Tag: Prophet Mohammad

  • ಬಂಧನವಾದ ಕೆಲವೇ ಗಂಟೆಗಳಲ್ಲಿ ತೆಲಂಗಾಣ ಬಿಜೆಪಿ ಶಾಸಕನಿಗೆ ಜಾಮೀನು ಮಂಜೂರು

    ಬಂಧನವಾದ ಕೆಲವೇ ಗಂಟೆಗಳಲ್ಲಿ ತೆಲಂಗಾಣ ಬಿಜೆಪಿ ಶಾಸಕನಿಗೆ ಜಾಮೀನು ಮಂಜೂರು

    ಹೈದರಾಬಾದ್: ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡಿದ ಆರೋಪದಲ್ಲಿ ಮಂಗಳವಾರ ಬಂಧನವಾಗಿದ್ದ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರಿಗೆ ಕೆಲವೇ ಗಂಟೆಗಳಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯ ರಾಜಾ ಸಿಂಗ್ ಅವರ ಬಿಡುಗಡೆಗೆ ಆದೇಶಿಸಿದೆ.

    ರಾಜಾ ಸಿಂಗ್ ಬಂಧನದ ಸಂದರ್ಭದಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ(ಸಿಆರ್‌ಪಿಸಿ) ಸೆಕ್ಷನ್ 41 ಅನ್ನು ಅನುಸರಿಸಿಲ್ಲ ಎಂಬುದನ್ನು ಗಮನಿಸಿದ ಬಳಿಕ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ – ಸತ್ಯೇಂದ್ರ ಜೈನ್ ಪತ್ನಿಗೆ ಜಾಮೀನು ಮಂಜೂರು

    ಸೋಮವಾರ, ರಾಜಾ ಸಿಂಗ್ ಇತ್ತೀಚೆಗೆ ನಗರದಲ್ಲಿ ಪ್ರದರ್ಶನ ನೀಡಿದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫರುಕಿ ಅವರನ್ನು ಟೀಕಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದರು. ಸಿಂಗ್ ಅವರು ಅದರಲ್ಲಿ ಇಸ್ಲಾಂ ಧರ್ಮದ ವಿರುದ್ಧ ಸ್ಪಷ್ಟವಾಗಿ ಕೆಲವು ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಗೋವು ಕಳ್ಳಸಾಗಣೆ ಪ್ರಕರಣ – ಅನುಬ್ರತಾ ಮೊಂಡಲ್‌ಗೆ ಜಾಮೀನು ನೀಡಿ, ಇಲ್ಲವೇ..: ನ್ಯಾಯಾಧೀಶರಿಗೆ ಬೆದರಿಕೆ ಪತ್ರ

    ಈ ಹಿನ್ನೆಲೆ ರಾಜಾ ಸಿಂಗ್ ವಿರುದ್ಧ ಐಪಿಸಿಯ ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ, ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಕಾನೂನಿನ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರವಾದಿ ಅವಹೇಳನ – BJPಯಿಂದ ಶಾಸಕ ರಾಜಾ ಸಿಂಗ್‌ ಅಮಾನತು

    ಪ್ರವಾದಿ ಅವಹೇಳನ – BJPಯಿಂದ ಶಾಸಕ ರಾಜಾ ಸಿಂಗ್‌ ಅಮಾನತು

    ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ತೆಲಂಗಾಣದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಅವರನ್ನು ಪಕ್ಷದ ಕೇಂದ್ರ ಶಿಸ್ತು ಪಾಲನಾ ಸಮಿತಿ ಅಮಾನತುಗೊಳಿಸಿದೆ.

    ಪ್ರವಾದಿ ಕುರಿತು ಅವಹೇಳನಕಾರಿ ಕಾಮೆಂಟ್‌ಗಳಿಗಾಗಿ ರಾಜಾ ಸಿಂಗ್‌ ವಿರುದ್ಧ ಇಂದು ಬೆಳಗ್ಗೆ ಪ್ರಕರಣವನ್ನು ದಾಖಲಿಸಲಾಗಿತ್ತು. ನಂತರ ಅವರನ್ನು ಬಂಧಿಸಲಾಯಿತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ, 295, ಮತ್ತು 505 ರ ಅಡಿಯಲ್ಲಿ ದಬೀರ್‌ಪುರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‌ ಬಗ್ಗೆ ಅವಹೇಳನ – ತೆಲಂಗಾಣದ ಬಿಜೆಪಿ ಶಾಸಕ ಅರೆಸ್ಟ್‌

    ಶಾಸಕನಿಗೆ ಅಮಾನತು ಆದೇಶ ಪತ್ರ ರವಾನಿಸಿರುವ ಬಿಜೆಪಿ, ನಿಮ್ಮ ಹೇಳಿಕೆಗಳು ಪಕ್ಷದ ನೀತಿಗೆ ವಿರುದ್ಧವಾಗಿವೆ ಎಂದು ಎಂದು ತಿಳಿಸಿದೆ.

    ನೀವು ವಿವಿಧ ವಿಷಯಗಳಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೀರಿ, ಇದು ನಿಯಮ 115ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

    ಶಿಸ್ತು ಪಾಲನಾ ಸಮಿತಿಯ ಮುಖ್ಯಸ್ಥ ಓಂ ಪಾಠಕ್ ಅವರು ಬರೆದಿರುವ ಅಮಾನತು ಪತ್ರದಲ್ಲಿ, ನಿಮ್ಮನ್ನು ಪಕ್ಷದಿಂದ ಮತ್ತು ನಿಮ್ಮ ಜವಾಬ್ದಾರಿಗಳು/ನಿಯೋಜನೆಗಳಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ನಿಮಗೆ ತಿಳಿಸಲು ನನಗೆ ಸೂಚಿಸಲಾಗಿದೆ. ನಿಮ್ಮನ್ನು ಪಕ್ಷದಿಂದ ಏಕೆ ಹೊರಹಾಕಬಾರದು ಎಂಬ ಬಗ್ಗೆ 10 ದಿನಗಳಲ್ಲಿ ಕಾರಣವನ್ನು ನೀಡಿ. ನಿಮ್ಮ ಉತ್ತರ ಸೆ.2ರೊಳಗೆ ಸಂಬಂಧಪಟ್ಟವರಿಗೆ ತಲುಪಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: BJPಗೆ ಶಾಂತಿ ನೆಲೆಸುವುದು ಇಷ್ಟವಿಲ್ಲ, ಪ್ರವಾದಿ – ಮುಸ್ಲಿಮರನ್ನು ದ್ವೇಷಿಸುತ್ತಲೇ ಇದೆ: ಓವೈಸಿ ಕಿಡಿ

    ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡುವ ವೀಡಿಯೋವನ್ನು ಸಿಂಗ್ ಬಿಡುಗಡೆ ಮಾಡಿದ್ದರು. ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸೋಮವಾರ ರಾತ್ರಿ ನಗರ ಪೊಲೀಸ್ ಕಮಿಷನರ್ ಸಿ.ವಿ.ಆನಂದ್ ಅವರ ಕಚೇರಿ ಮತ್ತು ಹೈದರಾಬಾದ್‌ನ ಇತರ ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು.

    Live Tv
    [brid partner=56869869 player=32851 video=960834 autoplay=true]

  • ಎಲ್ಲರೂ ನೂಪುರ್‌ಗೆ ಕ್ಷಮೆ ಕೇಳುವಂತೆ ಹೇಳಿದರು, ಆದರೆ ನಾನು ಮಾತ್ರ ಬೆಂಬಲ ನೀಡಿದ್ದೇನೆ: ರಾಜ್ ಠಾಕ್ರೆ

    ಎಲ್ಲರೂ ನೂಪುರ್‌ಗೆ ಕ್ಷಮೆ ಕೇಳುವಂತೆ ಹೇಳಿದರು, ಆದರೆ ನಾನು ಮಾತ್ರ ಬೆಂಬಲ ನೀಡಿದ್ದೇನೆ: ರಾಜ್ ಠಾಕ್ರೆ

    ಮುಂಬೈ: ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆಯನ್ನು ನೀಡಿ ದೇಶ ವಿದೇಶದಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿ, ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಬೆಂಬಲಕ್ಕೆ ಮಂಗಳವಾರ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮುಂದಾಗಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ ಠಾಕ್ರೆ, ಎಲ್ಲರೂ ನೂಪುರ್ ಶರ್ಮಾ ಅವರಿಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು. ಆದರೆ ನಾನು ಆಕೆಯನ್ನು ಬೆಂಬಲಿಸಿದ್ದೇನೆ. ನೂಪುರ್ ನೀಡಿದ ಹೇಳಿಕೆಯನ್ನು ಈ ಹಿಂದೆ ಡಾ. ಜಾಕಿರ್ ನಾಯ್ಕ್ ಹೇಳಿದ್ದರು. ಆದರೆ ನಾಯ್ಕ್ ಅವರಿಗೆ ಯಾರೂ ಕೂಡಾ ಕ್ಷಮೆ ಕೇಳುವಂತೆ ಹೇಳಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ನೂಪುರ್ ಶರ್ಮಾ ಹತ್ಯೆಗೈಯಲು ಟರ್ಕಿಯಲ್ಲಿ ಉಗ್ರನಿಗೆ ಐಸಿಸ್ ತರಬೇತಿ!

    ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ನೂಪುರ್ ಶರ್ಮಾ ಅವರು ನೀಡಿದ್ದ ಹೇಳಿಕೆಯಿಂದ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ಅನೇಕ ಗಲ್ಫ್ ರಾಷ್ಟ್ರಗಳಿಂದ ತೀವ್ರವಾದ ವಿರೋಧ ವ್ಯಕ್ತವಾಯಿತು. ಬಳಿಕ ಬಿಜೆಪಿ ನೂಪುರ್ ಅವರನ್ನು ವಕ್ತಾರೆ ಸ್ಥಾನದಿಂದ ಅಮಾನತುಗೊಳಿಸಿತು. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‌ ಬಗ್ಗೆ ಅವಹೇಳನ – ತೆಲಂಗಾಣದ ಬಿಜೆಪಿ ಶಾಸಕ ಅರೆಸ್ಟ್‌

    ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ದಾಖಲಾದ ಎಲ್ಲಾ ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್ ದೆಹಲಿಗೆ ವರ್ಗಾಯಿಸುವಂತೆ ಆಗಸ್ಟ್ 10 ರಂದು ಆದೇಶ ನೀಡಿತ್ತು.

    Live Tv 
    [brid partner=56869869 player=32851 video=960834 autoplay=true]

  • ನೂಪುರ್ ಶರ್ಮಾ ವಿರುದ್ಧದ ಎಲ್ಲಾ ಪ್ರಕರಣಗಳು ದೆಹಲಿಗೆ ವರ್ಗಾವಣೆ: ಸುಪ್ರೀಂ ಕೋರ್ಟ್

    ನೂಪುರ್ ಶರ್ಮಾ ವಿರುದ್ಧದ ಎಲ್ಲಾ ಪ್ರಕರಣಗಳು ದೆಹಲಿಗೆ ವರ್ಗಾವಣೆ: ಸುಪ್ರೀಂ ಕೋರ್ಟ್

    ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ದಾಖಲಾಗಿರುವ ಎಲ್ಲಾ 10 ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಆದೇಶ ನೀಡಿದೆ. ಇದರಿಂದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾಗೆ ದೊಡ್ಡ ಹೊರೆ ಇಳಿದಂತಾಗಿದೆ.

    ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ನೀಡಿದ್ದ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ನೂಪುರ್ ವಿರುದ್ಧ ದೇಶಾದ್ಯಂತ ಪ್ರಕರಣಗಳು ದಾಖಲಾಗಿತ್ತು. ಇದೀಗ ದಾಖಲಾಗಿರುವ ಎಲ್ಲಾ 10 ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಲಾಗುವುದು, ನೂಪುರ್ ವಿರುದ್ಧದ ಪ್ರಕರಣಗಳ ತನಿಖೆಯನ್ನು ದೆಹಲಿ ಪೊಲೀಸರು ನಡೆಸಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

    ಪ್ರವಾದಿ ಬಗ್ಗೆ ಶರ್ಮಾ ಅವರ ಹೇಳಿಕೆಗಳ ಮೇಲೆ ಇನ್ನೂ ಹೆಚ್ಚಿನ ಎಫ್‌ಐಆರ್‌ಗಳು ದಾಖಲಾದಲ್ಲಿ, ಅವುಗಳನ್ನು ಸ್ವಯಂಚಾಲಿತವಾಗಿ ದೆಹಲಿ ಪೊಲೀಸರಿಗೆ ವರ್ಗಾಯಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: 8ನೇ ಬಾರಿ ಬಿಹಾರದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್

    ನೂಪುರ್ ವಿರುದ್ಧ ದೇಶದ ಹಲವಾರು ರಾಜ್ಯಗಳಲ್ಲಿ ಅನೇಕ ಎಫ್‌ಐಆರ್‌ಗಳು ದಾಖಲಾಗಿದ್ದು, ಅವೆಲ್ಲವನ್ನೂ ಒಂದೇ ಕಡೆಗೆ ವರ್ಗಾಯಿಸುವಂತೆ ಕೋರಿ ನೂಪುರ್ ಶರ್ಮಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸಿದ್ದು, ಆದರೆ ಪಶ್ಚಿಮ ಬಂಗಾಳ ಸರ್ಕಾರ ಇದನ್ನು ವಿರೋಧಿಸಿತ್ತು.

    ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡುತ್ತಾ ನೂಪುರ್, ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಳಿಕ ಇದು ಜಾಗತಿಕ ವಿವಾದಕ್ಕೆ ಕರಣವಾಗಿತ್ತು. ದೇಶ ವಿದೇಶಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆದು, ಹಲವೆಡೆ ಹಿಂಸಾಚಾರಗಳೂ ವರದಿಯಾಗಿವೆ. ಈ ಹಿನ್ನೆಲೆ ಸುಪ್ರೀಂ ಕೋರ್ಟ್ ಕೂಡಾ ನೂಪುರ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಬಿಜೆಪಿ ಈ ವಿವಾದದಿಂದ ದೂರ ಸರಿದು, ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಹಾಗೂ ವಕ್ತಾರೆ ಹುದ್ದೆಯಿಂದ ಅಮಾನತುಗೊಳಿಸಿತ್ತು. ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿಲ್ಲ ಮಹಿಳೆಯರಿಗೆ ರಕ್ಷಣೆ – ನಿತ್ಯ 6 ರೇಪ್, 7 ಕಿರುಕುಳ ಪ್ರಕರಣಗಳು ವರದಿ

    Live Tv
    [brid partner=56869869 player=32851 video=960834 autoplay=true]

  • ನೂಪುರ್ ಶರ್ಮಾಗೆ ಶಿರಚ್ಛೇದನದ ಬೆದರಿಕೆ – ಯುಪಿಯಲ್ಲಿ ಆರೋಪಿ ಅರೆಸ್ಟ್

    ನೂಪುರ್ ಶರ್ಮಾಗೆ ಶಿರಚ್ಛೇದನದ ಬೆದರಿಕೆ – ಯುಪಿಯಲ್ಲಿ ಆರೋಪಿ ಅರೆಸ್ಟ್

    ಲಕ್ನೋ: ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಪಕ್ಷದಿಂದ ಅಮಾನತುಗೊಂಡಿದದ್ದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾರ ಶಿರಚ್ಛೇದನ ಮಾಡುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ನಾಸಿರ್‌ನನ್ನು ಉತ್ತರ ಪ್ರದೇಶದ ಬರೇಲಿಯಲ್ಲಿ ಬಂಧಿಸಲಾಗಿದ್ದು, ಆತ ನೂಪುರ್ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ. ಇದಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ಜೆಪಿ ನಡ್ಡಾ ಭೇಟಿ- ಬಿಜೆಪಿ ಸೇರ್ಪಡೆ?

    ನಾಸಿರ್ ಹುಸೇನ್ ಸಾಮಾಜಿಕ ಮಾಧ್ಯಮಗಳಲ್ಲಿ ನೂಪುರ್ ಅವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದ ಹಾಗೂ ಕೋಮು ಉದ್ವಿಗ್ನತೆಗೆ ಪ್ರಚೋದಿಸಿದ್ದ. ಈ ಹಿನ್ನೆಲೆ ನಾವು ಆತನನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ವಿವಾದಾತ್ಮಕ ಟ್ವೀಟ್ – ಹರಿಯಾಣ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ವಜಾ

    ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿಕೆ ನೀಡಿದ ನೂಪುರ್ ಶರ್ಮಾ ಜಾಗತಿಕವಾಗಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಜೆಪಿ ಪಕ್ಷ ನೂಪುರ್‌ಅನ್ನು ಅಮಾನತುಗೊಳಿಸಿದ್ದು, ಅವರ ವಿರುದ್ಧ ಹಲವೆಡೆ ಎಫ್‌ಐಆರ್‌ಗಳು ದಾಖಲಾಗಿವೆ. ನೂಪುರ್ ಶರ್ಮಾ ವಿರುದ್ಧ ಜಾಗತಿಕವಾಗಿ ಆಕ್ರೋಶ ಹೊರಹೊಮ್ಮುತ್ತಿರುವ ನಡುವೆ ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಕೂಡಲೇ ವಿಚಾರಣೆಗೆ ಹಾಜರಾಗಿ – ಬಂಗಾಳ ಪೊಲೀಸರಿಂದ ನೂಪುರ್‌ಗೆ ಕೊನೆಯ ಎಚ್ಚರಿಕೆ

    ಕೂಡಲೇ ವಿಚಾರಣೆಗೆ ಹಾಜರಾಗಿ – ಬಂಗಾಳ ಪೊಲೀಸರಿಂದ ನೂಪುರ್‌ಗೆ ಕೊನೆಯ ಎಚ್ಚರಿಕೆ

    ಕೋಲ್ಕತ್ತಾ: ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ದೇಶ-ವಿದೇಶಗಳಲ್ಲಿ ಹೊತ್ತಿ ಉರಿಯುವಂತಾಗಿದೆ. ಆದರೆ ಈ ಘಟನೆಯ ಬಳಿಕ ಇಲ್ಲಿಯವರೆಗೆ ನೂಪುರ್ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದೀಗ ನೂಪುರ್ ವಿಚಾರಣೆಗೆ ಇನ್ನಷ್ಟು ಸಮಯಾವಕಾಶ ನೀಡಲು ಕೋಲ್ಕತ್ತಾ ಪೊಲೀಸರು ನಿರಾಕರಿಸಿದ್ದಾರೆ.

    ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಅವರ ವಿರುದ್ಧ ನಾರ್ಕೆಲ್ಡಂಗಾ ಹಾಗೂ ಅಮ್ಹೆರ್ಸ್ಟ್ ಸ್ಟ್ರೀಟ್ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾಗಿದ್ದರೂ, ತನ್ನ ಜೀವಕ್ಕೆ ಅಪಾಯವಿದೆ, ಪೊಲೀಸ್ ಠಾಣೆಗೆ ಹಾಜರಾಗಲು ಸ್ವಲ್ಪ ಕಾಲಾವಕಾಶ ಬೇಕು ಎಂದು ಇ-ಮೇಲ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ನೇರವಾಗಿ ಒಪಿಡಿಗೆ ಓಡಿಬಂದ ಕತ್ತೆ- ಗಾಬರಿಗೊಂಡ ರೋಗಿಗಳು

    ಈಗ ಪೊಲೀಸರು ನೂಪುರ್‌ಗೆ ಇನ್ನಷ್ಟು ಸಮಯಾವಕಾಶ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಕೂಡಲೇ ವಿಚಾರಣೆಗೆ ಹಾಜರಾಗಬೇಕೆಂದು ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

    ವರದಿಗಳ ಪ್ರಕಾರ ಕೋಲ್ಕತ್ತಾ ಪೊಲೀಸರು ಶನಿವಾರ ನೂಪುರ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದು, ಇದಕ್ಕೆ ನೂಪುರ್ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ. ನರ್ಕೆಲ್ಡಂಗಾ ಪೊಲೀಸ್ ಠಾಣೆಗೆ ಇ-ಮೇಲ್ ಮೂಲಕ ಮತ್ತೆ ಜೀವಭಯ ವ್ಯಕ್ತಪಡಿಸಿ ಹೆಚ್ಚಿನ ಸಮಯಾವಕಾಶ ಕೋರಿದ್ದಾರೆ. ಆದರೆ ಇನ್ನು ಸಮಯಾವಕಾಶ ನೀಡಲು ನಿರಾಕರಿಸಿರುವ ಪೊಲೀಸರು, ತಕ್ಷಣವೇ ವಿಚಾರಣೆಗೆ ಹಾಜರಾಗದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮೈದಾ, ರವೆ ಸೇರಿದಂತೆ ಹಿಟ್ಟಿನ ರಫ್ತಿಗೆ ನಿಷೇಧ ಹೇರಿದ ಭಾರತ

    ನೂಪುರ್ ಶರ್ಮಾ ಅವರ ಒಂದು ವಿವಾದಾತ್ಮಕ ಹೇಳಿಕೆಗೆ ದೇಶಾದ್ಯಂತ ಭೀಕರ ಹಿಂಸಾಚಾರಗಳು ನಡೆದಿದ್ದು, ಈ ಹಿನ್ನೆಲೆ ಸುಪ್ರೀಂ ಕೋರ್ಟ್ ಇದೆಲ್ಲದಕ್ಕೂ ಹೊಣೆ ನೂಪುರ್ ಶರ್ಮಾ ಎಂದು ಹೇಳಿತ್ತು. ಅವರ ಹೇಳಿಕೆಯಿಂದ ದೇಶದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದ್ದು, ಇದೆಲ್ಲದಕ್ಕೂ ಆಕೆ ಇಡೀ ದೇಶಕ್ಕೆ ಕ್ಷಮೆ ಕೇಳಬೇಕು ಎಂದು ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಂಸಾಚಾರಕ್ಕೆ ನೀವೇ ಹೊಣೆ, ಇಡೀ ದೇಶದ ಕ್ಷಮೆ ಕೇಳಬೇಕು – ನೂಪುರ್‌ ಶರ್ಮಾಗೆ ಸುಪ್ರೀಂ ತರಾಟೆ

    ಹಿಂಸಾಚಾರಕ್ಕೆ ನೀವೇ ಹೊಣೆ, ಇಡೀ ದೇಶದ ಕ್ಷಮೆ ಕೇಳಬೇಕು – ನೂಪುರ್‌ ಶರ್ಮಾಗೆ ಸುಪ್ರೀಂ ತರಾಟೆ

    ನವದೆಹಲಿ: ಪ್ರವಾದಿ ಮೊಹಮ್ಮದ್‌ ಅವರ ಬಗ್ಗೆ ವಿವಾದಿತ ಹೇಳಿಕೆ ನೀಡಿ ದೇಶದಲ್ಲಿ ಹಿಂಸಾಚಾರಕ್ಕೆ ಕಾರಣರಾದ ಬಿಜೆಪಿ ಉಚ್ಚಾಟಿತ ನಾಯಕಿ ನೂಪುರ್‌ ಶರ್ಮಾರನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ನಿಮ್ಮ ಹೇಳಿಕೆಗೆ ಇಡೀ ದೇಶಕ್ಕೆ ಕ್ಷಮೆಯಾಚಿಸಬೇಕು ಎಂದು ಶರ್ಮಾಗೆ ಕೋರ್ಟ್‌ ತಾಕೀತು ಮಾಡಿದೆ.

    ಪ್ರವಾದಿ ಬಗ್ಗೆ ಶರ್ಮಾ ನೀಡಿದ ವಿವಾದಾತ್ಮಕ ಹೇಳಿಕೆಗೆ ಗಲ್ಫ್‌ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೇ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದು, ಹಿಂಸಾಚಾರಕ್ಕೂ ತಿರುಗಿದೆ. ಅನೇಕ ದುರ್ಘಟನೆಗಳು ನಡೆಯುತ್ತಿದೆ. ಇದಕ್ಕೆಲ್ಲ ನೂಪುರ್‌ ಶರ್ಮಾ ಕಾರಣ ಎಂದು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಉದಯಪುರ ಟೈಲರ್‌ ಹತ್ಯೆ ಪ್ರಕರಣ – ಟೀಕೆ ಬೆನ್ನಲ್ಲೇ 32 ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

    SUPREME COURT

    ಆಕೆಯ ಪ್ರಚೋದನಕಾರಿ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಆದರೆ ಆಕೆ ಇದನ್ನೆಲ್ಲ ಹೇಳಿದ ರೀತಿ ಮತ್ತು ನಂತರ ತಾನು ವಕೀಲೆ ಎಂದು ಹೇಳಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇಡೀ ದೇಶದ ಕ್ಷಮೆ ಕೇಳಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್‌ ವಾಗ್ದಾಳಿ ನಡೆಸಿದ್ದಾರೆ.

    ನೂಪುರ್ ಶರ್ಮಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿತು. ಆಕೆ ಬೆದರಿಕೆಗಳನ್ನು ಎದುರಿಸುತ್ತಿದ್ದಾಳೆ ಎಂದು ಆಕೆ ಪರ ವಕೀಲರು ತಿಳಿಸಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಪ್ರೊಫೈಲ್ ಚೇಂಜ್ ಮಾಡಿದ ಶಿಂಧೆ – ಬಾಳ್ ಠಾಕ್ರೆ ಫೋಟೋ ಜೊತೆಗೆ ಕೊಟ್ಟ ಸಂದೇಶವೇನು?

    ನೂಪುರ ಶರ್ಮಾ ಬೇಜವಾಬ್ದಾರಿ ಹೇಳಿಕೆಯಿಂದಲೇ ಉದಯಪುರದ ಘಟನೆ ನಡೆದಿದೆ. ನೂಪುರ ಶರ್ಮಾ ಹೇಳಿಕೆ ಹಿಂತೆಗೆದುಕೊಂಡಿದ್ದು ಬಹಳ ತಡವಾಗಿ. ಶರ್ಮಾ ದೂರಿನ ಆಧಾರದ ಮೇಲೆ ಓರ್ವ ವ್ಯಕ್ತಿಯ ಬಂಧನವಾಗಿದೆ. ನೂಪುರ್ ಶರ್ಮಾ ಬಂಧನ ಏಕಾಗಿಲ್ಲ?‌ ನೂಪೂರ್ ಶರ್ಮಾ ವಿರುದ್ಧ ಡಜನ್ ಎಫ್‌ಐಆರ್‌ ದಾಖಲಾದರೂ ಬಂಧನವಾಗಿಲ್ಲ ಎಂದು ಕೋರ್ಟ್‌ ಗರಂ ಆಗಿದೆ.

    ದೇಶದಲ್ಲಿ ನಡೆಯುತ್ತಿರುವ ದುರ್ಘಟನೆಗೆ ನೂಪುರ್‌ ಶರ್ಮಾ ಹೊಣೆ. ಪಕ್ಷದ ವಕ್ತಾರೆ ಆದ ಕಾರಣದಿಂದ ಅಧಿಕಾರ ನೆತ್ತಿಗೇರಿದೆ. ನೂಪೂರ್ ಶರ್ಮಾ ಧಾರ್ಮಿಕ ವ್ಯಕ್ತಿಯಲ್ಲ. ವಿವಿಧ ಧರ್ಮದವರು ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ. ಶರ್ಮಾ ಹೇಳಿಕೆಯಿಂದ ದೇಶದ ಭದ್ರತೆಗೆ ಧಕ್ಕೆ ಉಂಟಾಗಿದೆ. ದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರದ ಹೊಣೆಯನ್ನು ಅವರೇ ಹೊರಬೇಕು ಎಂದು ಹೇಳಿದೆ.

    Live Tv

  • ದೇಶದಲ್ಲಿ ಆರಂಭವಾಗಿರುವ ದ್ವೇಷದ ಭಾವನೆ ಕುರಿತು ಮೋದಿ ಮೌನ ಮುರಿಯಲಿ: ಶಶಿ ತರೂರ್

    ದೇಶದಲ್ಲಿ ಆರಂಭವಾಗಿರುವ ದ್ವೇಷದ ಭಾವನೆ ಕುರಿತು ಮೋದಿ ಮೌನ ಮುರಿಯಲಿ: ಶಶಿ ತರೂರ್

    ದೆಹಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ, ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆಯಿಂದ ದೇಶದಲ್ಲಿ ಧಂಗೆ ಆರಂಭವಾಗಿದೆ. ಈ ಮೂಲಕ ದ್ವೇಷದ ಭಾವನೆ ಹೆಚ್ಚುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಬೇಕು ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.

    ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಅವರು, ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ನೂಪುರ್ ಶರ್ಮಾ ವಿರುದ್ಧ ಮುಸ್ಲಿಂ ಸಮುದಾಯದವರು ಪ್ರತಿಭಟನೆ ಆರಂಭಿಸಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಇದರಿಂದಾಗಿ ಭಾರತ ಮತ್ತು ಮುಸ್ಲಿಂ ರಾಷ್ಟ್ರಗಳೊಂದಿಗೆ ಕೆಲ ವರ್ಷಗಳಿಂದ ಬೆಳೆದಿದ್ದ ಉತ್ತಮ ಸಂಬಂಧಕ್ಕೆ ಹೊಡೆತ ಬಿದ್ದಿದೆ. ಇದೀಗ ಈ ಬಗ್ಗೆ ಮೋದಿ ಮಾತನಾಡುವ ಅಗತ್ಯವಿದೆ ಎಂದರು. ಇದನ್ನೂ ಓದಿ: ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

    ಮುಸ್ಲಿಂ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧಗಳೊಂದಿಗೆ ದೇಶ ಪ್ರಗತಿಯತ್ತ ಮುನ್ನುಗ್ಗುತ್ತಿದ್ದಂತೆ ಈ ರೀತಿಯ ವರ್ತನೆಗಳು ಸರಿಯಲ್ಲ. ಇದರಿಂದ ದೇಶದ ಪ್ರಗತಿಗೆ ಅಪಾಯ. ಇಂತಹ ಹೇಳಿಕೆಗಳನ್ನು ಕೊಟ್ಟು ದೇಶದಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ ಮೋದಿ ಗಮನಿಸುತ್ತಿರಬಹುದು. ಈ ಬಗ್ಗೆ ಕೂಡಲೇ ಮೋದಿ ಸಾರ್ವಜನಿಕವಾಗಿ ಮಾತನಾಡಬೇಕು. ಈ ಮೂಲಕ ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೂದಿಮುಚ್ಚಿದ ಕೆಂಡದಂತೆ ಭಾರತ – ಯುಪಿಯಲ್ಲಿ 250ಕ್ಕೂ ಗಲಭೆಕೋರರು ಅರೆಸ್ಟ್

    ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ನೀಡಿದ್ದ ವಿವಾದತ್ಮಕ ಹೇಳಿಕೆ ಖಂಡಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ದೇಶದ ವಿವಿಧೆಡೆ ಹೊತ್ತಿ ಉರಿದಿದ್ದ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತೆ ಇದೆ. ಉತ್ತರ ಪ್ರದೇಶ, ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಸೇರಿ ಹಲವು ರಾಜ್ಯಗಳಲ್ಲಿ ಗಲಭೆಕೋರರ ವಿರುದ್ಧ ಕಠಿಣ ಸೆಕ್ಷನ್‍ಗಳ ಅನ್ವಯ ಕೇಸ್ ದಾಖಲಿಸಲಾಗಿದೆ.

  • ಪ್ರವಾದಿಗೆ ಅವಹೇಳನ – ಭಾರತದ ನಿಲುವಿನ ಬಗ್ಗೆ ತೃಪ್ತಿಯಿದೆ ಎಂದ ಇರಾನ್

    ನವದೆಹಲಿ: ಪ್ರವಾದಿ ಮೊಹಮ್ಮದ್ ಬಗೆಗಿನ ವಿವಾದಾತ್ಮಕ ಹೇಳಿಕೆ ಜಾಗತಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಭಾರತ ತೆಗೆದುಕೊಂಡ ನಿರ್ಧಾರದ ಬಗ್ಗೆ ತೃಪ್ತಿಯಿದೆ ಎಂದು ಇರಾನ್ ಹೇಳಿದೆ.

    ಭಾರತಕ್ಕೆ ಭೇಟಿ ನೀಡಿದ ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್, ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದವರ ಬಗ್ಗೆ ಭಾರತ ಸರ್ಕಾರ ತೆಗೆದುಕೊಂಡಿರುವ ಕ್ರಮ ಹಾಗೂ ಪ್ರಯತ್ನಗಳಿಂದ ನಮಗೆ ತೃಪ್ತಿ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಠ್ಯದಲ್ಲಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪಾಠವನ್ನು ಕಾಂಗ್ರೆಸ್ ಸರ್ಕಾರ ತೆಗೆದುಹಾಕಿತ್ತು: ಬಿಜೆಪಿ

    ಕಳೆದ ವರ್ಷ ಅಧಿಕಾರ ವಹಿಸಿಕೊಂಡ ಬಳಿಕ ಬುಧವಾರ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ ಅಬ್ದುಲ್ಲಾಹಿಯಾನ್ ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ರನ್ನು ಭೇಟಿಯಾದರು. ಈ ವೇಳೆ ಸಭೆಯಲ್ಲಿ ಮಾಜಿ ಬಿಜೆಪಿ ವಕ್ತಾರರ ವಿವಾದಾತ್ಮಕ ಹೇಳಿಕೆ ವಿಚಾರವನ್ನು ಪ್ರಸ್ತಾಪಿಸಲಾಯಿತು. ಇದನ್ನೂ ಓದಿ: ಎಂಟು ವರ್ಷಗಳಲ್ಲಿ ಭಾರತದ ಜೈವಿಕ ಆರ್ಥಿಕತೆ 8 ಪಟ್ಟು ಬೆಳೆದಿದೆ: ಪ್ರಧಾನಿ

    ವಿವಾದಾತ್ಮಕ ಹೇಳಿಕೆ ಬಗ್ಗೆ ಮಾತನಾಡಿದ ದೋವಲ್, ಪ್ರವಾದಿ ಮೊಹಮ್ಮದ್ ಬಗ್ಗೆ ಭಾರತ ಸರ್ಕಾರ ಹಾಗೂ ಅಧಿಕಾರಿಗಳಿಗೆ ಗೌರವವಿದೆ. ಅವರ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡಿರುವವರ ಬಗ್ಗೆ ಸರ್ಕಾರವೂ ತಕ್ಕ ರೀತಿಯಲ್ಲಿ ವ್ಯವಹರಿಸಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್ಲಾಹಿಯಾನ್ ಭಾರತದ ನಿಲುವಿನ ಬಗ್ಗೆ ನಾವು ತೃಪ್ತರಾಗಿದ್ದೇವೆ ಎಂದಿದ್ದಾರೆ.

    ಬಿಜೆಪಿ ಪಕ್ಷದ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಇತ್ತೀಚೆಗೆ ಪ್ರವಾದಿ ಮೊಹಮ್ಮದರ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಇದು ಗಲ್ಫ್ ದೇಶಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ಶರ್ಮಾ ಅವರನ್ನು ಭಾನುವಾರ ಬಿಜೆಪಿ ಪಕ್ಷದಿಂದ ಅಮಾನತುಗೊಳಿಸಲಾಯಿತು.

  • ಸಂಕುಚಿತ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ – OICಗೆ ವಿದೇಶಾಂಗ ಇಲಾಖೆಯ ತಿರುಗೇಟು

    ಸಂಕುಚಿತ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ – OICಗೆ ವಿದೇಶಾಂಗ ಇಲಾಖೆಯ ತಿರುಗೇಟು

    ನವದೆಹಲಿ : ಪ್ರವಾದಿ ಮುಹಮ್ಮದ್ ಪೈಗಂಬರ್‌ರ ಬಗ್ಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ನೀಡಿದ ಹೇಳಿಕೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಹೇಳಿಕೆ ಹಿನ್ನಲೆಯಲ್ಲಿ ಭಾರತ ಸರ್ಕಾರವನ್ನು ಟೀಕಿಸಿದ್ದ ಇಸ್ಲಾಮಿಕ್ ಸಹಕಾರ ಸಂಘಟನೆಗೆ (OIC) ಭಾರತೀಯ ವಿದೇಶಾಂಗ ಇಲಾಖೆ ತಿರುಗೇಟು ನೀಡಿದೆ.

    ಇಂದು ಪ್ರಕರಣ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ, “ನಾವು ಇಸ್ಲಾಮಿಕ್ ಸಹಕಾರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಭಾರತದ ಬಗ್ಗೆ ಮಾತನಾಡಿರುವುದನ್ನು ಗಮನಿಸಿದ್ದೇವೆ, ಭಾರತ ಸರ್ಕಾರದವು ಓಐಸಿ ಕಾರ್ಯದರ್ಶಿಯ ಅನಪೇಕ್ಷಿತ ಹೇಳಿಕೆಗಳನ್ನು ತಿರಸ್ಕರಿಸಿದ್ದು, ಇವು ಸಂಕುಚಿತ ಮನಸ್ಸಿನಿಂದ ಕೂಡಿದ ಹೇಳಿಕೆಗಳು” ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪೈಗಂಬರ್‌ ವಿರುದ್ಧ ವಿವಾದಾತ್ಮಕ ಹೇಳಿಕೆ – ಯಾರು ಈ ನೂಪುರ್ ಶರ್ಮಾ?

    OIC ಸೆಕ್ರೆಟರಿಯೇಟ್ ಮತ್ತೊಮ್ಮೆ ಪ್ರೇರಿತ, ತಪ್ಪುದಾರಿಗೆಳೆಯುವ ವಿಚಾರ ಆಯ್ಕೆ ಮಾಡಿರುವುದು ವಿಷಾದನೀಯ, OIC ಸೆಕ್ರೆಟರಿಯೇಟ್ ತನ್ನ ಕೋಮುವಾದಿ ವಿಧಾನವನ್ನು ಅನುಸರಿಸುವುದನ್ನು ನಿಲ್ಲಿಸಬೇಕು, ಎಲ್ಲಾ ನಂಬಿಕೆಗಳು ಮತ್ತು ಧರ್ಮಗಳಿಗೆ ಸರಿಯಾದ ಗೌರವವನ್ನು ತೋರಿಸಲು ನಾವು ಒತ್ತಾಯಿಸುತ್ತೇವೆ ಎಂದು ಅರಿಂದಮ್ ಬಾಗ್ಚಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ‌. ಇದನ್ನೂ ಓದಿ: ನೂಪುರ್ ಶರ್ಮಾ ವಿರುದ್ಧ ಕತಾರ್ ಕಿಡಿ – ಟ್ರೆಂಡಿಂಗ್ ಆಯ್ತು #BycottQatarAirways ಅಭಿಯಾನ

    ಭಾರತ ಸರ್ಕಾರವು ಎಲ್ಲ ಧರ್ಮಗಳಿಗೆ ಅತ್ಯುನ್ನತ ಗೌರವವನ್ನು ನೀಡುತ್ತದೆ, ಆಕ್ಷೇಪಾರ್ಹ ಹೇಳಿಕೆಗಳನ್ನು ನಿರ್ದಿಷ್ಟ ಧಾರ್ಮಿಕ ವ್ಯಕ್ತಿಗಳು ಮಾಡಿದ್ದಾರೆ. ಇದು ಭಾರತ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ, ಸಂಬಂಧಿತ ಸಂಸ್ಥೆಗಳಿಂದ ಈ ವ್ಯಕ್ತಿಗಳ ವಿರುದ್ಧ ಈಗಾಗಲೇ ಬಲವಾದ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.