Tag: PSI

  • ವಂಚಕರ ಪರವಾಗಿ ಪಿಎಸ್‌ಐಗೆ ಕರೆ – ಆಪ್ತನ ಕೇಸ್ ಕಾಂಪ್ರಮೈಸ್‌ಗೆ ಸಚಿವ ಜಮೀರ್ ಒತ್ತಡ ಹೇರಿದ್ರಾ?

    ವಂಚಕರ ಪರವಾಗಿ ಪಿಎಸ್‌ಐಗೆ ಕರೆ – ಆಪ್ತನ ಕೇಸ್ ಕಾಂಪ್ರಮೈಸ್‌ಗೆ ಸಚಿವ ಜಮೀರ್ ಒತ್ತಡ ಹೇರಿದ್ರಾ?

    ಚಿಕ್ಕಬಳ್ಳಾಪುರ: ವಂಚಕರ ಪರವಾಗಿ ಪಿಎಸ್‌ಐಗೆ ಕರೆ ಮಾಡಿ ಸಚಿವ ಜಮೀರ್ ಅಹಮದ್ (Zameer Ahmed) ಪ್ರಭಾವ ಬೀರಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಚಿಕ್ಕಬಳ್ಳಾಪುರದ ದಿಗೂರು ನಿವಾಸಿ, ಪಾಪ್‌ಕಾರ್ನ್ ವ್ಯಾಪಾರಿ ಡಿಎನ್ ರಾಮಕೃಷ್ಣ ಅನ್ನೋವ್ರು ತೆಲಂಗಾಣದ ಹೈದರಾಬಾದ್ ಮೂಲಕದ ಹೆಕೆಜಿಎನ್ ಮುಸ್ಕಾನ್ ಪಾಪ್‌ಕಾರ್ನ್ ಟ್ರೇಡರ್ಸ್ ಮಾಲೀಕರಾದ ಸೈಯದ್ ಅಬ್ದುಲ್ ರಜಾಕ್, ಸೈಯದ್ ಅಬ್ದುಲ್ ಅಕ್ಬರ್‌ಪಾಷ, ನಾಸಿರ್ ಅಹಮದ್ ಎನ್ನುವ ಮೂವರು ಸಹೋದರರಿಗೆ 1.89 ಕೋಟಿ ರೂ. ಮೌಲ್ಯದ ಪಾಪ್‌ಕಾರ್ನ್ ಜೋಳವನ್ನು ಸರಬರಾಜು ಮಾಡಿದ್ದಾರೆ.ಇದನ್ನೂ ಓದಿ: ಮದುವೆಯಾಗೋದಾಗಿ ನಂಬಿಸಿ ಸೆಕ್ಸ್ – ಮತಾಂತರಕ್ಕೆ ಒಪ್ಪದ್ದಕ್ಕೆ ಹಿಂದೂ ಯುವತಿಗೆ ವಂಚಿಸಿದ್ದವ ಅರೆಸ್ಟ್

    ಹೈದರಾಬಾದ್‌ನ ವ್ಯಾಪಾರಿಗಳು, ಖರೀದಿ ಮಾಡಿರುವ ಜೋಳದ ಹಣವನ್ನು ರಾಮಕೃಷ್ಣ ಅವರಿಗೆ ಕೊಟ್ಟಿಲ್ಲ. ಈ ಸಂಬಂಧ ಪೆರೇಸಂದ್ರ ಪೊಲೀಸ್ ಠಾಣೆಗೆ ರಾಮಕೃಷ್ಣ ದೂರು ನೀಡಿದ್ದರು. ಆರೋಪಿ ಸಹೋದರರಲ್ಲಿ ಸೈಯದ್ ಅಬ್ದುಲ್ ಅಕ್ಬರ್‌ಪಾಷರನ್ನು ಬಂಧಿಸಿ ಪಿಎಸ್‌ಐ ರೆಡ್ಡಿ ವಿಚಾರಣೆ ಮಾಡಿದ್ದಾರೆ. ಅಕ್ಟೋಬರ್ 13ರಂದು ಪಿಎಸ್‌ಐಗೆ ಕರೆ ಮಾಡಿರುವ ಸಚಿವ ಜಮೀರ್, ಆರೋಪಿಗೆ ಸಹಾಯ ಮಾಡುವಂತೆ ಹಾಗೂ ಹಣ ನೀಡಲು ಸಮಯಾವಕಾಶ ಕೊಡುವಂತೆ ಪ್ರಭಾವ ಬೀರಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

  • ಯಾದಗಿರಿ | PSI ಆಗಿ 10 ವರ್ಷ ಪೂರೈಸಿದ್ದಕ್ಕೆ ರೌಡಿಶೀಟರ್ ಜೊತೆ ಕೇಕ್ ಕಟ್ – ಫೋಟೋ ವೈರಲ್ ಆಗ್ತಿದ್ದಂತೆ ಸಸ್ಪೆಂಡ್

    ಯಾದಗಿರಿ | PSI ಆಗಿ 10 ವರ್ಷ ಪೂರೈಸಿದ್ದಕ್ಕೆ ರೌಡಿಶೀಟರ್ ಜೊತೆ ಕೇಕ್ ಕಟ್ – ಫೋಟೋ ವೈರಲ್ ಆಗ್ತಿದ್ದಂತೆ ಸಸ್ಪೆಂಡ್

    ಯಾದಗಿರಿ: ಪಿಎಸ್‌ಐ ಆಗಿ 10 ವರ್ಷ ಪೂರೈಸಿದ್ದಕ್ಕೆ ರೌಡಿಶೀಟರ್ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದ ಅಧಿಕಾರಿಯನ್ನು ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ (Pruthvik Shankar) ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಠಾಣೆಯ ಪಿಎಸ್‌ಐ ಆಗಿರುವ ರಾಜಶೇಖರ್ ರಾಠೋಡ್ ಅವರನ್ನು ಅಮಾನತು ಮಾಡಿದ್ದಾರೆ. ಪಿಎಸ್‌ಐ ಆಗಿ ಹತ್ತು ವರ್ಷ ಪೊರೈಸಿದ್ದಕ್ಕೆ ಅದೇ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ನಾಗರಾಜ್ ಜೊತೆ ಕೇಕ್ ಕಟ್ ಮಾಡಿ ಸೆಲೆಬ್ರೇಷನ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಕೂಡ ವೈರಲ್ ಆಗಿತ್ತು. ಸುದ್ದಿ ಪ್ರಸಾರವಾಗುತ್ತಿದ್ದಂತೆ ಯಾದಗಿರಿ ಎಸ್ಪಿ ಅಮಾನತು ಮಾಡಿದ್ದಾರೆ.ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಡಾ.ಪ್ರವೀಣ್ ಸೋನಿ ಜಾಮೀನು ನಿರಾಕರಿಸಿದ ಕೋರ್ಟ್

    ಪೊಲೀಸ್ ಠಾಣೆಯ ಆವರಣದಲ್ಲಿಯೇ ರೌಡಿಶೀಟರ್ ನಾಗರಾಜ ಜೊತೆಗೆ ಶೆಟಲ್ ಕಾಕ್ ಆಡಿದ್ದರು. ಈ ಬಗ್ಗೆ ಇಲಾಖೆಯಿಂದ ತನಿಖೆ ನಡೆಸಲಾಗಿತ್ತು. ತನಿಖೆಯಲ್ಲಿ ಕರ್ತವ್ಯಲೋಪ ಹಾಗೂ ಶಿಸ್ತು ಉಲ್ಲಂಘನೆ ಬಯಲಾಗುತ್ತಿದ್ದಂತೆ ಎಸ್ಪಿ ಪೃಥ್ವಿಕ್ ಶಂಕರ್ ಅಮಾನತು ಮಾಡಿ ಆದೇಶಿಸಿದ್ದಾರೆ.

  • ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ – ಕ್ರೌರ್ಯತೆ ನೆನೆದು ಪಿಎಸ್ಐ ಕಣ್ಣಿರು

    ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ – ಕ್ರೌರ್ಯತೆ ನೆನೆದು ಪಿಎಸ್ಐ ಕಣ್ಣಿರು

    ಚಿಕ್ಕೋಡಿ: 2019ರಲ್ಲಿ ರಾಯಬಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ (Kudachi Police Station) ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮತ್ತು ಆಕೆಯ ಮೇಲೆ ನಡೆದ ಕ್ರೌರ್ಯತೆ ನೆನೆದು ಗ್ರಾಮಸ್ಥರ ಮುಂದೆ ತನಿಖಾಧಿಕಾರಿಯಾಗಿದ್ದ ಪೊಲೀಸ್​ ಇನ್ಸ್​ಪೆಕ್ಟರ್ (PSI)​​ ಗಿರಿಮಲ್ಲಪ್ಪ ಉಪ್ಪಾರ ಅವರು ಕಣ್ಣೀರು ಹಾಕಿದ್ದಾರೆ.

    ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಅಪರಾಧಿಗೆ ಇತ್ತೀಚೆಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ, 10 ಲಕ್ಷ ರೂಪಾಯಿ ದಂಡ ಕಟ್ಟುವಂತೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂತ್ರಸ್ತೆಯ ಗ್ರಾಮದಲ್ಲಿ ಶುಕ್ರವಾರ ಸಂಜೆ ‘ಶಿಕ್ಷೆಗೆ ಸಂಭ್ರಮ, ಮಿಡಿದ ಮನಗಳ ಸಂಗಮ’ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದೇ ವೇಳೆ ಗ್ರಾಮಸ್ಥರೆಲ್ಲರೂ ರಸ್ತೆಯಲ್ಲಿ ಮೊಂಬತ್ತಿ ಹಿಡಿದು ಸಾಗುವ ಮೂಲಕ ಬಾಲಕಿಗೆ ಶ್ರದ್ಧಾಂಜಲಿ ಸಲ್ಲಿಕೆ ಮಾಡಿದರು. ಇದನ್ನೂ ಓದಿ: Darjeeling Flood | 24/7 ಕಂಟ್ರೋಲ್‌ ರೂಮ್‌ ಓಪನ್‌ – ನಾಳೆ ಡಾರ್ಜಿಲಿಂಗ್‌ಗೆ ದೀದಿ ಭೇಟಿ

    ಶ್ರದ್ಧಾಂಜಲಿ ಸಲ್ಲಿಸಿ, ಬಳಿಕ ವೇದಿಕೆಯಲ್ಲಿ ಮಾತನಾಡುವ ವೇಳೆ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಆರೋಪಿಯ ಕ್ರೂರತನ ನೆನೆದು ಭಾವುಕರಾಗಿ ಬಿಕ್ಕಿಬಿಕ್ಕಿ ಅತ್ತರು. ಆವತ್ತು ನಡೆದ ಘಟನೆಯ ಬಗ್ಗೆ ಗ್ರಾಮಸ್ಥರಿಗೆ ವಿವರಿಸಿದರು. ಅಂದು ಪ್ರಕರಣದ ತನಿಖಾಧಿಕಾರಿಯಾಗಿದ್ದ ಗಿರಿಮಲ್ಲಪ್ಪ ಉಪ್ಪಾರ ಸದ್ಯ ಅಥಣಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ನಾಸಾ ಬಾಹ್ಯಾಕಾಶ ಕೇಂದ್ರ ಕಚೇರಿಗೆ ಭೇಟಿ ನೀಡಿದ ಬಸವರಾಜ ಹೊರಟ್ಟಿ, ಯುಟಿ ಖಾದರ್‌

    2019ರ ಸೆಪ್ಟೆಂಬರ್ 10ರಂದು ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಭರತೇಶ ಮಿರ್ಜಿ ಎಂಬಾತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಮನೆಯಿಂದ ಚಾಕೊಲೇಟ್ ತರಲು ಹೊರಟ ಬಾಲಕಿಯನ್ನು ದಾರಿ ಮಧ್ಯದಲ್ಲಿ ತಡೆದ ಭರತೇಶ ಚಾಕೊಲೇಟ್​ ಕೊಡುತ್ತೇನೆ ಬಾ ಎಂದು ಕರೆದುಕೊಂಡು ಹೋಗಿ ತನ್ನ ಮನೆಯಲ್ಲಿ ಅತ್ಯಾಚಾರ ಎಸಗಿದ್ದ. ಬಳಿಕ ಯಾರಿಗೂ ಸಂಶಯಬಾರದ ರೀತಿಯಲ್ಲಿ ಬಾಲಕಿಯ ಸೊಂಟಕ್ಕೆ ಕಲ್ಲು ಕಟ್ಟಿ ಪಕ್ಕದ ಬಾವಿಗೆ ಎಸೆದು ಕೊಲೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ದೃಢವಾಗಿತ್ತು.

    ಈ ಬಗ್ಗೆ ಬೆಳಗಾವಿ ಹೆಚ್ಚುವರಿ ನ್ಯಾಯಾಲಯ ಸುದೀರ್ಘವಾಗಿ ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದೆ. ನ್ಯಾಯಾಧೀಶರಾದ ಸಿ.ಎಂ ಪುಷ್ಪಲತಾ ಅವರು ಈ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸಾರ್ವಜನಿಕ ಅಭಿಯೋಜಕರಾದ ಎಲ್.ವಿ ಪಾಟೀಲ ವಾದ ಮಂಡಿಸಿದ್ದರು. ಇದನ್ನೂ ಓದಿ: ಹೊಳೆನರಸೀಪುರ | ಜಾತಿಗಣತಿಗೆ ತೆರಳುವಾಗ ನಾಯಿಗೆ ಸ್ಕೂಟರ್ ಡಿಕ್ಕಿ – ಶಿಕ್ಷಕಿಗೆ ಗಂಭೀರ ಗಾಯ

  • ಬಳ್ಳಾರಿಯ ಮೋಕಾ ಪಿಎಸ್‌ಐ ಪತ್ನಿ ಆತ್ಮಹತ್ಯೆ

    ಬಳ್ಳಾರಿಯ ಮೋಕಾ ಪಿಎಸ್‌ಐ ಪತ್ನಿ ಆತ್ಮಹತ್ಯೆ

    ಬಳ್ಳಾರಿ: ಪಿಎಸ್‌ಐ ಪತಿ (PSI Wife) ಹಾಗೂ ಇಬ್ಬರು ಮಕ್ಕಳನ್ನ ರೆಡಿ ಮಾಡಿ, ಧ್ವಜಾರೋಹಣಕ್ಕೆ ಕಳಿಸಿದ ಬಳಿಕ ಪಿಎಸ್‌ಐ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ (Ballari) ಜಿಲ್ಲೆಯ ಮೋಕಾದಲ್ಲಿ ನಡೆದಿದೆ.

    ಮೋಕಾ ಪೊಲೀಸ್ ಠಾಣೆಯ (Moka Police Station) ಪಿಎಸ್‌ಐ ಕೆ.ಕಾಳಿಂಗ ಪತ್ನಿ ಚೈತ್ರಾ (36) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಸಹೋದರ ಹಾಗೂ ಇಬ್ಬರು ಸಹೋದರಿಯರ ಸಾವಿನಿಂದ ಚೈತ್ರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ರು ಎನ್ನಲಾಗಿದೆ. ಇದನ್ನೂ ಓದಿ: ನಿಗೂಢ ಸ್ಫೋಟ | ಬಹು ಅಂಗಾಂಗ ಡ್ಯಾಮೇಜ್‌ನಿಂದ ಬಾಲಕ ಸಾವು, ಮತ್ತೊಬ್ಬನಿಗೆ 45% ಸುಟ್ಟ ಗಾಯ – ವೈದ್ಯರ ಪ್ರತಿಕ್ರಿಯೆ

    2 ತಿಂಗಳ ಹಿಂದೆ ಚೈತ್ರಾ ಅವರ ಏಕೈಕ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದ. 2 ವರ್ಷಗಳ ಅಂತರದಲ್ಲಿ ಇದ್ದ ಒಬ್ಬ ಸಹೋದರ ಹಾಗೂ ಇಬ್ಬರು ಸಹೋದರಿಯರು ಮೃತಪಟ್ಟಿದ್ರು. ಹೀಗಾಗಿ ಚೈತ್ರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ರು ಅಂತ ತಿಳಿದುಬಂದಿದೆ. ಇದನ್ನೂ ಓದಿ: ಮಹಾದಾಸೋಹಿ ಶರಣಬಸಪ್ಪ ಅಪ್ಪ ಅಂತಿಮ ದರ್ಶನ ಪಡೆದ ಡಿಕೆಶಿ

    ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಶಿವಮೊಗ್ಗದಲ್ಲಿ (Shivamogga) ಚಿಕಿತ್ಸೆಯನ್ನೂ ಕೊಡಿಸಲಾಗಿತ್ತು. ಚಿಕಿತ್ಸೆ ಕೊಡಿಸಿದ ಬಳಿಕ ನಿನ್ನೆ ಸಂಜೆ ತವರು ಮನೆ ಮಲಪನಗುಡಿಯಿಂದ ಮೋಕಾಗೆ ಬಂದಿದ್ರು. ಮೋಕಾಗೆ ಬಂದಾಗಿನಿಂದ ಪತಿ ಕಾಳಿಂಗ ಹಾಗೂ ಮಕ್ಕಳ ಜೊತೆ ಚೈತ್ರಾ ಚೆನ್ನಾಗಿಯೇ ಇದ್ರು. ಇಂದು ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆ ಬೆಳಗ್ಗೆ ಮಕ್ಕಳನ್ನ ರೆಡಿ ಮಾಡಿದ್ದ ಚೈತ್ರಾ ಪತಿಯ ಜೊತೆ ಧ್ವಜಾರೋಹಣಕ್ಕೆ ಕಳಿಸಿದ್ರು. ಮಕ್ಕಳು ಹಾಗೂ ಗಂಡ ಮನೆಯಿಂದ ಹೊರ ಹೋಗ್ತಿದ್ದಂತೆ ಚೈತ್ರಾ ನೇಣಿಗೆ ಶರಣಾಗಿದ್ದಾರೆ.

    ಪತ್ನಿ ಕಳೆದುಕೊಂಡ ಪತಿ ಕಾಳಿಂಗ ಸೇರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣವನ್ನು ರಾಜಕೀಯಕ್ಕೆ ಬಳಸಲು ಸಾಧ್ಯವಿಲ್ಲ: ಹೆಚ್.ಕೆ ಪಾಟೀಲ್

  • Bengaluru | ಪಿಎಸ್‌ಐ ಹೊಡೆತಕ್ಕೆ ಶಾಶ್ವತ ಕಿವುಡನಾದ ವ್ಯಕ್ತಿ

    Bengaluru | ಪಿಎಸ್‌ಐ ಹೊಡೆತಕ್ಕೆ ಶಾಶ್ವತ ಕಿವುಡನಾದ ವ್ಯಕ್ತಿ

    ಬೆಂಗಳೂರು: ಪಿಎಸ್‌ಐ (PSI) ಹೊಡೆದ ಹೊಡೆತಕ್ಕೆ ಬಾಡಿಗೆದಾರನೊಬ್ಬ ಶಾಶ್ವತ ಕಿವುಡನಾಗಿರೋ ಘಟನೆ ಬೆಂಗಳೂರಿನ ಬೇಗೂರಿನಲ್ಲಿ (Begur) ನಡೆದಿದೆ.

    ಬಾಡಿಗೆದಾರ ಉದಯ್ ಕುಮಾರ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬೇಗೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಪುನೀತ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಪಿಎಸ್‌ಐ ಪುನೀತ್ ಹೊಡೆದ ಹೊಡೆತಕ್ಕೆ ಕಿವುಡನಾಗಿರೋ ಉದಯ್ ಬೇಗೂರು ನಿವಾಸಿಯಾಗಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮನೆ ಖಾಲಿ ಮಾಡುವ ವಿಚಾರಕ್ಕೆ ಬಾಡಿಗೆ ಇದ್ದ ಉದಯ್‌ಗೆ ಬೇಗೂರು ಸಬ್ ಇನ್ಸ್‌ಪೆಕ್ಟರ್ ಪುನೀತ್, ನಿನ್ನ ಮೇಲೆ ದೂರು ಕೊಡಲಾಗಿದೆ, ಠಾಣೆಗೆ ಬಾ ಎಂದು ಕರೆದು ಹಲ್ಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ 10 ವರ್ಷ ಸಿಎಂ ಆಗ್ಬಿಟ್ರೆ ತಾಯಿ ಚಾಮುಂಡಿಗಿಂತ ದೊಡ್ಡವರಾಗಿಬಿಡ್ತಾರೆ: ಪ್ರತಾಪ್‌ ಸಿಂಹ ಕಿಡಿ

    ಪಿಎಸ್‌ಐ ಕೊಟ್ಟ ಹೊಡೆತಕ್ಕೆ ಉದಯ್‌ಗೆ ಕಿವಿ ಕೇಳಿಸದೆ ಶ್ರವಣ ದೋಷವಾಗಿದೆ. ಮೆಡಿಕಲ್ ರಿಪೋರ್ಟ್‌ನಲ್ಲಿ ಕಿವಿ ಕಿವುಡಾಗಿರೋದು ದೃಢವಾಗಿದೆ. ಹಲ್ಲೆಯ ಬಗ್ಗೆ ಕೋರ್ಟ್‌ನಲ್ಲಿ ಹೇಳಿದರೆ ರೌಡಿಶೀಟರ್ ಪಟ್ಟಿ ತೆರೆಯೋದಾಗಿ ಉದಯ್‌ಗೆ ಪಿಎಸ್‌ಐ ಬೆದರಿಸಿದ್ದಾನೆಂದು ಉದಯ್ ಆರೋಪಿಸಿದ್ದಾರೆ. ಕಿವುಡನಾಗಿರೋ ಉದಯ್ ಪರ ಘಟನೆ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ವಕೀಲರು ದೂರು ನೀಡಿದ್ದಾರೆ. ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರ ಮದ್ಯಪ್ರವೇಶ ಮಾಡಿ ಉದಯ್‌ಗೆ ಅನಾವಶ್ಯಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಆರೋಪದಡಿ ದೂರು ಕೊಡಲಾಗಿದೆ. ಇದನ್ನೂ ಓದಿ: ಶಿವಮೊಗ್ಗ To ಮುಂಬೈ – ಮೆದುಳು ಜ್ವರದಿಂದ ಬಳಲುತ್ತಿದ್ದ ಯುವತಿಯ ಏರ್‌ಲಿಫ್ಟ್

    ವೈದ್ಯಕೀಯ ಪರೀಕ್ಷೆ ವೇಳೆ ಎಡಕಿವಿ ಸಂಪೂರ್ಣ ಶ್ರವಣ ದೋಷವಾಗಿರುವ ವರದಿ ಕೂಡ ದೂರಿನ ಜೊತೆ ಸಲ್ಲಿಸಲಾಗಿದೆ. ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪಿಎಸ್‌ಐ ಮೇಲೆ ಕ್ರಮ ಆಗದ ಕಾರಣ ಉದಯ್ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. ಇದನ್ನೂ ಓದಿ: Kolar | ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪ – ಅಪ್ರಾಪ್ತ ವಶಕ್ಕೆ

  • PSI ಗಂಡ ಚೆನ್ನಾಗಿ ನೋಡಿಕೊಳ್ತಿಲ್ಲ ಅಂತಾ ಪತ್ನಿ ನೇಣಿಗೆ ಶರಣು!

    PSI ಗಂಡ ಚೆನ್ನಾಗಿ ನೋಡಿಕೊಳ್ತಿಲ್ಲ ಅಂತಾ ಪತ್ನಿ ನೇಣಿಗೆ ಶರಣು!

    ಬೆಂಗಳೂರು: ಸಬ್‌ ಇನ್ಸ್‌ಪೆಕ್ಟರ್‌ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಚ್‌ಬಿಆರ್‌ ಬಡಾವಣೆಯಲ್ಲಿ (HBR Layout) ನಡೆದಿದೆ.

    ಶಾಲಿನಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸೋಮವಾರ ರಾತ್ರಿ ಹೆಚ್‌ಬಿಆರ್‌ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಿವಿಲ್ ನ್ಯಾಯಾಧೀಶ ಸ್ಥಾನಕ್ಕೆ ನೇಮಕಾತಿಯಾಗಲು ಕನಿಷ್ಠ ಮೂರು ವರ್ಷಗಳ ವಕೀಲಿಕಿ ಅನುಭವ ಕಡ್ಡಾಯ: ಸುಪ್ರೀಂ

    ಪತಿ ನಾಗರಾಜ್‌ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೃತ ಶಾಲಿನಿ ಮೊದಲ ಪತಿಗೆ ವಿಚ್ಛೇದನ ನೀಡಿದ ಬಳಿಕ ನಾಗರಾಜ್‌ ಅವರನ್ನ 2ನೇ ಮದುವೆಯಾಗಿದ್ದರು. ಘಟನೆ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 7 ತಿಂಗಳಲ್ಲಿ 25 ಮದುವೆ; ಅಮಾಯಕರಿಗೆ ಲಕ್ಷಾಂತರ ಹಣ ವಂಚಿಸಿದ್ದ ಖತರ್ನಾಕ್‌ ಲೇಡಿ ಅರೆಸ್ಟ್‌

    ಮೃತ ಶಾಲಿನಿ ಮತ್ತು ಪಿಎಸ್ಐ ನಾಗರಾಜ್‌ ಇಬ್ಬರೂ ಇಳಕಲ್‌ ಮೂಲದವರು. ಹೈಸ್ಕೂಲ್‌ನಲ್ಲಿ ಟ್ಯೂಷನ್‌ಮೆಟ್ಸ್ ಆಗಿದ್ದರು. ನಂತರ ಶಾಲಿನಿ MSc ಹಾಗೂ ನಾಗರಾಜ್‌ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ಇದಾದ ಬಳಿಕ ನಾಗರಾಜ್‌ ಬೆಂಗಳೂರಿನಲ್ಲಿ ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅದೇ ವೇಳೆ ಶಾಲಿನಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಾಗರಾಜ್‌ಗೆ ಪಿಎಸ್‌ಐ ಪರೀಕ್ಷೆ ತಯಾರಿಗೆ ಆರ್ಥಿಕ ಸಹಾಯ ಕೂಡ ಮಾಡುತ್ತಿದ್ದರು. ಹೀಗೆ ಮುಂದುವರಿಯುತ್ತಾ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ನಾಗರಾಜ್ ಪರಿಚಯ ಆದಮೇಲೆ ಮೊದಲ ಪತಿಗೆ ಶಾಲಿನಿ ಡಿವೋರ್ಸ್ ನೀಡಿದ್ದರು. ಸದ್ಯ ಮೃತ ಶಾಲಿನಿಗೆ 7 ವರ್ಷದ ಮಗು ಇದೆ. ಇದನ್ನೂ ಓದಿ: ಬೆಂಗ್ಳೂರು ಜನರು ಬ್ರ್ಯಾಂಡೆಡ್‌ ನರಕದಲ್ಲಿ ನರಳುತ್ತಿದ್ದಾರೆ – ಸರ್ಕಾರದ ವಿರುದ್ಧ ಹೆಚ್‌ಡಿಕೆ ಕಿಡಿ

    2020ರಲ್ಲಿ ಪಿಎಸ್‌ಐ ಎಕ್ಸಾಂ ಪಾಸ್ ಮಾಡಿದ್ದ ನಾಗರಾಜ್, ಶಾಲಿನಿಯನ್ನ ಅವಾಯ್ಡ್‌ ಮಾಡಲು ಶುರು ಮಾಡಿದ್ದನಂತೆ. ಮದುವೆ ಆಗದೆ ಮೋಸ ಮಾಡ್ತಿದ್ದಾನೆ ಅಂತ ಕೋಣನಕುಂಟೆ ಠಾಣೆಯಲ್ಲಿ ನಾಗರಾಜ್ ಮೇಲೆ ಶಾಲಿನಿ ದೂರು ನೀಡಿದ್ಲು. ಆಗ ಹಿರಿಯ ಅಧಿಕಾರಿಗಳು ಇಲಾಖಾ ತನಿಖೆಯನ್ನು ನಡೆಸಿದ್ರಂತೆ. ಬಳಿಕ ಶಾಲಿನಿ ಕುಟುಂಬಸ್ಥರ ವಿರೋಧದ ನಡುವೆ 2024ರ ಆಗಸ್ಟ್ ನಲ್ಲಿ ಶಾಲಿನಿ ನಾಗರಾಜ್ ಮದುವೆ ನಡೆದಿತ್ತು. ಗಂಡ-ಹೆಂಡತಿ HBR ಲೇಔಟ್ ನಲ್ಲಿ ವಾಸವಾಗಿ ಚೆನ್ನಾಗಿ ಸಂಸಾರ ನಡೆಸ್ತಾ ಇದ್ರು. ಆದರೆ ಕಳೆದೆರಡು ತಿಂಗಳಿನಿಂದ ಶಾಲಿನಿ ನಾಗರಾಜ್ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಬೇಸತ್ತು ನಾಗರಾಜ್ ಬೇರೆಡೆ ವಾಸವಿದ್ದ. ಪತಿ ಮನೆಗೆ ಬರುತ್ತಿಲ್ಲವೆಂದು ಕೋಪಗೊಂಡ ಶಾಲಿನಿ ನಿನ್ನೆ‌ ರಾತ್ರಿ ಕರೆ ಮಾಡಿ ರೈಲಿಗೆ ಸಿಕ್ಕಿ ಸಾಯುತ್ತೇನೆಂದು ಹೇಳಿ ಮನೆಯಿಂದ ಹೊರಟ್ಟಿದ್ದರು. ಈ ವೇಳೆ ಹೊಯ್ಸಳ ಸಿಬ್ಬಂದಿ ರಕ್ಷಿಸಿ ಮನೆಗೆ ಬಿಟ್ಟು ತೆರಳಿದ್ರು. ಹೊಯ್ಸಳ ಸಿಬ್ಬಂದಿ ಮನೆಗೆ ಬಿಟ್ಟು ತೆರಳುತ್ತಿದ್ದಂತೆ ಶಾಲಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸದ್ಯ ಪಿ.ಎಸ್.ಐ ನಾಗರಾಜ್ ನನ್ನು ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸ್ತಿದ್ದಾರೆ. ಶಾಲಿನಿ ಕುಟುಂಬಸ್ಥರು ದೂರು ಕೊಟ್ಟ ನಂತರ ಮುಂದಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ.

  • ಚಿತ್ರದುರ್ಗ| ತಡರಾತ್ರಿ ಗುಂಪಾಗಿ ನಿಂತಿದ್ದನ್ನು ಪ್ರಶ್ನಿಸಿದ್ದಕ್ಕೆ ಪಿಎಸ್‌ಐ ಮೇಲೆ ಹಲ್ಲೆ 

    ಚಿತ್ರದುರ್ಗ| ತಡರಾತ್ರಿ ಗುಂಪಾಗಿ ನಿಂತಿದ್ದನ್ನು ಪ್ರಶ್ನಿಸಿದ್ದಕ್ಕೆ ಪಿಎಸ್‌ಐ ಮೇಲೆ ಹಲ್ಲೆ 

    ಚಿತ್ರದುರ್ಗ: ತಡರಾತ್ರಿ ರಸ್ತೆಯಲ್ಲಿ ಗುಂಪಾಗಿ ನಿಂತಿದ್ದನ್ನು ಪ್ರಶ್ನಿಸಿದ ಪಿಎಸ್‌ಐ (PSI) ಮೇಲೆ ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗದ (Chitradurga) ಖಾಸಗಿ ಹೋಟೇಲ್ ಬಳಿ ನಡೆದಿದೆ.

    ಚಿತ್ರದುರ್ಗದ ತುರುವನೂರು (Turuvanur) ರಸ್ತೆಯಲ್ಲಿ ಮಧುಗಿರಿ (Madhugiri) ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ & ಟೀಂ ತಡರಾತ್ರಿಯಲ್ಲಿ ನಿಂತಿದ್ದರು. ಆಗ ಇಷ್ಟೊತ್ತಲ್ಲಿ ರಸ್ತೆಯಲ್ಲಿ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ನಗರಠಾಣೆ ಪಿಎಸ್‌ಐ ಗಾದಿಲಿಂಗಪ್ಪ ಮೇಲೆ ಹನುಮಂತೇಗೌಡ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಅಲ್ಲದೇ ಹಲ್ಲೆ ವೇಳೆ ಪಿಎಸ್‌ಐ ಗಾದಿಲಿಂಗಪ್ಪ ಅವರ ಕೈಬೆರಳಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಹೋಳಿ ಆಚರಣೆ ಬಳಿಕ ಕೆರೆಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ಶವವಾಗಿ ಪತ್ತೆ

    ಹೀಗಾಗಿ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ವೇಳೆ ಪೊಲೀಸರಿಂದಲೇ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಹನುಮಂತೇಗೌಡ ಪ್ರತ್ಯಾರೋಪ ಮಾಡಿದ್ದಾರೆ. ಈ ಬಗ್ಗೆ ಪ್ರತ್ಯಕ್ಷದರ್ಶಿಯಾದ ಹನುಮಂತೇಗೌಡರ ಕಾರಿನ ಚಾಲಕ ರಂಗಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಊಟ ಮುಗಿಸಿ ಹೊರಡುವ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ನಮ್ಮ ಸಾಹೇಬರನ್ನು ಏಕವಚನ ಹಾಗೂ ಅವಾಚ್ಯ ಶಬ್ದದಿಂದ ನಿಂದಿಸಿದರು. ಆಗ ಪಿಎಸ್‌ಐಗೆ ನಮ್ಮ ಸಾಹೇಬರು ಕೂಡ ನಿಂದಿಸಿದ್ದು, ಪರಸ್ಪರ ಹಲ್ಲೆ ನಡೆಸಿದ ಪರಿಣಾಮ ಘಟನೆ ನಡೆಯಿತೆಂದು ತಿಳಿಸಿದ್ದಾರೆ. ಚಿತ್ರದುರ್ಗ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: Gold Smuggling Case| ಪ್ರಭಾವಿ ನಾಯಕನ ಮೇಲೆ ಜರ್ಮನಿ ಟೂರ್ ಬಗ್ಗೆ ಅನುಮಾನ

  • ನ್ಯಾಯ ಕೇಳಿ ಬರುವ ಮಹಿಳೆಯರನ್ನು ಮಂಚಕ್ಕೆ ಕರೆದ ಪಿಎಸ್‌ಐ – ಪತ್ನಿಯಿಂದಲೇ ಗಂಭೀರ ಆರೋಪ

    ನ್ಯಾಯ ಕೇಳಿ ಬರುವ ಮಹಿಳೆಯರನ್ನು ಮಂಚಕ್ಕೆ ಕರೆದ ಪಿಎಸ್‌ಐ – ಪತ್ನಿಯಿಂದಲೇ ಗಂಭೀರ ಆರೋಪ

    – ಪಿಎಸ್‌ಐ ನಿತ್ಯಾನಂದಗೌಡ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್

    ಚಿಕ್ಕಮಗಳೂರು: ನನ್ನ ಪತಿ ಪೊಲೀಸ್ (Police) ಠಾಣೆಗೆ ನ್ಯಾಯ ಕೇಳಿ ಬರುತ್ತಿದ್ದ ಮಹಿಳೆಯರನ್ನು ಮಂಚಕ್ಕೆ ಕರೆದು ಸಿಕ್ಕಿಬಿದ್ದಿದ್ದಾರೆ. ಅಲ್ಲದೇ ನನಗೆ 50 ಲಕ್ಷ ರೂ. ವರದಕ್ಷಿಣೆ (Dowry) ತರುವಂತೆ ಕಿರುಕುಳ ನೀಡುತ್ತಾರೆ ಎಂದು ಕಳಸ (Kalasa) ಪಿಎಸ್‌ಐ ನಿತ್ಯಾನಂದಗೌಡ (PSI Nithyanandagowda) ವಿರುದ್ಧ ಅವರ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ.

    ನಿತ್ಯಾನಂದಗೌಡರ ತಂಗಿ, ತಂಗಿ ಗಂಡನಿಂದಲೂ ಹಲ್ಲೆ, ಅವಾಚ್ಯ ಶಬ್ಧಗಳ ಬಳಕೆ ಮಾಡಿ ನಿಂದಿಸುತ್ತಾರೆ. ಆತ ಕೆಲಸ ಮಾಡಿರುವ ಠಾಣೆಗಳಿಗೆ ಕಷ್ಟ ಎಂದು ಬರುವ ಹಾಗೂ ಪಾಸ್‌ಪೋರ್ಟ್‌ಗೆ ಬರುವ ಮಹಿಳೆಯರನ್ನ ಮಂಚಕ್ಕೆ ಕರೆಯುತ್ತಾರೆ. ಉಡುಪಿಯ ಕಾಪು ಠಾಣೆಯಲ್ಲಿದ್ದಾಗ ಮುಸ್ಲಿಂ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ನಾನು ಅವರ ರೂಂಗೆ ಹೋದಾಗ ಕಾಂಡೋಮ್‌ಗಳು ಪತ್ತೆಯಾಗಿದ್ದವು ಎಂದು ಅವರ ಪತ್ನಿ ಆರೋಪಿಸಿದ್ದಾರೆ.

    ಮುಸ್ಲಿಮರು ಪಿಎಸ್‌ಐಗೆ ಹೊಡೆಯಲು ಬಂದಾಗ ಎಸ್‌ಪಿ ಅವರನ್ನು ರಕ್ಷಿಸಿದ್ದರು. ಕೋಟಾ ಠಾಣೆಯಲ್ಲೂ ಮಹಿಳೆ ನ್ಯಾಯ ಕೊಡಿಸುತ್ತೇನೆ ಎಂದು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಬೆಂಗಳೂರಿನಲ್ಲೂ ಮಹಿಳೆ ಒಬ್ಬಳನ್ನು ಮಂಚಕ್ಕೆ ಕರೆದು ಸಿಕ್ಕಿಬಿದ್ದಿದ್ದರು. ಆ ಮಹಿಳೆಗೆ 4 ಲಕ್ಷ ರೂ. ಹಣ ಕೊಟ್ಟು ಬಚಾವ್ ಆಗಿದ್ದಾರೆ ಎಂದು ಆರೋಪಿಸಿಸಲಾಗಿದೆ.

    ಈ ಸಂಬಂಧ ಪಿಎಸ್‌ಐ ಪತ್ನಿ ನೀಡಿದ ದೂರಿನ ಅಡಿಯಲ್ಲಿ ಕಳಸ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

  • ಪಿಎಸ್ಐ ನೇಮಕ ಅಂತಿಮ ಫಲಿತಾಂಶ ಪ್ರಕಟ – ಕೆಇಎ

    ಪಿಎಸ್ಐ ನೇಮಕ ಅಂತಿಮ ಫಲಿತಾಂಶ ಪ್ರಕಟ – ಕೆಇಎ

    ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI)ನ 402 ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಗುರುವಾರ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

    ಅ. 3ರಂದು ನಡೆದ ಲಿಖಿತ ಪರೀಕ್ಷೆಯಲ್ಲಿ (ಪತ್ರಿಕೆ – 1 ಮತ್ತು 2) ಅಭ್ಯರ್ಥಿಗಳು ಅಂತಿಮವಾಗಿ ಪಡೆದ ಅಂಕಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ (KEA Website) ಪ್ರಕಟಿಸಿದ್ದು, ಈ ಪಟ್ಟಿಯನ್ನು ನೇಮಕಾತಿ ವಿಭಾಗದ ಪೊಲೀಸ್ ಮಹಾನಿರ್ದೇಶಕರಿಗೆ ಹಸ್ತಾಂತರಿಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ (H Prasanna) ತಿಳಿಸಿದ್ದಾರೆ.

    ವ್ಯತ್ಯಾಸ ಇಲ್ಲ:
    ತಾತ್ಕಾಲಿಕ ಅಂಕಪಟ್ಟಿಗೆ ಬಂದ ಎಲ್ಲ ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಈಗಾಗಲೇ ಅಭ್ಯರ್ಥಿಗಳು ಪಡೆದಿರುವ ಅಂಕಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಪತ್ರಿಕೆ-1ಕ್ಕೆ 313 ಹಾಗೂ ಪತ್ರಿಕೆ-2ಕ್ಕೆ 219 ಆಕ್ಷೇಪಣೆಗಳು ಸ್ವೀಕೃತವಾಗಿದ್ದವು. ಪತ್ರಿಕೆ-1ರ ಉತ್ತರ ಪತ್ರಿಕೆಗಳನ್ನು ನಿಯಮ ಪ್ರಕಾರ ಒಂದು ಮತ್ತು ಎರಡನೇ ಮೌಲ್ಯಮಾಪನಕ್ಕೆ ಒಳಪಡಿಸಲಾಗಿದೆ. ಈ ಎರಡೂ ಮೌಲ್ಯಮಾಪನ ಸಂದರ್ಭದಲ್ಲಿ 8 ಅಥವಾ 8ಕ್ಕಿಂತ ಹೆಚ್ಚಿನ ಅಂಕಗಳ ವ್ಯತ್ಯಾಸ ಕಂಡುಬಂದಲ್ಲಿ ಅಂತಹ ಉತ್ತರ ಪತ್ರಿಕೆಗಳನ್ನು 3ನೇ ಮೌಲ್ಯಮಾಪನ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಆಕ್ಷೇಪಣೆ ಬಂದ ಮೇಲೆ ಇವುಗಳನ್ನು ಮತ್ತೊಮ್ಮೆ ಪರಿಶೀಲಿಸಿದ್ದು (ಮರು ಎಣಿಕೆ), ಈಗಾಗಲೇ ಈ ಅಭ್ಯರ್ಥಿಗಳು ಪಡೆದಿರುವುದಾಗಿ ಪ್ರಕಟಿಸಿರುವ ಅಂಕಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರುವುದಿಲ್ಲ. ಹಾಗೆಯೇ ಪತ್ರಿಕೆ-2ರ ಒ.ಎಂ.ಆರ್ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದ್ದು, ಅಲ್ಲಿಯೂ ವ್ಯತ್ಯಾಸ ಕಂಡುಬಂದಿಲ್ಲ. ಹೀಗಾಗಿ ಈ ಆಕ್ಷೇಪಣೆಗಳನ್ನು ಪುರಸ್ಕರಿಸಲು ಅವಕಾಶ ಇರುವುದಿಲ್ಲವೆಂದು ತೀರ್ಮಾನಿಸಲಾಗಿದೆ ಎಂದು ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

  • PSI Selection List | ದೀಪಾವಳಿ ಗಿಫ್ಟ್‌ – 545 ಪಿಎಸ್‌ಐ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

    PSI Selection List | ದೀಪಾವಳಿ ಗಿಫ್ಟ್‌ – 545 ಪಿಎಸ್‌ಐ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

    ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 545 ಪಿಎಸ್‌ಐ ಹುದ್ದೆಗಳ (PSI Post) ನೇಮಕಾತಿಗೆ ತಾತ್ಕಾಲಿಕ ಪಟ್ಟಿಯನ್ನು ರಾಜ್ಯ ಗೃಹ ಇಲಾಖೆ ಸೋಮವಾರ ಪ್ರಕಟಿಸಿದೆ. ಮೂಲಕ ಹುದ್ದೆ ಆಕಾಂಕ್ಷಿಗಳಿಗೆ ದೀಪಾವಳಿಗೂ ಮುನ್ನವೇ ಭರ್ಜರಿ ಉಡುಗೊರೆ ಸಿಕ್ಕಿದೆ.

    ಪಿಎಸ್‌ಐ ಆಯ್ಕೆ ಪಟ್ಟಿಗಾಗಿ ಇಲ್ಲಿ ಕ್ಲಿಕ್‌ ಮಾಡಿ – PSI545_PSL_ENG_v1

    ಈ ಹಿಂದೆ ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆಯಲ್ಲಿ ಆದ ಅಕ್ರಮ ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಇದಾದ ಬಳಿಕ ಹೈಕೋರ್ಟ್‌ (Karnataka highcourt) ನೀಡಿದ್ದ ಸೂಚನೆಯ ಅನ್ವಯ ರಾಜ್ಯ ಸರ್ಕಾರ ಮರು ಪರೀಕ್ಷೆ ನಡೆಸಿತ್ತು. ಆದ್ರೆ ಫಲಿತಾಂಶ ವಿಳಂಬವಾಗಿತ್ತು. ಇದರಿಂದ ರೊಚ್ಚಿಗೆದ್ದ ಅಭ್ಯರ್ಥಿಗಳು ಭಿಕ್ಷೆ ಬೇಡುವ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ರಕ್ತದಲ್ಲಿ ಪತ್ರ ಬರೆದು ಫಲಿತಾಂಶ ಪ್ರಕಟಿಸುಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು.

    ಇದೀಗ ರಾಜ್ಯ ಸರ್ಕಾರ ಅಕ್ಟೊಬರ್ 21ರಂದು ಪಿಎಸ್‌ಐ ನೇರ ನೇಮಕಾತಿಗಳ 01.01.2023ರ ಸುತ್ತೋಲೆಯ ಅನ್ವಯ ಆಯ್ಕೆ ಪಟ್ಟಿ ತಯಾರಿಸಿ ಪ್ರಕಟಗೊಳಿಸಿದೆ.