Tag: Protocol

  • ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕರ ಹೆಸರು ಹಾಕದೇ ಪ್ರೋಟೋಕಾಲ್‌ ಉಲ್ಲಂಘನೆ – ಶಾಸಕ ಕೆ.ಸಿ ರಾಮಮೂರ್ತಿ ದೂರು

    ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕರ ಹೆಸರು ಹಾಕದೇ ಪ್ರೋಟೋಕಾಲ್‌ ಉಲ್ಲಂಘನೆ – ಶಾಸಕ ಕೆ.ಸಿ ರಾಮಮೂರ್ತಿ ದೂರು

    ಬೆಂಗಳೂರು: ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕರಿಗೆ ಆಹ್ವಾನ ನೀಡದೇ ಶಿಷ್ಟಾಚಾರ (Protocol) ಉಲ್ಲಂಘನೆ ಮಾಡಲಾಗಿದೆ ಅಂತ ಜಯನಗರ ಶಾಸಕ ಕೆ.ಸಿ ರಾಮಮೂರ್ತಿ (KC Ramamurthy) ಸ್ಪೀಕರ್‌ಗೆ ದೂರು ನೀಡಿದ್ದಾರೆ.

    ವಿಧಾನಸೌಧದಲ್ಲಿ ಸ್ಪೀಕರ್‌ಗೆ ದೂರು ಕೊಟ್ಟ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಆಗಸ್ಟ್‌ 5 ರಂದು ಗೃಹಜ್ಯೋತಿ (Gruhajyothi Scheme) ಉದ್ಘಾಟನೆ ಕಾರ್ಯಕ್ರಮ ಇದೆ. ಸಿಎಂ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ಶಿಷ್ಟಾಚಾರದ ಪ್ರಕಾರ ಎಲ್ಲಾ ಶಾಸಕರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇರಬೇಕು. ಆದ್ರೆ ನನ್ನ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇಲ್ಲ. ಶಾಸಕರ ಹೆಸರು ಹಾಕದೇ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಅಂತ ಆರೋಪ ಮಾಡಿದ್ರು. ಇದನ್ನೂ ಓದಿ: ಬಿಜೆಪಿ ಶಾಸಕರ ಅಮಾನತು ಕ್ರಮ ಅಕ್ಷಮ್ಯ; ಮುಳ್ಳು ಚುಚ್ಚಿದ್ದಕ್ಕೆ ಕಾಲು ಕತ್ತರಿಸಿಕೊಂಡಂತೆ: ಕಾಗೇರಿ

    ಅನ್ನಭಾಗ್ಯ ಯೋಜನೆ (Anna Bhagya Scheme) ಉದ್ಘಾಟನೆ ವೇಳೆಯೂ ನನ್ನ ಹೆಸರು ಹಾಕಿರಲಿಲ್ಲ. ಗೋಪಾಲಯ್ಯ ಅವರಿಗೂ ಹೀಗೆ ಮಾಡಿದ್ರು. ಈಗ ನನ್ನ ಹೆಸರು ಹಾಕಿಲ್ಲ. ಹೀಗಾಗಿ ಸ್ಪೀಕರ್‌ಗೆ ದೂರು ನೀಡಿದ್ದೇನೆ. ಇಂತಹ ಕೆಲಸ ಮಾಡಿರೋ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸ್ಪೀಕರ್ ಗೆ ದೂರು ನೀಡಿದ್ದೇನೆ. ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡುವಂತೆ ಸ್ಪೀಕರ್ ಗೆ ಮನವಿ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ ಅಪಘಾತಗಳ‌ ನಿಯಂತ್ರಣಕ್ಕೆ ಗಡ್ಕರಿಗೆ ಸಿದ್ದರಾಮಯ್ಯ ಮನವಿ

    ಬಿಜೆಪಿಯಿಂದ ಗೆದ್ದ ಶಾಸಕರಿಗೆ ಹೀಗೆ ಮಾಡ್ತಿದ್ದಾರೆ. ಉದ್ದೇಶ ಪೂರ್ವಕವಾಗಿ ಹೀಗೆ ಸರ್ಕಾರ ಮಾಡುತ್ತಿದೆ ಅನ್ನಿಸುತ್ತೆ. ಲೋಪ ಸರಿ ಮಾಡಿ ಹೊಸ ಆಹ್ವಾನ ಪತ್ರಿಕೆ ಮುದ್ರಿಸಬೇಕು. ಇಲ್ಲದೆ ಹೋದ್ರೆ ಆಗಸ್ಟ್ 5 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿಭಟನೆ ಮಾಡ್ತೀನಿ ಅಂತ ಜಯನಗರ ಬಿಜೆಪಿ ಶಾಸಕ ರಾಮಮೂರ್ತಿ ಎಚ್ಚರಿಕೆ ನೀಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಶದಲ್ಲಿ ಕೊರೊನಾ ಏರಿಕೆ – ವಿಮಾನ ಪ್ರಯಾಣದ ವೇಳೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಿ: ಡಿಜಿಸಿಎ

    ದೇಶದಲ್ಲಿ ಕೊರೊನಾ ಏರಿಕೆ – ವಿಮಾನ ಪ್ರಯಾಣದ ವೇಳೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಿ: ಡಿಜಿಸಿಎ

    ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಹಾಗಾಗಿ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್-19 ನಿಯಮ ಪಾಲನೆ ಮಾಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.

    ವಿದೇಶದಿಂದ ಆಗಮಿಸುವವರು ಮತ್ತು ಭಾರತದಿಂದ ವಿದೇಶಕ್ಕೆ ತೆರಳುವವರು ವಿಮಾನದಲ್ಲಿ ಪ್ರಯಾಣಿಸುವ ಮುನ್ನ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಪ್ರತಿಯೊಬ್ಬ ಪ್ರಯಾಣಿಕರಿಗೂ ರ್‍ಯಾಂಡಮ್ ಆಗಿ ಕೊರೊನಾ ಟೆಸ್ಟ್ ಮಾಡಿ. ಮಾಸ್ಕ್‌ಗಳನ್ನು ಪ್ರಯಾಣದ ವೇಳೆ ಬಳಸುವಂತೆ ಪ್ರಯಾಣಿಕರಿಗೆ ತಿಳಿಸಿ ಎಂದು ಡಿಜಿಸಿಎ ವಿಮಾನಯಾನ ಸಂಸ್ಥೆಗಳಿಗೆ ಸ್ಪಷ್ಟವಾಗಿ ತಿಳಿಸಿದೆ. ಇದನ್ನೂ ಓದಿ: ನಮ್ಮದು ಬೆಸ್ಟ್‌ ಡೀಲ್‌ – ರಷ್ಯಾದಿಂದ ತೈಲ ಖರೀದಿಗೆ ಜೈಶಂಕರ್‌ ಸಮರ್ಥನೆ

    ದೇಶದಲ್ಲಿ ಇಂದು ಒಟ್ಟು 9,062 ಕೊರೊನಾ ಪಾಸಿಟಿವ್ ಕೇಸ್‍ಗಳು ದಾಖಲಾಗಿದೆ. ಈ ಮೂಲಕ ಈವರೆಗೆ ದೇಶದಲ್ಲಿ ಒಟ್ಟು 4,42,86,256 ಕೊರೊನಾ ಕೇಸ್ ವರದಿಯಾಗಿದೆ. ಅಲ್ಲದೇ 1,05,058 ಸಕ್ರಿಯ ಪ್ರಕರಣಗಳು ದೇಶದಲ್ಲಿದೆ ಎಂದು ಕೆಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಬುಲೆಟಿನ್‍ನಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

    Live Tv
    [brid partner=56869869 player=32851 video=960834 autoplay=true]

  • ದೂರು ಪರಿಹರಿಸಿ, ಇಲ್ಲವೇ ದಂಡ ಪಾವತಿಸಿ – ಒಲಾ, ಉಬರ್‌ಗಳಿಗೆ ಸರ್ಕಾರ ವಾರ್ನಿಂಗ್

    ದೂರು ಪರಿಹರಿಸಿ, ಇಲ್ಲವೇ ದಂಡ ಪಾವತಿಸಿ – ಒಲಾ, ಉಬರ್‌ಗಳಿಗೆ ಸರ್ಕಾರ ವಾರ್ನಿಂಗ್

    ನವದೆಹಲಿ: ಕ್ಯಾಬ್ ಕಂಪನಿಗಳಾದ ಓಲಾ, ಉಬರ್‌ಗಳಿಗೆ ಬೇಡಿಕೆ ಹೆಚ್ಚಿದಂತೆ ದೂರುಗಳು ಬರಲು ಪ್ರಾರಂಭಿಸಿವೆ. ಆದ್ದರಿಂದ ದೂರುಗಳನ್ನು ಪರಿಹರಿಸಿ, ಇಲ್ಲವೇ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನಿಡಿರುವ ಕೇಂದ್ರ ಸರ್ಕಾರ, ನ್ಯಾಯಯುತ ಬೆಲೆ ನಿಗದಿ ಮಾಡಲು ಮುಂದಾಗಿದೆ. ಅದಕ್ಕಾಗಿ ಕ್ಯಾಬ್ ಕಂಪನಿಗಳಿಗೆ ಮಾರ್ಗಸೂಚಿ ನೀಡಲಾಗುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ.

    Uber-1-768x576

    ಈಗಾಗಲೇ ಕೇಂದ್ರ ಮತ್ತು ರಾಜ್ಯ ಸಾರಿಗೆ ಇಲಾಖೆಗಳ ಮಾರ್ಗ ಸೂಚಿಗಳು ಭಿನ್ನವಾಗಿರುತ್ತವೆ. ಮಾಹಿತಿಯ ಪ್ರಕಾರ, ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿಗದಿತ ಗಡುವುಗಳೊಂದಿಗೆ ಗ್ರಾಹಕರ ದೂರುಗಳ ಪರಿಹಾರಕ್ಕಾಗಿ ಮಾರ್ಗಸೂಚಿಗಳನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಗ್ರಾಹಕರ ದೂರುಗಳನ್ನು ಕಟ್ಟುನಿಟ್ಟಾಗಿ ಪರಿಹರಿಸಲು ನಾವು ಕ್ಯಾಬ್ ಕಂಪನಿಗಳನ್ನು ಕೇಳಿದ್ದೇವೆ. ಗ್ರಾಹಕರ ಕುಂದುಕೊರತೆಗಳ ಪರಿಹಾರಕ್ಕೆ ತಕ್ಷಣವೇ ಸಂಭಾವ್ಯ ಪರಿಹಾರಗಳೊಂದಿಗೆ ಬರಲು ನಾವು ಅವರಿಗೆ ಎಚ್ಚರಿಕೆ ನೀಡಿದ್ದೇವೆ ಇಲ್ಲದಿದ್ದರೆ ಸಕ್ಷಮ ಪ್ರಾಧಿಕಾರವು ಅವರ ವಿರುದ್ಧ ಶಿಕ್ಷಾರ್ಹ ಕ್ರಮವನ್ನು ತೆಗೆದುಕೊಳ್ಳುತ್ತದೆ. ಮುಖ್ಯವಾಗಿ ಡೆಸ್ಟಿನೇಶನ್ ಜೊತೆ ರದ್ದತಿ ಶುಲ್ಕದ ಪ್ರಕಾರ ದರವು ಎಷ್ಟು ನ್ಯಾಯಯುತ ಮತ್ತು ಸಮಂಜಸವಾಗಿದೆ ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

    uber cab

    ಏರುತ್ತಿರುವ ಇಂಧನ ಬೆಲೆ ಪ್ರತಿ ವಿರುದ್ಧ ಪ್ರತಿಭಟಿಸಿ ಹಲವಾರು ಆಟೋ ಮತ್ತು ಕ್ಯಾಬ್ ಚಾಲಕರು ಮುಷ್ಕರಕ್ಕೆ ಕರೆ ನೀಡಿದ್ದರಿಂದ ದೆಹಲಿಯಲ್ಲಿ ಕಳೆದ ತಿಂಗಳು ಪ್ರಯಾಣಿಕರು ತೊಂದರೆಗಳನ್ನು ಎದುರಿಸಿದರು. ಇಂಧನ ಬೆಲೆ ಏರಿಕೆ ಮತ್ತು ಕಡಿಮೆ ಕಮಿಷನ್‌ಗಳ ಸಮಸ್ಯೆಯಿಂದ ಕ್ಯಾಬ್ ಚಾಲಕರು `ನೋ ಎಸಿ’ ನೀತಿಯನ್ನು ಅಳವಡಿಸಿಕೊಂಡಿದ್ದರಿಂದ ಕ್ಯಾಬ್ ಕಂಪನಿಗಳು ಓಲಾ ಮತ್ತು ಉಬರ್ ಕೂಡ ಟೀಕೆಗೆ ಗುರಿಯಾಗಿದ್ದಾರೆ. ಪಶ್ಚಿಮ ಬಂಗಾಳ, ನವದೆಹಲಿ, ನೋಯ್ಡಾ ಮತ್ತು ತೆಲಂಗಾಣ ನಂತರ, ಬೆಂಗಳೂರಿನ ಕ್ಯಾಬ್ ಚಾಲಕರೂ ಈ ಭೀತಿಯನ್ನು ಎದುರಿಸುತ್ತಿದ್ದು ಏಪ್ರಿಲ್ ಆರಂಭದಿಂದ `ನೋ ಎಸಿ’ (ಹವಾನಿಯಂತ್ರಕ) ನೀತಿಯನ್ನು ಪ್ರಾರಂಭಿಸಿದರು. ಇದನ್ನೂ ಓದಿ: ಯುವಮೋರ್ಚಾ ಸಭೆಯಲ್ಲಿ ದ್ರಾವಿಡ್ ಭಾಗಿಯಾಗಲಿದ್ದಾರೆ: ಬಿಜೆಪಿ ಶಾಸಕ

    ಪೆಟ್ರೋಲ್ ಬೆಲೆ 100 ಗಡಿ ದಾಟಿದ ನಂತರ ಓಲಾ, ಉಬರ್ ಬಳಕೆದಾರರು ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ಕೇಳಲು ಮುಂದಾಗಿದ್ದಾರೆ. ಇದಕ್ಕಾಗಿ ಕೋವಿಡ್ ನಿಯಮಗಳನ್ನೂ ಉಲ್ಲಂಘಿಸಿದ್ದಾರೆ ಎಂದು ವರದಿಯಾಗಿದೆ.

    ಲಾಕ್‌ಡೌನ್‌ನಿಂದ ತಮ್ಮ ಊರುಗಳಿಗೆ ಹೋದ ಎಷ್ಟೋ ರೈಡರ್‌ಗಳು, ಕ್ಯಾಬ್ ಬಳಕೆದಾರರು ಮರಳಿಲ್ಲ. ಶೇ.30 ರಷ್ಟು ಮಂದಿ ಬಾಡಿಗೆ, ಇಂಧನ ಹಾಗೂ ಮಾಸಿಕ ಇಎಂಐ ಪಾವತಿಸುವುದಕ್ಕೂ ಕಷ್ಟವಾಗಿದೆ. ಅದಕ್ಕಾಗಿಯೇ ತಮ್ಮ ಕುಲ ಕಸುಬನ್ನು ಅವಲಂಬಿಸುತ್ತಿದ್ದಾರೆ. ಇನ್ನೂ ಕೆಲ ಕ್ಯಾಬ್ ಚಾಲಕರು ಇಎಂಐ ಗಳನ್ನು ಪಾವತಿಸಲು ಸಾಧ್ಯವಾಗದ ಕಾರಣ ತಮ್ಮ ಕಾರುಗಳನ್ನು ಮಾರಾಟ ಮಾಡಿದ್ದಾರೆ. ಇದನ್ನೂ ಓದಿ: ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ

    ಓಲಾ, ಉಬರ್ ಬುಕ್ಕಿಂಗ್ ಮಾಡಿದ 20 ನಿಮಿಷಗಳ ವರೆಗೆ ಬರುವುದೇ ಇಲ್ಲ. ಮತ್ತು ಅದನ್ನು ರದ್ದು ಮಾಡಿದಾಗ ಮುಂದಿನ ಬುಕ್ಕಿಂಗ್ ವೇಳೆ 50 ರೂ. ದಂಡ ನೀಡಬೇಕಾಗುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ.

  • ಕೋವಿಡ್ ಇದ್ದರೂ ಸೆಲ್ಫ್ ಐಸೋಲೇಷನ್ ಅಗತ್ಯವಿಲ್ಲ – ಇಂಗ್ಲೆಂಡ್ ಘೋಷಣೆ

    ಕೋವಿಡ್ ಇದ್ದರೂ ಸೆಲ್ಫ್ ಐಸೋಲೇಷನ್ ಅಗತ್ಯವಿಲ್ಲ – ಇಂಗ್ಲೆಂಡ್ ಘೋಷಣೆ

    ಲಂಡನ್: ಮುಂದಿನ ವಾರದಿಂದ ಜನರಲ್ಲಿ ಕೋವಿಡ್ ಇದ್ದರೂ ಸೆಲ್ಫ್ ಐಸೋಲೇಷನ್‌ನಲ್ಲಿ ಇರುವ ಅಗತ್ಯ ಇಲ್ಲ ಎಂದು ಇಂಗ್ಲೆಂಡ್ ಘೋಷಿಸಿದೆ.

    ಕೋವಿಡ್-19 ಸೋಂಕುನಿಂದ ರಕ್ಷಿಸಿಕೊಳ್ಳಲು ಜಾರಿಗೆ ತರಲಾಗಿದ್ದ ಎಲ್ಲಾ ರೀತಿಯ ಮಾರ್ಗಸೂಚಿಗಳನ್ನು ಇಂಗ್ಲೆಂಡ್‌ನಲ್ಲಿ ಕೊನೆಗೊಳಿಸಲಾಗುತ್ತಿದೆ. ಜನರ ಸ್ವಾತಂತ್ರಕ್ಕೆ ತೊಂದರೆಯಾಗದಂತೆ ತಮ್ಮನ್ನು ರಕ್ಷಿಸಿಕೊಳ್ಳಲು ಅವಕಾಶ ನೀಡುತ್ತಿದ್ದೇವೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಇದನ್ನೂ ಓದಿ: ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ಗೆ ಕೊರೊನಾ ಸೋಂಕು – ಚೇತರಿಕೆಗೆ ಹಾರೈಸಿ ಪ್ರಧಾನಿ ಮೋದಿ ಟ್ವೀಟ್

    ಸರ್ಕಾರದ ಕೆಲವು ವೈಜ್ಞಾನಿಕ ಸಲಹೆಗಾರರು ಇದು ಅಪಾಯಕಾರಿ ಕ್ರಮ ಹಾಗೂ ಇದರಿಂದ ಸೋಂಕು ಉಲ್ಬಣಗೊಳ್ಳಬಹುದು ಎಂದು ಸೂಚನೆ ನೀಡಿದ್ದಾರೆ. ಜನರ ಜವಾಬ್ದಾರಿಯನ್ನು ಹೆಚ್ಚಿಸಲು ನಾವು ಪ್ರೋತ್ಸಾಹ ನೀಡುತ್ತಿರುವುದರಿಂದ ಇದನ್ನು ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಪ್ರತಿಯೊಬ್ಬರು ತಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆಯಬಹುದು ಎಂದಿದ್ದಾರೆ. ಇದನ್ನೂ ಓದಿ: ಲಂಡನ್ ಮಾರುಕಟ್ಟೆಯಲ್ಲಿ ಒಂದು ಹಲಸಿನ ಹಣ್ಣಿಗೆ 16,000 ರೂ!

    ಭಾನುವಾರ ಇಂಗ್ಲೆಂಡ್ ರಾಣಿ 2ನೇ ಎಲಿಜಬೆತ್‌ಗೆ ಕೋವಿಡ್ ತಗುಲಿರುವ ಬಗ್ಗೆ ವರದಿಯಾಗಿದೆ. ಇಂತಹ ಸಂದರ್ಭದಲ್ಲೇ ಇಂಗ್ಲೆಂಡ್ ಆಡಳಿತ ಕೋವಿಡ್ ಮಾರ್ಗಸೂಚಿಗಳನ್ನು ತೆಗೆದುಹಾಕುತ್ತಿರುವುದು ಮುಂದೆ ಅಪಾಯವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

  • ಕೋವಿಡ್ ಫೈನ್ – 2 ದಿನಗಳಲ್ಲಿ 1.5 ಕೋಟಿ ರೂ. ಸಂಗ್ರಹ

    ಕೋವಿಡ್ ಫೈನ್ – 2 ದಿನಗಳಲ್ಲಿ 1.5 ಕೋಟಿ ರೂ. ಸಂಗ್ರಹ

    ನವದೆಹಲಿ: ಕೊರೊನಾ ರೂಪಾಂತರಿ ಓಮಿಕ್ರಾನ್ ಹೆಚ್ಚುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ದೆಹಲಿಯ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೆ ತರುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ದೆಹಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ.

    ಪೂರ್ವ ಹಾಗೂ ಉತ್ತರ ದೆಹಲಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಜನರು ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಡಿಸೆಂಬರ್ 22 ಹಾಗೂ 23 ರಂದು ಕೇವಲ ಎರಡು ದಿನಗಳಲ್ಲಿ ಜನರಿಂದ 1.5 ಕೋಟಿ ರೂ. ಫೈನ್ ಅನ್ನು ಸಂಗ್ರಹ ಮಾಡಲಾಗಿದೆ. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ವಂಚಿಸಿದ್ದ ನೇಪಾಳಿ ಪ್ರಜೆಗಳ ಬಂಧನ

    ಕೇವಲ ಎರಡು ದಿನಗಳಲ್ಲಿ ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರದAತಹ ನಿಯಮಗಳನ್ನು ಪಾಲಿಸದ ಒಟ್ಟು 7,778 ಜನರ ಮೇಲೆ ಕ್ರಮ ಕೈಗೊಂಡು 1.5 ಕೋಟಿ ರೂ. ದಂಡವನ್ನು ಸಂಗ್ರಹ ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಇದರೊಂದಿಗೆ ಕೋವಿಡ್ ಪ್ರೋಟೋಕಾಲ್‌ಗಳನ್ನು ಉಲ್ಲಘಿಸಿದ 163 ಜನರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಮಂತ ಬೇಡ, ಕಷ್ಟದಲ್ಲಿರುವವನ ಜೊತೆ ಡೇಟಿಂಗ್ ಮಾಡಲು ಇಷ್ಟ: ಹರ್ನಾಜ್ ಸಂಧು

  • ಬಯೋಕಾನ್‌ಗೆ ಹಿನ್ನಡೆ – ಔಷಧಿ ರಾಷ್ಟ್ರೀಯ ಚಿಕಿತ್ಸಾ ಶಿಷ್ಟಾಚಾರದಲ್ಲಿ ಬರಲ್ಲ ಎಂದ ಕೇಂದ್ರ

    ಬಯೋಕಾನ್‌ಗೆ ಹಿನ್ನಡೆ – ಔಷಧಿ ರಾಷ್ಟ್ರೀಯ ಚಿಕಿತ್ಸಾ ಶಿಷ್ಟಾಚಾರದಲ್ಲಿ ಬರಲ್ಲ ಎಂದ ಕೇಂದ್ರ

    ನವದೆಹಲಿ: ಕೊರೊನಾ ವೈರಸ್‌ ಸೋಂಕಿತರಿಗೆ ಬೆಂಗಳೂರಿನ ಬಯೋಕಾನ್‌ ಅಭಿವೃದ್ಧಿ ಪಡಿಸಿರುವ ಔಷಧಿ ರಾಷ್ಟ್ರೀಯ ಚಿಕಿತ್ಸಾ ಶಿಷ್ಟಾಚಾರದಲ್ಲಿ ಬರುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

    ಜುಲೈ ಮೊದಲ ವಾರದಲ್ಲಿ ಬಯೋಕಾನ್‌ ಸಂಸ್ಥೆ ಅಭಿವೃದ್ಧಿ ಪಡಿಸಿದ್ದ ಚರ್ಮರೋಗ ಔಷಧ ‘ಇಟೋಲಿಝುಮಾಬ್‌’ ಇಂಜೆಕ್ಷನ್‌ನ್ನು ಗಂಭೀರ ಪ್ರಮಾಣದ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಕೋವಿಡ್‌ 19 ಸೋಂಕಿತರಿಗೆ ನೀಡಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿತ್ತು.

    ಡಿಸಿಜಿಐ ಬಯೋಕಾನ್‌ ಔಷಧಿ ಬಳಕೆಗೆ ಅನುಮತಿ ನೀಡಿದಕ್ಕೆ ವೈದ್ಯಕೀಯ ಕ್ಷೇತ್ರದ ಕೆಲ ತಜ್ಞರು ಆರೋಗ್ಯ ಇಲಾಖೆಗೆ ಪತ್ರ ಬರೆದು ಆಕ್ಷೇಪ ಎತ್ತಿದ್ದರು. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಸಚಿವಾಲಯ ಈ ಔಷಧಿಯಿಂದ ರೋಗಿ ಗುಣಮುಖರಾಗುತ್ತಾರೆ ಎಂಬುದಕ್ಕೆ ಬಹಳ ಕಡಿಮೆ ಪ್ರಮಾಣದ ಸಾಕ್ಷ್ಯ ಸಿಕ್ಕಿದೆ. ಕೇವಲ 30 ರೋಗಿಗಳಿಗೆ ಟ್ರಯಲ್‌ ಮಾಡಿದ ಈ ಔಷಧಿಯನ್ನು ನೀಡಲು ಅನುಮತಿ ನೀಡಿದ್ದಕ್ಕೆ ಕೆಲ ವೈದ್ಯರು ಪ್ರಶ್ನೆ ಎತ್ತಿದ್ದಾರೆ. ಕೋವಿಡ್‌ 19 ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಔಷಧಿ ನೀಡಲು ಅನುಮತಿ ನೀಡಬೇಕಾದರೆ ಅದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿಗೆ ಬೇಕಾಗುತ್ತದೆ ಎಂದು ಹೇಳಿದೆ.

    ಈ ಸಂಬಂಧ ಬಯೋಕಾನ್‌ ಹೇಳಿಕೆ ಬಿಡುಗಡೆ ಮಾಡಿದ್ದು, ರಾಷ್ಟ್ರೀಯ೭ ಕೋವಿಡ್‌ 19 ಟಾಸ್ಕ್‌ ಫೋರ್ಸ್‌ ಔಷಧಿ ಬಳಕೆ ಸಂಬಂಧ ಮತ್ತಷ್ಟು ಸಾಕ್ಷ್ಯಗಳನ್ನು ಕೇಳಿದೆ. ನಾವು ಸಾಕ್ಷ್ಯಗಳನ್ನು ನೀಡುತ್ತೇವೆ. ಹತ್ತಿರ ಹತ್ತಿರ 1 ಸಾವಿರ ಸೋಂಕಿತರಿಗೆ ಈ ಔಷಧಿ ನೀಡಿದ್ದು, ಉತ್ತಮ ಫಲಿತಾಂಶ ಬಂದಿದೆ ಎಂದು ತಿಳಿಸಿದೆ.

    ದೊಡ್ಡ ಪ್ರಮಾಣದಲ್ಲಿ ಈ ಔಷಧಿಯನ್ನು ಟ್ರಯಲ್‌ ಮಾಡಲು ನಾವು ಮುಂದಾಗುತ್ತಿದ್ದೇವೆ. 10-15 ಆಸ್ಪತ್ರೆಗಳ 200 ರೋಗಿಗಳಿಗೆ ಈ ಔಷಧಿ ನೀಡಲು ಮುಂದಾಗುತ್ತಿದ್ದೇವೆ. ಈ ಅಧ್ಯಯನ ವರದಿಯನ್ನು ನಾವು ಡಿಸಿಜಿಐಗೆ ನೀಡುತ್ತೇವೆ ಎಂದು ಬಯೋಕಾನ್‌ ಹೇಳಿದೆ.

    ಬಯೋಕಾನ್‌ ಕಂಪನಿ ಚರ್ಮರೋಗ ಸೋರಿಯಾಸಿಸ್‌ಗೆ ಬಳಸುವ ಈ ಔಷಧವನ್ನು ಉಸಿರಾಟದ ತೊಂದರೆಗೆ ಬಳಸುವ ರೋಗಿಗಳಿಗೆ ನೀಡುವ ಸಂಬಂಧ 2ನೇ ಹಂತದ ಕ್ಲಿನಿಕಲ್‌ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿ, ತನ್ನ ಪ್ರಯೋಗದ ವರದಿಯನ್ನು ಡಿಸಿಜಿಐಗೆ ಸಲ್ಲಿಸಿತ್ತು. ಡಿಸಿಜಿಐ ಈ ವರದಿಯನ್ನು ಶ್ವಾಸಕೋಶ, ಔಷಧ ಶಾಸ್ತ್ರ, ಏಮ್ಸ್‌ ತಜ್ಞರ ಸಮಿತಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿತ್ತು. ತಜ್ಞರಿಂದ ‌ಒಪ್ಪಿಗೆ ಸಿಕ್ಕಿದ ಬಳಿಕ ಕೊರೊನಾ ಸೋಂಕಿತರ ಸಮ್ಮತಿಯ ಮೇರೆಗೆ ಬಳಸಲು ಅನುಮತಿ ನೀಡಿತ್ತು.

    ಈ ಔಷಧಿಯನ್ನು ಅತಿ ಹೆಚ್ಚು ಸೋಂಕಿತರು ಇರುವ ಮುಂಬೈ ಮತ್ತು ದೆಹಲಿಯಲ್ಲಿ ಪ್ರಯೋಗ ಮಾಡಲಾಗಿತ್ತು. ಆಸ್ಪತ್ರೆಯಲ್ಲಿನ ಹಲವು ರೋಗಿಗಳ ಮೇಲೆ ಈ ಔಷಧ ಪ್ರಯೋಗಿಸಲಾಗಿದ್ದು ಗುಣಮುಖರಾಗಿದ್ದಾರೆ ಎಂದು ಮುಂಬೈಯ ಬಿವೈಎಲ್ ನಾಯರ್ ಆಸ್ಪತ್ರೆಯ ಡೀನ್ ಡಾ. ಮೋಹನ್ ಜೋಷಿ ತಿಳಿಸಿದ್ದಾರೆ. ದೆಹಲಿಯ ಲೋಕ ನಾಯಕ ಆಸ್ಪತ್ರೆಯಲ್ಲಿ 8 ರೋಗಿಗಳಿಗೆ ಇಟೋಲಿಝುಮಾಬ್‌ ಔಷಧ ನೀಡಲಾಗಿದ್ದು, ಅವರೆಲ್ಲರೂ ಗುಣಮುಖರಾಗಿದ್ದಾರೆ ಎಂದು ವರದಿಯಾಗಿತ್ತು. ತುರ್ತು ಸ್ಥಿತಿಯಲ್ಲಿ ಹಾಗೂ ನಿಯಂತ್ರಿತ ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂಬ ಷರತ್ತನ್ನು ಡಿಸಿಜಿಐ ವಿಧಿಸಿತ್ತು.

    ಈ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಪ್ರತಿಕ್ರಿಯಿಸಿ, ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಪಾರಾಗಲು ದೇಶ, ವಿದೇಶಗಳಲ್ಲಿ ಸಂಶೋಧಕರು ನಿರತಂತರ ಸಂಶೋಧನೆ ನಡೆಸುತ್ತಿದ್ದಾರೆ. ಇಟೋಲಿಝುಮಾಬ್‌ ಔಷಧ ನೀಡಿದ ಎಲ್ಲ ರೋಗಿಗಳು ಗುಣಮುಖರಾಗಿದ್ದಾರೆ. ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬಂದ ಹಿನ್ನೆಲೆಯಲ್ಲಿ ಗಂಭೀರ ಪ್ರಮಾಣದ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಸೋಂಕಿತರಿಗೆ ಈ ಔಷಧ ನೀಡಲು ಡಿಸಿಜಿಐ ಅನುಮೋದನೆ ನೀಡಿದೆ ಎಂದು ತಿಳಿಸಿದ್ದರು. ಬಯೋಕಾನ್‌ ಕಂಪನಿಯು 2013ರಿಂದಲೂ ಬಯೋಕಾನ್ ಪಾರ್ಕ್ ನಲ್ಲಿ ಈ ಔಷಧವನ್ನು ತಯಾರಿಸುತ್ತದೆ.

    ಈ ವರ್ಷದಲ್ಲೇ ಮೇಡ್ ಇನ್ ಇಂಡಿಯಾ ಕೋವಿಡ್ -19 ಔಷಧಿ ಲಭ್ಯವಾಗಲಿದೆ ಎಂದು ಬಯೋಕಾನ್ ಕಂಪನಿಯ ಆಡಳಿತ ನಿರ್ದೇಶಕಿ ಕಿರಣ್ ಮಜುಂದಾರ್ ಶಾ ಏಪ್ರಿಲ್‌ನಲ್ಲಿ ತಿಳಿಸಿದ್ದರು.

    ಈಗಾಗಲೇ ಎರಡು, ಮೂರು ಸಣ್ಣ ಕಂಪನಿಗಳು ಔಷಧಿ ಅಭಿವೃದ್ಧಿ ಪಡಿಸುತ್ತಿವೆ. ಈ ಕಂಪನಿಗಳು ದೊಡ್ಡ ಕಂಪನಿಗಳ ಸಹಯೋಗದೊಂದಿಗೆ ಔಷಧಿ ತಯಾರಿಸುವ ಕೆಲಸ ಮಾಡುತ್ತಿವೆ. ನಾವು ಔಷಧಿ ನಿರ್ಮಾಣಕ್ಕೆ ಕೈ ಹಾಕಿದ್ದೇವೆ ಎಂದು ಮಾಧ್ಯಮಕ್ಕೆ ತಿಳಿಸಿದ್ದರು.

  • ಅನಾರೋಗ್ಯದಿಂದ 6ರ ಬಾಲಕಿ ಸಾವು – ಕೊರೊನಾ ಪ್ರೋಟೋಕಾಲ್‍ನಂತೆ ಶವಸಂಸ್ಕಾರ

    ಅನಾರೋಗ್ಯದಿಂದ 6ರ ಬಾಲಕಿ ಸಾವು – ಕೊರೊನಾ ಪ್ರೋಟೋಕಾಲ್‍ನಂತೆ ಶವಸಂಸ್ಕಾರ

    – ಬಾಲಕಿ ಗಂಟಲು ದ್ರವ ಮತ್ತು ರಕ್ತ ಮಾದರಿ ಕಲಬುರಗಿಗೆ ರವಾನೆ

    ಯಾದಗಿರಿ: ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದ ಜಿಲ್ಲೆಯ ಶಹಪುರ ತಾಲೂಕಿನ ಕೊಂಗಂಡಿ ಗ್ರಾಮದ ಆರು ವರ್ಷದ ಬಾಲಕಿಯ ಅಂತ್ಯಕ್ರಿಯೆಯನ್ನು ವಿಶ್ವ ಅರೋಗ್ಯ ಸಂಸ್ಥೆಯ ಪ್ರೋಟೋಕಾಲ್ ನಿಯಮದಂತೆ ಅಧಿಕಾರಿಗಳು ನೆರವೇರಿಸಿದ್ದಾರೆ.

    ಕಳೆದ ಮೂರು ದಿನಗಳಿಂದ ಬಾಲಕಿ ತೀವ್ರ ಕೆಮ್ಮು, ಜ್ವರ ಹಾಗೂ ಗಂಟಲು ನೋವಿನಿಂದ ಬಳಲುತ್ತಿದ್ದಳು. ಹೀಗಾಗಿ ಬಾಲಕಿ ಕುಟುಂಬಸ್ಥರು ಅವಳಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಬಾಲಕಿ ಗುಣಮುಖವಾಗದ ಹಿನ್ನಲೆ ಹೆಚ್ಚಿನ ಚಿಕಿತ್ಸೆಗಾಗಿ, ಶಹಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾಳೆ.

    ಮೃತ ಬಾಲಕಿ ಪೋಷಕರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ ಲಾಕ್‍ಡೌನ್ ಆದೇಶವಿದ್ದರೂ ಸಹ ಏಪ್ರಿಲ್ 1ರಂದು ವಾಪಸ್ ಜಿಲ್ಲೆಗೆ ಬಂದಿದ್ದರು. ಏ.4ರಂದು ಬಾಲಕಿಗೆ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಈ ಬಗ್ಗೆ ಮಾಹಿತಿ ಅರಿತ ಆರೋಗ್ಯ ಅಧಿಕಾರಿಗಳು ಮೃತ ಬಾಲಕಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪಡೆದು ಕಲಬುರಗಿಗೆ ಕಳುಹಿಸಿದ್ದಾರೆ. ಸಂಜೆ ಜಿಲ್ಲಾಡಳಿತದಿಂದ ಡಬ್ಲ್ಯುಹೆಚ್‍ಓ ಪ್ರೋಟೋಕಾಲ್ ನಿಯಮದಂತೆ ಅಂತ್ಯಕ್ರಿಯೆ ಮಾಡಲಾಗಿದೆ.