Tag: Prophet Mohammed

  • ಪ್ರವಾದಿ ಮೊಹಮ್ಮದ್‌ರ ವಿರುದ್ಧ ಅವಹೇಳನಕಾರಿ ಹೇಳಿಕೆ – ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ 67 FIR

    ಪ್ರವಾದಿ ಮೊಹಮ್ಮದ್‌ರ ವಿರುದ್ಧ ಅವಹೇಳನಕಾರಿ ಹೇಳಿಕೆ – ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ 67 FIR

    – ಬಾಂಬೆ ಹೈಕೋರ್ಟ್‌ಗೆ ಮಹಾರಾಷ್ಟ್ರ ಸರ್ಕಾರದ ಮಾಹಿತಿ

    ಮುಂಬೈ: ಇಸ್ಲಾಂ ಧರ್ಮ ಮತ್ತು ಪ್ರವಾದಿ ಮೊಹಮ್ಮದ್‌ರ (Prophet Mohammed) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ ರಾಜ್ಯಾದ್ಯಂತ ಸುಮಾರು 67 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ (Bombay High Court) ಹೇಳಿದೆ.

    ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ (Mahant Ramgiri Maharaj) ಅವರು ನೀಡಿದ ಅವಹೇಳಕಾರಿ ಹೇಳಿಕೆಗಳನ್ನು ಎಲ್ಲ ಸೋಶಿಯಲ್ ಮೀಡಿಯಾದಿಂದ ಸೈಬರ್ ಕ್ರೈಂ ಪೊಲೀಸರು (Cyber Crime Police) ತೆಗೆದುಹಾಕುತ್ತಿದ್ದಾರೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಇದನ್ನೂ ಓದಿ: 14 ಸೈಟ್‌ ಕೇಸ್‌ಗಿಂತಲೂ ಇದು ದೊಡ್ಡ ಪ್ರಕರಣ – ಹಳೆಯ ಡಿನೋಟಿಫಿಕೇಶನ್‌ ಕೆದಕಿ ಸಿಎಂಗೆ ಹೆಚ್‌ಡಿಕೆ ಗುದ್ದು

    ಮಹಾರಾಜರೊಂದಿಗೆ ವೇದಿಕೆ ಹಂಚಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಎಫ್‌ಐಆರ್‌ಗಳು ದಾಖಲಾದ ಹಿನ್ನಲೆ, ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ಡಾ.ಬೀರೇಂದ್ರ ಸರಾಫ್ ಅವರು ಕೋರ್ಟ್‌ಗೆ ಈ ವಿಷಯ ತಿಳಿಸಿದರು.

    ವಕೀಲ ಮೊಹಮ್ಮದ್ ವಾಸಿ ಸಯೀದ್ ಮತ್ತು ಇತರರು ಅರ್ಜಿ ಸಲ್ಲಿಸಿದ್ದು, 2014 ರಿಂದ ಕೋಮು ಘಟನೆಗಳು ತೀವ್ರವಾಗಿ ಏರಿಕೆಯಾಗುತ್ತಿವೆ ಮತ್ತು ಮುಸ್ಲಿಮರ ಬಹಿಷ್ಕಾರ ಮತ್ತು ವ್ಯವಸ್ಥಿತ ಇಸ್ಲಾಮೋಫೋಬಿಕ್ ಪದ್ಧತಿಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರಕ್ಷಿಸುತ್ತವೆ ಮತ್ತು ಸಂರಕ್ಷಿಸುತ್ತಿವೆ, ಇದರಿಂದಾಗಿ ಗುಂಪು-ಗುಂಪು ಹತ್ಯೆಗಳು, ಗಲಭೆಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು. ಇದನ್ನೂ ಓದಿ: ಮಾಜಿ ಸಚಿವ ವಿಕೆ ಸಿಂಗ್ ವಿರುದ್ಧ ಮಾನಹಾನಿ ಪೋಸ್ಟ್ – ಯೂಟ್ಯೂಬರ್ ಅರೆಸ್ಟ್

    ಈ ಬಗ್ಗೆ ವಾದ ಮಂಡಿಸಿದ ವಕೀಲ ಎಜಾಜ್ ನಖ್ವಿ, ರಾಮಗಿರಿ ಮಹಾರಾಜರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವ ಬದಲು ಸಿಎಂ ಏಕನಾಥ್ ಶಿಂಧೆ ಮಹಂತ್ ರಾಮಗಿರಿ ಮಹಾರಾಜ್ ಅವರೊಂದಿಗೆ ವೇದಿಕೆ ಹಂಚಿಕೊಂಡು ರಾಜ್ಯದಲ್ಲಿ ಸಂತರಿಗೆ ರಕ್ಷಣೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಇದು ಅವಹೇನಕಾರಿ ಹೇಳಿಕೆ ನೀಡಲು ಪ್ರಚೋದನೆ ನೀಡದಂತಾಗಲಿದೆ ಹೀಗಾಗೀ ಅವರು ವಿರುದ್ಧವೂ ದೂರು ದಾಖಲಿಸಬೇಕು ಎಂದರು.

    ದ್ವೇಷದ ಭಾಷಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ-ದೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ಪೀಠವು, ನಾವು ಭಾಷಣ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ, ಆದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಅವರು ಸಾಧ್ಯವಿರುವ ಕಡೆ ಎಫ್‌ಐಆರ್‌ಗಳನ್ನು ದಾಖಲಿಸುತ್ತಿದ್ದಾರೆ ಎಂದು ಹೇಳಿತು. ಇದನ್ನೂ ಓದಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ದರ ಏರಿಕೆ ಬಿಸಿ – ಇಂದಿನಿಂದಲೇ ಹೊಸ ದರ ಅನ್ವಯ

    ಅಲ್ಲದೇ ಸಿಎಂ ಸ್ವಾಮಿಜಿ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ. ಅವರು ಕಾನೂನು ಉಲ್ಲಂಘಿಸಿರುವ ಬಗ್ಗೆ ಸಾಕ್ಷ್ಯಗಳನ್ನು ನೀಡಿದರೆ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ. ವೀಡಿಯೊಗಳನ್ನು ತೆಗೆದುಹಾಕುವುದು ನಿಮ್ಮ ಮುಖ್ಯ ವಿಷಯ ಅಲ್ಲವೇ ಎಂದು ಕೋರ್ಟ್ ಪ್ರಶ್ನಿಸಿತು. ಈ ವೇಳೆ ಸಿಎಂ ಪರ ವಕೀಲರು ಸಿಎಂ ಹೆಸರು ಪ್ರಕರಣದಿಂದ ಕೈಬಿಡಬೇಕು ಎಂದರು. ಕೋರ್ಟ್ ಅಕ್ಟೊಬರ್ 17 ಕ್ಕೆ ವಿಚಾರಣೆ ಮುಂದೂಡಿದೆ.

  • ಆಕೆ ಧೈರ್ಯಶಾಲಿ – ನೂಪುರ್‌ ಶರ್ಮಾ ಬೆಂಬಲಿಸಿ ವೈಯಕ್ತಿಕ ಸಂದೇಶ ಕಳಿಸಿದ್ದೇನೆಂದ ಡಚ್‌ ನಾಯಕ

    ಆಕೆ ಧೈರ್ಯಶಾಲಿ – ನೂಪುರ್‌ ಶರ್ಮಾ ಬೆಂಬಲಿಸಿ ವೈಯಕ್ತಿಕ ಸಂದೇಶ ಕಳಿಸಿದ್ದೇನೆಂದ ಡಚ್‌ ನಾಯಕ

    ಆಮ್ಸ್ಟರ್ಡ್ಯಾಮ್: ಇಸ್ಲಾಂ ವಿರೋಧಿ ನಿಲುವುಗಳಿಗೆ ಹೆಸರುವಾಸಿಯಾಗಿದ್ದ ಡಚ್ ಬಲಪಂಥೀಯ ನಾಯಕ ಗೀರ್ಟ್ ವೈಲ್ಡರ್ಸ್ (Geert Wilders) ಅವರೀಗ ಮತ್ತೆ ಸುದ್ದಿಯಲ್ಲಿದ್ದಾರೆ.

    ಪ್ರವಾದಿ ಮೊಹಮ್ಮದ್‌ ಪೈಗಂಬರ್‌ (Prophet Mohammed) ಅವರ ಕುರಿತು ಅವಹೇಳಕಾರಿ ಹೇಳಿಕೆ ನೀಡಿ, ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದ ನೂಪುರ್‌ ಶರ್ಮಾ (Nupur Sharma) ಬೆಂಬಲಿಸಿ ಎಕ್ಸ್‌ ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಮುಖವಾಣಿ; ಕೇರಳದ ʻಜೈಹಿಂದ್‌ ಟಿವಿʼ ಚಾನೆಲ್‌ ಬ್ಯಾಂಕ್‌ ಖಾತೆಗಳು ಫ್ರೀಜ್‌!

    ಧೈರ್ಯಶಾಲಿ ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿ ವೈಯಕ್ತಿಕ ಸಂದೇಶ ಕಳುಹಿಸಿದ್ದೇನೆ ಎಂದು ಗೀರ್ಟ್ ವೈಲ್ಡರ್ಸ್ X ಖಾತೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಕಳೆದ ವರ್ಷ ಸಂಸತ್ತಿನ ಚುನಾವಣೆಯಲ್ಲಿ ಗೆಲವು ಸಾಧಿಸಿದ ವೈಲ್ಡರ್ಸ್‌ ನೂಪುರ್‌ ಅವರನ್ನು ಭೇಟಿಯಾಗಲು ಬಯಸುತ್ತೇನೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಟಾಪ್‌ 5 ಸಿಎಂಗಳ ಪೈಕಿ ಯೋಗಿ ಆದಿತ್ಯನಾಥ್‌ಗೆ 2 ನೇ ಸ್ಥಾನ- ಮೊದಲನೇಯವರು ಯಾರು?

    ವೈಲ್ಡರ್ಸ್‌ ಎಕ್ಸ್‌ ಖಾತೆಯಲ್ಲಿ ಏನಿದೆ?
    ಸತ್ಯವನ್ನು ಮಾತನಾಡಿದ್ದಕ್ಕಾಗಿ ಇಸ್ಲಾಮಿಸ್ಟ್‌ಗಳಿಂದ ಬೆದರಿಕೆ ಎದುರಿಸುತ್ತಿರುವ ಧೈರ್ಯಶಾಲಿ ನೂಪುರ್‌ ಶರ್ಮಾ ಅವರಿಗೆ ವೈಯಕ್ತಿಕವಾಗಿ ಬೆಂಬಲಿಸುವ ಸಂದೇಶ ಕಳುಹಿಸಿದ್ದೇನೆ. ಪ್ರಪಂಚದಾದ್ಯಂತ ಇರುವ ಸ್ವಾತಂತ್ರ್ಯ ಪ್ರೇಮಿಗಳು ಅವಳನ್ನು ಬೆಂಬಲಿಸಬೇಕು. ಭಾರತಕ್ಕೆ ಭೇಟಿ ನೀಡುವಾಗ ಒಂದು ದಿನ ಅವರನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಗೀರ್ಟ್ ವೈಲ್ಡರ್ಸ್ ಬರೆದುಕೊಂಡಿದ್ದಾರೆ.

    ಈ ಹಿಂದೆಯೂ ಹಾಡಿ ಹೊಗಳಿದ್ದ ವೈಲ್ಡರ್ಸ್‌:
    ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿ ಈ ಹಿಂದೆಯೂ ವೈಲ್ಡರ್ಸ್‌ ಹೊಗಳಿದ್ದರು. ನೂಪುರ್ ಶರ್ಮಾ ಸತ್ಯವನ್ನು ಬಿಟ್ಟು ಬೇರೇನೂ ಮಾತನಾಡದ ವೀರ ಮಹಿಳೆ. ಇಡೀ ಜಗತ್ತು ಅವಳ ಬಗ್ಗೆ ಹೆಮ್ಮೆ ಪಡಬೇಕು. ಅವಳು ನೊಬೆಲ್ ಪ್ರಶಸ್ತಿಗೆ ಅರ್ಹಳು ಎಂದು ಹೇಳಿದ್ದರು. ಇದನ್ನೂ ಓದಿ: ಭಯೋತ್ಪಾದಕರಿಗೆ ಕಾಂಗ್ರೆಸ್‌ ಮುಕ್ತ ಅವಕಾಶ ಕೊಟ್ಟಿದೆ; ಉದಯಪುರ ಟೈಲರ್‌ ಹತ್ಯೆ ಖಂಡಿಸಿದ ಮೋದಿ

  • ಗನ್ ಲೈಸನ್ಸ್ ಪಡೆದ ಬಿಜೆಪಿ ಮಾಜಿ ನಾಯಕಿ ನೂಪರ್ ಶರ್ಮಾ

    ಗನ್ ಲೈಸನ್ಸ್ ಪಡೆದ ಬಿಜೆಪಿ ಮಾಜಿ ನಾಯಕಿ ನೂಪರ್ ಶರ್ಮಾ

    ನವದೆಹಲಿ: ಪ್ರವಾದಿ ಮೊಹಮ್ಮದ್ (Prophet Mohammed) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಬಿಜೆಪಿ (BJP) ಮಾಜಿ ನಾಯಕಿ ನೂಪುರ್ ಶರ್ಮಾ (Nupur Sharma) ಅವರಿಗೆ ವೈಯಕ್ತಿಕ ಗನ್ ಹೊಂದಲು ಪರವಾನಗಿಯನ್ನು ದೆಹಲಿ ಪೊಲೀಸರು ನೀಡಿದ್ದಾರೆ.

    ಕಳೆದ ವರ್ಷ ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ನೂಪುರ್ ಶರ್ಮಾ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿ, ಪ್ರತಿಭಟನೆಗಳು ನಡೆದಿದ್ದವು. ನೂಪುರ್ ಶರ್ಮಾಗೆ ವಿದೇಶಗಳಿಂದಲೂ ಜೀವ ಬೆದರಿಕೆ ಕರೆಗಳು ಬಂದಿದ್ದವು.

    ಅಜ್ಮೀರ್ ದರ್ಗಾದ ಉದ್ಯೋಗಿಯೊಬ್ಬ ಆಕೆಯ ಕತ್ತು ಸೀಳುವುದಾಗಿ ವೀಡಿಯೋದಲ್ಲಿ ಹೇಳಿಕೆ ನೀಡಿದ್ದು, ಮತ್ತೊಬ್ಬ ಉತ್ತರ ಪ್ರದೇಶದ ನಿವಾಸಿ ಆಕೆಯನ್ನು ನಿಂದಿಸಿ ಶಿರಚ್ಛೇದ ಮಾಡುವುದಾಗಿ ಬೆದರಿಕೆಗಳು ಹಾಕಿದ್ದ. ಇದೆಲ್ಲದರ ಬೆನ್ನಲ್ಲೇ ನೂಪುರ್ ಶರ್ಮಾ ಅವರು ಸ್ವಯಂ ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಪರವಾನಗಿ ಬೇಕು ಎಂದು ದೆಹಲಿ ಪೊಲೀಸರ ಬಳಿ ಅರ್ಜಿ ಸಲ್ಲಿಸಿದ್ದರು. ಇದೀಗ ಈ ಅರ್ಜಿಯನ್ನು ಪರಿಶೀಲಿಸಿ ದೆಹಲಿ ಪೊಲೀಸರು ನೂಪುರ್ ಶರ್ಮಾಗೆ ಪರವಾನಗಿ ನೀಡಿದ್ದಾರೆ.

    ನೂಪುರ್ ವಿರುದ್ಧ ದೂರು ದಾಖಲು: ನೂಪುರ್ ಶರ್ಮಾ ಅವರ ಹೇಳಿಕೆ ವಿವಾದ ಆಗುತ್ತಿದ್ದಂತೆ ರಾಷ್ಟ್ರದ ಅನೇಕ ರಾಜ್ಯಗಳಲ್ಲಿ ಪೊಲೀಸ್ ದೂರು ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಬಂಧನದಿಂದ ರಕ್ಷಣೆ ನೀಡಿತ್ತು. ನೂಪುರ್ ಶರ್ಮಾ ವಿರುದ್ಧ ದಾಖಲಾಗಿರುವ ಒಂಬತ್ತು ಪ್ರಕರಣಗಳಲ್ಲಿ ಅವರನ್ನು ಬಂಧಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ಅಷ್ಟೇ ಅಲ್ಲದೇ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಒಟ್ಟುಗೂಡಿಸಿ ದೆಹಲಿಯಲ್ಲಿ ಈ ಎಲ್ಲಾ ಪ್ರಕರಣಗಳ ವಿಚಾರಣೆ ನಡೆಸುವಂತೆ ಕೋರಿ ನೂಪುರ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿತ್ತು. ಇದನ್ನೂ ಓದಿ: ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

    ಬೆಂಬಲ ನೀಡಿದವರ ಹತ್ಯೆ: ಈ ವಿವಾದಕ್ಕೆ ಸಂಬಂಧಿಸಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದ ಇಬ್ಬರ ಹತ್ಯೆಯೂ ನಡೆದಿತ್ತು. ಆಕೆಗೆ ಬೆಂಬಲ ನೀಡಿದ ಫಾರ್ಮಸಿಸ್ಟ್ ಉಮೇಶ್ ಕೊಲ್ಹೆ ಜೂನ್‍ನಲ್ಲಿ ಮಹಾರಾಷ್ಟ್ರದ ಅಮರಾವತಿಯಲ್ಲಿ ಹತ್ಯೆ ಮಾಡಿದ್ದರು. ಅದಾದ ಕೆಲವೇ ದಿನಗಳ ನಂತರ, ನೂಪುರ್ ಶರ್ಮಾ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲಿಸಿದ್ದ ಉದಯಪುರದ ಟೈಲರ್ ಕನ್ಹಯ್ಯ ಲಾಲ್‍ನನ್ನು ಅವರ ಅಂಗಡಿಯಲ್ಲಿ ಕೊಂದಿದ್ದರು.

    ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಉದಯ್‍ಪುರದಲ್ಲಿ ಟೈಲರ್ ಹತ್ಯೆಯಂತಹ ದುರದೃಷ್ಟಕರ ಘಟನೆ ಆಗುವುದಕ್ಕೆ ನೂಪುರ್ ಶರ್ಮಾ ಹೇಳಿಕೆಯೇ ನೇರ ಕಾರಣ. ಈಗ ನಡೆಯುತ್ತಿರುವ ವಿದ್ಯಮಾನಗಳಿಗೆಲ್ಲ ನೂಪುರ್ ಶರ್ಮಾ ಒಬ್ಬರೇ ಹೊಣೆಗಾರರು ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಇದನ್ನೂ ಓದಿ: 4 ವರ್ಷಗಳ ಬಳಿಕ ಸಿಲಿಕಾನ್ ಸಿಟಿಯಲ್ಲಿ ದಾಖಲೆಯ ಕನಿಷ್ಠ ಉಷ್ಣಾಂಶ ಕುಸಿತ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೂಪುರ್ ಶರ್ಮಾಗೆ ಬಿಗ್ ರಿಲೀಫ್- ಆಗಸ್ಟ್ 10ರವರೆಗೂ ಬಂಧಿಸದಂತೆ ಸುಪ್ರೀಂ ಸೂಚನೆ

    ನೂಪುರ್ ಶರ್ಮಾಗೆ ಬಿಗ್ ರಿಲೀಫ್- ಆಗಸ್ಟ್ 10ರವರೆಗೂ ಬಂಧಿಸದಂತೆ ಸುಪ್ರೀಂ ಸೂಚನೆ

    ನವದೆಹಲಿ: ಬಿಜೆಪಿ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಆಗಸ್ಟ್ 10ರವರೆಗೂ ಅವರನ್ನು ಬಂಧಿಸದಂತೆ ಸೂಚನೆ ನೀಡಿದೆ. ಅಲ್ಲದೇ ಪ್ರಕರಣ ಸಂಬಂಧ ಉತ್ತರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

    ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ದೇಶದ್ಯಾಂತ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಈ ಎಲ್ಲಾ ಪ್ರಕರಣಗಳನ್ನು ರದ್ದು ಮಾಡಿ. ಇಡೀ ಪ್ರಕರಣವನ್ನು ದೆಹಲಿಗೆ ವರ್ಗಾವಣೆ ಮಾಡುವಂತೆ ಹಾಗೂ ಜೀವ ಬೆದರಿಕೆ ಹಿನ್ನೆಲೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಅಮಿತ್ ಶಾ ಫೋಟೋ ದುರ್ಬಳಕೆ ಮಾಡಿದ್ದ ಬಾಲಿವುಡ್ ನಿರ್ದೇಶಕ ಅವಿನಾಶ್ ಅರೆಸ್ಟ್

    ಈ ಅರ್ಜಿ ಬಗ್ಗೆ ಇಂದು ವಿಚಾರಣೆ ನಡೆಸಿದ ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠ, ಆಗಸ್ಟ್ 10ರವರೆಗೂ ಅವರನ್ನು ಬಂಧಿಸಬಾರದು ಎಂದು ಸೂಚಿಸಿ, ಅವರ ಮೇಲಿನ ಎಫ್‌ಐಆರ್‌ಗಳನ್ನು ರದ್ದುಪಡಿಸುವ ಹಾಗೂ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸುವ ಬಗ್ಗೆ ಪರಿಶೀಲಿಸುವುದಾಗಿ ಪೀಠ ಹೇಳಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿತು. ಇದನ್ನೂ ಓದಿ: ತುರ್ತು ಭೂಸ್ಪರ್ಶಿಸಿದ 2 ಗೋಫಸ್ಟ್ ವಿಮಾನ

    ಈ ಹಿಂದೆ ತಮ್ಮ ಮೇಲಿನ ಎಲ್ಲಾ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿ ನೂಪುರ್ ಶರ್ಮಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ನ್ಯಾ. ಸೂರ್ಯಕಾಂತ್ ನೂಪುರ್ ಶರ್ಮಾರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಡೀ ದೇಶದಲ್ಲಿ ಬೆಂಕಿ ಹೊತ್ತಲು ನೂಪುರ್ ಶರ್ಮಾ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ನನ್ನ ಜೀವಕ್ಕೆ ಅಪಾಯವಿದೆ, 4 ವಾರ ಕಾಲಾವಕಾಶ ನೀಡಿ: ಪೊಲೀಸರಿಗೆ ನೂಪುರ್ ಮೇಲ್

    ನನ್ನ ಜೀವಕ್ಕೆ ಅಪಾಯವಿದೆ, 4 ವಾರ ಕಾಲಾವಕಾಶ ನೀಡಿ: ಪೊಲೀಸರಿಗೆ ನೂಪುರ್ ಮೇಲ್

    ಕೋಲ್ಕತ್ತಾ: ಅಮಾನತುಗೊಂಡ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾಗೆ ಕೋಲ್ಕತ್ತಾ ಪೊಲೀಸ್ ಠಾಣೆ ನೋಟಿಸ್ ಜಾರಿಗೊಳಿಸಿದ್ದು, ಇದಕ್ಕೆ ನೂಪುರ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಜೀವಕ್ಕೆ ಅಪಾಯವಿದೆ, ಪೊಲೀಸ್ ಠಾಣೆಗೆ ಹಾಜರಾಗಲು 4 ವಾರಗಳ ಕಾಲಾವಕಾಶ ನೀಡಿ ಎಂದು ಕೋರಿದ್ದಾರೆ.

    ಕೋಲ್ಕತ್ತಾ ಪೊಲೀಸರ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಇ-ಮೇಲ್ ಕಳುಹಿಸಿರುವ ನೂಪುರ್ ಶರ್ಮಾ, 4 ವಾರಗಳ ನಂತರ ಪೊಲೀಸ್ ಠಾಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಯಾವ ದಿನಾಂಕದಂದು ಹಾಜರಾಗುತ್ತಾರೆ ಎಂದು ಸ್ಪಷ್ಟಪಡಿಸಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೊನಾ

    ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ದೇಶದ ವಿವಿಧ ಭಾಗಗಳಲ್ಲಿ ನೂಪುರ್ ವಿರುದ್ಧ ಬೆಂಕಿ ಹೊತ್ತಿಕೊಂಡಿತ್ತು. ಪಶ್ಚಿಮ ಬಂಗಾಳ, ಕೋಲ್ಕತ್ತಾ ಸೇರಿದಂತೆ ಹಲವೆಡೆ ನೂಪುರ್ ಹೆಸರಿನಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಆಕ್ಸಿಜನ್ ಕೊಡೋಕೆ ಆಗದವರು ಈಗ ಯೋಗ ಮಾಡುವುದಕ್ಕೆ ಬಂದಿದ್ದಾರೆ: ಸಿದ್ದರಾಮಯ್ಯ

    ನೂಪುರ್ ವಿರುದ್ಧದ ದೂರಿನ ಆಧಾರದ ಮೇಲೆ ಕೋಲ್ಕತ್ತಾದ ನರಕೊಂಡ ಪೊಲೀಸ್ ಠಾಣೆ ನೂಪುರ್‌ಗೆ ಜೂನ್ 20ರ ಒಳಗಾಗಿ ಹಾಜರಾಗುವಂತೆ ನೋಟಿಸ್ ಕಳುಹಿಸಿತ್ತು. ಆದರೆ ಇದನ್ನು ಮುಂದೂಡುವಂತೆ ನೂಪುರ್ ಮನವಿ ಮಾಡಿದ್ದಾರೆ.

    Live Tv

  • 4 ದಿನಗಳಿಂದ ನೂಪುರ್ ಶರ್ಮಾ ನಾಪತ್ತೆ – ಹುಡುಕಾಡಿ ಸುಸ್ತಾದ ಪೊಲೀಸರು

    4 ದಿನಗಳಿಂದ ನೂಪುರ್ ಶರ್ಮಾ ನಾಪತ್ತೆ – ಹುಡುಕಾಡಿ ಸುಸ್ತಾದ ಪೊಲೀಸರು

    ಮುಂಬೈ: ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಅವರನ್ನು ಪೊಲೀಸರು ಠಾಣೆಗೆ ಕರೆಸಲು ಪ್ರಯತ್ನಿಸುತ್ತಿದ್ದು, 4 ದಿನಗಳಿಂದ ಹುಡುಕಾಡಿ ಸುಸ್ತಾಗಿದ್ದಾರೆ.

    ಅವಹೇಳನಕಾರಿ ಹೇಳಿಕೆ ನೀಡಿ ದೇಶ ವಿದೇಶಗಳಲ್ಲಿ ಕೆಂಗಣ್ಣಿಗೆ ಗುರಿಯಾದ ನೂಪುರ್ ಶರ್ಮಾ ಬಿಜೆಪಿ ಪಕ್ಷದ ವಕ್ತಾರೆ ಸ್ಥಾನದಿಂದಲೂ ಅಮಾನತಾಗಿದ್ದರು. ಬಳಿಕ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಅದರ ಆಧಾರದ ಮೇಲೆ ನೂಪುರ್ ಅವರನ್ನು ಕರೆಸಲಾಗಿತ್ತು. ಆದರೆ ಅವರಿಗೆ ಸಮನ್ಸ್ ಪೇಪರ್ ಹಸ್ತಾಂತರಿಸುವುದು ಹೇಗೆ ಎಂಬ ಪ್ರಶ್ನೆ ಪೊಲೀಸರಿಗೆ ಮೂಡಿದೆ. ಕಳೆದ 4 ದಿನಗಳಿಂದ ನೂಪುರ್ ಅವರನ್ನು ಮುಂಬೈ ಪೊಲೀಸರು ಹುಡುಕುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಜಾಗರೂಕ ನಿರ್ಧಾರದ ಜವಾಬ್ದಾರಿಯನ್ನು ಎದುರಿಸಲು ನಿಮಗೆ ಗಟ್ಸ್ ಇದೆಯಾ?: ಮೋದಿಗೆ ಓವೈಸಿ ಟೀಕೆ

    ಮಹಾರಾಷ್ಟ್ರದ ಗೃಹ ಸಚಿವಾಲಯದ ವಿಶೇಷ ಮೂಲ ಇದನ್ನು ವರದಿ ಮಾಡಿದ್ದು, ನೂಪುರ್ ಶರ್ಮಾ ಅವರನ್ನು ಬಂಧಿಸಲು ಮುಂಬೈ ಪೊಲೀಸರ ಬಳಿ ಸಾಕಷ್ಟು ಪುರಾವೆಗಳಿವೆ. ಹೀಗಾಗಿ ಪೈದೋನಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ನೂಪುರ್ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿದೆ.

    ಮೊದಲಿಗೆ ಸಮನ್ಸ್ ಪ್ರತಿಯನ್ನು ಇ-ಮೇಲ್ ಮೂಲಕ ನೂಪುರ್ ಶರ್ಮಾ ಅವರಿಗೆ ಕಳುಹಿಸಲಾಗಿದ್ದು, ಅವರ ಪ್ರತಿಕ್ರಿಯೆ ಬಾರದ ಹಿನ್ನೆಲೆ ಮುಂಬೈ ಪೊಲೀಸರ ತಂಡ ನಿಯಮಗಳ ಪ್ರಕಾರ ಸಮನ್ಸ್ ಪೇಪರ್ ಅನ್ನು ಹಸ್ತಾಂತರಿಸಲು ದೆಹಲಿಗೆ ತಲುಪಿದೆ. ಆದರೆ ಅಲ್ಲಿ ಅವರು 4 ದಿನಗಳಿಂದ ಜಾಲಾಡಿದರೂ ನೂಪುರ್ ಅವರ ಸುಳಿವು ಸಿಕ್ಕಿಲ್ಲ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಸಲೀಸಾಗಿ ಜೈಲಿನಿಂದ ಹೊರಬರುತ್ತಿರುವ ಹುಬ್ಬಳ್ಳಿ ಕೋಮು ಗಲಭೆಕೋರರು – ಯುಪಿ ಮಾದರಿ ಕ್ರಮಕ್ಕೆ ಆಗ್ರಹ

    ನೂಪುರ್ ಶರ್ಮಾ ಅವರ ವಿವಾದಿತ ಹೇಳಿಕೆಯ ಪರಿಣಾಮ ದೇಶಾದ್ಯಂತ ಅಶಾಂತಿಗೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವೂ ಒತ್ತಡದಲ್ಲಿದೆ.

    Live Tv

  • ವಿಶ್ವವೇ ಮುಸ್ಲಿಮರಿಗೆ ಕ್ಷಮೆ ಕೇಳ್ಬೇಕು – 500 ವೆಬ್‌ಸೈಟ್ಸ್ ಹ್ಯಾಕ್, ಪ್ರವಾದಿ ಅವಹೇಳನಕ್ಕಿದೆಯಾ ಲಿಂಕ್?

    ವಿಶ್ವವೇ ಮುಸ್ಲಿಮರಿಗೆ ಕ್ಷಮೆ ಕೇಳ್ಬೇಕು – 500 ವೆಬ್‌ಸೈಟ್ಸ್ ಹ್ಯಾಕ್, ಪ್ರವಾದಿ ಅವಹೇಳನಕ್ಕಿದೆಯಾ ಲಿಂಕ್?

    ಮುಂಬೈ: ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಬಗೆಗಿನ ಗದ್ದಲದ ನಡುವೆಯೇ ಮಹಾರಾಷ್ಟ್ರದ ಥಾಣೆ ನಗರ ಪೊಲೀಸ್ ಕಮಿಷನರೇಟ್ ಸೇರಿಂತೆ 500ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಮಂಗಳವಾರ ಹ್ಯಾಕ್ ಆಗಿವೆ.

    ಕಮಿಷನರೇಟ್‌ನ ಹ್ಯಾಕ್ ಆದ ವೆಬ್‌ಸೈಟ್‌ನಲ್ಲಿ ಸಂದೇಶವೊಂದು ಕಾಣಿಸಿಕೊಂಡಿದ್ದು, ಅದರಲ್ಲಿ ಜಗತ್ತಿನಾದ್ಯಂತ ಮುಸ್ಲಿಮರಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ. ಮೇಲ್ನೋಟಕ್ಕೆ ಈ ಸಂದೇಶವನ್ನು ಭಾರತ ಸರ್ಕಾರಕ್ಕೆ ನಿರ್ದೇಶಿಸಿರುವಂತಿದೆ.

    ಘಟನೆ ಬಳಿಕ ಮಹಾರಾಷ್ಟ್ರದ ಸೈಬರ್ ಸೆಲ್ ಹ್ಯಾಕ್ ಆಗಿರುವ ರಾಜ್ಯ ಸರ್ಕಾರದ ವೆಬ್‌ಸೈಟ್‌ಗಳನ್ನು ಸರಿಪಡಿಸುವಂತೆ ಆದೇಶಿಸಿದೆ ಹಾಗೂ ಘಟನೆ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಯುಪಿಯಲ್ಲಿ ಬುಲ್ಡೋಜರ್ ಆ್ಯಕ್ಷನ್ ಕಾನೂನಿನ ಅಪಹಾಸ್ಯ- ಕೋರ್ಟ್ ಮೆಟ್ಟಿಲೇರಲು ಮಾಜಿ ನ್ಯಾಯಾಧೀಶರ ಒತ್ತಾಯ

    ಈ ಬಗ್ಗೆ ಮಾಹಿತಿ ನೀಡಿದ ಮಹಾರಾಷ್ಟ್ರದ ಸೈಬರ್ ಸೆಲ್ ಎಡಿಜಿ ಮಧುಕರ್ ಪಾಂಡೆ, ಇಂದು 500ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ. 70ಕ್ಕೂ ಹೆಚ್ಚು ವೆಬ್‌ಸೈಟ್‌ಗಳ ಮೇಲೆ ದಾಳಿ ನಡೆಸಲಾಗಿದ್ದು, ಅವುಗಳಲ್ಲಿ 3 ಸರ್ಕಾರಿ ವೆಬ್‌ಸೈಟ್‌ಗಳು ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ವೆಬ್‌ಸೈಟ್‌ಗಳು ಸೇರಿವೆ. ನಾವು ಈಗಾಗಲೇ ಹಲವು ವೆಬ್‌ಸೈಟ್‌ಗಳನ್ನು ಸರಿಪಡಿಸಿದ್ದೇವೆ, ಇನ್ನೂ ಹಲವು ವೆಬ್‌ಸೈಟ್‌ಗಳನ್ನು ಸರಿಪಡಿಸಬೇಕಿದೆ ಎಂದು ತಿಳಿಸಿದರು.

    ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಗ್ಗೆ ಇದೀಗ ಎಲ್ಲೆಡೆ ಉದ್ವಿಗ್ನತೆ ಎದ್ದಿದ್ದು, ಇದರ ಬೆನ್ನಲ್ಲೇ ಹಲವು ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ. ಈ ಗದ್ದಲಕ್ಕೂ ಸೈಬರ್ ಹ್ಯಾಕ್‌ಗೂ ಸಂಬಂಧ ಇರುವಂತೆ ತೋರುತ್ತದೆ. ಭಾರತದಲ್ಲಿ ಹಲವು ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ. ಮಲೇಷ್ಯಾ ಹಾಗೂ ಇಂಡೋನೇಷ್ಯಾದಲ್ಲೂ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಹ್ಯಾಕರ್ಸ್‌ಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ಇಲ್ಲಿಯವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಚಾಮುಲ್ ಚುನಾವಣೆ: ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ ತೀವ್ರ ಮುಖಭಂಗ

    ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ತಮ್ಮ ಸ್ಥಾನದಿಂದ ಅಮಾನತಾಗಿದ್ದರು. ಅವರ ಹೇಳಿಕೆಯಿಂದ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಮುಸ್ಲಿಂ ಸಮುದಾಯದವರಿಂದ ಟೀಕೆಗೆ ಗುರುಯಾಗಿ ಪ್ರತಿಭಟನೆಗಳನ್ನು ಮಾಡಲಾಗಿತ್ತು.

  • ನೂಪುರ್ ಶರ್ಮಾಗೆ ಬೆಂಬಲಿಸಿದ್ದ ಡಚ್ ರಾಜಕಾರಣಿಗೆ ಕೊಲೆ ಬೆದರಿಕೆ

    ನೂಪುರ್ ಶರ್ಮಾಗೆ ಬೆಂಬಲಿಸಿದ್ದ ಡಚ್ ರಾಜಕಾರಣಿಗೆ ಕೊಲೆ ಬೆದರಿಕೆ

    ಆಂಸ್ಟರ್‌ಡ್ಯಾಮ್: ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಡಚ್ ಬಲಪಂಥೀಯ ರಾಜಕಾರಣಿ ಗೀರ್ಟ್ ವೈಲ್ಡರ್ಸ್ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ.

    ತನ್ನ ದೇಶದಲ್ಲಿ ಇಸ್ಲಾಮಿಕ್ ಉಗ್ರವಾದದ ವಿರುದ್ಧ ಆಗಾಗ ಕಠಿಣ ನಿಲುವುಗಳನ್ನು ತೆಗೆದುಕೊಳ್ಳುವಲ್ಲಿ ಹೆಸರುವಾಸಿಯಾಗಿರುವ ಗೀರ್ಟ್ ವೈಲ್ಡರ್ಸ್, ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್‌ಗೆ ಅವಹೇಳನ ಮಾಡಿದ ನೂಪುರ್ ಶರ್ಮಾಗೆ ಬೆಂಬಲ ನೀಡಿದ್ದರು. ಇದಾದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ತನಗೆ ನೂರಾರು ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ವೈಲ್ಡರ್ಸ್ ತಿಳಿಸಿದ್ದಾರೆ. ಇದನ್ನೂ ಓದಿ: ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಕೋಲ್ಡ್ ವಾರ್ – ನಟಿ ಅನುಷ್ಕಾ ಶೆಟ್ಟಿ ಸಹೋದರನ ಕೊಲೆಗೆ ಸ್ಕೆಚ್

    ಈ ಬಗ್ಗೆ ಟ್ವೀಟ್ ಮಾಡಿರುವ ವೈಲ್ಡರ್ಸ್, ನಾನು ನೂಪುರ್ ಶರ್ಮಾ ಅವರನ್ನು ಬೆಂಬಲಿಸುತ್ತೇನೆ. ನನಗೆ ನೂರಾರು ಕೊಲೆ ಬೆದರಿಕೆಗಳು ಬರುತ್ತಿದ್ದರೂ ಇದು ನನ್ನನ್ನು ಇನ್ನಷ್ಟು ದೃಢ ನಿಲುವನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತಿದೆ. ನೂಪುರ್ ಶರ್ಮಾ ಅವರನ್ನು ಬೆಂಬಲಿಸಲು ನಾನು ಹೆಮ್ಮೆಪಡುತ್ತೇನೆ. ಏಕೆಂದರೆ ಕೆಟ್ಟದ್ದು ಎಂದಿಗೂ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಕೆಲ ನಾಯಕರಿಗೆ ಮಾತ್ರ ನಿಯಮ ಇದು ಯಾವ ನ್ಯಾಯ: ಸಿಡಿದೆದ್ದ ಶಾಸಕ ಕುಲದೀಪ್ ಬಿಷ್ಣೋಯಿ

    ಇದಕ್ಕೂ ಮುನ್ನ ಜೂನ್ 6ರಂದು ಟ್ವೀಟ್ ಮಾಡಿದ್ದ ವೈಲ್ಡರ್ಸ್, ನೂಪುರ್ ಶರ್ಮಾ ಸರಿಯಾದ ಮಾಹಿತಿ ನೀಡಿದ್ದಾರೆ. ಭಾರತ ಅವರ ಬೆಂಬಲಕ್ಕೆ ನಿಲ್ಲಬೇಕು. ಭಾರತೀಯ ರಾಜಕಾರಣಿ ನೂಪುರ್ ಶರ್ಮಾ ಹೇಳಿಕೆಯಿಂದ ಅರಬ್ ಹಾಗೂ ಇಸ್ಲಾಮಿಕ್ ದೇಶಗಳು ಕೋಪಗೊಂಡಿರುವುದು ಹಾಸ್ಯಾಸ್ಪದ. ಭಾರತ ಈ ಬಗ್ಗೆ ಕ್ಷಮೆ ಏಕೆ ಕೇಳಬೇಕು ಎಂದು ಬರೆದಿದ್ದರು.

  • ಪ್ರವಾದಿ ಮೊಹಮ್ಮದ್ ಇದ್ದಿದ್ದರೆ…: ಭುಗಿಲೆದ್ದ ಪ್ರತಿಭಟನೆಗೆ ತಸ್ಲೀಮಾ ನಸ್ರೀನ್ ಪ್ರತಿಕ್ರಿಯೆ

    ಪ್ರವಾದಿ ಮೊಹಮ್ಮದ್ ಇದ್ದಿದ್ದರೆ…: ಭುಗಿಲೆದ್ದ ಪ್ರತಿಭಟನೆಗೆ ತಸ್ಲೀಮಾ ನಸ್ರೀನ್ ಪ್ರತಿಕ್ರಿಯೆ

    ಢಾಕಾ: ಪ್ರವಾದಿ ಮೊಹಮ್ಮದ್‌ಗೆ ಅವಹೇಳನ ಮಾಡಿರುವ ಹಿನ್ನೆಲೆ ಭುಗಿಲೆದ್ದಿರುವ ಹಿಂಸಾಚಾರವನ್ನು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಖಂಡಿಸಿದ್ದಾರೆ.

    ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡಿದ್ದು, ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಆಕ್ರೋಶ ವ್ಯಕ್ತವಾಗಿದೆ. ಈ ಪ್ರತಿಭಟನೆಯನ್ನು ತಸ್ಲೀಮಾ ನಸ್ರೀನ್ ಟ್ವೀಟ್‌ನಲ್ಲಿ ಖಂಡಿಸಿದ್ದಾರೆ.

    ಪ್ರವಾದಿ ಮೊಹಮ್ಮದ್ ಇಂದಿಗೂ ಜೀವಂತವಾಗಿದ್ದರೆ, ಪ್ರಪಂಚದಾದ್ಯಂತ ಮುಸ್ಲಿಂ ಮತಾಂಧರ ಹುಚ್ಚುತನವನ್ನು ನೋಡಿ ಅವರೇ ಆಘಾತಕ್ಕೊಳಗಾಗುತ್ತಿದ್ದರು ಎಂದು ನಸ್ರೀನ್ ಹಿಂಸಾಚಾರವನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ನಾಳೆ ದೇಶಾದ್ಯಂತ ಕಾಂಗ್ರೆಸ್ ಮಹತ್ವದ ಸುದ್ದಿಗೋಷ್ಠಿ

    ನೂಪುರ್ ಶರ್ಮಾ ಅವರ ಹೇಳಿಕೆಗೆ ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದೆ. ಪ್ರತಿಭಟನಾಕಾರರು ನೂಪುರ್ ಅವರನ್ನು ಬಂಧಿಸಬೇಕೆಂದು ಹಾಗೂ ಕೆಲವರು ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದರೆ. ಇದನ್ನೂ ಓದಿ: ಪ್ರವಾದಿಯನ್ನು ಅವಹೇಳನಗೈದ ನೂಪುರ್ ಶರ್ಮಾರನ್ನು ಗಲ್ಲಿಗೇರಿಸಿ: ಎಐಎಂಐಎಂ

    ಈ ವಿವಾದ ನೆರೆಯ ಬಾಂಗ್ಲಾದೇಶಕ್ಕೂ ಹಬ್ಬಿದ್ದು, ಶುಕ್ರವಾರ ಸಾವಿರಾರು ಜನರು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನೂಪುರ್ ಶರ್ಮಾರನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಮಾತ್ರವಲ್ಲದೇ ಭಾರತ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಘೋಷಣೆ ಕೂಗಿದ್ದಾರೆ. ಪ್ರತಿಭಟನಾಕಾರರು ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೂ ಕರೆ ನೀಡಿದ್ದಾರೆ.

  • ಪ್ರವಾದಿಯನ್ನು ಅವಹೇಳನಗೈದ ನೂಪುರ್ ಶರ್ಮಾರನ್ನು ಗಲ್ಲಿಗೇರಿಸಿ: ಎಐಎಂಐಎಂ

    ಪ್ರವಾದಿಯನ್ನು ಅವಹೇಳನಗೈದ ನೂಪುರ್ ಶರ್ಮಾರನ್ನು ಗಲ್ಲಿಗೇರಿಸಿ: ಎಐಎಂಐಎಂ

    ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನ ಮಾಡಿರುವ ನೂಪುರ್ ಶರ್ಮಾ ಅವರನ್ನು ಗಲ್ಲಿಗೇರಿಸಬೇಕು ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಸಂಸದ, ಮಾಜಿ ಪತ್ರಕರ್ತ ಇಮ್ತಿಯಾಜ್ ಜಲೀಲ್ ಹೇಳಿಕೆ ನೀಡಿದ್ದಾರೆ.

    ನೂಪುರ್ ಶರ್ಮಾ ಅವರನ್ನು ಸುಮ್ಮನೆ ಹೋಗಲು ಬಿಟ್ಟರೆ ನಾವು ಪ್ರತಿಭಟಿಸುವುದು ಮುಂದುವರಿಸುತ್ತಲೇ ಇರುತ್ತೇವೆ. ಯಾವುದೇ ಧರ್ಮ ಅಥವಾ ಪಂಥದ ಬಗ್ಗೆ ಇಂತಹ ಟೀಕೆಗಳನ್ನು ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಆಗ್ರಹಿಸಿದರು. ಇದನ್ನೂ ಓದಿ: ಕಲ್ಲು ತೂರಿದವರಿಗೆ ಬುಲ್ಡೋಜರ್‌ ಶಾಕ್‌ ಕೊಟ್ಟ ಯೋಗಿ – ಅಕ್ರಮ ಕಟ್ಟಡಗಳು ಧ್ವಂಸ

    ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್‌ಗೆ ಅವಹೇಳನ ಮಾಡಿರುವ ಹಿನ್ನೆಲೆಯಲ್ಲಿ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಜನರನ್ನು ಪ್ರಚೋದಿದುವ ಸಂದೇಶಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಈ ಕಾರಣಕ್ಕೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಗುರುವಾರ ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆ ಹೊರಭಾಗ ಪ್ರತಿಭಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 30 ಜನರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ – ಇಂಟರ್‌ನೆಟ್ ಸ್ಥಗಿತ, 70 ಮಂದಿ ಅರೆಸ್ಟ್