Tag: PSI recruitment illegal

  • ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

    ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

    ಕಲಬುರಗಿ: ಸಿಐಡಿ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆ ಇಂದು ಪಿಎಸ್‍ಐ ಪರೀಕ್ಷೆ ಅಕ್ರಮದ ಕಿಂಗ್‍ಪಿನ್ ಆರ್.ಡಿ.ಪಾಟೀಲ್‍ನನ್ನು ಕೇಂದ್ರ ಕಾರಾಗೃಹ ಸುಪರ್ದಿಗೆ ಒಪ್ಪಿಸಲಾಗಿದೆ. ಜೈಲಿಗೆ ಹೋಗುವ ಮುನ್ನ ಮಾಧ್ಯಮಕ್ಕೆ ಕೈಮುಗಿದು ನಾನು ಒಳ್ಳೆಯದನ್ನೂ ಮಾಡಿದ್ದೀನಿ. ಅದನ್ನೂ ಒಂದಿಷ್ಟು ತೋರಿಸಿ ಅಂತ ಕೇಳಿಕೊಂಡು ಜೈಲಿಗೆ ಹೋಗಿದ್ದಾನೆ.

    ಚೌಕ್ ಠಾಣೆಯಲ್ಲಿ ದಾಖಲಾದ ಎಫ್‍ಐಆರ್ ಸಂಬಂಧಿಸಿದಂತೆ ಆರ್.ಡಿ.ಪಾಟೀಲ್‍ನನ್ನು ಸಿಐಡಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಸಿಐಡಿ ಕಸ್ಟಡಿ ಕಾಲಾವಕಾಶ ಅಂತ್ಯವಾದ ಹಿನ್ನಲೆ ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಜೈಲಿಗೆ ಕಳುಹಿಸಲಾಗಿದೆ. ನಂತರ ಸ್ಟೇಷನ್ ಬಜಾರ್  ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‍ಐಆರ್ ಸಂಬಂಧ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

    ಎಂ.ಎಸ್. ಇರಾನಿ ಕಾಲೇಜ್‍ನಲ್ಲಿ ನಡೆದ ಅಕ್ರಮ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಆರ್.ಡಿ. ಪಾಟೀಲ್, ಚಂದ್ರಕಾಂತ್ ಕುಲಕರ್ಣಿ, ಪ್ರಭು, ಶರಣಪ್ಪ ವಿರುದ್ದ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಹುತಾತ್ಮ ಯೋಧ ಹರ್ದೀಪ್ ಸಿಂಗ್ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಭಗವಂತ್ ಮಾನ್

    ಇನ್ನು ಆರ್.ಡಿ. ಪಾಟೀಲ್‍ನನ್ನು ಜೈಲಿಗೆ ಕರೆದೊಯ್ಯುವಾಗ ಮತ್ತೆ ಕುಚೇಷ್ಟೆ ಮಾಡಿದ್ದಾನೆ. ಈ ಹಿಂದೆ ಕೊಡಿ, ಕೊಡಿ ಫ್ರೀ ಪ್ರಚಾರ ಕೊಡಿ ಅಂತ ಮಾಧ್ಯಮದ ಕ್ಯಾಮೆರಾಗಳತ್ತ ಬೊಟ್ಟು ಮಾಡಿ ಕಿಚಾಯಿಸಿ ದರ್ಪ ಮೆರೆದಿದ್ದ, ಬಳಿಕ ಕೆಲ ದಿನಗಳ ನಂತರ ದರ್ಪ ಇಳಿದು ಸಾಕು ನನ್ನನ್ನು ಬಿಡ್ರಣ್ಣಾ ಅಂತ ಮಾಧ್ಯಮದ ಮುಂದೆ ಕೋರಿದ್ದ, ಇದೀಗ ಜೈಲಿಗೆ ಕರೆದೊಯ್ಯುವಾಗ ನಾನು ಒಳ್ಳೆಯದನ್ನೂ ಮಾಡಿದ್ದಿನಿ ಅದನ್ನು ಒಂದಿಷ್ಟು ತೋರಿಸಿ ಎಂದು ಮಾಧ್ಯಮದ ಕ್ಯಾಮೆರಾಗಳಿಗೆ ಕೈ ಮುಗಿದ ಕೇಳಿಕೊಂಡು ಗಮನ ಸೆಳೆದಿದ್ದಾನೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಗೂಂಡಾಗಳಿಂದ 15 ಬಾರಿ ಫೈರಿಂಗ್ – ಇಬ್ಬರಿಗೆ ಗಾಯ

  • ಬಿಜೆಪಿಯವರು ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡ್ತಿದ್ದಾರೆ: ಪ್ರಿಯಾಂಕ್ ಖರ್ಗೆ

    ಬಿಜೆಪಿಯವರು ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡ್ತಿದ್ದಾರೆ: ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಬಿಜೆಪಿಯವರು ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ಕಿಡಿಕಾರಿದ್ದಾರೆ.

    ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ನೋಟಿಸ್‍ಗೆ ಪ್ರಿಯಾಂಕ್ ಖರ್ಗೆ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಆರು ಪುಟಗಳ ಸುದೀರ್ಘ ಉತ್ತರ ನೀಡಿರುವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ಸಂಜೆ ತಮ್ಮ ಆಪ್ತ ಸಹಾಯಕನ ಮೂಲಕ ಕಳುಹಿಸಿದ್ದಾರೆ. ಜವಾಬ್ದಾರಿಯುತ ನಾಗರಿಕ ಹಾಗೂ ಶಾಸಕ, ಅಲ್ಲದೇ ವಿಧಾನ ಸಭೆ ವಿರೋಧ ಪಕ್ಷದ ಹಿರಿಯ ನಾಯಕನಾಗಿ ತನಿಖೆಗೆ ಸಹಕಾರ ನೀಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಂದು ಕಿತ್ತಾಡಿಕೊಂಡಿದ್ದ ಸಾರಾ ಮಹೇಶ್, ಎಚ್. ವಿಶ್ವನಾಥ್ ಇಂದು ದೋಸ್ತಿಗಳು

    KARNATAKA PSI EXAM

    ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ನನ್ನ ಬಾಯಿ ಮುಚ್ಚಿಸಲು ಇದೇ ರೀತಿ ನೋಟಿಸ್ ನೀಡುತ್ತಿದ್ದರೆ ನೀವು ಬಹಳ ತಪ್ಪು ಮಾಡುತ್ತಿದ್ದೀರಾ ಅನ್ನೋದನ್ನು ಅರ್ಥಮಾಡಿಕೊಳ್ಳಿ. ನಿಮಗಿಂತಲೂ ಹೆಚ್ಚು ಕಾನೂನು ಜ್ಞಾನ ನನಗೂ ಇದೆ. ಈ ನೋಟಿಸ್‍ಗಳ ವಿರುದ್ಧ ನಾನೂ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಹಕ್ಕು ಚ್ಯುತಿ ಮಂಡನೆ, ವಿಜ್ಹಲ್‍ಬ್ಲೊಯರ್ಸ್ ಪ್ರೊಟೆಕ್ಷನ್ ಆ್ಯಕ್ಟ್ ಸೇರಿದಂತೆ ನನಗಿರುವ ಕಾನೂನು ಆಯ್ಕೆಗಳನ್ನೂ ಬಳಸಬೇಕಾಗುತ್ತದೆ ಎಂದು ಸಿಐಡಿಗೆ ಎಚ್ಚರಿಕೆ ನೀಡಿದ್ದರು.

    ಇದೀಗ ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೋಟಿಸ್ ಕೊಟ್ಟಿರುವುದು ರಾಜಕೀಯ ಪ್ರೇರಿತ. ಅಕ್ರಮ ನಡೆಸಿದ ಅಭ್ಯರ್ಥಿಗೆ ಎರಡು ಬಾರಿ ನೋಟೀಸ್ ಕೊಡುತ್ತಾರೆ. ನನಗೆ ಮೂರು ಬಾರಿ ನೋಟಿಸ್ ಕೊಡುತ್ತಾರೆ. ಪಿಎಸ್‍ಐ ಅಕ್ರಮ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಯುತ್ತಿಲ್ಲ. ಹೀಗಾಗಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ. ನಾನು ಸಿಐಡಿ ನೊಟೀಸ್‍ಗೆ ಉತ್ತರ ಕೊಟ್ಟಿದ್ದೇನೆ. ಗೃಹ ಸಚಿವರಿಗೆ ಸೆಕ್ಷನ್ 91 ಏನ್ ಹೇಳುತ್ತದೆ ಅಂತ ತಿಳಿದುಕೊಳ್ಳುವುಕ್ಕೆ ಹೇಳಿದ್ದೇನೆ. ಗೃಹ ಸಚಿವರಿಗೆ ಲೀಗಲ್ ಆಗಿ ಯಾರಾದರೂ ಬೇಕಾದರೆ ಹೇಳಲಿ ನಾನು ವಕೀಲರನ್ನು ಕಳಿಸುತ್ತೇನೆ. ಎಲ್ಲಾ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಆಣೆ ಪ್ರಮಾಣವಾದ 1 ವರ್ಷಕ್ಕೆ ನ್ಯಾಯದೇವತೆಯಿಂದ ವಿಶ್ವನಾಥ್‌ಗೆ ಶಿಕ್ಷೆ – ಸಾರಾ ಮಹೇಶ್‌

    ರಾಜ್ಯ ಸರ್ಕಾರವನ್ನು ನಡೆಸುತ್ತಿರುವುದು ಸಿಎಂ ಬೊಮ್ಮಯಿ ಅಲ್ಲ. ಕೇಶವ ಕೃಪಾದಿಂದ ಸರ್ಕಾರ ನಡೆಯುತ್ತಿದೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಎಲ್ಲಾ ಕಡೆ ಭ್ರಷ್ಟಾಚಾರ ನಡೆಯುತ್ತಿದೆ. ಇದು ಪರ್ಸೇಂಟೆಜ್ ಸರ್ಕಾರವಾಗಿದ್ದು, ಬಿಜೆಪಿಯವರು ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡಿದ್ದಾರೆ. ಸರ್ಕಾರದಲ್ಲಿ ಅಕ್ರಮ ನಡೆದಿದೆ ಸಾರ್ವಜನಿಕರ ಪರವಾಗಿ ನ್ಯಾಯ ಕೇಳುವುದೇ ತಪ್ಪಾ? ನಾವು 54 ಸಾವಿರ ಅಭ್ಯರ್ಥಿಗಳ ಪರವಾಗಿ ನಿಂತಿದ್ದೇವೆ ಎಂದಿದ್ದಾರೆ.

    ಮತ್ತೊಂದೆಡೆ ಗೃಹ ಸಚಿವ ಅರಗ ಜ್ಞಾನೇಂದ್ರ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ ಅವರು, ನನಗೆ ಈಗಾಗಲೇ ಮೂರು ಬಾರಿ ಸಿಐಡಿಯಿಂದ ನೋಟಿಸ್ ನೀಡಿದ್ದೀರಿ. ಅದಕ್ಕೆ ಲಿಖಿತ ರೂಪದಲ್ಲಿ ಉತ್ತರಿಸಿದ್ದೇನೆ. ಬಿಜೆಪಿ ನಾಯಕರಾದ ಸಚಿವ ಪ್ರಭು ಬಿ ಚೌಹಣ್, ಎಸ್. ವಿ. ಸಂಕನೂರ, ಶಶಿಲ್ ಜಿ ನವೊಶಿರವರು ಕೂಡ ಈ ಪ್ರಕರಣ ಸಂಬಂಧ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಹಲವಾರು ಬಿಜೆಪಿ ಮುಖಂಡರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ನನಗೆ ನೋಟಿಸ್ ನೀಡಿ ಮಾಹಿತಿ ಕೋರಿದಂತೆ ಅವರಿಗೂ ನೋಟಿಸ್ ನೀಡಿ ಮಾಹಿತಿ ತೆಗೆದುಕೊಂಡಿದ್ದೀರಾ? ಆರಗ ಜ್ಞಾನೇಂದ್ರ ನೀವು ಕೂಡ ಅಕ್ರಮದ ಬಗ್ಗೆ ಕೆಲವೊಂದು ಗೊಂದಲದ ಹೇಳಿಕೆಗಳನ್ನು ನೀಡಿದ್ದೀರಿ. ನೀವು ಯಾವ ರೀತಿ ಸಿಐಡಿ ತನಿಖೆಗೆ ಸ್ಪಂದಿಸಿದ್ದೀರಿ, ನಿಮ್ಮ ಬಳಿ ಇರುವ ಮಾಹಿತಿಯನ್ನು ಸಿಐಡಿಗೆ ನೀಡಿ ಎಂದು ಒತ್ತಾಯಿಸಿದ್ದಾರೆ.

  • ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು: ಡಿ.ಕೆ.ಶಿವಕುಮಾರ್

    ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು: ಡಿ.ಕೆ.ಶಿವಕುಮಾರ್

    ಬೆಂಗಳೂರು: ಮುಖ್ಯಮಂತ್ರಿಗಳ ಮುಂದೆಯೇ ಉಸ್ತುವಾರಿ ಸಚಿವರು ಗಂಡಸರು ಯಾರಿದ್ದಾರೆ ಅಂತ ಕೇಳಿದ್ದರು. ಅವರೊಬ್ಬರೇ ಗಂಡಸರು. ರಾಮನಗರದಲ್ಲಿ ಗಂಡಸರಿಲ್ಲ ನಾವೆಲ್ಲಾ ಹೆಂಗಸರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಜೋರಾಗಿ ಅಧಿಕಾರ ಚಲಾಯಿಸಿದರೆ ಡಿ.ಕೆ.ಶಿವಕುಮಾರ್ ಉಸಿರು ನಿಂತು ಹೋಗುತ್ತದೆ ಅಂತ ಸಿಎಂ ಹೇಳಿದ್ದಾರೆ. ಇದರಿಂದ ನನಗೂ ಸಹ ಭಯವಾಗುತ್ತಿದೆ. ಮತ್ತೊಂದೆಡೆ ಮುಖ್ಯಮಂತ್ರಿಗಳ ಮುಂದೆಯೇ ಉಸ್ತುವಾರಿ ಸಚಿವರು ಗಂಡಸರು ಯಾರಿದ್ದಾರೆ ಅಂತ ಕೇಳಿದ್ದರು. ಅವರೊಬ್ಬರೇ ಗಂಡಸರು. ರಾಮನಗರದಲ್ಲಿ ಗಂಡಸರಿಲ್ಲ ನಾವೆಲ್ಲಾ ಹೆಂಗಸರು, ನಾನು, ನನ್ನ ತಮ್ಮ ಅನಿತಾ ಕುಮಾರಸ್ಚಾಮಿ ಎಲ್ಲರು ಅವರ ಗಂಡಸ್ತನ ನೋಡಿ ಗಢ, ಗಢ ಅಂತ ನಡುಗುತ್ತಿದ್ದೇವೆ. ಇದೀಗ ಪಿಎಸ್‍ಐ ಅಕ್ರಮದಲ್ಲಿ ಸಚಿವರೊಬ್ಬರ ಹೆಸರು ಕೇಳಿ ಬರುತ್ತಿದೆ. ಅವರ ತಮ್ಮ ಅನ್ನಲ್ಲ ಅವರ ಕುಟುಂಬಸ್ಥರು ಸಂಬಂಧಿಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಈ ಬಗ್ಗೆ ಸಿಎಂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದರು.

    ನಾನು ಆ ಸಚಿವರ ಬಗ್ಗೆ ಮಾತನಾಡುತ್ತೇನೆ ಅಂತ ನನಗೆ ಕಾಲ್ ಬರುತ್ತಿವೆ. ಅಣ್ಣ ಅವರ ಬಗ್ಗೆ ಮಾತನಾಡಬೇಡಿ ಅವರು ಈ ಬಾರಿ ಸಿಎಂ ಆಗಿ ಬಿಡುತ್ತಾರೆ. ಅವರ ಬಗ್ಗೆ ಮಾತನಾಡಿ ತೊಂದರೆ ಮಾಡಬೇಡಿ ಅಂತ ಯಾರ್ಯಾರೋ ಕಾಲ್ ಮಾಡಿದ್ದರು. ಇದನ್ನೂ ಓದಿ:  ಪಿಎಸ್‍ಐ ಅಕ್ರಮ – ಕೈ ನಾಯಕರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ: ಅಶ್ವಥ್ ನಾರಾಯಣ

    ಪಿಎಸ್‍ಐ ನೇಮಕಾತಿ ಅಕ್ರಮದ ಬಗ್ಗೆ ಸಿಎಂ ನಿಸ್ಪಕ್ಷಪಾತವಾಗಿ ತನಿಖೆ ನಡೆಸಲು ಮುಂದಾಗಬೇಕು. ಪಿಎಸ್‍ಐ ಪರೀಕ್ಷಾ ಅಕ್ರಮದಲ್ಲಿ ಬೊಮ್ಮಾಯಿ ಅವರು ಭಾಗಿಯಾಗಿದ್ದಾರೆ ಅಂತ ನಾನು ಹೇಳಲ್ಲ. ಸಿಎಂ ಬೊಮ್ಮಾಯಿ ಅವರ ಕಾಲದಲ್ಲಿ ಈ ಅಕ್ರಮ ನಡೆದಿಲ್ಲ. ಅದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಸಿಎಂ ಅವರು ಸಚಿವರ ರಕ್ಷಣೆ ಮಾಡಬಾರದು. ಯಾರೇ ಇರಲಿ. ಎಷ್ಟೇ ದೊಡ್ಡವರಾಗಿರಲಿ ನಿಷ್ಪಕ್ಷಪಾತವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

    ಸಿಒಡಿ ಅಧಿಕಾರಿಗಳು ಆಯ್ಕೆಯಾದ ವಿದ್ಯಾರ್ಥಿಗಳು ಹಳ್ಳಿಗಳಿಗೆ ಹೋಗಿದ್ದಾರಾ, ಅವರೆಲ್ಲ ಎಷ್ಟು ದುಡ್ಡು ಕೊಟ್ಟಿದ್ದಾರೆ ಎಂಬ ಮಾಹಿತಿ ಕಲೆಹಾಕಬಹುದಿತ್ತು. ಆದರೆ ಯಾವ ಅಧಿಕಾರಿಗಳು ಮಾಡಲಿಲ್ಲ. ಸರ್ಕಾರ ಅಕ್ರಮವನ್ನು ಮುಚ್ವಿಹಾಕಲು ಹೊರಟಿದೆ ಅನಿಸುತ್ತಿದೆ. ಪ್ರಭಾವಿ ಸಚಿವರೊಬ್ಬರು ಕರೆ ಮಾಡಿ, ಅಕ್ರಮದಲ್ಲಿರುವರೊಬ್ಬರನ್ನು ಪೊಲೀಸರಿಂದ ಬಿಡಿಸಿದ್ದಾರೆ ಎಂಬ ಮಾಹಿತಿ ಇದೆ. ಯಾರು ಕರೆ ಮಾಡಿದ್ದು, ಏಕೆ ಮಾಡುತ್ತಿದ್ದಾರೆ. ಅವರ ಪಾತ್ರ ಏನು ತನಿಖೆ ನಡೆಸಲಿ. ಭ್ರಷ್ಟಾಚಾರವನ್ನು ಬಹಳ ದಿನ ಮುಚ್ಚಿಡಲು ಸಾಧ್ಯವಿಲ್ಲ. ಅದು ಹೊರಗೆ ಬಂದೇ ಬರುತ್ತದೆ ಎಂದು ವಾಗ್ದಳಿ ನಡೆಸಿದರು. ಇದನ್ನೂ ಓದಿ: ಈಗ ಸಿಕ್ಕವರು ಕಿಂಗ್‌ಪಿನ್‌ಗಳಲ್ಲ, ಗೃಹ ಸಚಿವರ ಮೇಲೆಯೇ ನನಗೆ ಅನುಮಾನ – ಪ್ರಿಯಾಂಕ್ ಖರ್ಗೆ

    ಈ ವಿಚಾರದ ಬಗ್ಗೆ ಡಿ.ಜಿ ಹಾಗೂ ಗೃಹ ಸಚಿವರು ಬೇರೆ, ಬೇರೆ ಮಾಹಿತಿ ನೀಡಿದ್ದಾರೆ. ನನಗೆ ಮಾಹಿತಿ ಇರುವ ಪ್ರಕಾರ ಕೆಲವರ ಹೆಸರು ತನಿಖೆ ವೇಳೆ ಗೊತ್ತಾಗಿದೆ. ಆದರೆ ಸಿಐಡಿ ಯಾರ ಮನೆಗೆ ಹೋಗಿದ್ದರು. ಅವರ ತನಿಖೆ ಮಾಡಿದ್ದಾರಾ? ನೋಡೋಣ ಸರ್ಕಾರ ಯಾರ, ಯಾರ ರಕ್ಷಣೆ ಮಾಡುತ್ತಾರೆ. ಸಿಎಂಗೆ ಬದ್ದತೆ ಇದ್ದರೆ ನಿರ್ದಾಕ್ಷಣ್ಯ ಕೈಗೊಳ್ಳುವುದೇ ಆಗಿದ್ದರೆ, ಮೊದಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

  • ಊಟ ನಿರಾಕರಣೆ, ಎಸಿ ಇಲ್ದೆ ನಿದ್ರೆ ಇಲ್ಲ – PSI ಅಕ್ರಮದಲ್ಲಿ ಅರೆಸ್ಟ್ ಆದ ದಿವ್ಯಾ ಹಾಗರಗಿ ಹೈಡ್ರಾಮಾ

    ಊಟ ನಿರಾಕರಣೆ, ಎಸಿ ಇಲ್ದೆ ನಿದ್ರೆ ಇಲ್ಲ – PSI ಅಕ್ರಮದಲ್ಲಿ ಅರೆಸ್ಟ್ ಆದ ದಿವ್ಯಾ ಹಾಗರಗಿ ಹೈಡ್ರಾಮಾ

    ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಾಥ್ ನೀಡಿರುವ ಆರೋಪದಡಿ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಸದ್ಯ 11 ದಿನಗಳ ಕಾಲ ದಿವ್ಯಾ ಹಾಗರಗಿಯನ್ನು ನ್ಯಾಯಾಲಯ ಸಿಐಡಿ ಕಸ್ಟಡಿಗೆ ನೀಡಿದೆ.

    ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ದಿವ್ಯಾ ಹಾಗರಗಿ ಕಳೆದ 18 ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಆದರೆ ಸಿಐಡಿ ಅಧಿಕಾರಿಗಳು ಶುಕ್ರವಾರ ಮಹಾರಾಷ್ಟ್ರದ ಪುಣೆಯ ಹೋಟೆಲ್‍ವೊಂದರ ಬಳಿ ದಿವ್ಯಾ ಹಾಗರಗಿಯನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ದಿವ್ಯಾ ಹಾಗರಗಿ ಕಳೆದ ರಾತ್ರಿ ಮಹಿಳಾ ನಿಲಯದಲ್ಲಿಯೇ ಕಾಲ ಕಳೆದಿದ್ದಾರೆ. ಇದನ್ನೂ ಓದಿ: ಪರೀಕ್ಷೆಗೆ ಹಿಜಬ್ ಧರಿಸಿ ಬಂದ ಡಿಗ್ರಿ ವಿದ್ಯಾರ್ಥಿನಿಗೆ ಅನುಮತಿ ನಿರಾಕರಣೆ

    ಸದಾ ಎಸಿ ಕೋಣೆಯಲ್ಲಿ ಮಲಗುತ್ತಿದ್ದ ದಿವ್ಯಾ ಹಾಗರಗಿ ನಿನ್ನೆ ತಡರಾತ್ರಿವರಗೆ ಫ್ಯಾನ್ ಕೆಳಗೆ ನಿದ್ರೆ ಬರದೆ ಪರದಾಡಿದ್ದಾರೆ. ಅಲ್ಲದೇ ನಿನ್ನೆ ಮಧ್ಯಾಹ್ನ ಊಟವನ್ನು ಕೂಡಾ ನಿರಾಕರಿಸಿದ್ದರು. ಆದರೆ ರಾತ್ರಿ ಸ್ವಲ್ಪ ಊಟ ಮಾಡಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ದೈಹಿಕ ಪರೀಕ್ಷೆಯಲ್ಲೂ ಅಕ್ರಮ – ದಿವ್ಯಾ ಬಂಧನ ಸರ್ಕಾರದ ದೊಡ್ಡ ಸಾಧನೆಯಲ್ಲ: ಪ್ರಿಯಾಂಕ್ ಖರ್ಗೆ

    ಕೋಟಿ, ಕೋಟಿ ಹಣವಿದ್ದರೂ ಅಕ್ರಮದ ಜಾಲಕ್ಕೆ ಸಿಲುಕಿರುವ ದಿವ್ಯಾ ಹಾಗರಗಿ ಇದೀಗ ತಮ್ಮನ್ನು ಭೇಟಿಯಾದವರ ಮುಂದೆ ಪಶ್ಚಾತ್ತಾಪದ ಮಾತುಗಳನ್ನಾಡುತ್ತಿದ್ದಾರೆ. ಕಲಬುರಗಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ದಿವ್ಯಾ ಹಾಗರಗಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇವೆಲ್ಲವೂ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯಾಗಿದೆ.

  • PSI ನೇಮಕಾತಿ ಅಕ್ರಮ ಪ್ರಕರಣದ ಕ್ವೀನ್‍ಪಿನ್ ದಿವ್ಯಾ ಹಾಗರಗಿ ಅರೆಸ್ಟ್

    PSI ನೇಮಕಾತಿ ಅಕ್ರಮ ಪ್ರಕರಣದ ಕ್ವೀನ್‍ಪಿನ್ ದಿವ್ಯಾ ಹಾಗರಗಿ ಅರೆಸ್ಟ್

    ಬೆಳಗಾವಿ/ಕಲಬುರಗಿ: ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದ ಕ್ವೀನ್‍ಪಿನ್ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

    ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಕಳೆದ 18 ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಆದರೆ ಇಂದು ಸಿಐಡಿ ಎಸ್‌ಪಿ. ರಾಘವೇಂದ್ರ ಹೆಗಡೆ, ಡಿವೈಎಸ್‍ಪಿ, ಪ್ರಕಾಶ್ ರಾಠೋಡ್, ಡಿವೈಎಸ್‍ಪಿ ಶಂಕರಗೌಡ ನೇತೃತ್ವದ ತಂಡದಿಂದ ಮಹಾರಾಷ್ಟ್ರದ ಪುಣೆಯ ಹೋಟೆಲ್‍ವೊಂದರ ಬಳಿ ದಿವ್ಯಾ ಹಾಗರಗಿಯನ್ನು ಬಂಧಿಸಲಾಗಿದೆ. ಇದೇ ವೇಳೆ ಮತ್ತೋರ್ವ ಆರೋಪಿಯಾಗಿದ್ದ ಪರೀಕ್ಷಾ ಕೇಂದ್ರದ ಮೇಲ್ವಿಚಾರಕಿ ಹಾಗೂ ಶಿಕ್ಷಕಿ ಅರ್ಚನಾರನ್ನು ಸಹ ಅಧಿಕಾರಿಗಳು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಪುಣೆಯ ಹೋಟೆಲ್‍ವೊಂದರಲ್ಲಿ ತಂಗಿದ್ದರು. ಸದ್ಯ ಅಧಿಕಾರಿಗಳು ದಿವ್ಯಾ ಹಾಗರಗಿಯನ್ನು ಪುಣೆಯಿಂದ ಕಲಬುರಗಿಗೆ ಕರೆತರುತ್ತಿದ್ದಾರೆ.  ಇದನ್ನೂ ಓದಿ:  ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ – ಸ್ಫೋಟಕ ಆಡಿಯೋ ಔಟ್

    ಪ್ರಕರಣಕ್ಕೆ ಸಂಬಂಧಿಸಿದ ಇನ್ನೂ ಐವರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರನ್ನು ವಿಚಾರಣೆ ನಡೆಸಿ ಅಕ್ರಮದಲ್ಲಿ ಭಾಗಿಯಾಗಿದ್ದರೆ, ಅರೆಸ್ಟ್‌ ಮಾಡಲು ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್

    ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಿಎಸ್‍ಐ ನೇಮಕಾತಿ ಪರೀಕ್ಷೆ ವೇಳೆ ಅಕ್ರಮ ನಡೆದಿತ್ತು. ಇತ್ತೀಚೆಗಷ್ಟೇ ಈ ಪ್ರಕರಣದ ಪ್ರಮುಖ ಆರೋಪಿಯಾದ ಅಫಜಲಪುರ ಬ್ಲಾಕ್‍ನ ಕಾಂಗ್ರೆಸ್ ಅಧ್ಯಕ್ಷನ ಸಹೋದರನಾಗಿರುವ ಕಿಂಗ್ ಪಿನ್ ಆರ್.ಡಿ.ಪಾಟೀಲ್‍ನನ್ನು ಪೊಲೀಸರು ಬಂಧಿಸಿದ್ದರು.