ಬೆಂಗಳೂರು: ಪಿಎಸ್‍ಐ ಅಕ್ರಮದ (PSI Recruitment Scam) ಕಿಂಗ್ ಪಿನ್ ಆರ್.ಡಿ ಪಾಟೀಲ್ (R.D Patil) ಕಂಡು ಬಂದರೆ ಮಾಹಿತಿ ನೀಡುವಂತೆ ಸಿಐಡಿ (CID) ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.
ಎರಡು ಪ್ರಕರಣದಲ್ಲೂ ಆರ್.ಡಿ ಪಾಟೀಲ್‍ಗಾಗಿ ದಸ್ತಗಿರಿ ವಾರೆಂಟ್ ನ್ಯಾಯಾಲಯ ಹೊರಡಿಸಿದೆ. ಪೊಲೀಸರು (Police) ಆರೋಪಿ ಆರ್.ಡಿ ಪಾಟೀಲ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹೀಗಾಗಿ ಆರ್.ಡಿ ಪಾಟೀಲ್ ಕಂಡ ಕೂಡಲೇ ಮಾಹಿತಿ ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನು ಸಿಐಡಿ ಹೊರಡಿಸಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಹಣ ಹಂಚುತ್ತಿದ್ದ ಫೋಟೋ ಬಿಡುಗಡೆ
Live Tv
[brid partner=56869869 player=32851 video=960834 autoplay=true]
ಕಲಬುರಗಿ: ಪಿಎಸ್‍ಐ ಪರೀಕ್ಷಾ ಅಕ್ರಮದಲ್ಲಿ (PSI Recruitment Scam) ಭಾಗಿಯಾಗಿ ಜೈಲು ಪಾಲಾದ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ (Divya Hagaragi) ಸೇರಿ 26 ಜನ ಆರೋಪಿಗಳಿಗೆ (Accused) ಜಾಮೀನು ಮಂಜೂರಾಗಿದೆ. ಇಂದು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು (Bail) ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
ಪಿಎಸ್‍ಐ ಅಕ್ರಮ ಪ್ರಕರಣದ ಕಿಂಗ್ ಪಿನ್ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ಕಾಶಿನಾಥ್ ಚಿಲ್, ಡಿವೈಎಸ್‍ಪಿ ಮಲ್ಲಿಕಾರ್ಜುನ್ ಸಾಲಿ ಸೇರಿ 26 ಜನರಿಗೆ ಜಾಮೀನು ಮಂಜೂರಾಗಿದೆ. ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧಿಶರಾದ ಕೆ. ಬಿ. ಪಾಟೀಲ್ 26 ಮಂದಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಅಕ್ರಮ -ADGP ಅಮೃತ್ ಪೌಲ್ ಅರೆಸ್ಟ್
ಏನಿದು ಪ್ರಕರಣ?
2021ರ ಅಕ್ಟೋಬರ್ 3 ರಂದು ರಾಜ್ಯಾದ್ಯಂತ ಪಿಎಸ್‍ಐ ಪರೀಕ್ಷೆ ನಡೆದಿತ್ತು. ಕಲಬುರಗಿ ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಮತ್ತು ತಂಡ ಹಣ ಬಲ ಹೊಂದಿರುವ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಿತ್ತು. ಲಕ್ಷಾಂತರ ರೂ. ನೀಡಿದವರ ಪರವಾಗಿ ಪರೀಕ್ಷೆಯಲ್ಲಿ ಅಕ್ರಮ ಮಾಡಲು ಸಹಕಾರ ನೀಡಿತ್ತು. ಪರೀಕ್ಷೆ ಮುಗಿದ ಬಳಿಕ ಕ್ಯಾಮೆರಾವನ್ನು ಬಂದ್ ಮಾಡಿ ಬಳಿಕ ಅಭ್ಯರ್ಥಿಗಳ ಒಎಂಆರ್ ಶೀಟ್‍ಗೆ ಸರಿ ಉತ್ತರವನ್ನು ಭರ್ತಿ ಮಾಡಲಾಗಿತ್ತು. ಆ ಬಳಿಕ ಈ ಪ್ರಕರಣ ಬೆಳಕಿಗೆ ಬಂದು ಎಡಿಜಿಪಿ ಅಮೃತ್ ಪೌಲ್, ದಿವ್ಯಾ ಹಾಗರಗಿ ಸೇರಿದಂತೆ ಹಲವು ಮಂದಿ ಬಂಧನಕ್ಕೊಳಗಾಗಿದ್ದರು. ಇದನ್ನೂ ಓದಿ: ಬಾಲಕನ ಕಿಡ್ನಾಪ್ – ಸಿಂಗಂ ಸ್ಟೈಲ್‌ನಲ್ಲಿ ಬಾಲಕನನ್ನು ರಕ್ಷಿಸಿದ ಸಿಪಿಐ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ, ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಪಿಎಸ್‍ಐ ಹಗರಣದಲ್ಲಿ (PSI Recruitment Scam) ತಮ್ಮ ಹೆಸರು ಕೇಳಿಬರುತ್ತಿರುವ ಹಿನ್ನೆಲೆ ಶಾಸಕ ಬಸವರಾಜ ದಡೇಸೂಗೂರು (Basavaraj Dadesugur) ಸ್ಪಷ್ಟೀಕರಣ ನೀಡಿದ್ದಾರೆ.
ವಿಧಾನಭೆಯಲ್ಲಿ ಮಳೆಗಾಲದ ಅಧಿವೇಶನ ಹಿನ್ನೆಲೆ ವಿಧಾನಸೌಧದ (Vidhana Soudha) ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ, ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ. ಮಾಧ್ಯಮದಲ್ಲಿ ಬಂದಿರುವ ಆಡಿಯೋ 2020ರದ್ದು, ಈಗಿನದ್ದಲ್ಲ. ಪಿಎಸ್ಐ ಹಗರಣಕ್ಕೂ ಅದಕ್ಕೂ ಸಂಬಂಧ ಇಲ್ಲ. ನಮ್ಮ ಕ್ಷೇತ್ರದ ಮಾಜಿ ಶಾಸಕರು ನಾನು ಯಾವಾಗ್ಯಾವಗಲೋ ಮಾತಾಡಿರೋದನ್ನು ಕಟ್ ಮಾಡಿ ವೀಡಿಯೋ ಮಾಡಿದ್ದಾರೆ. ಎಡಿಟ್ ಮಾಡಿರುವ ಆಡಿಯೋ ಅದು. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸಿಧು ಹತ್ಯಾ ಪ್ರಕರಣ – ಉತ್ತರ ಭಾರತದಾದ್ಯಂತ 50 ಕಡೆಗಳಲ್ಲಿ ಎನ್‌ಐಎ ದಾಳಿ
ನಾನು ತಪ್ಪು ಮಾಡಿಲ್ಲ. ಆಡಿಯೋಗಳನ್ನು ಎಡಿಟ್ ಮಾಡಿ ಸುಳ್ಳು ಆರೋಪ ಹೊರಿಸಲಾಗಿದೆ. ರಾಜಕೀಯವಾಗಿ ದ್ವೇಷ ಸಾಧಿಸುತ್ತಿದ್ದಾರೆ. ಪಿಎಸ್‍ಐ ಕುರಿತಾಗಿ ಅಲ್ಲ. ನಾನು ಈ ಹಿಂದೆ ರಾಜಿ ಪಂಚಾಯಿತಿ ಸಂಬಂಧ ಮಾತನಾಡಿದ್ದೆ, ಅದು ಹಳೆಯ ಆಡಿಯೋ ಅದನ್ನು ಎಡಿಟ್ ಮಾಡಿ ಇದೀಗ ಹರಿಬಿಡಲಾಗಿದೆ. ನನ್ನ ಬಳಿ ಎಲ್ಲಾ ದಾಖಲೆಗಳಿವೆ. ನಿವೃತ್ತ ಪೊಲೀಸ್ ಕಾನ್ಸ್‌ಟೇಬಲ್ ಪರಸಪ್ಪನ ಮಗ ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿಲ್ಲ ಮತ್ತೆ ಹೇಗೆ ಪರೀಕ್ಷೆ ಬರೆಯಲು ಸಾಧ್ಯ? ನಾನು ದಾಖಲೆ ಸಮೇತ ಸದನಕ್ಕೆ ಬಂದಿದ್ದೇನೆ. ಸಿಡಿ ಕೂಡ ತಂದಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗುಂಡಿ ಮುಚ್ಚಲು ಕಟ್ಟಡ ತ್ಯಾಜ್ಯ ಬಳಸಿದ ಪಾಲಿಕೆ – BBMP ಕಳಪೆ ಕಾಮಗಾರಿಗೆ ಜನರ ಛೀಮಾರಿ
ಪಿಎಸ್‍ಐ ಪ್ರಕರಣ ಸಂಬಂಧ ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ಅವರ ಆಡಿಯೋ ಈ ಹಿಂದೆ ವೈರಲ್ ಆಗಿತ್ತು. ಪಿಎಸ್‍ಐ ಮಾಡಿಸ್ತೀನಿ ಎಂದು 15 ಲಕ್ಷ ರೂಪಾಯಿ ಲಂಚ ಪಡೆದಿರುವ ಆರೋಪವನ್ನು ದಡೇಸೂಗೂರು ಎದುರಿಸುತ್ತಿದರು. ಪರಸಪ್ಪ ಎಂಬುವವರ ಮಗನ ನೇಮಕಾತಿಗೆ ಹಣ ಪಡೆದಿದ್ದನ್ನು, ಸರ್ಕಾರಕ್ಕೆ ಆ ಹಣ ತಲುಪಿಸಿದ್ದೇನೆ ಎಂಬುದನ್ನು ಶಾಸಕರು ಫೋನ್ ಸಂಭಾಷಣೆಯಲ್ಲಿ ಒಪ್ಪಿಕೊಂಡಿದ್ದ ಆಡಿಯೋ ವೈರಲ್ ಆಗಿತ್ತು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಪಿಎಸ್‍ಐ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಮೇಲೆ ಹೈಕೋರ್ಟ್ ಗರಂ ಆಗಿದೆ. ನೀವೇ ಸರಿಯಾಗಿ ಕೆಲಸ ಮಾಡ್ತಿರೋ? ಅಥ್ವಾ ಬೇರೆ ತನಿಖಾ ಸಂಸ್ಥೆಗೆ ಪ್ರಕರಣವನ್ನು ವಹಿಸಬೇಕಾ ಎಂದು ಖಡಕ್ಕಾಗಿ ಪ್ರಶ್ನಿಸಿದೆ.
ಇದು ಸಮಾಜಕ್ಕೆ ಒಂದು ರೀತಿಯಲ್ಲಿ ಭಯೋತ್ಪಾದನಾ ಕೃತ್ಯ. ಕೆಲವು ಕ್ರಿಮಿನಲ್ಸ್ ಕೂಡ ರ್‍ಯಾಂಕ್ ಪಡೆದು ಹುದ್ದೆ ಪಡೆಯುತ್ತಿದ್ದಾರೆ. ಪರೀಕ್ಷೆ ರದ್ದು ಮಾಡುವುದು ಮಾತ್ರ ಪರಿಹಾರ ಅಲ್ಲ. ಇದರಲ್ಲಿ ಯಾವುದೇ ಮಿನಿಸ್ಟರ್ ಇದ್ರೂ ಸರಿ, ಅಧಿಕಾರಿಗಳು ಇದ್ರೂ ಸರಿ ಕ್ರಮ ಆಗಬೇಕು. ನಮಗೆ ಡಿಜಿಪಿ ಸಂಧು ಅವರ ಮೇಲೆ ಗೌರವ ಇದೆ. ಅವರ ಮೇಲ್ವಿಚಾರಣೆಯಲ್ಲಿ ತನಿಖೆ ಆಗಲಿ. ನಿಮಗೆ ಸ್ವತಂತ್ರವಾದ ಅಧಿಕಾರವನ್ನು ಕೊಟ್ಟಿದ್ದೇವೆ ಎಂದು ಹೈಕೋರ್ಟ್ ತಿಳಿಸಿದೆ. ಇದನ್ನೂ ಓದಿ: ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಬ್ಯಾನ್ – ಮಾರಾಟ ಮಾಡಿದ್ರೆ ದುಬಾರಿ ದಂಡ
ಇದು ಕೇವಲ ಪಿಎಸ್‍ಐ ಪರೀಕ್ಷೆಯಲ್ಲಿ ಮಾತ್ರವಲ್ಲ, ಎಲ್ಲಾ ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತಿವೆ. ಈ ಪ್ರಕರಣ ಸಂಪೂರ್ಣ ವರದಿ ಕೊಡಬೇಕು ಎಂದು ಡಿಜಿ ಸಂಧು ಅವರಿಗೆ ಹೈಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜುಲೈ 7ಕ್ಕೆ ನಿಗದಿ ಮಾಡಿದ್ದು, ಈ ಸಂದರ್ಭದಲ್ಲಿ ತನಿಖಾ ಪ್ರಗತಿಯ ವರದಿ ಸಲ್ಲಿಸಲು ಹೆಚ್ಚು ಸಮಯ ನೀಡುವಂತೆ ಎಜಿ ಮಾಡಿದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಲಿಲ್ಲ. ತಪ್ಪಿತಸ್ಥರ ವಿರುದ್ಧ ಶೀಘ್ರ ತನಿಖೆ ನಡೆಸಲು ಸೂಚಿಸಿದೆ.
ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮದ ಕಿಂಗ್‍ಪಿನ್ ಆರ್.ಡಿ. ಪಾಟೀಲ್, ದಿವ್ಯಾ ಹಾಗರಗಿ ಸೇರಿ ನಾಲ್ವರಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಲು ಮತ್ತೆ ನಿರಾಕರಿಸಿದೆ. ಇದರೊಂದಿಗೆ ನಾಲ್ವರಿಗೂ ಜೈಲೇ ಗತಿಯಾಗಿದೆ.
ಕಲಬುರಗಿ ಜಿಲ್ಲಾ 3ನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ನ್ಯಾಯಾಲಯ ತೀರಸ್ಕರಿಸಿದೆ. ಬ್ಲೂಟೂತ್ ಡಿವೈಸ್ ಮೂಲಕ ಅಕ್ರಮದ ಮೂಲಕ ಅಭ್ಯರ್ಥಿಗಳು ತೇರ್ಗಡೆ ಆಗಲು ಸಹಕರಿಸುತ್ತಿದ್ದ ಆರೋಪಿ ಆರ್.ಡಿ ಪಾಟೀಲ್, ಎನ್.ವಿ. ಸುನೀಲ್, ತಮ್ಮ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಅಕ್ರಮ ನಡೆಸಲು ಸಹಕರಿಸಿದ ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಮತ್ತು ಇದೆ ಶಾಲೆಯ ಮುಖ್ಯಶಿಕ್ಷಕ ಕಾಶಿನಾಥ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?
ಜಾಮೀನು ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಧೀಶ ಬಸವರಾಜ ನೇಸರಗಿ ಅವರ ನೇತೃತ್ವದ ಪೀಠ ತೀರಸ್ಕರಿಸಿದೆ. ಈ ಹಿಂದೆಯೂ ಆರೋಪಿಗಳು ಜಾಮೀನಿಗಾಗಿ ಸಲ್ಲಿಸಿದ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಆರೋಪಿಗಳಿಗೆ ಜಾಮೀನು ನೀಡದಂತೆ ಸಿಐಡಿ ತಕರಾರು ಅರ್ಜಿ ಈ ಹಿಂದೆ ಸಲ್ಲಿಸಿತ್ತು. ಇದನ್ನೂ ಓದಿ: ಬಾಂಗ್ಲಾ ಯುವತಿಯ ಮೇಲೆ ಬೆಂಗ್ಳೂರಿನಲ್ಲಿ ಗ್ಯಾಂಗ್ ರೇಪ್ – 7 ಮಂದಿಗೆ ಜೀವಾವಧಿ ಶಿಕ್ಷೆ
ಕಲಬುರಗಿ: ಕಾನ್ಸ್‌ಟೇಬಲ್ ನೇಮಕಾತಿಯಲ್ಲೂ ಅಕ್ರಮ ನಡೆದಿದೆ. ಅಲ್ಲದೇ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ಅಕ್ರಮವೆಸಗಿದವರೇ ಪಿಎಸ್‍ಐ ಅಕ್ರಮದಲ್ಲೂ ಭಾಗಿಯಾಗಿದ್ದಾರೆ. ಇನ್ನೂ ಪ್ರಕರಣದಲ್ಲಿ ಬಂಧಿಸಲಾದ ದಿವ್ಯಾ ಹಾಗರಗಿ ಮತ್ತು ಆರ್.ಡಿ ಪಾಟೀಲ್ ಕಿಂಗ್‍ಪಿನ್ ಎಂದು ಹೇಳ್ತಿದ್ದಾರೆ. ಆದರೆ, ಪ್ರಮುಖ ಕಿಂಗ್‍ಪಿನ್‍ಗಳು ಬೇರೆ. ಅವರು ಬೆಂಗಳೂರಿನಲ್ಲೇ ಇದ್ದು ಅವರನ್ನು ಹೊರತರಬೇಕು ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಎಸ್‍ಐ ಅಕ್ರಮ ನೇಮಕ ಪ್ರಕರಣದಲ್ಲಿ ಗೃಹ ಸಚಿವರು ಯಾರನ್ನು ಸೇಫ್ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಆದರೆ, ಪ್ರಕರಣದಲ್ಲಿ ಗೃಹ ಸಚಿವರೇ ಬಲಿಪಶು ಆಗುವುದಂತೂ ಪಕ್ಕಾ. ಇದರಿಂದ ಅವರ ಕೆರಿಯರ್ ಹಾಳಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಕುರಿತು ಸರ್ಕಾರಕ್ಕೆ ಪ್ರೆಶ್ನೆಗಳ ಸುರಿಮಳೆಗೈದು ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವರು ನನಗೆ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಡವೆಂದಿದ್ದರು. ಆದರೆ ಇದೀಗ ಪಕ್ಷದ ಶಾಸಕ ಯತ್ನಾಳ್ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಪರೀಕ್ಷೆ ಬರೆದ 57 ಸಾವಿರ ಅಭ್ಯರ್ಥಿಗಳು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅವರಿಗೆ ಸ್ವಾಭಿಮಾನ ಇದ್ದಿದ್ದರೆ ರಾಜೀನಾಮೆ ಕೊಟ್ಟು ಕುರ್ಚಿ ಬಿಟ್ಟು ಹೋಗಬೇಕಿತ್ತು. ಅಧಿಕಾರದ ಮೋಹದಿಂದ ಅಥವಾ ಯಾರನ್ನೋ ರಕ್ಷಿಸಲು ಅವರು ಹೀಗೆ ಮಾಡುತ್ತಿದ್ದಾರೋ ಏನೋ ಗೊತ್ತಿಲ್ಲ. ಆದರೆ, ಇದರಿಂದ ಅವರ ಭವಿಷ್ಯ ಹಾಳಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲೇ ವಕೀಲೆ, ಆಕೆಯ ಪತಿ ಮೇಲೆ ಮಾರಣಾಂತಿಕ ಹಲ್ಲೆ
ಬಂಧಿತರ ನಿಖರ ಲಿಸ್ಟ್ ಎಲ್ಲಿದೆ?:
ಈವರೆಗೂ ಬಂಧಿತರಾದವರ ನಿಖರ ಲಿಸ್ಟ್ ಅನ್ನು ಸರ್ಕಾರ ಕೊಟ್ಟಿಲ್ಲ. ಬಂಧನವಾಗಿರುವ ಆರೋಪಿಗಳ ವಿವರವನ್ನು ಸರ್ಕಾರ ಯಾಕೆ ನೀಡುತ್ತಿಲ್ಲ. ಈವರೆಗೆ ತಲೆಮರೆಸಿಕೊಂಡಿರುವವರು ಎಷ್ಟು ಜನ? ಸರ್ಕಾರವನ್ನು ರಕ್ಷಣೆ ಮಾಡಲು ಮಾತ್ರವಷ್ಟೇ ತನಿಖೆ ನಡೆಸಲಾಗುತ್ತಿದೆ. ಒಟ್ಟು ಎಷ್ಟು ಜನರಿಗೆ ನೋಟಿಸ್ ನೀಡಿದ್ದೀರಿ ಎಷ್ಟು ಜನರಿಗೆ ವಿಚಾರಣೆ ನಡೆಸಿದ್ದೀರಿ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಬೆಳಗಿನ ಜಾವ ಮೈಕ್ ಮೂಲಕ ಆಜಾನ್ ಕೂಗದಿರಲು ಮುಸ್ಲಿಂ ಧರ್ಮ ಗುರುಗಳು ನಿರ್ಧಾರ
ಅಧಿಕೃತ ವರದಿ ಏನಾಗಿದೆ?:
ಐದು ಅಭ್ಯರ್ಥಿಗಳು ಪಿಎಸ್‍ಐ ಅಕ್ರಮದ ಬಗ್ಗೆ ದೂರು ಸಲ್ಲಿಸಿರುತ್ತಾರೆ ಎಂದು ಗೃಹ ಸಚಿವರೇ ಹೇಳಿದ್ದಾರೆ. ದೂರುಗಳು ಬಂದಿವೆ. ಆದರೆ, ಇದನ್ನು ನಾವು ಮೇಲಧಿಕಾರಿಯ ಪರಿಶೀಲನೆಗೆ ನೀಡಿದ್ದೇನೆ ಎಂದಿದ್ದಾರೆ. ಅರ್ಹತೆ ಪ್ರಕಾರ ಅಂಕ ನೀಡಲಾಗಿದೆ ಎಂದು ಹೇಳಿದ್ದಾರೆ. ಗೃಹ ಸಚಿವರು ಅಕ್ರಮ ನಡೆದಿಲ್ಲ ಎಂದು ಹೇಳಿದ್ದಾರೆ. ಈಗ ತನಿಖೆಯಲ್ಲಿ ಲೋಪ ಕಂಡು ಬಂದಿದೆ. ತನಿಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. 12 ಜನರನ್ನು ಸಸ್ಪೆಂಡ್ ಸಹ ಮಾಡಲಾಗಿದೆ. ತನಿಖೆ ನಡೆಸಿದ ಹಿರಿಯ ಅಧಿಕಾರಿಗಳು ಯಾರು? ತನಿಖೆ ನಡೆದಿದ್ದು ಹೇಗೆ? ಆ ವರದಿ ಎಲ್ಲಿದೆ? ಗೃಹ ಸಚಿವರು ಸದನದಲ್ಲಿ ಉತ್ತರ ಕೊಟ್ಟ ಮೇಲೆ ಆಫಿಷಿಯಲ್ ವರದಿ ಏನಾಗಿದೆ? ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಹಿಂದುಳಿದ ವರ್ಗಗಳಿಗೆ ಮೀಸಲಾತಿ ತಪ್ಪಲು ಕಾಂಗ್ರೆಸ್ಸೇ ಕಾರಣ: ಸಿ.ಟಿ.ರವಿ
ಬೆಳಗಾವಿ: ರಾಜ್ಯದಲ್ಲಿ ಬೇಲಿನೇ ಎದ್ದು ಹೊಲ ಮೇಯಲು ಶುರು ಮಾಡಿಕೊಂಡಿದೆ. ಪೊಲೀಸರೇ ಕಳ್ಳರು, ಇನ್ನು ಕಳ್ಳತನ ಹೇಗೆ ತಪ್ಪಿಸುತ್ತಾರೆ ಎಂದು ಬೆಳಗಾವಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪಿಎಸ್‍ಐ ಹಗರಣದ ಕುರಿತಾಗಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಸ್‍ಐ ಹಗರಣದಲ್ಲಿ ಇಬ್ಬರು ಡಿವೈಎಸ್‍ಪಿ, ಒಬ್ರೂ ಇನ್ಸ್‌ಪೆಕ್ಟರ್ ಅರೆಸ್ಟ್ ಆಗಿದ್ದಾರೆ. ಎಡಿಜಿಪಿ ಅಮೃತ್ ಪೌಲ್, ಡಿವೈಎಸ್‍ಪಿ ಶಾಂತಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದಾರೆ. ಬೇಲಿನೇ ಎದ್ದು ಹೊಲ ಮೇಯಲು ಶುರುಮಾಡಿಕೊಂಡಿದೆ. ಇವರೇ ಕಳ್ಳರು, ಇನ್ನು ಕಳ್ಳತನ ಹೇಗೆ ತಪ್ಪಿಸುತ್ತಾರೆ ಎಂದು ಪೊಲೀಸರ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಂ ಪೋಸ್ಟ್‌ಗಾಗಿ 2,500 ಕೋಟಿ ರೂ. ಬೇಡಿಕೆ ವಿಚಾರ- ತನಿಖೆಗೆ ಡಿಕೆಶಿ ಒತ್ತಾಯ
ಪಿಎಸ್‍ಐ ಹಗರಣದ ಕುರಿತು ಮಾತನಾಡಿದರೆ ನೋಟಿಸ್ ನೀಡ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಹಿತಿ ಕೊಟ್ಟರೆ ನೋಟಿಸ್ ಕೊಡುವುದು ಕಾನೂನು ಬಾಹಿರ ನಾನು ವಕೀಲರಾಗಿದ್ದವರು ಕಾನೂನು ಆ ರೀತಿ ಹೇಳೋದಿಲ್ಲ. ತನಿಖೆಯನ್ನು ಪೊಲೀಸರೇ ಮಾಡಲಿ ಆದ್ರೇ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಯಬೇಕು. ಪೊಲೀಸ್ ಅಧಿಕಾರಿಗಳು ಅರೆಸ್ಟ್ ಆಗಿದ್ದಾರೆ. ರಾಜಕಾರಣಿಗಳು ಭಾಗಿಯಾಗಿದ್ದಾರೆ. ರಾಜಕಾರಣಿಗಳ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಈ ಕಾರಣಕ್ಕೆ ಸಿಐಡಿ ಮೇಲೆ ಪ್ರಭಾವ ಬೀರುತ್ತಾರೆ. ಅಶ್ವಥ್ ನಾರಾಯಣ ಸಂಬಂಧಿಕ ಒಬ್ಬ ಸೆಲೆಕ್ಟ್ ಆಗಿದ್ದನು. ಪೊಲೀಸರು ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿದ್ರೂ. ಅವನನ್ನು ನಂತರ ಬಿಟ್ಟು ಬಿಟ್ರಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಜೊತೆ ದಿವ್ಯಾ ಹಾಗರಗಿ ಫೋಟೋ ತೆಗೆಸಿಕೊಂಡ ರಹಸ್ಯ ಬಯಲು
ಅಶ್ವಥ್ ನಾರಾಯಣ ಆರೋಪಿಯನ್ನು ಬಿಡುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ನನ್ನ ಪ್ರಕಾರ ಈ ಹಗರಣದಲ್ಲಿ ಸರ್ಕಾರದ ಇನ್ವಾಲ್ಮೆಂಟ್, ಸಚಿವರ ಇನ್ವಾಲ್ಮೆಂಟ್ ಇಲ್ಲದೇ ಈ ರೀತಿ ಕೃತ್ಯ ನಡೆಯಲು ಸಾಧ್ಯವಿಲ್ಲ. ಪೊಲೀಸರು ರಾಜಕಾರಣಿಗಳ ಜೊತೆಗೆ ಬಾಂಧ್ಯವ ಇಟ್ಟುಕೊಂಡೇ ಮಾಡಿದ್ದಾರೆ. ಹೀಗಾಗಿ ಪಿಎಸ್‍ಐ ಹಗರಣ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಟೂಲ್ ಕಿಟ್ ನಡೆಯುತ್ತಿದೆ. ಅದು ಕೆಪಿಸಿಸಿ ಅಲ್ಲ. ಕೆಪಿಟಿಸಿ ಆಗಿ ಮಾರ್ಪಾಡಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಬದಲಾಗಿ ಕರ್ನಾಟಕ ಪ್ರದೇಶ ಟೂಲ್ ಕಿಟ್ ಕಮಿಟಿ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಅಧ್ಯಕ್ಷರಾದ ಮೇಲೆ, ಕೆಪಿಸಿಸಿ ಹೋಗಿ ಕೆಪಿಟಿಸಿ ಆಗಿದೆ. ಕರ್ನಾಟಕ ಪ್ರದೇಶ್ ಟೂಲ್ ಕಿಟ್ ಕಮಿಟಿ ಆಗಿದೆ. ಈಗ ಗೊತ್ತಾಗುತ್ತಿದೆ. 2014ರಿಂದ ಮಾಡ್ತಿದ್ದಾರೆ. ಆಗ ಬಿಜೆಪಿ ಸರ್ಕಾರ ಇರಲಿಲ್ಲ. ಇದೀಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ ಹಾಗಾಗಿ ಪಿಎಸ್‍ಐ ಹಗರಣದ ವಿಚಾರಣೆ ಮಾಡಲು ಸಿಐಡಿ ತನಿಖೆಗೆ ನೀಡಲಾಗಿದೆ. ಕಾಂಗ್ರೆಸ್‍ನವರಿಗೆ ಸಿಐಡಿ ತನಿಖೆ ನಂಬಿಕೆ ಇಲ್ಲದಿದ್ರೆ, ಹೈಕೋರ್ಟಿಗೆ ಹೋಗಿ ನಮ್ಮ ಬಳಿ ಈ ರೀತಿಯ ಸಾಕ್ಷಿ ಇದೆ ಅಂತ ದಾಖಲೆ ಕೊಡಲಿ ಹೈಕೋರ್ಟ್ ಮೂಲಕವೇ ತನಿಖೆ ಮಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಜೊತೆ ದಿವ್ಯಾ ಹಾಗರಗಿ ಫೋಟೋ ತೆಗೆಸಿಕೊಂಡ ರಹಸ್ಯ ಬಯಲು
ಕಾಗಕ್ಕ, ಗೂಬಕ್ಕ ಕಥೆ ಹೇಳೋದು ಬೇಡ. ಯಾರ ಬಳಿ ಸಾಕ್ಷಿ ಇದೆ ಕೊಡಲಿ. ಸುಮ್ಮನೆ ಮಾತನಾಡೋದು ಬೇಡ. ತನಿಖಾ ಸಂಸ್ಥೆ ಮೇಲೆ ನಂಬಿಕೆ ಇಲ್ಲದಿದ್ರೆ, ದಾಖಲೆ ಹೈಕೋರ್ಟ್‍ಗೆ ಕೊಡಲಿ. ಗಾಳಿಯಲ್ಲಿ ಗುಂಡು ಹಾರಿಸೋದು ಬೇಡ. ಸಿದ್ದರಾಮಯ್ಯ ಅವರೇ ಕಿಂಗ್ ಪಿನ್ ಅಂತ ನಾನು ಹೇಳಲಾ? ನಾನು ಆ ರೀತಿ ಹೇಳಲ್ಲ, ತನಿಖೆ ನಡೆಯುತ್ತಿದೆ. ವಿಚಾರಣೆಗೆ ಹೋಗೋದು ಅಪಮಾನದ ಸಂಗತೀನಾ ಎಂದು ಪ್ರಶ್ನಸಿದರು. ಇದನ್ನೂ ಓದಿ: ಬಿಜೆಪಿಯವರು ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡ್ತಿದ್ದಾರೆ: ಪ್ರಿಯಾಂಕ್ ಖರ್ಗೆ
ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನಾ ಅಧಿಕಾರ. ಪಕ್ಷದ ಜೊತೆ ಸಮಾಲೋಚನೆ ಮಾಡಿ ಅಭಿಪ್ರಾಯ ಪಡೆದು ಸ್ವಯಂ ನಿರ್ಣಯ ಮಾಡಬೇಕು. ಒಂದೇ ವಿಚಾರ ಹೇಳೋದಾದ್ರೆ ಎಲ್ಲರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಸ್ವತಂತ್ರವಾಗಿ ನಿರ್ಣಯ ಮಾಡಬೇಕು. ಇನ್ನು ಎಂಟು, ಒಂಭತ್ತು ತಿಂಗಳು ಸಿಗಲಿದೆ. ಕೆಲಸ ಮಾಡಬೇಕು ಅಷ್ಟೇ ಮುಖ್ಯಮಂತ್ರಿ ಬದಲಾವಣೆ ವಿಚಾರ ಊಹಾ ಪೂಹಕ್ಕೆ ಬೆಲೆ ಕೊಡುವ ಅವಶ್ಯಕತೆ ಇಲ್ಲ. ಮೊನ್ನೆ ಇಲ್ಲೇ ಶಾ ಬಂದಾಗ ರಾಜಕಾರಣ ಜೊತೆ ರಾಜ್ಯದ ಅಭಿವೃದ್ಧಿ, ದೇಶದ ಹಿತದೃಷ್ಟಿಯಿಂದ ಸಮಾಲೋಚನೆ ಮಾಡೋದು ಸ್ವಾಭಾವಿಕ ಎಂದರು.
ನಮ್ಮ ಪಕ್ಷ ಹತ್ತಾರು ಆಲೋಚನೆ ಮಾಡಿ ನಿರ್ಣಯ ತಗೋತಾರೆ. ಯತ್ನಾಳ್ ಅವರು ಚರ್ಚೆ ಮಾಡಿದ್ದಾರೆ, ಸಿಎಂ ಆಯ್ಕೆ ವೇಳೆ ಅನೇಕರು ಇದ್ದರು, ಎಲ್ಲಾ ಶಾಸಕರು ಉಪಸ್ಥಿತಿ ಇದ್ದರು ಯಾರನ್ನೂ ಮರೆಮಾಚಿ ಸಿಎಂ ಆಯ್ಕೆ ಮಾಡಿಲ್ಲ. ಕೆಲವರು ಸಂತೆ ಮಾತನಾಡ್ತಾರೆ. ಬೇರೆ ಪಕ್ಷದವರ ದಾರಿ ತಪ್ಪಿಸಲು ಈ ರೀತಿ ಹೇಳಿರಬಹುದು. ಯತ್ನಾಳ್ ಹೇಳಿರೋದು ತಪ್ಪು ಈ ಬಗ್ಗೆ ಅವರೇ ಸ್ಪಷ್ಟೀಕರಣ ನೀಡಬೇಕು. ವಿಪಕ್ಷಗಳಿಗೆ ಈ ಹೇಳಿಕೆಗಳು ಆಹಾರವಾಗಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಅಂದು ಕಿತ್ತಾಡಿಕೊಂಡಿದ್ದ ಸಾರಾ ಮಹೇಶ್, ಎಚ್. ವಿಶ್ವನಾಥ್ ಇಂದು ದೋಸ್ತಿಗಳು
ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಆಗ್ತಿದೆ. ಇಂದು ಮಂಡ್ಯ ಮತ್ತು ಕೋಲಾರ ಜಿಲ್ಲೆಯಿಂದ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಂಡ್ಯ ಗೆಲ್ಲದೆ ನಮ್ಮ ಗೆಲುವು ಪರಿಪೂರ್ಣ ಆಗದು. ಬಹಳ ಜನ ಬರ್ತಾರೆ ಕಾದು ನೋಡಿ. ನಮ್ಮ ಮಿಷನ್ 150ಗೆ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದೇವೆ. ಮುಂದಿನ ದಿನಗಳಲ್ಲಿ ಮಂಡ್ಯವನ್ನ ಬಿಜೆಪಿ ಭದ್ರಕೋಟೆ ಮಾಡಿಕೊಳ್ಳಲಿದ್ದೇವೆ ಎಂದರು.
ಡಿ.ಕೆ ಶಿವಕುಮಾರ್ ಮನೆಗೆ ಬಂದು ಹಾಗರಗಿ ಫೋಟೋ ಕೂಡ ತೆಗಿಸಿಕೊಂಡಿದ್ಲು ಈ ಬಗ್ಗೆ ಪ್ರಶ್ನಿಸಿದಾಗ ಡಿ.ಕೆ ಶಿವಕುಮಾರ್, ಮನೆಗೆ ಬಂದವರು ಫೋಟೋ ತೆಗಿಸಿಕೊಳ್ತಾರೆ ಅದ್ರಲ್ಲಿ ಏನಿದೆ ಎಂದಿದ್ದರು. ಅದು ನಿಜ, ದಿವ್ಯಾ ಹಾಗರಗಿ ಪದೇ ಪದೇ ಡಿ.ಕೆ ಶಿವಕುಮಾರ್ ಮನೆಗೆ ಬರ್ತಾ ಇದ್ದಳು. ತನ್ನ ಕಾರ್ಯ ಸಿದ್ಧಿಗಾಗಿ, ಒಮ್ಮೆ ಮಾತ್ರ ಬಂದಿದಲ್ಲ ಸಾಕಷ್ಟು ಬಾರಿ ಬಂದಿದ್ದಾಳೆ. ಅದು ತನ್ನ ಕಾಲೇಜ್ ತೆರೆಯಲು ಪರವಾನಿಗೆ ಪಡೆಯೋದಕ್ಕಾಗಿ ಎಂಬ ಸತ್ಯ ಇದೀಗ ಬಯಲಾಗಿದೆ. ಇದನ್ನೂ ಓದಿ: ಪಿಎಸ್‌ಐ ಸಮವಸ್ತ್ರ ಧರಿಸಿ ಬಿಲ್ಡಪ್ – ಬೆಂಗಳೂರಿನ ಕಾನ್‌ಸ್ಟೇಬಲ್ ಅಮಾನತು
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಡಿ.ಕೆ ಶಿವಕುಮಾರ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಈ ವೇಳೆ ಡಿ.ಕೆ ಶಿವಕುಮಾರ್ ಅವರೇ ದಿವ್ಯಾ ಹಾಗರಗಿ ನರ್ಸಿಂಗ್ ಕಾಲೇಜ್‍ಗೆ ಪರವಾಗಿನಿಗೆ ನೀಡಿದ್ದರು. ಈ ಪರವಾನಿಗೆ ಪಡೆಯಲು ದಿವ್ಯಾ ಹಾಗರಗಿ, ಡಿ.ಕೆ ಶಿವಕುಮಾರ್ ಮನೆಗೆ ಬಂದಿದ್ದಳು.
ಡಿಕೆಶಿ ಮಾತ್ರವಲ್ಲ ಉಳಿದ ರಾಜಕೀಯ ಮುಖಂಡರ ಜೊತೆ ಕೂಡ ತೆಗೆಸಿ ಕೊಂಡ ಫೋಟೋ ಹಿಂದಿನ ಸತ್ಯ ಮಾತ್ರ ಗೊತ್ತಾಗುತ್ತಿರಲಿಲ್ಲ. ದಿವ್ಯಾ ಹಾಗರಗಿ ಸುಖಾ ಸುಮ್ಮನೆ ಫೋಟೋ ತೆಗಿಸಿಕೊಳ್ತಾ ಇರಲಿಲ್ಲ. ತನ್ನ ಕಾರ್ಯ ಸಿದ್ಧಿಗಾಗಿಯೇ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಳು. ಆ ಮಾಸ್ಟರ್ ಪ್ಲಾನ್‍ಗಳು ಕೂಡ ಹಾಗೇ ಸಕ್ಸಸ್ ಕೂಡ ಆಗುತ್ತಿತ್ತು ಎಂಬ ಸ್ಫೋಟಕ ಸತ್ಯ ಬಯಲಾಗಿದೆ.
ಚಿಕ್ಕಮಗಳೂರು: ಪಿಎಸ್‌ಐ ಪರೀಕ್ಷೆ ಪ್ರಾಮಾಣಿಕವಾಗಿ ಬರೆದವರು ಮತ್ತು ಪರೀಕ್ಷೆಯ ಅಕ್ರಮದಲ್ಲಿ ಪಾಲ್ಗೊಂಡವರ ಪಟ್ಟಿಯನ್ನು ಪ್ರತ್ಯೇಕಿಸಿ ಪ್ರಾಮಾಣಿಕರಿಗೆ ಕೆಲಸ ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಜಿಲ್ಲೆಯ ಕಡೂರಿನ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಸರ್ಕಾರ ತಲೆಗೆಲ್ಲಾ ಒಂದೇ ಮಂತ್ರ ಎಂಬಂತೆ ನಡೆದುಕೊಳ್ಳಬಾರದು. ಸರ್ಕಾರ ಆಯ್ಕೆ ಪಟ್ಟಿಯನ್ನೇ ರದ್ದುಪಡಿಸುವುದಕ್ಕಿಂತ ಬೇರೆ ಮಾರ್ಗ ಯೋಚಿಸಲಿ, ಸರ್ಕಾರಕ್ಕೆ ಅದ್ಯಾವುದು ದೊಡ್ಡ ಕೆಲಸವಲ್ಲ. ಪ್ರಮಾಣಿಕವಾಗಿ ಓದಿ, ಪರೀಕ್ಷೆ ಬರೆದವರಿಗೆ ಮೋಸ ಆಗಬಾರದು. ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಪ್ರಾಮಾಣಿಕರು ಹಾಗೂ ಅಕ್ರಮವೆಸಗಿದವರನ್ನು ಪ್ರತ್ಯೇಕ ಮಾಡಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ‘ಆರ್‌ಎಸ್‌ಎಸ್’ ದೇಶದ ಶ್ರೀಮಂತ ಎನ್‍ಜಿಓ, ಅದಕ್ಕೆ ಹಣ ಎಲ್ಲಿಂದ ಬರುತ್ತೆ?: ಬಿ.ಕೆ ಹರಿಪ್ರಸಾದ್
ವೈಎಸ್‍ವಿ ದತ್ತಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆಂಬ ಸುದ್ದಿಗೆ ಪ್ರತಿಕ್ರಿಯಿಸಿ, ಎಲ್ಲದಕ್ಕೂ ಕಾಲ ಬರಬೇಕು. ನಾನು ಜೆಡಿಎಸ್‍ನಲ್ಲೇ ಇರುತ್ತೇನೆ ಎಂದು ಹೇಳಲು, ಜೆಡಿಎಸ್ ಬಿಡುತ್ತೇನೆ ಎಂದು ಹೇಳಲು ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಆ ಕಾಲ ಬಂದಾಗ ನಿಮಗೆ ಖಂಡಿತ ನನ್ನ ನಿರ್ಧಾರ ಹೇಳುತ್ತೇನೆ ಎಂದರು. ಇದನ್ನೂ ಓದಿ: ಉಕ್ರೇನ್ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್- ಡಾಕ್ಟರ್ ಆಗುವ ಕನಸಿಗೆ ನೀರೆರದ ಸಿದ್ದಗಂಗಾ