್ಯವಾಗಿ ಪಿಎಸ್‍ಐ ನಿಂದನೆ!

    ತುಮಕೂರು: ದೂರುದಾರ ಮಹಿಳೆಗೆ ಪಿಎಸ್‍ಐ ಓರ್ವರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅಶ್ಲೀಲ ಪದ ಪ್ರಯೋಗ ಮಾಡಿ ಬೈದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

    ನಗರದ ತಿಲಕ್ ಪಾರ್ಕ್ ಠಾಣೆಯ ಪಿಎಸ್‍ಐ ಲಕ್ಷ್ಮಯ್ಯರ ಮೇಲೆ ಈ ಆರೋಪ ಕೇಳಿ ಬಂದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರು ನೀಡಿದ ಗಂಗಸಂದ್ರದ ಮಹಿಳೆ ರಾಧಾಗೆ ಪಿಎಸ್‍ಐ ಲಕ್ಷ್ಮಯ್ಯ ತುಚ್ಛವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.

    ಗಂಗಸಂದ್ರದಲ್ಲಿ ನಡೆದಿದ್ದ ಗಲಾಟೆ ಸಂಬಂಧಿಸಿದಂತೆ ಹನುಮಂತರಾಜು-ರಾಧಾ ದಂಪತಿ ಶ್ರೀಕಾಂತ್ ಮತ್ತು ಅವರ ತಾಯಿ ಕೆಂಪಮ್ಮರ ವಿರುದ್ಧ ದೂರು ನೀಡಿದರು. ಪೊಲೀಸರು ಕೇವಲ ಕೆಂಪಮ್ಮರನ್ನು ಮಾತ್ರ ವಿಚಾರಣೆ ಮಾಡಿ ವಾಪಸ್ ಕಳುಹಿಸಿದ್ದರು. ಆದರೆ ಮೊದಲ ಆರೋಪಿ ಶ್ರೀಕಾಂತ್‍ನ ವಿಚಾರಣೆ ಮಾಡಿರಲಿಲ್ಲ.

    ಇದನ್ನು ಹನುಮಂತರಾಜು- ರಾಧಾ ದಂಪತಿ ಪಿಎಸ್‍ಐ ಲಕ್ಷ್ಮಯ್ಯರನ್ನು ಪ್ರಶ್ನಿಸಿದ್ದಾರೆ. ಆರೋಪಿ ಶ್ರೀಕಾಂತನನ್ನು ವಿಚಾರಣೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಪಿಎಸ್‍ಐ ಲಕ್ಷ್ಮಯ್ಯ ಅವರನ್ನು ಕರೆಸಲ್ಲ ಏನಿವಾಗ… ನಮಗೆ ಹೇಗೆ ತೋಚತ್ತೋ ಹಾಗೆ ಮಾಡ್ತಿನಿ ಎಂದು ಗದರಿಸಿದ್ದಾರೆ. ಅಲ್ಲದೆ ಮಹಿಳೆ ಎನ್ನೋದನ್ನು ನೋಡದೆ ಸೂ… ಸೆ… ಎಂದು ಅಶ್ಲೀಲ ಪದ ಬಳಿಸಿ ನಿಂದಿಸಿದ್ದಾರೆ.

    ಪಿಎಸ್‍ಐ ಲಕ್ಷ್ಮಯ್ಯನ ಅವಲಕ್ಷಣದ ಮಾತಿನಿಂದ ನೊಂದ ಮಹಿಳೆ ಗೋಳೋ ಎಂದು ಕಣ್ಣಿರಿಟ್ಟಿದ್ದಾರೆ. ತನ್ನ ಮುಂದೆಯೇ ತನ್ನ ಪತ್ನಿಗೆ ಅವಾಚ್ಯ ಶಬ್ಧದಿಂದ ಪಿಎಸ್‍ಐ ನಿಂದಿಸುತಿದ್ದುದನ್ನು ಪತಿ ಹನುಮಂತರಾಜು ಅಸಾಹಯಕನಾಗಿ ನೋಡುತಿದ್ದ.

    ಈ ಘಟನೆಯಿಂದ ನೊಂದ ದಂಪತಿ ಪಿಎಸ್‍ಐ ಲಕ್ಷ್ಮಯ್ಯನ ದೌರ್ಜನ್ಯದ ವಿರುದ್ಧ ಈಗಾಗಲೇ ಎಸ್‍ಪಿ ದಿವ್ಯಾ ಗೋಪಿನಾಥ್ ಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ದೌರ್ಜನ್ಯ ಎಸಗಿದ ಪಿಎಸ್‍ಐ ವಿರುದ್ಧ ಕ್ರಮ ತೆಗೆದುಕೊಳ್ಳದೆ ಇದ್ದರೆ ಉಪವಾಸ ಸತ್ಯಾಗ್ರಹ ಕೂರೋದಾಗಿ ಹನುಮಂತರಾಜು ರಾಧಾ ದಂಪತಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಿತ್ತಾಡಿಕೊಂಡ ಪಿಎಸ್‍ಐ, ಪೇದೆ- ಇಬ್ಬರ ವಿರುದ್ಧ ಎಫ್‍ಐಆರ್ ದಾಖಲು

    ಕಿತ್ತಾಡಿಕೊಂಡ ಪಿಎಸ್‍ಐ, ಪೇದೆ- ಇಬ್ಬರ ವಿರುದ್ಧ ಎಫ್‍ಐಆರ್ ದಾಖಲು

    ಚಿಕ್ಕಮಗಳೂರು: ಕಾಫಿನಾಡಿನ ಪಿಎಸ್‍ಐ ಹಾಗೂ ಪೇದೆ ಮಧ್ಯದ ಶೀತಲ ಸಮರಕ್ಕೆ ತೆರೆ ಬಿದ್ದಿದ್ದು ಇಬ್ಬರ ಮೇಲೂ ಎಫ್‍ಐಆರ್ ದಾಖಲಾಗಿದೆ.

    ಪಿಎಸ್‍ಐ ರಫೀಕ್ ಹಾಗೂ ಪೇದೆ ಶಿವಣ್ಣ ಅವರ ವಿರುದ್ಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ಈ ಇಬ್ಬರ ಸಿಬ್ಬಂದಿ ಜಗಳ ಜಿಲ್ಲಾಮಟ್ಟದ ಪೊಲೀಸ್ ಅಧಿಕಾರಿಗಳಿಗೆ ತಲೆನೋವಾಗಿತ್ತು. ಹೀಗಾಗಿ ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಕೊಪ್ಪ ಡಿವೈಎಸ್‍ಪಿ ರವಿಂದ್ರನಾಥ್ ಎಸ್ ಜಾಗೀರ್ದಾರ್ ಅವರಿಗೆ ಆದೇಶ ನೀಡಿದ್ದರು. ಎಸ್‍ಪಿ ಆದೇಶದ ಮೇರೆಗೆ ರವೀಂದ್ರನಾಥ್ ತನಿಖೆ ನಡೆಸಿ, ವರದಿಯನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್‍ಪಿ ಹರೀಶ್ ಪಾಂಡೆ ಇಬ್ಬರ ವಿರುದ್ಧವೂ ಎಫ್‍ಐಆರ್ ದಾಖಲಿಸಿದ್ದಾರೆ.

    ಏನಿದು ಪ್ರಕರಣ?:
    ಆರೋಪಿಗಳಾದ ಪೇದೆ ಶಿವಣ್ಣ ಹಾಗೂ ಪಿಎಸ್‍ಐ ರಫೀಕ್ ಇಬ್ಬರೂ ಬೇರೆ ಬೇರೆ ಠಾಣೆಯವರು. ಅಜ್ಜಂಪುರದ ಬಕ್ಕನಕಟ್ಟೆ ಜಾತ್ರೆಯ ನಿಮಿತ್ತ ನವಂಬರ್ 20ರಂದು ಲಕ್ಕವಳ್ಳಿ ಠಾಣೆಯಿಂದ ಶಿವಣ್ಣ ಅವರನ್ನು ನಿಯೋಜನೆ ಮಾಡಲಾಗಿತ್ತು. ಅಂದು ಶಿವಣ್ಣನ ಮೇಲೆ ಅಜ್ಜಂಪುರದ ಪಿಎಸ್‍ಐ ರಫೀಕ್ ಸಾರ್ವಜನಿಕ ಪ್ರದೇಶದಲ್ಲಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರು. ಇದರಿಂದಾಗಿ ಶಿವಣ್ಣ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

    ಪತಿಗೆ ಆಗಿರುವ ಅನ್ಯಾಯ ಪ್ರಶ್ನಿಸಿ ಶಿವಣ್ಣರ ಪತ್ನಿ ಆಶಾ ಅಜ್ಜಂಪುರದ ಠಾಣೆಯಲ್ಲಿ ರಫೀಕ್ ವಿರುದ್ಧ ದೂರು ನೀಡಿದ್ದರೂ, ಕೇಸ್ ದಾಖಲಿಸಿಕೊಂಡಿರಲಿಲ್ಲ. ಇದರಿಂದಾಗಿ ಆಶಾ ಹಾಗೂ ಅತ್ತೆ ರಾತ್ರಿ 12.30ರವರೆಗೂ ಠಾಣೆ ಬಾಗಿಲಲ್ಲಿಯೇ ಕುಳಿತಿದ್ದರು. ಆದರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ಬಳಿಕ ಬೇಸತ್ತ ಆಶಾ ಅತ್ತೆಯ ಜೊತೆಗೆ ಎಸ್‍ಪಿ ಕಚೇರಿಗೆ ಬಂದು, ಧರಣಿ ನಡೆಸಿದ್ದರು. ಈ ಬೆಳವಣಿಗೆ ಗಮನಕ್ಕೆ ಬರುತ್ತಿದ್ದಂತೆ ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಕೊಪ್ಪ ಡಿವೈಎಸ್‍ಪಿ ರವಿಂದ್ರನಾಥ್ ಎಸ್ ಜಾಗೀರ್ದಾರ್ ಅವರಿಗೆ ಶನಿವಾರ ಆದೇಶ ನೀಡಿದ್ದರು.

    ಬಕ್ಕನಕಟ್ಟೆ ಜಾತ್ರೆಯಗೆ ನಿಯೋಜಿಸಿದ್ದ ಶಿವಣ್ಣ ಕೆಲಸ ನಿರ್ವಹಿಸದೆ ಮಹಿಳೆಯ ಜೊತೆಗೆ ಹೋಗಿದ್ದರು. ಊಟ ಮಾಡಿ, ತಿರುಗಾಡಿ ಕಾಲ ಕಳೆಯುತ್ತಿದ್ದರು. ಇದರಿಂದಾಗಿ ಕರೆದು ಎಚ್ಚರಿಕೆ ನೀಡಿರುವೆ ಅಷ್ಟೇ ಎಂದು ರಫೀಕ್ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವಿವಾಹಿತ ಮಹಿಳೆ ಜೊತೆ ಪಿಎಸ್‍ಐ ಅಕ್ರಮ ಸಂಬಂಧ – ಮನನೊಂದ ಮಹಿಳೆಯ ಪತಿ ಆತ್ಮಹತ್ಯೆಗೆ ಯತ್ನ

    ವಿವಾಹಿತ ಮಹಿಳೆ ಜೊತೆ ಪಿಎಸ್‍ಐ ಅಕ್ರಮ ಸಂಬಂಧ – ಮನನೊಂದ ಮಹಿಳೆಯ ಪತಿ ಆತ್ಮಹತ್ಯೆಗೆ ಯತ್ನ

    ಬೆಳಗಾವಿ: ವಿವಾಹಿತ ಮಹಿಳೆಯ ಜೊತೆ ಘಟಪ್ರಭ ಪೊಲೀಸ್ ಠಾಣೆಯ ಪಿಎಸ್‍ಐ ಅಕ್ರಮ ಸಂಬಂಧ ನಡೆಸುತ್ತಿದ್ದ. ಈ ವಿಷಯ ತಿಳಿದ ಮಹಿಳೆಯ ಪತಿ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.

    ಲಕ್ಷ್ಮಣ್ ದಳವಾವಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಪಿಎಸ್‍ಐ ದೇವಾನಂದ್ ಹಾಗೂ ಲಕ್ಷ್ಮಣ ಪತ್ನಿ ಮಧ್ಯೆ ಅನೈತಿಕ ಸಂಬಂಧವಿತ್ತು ಎಂಬ ವಿಷಯ ಬಹಿರಂಗವಾದ ಮೇಲೆ ಹಿರಿಯರೆಲ್ಲರು ಸೇರಿ ರಾಜಿ ಪಂಚಾಯಿತಿ ಮಾಡಿದ್ದರು. ಆದರೆ ಪತ್ನಿಯ ಅನೈತಿಕ ಸಂಬಂಧದಿಂದ ಮನನೊಂದಿದ್ದ ಲಕ್ಷ್ಮಣ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅನೈತಿಕ ಸಂಬಂಧದ ವಿಷಯ ಬೆಳಕಿಗೆ ಬಂದಂತೆ ಪಿಎಸ್‍ಐ ದೇವಾನಂದ್ 4 ದಿನಗಳ ರಜೆ ತೆಗೆದುಕೊಂಡು, ಸರ್ಕಾರಿ ಮೊಬೈಲ್ ಠಾಣೆಯಲ್ಲಿ ಸಿಬ್ಬಂದಿಗಳಿಗೆ ನೀಡಿ ಪರಾರಿಯಾಗಿದ್ದಾರೆ. ಪಿಎಸ್‍ಐ ಅಕ್ರಮ ಸಂಬಂಧ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ನಡೆಸಲು ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ.

    ಸದ್ಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷ್ಮಣ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ ಗೋಕಾಕ್ ಡಿವೈಎಸ್‍ಪಿ ಡಿ.ಟಿ ಪ್ರಭು ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲಿ ಪ್ರಕರಣದ ವರದಿ ನೀಡುವಂತೆ ಎಸ್‍ಪಿ ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವರ್ಗಾವಣೆಯಾದ ಪಿಎಸ್‍ಐರನ್ನು ಅದ್ಧೂರಿ ಮೆರವಣಿಗೆ ಮಾಡಿ, ಬೀಳ್ಕೊಟ್ಟ ಸ್ಥಳೀಯರು

    ವರ್ಗಾವಣೆಯಾದ ಪಿಎಸ್‍ಐರನ್ನು ಅದ್ಧೂರಿ ಮೆರವಣಿಗೆ ಮಾಡಿ, ಬೀಳ್ಕೊಟ್ಟ ಸ್ಥಳೀಯರು

    ಯಾದಗಿರಿ: ನೆಚ್ಚಿನ ಶಿಕ್ಷಕರು ವರ್ಗಾವಣೆಯಾದರೆ ಅಥವಾ ನಿವೃತ್ತಿ ಹೊಂದಿದರೆ ಅವರನ್ನು ವಾಹನದಲ್ಲಿ ಕೂರಿಸಿ ಮೆರವಣಿಗೆ ಮಾಡಿ, ಅದ್ಧೂರಿಯಾಗಿ ಬೀಳ್ಕೊಡುವುದನ್ನು ನಾವು ನೋಡಿದ್ದೇವೆ. ಆದರೆ ಪೊಲೀಸರಿಗೆ ಇಂತಹ ಅವಕಾಶ ಸಿಗುವುದೇ ಅಪರೂಪ. ಯಾದಗಿರಿ ಜಿಲ್ಲೆಯಲ್ಲಿ ಇಂತಹ ಅಪರೂಪ ದೃಶ್ಯ ಕಂಡು ಬಂದಿದೆ.

    ಕೆಂಭಾವಿ ಪೊಲೀಸ್ ಠಾಣೆಯ ಪಿಎಸ್‍ಐ ಅಧಿಕಾರಿ ಬಾಪುಗೌಡ ಪಾಟೀಲ ಅವರು ಯಾದಗಿರಿ ನಗರಕ್ಕೆ ವರ್ಗಾವಣೆಯಾಗಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯ ಬಾಪುಗೌಡ ಅವರು, ಕೆಂಭಾವಿ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸಿದ್ದಾರೆ.

    ಬಾಪುಗೌಡ ಅವರ ಉತ್ತಮವಾಗಿ ಸೇವೆ ಸಲ್ಲಿಸಿ, ಜನರ ಮೆಚ್ಚುಗೆ ಪಡೆದಿದ್ದರು. ಹೀಗಾಗಿ ಅವರಿಗೆ ಸ್ಥಳೀಯರು ಬುಧವಾರ ಬೀಳ್ಕೊಡುಗೆ ಸಮಾರಂಭ ಆಯೋಜಿಸಿದ್ದರು. ಜೊತೆಗೆ ಹೊಸದಾಗಿ ಠಾಣೆಗೆ ಆಗಮಿಸಿದ ಪಿಎಸ್‍ಐ ಅಜೀತ್ ಕುಮಾರ್ ಅವರಿಗೆ ಸ್ವಾಗತ ಕಾರ್ಯಕ್ರಮ ಕೂಡ ಠಾಣೆಯಲ್ಲಿ ನಡೆಯಿತು.

    ಬೀಳ್ಕೊಡುಗೆ ಸಮಾರಂಭ ಬಳಿಕ ಸ್ಥಳೀಯರು ಹಾಗೂ ಠಾಣೆಯ ಸಿಬ್ಬಂದಿ ಬಾಪುಗೌಡ ಪಾಟೀಲ್ ಅವರನ್ನು ತೆರೆದ ಜೀಪ್‍ನಲ್ಲಿ ಕೂರಿಸಿ, ಮೆರವಣಿಗೆ ಮಾಡಿದರು. ಈ ವೇಳೆ ಡಿಜೆ ಹಚ್ಚಿ ಅನೇಕರು ಯುವಕರು ಕುಣಿದು ಕುಪ್ಪಳಿಸಿದರು. ಅಷ್ಟೇ ಅಲ್ಲದೆ ಪೊಲೀಸ್ ಸಿಬ್ಬಂದಿ ಕೂಡ ‘ಚುಟುಚುಟ ಅಂತೈತಿ…’ ಎನ್ನುವ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/oUZGj_2k8ng

  • ಗಣಪತಿ ವಿಸರ್ಜನೆ ವೇಳೆ ಎಸ್‍ಐರನ್ನು ಹೊತ್ತು ಕುಣಿದ ವಿಡಿಯೋ ವೈರಲ್

    ಗಣಪತಿ ವಿಸರ್ಜನೆ ವೇಳೆ ಎಸ್‍ಐರನ್ನು ಹೊತ್ತು ಕುಣಿದ ವಿಡಿಯೋ ವೈರಲ್

    ದಾವಣಗೆರೆ: ಶನಿವಾರ ದಾವಣಗೆರೆ ನಗರದಲ್ಲಿ ನಡೆದ ಹಿಂದೂ ಮಹಾಸಭಾದ ಗಣಪತಿ ವಿಸರ್ಜನೆ ವೇಳೆ ಭದ್ರತಾ ವ್ಯವಸ್ಥೆಯಲ್ಲಿ ನಿರತರಾಗಿದ್ದ ಎಸ್‍ಐ ಒಬ್ಬರನ್ನ ಹೊತ್ತು ಕುಣಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ದಾವಣಗೆರೆಯಲ್ಲಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸಿಕೆರೆ ಠಾಣೆಯ ಶೂಟೌಟ್ ಪ್ರಕರಣದಲ್ಲಿ ಹೆಸರು ಮಾಡಿದ್ದ ಎಸ್‍ಐ ಸಿದ್ದೇಶ್ ಹಾಗೂ ಬಡವಾಣೆ ಠಾಣೆಯ ಪೊಲೀಸ್ ವೀರ್ ಬಸಪ್ಪ ಕುಸ್ಲಾಪುರ್ ಅವರನ್ನು ಯುವಕರು ಹೊತ್ತು ಸ್ಟೆಪ್ ಹಾಕಿದ್ದಾರೆ.

    ಮಹಾನಗರ ಪಾಲಿಕೆ ಮುಂಭಾಗದಲ್ಲಿ ಗಣೇಶನ ಭಕ್ತರು ಪಿಎಸ್‍ಐ ಸಿದ್ದೇಶ್ ಅವರನ್ನ ಹೆಗಲ ಮೇಲೆ ಹೊತ್ತು ಕುಣಿದಿದ್ದಾರೆ. ಈ ದೃಶ್ಯವನ್ನು ಅಲ್ಲಿ ನೆರೆದಿದ್ದವರು ಮೊಬೈಲ್‍ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಹೆಗಲ ಮೇಲೆ ಕೇಸರಿ ಶಾಲು ಹಾಕಿ ಸಂಭ್ರಮಿಸುತ್ತಿದ್ದ ಗಣೇಶ ಭಕ್ತರು ಅಲ್ಲೇ ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಎಸ್‍ಐ ಸಿದ್ದೇಶ್ ಅವರನ್ನು ಏಕಾಏಕಿ ಹೊತ್ತು ಕುಣಿದಿದ್ದಾರೆ. ಕೆಳಗಿಳಿಸುವಂತೆ ಯುವಕರನ್ನು ಕೇಳಿಕೊಂಡರೂ ಯಾರೊಬ್ಬರೂ ಕೆಳಗಿಳಿಸದೇ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತ್ರಿಬಲ್ ರೈಡ್ ಹೋಗುತ್ತಿದ್ದ ಯುವಕರಿಗೆ ಪಿಎಸ್‍ಐನಿಂದ ಥಳಿತ!

    ತ್ರಿಬಲ್ ರೈಡ್ ಹೋಗುತ್ತಿದ್ದ ಯುವಕರಿಗೆ ಪಿಎಸ್‍ಐನಿಂದ ಥಳಿತ!

    ವಿಜಯಪುರ: ತ್ರಿಬಲ್ ರೈಡ್ ಹೊರಟಿದ್ದ ಬೈಕ್ ಸವಾರರಿಗೆ ಪಿಎಸ್‍ಐ ಹಿಗ್ಗಮುಗ್ಗಾ ಥಳಿಸಿರುವ ಘಟನೆ ವಿಜಯಪುರದ ಇಂಡಿಯಲ್ಲಿ ನಡೆದಿದೆ.

    ಸೋಮವಾರ ರಾತ್ರಿ ಇಂಡಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ಯುವಕರಿಗೆ ಪೈಪ್ ಮತ್ತು ಕಾಲಿನಿಂದ ಒದ್ದು ಅಶ್ಲೀಲ ಪದ ಬಳಸಿದ ಇಂಡಿ ನಗರ ಪಿಎಸ್‍ಐ ಯಡವಣ್ಣವರ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ರಸ್ತೆ ಮೇಲೆ ಹಲ್ಲೆ ಮಾಡಿದ್ದಲ್ಲದೇ ಪೊಲೀಸ್ ಠಾಣೆಯಲ್ಲಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿರುವುದಾಗಿ ಹಲ್ಲೆಗೊಳಗಾದ ಯುವಕರು ಆರೋಪಿಸಿದ್ದಾರೆ.

    ಹಂಜಗಿ ಮೂಲದ ಸಚಿನ್ ಪೊತೆ ಯುವಕರ ಮೇಲೆ ಹಲ್ಲೆ ನಡೆದಿದ್ದು, ಸದ್ಯಕ್ಕೆ ಆ ಯುವಕರು ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಂಡ ವಿಧಿಸದೇ ಹಲ್ಲೆ ಮಾಡಿದ ಪಿಎಸ್‍ಐ ಅಮಾನತು ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದಲ್ಲ, ಎರಡಲ್ಲ, ಐವರು ಹೆಂಡ್ತೀರು- 58ನೇ ವಯಸ್ಸಿಗೆ 22ರ ಯುವತಿಯ ವರಿಸಿದ ಪಿಎಸ್‍ಐ

    ಒಂದಲ್ಲ, ಎರಡಲ್ಲ, ಐವರು ಹೆಂಡ್ತೀರು- 58ನೇ ವಯಸ್ಸಿಗೆ 22ರ ಯುವತಿಯ ವರಿಸಿದ ಪಿಎಸ್‍ಐ

    – ಸಾವಿನ ನಂತರ ಹೊರಬಿತ್ತು ಪಂಚ ಪತ್ನಿಯರ ಕತೆ

    ತುಮಕೂರು: ನಿವೃತ್ತ ಪಿಎಸ್‍ಐಯೋರ್ವ ನಿಗೂಢವಾಗಿ ಒಂದಲ್ಲ, ಎರಡಲ್ಲ ಬರೋಬ್ಬರಿ ಐದು ಮದುವೆಯಾಗಿ ಪತ್ನಿಯರಿಗೆಲ್ಲಾ ವಂಚಿಸಿದ ಘಟನೆ ತುಮಕೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ತಾಲೂಕಿನ ಸ್ವಾಂದೇನಹಳ್ಳಿ ನಿವಾಸಿ ದಿವಂಗತ ಪಿಎಸೈ ವಿಶ್ವನಾಥ್ ಬರೋಬ್ಬರಿ ಐದು ಮದುವೆಯಾಗಿದ್ದಾರಂತೆ. ಮೊದಲನೆಯವರು ಸರೋಜಮ್ಮ, ಎರಡನೆಯವರು ಶಾರದಾ ಹಾಗೂ ಮೂರನೆಯವರು ಕವನಾ(ಹೆಸರು ಬದಲಾಯಿಸಲಾಗಿದೆ). ಇನ್ನುಳಿದ ಇಬ್ಬರು ಪತ್ನಿಯರು ಈ ಜಂಟಾಟವೇ ಬೇಡ ಎಂದು ದೂರ ಉಳಿದಿದ್ದಾರೆ ಎಂದು ತಿಳಿದು ಬಂದಿದೆ.

    ನಿವೃತ್ತ ಪಿಎಸ್‍ಐ ಸಾವನ್ನಪ್ಪಿದ್ದಾಗ ಆಸ್ತಿಗಾಗಿ ಪತ್ನಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದಾಗಲೇ ಇವರಿಗೆ ಪಂಚ ಪತ್ನಿಯರು ಇರುವ ವಿಚಾರ ತಿಳಿದು ಬಂದಿದೆ. ವಿಶೇಷ ಅಂದರೆ 58ನೇ ವಯಸ್ಸಿನಲ್ಲೂ 22 ವರ್ಷದ ಯುವತಿ ಕವನಾ(ಹೆಸರು ಬದಲಾಯಿಸಲಾಗಿದೆ) ವಂಚಿಸಿದ್ದಾರಂತೆ. ಇದೇ ಜುಲೈ 18 ರಂದು ವಿಶ್ವನಾಥ್ ಸ್ವಾಂದೇನಹಳ್ಳಿಯ ತನ್ನ ಮನೆಯಲ್ಲಿ ಮೃತಪಟ್ಟಿದ್ದಾರೆ. ಈ ವೇಳೆ ಮೂರನೇ ಪತ್ನಿ ಕವನಾ ಮಾತ್ರ ಇದ್ದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮೊದಲ ಪತ್ನಿಯ ಮಕ್ಕಳು, ಎರಡನೇ ಪತ್ನಿ ಮತ್ತು ಮಕ್ಕಳು ಸ್ವಾಂದೇನಹಳ್ಳಿಗೆ ಧಾವಿಸಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ಆಗಲೇ ವಿಶ್ವನಾಥ್ ಗೆ ಐದು ಮದುವೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.

    ಈಗ ಐವರಲ್ಲಿ ಮೂವರು ಪತ್ನಿಯರ ನಡುವೆ ಮಾತ್ರ ಆಸ್ತಿಗಾಗಿ ಗಲಾಟೆ ಜೋರಾಗಿದೆ. ಮೂವರು ಕೂಡಾ ಆಸ್ತಿಗಾಗಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಹೋದಲೆಲ್ಲಾ ಠಾಣೆಗೊಂದರಂತೆ ಮದುವೆಯಾದ ವಿಶ್ವನಾಥ್, ಪತ್ನಿಯರನ್ನು ಸಂಕಷ್ಟದಲ್ಲಿ ಸಿಲುಕಿಸಿ ಇಹಲೋಕ ತ್ಯಜಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿದ ಮಹಿಳಾ ಪಿಎಸ್‍ಐ!

    ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿದ ಮಹಿಳಾ ಪಿಎಸ್‍ಐ!

    ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ-ಗಾಳಿ ಮುಂದುವರಿದಿದ್ದು, ರಸ್ತೆಗೆ ಬಿದ್ದ ಮರವನ್ನು ಸ್ವತಃ ಪಿಎಸ್‍ಐ ಅವರೇ ತೆರವುಗೊಳಿಸಿದ್ದಾರೆ.

    ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಮಧ್ಯೆ ರಸ್ತೆಗೆ ಬಿದ್ದ ಮರವನ್ನು ಸಖರಾಯಪಟ್ಟಣ ಪೊಲೀಸ್ ಠಾಣೆಯ ಪಿಎಸ್‍ಐ ಸುನಿತಾ ತೆರವುಗೊಳಿಸಿದ್ದಾರೆ. ಸುನಿತಾ ಅವರು ಕರ್ತವ್ಯದ ನಡುವೆ ಮರಗಳ ತೆರವಿಗೆ ಮುಂದಾಗಿರುವುದು, ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಎನ್.ಆರ್.ಪುರ ತಾಲೂಕಿನ ನ್ಯಾಯಾಲಯಕ್ಕೆ ಹೋಗಿ ಬರುವಾಗ ಪಿಎಸ್‍ಐ ಅವರು ದಾರಿ ಮಧ್ಯೆ ಸಿಕ್ಕಿಹಾಕಿಕೊಂಡಿದ್ದಾರೆ. ಮಳೆ ಗಾಳಿಯಿಂದ ರಸ್ತೆ ಅಡ್ಡಲಾಗಿ ಮರ ಬಿದ್ದಿದೆ. ಆದರೆ ಸ್ಥಳೀಯರು ಬಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸಲು ಮುಂದಾಗದ ಕಾರಣ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ವೇಳೆ ಇದೇ ದಾರಿಯಿಂದಾಗಿ ಪಿಎಸ್‍ಐ ಅವರು ನ್ಯಾಯಾಲಯದಿಂದ ಹಿಂದಿರುಗಿದ್ದು, ದಾರಿ ಮಧ್ಯೆ ಸಿಲುಕಿದ್ದಾರೆ. ಇದನ್ನೂ ಓದಿ: ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ಕತ್ತರಿಸಿದ ಮಹಿಳಾ ಅಧಿಕಾರಿ!

    ರಸ್ತೆಯಲ್ಲಿ ಬಿದ್ದ ಮರವನ್ನು ಕಂಡ ಪಿಎಸ್‍ಐ ಅವರು ಕೂಡಲೇ ಸಾಮಾನ್ಯರಂತೆ ಮರ ತೆರವಿಗೆ ಮುಂದಾಗಿದ್ದಾರೆ. ಸುನಿತಾ ಅವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಮಲ್ಲಂದೂರು ರಸ್ತೆಯು ಚಿಕ್ಕಮಗಳೂರು ಹಾಗೂ ಶೃಂಗೇರಿಗೆ ಸಂಪರ್ಕ ಕಲ್ಪಿಸುತ್ತದೆ. ಇತ್ತೀಚೆಗಷ್ಟೇ ಹಾಸನದಲ್ಲಿ ಕೂಡ ಇಂಥದ್ದೇ ಘಟನೆಯೊಂದು ನಡೆದಿತ್ತು. ಮಹಿಳಾ ಅಧಿಕಾರಿಯೊಬ್ಬರು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದರು.