Tag: provision store

  • ರಾಜಧಾನಿಯಲ್ಲಿ ಆಕ್ಟೀವ್ ಆದ ಗಡಾರಿ ಗ್ಯಾಂಗ್!

    ರಾಜಧಾನಿಯಲ್ಲಿ ಆಕ್ಟೀವ್ ಆದ ಗಡಾರಿ ಗ್ಯಾಂಗ್!

    ಬೆಂಗಳೂರು: ನೆಲಮಂಗಲದ ಗ್ರಾಮಾಂತರ ಪ್ರದೇಶಗಳಲ್ಲಿ ಗ್ಯಾಂಗ್‍ವೊಂದು ಸಣ್ಣದೊಂದು ಗಡಾರಿ ಮೂಲಕ ಯಾರಿಗೂ ಸಂಶಯಬಾರದಂತೆ ಅಂಗಡಿಗಳ ಶೆಟರ್ ಓಪನ್ ಮಾಡಿ ಕಳ್ಳತನ ಮಾಡಿದೆ.

    ನೆಲಮಂಗಲ ತಾಲೂಕಿನ ಬೂದಿಹಾಲ್ ಗ್ರಾಮದ ಸೋಮಣ್ಣ ಎಂಬುವವರ ಬೈಲಾಂಜನೇಯ ಪ್ರಾವಿಷನ್ ಸ್ಟೋರ್ ಶಟರ್ ಮುರಿದು, ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಇನ್ನೂ ಮಧ್ಯರಾತ್ರಿ ಕಾರ್ಯಾಚರಣೆ ನಡೆಸುವ ಮೂವರು ಕಳ್ಳರು ಸಿಸಿ ಕ್ಯಾಮೆರಾ ನೋಡಿಕೊಂಡು ಯಾವುದೇ ಭಯವಿಲ್ಲದೆ ಕಳ್ಳತನ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಜಬ್ ಹೈಡ್ರಾಮಾ – ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಆರು ಯುವಕರು ವಶ

    ಪ್ರಾವಿಷನ್ ಸ್ಟೊರ್‍ನಲ್ಲಿದ್ದ ಹಣ, ತಂಬಾಕು ಉತ್ಪನ್ನ ಹಾಗೂ ಮೊಬೈಲ್ ದೋಚಿ ಕಳ್ಳರು ಪರಾರಿಯಾಗಿದ್ದರೆ. ಕಳ್ಳರ ಕರಾಮತ್ತಿನಿಂದ ಜನರು ಆತಂಕಕ್ಕೆ ಒಳಗಾಗಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಕುತ್ತಿಗೆ ಕೊಯ್ದು ಪ್ರಾವಿಜನ್ ಸ್ಟೋರ್ ಮಾಲೀಕನ ಹತ್ಯೆ

    ಕುತ್ತಿಗೆ ಕೊಯ್ದು ಪ್ರಾವಿಜನ್ ಸ್ಟೋರ್ ಮಾಲೀಕನ ಹತ್ಯೆ

    ಚಿಕ್ಕಬಳ್ಳಾಪುರ: ಕುತ್ತಿಗೆ ಕೊಯ್ದು ಹಾಗೂ ಚಾಕುವಿನಿಂದ ಇರಿದು ಪ್ರಾವಿಜನ್ ಸ್ಟೋರ್ ಮಾಲೀಕನ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಬಳಿ ನಡೆದಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಐಬಸಾಪುರ ಗ್ರಾಮದ ನಿರಂಜನಮೂರ್ತಿ (48) ಕೊಲೆಯಾದ ವ್ಯಕ್ತಿ. ಜಂಗಮಕೋಟೆ ಕ್ರಾಸ್ ನಲ್ಲಿ ಪ್ರಾವಿಜನ್ ಸ್ಟೋರ್ ಇಟ್ಟುಕೊಂಡಿದ್ದ ನಿರಂಜನಮೂರ್ತಿ ಪ್ರತಿ ದಿನ ಐಬಸಾಪುರ ಗ್ರಾಮದಿಂದ ಜಂಗಮಕೋಟೆ ಕ್ರಾಸ್‍ಗೆ ಹೋಗಿ ಬರುತ್ತಿದ್ದ.

    ಪ್ರತಿದಿನ ಸಂಜೆ 07 ಗಂಟೆಗೆ ವೇಳೆಗೆ ಮನೆಗೆ ಬರುತ್ತಿದ್ದ ನಿರಂಜನಮೂರ್ತಿ ನಿನ್ನೆ ರಾತ್ರಿ ಮನೆಗೆ ಬಂದಿಲ್ಲ. ಮನೆಯವರು ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಅನುಮಾನಗೊಂಡ ಅವರು ಬೆಳಗ್ಗೆ ಹುಡುಕಾಟ ಆರಂಭಿಸಿದ್ದರು, ಈ ವೇಳೆ ನಿರಂಜನಮೂರ್ತಿ ಬೈಕ್ ಪೆಟ್ರೋಲ್ ಬಂಕ್ ಬಳಿಯ ಚರ್ಚ್ ಬಳಿ ಪತ್ತೆಯಾಗಿತ್ತು.

    ಕೂಡಲೇ ಅನುಮಾನಗೊಂಡು ಸುತ್ತ ಸುತ್ತಲೂ ನಿರ್ಜನ ಪ್ರದೇಶಗಳಲ್ಲಿ ಹುಡುಕಾಡಿದಾಗ ಜಂಗಮಕೋಟೆ ಹೊಸಕೋಟೆ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ಸದ್ಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಹಣಕ್ಕಾಗಿ ಅಥವಾ ಹಳೇ ದ್ವೇಷದ ಹಿನ್ನೆಲೆ ಕೊಲೆ ಮಾಡಿರಬಹುದಾ ಎಂಬ ಸಂಶಯ ಮೂಡಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 100 ರೂ. ಹೆಚ್ಚಿಗೆ ಸಿಗುತ್ತೆ ಅನ್ನೋ ಆಸೆಗೆ ಹೋಯ್ತು 70 ಸಾವಿರ ಹಣ!

    100 ರೂ. ಹೆಚ್ಚಿಗೆ ಸಿಗುತ್ತೆ ಅನ್ನೋ ಆಸೆಗೆ ಹೋಯ್ತು 70 ಸಾವಿರ ಹಣ!

    ಬೆಂಗಳೂರು: ನೂರು ರೂಪಾಯಿ ಹೆಚ್ಚಿಗೆ ಸಿಗುತ್ತೆ ಅಂತ ಆಸೆಬಿದ್ದ ಪ್ರಾವಿಷನ್ ಸ್ಟೋರ್ ಮಹಿಳೆಗೆ 70 ಸಾವಿರ ಹಣ ನಾಮ ಹಾಕಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

    ಡಬಲ್ ರೇಟ್ ಬೇಕಾದರೂ ಕೊಡುತ್ತೀನಿ ಎಂದು ಪ್ರಾವಿಷನ್ ಸ್ಟೋರ್ ಮಹಿಳೆಗೆ ವಂಚನೆ ಮಾಡಲಾಗಿದೆ. ಹೆಚ್ಚಿಗೆ ಹಣ ನೀಡುವ ಆಸೆ ತೋರಿಸಿ ಖರ್ತನಾಕ್ ಜೋಡಿ ತಮ್ಮ ಕೈ ಚಳಕ ತೋರಿಸಿದ್ದಾರೆ.

    ಗಾರ್ವೆಭಾವಿ ಪಾಳ್ಯದ ಪೂಜಾ ಪ್ರಾವಿಷನ್ ಸ್ಟೋರ್ ಗೆ ಆರೋಪಿ  ಬಂದಿದ್ದಾನೆ. ಅಂಗಡಿಯಲ್ಲಿ ಊಟದ ಎಲೆ ಹಾಗೂ ಪೇಪರ್ ಗ್ಲಾಸ್ ಕೇಳಿದ್ದಾನೆ. ಅಂಗಡಿಯಲ್ಲಿ ನೂರು ಊಟದ ಪ್ಲೇಟ್ ಖರೀದಿಸಿ ಮೊದಲಿಗೆ 2 ಸಾವಿರ ನೀಡಿದ್ದಾನೆ. ಆಗ ಮಹಿಳೆ ಚಿಲ್ಲರೆ ಇಲ್ಲ ಅಂದಿದ್ದಕ್ಕೆ ನೂರು ಪೇಪರ್ ಗ್ಲಾಸ್ ಕೊಡಿ ಎಂದಿದ್ದಾನೆ. ಆಗ ಪ್ರಾವಿಷನ್ ಸ್ಟೋರ್ ನಲ್ಲಿ ಪೇಪರ್ ಗ್ಲಾಸ್ ಇಲ್ಲ, ಊಟದ ಪ್ಲೇಟಿನ ಹಣ ಕೊಡಿ ಎಂದು ಓನರ್ ಕೇಳಿದ್ದಾರೆ. ಈ ವೇಳೆ ಆರೋಪಿ ಪಕ್ಕದ ಅಂಗಡಿಯಿಂದಾದರೂ ಪೇಪರ್ ಗ್ಲಾಸ್ ತಂದುಕೊಡಿ, ಬೇಕಿದ್ದರೆ ನೀವು ಹೆಚ್ಚಿಗೆ ಹಣ ತೆಗೆದುಕೊಳ್ಳಿ ಎಂದಿದ್ದಾನೆ.

    ಆರೋಪಿಯ ಮಾತನ್ನ ನಂಬಿ ಎದುರು ರಸ್ತೆಯ ಅಂಗಡಿಗೆ ಮಹಿಳೆ ತೆರಳಿದ್ದಾರೆ. ಈ ವೇಳೆ ಮಾರ್ಗಮಧ್ಯೆ ಅಪರಿಚಿತ ಮಹಿಳೆಯೊಬ್ಬಳು ಅಡ್ರೆಸ್ ಕೇಳುವ ನೆಪದಲ್ಲಿ ಅಂಗಡಿಯಾಕೆಯ ಜೊತೆ ಮಾತಿಗೆ ಇಳಿದಿದ್ದಾಳೆ. ಆಗ ಅಂಗಡಿ ಬಳಿಯಿದ್ದ ಪ್ರಮುಖ ಆರೋಪಿ, ಪ್ರಾವಿಷನ್ ಸ್ಟೋರ್ ಕ್ಯಾಶ್ ಬ್ಯಾಗ್‍ನಲ್ಲಿದ್ದ 70 ಸಾವಿರ ಹಣ ಎಗರಿಸಿ ಎಸ್ಕೇಪ್ ಆಗಿದ್ದಾನೆ.

    ಸದ್ಯಕ್ಕೆ ಅಂಗಡಿ ಮಾಲೀಕೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಖರ್ತನಾಕ್ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಹಾಡಹಗಲೇ ಅಂಗಡಿಗೆ ನುಗ್ಗಿ ಯುವಕನ ಕೊಚ್ಚಿ ಬರ್ಬರ ಹತ್ಯೆ

    ಹಾಡಹಗಲೇ ಅಂಗಡಿಗೆ ನುಗ್ಗಿ ಯುವಕನ ಕೊಚ್ಚಿ ಬರ್ಬರ ಹತ್ಯೆ

    ಮಂಡ್ಯ: ಹಾಡಹಗಲೇ ಅಂಗಡಿಗೆ ನುಗ್ಗಿ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ನಡೆದಿದೆ.

    ಹಲಗೂರಿನಲ್ಲಿ ಪ್ರಾವಿಜನ್ ಸ್ಟೋರ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ರಾಮು (30) ಕೊಲೆಯಾದ ಯುವಕ. ಈ ಕೊಲೆ ನಡೆಯುತ್ತಿರುವ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್ ಫೋನ್‍ನಲ್ಲಿ ವಿಡಿಯೋ ಮಾಡಿದ್ದು, ಅಂಗಡಿಯೊಳಗೆ ಯುವಕನನ್ನು ಮನಬಂದಂತೆ ಕೊಚ್ಚುತ್ತಿರುವುದು ಕಂಡುಬಂದಿದೆ.

    ಇಂದು ಬೆಳಗ್ಗೆ ಬಂದು ಅಂಗಡಿ ತೆರೆದ ರಾಮು ಎಂದಿನಂತೆ ವ್ಯಾಪಾರ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಅಂಗಡಿಯೊಳಗೆ ಬಂದ ನಾಲ್ವರು ದುಷ್ಕರ್ಮಿಗಳು ಮಚ್ಚು, ಲಾಂಗ್‍ನಿಂದ ರಾಮುವನ್ನು ಕೊಚ್ಚಿಹಾಕಿದ್ದಾರೆ. ಈ ವೇಳೆ ಅಂಗಡಿಯ ಹೊರಗೆ ನಿಂತುಕೊಂಡ ಮತ್ತೊಬ್ಬ ಸಾರ್ವಜನಿಕರನ್ನು ಹತ್ತಿರ ಬಾರದಂತೆ ಬೆದರಿಕೆ ಹಾಕಿದ್ದಾನೆ.

    ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಮುವನ್ನು ಸ್ಥಳೀಯರು ತಕ್ಷಣ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ತೀವ್ರ ರಕ್ತ ಸ್ರಾವ ಆಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಹಲಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

  • ಪ್ರಾವಿಷನ್ ಸ್ಟೋರ್ ನಲ್ಲಿ ಅಗ್ನಿ ಅವಘಡ- 7 ಲಕ್ಷ ರೂ. ನಷ್ಟ

    ಪ್ರಾವಿಷನ್ ಸ್ಟೋರ್ ನಲ್ಲಿ ಅಗ್ನಿ ಅವಘಡ- 7 ಲಕ್ಷ ರೂ. ನಷ್ಟ

    ಮಂಡ್ಯ: ಗುರುವಾರ ರಾತ್ರಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದಾಗಿ ಪ್ರಾವಿಷನ್ ಸ್ಟೋರ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆ ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಬೆಸಗರಹಳ್ಳಿ ಗ್ರಾಮದ ನಿವಾಸಿ ಕಿರಣ್ ಎಂಬವರಿಗೆ ಸೇರಿದ್ದ ಖುಷಿ ಪ್ರಾವಿಷನ್ ಸ್ಟೋರ್ ಬೆಂಕಿಗಾಹುತಿಯಾಗಿದೆ. ರಾತ್ರಿ ಅಂಗಡಿ ಮುಚ್ಚಿದ ಬಳಿಕ ಅಗ್ನಿ ಅವಘಡ ಸಂಭವಿಸಿದೆ. ಬ್ಯಾಂಕ್‍ನಿಂದ ಸಾಲ ಪಡೆದು ಮತ್ತು ಕೈಸಾಲ ಮಾಡಿ ಕಿರಣ್ ಅಂಗಡಿಯನ್ನು ನಡೆಸುತ್ತಿದ್ದರು. ಈ ಒಂದು ವಿದ್ಯುತ್ ಅವಘಡದಿಂದ ಸುಮಾರು 7 ಲಕ್ಷ ರೂ. ನಷ್ಟವಾಗಿದೆ. ಅಲ್ಲದೆ ಅಪಾರ ಪ್ರಮಾಣದ ಆಹಾರ ಪದಾರ್ಥಗಳು ಸುಟ್ಟುಹೋಗಿದೆ.

    ಕಿರಣ್ ಅವರ ಕುಟುಂಬದ ನಿರ್ವಹಣೆಗೆ ಈ ಅಂಗಡಿಯೇ ಆಧಾರವಾಗಿತ್ತು. ಹೀಗಾಗಿ ನನಗೆ ಪರಿಹಾರ ಕೊಡಿಸಬೇಕೆಂದು ಮಾಲೀಕ ಕಿರಣ್ ಮನವಿ ಮಾಡಿದ್ದಾರೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ ಪರಿಣಾಮ ಹೆಚ್ಚಿನ ಅವಘಡ ತಪ್ಪಿದೆ ಎಂದು ಸ್ಥಳೀಯರು ಹೇಳಿದ್ದಾರೆ.

    ಘಟನೆ ಕುರಿತು ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರಾಯಚೂರು: ಅಗ್ನಿ ಅವಘಡದಿಂದ ಕಿರಾಣಿ ಅಂಗಡಿ ಭಸ್ಮ

    ರಾಯಚೂರು: ಶಾರ್ಟ್ ಸರ್ಕ್ಯೂಟ್ ನಿಂದ ಕಿರಾಣಿ ಅಂಗಡಿಯೊಂದು ಹೊತ್ತಿ ಉರಿದ ಘಟನೆ ನಗರದ ಬಸವನಬಾವಿ ವೃತ್ತದ ಬಳಿ ನಡೆದಿದೆ.

    ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆ ಈ ಅವಘಢ ಸಂಭವಿಸಿದ್ದು, ಅಂಗಡಿಯಲ್ಲಿನ ವಸ್ತುಗಳೆಲ್ಲಾ ಸುಟ್ಟು ಹೋಗಿವೆ. ಅಶೋಕ್ ಎಂಬವರಿಗೆ ಸೇರಿದ ಕಿರಾಣಿ ಅಂಗಡಿ ಇದಾಗಿದ್ದು, ಅಂಗಡಿಯಲ್ಲಿನ ಪೀಠೋಪಕರಣ, ದವಸ ಧಾನ್ಯ ಸೇರಿ ಅಂದಾಜು 4 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯ ಪ್ರಖರತೆಗೆ ಅಂಗಡಿಯ ಕಟ್ಟಡ ಬಿರುಕು ಬಿಟ್ಟಿದೆ. ಅದೃಷ್ಟವಶಾತ್ ಅಂಗಡಿ ಮೇಲಿನ ಮನೆಯಲ್ಲಿದ್ದ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ.

    ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನ ನಂದಿಸಿದ್ದು, ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರೀ ಪ್ರಮಾಣದ ಹಾನಿಯಾಗಿರುವುದರಿಂದ ಸರ್ಕಾರ ಪರಿಹಾರ ನೀಡಬೇಕು ಎಂದು ಅಂಗಡಿ ಮಾಲೀಕ ಅಶೋಕ್ ಕುಮಾರ್ ಮನವಿ ಮಾಡಿದ್ದಾರೆ.