Tag: PSI case

  • ಆರ್.ಡಿ ಪಾಟೀಲ್ ಕಂಡು ಬಂದರೆ ಮಾಹಿತಿ ನೀಡುವಂತೆ ಪ್ರಕಟಣೆ ಹೊರಡಿಸಿದ CID

    ಆರ್.ಡಿ ಪಾಟೀಲ್ ಕಂಡು ಬಂದರೆ ಮಾಹಿತಿ ನೀಡುವಂತೆ ಪ್ರಕಟಣೆ ಹೊರಡಿಸಿದ CID

    ಬೆಂಗಳೂರು: ಪಿಎಸ್‍ಐ ಅಕ್ರಮದ (PSI Recruitment Scam) ಕಿಂಗ್ ಪಿನ್ ಆರ್.ಡಿ ಪಾಟೀಲ್ (R.D Patil) ಕಂಡು ಬಂದರೆ ಮಾಹಿತಿ ನೀಡುವಂತೆ ಸಿಐಡಿ (CID) ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.

    ಆರ್.ಡಿ ಪಾಟೀಲ್ ಪಿಎಸ್‍ಐ ಅಕ್ರಮದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾನೆ. ಆರ್.ಡಿ ಪಾಟೀಲ್ ವಿರುದ್ಧ ತುಮಕೂರಿನ ಕ್ಯಾತ್ಸಂದ್ರ ಹಾಗೂ ರಾಮೂರ್ತಿ ನಗರದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸದ್ಯ ಆರೋಪಿಯಾಗಿದ್ದಾನೆ. ಸಿಐಡಿ ಪೊಲೀಸರು ಬಂಧಿಸಲು ಹೋದಾಗ ಪೊಲೀಸರ ಕಣ್ತಪ್ಪಿಸಿ ಆರ್.ಡಿ ಪಾಟೀಲ್ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಅಫಜಲಪುರ ಕ್ಷೇತ್ರದ ಜನರು ಮನಸ್ಸು ಮಾಡಿದ್ರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ: ಪಿಎಸ್‌ಐ ಹಗರಣದ ಕಿಂಗ್ ಪಿನ್

    ಎರಡು ಪ್ರಕರಣದಲ್ಲೂ ಆರ್.ಡಿ ಪಾಟೀಲ್‍ಗಾಗಿ ದಸ್ತಗಿರಿ ವಾರೆಂಟ್ ನ್ಯಾಯಾಲಯ ಹೊರಡಿಸಿದೆ. ಪೊಲೀಸರು (Police) ಆರೋಪಿ ಆರ್.ಡಿ ಪಾಟೀಲ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹೀಗಾಗಿ ಆರ್.ಡಿ ಪಾಟೀಲ್ ಕಂಡ ಕೂಡಲೇ ಮಾಹಿತಿ ನೀಡುವಂತೆ ಸಾರ್ವಜನಿಕ ಪ್ರಕಟಣೆಯನ್ನು ಸಿಐಡಿ ಹೊರಡಿಸಿದೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಹಣ ಹಂಚುತ್ತಿದ್ದ ಫೋಟೋ ಬಿಡುಗಡೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜನರು ಕೋವಿಡ್ ಗಂಭೀರವಾಗಿ ತೆಗೆದುಕೊಳ್ಳದಿದ್ರೆ ಸಾವಿನ ಸಂಖ್ಯೆ ತಡೆಯೋಕಾಗಲ್ಲ – ಆರಗ ಜ್ಞಾನೇಂದ್ರ

    ಜನರು ಕೋವಿಡ್ ಗಂಭೀರವಾಗಿ ತೆಗೆದುಕೊಳ್ಳದಿದ್ರೆ ಸಾವಿನ ಸಂಖ್ಯೆ ತಡೆಯೋಕಾಗಲ್ಲ – ಆರಗ ಜ್ಞಾನೇಂದ್ರ

    ಬೆಳಗಾವಿ: ಕೋವಿಡ್-19 (Covid 19) ಬಗ್ಗೆ ಜನ ಗಂಭೀರವಾಗಿ ತೆಗೆದುಕೊಳ್ಳದೇ ಇದ್ರೆ, ಸಾವಿನ ಸಂಖ್ಯೆ ತಡೆಯೋಕಾಗಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಆತಂಕಪಟ್ಟಿದ್ದಾರೆ.

    ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆ ಬೆಳಗಾವಿಯಲ್ಲಿಂದು (Belagavi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಅನ್ನು ಜನ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೇ ಸಾವಿನ ಸಂಖ್ಯೆ ತಡೆಯಲು ಆಗಲ್ಲ. ಯಾರೂ ಆತಂಕ ಪಡಬಾರದು. ಹಾಗೆಯೇ ಉಡಾಫೆ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

    ಈ ಹಿಂದೆ ಪೊಲೀಸ್ ಇಲಾಖೆಯಲ್ಲೂ (Police Department) ಬಹಳ ಜನ ಮೃತಪಟ್ಟರು. ಈ ಬಾರಿ ಕೂಡಾ ಕೋವಿಡ್ ವಿರುದ್ಧ ಹೋರಾಟ ಮಾಡ್ತಾರೆ. ಎಲ್ಲ ರೀತಿಯಲ್ಲೂ ಸೂಚನೆ ಕೊಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾವತ್ತೂ ದನ ಕಾಯದೇ ಇರೋರು, ಸಗಣಿ ಎತ್ತದವರು ಗೋವು ರಕ್ಷಣೆ ಅಂತಾರೆ – ಸಿದ್ದು ಲೇವಡಿ

    ಪಿಎಸ್‌ಐ (PSI) ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪಿಎಸ್‌ಐ ಪರೀಕ್ಷೆ ಬರೆದು ಪಾಸ್ ಆದ ವಿದ್ಯಾರ್ಥಿಗಳ (Students) ಮನವಿ ಸ್ವೀಕರಿಸಿದ್ದೇನೆ. ಆದರೆ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಹಂತದಲ್ಲಿ ಗೃಹ ಸಚಿವನಾಗಿ ನನಗೆ ನಿರ್ಧಾರ ಹೇಳಲು ಕಷ್ಟ ಆಗುತ್ತೆ. ಸಿಒಡಿ ತನಿಖಾ (COD Investigation) ವರದಿ ಬಂದ ಮೇಲೆ ನಮ್ಮ ನಿಲುವು ತಿಳಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾವೇ ಚೀನಾದ ವುಹಾನ್‌ಗೆ ಹೋಗಿ ವೈರಸ್ ಬಿಟ್ಟಿದ್ವಾ – ಕಾಂಗ್ರೆಸ್‌ಗೆ ಸುಧಾಕರ್ ಪ್ರಶ್ನೆ

    ಇದೇ ವೇಳೆ ಲವ್ ಜಿಹಾದ್ (Love Jihad) ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮತಾಂತರ ನಿಷೇಧ ಕಾಯ್ದೆಯಲ್ಲೇ ಲವ್ ಜಿಹಾದ್‌ಗೆ ಸಂಬಂಧಿಸಿದ ಕಾನೂನು ಅಂಶಗಳು ಅಡಕವಾಗಿದೆ. ಆದ್ದರಿಂದ ಏಕಾಏಕಿ ಯಾರು ಯಾರನ್ನೋ ಮದುವೆಯಾಗಲು ಆಗುವುದಿಲ್ಲ. ಸದ್ಯ ರಾಜ್ಯದಲ್ಲಿ ಎರಡು ಲವ್ ಜಿಹಾದ್ ಪ್ರಕರಣಗಳು ದಾಖಲಾಗಿವೆ. ಈಗಿನ ಪರಿಸ್ಥಿತಿಯಲ್ಲಿ ಟಾಸ್ಕ್ ಫೋರ್ಸ್ ಅಗತ್ಯವಿಲ್ಲ. ಏಕೆಂದರೆ ಉತ್ತರ ಪ್ರದೇಶದ ಮಾದರಿ ಬೇರೆ, ನಮ್ಮ ರಾಜ್ಯದ ಮಾದರಿಯೇ ಬೇರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • PSI ಕೇಸ್‍ನಲ್ಲಿ ನಾವು ಯಾರನ್ನು ಬಿಟ್ಟಿಲ್ಲ, ಡಿಐಜಿ ಮುಟ್ಟೋಕೆ ಸಿದ್ದರಾಮಯ್ಯಗೆ ಧಮ್ ಇದ್ಯಾ? : ಬೊಮ್ಮಾಯಿ

    PSI ಕೇಸ್‍ನಲ್ಲಿ ನಾವು ಯಾರನ್ನು ಬಿಟ್ಟಿಲ್ಲ, ಡಿಐಜಿ ಮುಟ್ಟೋಕೆ ಸಿದ್ದರಾಮಯ್ಯಗೆ ಧಮ್ ಇದ್ಯಾ? : ಬೊಮ್ಮಾಯಿ

    ಬೀದರ್: ಪಿಎಸ್‍ಐ ಕೇಸ್‍ನಲ್ಲಿ (PSI case) ನಾವು ಯಾರನ್ನು ಬಿಟ್ಟಿಲ್ಲ, ಡಿಐಜಿ ಮುಟ್ಟುವುಕ್ಕೆ ಸಿದ್ದರಾಮಯ್ಯಗೆ (Siddaramaiah) ಧಮ್ ಇದ್ಯಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರಶ್ನಿಸಿದ್ದಾರೆ.

    ಬೀದರ್‌ (Bidar) ಔರಾದ್‍ನಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ (BJP Sankalpa Yatra) ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಬಳ್ಳಾರಿ ಪಾದಯಾತ್ರೆ ವೇಳೆ ಎಸ್‍ಸಿ, ಎಸ್‍ಟಿಗೆ ಮೀಸಲಾತಿ ಕಾಂಗ್ರೆಸ್ (Congress) ಕೊಡುಗೆ ಎಂದು ರಾಹುಲ್ (Rahul Gandhi)ಹೇಳಿದ್ದಾರೆ. ಆದರೆ ನಿಮಗೆ ಆತ್ಮಸಾಕ್ಷಿ ಇರಬೇಕಲ್ಲ, ಗಂಡು ಮಗು ಹಡೆದರೆ ಪಕ್ಕದ ಮನೆಯವರು ಪೇಡಾ ಹಂಚುತ್ತಿದ್ದರಂತೆ ಎಂದು ವ್ಯಂಗ್ಯವಾಡಿದ್ದಾರೆ.

    ಹಣ ಕೊಟ್ರೆ ನೌಕರಿಗಳು ಸಿಗುತ್ತದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ, ಕಾಂಗ್ರೆಸ್ ಸರ್ಕಾರದಲ್ಲಿ ಆಗಿರುವ ಎಲ್ಲಾ ನೇಮಕಾತಿ ದಾಖಲೆಗಳನ್ನು ರಾಹುಲ್‍ಗೆ ಕಳಿಸಿ ಕೊಡುತ್ತೇನೆ, ಏನು ಮಾಡುತ್ತಾರೋ ನೋಡೋಣ. ಇದು ನನ್ನ ಸವಾಲು, ಟೀಚರ್ ನೇಮಕಾತಿಯಲ್ಲಿ ಅರ್ಜಿ ಹಾಕದೇ ನೌಕರಿ ಕೊಡುವ ಕೆಲಸ ಕಾಂಗ್ರೆಸ್‍ನಲ್ಲಿ ನಡೆದಿದ್ದು, ಪೊಲೀಸ್ ನೇಮಕಾತಿಯಲ್ಲಿ ನಾವು ಈಗಾಗಲೇ 20 ಜನರನ್ನು ಅರೆಸ್ಟ್ ಮಾಡಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಒಂದೇ ಜಡೆ ಹಾಕಿದ್ದಕ್ಕೆ ವಿದ್ಯಾರ್ಥಿನಿಯನ್ನು ಕ್ಲಾಸ್‍ನಲ್ಲಿ ಕೂಡಿ ಹಾಕಿ ಕೂದಲು ಕತ್ತರಿಸಿದ್ರು!

    ಬೀದರ್‌ನಲ್ಲಿ ಕಾಂಗ್ರೆಸ್ ಕಾಲದಲ್ಲಿ ಮಾಡುವುದಕ್ಕೆ ಸಾಧ್ಯವಾಗದ ಅಭಿವೃದ್ಧಿಯನ್ನು ನಾವು ಮಾಡಿದ್ದು, ಬಸವಕಲ್ಯಾಣ ಸಮಗ್ರ ಅಭಿವೃದ್ಧಿಗೆ 500 ಕೋಟಿ, ಬೀದರ್ ಹಾಗೂ ಕಲಬುರಗಿ ಕೋಟೆಗಳಿಗೆ 20 ಕೋಟಿ ನೀಡಿದ್ದೇವೆ. ಈಗಾ 50 ಕೋಟಿ ಬಜೆಟ್‍ನಲ್ಲಿ ಬೀದರ್‌ನಲ್ಲಿ ಸಿಪೆಟ್ ಕಾಮಗಾರಿ ಪೂಜೆ ಕೂಡಾ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಅವರಮ್ಮ ಮದುವೆಯಲ್ಲೂ ಕುಂಕುಮ ಇಟ್ಟಿದ್ರೋ ಇಲ್ವೋ ಗೊತ್ತಿಲ್ಲ- ಸಿ.ಟಿ ರವಿ

    ಕಾಂಗ್ರೆಸ್ ಶಾಸಕರು ಎಲ್ಲರೂ ಜೊಲ್ಲು ಸುರಿಸುತ್ತಿದ್ದು ಹಾಸಿಗೆಯಲ್ಲಿ, ದಿಂಬಿನಲ್ಲಿ ಸೇರಿ ಸಿಕ್ಕ ಸಿಕ್ಕಲ್ಲಿ ಹಣ ಹೊಡೆದಿದ್ದಾರೆ. ಕಾಂಗ್ರೆಸ್ ಅಧಿಕಾರಿ ಬಂದಾಗ ಕಬ್ಬಿನಂತೆ ಇರುತ್ತಾರೆ. ಅಧಿಕಾರ ಹೋದಾಗ ಹತ್ತಿ ಕಟ್ಟಿಗೆ ಇದ್ದಂತೆ, ನಾವು ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್‌ ಇಟ್ಟುಕೊಂಡು ಈ ಬಾರಿ ಮತ ಕೇಳುತ್ತೇವೆ ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಿಎಸ್‍ಐ ಹಗರಣ ಕೇಸ್‌- ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ

    ಪಿಎಸ್‍ಐ ಹಗರಣ ಕೇಸ್‌- ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ

    ಬೆಂಗಳೂರು: ಪಿಎಸ್‍ಐ ನೇಮಕಾತಿ ಹಗರಣದ ತನಿಖೆ ನಡೆಸಿರುವ ಸಿಐಡಿ ಅಧಿಕಾರಿಗಳು ಇಂದು ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್‍ಗೆ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

    ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ 30 ಆರೋಪಿಗಳ ವಿರುದ್ಧ ಈ ದೋಷಾರೋಪ ಪಟ್ಟಿಯಲ್ಲಿ ಮಾಹಿತಿ ಇದೆ. ಇದು ಒಟ್ಟು 3,065 ಪುಟಗಳನ್ನು ಒಳಗೊಂಡಿದೆ. 202 ಸಾಕ್ಷ್ಯಗಳನ್ನು ಪ್ರಸ್ತಾಪಿಸಲಾಗಿದೆ. ಆದರೆ, ಈ ದೋಷಾರೋಪ ಪಟ್ಟಿಯಲ್ಲಿ ಎಡಿಜಿಪಿ ಅಮೃತ್‍ಪೌಲ್ ಹೇಳಿಕೆ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿಲ್ಲ. ಮುಂದಿನ ಚಾರ್ಜ್‍ಶೀಟ್‍ನಲ್ಲಿ ಎಡಿಜಿಪಿ ವಿಚಾರವನ್ನು ಪ್ರಸ್ತಾಪಿಸಲು ಸಿಐಡಿ ಚಿಂತನೆ ನಡೆಸಿದೆ.

    ಪಿಎಸ್‍ಐ ಕೇಸ್‍ನ ಸಿಐಡಿ ಚಾರ್ಜ್‍ಶೀಟ್: 27 ಅಭ್ಯರ್ಥಿಗಳ ಜೊತೆ ಅಮೃತ್‍ಪೌಲ್ ಅಂಡ್ ತಂಡ ಡೀಲ್ ಮಾಡಿಕೊಂಡಿತ್ತು. ತಲಾ 60 ಲಕ್ಷ ಹಣಕ್ಕಾಗಿ ಅಭ್ಯರ್ಥಿಗಳ ಜೊತೆ ಡೀಲ್ ಆಗಿತ್ತು. ಅಮೃತ್‍ಪೌಲ್‍ಗೆ 50% ಹಣ ನೀಡುವ ಬಗ್ಗೆ ಒಪ್ಪಂದವಾಗಿತ್ತು. ಪರೀಕ್ಷೆಗೂ ಮುನ್ನ ತಲಾ 5 ಲಕ್ಷದ ಹಾಗೇ 1.36 ಕೋಟಿ ಅಮೃತ್‍ಪೌಲ್‍ಗೆ ಸಂದಾಯವಾಗಿದೆ.

    27 ಅಭ್ಯರ್ಥಿಗಳಿಂದ ಮುಂಗಡವಾಗಿ ಒಟ್ಟು 3.59 ಕೋಟಿ ಸಂಗ್ರಹವಾಗಿದ್ದು, ಪ್ರಕರಣ ದಾಖಲಾದ ಬಳಿಕ 2.5 ಕೋಟಿ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಎಡಿಜಿಪಿಗೆ ಹಣ ನೀಡಿ ಡಿವೈಎಸ್ಪಿ ಶಾಂತಕುಮಾರ್ ಅವರು ಸ್ಟ್ರಾಂಗ್ ರೂಂ ಕೀ ಪಡೆದಿದ್ದರು. 3 ಗಂಟೆ ಸಿಸಿಟಿವಿ ಆಫ್ ಮಾಡಿ ಓಎಂಆರ್ ಶೀಟ್ ತಿದ್ದಿರುವ ಬಗ್ಗೆ ಉಲ್ಲೇಖವಾಗಿದೆ. ಇದನ್ನೂ ಓದಿ: ಪ್ರತಿ ಜಿಲ್ಲೆಯ ಯುವ ಮೋರ್ಚಾ ಕಾರ್ಯಕರ್ತರಿಂದ ಪ್ರವೀಣ್ ಕುಟುಂಬಕ್ಕೆ ಸಹಾಯ: ತೇಜಸ್ವಿ ಸೂರ್ಯ

    ಪ್ರಕರಣ ಬೆಳಕಿಗೆ ಬಂದ ಬಳಿಕ ಎಡಿಜಿಪಿ ಅಮೃತ್‍ಪೌಲ್ ಡಿವೈಎಸ್‍ಪಿ ಶಾಂತಕುಮಾರ್‌ಗೆ ತಮ್ಮ ಹೆಸರು ಹೇಳಬಾರದೆಂದು ಬೆದರಿಕೆ ಹಾಕಿದ್ದರು. ಇದರ ಜೊತೆಗೆ 27 ಅಭ್ಯರ್ಥಿಗಳ ಓಎಂಆರ್ ಶೀಟ್‍ನ ಎಫ್‍ಎಸ್‍ಎಲ್ ವರದಿಯೂ ಸಲ್ಲಿಕೆ ಆಗಿದೆ. ಇದನ್ನೂ ಓದಿ: ಶಾಲೆಗೆ ಹೋಗುತ್ತಿದ್ದ 12ರ ಬಾಲಕಿ ಮೇಲೆ ಅತ್ಯಾಚಾರ – ಎಸ್ಕೇಪ್ ಆಗ್ತಿದ್ದ ಆರೋಪಿಗೆ ಗುಂಡೇಟು

    Live Tv
    [brid partner=56869869 player=32851 video=960834 autoplay=true]