Tag: PSI uniform

  • ಪಿಎಸ್‌ಐ ನೇಮಕಾತಿ ಆದೇಶ ಕೈ ಸೇರುವ ಮುನ್ನವೇ ಯೂನಿಫಾರ್ಮ್‌ ಹಾಕ್ಕೊಂಡು ಬಿಲ್ಡಪ್‌

    ಪಿಎಸ್‌ಐ ನೇಮಕಾತಿ ಆದೇಶ ಕೈ ಸೇರುವ ಮುನ್ನವೇ ಯೂನಿಫಾರ್ಮ್‌ ಹಾಕ್ಕೊಂಡು ಬಿಲ್ಡಪ್‌

    ಹಾವೇರಿ: ಪಿಎಸ್‍ಐ ನೇಮಕಾತಿ ಆದೇಶ ಕೈ ಸೇರುವ ಮುನ್ನವೇ ಪಿಎಸ್‍ಐ(Police sub-Inspector) ಸಮವಸ್ತ್ರ ಹಾಕಿಕೊಂಡು ಪೇದೆಯೊಬ್ಬ ಬಿಲ್ಡಪ್‌ ಕೊಟ್ಟ ಘಟನೆ ಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬಸನಗೌಡ ಕರೇಗೌಡ ಪಿಎಸ್‍ಐ ಸಮವಸ್ತ್ರ ಹಾಕಿಕೊಂಡು ಬಿಲ್ಡ್‌ಪ್ ಕೊಟ್ಟಿದ್ದಾರೆ. ಜನವರಿ 19 ರಂದು ಬಿಡುಗಡೆಯಾಗಿದ್ದ ಪಿಎಸ್‍ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಬಸನಗೌಡ 27ನೇ ರ‍್ಯಾಂಕ್‍ನಲ್ಲಿದ್ದರು ಎನ್ನಲಾಗಿದೆ. 545 ಪಿಎಸ್‍ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿಯಲ್ಲಿ ಸೆಲೆಕ್ಟ್ ಆಗಿದ್ದು, ಸದ್ಯ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕಾನ್‍ಸ್ಟೇಬಲ್  ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ – ಸ್ಫೋಟಕ ಆಡಿಯೋ ಔಟ್

    ಪಿಎಸ್‍ಐ ಸೆಲೆಕ್ಷನ್ ಆಗಿದ್ದಕ್ಕೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಎಸ್‍ಐ ಡ್ರೆಸ್ ಹಾಕ್ಕೊಂಡು ಬಸನಗೌಡ ಭಾಗವಹಿಸಿ ಭಾಷಣ ಮಾಡಿದ್ದರು. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ವೈರಲ್ ಆಗಿದೆ. ಏಪ್ರಿಲ್ 20 ರಂದು ತನಿಖೆಗೆ ಹಾಜರಾಗುವಂತೆ ಸಿಐಡಿ ಸಹಾಯಕ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ಐವತ್ತು ಜನರಿಗೆ ನೀಡಿದ್ದ ನೋಟಿಸ್ ಪಟ್ಟಿಯಲ್ಲಿದ್ದ ಬಸನಗೌಡ ಕರೇಗೌಡ ಹೆಸರು ಸಹ ಇದೆ.

    ಅ.3 ರಂದು ಪಿಎಸ್‍ಐ ನೇಮಕಾತಿ ಪರೀಕ್ಷೆಯನ್ನು ಬಸನಗೌಡ ಬರೆದಿದ್ದರು. ಈಗ ಬೆಂಗಳೂರಿನಲ್ಲಿ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್