Tag: PSI Parashuram

  • ಪಿಎಸ್‌ಐ ಪರಶುರಾಮ್ ಆತ್ಮಹತ್ಯೆ ಪ್ರಕರಣ – ಸಿಬಿಐ ತನಿಖೆಗೆ ಆಗ್ರಹಿಸಿ ಶೋಭಾ ಕರಂದ್ಲಾಜೆ ಪತ್ರ

    ಪಿಎಸ್‌ಐ ಪರಶುರಾಮ್ ಆತ್ಮಹತ್ಯೆ ಪ್ರಕರಣ – ಸಿಬಿಐ ತನಿಖೆಗೆ ಆಗ್ರಹಿಸಿ ಶೋಭಾ ಕರಂದ್ಲಾಜೆ ಪತ್ರ

    ನವದೆಹಲಿ: ಪಿಎಸ್‌ಐ ಪರಶುರಾಮ್ (PSI Parashuram) ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಪತ್ರ ಬರೆದಿದ್ದಾರೆ.

    ಕೇಂದ್ರ ಸಚಿವರ ಪತ್ರದ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ, ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಪ್ರಕರಣವನ್ನು ಪರಿಶೀಲಿಸಿ, ಮಾಹಿತಿ ನೀಡುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಶಿಕ್ಷಕರ ವೃತ್ತಿ ಸಾಮಾಜಿಕ ಜವಾಬ್ದಾರಿ: ಸಿದ್ದರಾಮಯ್ಯ

    ಈಚೆಗೆ ಯಾದಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಪರಶುರಾಮ್‌ ಸಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಪ್ರಕರಣದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ಮತ್ತು ಅವರ ಪುತ್ರ ಪಂಪನಗೌಡ ಪುತ್ರನ ಹೆಸರು ಕೇಳಿಬಂದಿತ್ತು. ಶಾಸಕರ ರಾಜೀನಾಮೆ ಮತ್ತು ಇಬ್ಬರ ಬಂಧನಕ್ಕೆ ಆಗ್ರಹಿಸಿ ಜನರು ಪ್ರತಿಭಟಿಸಿದ್ದರು.

    ಪೊಲೀಸ್‌ ಅಧಿಕಾರಿ ಪರಶುರಾಮ್‌ ಸಾವಿನ ಪ್ರಕರಣದಲ್ಲಿ ಲಂಚ ಬೇಡಿಕೆ ಮತ್ತು ಅಧಿಕಾರಿಗೆ ಮಾನಸಿಕ ಕಿರುಕುಳದ ಆರೋಪವನ್ನು ಶಾಸಕ ಚನ್ನಾರೆಡ್ಡಿ ಹೊತ್ತಿದ್ದರು. ಅವರ ರಾಜೀನಾಮೆಗೆ ಆಗ್ರಹಿಸಿ ಯಾದಗಿರಿ ಜಿಲ್ಲೆಯಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಇದನ್ನೂ ಓದಿ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ – ಡಿಕೆಶಿ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಯತ್ನಾಳ್

  • ಮೃತ ಪಿಎಸ್ಐ ಮನೆಗೆ ಗೃಹ ಸಚಿವರ ಭೇಟಿ – ಪತ್ನಿಗೆ ಉದ್ಯೋಗ, 50 ಲಕ್ಷ ಪರಿಹಾರ ಘೋಷಣೆ

    ಮೃತ ಪಿಎಸ್ಐ ಮನೆಗೆ ಗೃಹ ಸಚಿವರ ಭೇಟಿ – ಪತ್ನಿಗೆ ಉದ್ಯೋಗ, 50 ಲಕ್ಷ ಪರಿಹಾರ ಘೋಷಣೆ

    – ವರ್ಗಾವಣೆ ಆದೇಶ ಮಾಡಿದ ಅಧಿಕಾರಿ ಸಮರ್ಥಿಸಿದ ಸಚಿವ

    ಯಾದಗಿರಿ: ಪಿಎಸ್ಐ ಪರಶುರಾಮ್ (PSI Parashuram) ಸಾವು ಪ್ರಕರಣ ರಾಜಕೀಯ ತಿರುವು ಪಡೆಯುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಸ್ವತಃ ಗೃಹ ಸಚಿವ ಜಿ.ಪರಮೇಶ್ವರ್‌, ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ, ಪತ್ನಿ ಶ್ವೇತಾ ಅವರಿಗೆ ಉದ್ಯೋಗ ನೀಡುವ ಜೊತೆಗೆ, ಕುಟುಂಬಕ್ಕೆ 50 ಲಕ್ಷ ರೂ. ವಿಶೇಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು.

    ಪರಶುರಾಮ್ ಹುಟ್ಟೂರು ಕೊಪ್ಪಳದ (Koppal) ಕಾರಟಗಿ ತಾಲೂಕಿನ ಸೋಮನಾಳ ಗ್ರಾಮಕ್ಕೆ ಆಗಮಿಸಿದ ಗೃಹ ಸಚಿವರು, ಮೃತರ ತಂದೆ-ತಾಯಿ ಹಾಗೂ ಪತ್ನಿ ಶ್ವೇತಾ ಅವರ ಜೊತೆಗೆ ಸುಮಾರು 1 ಗಂಟೆ ಕಾಲ ಚರ್ಚಿಸಿದರು. ತಂದೆ ಜನಕಮುನಿ, ತಾಯಿ ಗಂಗಮ್ಮ ಮಗನ ಸಾವಿನ ನೋವು ತೋಡಿಕೊಂಡರು. ನಮ್ಮ ಮಗನ ಸಾವಿಗೆ ನ್ಯಾಯಾ ಸಿಗಬೇಕು ಎಂದು ಒತ್ತಾಯಿಸಿದರು. ಸಹೋದರ ಹನುಮಂತಪ್ಪ ಮತ್ತು ಪತ್ನಿ ಶ್ವೇತಾ ಅವರೊಂದಿಗೆ ಪ್ರತ್ಯೇಕವಾಗಿ ‌ಚರ್ಚಿಸಿದ ಗೃಹ ಸಚಿವರು, ಪರಶುರಾಮ್ ಸಾವಿಗೆ ನ್ಯಾಯ ದೊರಕಿಸಿಕೊಡುವ ಜೊತೆಗೆ ಸೂಕ್ತ ಪರಿಹಾರ ‌ನೀಡುವುದಾಗಿ ತಿಳಿಸಿದರು. ಮಾನವೀಯತೆ ಆಧಾರದ ಮೇಲೆ‌ ನೀಡುವ ಉದ್ಯೋಗವನ್ನು ಪೊಲೀಸ್ ಇಲಾಖೆ ಬದಲಿಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಥವಾ ಜೆಸ್ಕಾಂನಲ್ಲಿ ವಿದ್ಯಾರ್ಹತೆಗೆ ತಕ್ಕಂತೆ ನೀಡಬೇಕು ಎಂದು ಪತ್ನಿ ಮತ್ತು ಆಕೆ ಪಾಲಕರು ಮನವಿ ಮಾಡಿದರು.‌ ಇದನ್ನೂ ಓದಿ: PSI ಪರಶುರಾಮ್‌ ಸಾವು ಪ್ರಕರಣ: ಸರ್ಕಾರ ತನಿಖೆಗೆ ವಹಿಸಿದ ಮರುದಿನವೇ ಯಾದಗಿರಿಗೆ ಸಿಐಡಿ ತಂಡ ಎಂಟ್ರಿ

    ನಂತರ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್‌ (G.Parameshwar), ಪಿಎಸ್ಐ ಪರಶುರಾಮ್ ಸಾವಿನ ನಂತರ ಈಗಾಗಲೇ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ವಿಧಿವಿಜ್ಞಾನ ಸಂಸ್ಥೆಯ ವರದಿಯ ನಿರೀಕ್ಷೆಯಲ್ಲಿದ್ದೇವೆ. ಈ ಸಾವು ಗೃಹ ಸಚಿವನಾಗಿ ನನಗೆ ನೋವು ತರಿಸಿದೆ. ಇಡೀ ಕುಟುಂಬದ ಜವಾಬ್ದಾರಿ ಮೃತ ಪರಶುರಾಮ್ ಮೇಲೆ ಇತ್ತು. ಅವರ ಅಗಲುವಿಕೆ ಇಡೀ ಕುಟುಂಬವನ್ನು ಸಂಕಷ್ಟಕ್ಕೆ ದೂಡಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಸಿಒಡಿ ತನಿಖೆಗೆ ಒಪ್ಪಿಸಲಾಗಿದೆ. ತನಿಖಾ ವರದಿ ಆಧರಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೃಷಿ ವಿವಿ ಅಥವಾ ಜೆಸ್ಕಾಂನಲ್ಲಿ ಕೆಲಸ ನೀಡುವಂತೆ ಪತ್ನಿ ಶ್ವೇತಾ ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಡಿ,‌ ಅವರ ಬೇಡಿಕೆ ಈಡೇರಿಸಲು ಪ್ರಯತ್ನ ಮಾಡುತ್ತೇನೆ. ಕುಟುಂಬಕ್ಕೆ 50 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡುತ್ತಿದ್ದೇನೆ. ಸಿಎಂ ಜೊತೆಗೆ ಚರ್ಚೆ ಮಾಡಿ, ಕೂಡಲೇ ಬಿಡುಗಡೆ ಮಾಡಿಸುತ್ತೇನೆ ಎಂದು ತಿಳಿಸಿದರು.

    ತನಿಖಾ ವರದಿ ಬರಲಿ: ಯಾದಗಿರಿ ಶಾಸಕ ಮತ್ತು ಅವರ ಮಗ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪರಶುರಾಮ್ ಕುಟುಂಬ ಆರೋಪ ಮಾಡಿದೆ. ಈ ಹಿನ್ನೆಲೆ ಕೂಡಲೇ ಸಿಒಡಿಗೆ ತನಿಖೆಗೆ ಆದೇಶ ಮಾಡಿದ್ದೇನೆ. ಹಣ ಪಡೆದು ವರ್ಗಾವಣೆ ಮಾಡುವುದು ನಮ್ಮ ಸರ್ಕಾರದಲ್ಲಿ ಇಲ್ಲ. ಕನಿಷ್ಠ 2 ವರ್ಷ ವರ್ಗಾವಣೆ ಮಾಡಬಾರದು ಎಂದು ನಿಯಮ ಮಾಡಿದ್ದೇವೆ. ಆದಾಗ್ಯೂ ಪರಶುರಾಮನನ್ನು ಏಕೆ ವರ್ಗಾವಣೆ ‌ಮಾಡಲಾಗಿದೆ ಎಂಬುದು ಸಿಒಡಿ ತನಿಖೆಯಲ್ಲೇ ಗೊತ್ತಾಗಬೇಕಿದೆ. ಅಲ್ಲಿಯವರೆಗೂ ನಾವು ಕಾದು ನೋಡುತ್ತೇವೆ ಎಂದರು. ಇದನ್ನೂ ಓದಿ: ಪಿಎಸ್‌ಐ ಸಾವು ಪ್ರಕರಣ; ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ

  • ಪ್ರತಿದಿನ ಪೊಲೀಸ್ ಅಧಿಕಾರಿಗಳು ಕಲೆಕ್ಷನ್ ಮಾಡ್ಲೇಬೇಕು: ಭಾಸ್ಕರ್ ರಾವ್ ಬೇಸರ

    ಪ್ರತಿದಿನ ಪೊಲೀಸ್ ಅಧಿಕಾರಿಗಳು ಕಲೆಕ್ಷನ್ ಮಾಡ್ಲೇಬೇಕು: ಭಾಸ್ಕರ್ ರಾವ್ ಬೇಸರ

    – ಸಿಎಂ, ಗೃಹ ಸಚಿವರ ಒತ್ತಡದಲ್ಲೇ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ: ಮಾಜಿ ಐಪಿಎಸ್ ಅಧಿಕಾರಿ

    ಕೊಪ್ಪಳ: ಪ್ರತಿದಿನ ಪೊಲೀಸ್ ಅಧಿಕಾರಿಗಳು ಕಲೆಕ್ಷನ್ ಮಾಡ್ಲೇಬೇಕು. ಬೆಂಗಳೂರಲ್ಲಿ ಪ್ರತಿದಿನ ಕಲೆಕ್ಷನ್ ದುಡ್ಡು ಬಂದಿಲ್ಲ ಅಂದ್ರೆ ಸಂಜೆಗೆ ಪೊಲೀಸರು ವಿಲಿವಿಲಿ ಆಗಿ ಬಿಡ್ತಾರೆ ಎಂದು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಬೇಸರ ಹೊರಹಾಕಿದ್ದಾರೆ.

    ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಅವರು ಮಾತನಾಡಿದರು. ಈ ವೇಳೆ ಪಿಎಸ್‍ಐ ಪರಶುರಾಮ್ (PSI Parashuram) ಸಾವಿನ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರದಲ್ಲಿ ಎಲ್ಲಾ ಅಧಿಕಾರಿಗಳು ಒತ್ತಡದಲ್ಲೇ ಕೆಲಸ ಮಾಡಬೇಕು. ಸಿಎಂ ಹಾಗೂ ಗೃಹ ಸಚಿವರ ಒತ್ತಡದಲ್ಲೇ ಕೆಲಸ ಮಾಡ್ತಿದ್ದಾರೆ. ಮೊದಲು ಶಾಸಕರು ಹಾಗೂ ಸಚಿವರು ವರ್ಗಾವಣೆ ವಿಚಾರವಾಗಿ ಮನವಿ ಮಾಡ್ತಿದ್ರು. ಈಗ ಅದು ದಂಧೆಯಾಗಿ ಬದಲಾಗಿದೆ ಎಂದು ಆರೋಪಿಸಿದ್ದಾರೆ.

    ಈ ಬೆಳವಣಿಗೆಯನ್ನು ಸಣ್ಣಪುಟ್ಟವರು ಕಂಟ್ರೋಲ್ ಮಾಡೋಕೆ ಆಗಲ್ಲ. ದೊಡ್ಡವರಿಂದಲೇ ಎಲ್ಲಾ ಕಂಟ್ರೋಲ್ ಮಾಡಬೇಕು. ಈಗ ಒಂದು ರೂಟ್ ಮ್ಯಾಪ್ ಹಾಕಲಾಗಿದೆ. ಇಲಾಖೆಯಲ್ಲಿ ದಿನದ ವಸೂಲಿ ಶುರುವಾಗಿದೆ. ಪ್ರತಿ ದಿನ ಪೊಲೀಸ್ ಅಧಿಕಾರಿಗಳು ಕಲೆಕ್ಷನ್ ಮಾಡಲೇಬೇಕು. ಈ ವ್ಯವಸ್ಥೆ ನಾನು ಇದ್ದಾಗಲೂ ಇತ್ತೂ, ಈಗಲೂ ಇದೆ. ಮುಂದೇನು ಇರಲಿದೆ ಎಂದು ಕಿಡಿಕಾರಿದ್ದಾರೆ.

  • ಜನರನ್ನ ಕಾಪಾಡಬೇಕಾದ ಶಾಸಕರೇ ನರಭಕ್ಷಕರಾದ್ರೆ ನಮ್ಮ ಗತಿಯೇನು?: ಮೃತ ಪಿಎಸ್‌ಐ ಪರಶುರಾಮ್ ಮಾವ ಕಿಡಿ

    ಜನರನ್ನ ಕಾಪಾಡಬೇಕಾದ ಶಾಸಕರೇ ನರಭಕ್ಷಕರಾದ್ರೆ ನಮ್ಮ ಗತಿಯೇನು?: ಮೃತ ಪಿಎಸ್‌ಐ ಪರಶುರಾಮ್ ಮಾವ ಕಿಡಿ

    ರಾಯಚೂರು: ಯಾದಗಿರಿ ((Yadgiri) ಪಿಎಸ್‌ಐ ಪರಶುರಾಮ್‌ (PSI Parshuram) ಸಾವಿನ ಪ್ರಕರಣವನ್ನ ಸಿಐಡಿಗೆ ಒಪ್ಪಿಸಿರುವುದನ್ನ ಪರಶುರಾಮ್ ಮಾವ ಎನ್ ವೆಂಕಟಸ್ವಾಮಿ ಸ್ವಾಗತಿಸಿದ್ದಾರೆ. ರಾಯಚೂರಿನಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿರುವ ಎನ್ ವೆಂಕಟಸ್ವಾಮಿ, ಪ್ರಕರಣ ಸಿಐಡಿಗೆ ಕೊಟ್ಟಿರುವುದು ಸ್ವಾಗತ. ಆದರೆ ನನ್ನ ಅಳಿಯನ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

    ಜನರಿಗೆ ಒಳ್ಳೆಯದಾಗಲಿ ಎಂದು ಶಾಸಕರನ್ನ ಆಯ್ಕೆ ಮಾಡುತ್ತೇವೆ. ಆದರೆ ಜನರನ್ನು ಕಾಪಾಡಬೇಕಾದ ಇಂಥವರು ನರಭಕ್ಷಕರಾಗಿಬಿಟ್ಟರೆ ಗತಿಯೇನು? ಇಂತಹ ಸಂದರ್ಭದಲ್ಲಿ ಸರ್ಕಾರ ಸುಮ್ಮನೆ ಕೂತರೆ ಸರಿಯಲ್ಲ. ನಮ್ಮ ಅಳಿಯನ ಸಾವಿಗೆ ನ್ಯಾಯ ಕೊಡಲೇಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಆಪ್‌ಗೆ ಹಿನ್ನಡೆ, ಎಂಸಿಡಿಗೆ ಸದಸ್ಯರ ನಾಮನಿರ್ದೇಶನದ ಅಧಿಕಾರ ಎಲ್‌ಜಿಗಿದೆ – ಸುಪ್ರೀಂ

    ಯಾದಗಿರಿ ಶಾಸಕ ಹಾಗೂ ಅವರ ಪುತ್ರನ ಹಿಂಸೆಯಿಂದ ನನ್ನ ಅಳಿಯ ಸಾವನ್ನಪ್ಪಿದ್ದಾನೆ. 30 ಲಕ್ಷ ಕೊಡದಿದ್ದರೆ ಯಾದಗಿರಿಯಲ್ಲಿ ಇರಬಾರದು ಎಂದು ಹಿಂಸೆ ಕೊಟ್ಟಿದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ. ಅದಕ್ಕೆ ನೊಂದು ಬಿಪಿ ಹೆಚ್ಚಾಗಿ ನನ್ನ ಅಳಿಯ ಮೃತಪಟ್ಟಿದ್ದಾರೆ ಎಂದಿದ್ದಾರೆ. ಸಿಐಡಿ ಅಧಿಕಾರಿಗಳ ಕರೆಗೆ ಕಾಯುತ್ತಿದ್ದೇವೆ. ಬರಲು ಹೇಳುತ್ತೇವೆ ಎಂದಿದ್ದಾರೆ. ಸರ್ಕಾರದ ಮೇಲೆ ಗೃಹ ಸಚಿವರ ಮೇಲೆ ಭರವಸೆ ಇಡುತ್ತೇವೆ. ನಮ್ಮ ಅಳಿಯನ ಸಾವಿಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದರು. ಇದನ್ನೂ ಓದಿ: 1 ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆ – ಈಗ ಇನ್ಸ್‌ಪೆಕ್ಟರ್‌ ನೇಣಿಗೆ ಶರಣು

    ಪರಶುರಾಮ ತನ್ನ ಮೇಲಿನ ಒತ್ತಡದ ಬಗ್ಗೆ ಹೇಳಿದ್ದ. ನಾವು ಮನವೊಲಿಸುವ ಪ್ರಯತ್ನ ಮಾಡಿದ್ದೆವು. ವೃತ್ತಿಯಲ್ಲಿ ಇದು ಸಾಮಾನ್ಯ. ರಾಜಕೀಯ ಒತ್ತಡಗಳು ಇದ್ದೆ ಇರುತ್ತದೆ. ಎಲ್ಲಿ ಕೊಡುತ್ತಾರೆ ಎಂಬುದನ್ನು ಕೇಳಿ, ಐಜಿ ಆಫೀಸ್‌ಗೆ ಹೋಗಿ ರಿಕ್ವೆಸ್ಟ್ ಮಾಡಿ ಮುಂದೆ ಜನರಲ್ ಟ್ರಾನ್ಸ್ಫರ್ ಟೈಮಲ್ಲಿ ನೋಡೋಣ ಎಂದು ಮನವರಿಕೆ ಮಾಡಿದ್ದೆವು. ಆದರೆ ಪರಶುರಾಮ್ ತುಂಬಾ ಒತ್ತಡದಲ್ಲಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಸಿಎಂ ಪರ ನಿಲ್ಲುವಂತೆ ಸುರ್ಜೇವಾಲ, ವೇಣುಗೋಪಾಲ್ ಸೂಚನೆ: ಪರಮೇಶ್ವರ್

  • ಮೃತ ಪಿಎಸ್‌ಐ ಪರಶುರಾಮ್ ಪತ್ನಿಗೆ ಸರ್ಕಾರದಿಂದ ಉದ್ಯೋಗ: ಪರಮೇಶ್ವರ್

    ಮೃತ ಪಿಎಸ್‌ಐ ಪರಶುರಾಮ್ ಪತ್ನಿಗೆ ಸರ್ಕಾರದಿಂದ ಉದ್ಯೋಗ: ಪರಮೇಶ್ವರ್

    ಬೆಂಗಳೂರು: ಯಾದಗಿರಿ (Yadgiri) ಮೃತ ಪಿಎಸ್‌ಐ ಪರಶುರಾಮ್ (PSI Parashuram) ಪತ್ನಿಗೆ ಸರ್ಕಾರದಿಂದ ಉದ್ಯೋಗ ನೀಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಘೋಷಣೆ ಮಾಡಿದ್ದಾರೆ.

    ಯಾದಗಿರಿ ಪಿಎಸ್‌ಐ ಸಾವು ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,ಪಿಎಸ್‌ಐ ಸಾವು ಪ್ರಕರಣ ಸಿಐಡಿಗೆ ನೀಡಲಾಗಿದೆ. ಅದರ ತನಿಖೆ ಮಾಡುತ್ತಿದ್ದಾರೆ. ಪೋಸ್ಟ್ ಮಾರ್ಟಮ್ ರಿಪೋರ್ಟ್ ನಿರೀಕ್ಷೆ ಮಾಡುತ್ತಿದ್ದೇವೆ. ಅದು ಬಂದ ಮೇಲೆ ಯಾಕೆ ಸಾವಾಗಿದೆ ಎಂದು ಗೊತ್ತಾಗುತ್ತದೆ. ನಾನು ನಾಡಿದ್ದು ಅವರ ಮನೆಗೆ ಹೋಗಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ. ಅವರ ಶ್ರೀಮತಿಗೆ ಕೆಲಸ ಕೊಡಬೇಕು ಎಂದು ನಾವು ತೀರ್ಮಾನ ಮಾಡಿದ್ದೇವೆ. ಅವರಿಗೆ ಪರಿಹಾರ ಮತ್ತು ಉದ್ಯೋಗ ನೀಡುವ ಕೆಲಸ ಮಾಡುತ್ತೇವೆ. ಉದ್ಯೋಗ ಕೊಡಲು ಸಿಎಂ ಮತ್ತು ನಾನು ಚರ್ಚೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಸಿಎಂ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ ಕಾನೂನು ಹೋರಾಟ: ಪರಮೇಶ್ವರ್

    ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಮತ್ತು ಶಾಸಕನ ಪುತ್ರನ ಮೇಲೆ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸಿಐಡಿ ತನಿಖೆಗೆ ಕೊಡಲಾಗಿದೆ. ತನಿಖೆಯ ವರದಿ ಬರಲಿ. ತನಿಖೆಯಲ್ಲಿ ಶಾಸಕರು ಮತ್ತು ಅವರ ಪುತ್ರನ ಪಾತ್ರವಿದ್ದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬ್ರಿಟನ್‌ನಲ್ಲಿ ಸ್ಥಳೀಯರು Vs ವಲಸಿಗ ಮುಸ್ಲಿಮರ ಮಧ್ಯೆ ಸಂಘರ್ಷ – 148 ಮಂದಿ ಬಂಧನ

  • ಪರಶುರಾಮ್‌ ಪತ್ನಿಗೆ ಸರ್ಕಾರಿ ಕೆಲಸ, ಪರಿಹಾರ ಕೊಡೋದಕ್ಕೆ ತೀರ್ಮಾನ – ಪರಮೇಶ್ವರ್‌

    ಪರಶುರಾಮ್‌ ಪತ್ನಿಗೆ ಸರ್ಕಾರಿ ಕೆಲಸ, ಪರಿಹಾರ ಕೊಡೋದಕ್ಕೆ ತೀರ್ಮಾನ – ಪರಮೇಶ್ವರ್‌

    ಬೆಂಗಳೂರು: ಮೃತ ಪಿಎಸ್‌ಐ ಪರಶುರಾಮ್ (PSI Parashuram) ಪತ್ನಿಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ, ಪರಿಹಾರ ಕೊಡೋದಕ್ಕೆ ಸರ್ಕಾರ ತೀರ್ಮಾನ ಮಾಡಿದೆ ಎಂದು ಗೃಹಸಚಿವ ಜಿ. ಪರಮೇಶ್ವರ್‌ (G Parameshwara) ತಿಳಿಸಿದ್ದಾರೆ.

    ಪಿಎಸ್‌ಐ ಪರಶುರಾಮ್ ನಿಗೂಢ ಸಾವು ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಲಿನ ಆಡಳಿತ ಪಕ್ಷದ ಶಾಸಕ ಮೇಲೆ ಆಪಾದನೆ ಮಾಡಿದ್ದಾರೆ. ಸಿಐಡಿ ತನಿಖೆಗೆ ಪ್ರಕರಣವನ್ನು ಕೊಟ್ಟಿದ್ದೇವೆ, ತನಿಖೆ ನಡೆಯುತ್ತಿದೆ. ಇದು ಆತ್ಮಹತ್ಯೆ ಅಲ್ಲ, ಅಂತ ಇಲಾಖೆ ಹೇಳಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಕಾರಣ ಗೊತ್ತಾಗುತ್ತೆ. ಪರಶುರಾಮ್‌ ಪತ್ನಿಗೆ ಇಲಾಖೆಯಲ್ಲಿ ಕೆಲಸ (Government Job), ಪರಿಹಾರ ಕೊಡೋಕೆ ಸರ್ಕಾರ ತೀರ್ಮಾನ ಸರ್ಕಾರ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ಸಾವು ಪ್ರಕರಣ; ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶ

    10 ತಿಂಗಳು ಸರ್ಕಾರ ಇರಲ್ಲ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ಮಾತುಗಳು ಬರೋದು ಸ್ವಾಭಾವಿಕ. ಅಸ್ಥಿರವಾಗುವ ಸೂಚನೆಗಳು ನಮ್ಮಲ್ಲಿ ಕಾಣಿಸ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ v/s ಹಿಜ್ಬುಲ್ಲಾ; ಇಬ್ಬರ ನಡುವೆ ಕಿತ್ತಾಟ ಯಾಕೆ? – ಭಾರತೀಯರಿಗೆ ಎಚ್ಚರಿಕೆ!

    ರಾಜ್ಯದಲ್ಲಿ ಸಚಿವರ ಖಾತೆ ಹಂಚಿಕೆ ವಿಚಾರ ಕುರಿತು ಮಾತನಾಡಿದ ಸಚಿವರು, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಇವತ್ತು (ಭಾನುವಾರ) ಸಂಜೆ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದಾರೆ. ಸಭೆಯ ಅಜೆಂಡಾ ಏನಂತ ಗೊತ್ತಿಲ್ಲ. ಎಲ್ಲ ಮಂತ್ರಿಗಳನ್ನ ಕರೆದಿದ್ದಾರೆ. ರಾಜ್ಯಪಾಲರು ಸಿಎಂಗೆ ಶೋಕಾಸ್ ನೀಡಿದ್ದಾರೆ. ಸಂಪುಟ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರೆಸೆಲ್ಯೂಷನ್ ಮಾಡಿ, ಶೋಕಾಸ್ ನೋಟಿಸ್ ವಾಪಾಸ್ ಪಡೆಯುವಂತೆ ಮನವಿ ಮಾಡಿದ್ದೇವೆ. ಅಡ್ವಸರಿ ರೂಪದಲ್ಲಿ ಮನವಿ ಮಾಡಿದ್ದೇವೆ. ಈ ಬಗ್ಗೆ ಹೈಕಮಾಂಡ್, ಸುರ್ಜೆವಾಲಾ, ಕೆ.ಸಿ ವೇಣುಗೋಪಾಲ್‌ರನ್ನ ಕಳಿಸ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಬಹುದು ಎಂದು ನುಡಿದಿದ್ದಾರೆ. ಇದನ್ನೂ ಓದಿ: Belagavi: ನಿಯಂತ್ರಣ ತಪ್ಪಿ ಮಾರ್ಕಂಡೇಯ ನದಿಗೆ ಬಿದ್ದ ಬೈಕ್ – ಓರ್ವನ ರಕ್ಷಣೆ ಮತ್ತೋರ್ವ ನಾಪತ್ತೆ 

  • ಪಿಎಸ್‌ಐ ಪರಶುರಾಮ್ ಸಾವು : ಕೊನೆಗೂ ಶಾಸಕ, ಪುತ್ರನ ವಿರುದ್ಧ ಕೇಸ್‌

    ಪಿಎಸ್‌ಐ ಪರಶುರಾಮ್ ಸಾವು : ಕೊನೆಗೂ ಶಾಸಕ, ಪುತ್ರನ ವಿರುದ್ಧ ಕೇಸ್‌

    ಯಾದಗಿರಿ: ಪಿಎಸ್‌ಐ ಪರಶುರಾಮ್ (PSI Parashuram) ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಯಾದಗಿರಿ ಶಾಸಕ ಚೆನ್ನಾರೆಡ್ಡಿ (Channa Reddy Patel) ಹಾಗೂ ಪುತ್ರ ಪಂಪನಗೌಡ (ಸನ್ನಿ ಗೌಡ) ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ಮೃತ ಪಿಎಸ್‌ಐ ಪತ್ನಿ ಶ್ವೇತಾ ಅವರು ಕುಟುಂಬಸ್ಥರ ಜೊತೆ ಯಾದಗಿರಿ ಟೌನ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದರು. ಈಗ ಭಾರತಿಯ ನ್ಯಾಯ ಸಂಹಿತೆ 108(3,5), ಸೆಕ್ಷನ್ 352 ಅಡಿಯಲ್ಲಿ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಪಂಪನಗೌಡ ವಿರುದ್ಧ ಜಾಮೀನು ರಹಿತ ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯಾದಗಿರಿ ಶಾಸಕರಿಂದ ಪೋಸ್ಟಿಂಗ್‌ಗೆ 30 ಲಕ್ಷ ರೂ ಬೇಡಿಕೆ? – ಪಿಎಸ್‌ಐ ಸಾವಿನ ಸುತ್ತ ಅನುಮಾನದ ಹುತ್ತ

    ಶಾಸಕರು ಹಣ ನೀಡುವಂತೆ ನಿರಂತರ ಒತ್ತಡ ಹೇರುತ್ತಿದ್ದರು ಎಂದು ಶ್ವೇತಾ ದೂರಿನಲ್ಲಿ ಆರೋಪಿಸಿದ್ದಾರೆ. ಜಾಮೀನು ರಹಿತ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಮೊದಲು ಶಾಸಕರ ಪುತ್ರನ ಬಂಧನವಾಗುವ ಸಾಧ್ಯತೆಯಿದೆ. ನಂತರ ಶಾಸಕ ಚೆನ್ನಾರೆಡ್ಡಿ ಬಂಧನವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಶಾಸಕರು ಹಣ ಕೇಳಿದ್ದಕ್ಕೆ ಒತ್ತಡದಿಂದ ಪಿಎಸ್‌ಐ ಸಾವು: ಇದು ಲೂಟಿ ಸರ್ಕಾರ ಎಂದ ಅಶೋಕ್‌

    ಶಾಸಕ ಚೆನ್ನಾರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳ ಸದಸ್ಯರು ಭಾರೀ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಮಣಿದಿ ಪೊಲೀಸರು ಮೃತಪಟ್ಟು ಹಲವು ಗಂಟೆ ಕಳೆದ ಬಳಿಕ ಶಾಸಕ, ಪುತ್ರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.