Tag: Protestors

  • ಪ್ರತಿಭಟನಾಕಾರರಿಗೆ ವಚನದ ಮೂಲಕ ಟಾಂಗ್ ಕೊಟ್ಟ ಶಶಿಕಲಾ ಜೊಲ್ಲೆ

    ಪ್ರತಿಭಟನಾಕಾರರಿಗೆ ವಚನದ ಮೂಲಕ ಟಾಂಗ್ ಕೊಟ್ಟ ಶಶಿಕಲಾ ಜೊಲ್ಲೆ

    ವಿಜಯಪುರ: ಭ್ರಷ್ಟಾಚಾರದ ಆರೋಪ ಹೊರಿಸಿ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳಾ ಸಂಘಟಕರಿಗೆ ಸಚಿವೆ ಶಶಿಕಲಾ ಜೊಲ್ಲೆ ಧ್ವಜಾರೋಹಣ ಭಾಷಣದಲ್ಲಿ ಶರಣೆ ಅಕ್ಕಮಹಾದೇವಿ ವಚನದ ಮೂಲಕ ಟಾಂಗ್ ನೀಡಿದ್ದಾರೆ.

    ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜದೊಡೆ ಎಂತಯ್ಯ, ಸಮುದ್ರ ತಡಿಯಲ್ಲೊಂದು ಮನೆಯ ಮಾಡಿ ನೆರೆ ತೊರೆಗಳಿಗೆ ಅಂಜಿದೊಡೆ ಎಂತಯ್ಯ, ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಡಚಿದೊಡೆ ಎಂತಯ್ಯ? ಚನ್ನಮಲ್ಲಿಕಾರ್ಜುನ ದೇವ. ಕೆಳಯ್ಯ ಈ ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೇ ಸಮಾಧಾನಿಯಾಗಿರಬೇಕು” ಎಂಬ ವಚನ ಸ್ತುತಿಸಿದರು.

    ನಿಂದನೆ ಸ್ತುತಿ ಬರುತ್ತವೆ. ಶಾಂತಿ ಸಮಾಧಾನದಿಂದ ಎದುರಿಸಿ ತೋರಿಸಬೇಕೆಂದು ಅಕ್ಕನ ವಚನದಿಂದ ಕಲಿತಿದ್ದೇನೆ. ಸುಂಸ್ಕೃತ ಮನೆತನದಲ್ಲಿ ಹುಟ್ಟಿ ಇಂಥ ರಾಜಕೀಯ ಪರಿಸ್ಥಿತಿ ಯಲ್ಲಿ ಎಲ್ಲವನ್ನೂ ಎದುರಿಸಿ ನಿಲ್ಲಬೇಕಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಈ ರೀತಿ ಪ್ರತಿಭಟನೆ ಯಾರು ಮಾಡಿದ್ದಾರೋ ಅವರಿಗೆ ಉತ್ತರ ಕೊಡಲು ಬಯಸುತ್ತೇನೆ, ನಾನು ತಪ್ಪು ಮಾಡಿಲ್ಲ. ಹೀಗಾಗಿ ಯಾವುದೇ ತನಿಖೆಗೆ ಸಿದ್ದ ಎಂದಿದ್ದಾರೆ.

    ಹೆಣ್ಣು ಮಕ್ಕಳಾಗಿ ಈ ರೀತಿ ಇನ್ನೊಂದು ಹೆಣ್ಣು ಮಗುವಿನ ಮನಸ್ಸಿಗೆ ಘಾಸಿ ಮಾಡಬಾರದು ಎಂದು ಶಶಿಕಲಾ ಜೊಲ್ಲೆ ಭಾವುಕರಾದರು. ಅಕ್ಕಮಹಾದೇವಿ ಹಾಗೂ ಡಾ.ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆಯುವೆ. ಒಳ್ಳೆಯ ಕೆಲಸ ಮಾಡಿ ತೋರಿಸುವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ – ಓರ್ವ ವಿದ್ಯಾರ್ಥಿ ಸಾವು, ಇಬ್ಬರು ಗಂಭೀರ

    ಅಂತಿಮವಾಗಿ “ನಾನೂ ಒಬ್ಬ ವಿಶೇಷ ಮಗುವಿನ ತಾಯಿ, ಮಕ್ಕಳ ನೋವು ನನಗಿಂತ ಹೆಚ್ಚು ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಹೀಗಾಗಿ ಅಂಥ ಮಕ್ಕಳೊಂದಿಗೆ ನಾನು ಸದಾ ಇರುವೆ ಎಂದು ನುಡಿದಿದ್ದಾರೆ. ಇದನ್ನೂ ಓದಿ:ಸಂಗೊಳ್ಳಿಯ ಸೈನಿಕ ಶಾಲೆಯಲ್ಲಿ ಕೆಚ್ಚೆದೆಯ ರಾಯಣ್ಣನಂತ ಸೈನಿಕರನ್ನು ತಯಾರಿಸುತ್ತೇವೆ: ಕಾರಜೋಳ

  • ದೆಹಲಿಯಲ್ಲಿ ಮತ್ತೆ ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದವರ ಮೇಲೆ ಗುಂಡಿನ ದಾಳಿ

    ದೆಹಲಿಯಲ್ಲಿ ಮತ್ತೆ ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದವರ ಮೇಲೆ ಗುಂಡಿನ ದಾಳಿ

    – ಬೈಕಿನಲ್ಲಿ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು

    ನವದೆಹಲಿ: ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಕಳೆದ ತಿಂಗಳು ನಡೆದ ಗುಂಡಿನ ದಾಳಿ ಮಾಸುವ ಮುನ್ನವೇ ದೆಹಲಿಯಲ್ಲಿ ಮತ್ತೆ ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ.

    ಕಳೆದ ತಿಂಗಳ ಜನವರಿ 30 ರಂದು ಜಾಮಿಯಾ ವಿವಿ ಬಳಿ ಮೆರವಣಿಗೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಈಗ ಮತ್ತೆ ಇದೇ ರೀತಿಯ ಘಟನೆ ನಡೆದಿದ್ದು, ಈಶಾನ್ಯ ದೆಹಲಿಯ ಜಾಫ್ರಾಬಾದ್‍ನಲ್ಲಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಾಲ್ಕು ಬಾರಿ ಗುಂಡಿನ ದಾಳಿ ಮಾಡಿ ಪರಾರಿ ಆಗಿದ್ದಾರೆ.

    ಕಳೆದ ಒಂದು ತಿಂಗಳಿನಿಂದ ಜಾಫ್ರಾಬಾದ್‍ನಲ್ಲಿ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದು, ಈ ಘಟನ ಸ್ಥಳಕ್ಕೆ ಬೈಕಿನಲ್ಲಿ ಬಂದ ಇಬ್ಬರು, ಘಟನ ಸ್ಥಳದಿಂದ 400 ಮೀಟರ್ ದೂರದಲ್ಲಿ ನಿಂತು ಗುಂಡಿನ ದಾಳಿ ಮಾಡಿದ್ದಾರೆ. ಆದರೆ ಗುಂಡಿನ ದಾಳಿಯಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

    ಗುಂಡಿನ ದಾಳಿ ಬಳಿಕ ಪ್ರತ್ಯಕ್ಷದರ್ಶಿಯೋರ್ವ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳ ಪರಿಶೀಲನೆ ಮಾಡಿದ್ದಾರೆ. ನಂತರ ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಈ ಗುಂಡಿನ ದಾಳಿಗೂ ಪೌರತ್ವ ವಿರೋಧಿಪ್ರತಿಭಟನಾಕಾರರು ಪ್ರತಿಭಟನಾಕಾರರಿಗೂ ಯಾವುದೇ ಸಂಬಂಧವಿಲ್ಲ. ಇದು ವೈಯಕ್ತಿಕ ಕಾರಣದಿಂದ ನಡೆದಿರುವ ಗುಂಡಿನ ದಾಳಿ ಎಂದು ಹೇಳಿದ್ದಾರೆ.

    ಕಳೆದ ಒಂದು ತಿಂಗಳಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ಮೇಲೆ ನಡೆದ ನಾಲ್ಕನೇ ಗುಂಡಿನ ದಾಳಿ ಆಗಿದ್ದು, ಕಳೆದ ಜನವರಿಯ 30 ರಂದು ಮೊದಲ ಬಾರಿಗೆ ನಾನು ನಿಮಗೆ ಅಜಾದಿ ನೀಡುತ್ತೇನೆ ಎಂದು ಜಾಮಿಯಾ ವಿವಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ಮಾಡಿದ್ದ. ಈ ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದ.

    ಈ ಘಟನೆಯ ನಂತರ ಫೆ.1 ರಂದು ಕಪಿಲ್ ಗುಜ್ಜರ್ ದೆಹಲಿಯ ಶಾಹೀನ್ ಬಾಗ್‍ನಲ್ಲಿ ಪ್ರತಿಭಟನೆ ಮಾಡುತ್ತಿದ್ದವ ಮೇಲೆ ಗುಂಡಿನ ದಾಳಿ ಮಾಡಿದ್ದನು. ಈ ಘಟನೆಯಾದ ಎರಡೆ ದಿನದಲ್ಲಿ ಅಂದರೆ ಫೆ.3 ರಂದು ಮತ್ತೆ ಜಾಮಿಯಾ ವಿವಿಯ ಐದನೇ ಗೇಟ್ ಬಳಿ ಕೆಂಪು ಬಣ್ಣದ ಬೈಕಿನಲ್ಲಿ ಬಂದ ವ್ಯಕ್ತಿಯೋರ್ವ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದ. ಈ ಮೂರು ಘಟನೆಯ ಬೆನ್ನಲ್ಲೇ ಇಂದು ಈ ಘಟನೆ ನಡೆದಿದೆ.

  • ಅಂಬುಲೆನ್ಸ್ ಓಡಾಟಕ್ಕೆ ಅಡಚಣೆ ಮಾಡಿದ ಪ್ರತಿಭಟನಕಾರರು ಖಾಕಿ ವಶಕ್ಕೆ

    ಅಂಬುಲೆನ್ಸ್ ಓಡಾಟಕ್ಕೆ ಅಡಚಣೆ ಮಾಡಿದ ಪ್ರತಿಭಟನಕಾರರು ಖಾಕಿ ವಶಕ್ಕೆ

    ಚಿಕ್ಕಬಳ್ಳಾಪುರ: ಭಾರತ್ ಬಂದ್ ಹಿನ್ನೆಲೆ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 50ಕ್ಕೂ ಹೆಚ್ಚು ಮಂದಿ ಪ್ರತಿಭಟನಕಾರರನ್ನ ಚಿಕ್ಕಬಳ್ಳಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಭಾರತ್ ಬಂದ್ ಹಿನ್ನೆಲೆ ಸಿಪಿಐಎಂ ಮುಖಂಡರು ಹಾಗೂ ಕಾರ್ಯಕರ್ತರು ಚಿಕ್ಕಬಳ್ಳಾಪುರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಶಿಡ್ಲಘಟ್ಟ ವೃತ್ತದ ರಸ್ತೆಯಲ್ಲಿ ಕುಳಿತು ಪ್ರತಿಭಟನಾ ಧರಣಿ ಮಾಡಿದರು. ಎರಡು ಗಂಟೆಗಳಿಗೂ ಹೆಚ್ಚು ಕಾಲ ರಸ್ತೆಯಲ್ಲೇ ಕುಳಿತು ಪ್ರತಿಭಟನಾ ಧರಣಿ ನಡೆಸಿ ಅಲ್ಲೇ ತಿಂಡಿ ತಿನ್ನುವ ಮೂಲಕ ಹಸಿವು ನೀಗಿಸಿಕೊಂಡರು. ಆದರೆ ಪ್ರತಿಭಟನೆ ಹಿನ್ನಲೆ ಗೌರಿಬಿದನೂರು ಮಾರ್ಗದ ರಸ್ತೆ ಬಂದ್ ಆದ ಪರಿಣಾಮ ಜಿಲ್ಲಾಸ್ಪತ್ರೆಗೆ ಬಂದು ಹೋಗುವ ಅಂಬುಲೆನ್ಸ್ ಗಳ ಒಡಾಟಕ್ಕೆ ಅಡ್ಡಿಯಾಗಿತ್ತು.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎಸ್‍ಪಿ ಅಭಿನವ್ ಖರೆ ಪ್ರತಿಭಟನೆ ವಾಪಸ್ ಪಡೆಯುವಂತೆ ಮನವಿ ಮಾಡಿಕೊಂಡರು. ಈ ವೇಳೆ ಅಂಬುಲೆನ್ಸ್ ಸಹ ಅದೇ ರಸ್ತೆಯಲ್ಲಿ ಬಂದ ಪರಿಣಾಮ ಪ್ರತಿಭಟನಕಾರರನ್ನ ಚದುರಿಸಿದ ಪೊಲೀಸರು ಅವರನ್ನ ವಶಕ್ಕೆ ಪಡೆದುಕೊಂಡರು.

    ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು, ವಾಹನಗಳ ಸಂಚಾರ ಎಂದಿನಂತೆ ಸಾಗಿದ್ದು, ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತ್ತೊಂದೆಡೆ ಜಿಲ್ಲೆಯ ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಇದೇ ವೇಳೆ ಮಾತನಾಡಿದ ಎಸ್‍ಪಿ ಅಭಿನವ್ ಖರೆ ಅವರು, ಜಿಲ್ಲೆಯ ಎಲ್ಲಾ ಕಡೆ ಶಾಂತಿಯುತ ಪ್ರತಿಭಟನೆಗಳು ನಡೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಗುಡಿಬಂಡೆಯಲ್ಲಿ ಬಲವಂತವಾಗಿ ಟೀ ಅಂಗಡಿ ಮುಚ್ಚಿಸಿದ ಪ್ರಕರಣ ನಮ್ಮ ಗಮನಕ್ಕೆ ಬಂದಿದೆ. ಆದರೆ ಈ ಸಂಬಂಧ ಅಂಗಡಿ ಮಾಲೀಕ ದೂರು ಕೊಟ್ಟಿಲ್ಲ ಎಂದು ಪ್ರತಿಕ್ರಿಯಿಸಿದರು.

  • ಸಂಸದ ತೇಜಸ್ವಿ ಎದೆ ಬಗೆದರೆ ಏನೂ ಇಲ್ಲ – ಕವಿತಾ ರೆಡ್ಡಿ

    ಸಂಸದ ತೇಜಸ್ವಿ ಎದೆ ಬಗೆದರೆ ಏನೂ ಇಲ್ಲ – ಕವಿತಾ ರೆಡ್ಡಿ

    ಬೆಂಗಳೂರು: ತೇಜಸ್ವಿ ಸೂರ್ಯ ಎದೆ ಬಗೆದರೆ ಏನೂ ಸಿಗಲ್ಲ, ಆದರೆ ಸಿಎಎ ವಿರೋಧಿಸಿ ಪ್ರತಿಭಟನೆ ಮಾಡುವ ನಮ್ಮ ಎದೆ ಬಗೆದರೆ ತ್ರಿವರ್ಣ ಧ್ವಜ ಕಾಣಿಸುತ್ತೆ. ಹೀಗಂತ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಹೋರಾಟದ ನೇತೃತ್ವ ವಹಿಸಿದ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ವಾಗ್ದಾಳಿ ನಡೆಸಿದರು.

    ಎದೆ ಬಗೆದರೆ ನಾಲ್ಕಕ್ಷರ ಇಲ್ಲದ, ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡೋರು ಸಿಎಎ ವಿರೋಧಿಸಿ ಪ್ರತಿಭಟನೆ ಮಾಡುತ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಕೊಟ್ಟಿದ್ದರು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇಂದು ಬೆಂಗಳೂರಿನಲ್ಲಿ ಸಿಎಎ ವಿರೋಧಿಸಿ ನಾವು ಭಾರತೀಯರು ಸಂಘಟನೆ ನಡೆಸಿದ ಪ್ರತಿಭಟನೆಯಲ್ಲಿ ಕೂಡ ತೇಜಸ್ವಿ ಸೂರ್ಯ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ತೇಜಸ್ವಿ ಸಣ್ಣ ವಯಸ್ಸಿಗೆ ಸಂಸದರಾದವರು. ಅವರ ಮಾತಿನ ಮೇಲೆ ನಾಲಗೆಯ ಮೇಲೆ ನಿಗಾ ಇಟ್ಟು ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿಎಎ, ಎನ್.ಪಿ.ಆರ್, ಎನ್.ಆರ್.ಸಿ ವಿರೋಧಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹವನ್ನು ನಡೆಸಿ ಪೋಸ್ಟ್ ಕಾರ್ಡ್ ಚಳವಳಿಯನ್ನು ಶುರುಮಾಡಿದರು. ಸುಪ್ರೀಂ ಕೊರ್ಟ್‍ಗೆ ಸಿಎಎ ವಿರೋಧಿಸಿ, ಪೋಸ್ಟ್ ಕಾರ್ಡ್ ನಲ್ಲಿ ಪತ್ರ ಬರೆದು ಕಳಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ, ಬಿಜೆಪಿ ಸರ್ಕಾರ ಇದನ್ನು ಹಿಂಪಡೆಯಬೇಕು, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಬುದ್ದಿ ಹೇಳಲಿ ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.

  • ಪ್ರತಿಭಟನೆಯಲ್ಲಿ ರಾಷ್ಟ್ರಗೀತೆ ಹಾಡಿದ ಕಾರಣ ಬಿಚ್ಚಿಟ್ಟ ಡಿಸಿಪಿ ಚೇತನ್ ಸಿಂಗ್ ರಾಥೋಡ್

    ಪ್ರತಿಭಟನೆಯಲ್ಲಿ ರಾಷ್ಟ್ರಗೀತೆ ಹಾಡಿದ ಕಾರಣ ಬಿಚ್ಚಿಟ್ಟ ಡಿಸಿಪಿ ಚೇತನ್ ಸಿಂಗ್ ರಾಥೋಡ್

    ಬೆಂಗಳೂರು: ಕರುನಾಡಿನಲ್ಲಿ ಪೌರತ್ವದ ಜ್ವಾಲೆ ಉರಿಯುತ್ತಿದೆ. ರಾಜ್ಯದ ನಾನಾ ಭಾಗಗಳಲ್ಲಿ 144 ಸೆಕ್ಷನ್ ಜಾರಿ ಮಾಡಿದರೂ ಪ್ರತಿಭಟನೆಯ ಕಾವು ಜೋರಾಗಿದೆ. ಅದ್ರಂತೆ ಬೆಂಗಳೂರಿನ ಟೌನ್‍ಹಾಲ್ ನಲ್ಲಿಯೂ ನಿನ್ನೆ ಪ್ರತಿಭಟನೆ ನಡೆಯಿತು. ಈ ವೇಳೆ ಭದ್ರತೆಯ ನೇತೃತ್ವವಹಿಸಿದ್ದ ಡಿಸಿಪಿ ಚೇತನ್ ಸಿಂಗ್ ರಾಥೋಢ್ ಪ್ರತಿಭಟನಾನಿರತರನ್ನು ರಾಷ್ಟ್ರಗೀತೆ ಹಾಡುವ ಮೂಲಕ ಮನವೊಲಿಸಿದ ವಿಡಿಯೋ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಪ್ರಶಂಸೆಗೆ ಪಾತ್ರವಾಗಿತ್ತು.

    ಈ ಬಗ್ಗೆ ಇಂದು ಟೌನ್ ಹಾಲ್‍ನಲ್ಲಿ ಮಾತನಾಡಿದ ಚೇತನ್ ಸಿಂಗ್, ರಾಷ್ಟ್ರಗೀತೆ ಹಾಡಲು ಕಾರಣವೇನು ಎಂಬುದನ್ನ ಬಿಚ್ಚಿಟ್ಟಿದ್ದಾರೆ. ನಿನ್ನೆ ಪರಿಸ್ಥಿತಿಯನ್ನ ನಿಭಾಯಿಸುವಲ್ಲಿ ನಮ್ಮ ಸಿಬ್ಬಂದಿ ಸಾಕಷ್ಟು ಶ್ರಮಪಟ್ಟಿದ್ದಾರೆ. ನಿನ್ನೆಯ ಪ್ರತಿಭಟನೆಯ ವೇಳೆ ಕೆಲ ಕಿಡಿಗೇಡಿಗಳು ಶಾಂತಿ ಸುವ್ಯವಸ್ಥೆ ಕದಡಲು ಸಂಚು ರೂಪಿಸಿದ್ದರು. ಈ ವೇಳೆ ನಾನು ಪ್ರತಿಭಟನಾಕಾರ ಜೊತೆ ಮಾತುಕತೆ ಮುಂದಾದೆ ಎಂದರು.

    ಪ್ರತಿಭಟನೆ ವೇಳೆ ಬಹಳಷ್ಟು ಜನರ ಕೈಯಲ್ಲಿ ರಾಷ್ಟ್ರಧ್ವಜಗಳನ್ನು ನೋಡಿದೆ. ಪ್ರತಿಯೊಬ್ಬರಲ್ಲೂ ದೇಶಭಕ್ತಿ, ರಾಷ್ಟ್ರಗೀತೆಯ ಬಗ್ಗೆ ಗೌರವ ಇದ್ದೇ ಇರುತ್ತದೆ ಎಂಬ ಕಾರಣಕ್ಕೆ ನಾನು ರಾಷ್ಟ್ರಗೀತೆ ಹಾಡಿದೆ. ಇದಕ್ಕೆ ಎಲ್ಲರು ಎದ್ದು ನಿಂತು ಗೌರವ ಸೂಚಿಸಿದರು. ಕೆಲ ಪ್ರತಿಭಟನಾಕಾರರು ಪೊಲೀಸರನ್ನೇ ಟ್ಯಾಕಲ್ ಮಾಡಲು ಮುಂದಾಗಿದ್ದರು. ಮಕ್ಕಳನ್ನ ಪ್ರತಿಭಟನೆಗೆ ಕರೆದಂತು ಪೊಲೀಸರನ್ನು ಟ್ಯಾಕಲ್ ಮಾಡಲು ಮುಂದಾಗಿದ್ದರು ಎಂದು ಚೇತನ್ ಸಿಂಗ್ ತಿಳಿಸಿದರು.

    ನಡೆದಿದ್ದೇನು?
    ಬೆಂಗಳೂರು ಕೇಂದ್ರ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರು ಗುರುವಾರ ಟೌನ್ ಹಾಲ್‍ನಲ್ಲಿ ಪ್ರತಿಭಟನಾಕಾರರನ್ನು ಸ್ಥಳದಿಂದ ಕಳುಹಿಸಲು ರಾಷ್ಟ್ರಗೀತೆ ಹಾಡಿದ್ದರು. ಡಿಸಿಪಿ ಚೇತನ್ ರಾಷ್ಟ್ರಗೀತೆ ಹಾಡುತ್ತಿದ್ದಂತೆ ಪ್ರತಿಭಟನಾಕಾರರು ತಮ್ಮ ಸ್ಥಳದಿಂದ ಎದ್ದು ನಿಂತರು. ಬಳಿಕ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಒಪ್ಪಿಕೊಂಡರು.

    ಡಿಸಿಪಿ ಚೇತನ್ ರಾಷ್ಟ್ರಗೀತೆ ಹಾಡಿದ ಕೆಲವೇ ಕ್ಷಣದಲ್ಲಿ ಪೌರತ್ವ ಕಾಯ್ದೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಪೊಲೀಸರ ಬಳಿ ವಾದ ಮಾಡದೆ ತಾವು ಇದ್ದ ಸ್ಥಳವನ್ನು ಖಾಲಿ ಮಾಡಿದ್ದರು. ಡಿಸಿಪಿ ರಾಷ್ಟ್ರಗೀತೆ ಹಾಡಿ ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದ ವಿಡಿಯೋ ವೈರಲ್ ಆಗಿತ್ತು ಜೊತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.

  • ನಿಷೇಧಾಜ್ಞೆ ಮಧ್ಯೆಯೂ ಪ್ರತಿಭಟನೆ- ವಿವಿಧ ಸಂಘಟನೆಗಳ ಮುಖಂಡರ ಬಂಧನ

    ನಿಷೇಧಾಜ್ಞೆ ಮಧ್ಯೆಯೂ ಪ್ರತಿಭಟನೆ- ವಿವಿಧ ಸಂಘಟನೆಗಳ ಮುಖಂಡರ ಬಂಧನ

    ಹುಬ್ಬಳ್ಳಿ: ಪೌರತ್ವ ಕಾಯ್ದೆ ವಿರೋಧಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿವಿಧ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.

    ನಿಷೇಧಾಜ್ಞೆ ಮಧ್ಯೆಯೂ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ವಿವಿಧ ಸಂಘಟನೆಗಳ ಸುಮಾರು 10-15 ಜನ ಮುಖಂಡರಿಗೆ ಪ್ರತಿಭಟನೆ ನಡೆಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೂ ಪೊಲೀಸರ ಮಾತು ಕೇಳದೆ ಪ್ರತಿಭಟನೆಗೆ ಮುಂದಾದ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ನಿಷೇಧಾಜ್ಞೆ ಮಧ್ಯೆಯೂ ಪ್ರತಿಭಟನೆಗೆ ಮುಂದಾದ ಪ್ರತಿಭಟನಾಕಾರರನ್ನು ತಕ್ಷಣ ಪೊಲೀಸರು ಬಂಧಿಸಿದರು. ಸಿದ್ದು ತೇಜಿ, ರಾಜಶೇಖರ ಮೆಣಸಿನಕಾಯಿ, ಅನ್ವರ ಮುಧೋಳ, ಬಾಬಾಜಾನ ಮುಧೋಳ, ವಿಜಯ ಗುಂಟ್ರಾಳ, ಮಹೇಶ ಪತ್ತಾರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.