Tag: property

  • ತಂದೆ, ತಾಯಿ ಕಿರುಕುಳಕ್ಕೆ ಮಗ ಆತ್ಮಹತ್ಯೆ

    ತಂದೆ, ತಾಯಿ ಕಿರುಕುಳಕ್ಕೆ ಮಗ ಆತ್ಮಹತ್ಯೆ

    ಮಂಡ್ಯ: ಹೆತ್ತವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಮಗ ಆತ್ಮಹತ್ಯೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತೀಹಳ್ಳಿ ಗ್ರಾಮದಲ್ಲಿ ಜರುಗಿದೆ.

    mandya sucide

    ಮೃತ ದುರ್ದೈವಿ ಗಿರೀಶ್(32) ಆಗಿದ್ದು, ತನ್ನ ಆತ್ಮಹತ್ಯೆಗೆ ಅಪ್ಪ ರಾಜು, ಅಮ್ಮ ದೇವಮಣಿ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಗಿರೀಶ್ ತಂದೆ ರಾಜು ನಿವೃತ್ತ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದರೆ, ತಾಯಿ ದೇವಮಣಿ ಈಗಲೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. 11 ವರ್ಷದ ಹಿಂದೆ ತ್ರಿವೇಣಿ ಎಂಬಾಕೆಯನ್ನು ಗಿರೀಶ್ ಮದುವೆಯಾಗಿದ್ದ. ಇಷ್ಟು ವರ್ಷವಾದರೂ ಸಹ ಇವರಿಗೆ ಮಕ್ಕಳಾಗಿರಲಿಲ್ಲ. ಇದನ್ನೂ ಓದಿ: ಲಂಕೆಯಲ್ಲಿ ‘ಪಿಪಿಪಿ’ ಸಾಂಗ್ ಗುಂಗು – ಭರ್ಜರಿ ಸ್ಟೆಪ್ಸ್ ಹಾಕಿದ ಯೋಗಿ, ಕೃಷಿ ತಾಪಂಡ

    mandya sucide

    ಹೀಗಾಗಿ ಅಪ್ಪ-ಅಮ್ಮ ಮಗ ಗಿರೀಶ್‍ಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಅಲ್ಲದೇ ಆಸ್ತಿ ಕೊಟ್ಟಿರಲಿಲ್ಲ. ಜೊತೆಗೆ ವಾಸ ಮಾಡಲು ಮನೆ ಕೂಡ ನೀಡಿರಲಿಲ್ಲ ಎಂದು ಆರೋಪ ಮಾಡಿದ್ದಾರೆ. ತಾವು ಚೆಂದದ ಮನೆಯಲ್ಲಿ ವಾಸವಿದ್ದು, ಗಿರೀಶ್ ಮತ್ತು ಅವರ ಪತ್ನಿಗೆ ತಮ್ಮ ಮನೆಯ ಕೊಟ್ಟಿಯಲ್ಲಿ ವಾಸ ಮಾಡಲು ಬಿಟ್ಟಿದ್ದರು. ಮಕ್ಕಳಾಗಲಿಲ್ಲ ಎಂದು ದಿನೇ, ದಿನೇ ತಂದೆ-ತಾಯಿಗಳು ಗಿರೀಶ್ ಹಾಗೂ ಆತನ ಪತ್ನಿಯನ್ನು ಹಂಗಿಸುತ್ತಿದ್ದರು. ಇದರಿಂದ ಮನನೊಂದು ಗಿರೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

    ತನ್ನ ಸಾವಿಗೆ ಅಪ್ಪ, ಅಮ್ಮನ ಕಿರುಕುಳವೇ ಕಾರಣ ಎಂದು ಡೆತ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗನ ಸಾವಿನ ನಂತರ ತಂದೆ-ತಾಯಿಗಳು ತಲೆ ಮರೆಸಿಕೊಂಡಿದ್ದು, ಸದ್ಯ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ, ಆಸ್ತಿಗಾಗಿ ಶರಣೆಯರ ಕಿತ್ತಾಟ

    ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ, ಆಸ್ತಿಗಾಗಿ ಶರಣೆಯರ ಕಿತ್ತಾಟ

    ಬೀದರ್ : ನಗರದ ಸುಪ್ರಸಿದ್ಧ ಬಸವಗಿರಿಯ ಬಸವಸೇವಾ ಪ್ರತಿಷ್ಠಾನದ ಶರಣೆಯರ ಕಿತ್ತಾಟ ತಾರಕ್ಕೇರಿದೆ. ಅಕ್ಕ ಅನ್ನಪೂರ್ಣಾ ಹಾಗೂ ಡಾ. ಗಂಗಾಂಬಿಕೆ ನಡುವೆ ನಡೆದ ಜಗಳದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೆಲವು ದಿನಗಳಿಂದ ಬೂದಿಮುಚ್ಚಿದ ಕೆಂಡದಂತಿದ್ದ ಬಸವಗಿರಿಯ ಶರಣು ಉದ್ಯಾಣದಲ್ಲಿ ಆಂತರಿಕ ಕಚ್ಚಾಟವೀಗ ಬೀದಿಗೆ ಬಿದ್ದಿದೆ. ಪೂಜ್ಯ ಅಕ್ಕ ಅನ್ನಪೂರ್ಣಾ ಹಾಗೂ ಅಕ್ಕ ಡಾ. ಗಂಗಾಂಬಿಕೆ ಪಾಟೀಲ್ ಅವರ ನಡುವೆ ಆಗಾಗ ನಡೆಯುತ್ತಿದ್ದ ಸಮರವೀಗ ತಾರಕ್ಕೇರಿದ್ದು ಅಕ್ಕದ್ವಯರ ಭಕ್ತರಲ್ಲಿ ತಳಮಳ ಸೃಷ್ಟಿಸುವಂತೆ ಮಾಡಿದೆ.

    ಕಳೆದ ಎರಡು ದಿನಗಳ ಹಿಂದೆ ಬಸವಗಿಯಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಿದ್ದು, ಇವರು ಜಗಳ ಮಾಡುವ ದೃಶ್ಯವನ್ನು ಅಲ್ಲಿಯೇ ಇದ್ದ ಅವರ ಭಕ್ತರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ಸಹಜವಾಗಿ ಅಕ್ಕ ಅನ್ನಪೂರ್ಣಾ ಹಾಗೂ ಡಾ. ಗಂಗಾಂಭಿಕಾಗೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಭಕ್ತರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ.

    ಅಕ್ಕ ಅನ್ನಪೂರ್ಣಾ ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಸಮಯವನ್ನು ನೋಡಿಕೊಂಡ ಕೆಲವು ಭಕ್ತರು ಅಕ್ಕ ಅನ್ನಪೂರ್ಣಾ ಅವರನ್ನು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಆ ಜಾಗದಲ್ಲಿ ಡಾ. ಗಂಗಾಂಬಿಕಾರನ್ನು ತಂದು ಅಧ್ಯಕ್ಷರನ್ನಾಗಿ ಮಾಡಿದ್ದರು. ಈ ವಿಚಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಕ ಅನ್ನಪೂರ್ಣಾಗೆ ಗೊತ್ತಿರಲಿಲ್ಲ. ಅವರು ಗುಣಮುಖರಾಗಿ ಬಸವಗಿರಿಗೆ ಬರುತ್ತಿದ್ದಂತೆ ಈ ವಿಚಾರ ಗೊತ್ತಾಗಿದೆ. ಹೀಗಾಗಿ ನೀನು ಅಧ್ಯಕ್ಷ ಸ್ಥಾನವನ್ನು ನನಗೆ ಬಿಟ್ಟುಕೊಡಬೇಕು ಎಂದು ಅಕ್ಕ ಅನ್ನಪೂರ್ಣಾ ಪಟ್ಟುಹಿಡಿದ್ದಾರೆ. ಇದನ್ನೂ ಓದಿ:ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆ

  • 1,450 ಏಕರೆ ಭೂ ವಿವಾದ – ಮೈಸೂರು ರಾಜ ವಂಶಕ್ಕೆ ಗೆಲುವು

    1,450 ಏಕರೆ ಭೂ ವಿವಾದ – ಮೈಸೂರು ರಾಜ ವಂಶಕ್ಕೆ ಗೆಲುವು

    ಮೈಸೂರು: ಚಾಮುಂಡಿಬೆಟ್ಟ ತಪ್ಪಲಿನ ಕುರುಬಾರಹಳ್ಳಿ, ಆಲನಹಳ್ಳಿ, ಚೌಡಹಳ್ಳಿಯ ಭೂ ಮಾಲೀಕತ್ವ ವಿವಾದ ಸಂಬಂಧ ಮೈಸೂರಿನ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಹಾಗೂ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

    ಈ ಮೂರು ಸರ್ವೇ ನಂಬರ್ ಗಳಿಗೆ ಸೇರಿದ ಭೂಮಿ ಮಹಾರಾಜರ ಖಾಸಗಿ ಆಸ್ತಿಯೆಂದು ಹೈಕೋರ್ಟ್ ವಿಭಾಗೀಯ ಪೀಠ ಕಳೆದ ವರ್ಷ ತೀರ್ಪು ನೀಡಿತ್ತು. ಹೈಕೋರ್ಟ್ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಭೂ ಮಾಲೀಕರು ನ್ಯಾಯಾಂಗ ನಿಂದನೆ ಅರ್ಜಿ ಹಾಕಿದ್ದರು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೈಸೂರಿನ ಅಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೊರೆ ಹೋಗಿದ್ದರು. ಹಿರಿಯ ವಕೀಲರೊಬ್ಬರಿಗೆ ದುಬಾರಿ ಶುಲ್ಕ ನೀಡಿ ವಕಾಲತ್ತಿಗೆ ವಹಿಸಲಾಗಿತ್ತು. ಇದನ್ನೂ ಓದಿ: ರಾಜೀನಾಮೆ ಸುದ್ದಿ ಕೇಳಿ ಅಭಿಮಾನಿ ಆತ್ಮಹತ್ಯೆ – ಬಿಎಸ್‍ವೈ ಸಂತಾಪ

    ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಇದು ವಿಚಾರಣೆಗೆ ಯೋಗ್ಯವಲ್ಲವೆಂದು ಮೇಲ್ಮನವಿ ತಿರಸ್ಕರಿಸಿದೆ. ಈ ಮೂಲಕ ಕಳೆದ ಎರಡು ದಶಕಗಳಿಂದ ಸರ್ಕಾರ ಮತ್ತು ಭೂ ಮಾಲೀಕರ ನಡುವೆ ನಡೆಯುತ್ತಿದ್ದ ಕಾನೂನು ಸಮರಕ್ಕೆ ತೆರೆ ಬಿದ್ದಂತಾಗಿದೆ. 3 ಸರ್ವೇ ನಂಬರ್ ಗಳಿಂದ 1450 ಎಕರೆಯಷ್ಟು ಇರೋ ಭೂಮಿ. ಈಗ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶ ಎತ್ತಿಹಿಡಿದ ಹಿನ್ನೆಲೆಯಲ್ಲಿ ಮೈಸೂರು ಮಹಾರಾಜರ ಖಾಸಗಿ ಆಸ್ತಿ ಇದಾಗಿದೆ. ಇದನ್ನೂ ಓದಿ: ಅಸ್ಸಾಂ, ಮಿಜೊರಾಂ ಗಡಿಯಲ್ಲಿ ಹಿಂಸಾಚಾರ – ಐವರು ಪೊಲೀಸರು ಹುತಾತ್ಮ

  • ಯಾವುದೇ ಕಾರಣಕ್ಕೂ ನಮಗೂ, ದೊಡ್ಮನೆಗೂ ಹೋಲಿಕೆ ಮಾಡ್ಬೇಡಿ: ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ

    ಯಾವುದೇ ಕಾರಣಕ್ಕೂ ನಮಗೂ, ದೊಡ್ಮನೆಗೂ ಹೋಲಿಕೆ ಮಾಡ್ಬೇಡಿ: ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ

    ಮೈಸೂರು: ಇಂದು ಬೆಳಗ್ಗೆ ನಿರ್ಮಾಪಕ ಉಮಾಪತಿ ಅವರು ದೊಡ್ಮನೆ ಆಸ್ತಿ ವಿಚಾರವಾಗಿ ತಮ್ಮ ಮಧ್ಯೆ ಇರುವ ಮುನಿಸು ಹೊರ ಹಾಕಿದ ಬೆನ್ನಲ್ಲೇ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಯಾವುದೇ ಕಾರಣಕ್ಕೂ ದೊಡ್ಮನೆ ಹಾಗೂ ನಮಗೂ ಹೋಲಿಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

    ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮರ್ಡರ್ ಮಾಡಿದ್ದೀನಾ ಎಂದು ಪ್ರಶ್ನಿಸಿದರು. ನಾನು ಯಾರ ಪರ ವಿರೋಧ ಮಾತನಾಡಿಲ್ಲ. ನಾನು ಕಷ್ಟಪಟ್ಟು ಮಾಡಿರುವ ಆಸ್ತಿ ಇದು. ಇದರ ಬಗ್ಗೆ ಯಾರದರೂ ಮಾತನಾಡಿದರೆ ಸುಮ್ಮನೆ ಇರುವುದಿಲ್ಲ. ಇಂದ್ರಜಿತ್ ಅವರು ಮೊದಲು ಆರೋಪಗಳನ್ನು ಸಾಬೀತುಪಡಿಸಲಿ ಮತ್ತೆ ಮಾತನಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ

    ಇಂಡಸ್ಟ್ರೀ ಯಾರ ಅಪ್ಪನ ಸೊತ್ತು ಅಲ್ಲ. ಕಲೆಗೆ ಬೆಲೆ ಇದ್ದರಷ್ಟೇ ಇಲ್ಲಿ ಇರಬಹುದು ಅಷ್ಟೆ. ತಪ್ಪು ನಾನು ಮಾಡಿದ್ದರೆ ಕ್ಷಮೆ ಕೇಳುತ್ತೇನೆ ಇಲ್ಲದಿದ್ದರೆ ನಾನ್ಯಾಕೆ ಕೇಳಬೇಕು ಎಂದು ಹೇಳಿದರು. ಇದನ್ನೂ ಓದಿ: ಇಂದೇ ಸ್ಟಿಂಗ್ ಆಪರೇಷನ್ ಮಾಡಿದರೂ ನಾನು ಹೆದರಲ್ಲ: ದರ್ಶನ್

    ಯಾವುದೇ ಕರಣಕ್ಕೂ ನಮಗೂ ದೊಡ್ಮನೆಗೂ ಹೋಲಿಕೆ ಮಾಡಬೇಡಿ. ಅವರ ವಿಚಾರವಾಗಿ ನನ್ನ ಹೆಸರನ್ನು ತೆಗೆಯಬೇಡಿ. ಈ ವಿಷಯ ದೊಡ್ಮನೆ ಕಡೆ ಹೋಗಿದ್ದಕ್ಕೆ ನಾನು ಮಾತನಾಡಿದ್ದು. ಇನ್ನೂ ಈ ವಿಷಯ ಬೇರೆ ಕಡೆ ಹೋಗುವ ಮುಂಚೆ ನಾನು ಮಾತನಾಡಲು ಬಂದಿದ್ದೇನೆ. 2006ರಲ್ಲಿ ನನ್ನ ಇಮೇಜ್ ಕೆಟ್ಟು ಹೋಗಿತ್ತು. ನಾವು ಸರಿಯಾಗಿದ್ದರೆ ಯಾರು ಕೂಡ ಯಾರ ಇಮೇಜ್ ಕೂಡ ಕೆಡಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಇಂದ್ರಜಿತ್ ಅಪ್ಪನಿಗೆ ಹುಟ್ಟಿದವರಾಗಿದ್ರೆ ದಾಖಲೆ ರಿಲೀಸ್ ಮಾಡಲಿ: ದರ್ಶನ್ ನೇರ ಸವಾಲ್

    ಮೊದಲು 25 ಕೋಟಿ ಪ್ರಾಪರ್ಟಿ ವಿಷಯ ಮುಗಿಯಲಿ. ಇನ್ನು ಹೋಟೆಲಿನಲ್ಲಿ ನಾನು ಯಾರಿಗೆ ಹೊಡೆದೆ ಎಂಬ ಆರೋಪ ಇದೆ, ಮೊದಲು ಅವನು ಬಂದು ಮೇಡಿಕಲ್ ಸರ್ಟಿಫಿಕೆಟ್ ತೋರಿಸಲಿ. ಆರ್ಡರ್ ಕೊಟ್ಟಿದ್ದು ಲೇಟ್ ಆಗಿತ್ತು, ಅದಕ್ಕೆ ಸಣ್ಣ ವಿಚಾರವಾಗಿ ಗಲಾಟೆ ನಡೆದಿದೆ. ಆದರೆ ಅವರು ಆರೋಪ ಮಾಡಿರುವಂತೆ ಏನೋ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ದರ್ಶನ್ ಕ್ಷಮೆ ಕೇಳಲಿ, ಮುಂದುವರಿಸಿದ್ರೆ ಹೆಚ್ಚಿನ ತೇಜೋವಧೆ – ಇಂದ್ರಜಿತ್

    150 ಸಂಪಾದನೆ ಮಾಡಿ ಇಲ್ಲಿವರೆಗು ಬಂದಿದ್ದೇನೆ ನನ್ನ ಆಸ್ತಿಯನ್ನು ನೋಡಿಕೊಳ್ಳುವುದು ನನಗೆ ಮುಖ್ಯ. ನಾನು ನನ್ನ ಅಭಿಮಾನಿಗಳಿಗೆ ಗೊತ್ತಾಗಬೇಕೆಂದು ಇಷ್ಟು ಮಾತನಾಡಿದ್ದೇನೆ. ಕಲಾವಿದರು ಒಬ್ಬರು ಕೂಡ ನಮ್ಮ ವಿಚಾರವಾಗಿ ಮಾತನಾಡಿಲ್ಲ ಅವರು ಮಾತನಾಡಲ್ಲ ಎಂದು ದರ್ಶನ್ ಕಿಡಿಕಾರಿದರು.

  • ತಾಯಿಯ ಆಸ್ತಿ ಬರೆಸಿಕೊಂಡು ಪುತ್ರನ ಕೊಲೆಗೆ ಯತ್ನ- ಐವರ ಬಂಧನ

    ತಾಯಿಯ ಆಸ್ತಿ ಬರೆಸಿಕೊಂಡು ಪುತ್ರನ ಕೊಲೆಗೆ ಯತ್ನ- ಐವರ ಬಂಧನ

    ಹುಬ್ಬಳ್ಳಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು ಬರೆಸಿಕೊಂಡು, ಮಗನ ಕೊಲೆ ಮಾಡಲು ಮುಂದಾಗಿದ್ದ ಆರೋಪಿಗಳನ್ನು ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಗೋಪನಕೊಪ್ಪ ಸ್ವಾಗತ ಕಾಲೋನಿ ನಿವಾಸಿ ವೀರೇಶ್ ಹೆಗಡಾಳ ಅವರನ್ನು ಕೊಲೆ ಮಾಡಲು ಮುಂದಾಗಿದ್ದ ಐವರು ಆರೋಪಿಗಳನ್ನು ಕೇಶ್ವಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಾಗಶೆಟ್ಟಿಕೊಪ್ಪ ಕೆರಿವಂಡಿಯ ಅಲ್ತಾಫ ಮಹ್ಮದಲಿ ಬೇಪಾರಿ, ಮುನ್ನಾ ಮಹ್ಮದಲಿ ಬೇಪಾರಿ, ಬಸವೇಶ್ವರ ಪಾರ್ಕಿನ ಶ್ರೀನಿವಾಸ ದಲಭಂಜನ, ಜಾವೇದ ತಾಳಿಕೋಟೆ, ಇಮ್ರಾನ್ ತಾಳಿಕೋಟೆ ಹಾಗೂ ಮಂಜುನಾಥ ಬಾನಪ್ಪನವರ ಎಂದು ಗುರುತಿಸಲಾಗಿದೆ.

    ಬಂಧಿತ ಆರೋಪಿಗಳಿಂದ ಹಲ್ಲೆಗೆ ಒಳಗಾಗಿರುವ ವೀರೇಶ್ ಹೆಗಡಾಳ ಪರಿಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಶ್ವಾಪುರ ಠಾಣೆಯ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದಲ್ಲಿನ ಪಿಎಸ್‍ಐ ಬಾಬಾ, ಸಿಬ್ಬಂದಿಯಾದ ಎಂ.ಡಿ.ಕಾಲವಾಡ, ಎಚ್.ಎಂ.ಗುಳೇಶ, ಆರ್.ಪಿ.ಕೆಂದೂರ, ಆರ್.ಎಲ್.ರಾಠೋಡ, ಎಚ್.ಆರ್.ರಾಮಾಪುರ, ವಿರುಪಾಕ್ಷಿ ಅಳಗವಾಡಿ ತಂಡ ಆರೋಪಿಗಳನ್ನು ಬಂಧಿಸಿದೆ.

  • ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?

    ಚೆನ್ನೈ: ದಕ್ಷಿಣ ಭಾರತದ ಟಾಪ್ ನಟಿಯಾಗಿರುವ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರ ಅತೀ ಹೆಚ್ಚು ಶ್ರೀಮಂತ ನಟಿ ಎಂಬ ಸುದ್ದಿಯೊಂದು ಬಹಿರಂಗಗೊಂಡಿದೆ. ಹಲವಾರು ವರ್ಷಗಳಿಂದ ಸಿನಿಮಾಗಳಲ್ಲಿ ಅಭಿನಯಿಸಿರುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ನಟಿ ನಯನತಾರಗೆ ಅತೀ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಕೂಡ ಇದ್ದಾರೆ.

    ಕಾಲಿವುಡ್, ಟಾಲಿವುಡ್, ಮಾಲಿವುಡ್, ಸ್ಯಾಂಡಲ್‍ವುಡ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ನಯನತಾರರವರು ಖಾಸಗಿ ಜೀವನದಲ್ಲಿಯೂ ಸಾಕಷ್ಟು ಏಳು-ಬೀಳುಗಳನ್ನು ನೋಡಿದ್ದಾರೆ. ಅಲ್ಲದೆ ಅನೇಕ ಟೀಕೆ, ವಿವಾದಗಳಿಗೂ ಒಳಗಾಗಿದ್ದರು. ಹೀಗಿದ್ದರೂ ನಯನತಾರ ಮಾತ್ರ ಯಾವುದಕ್ಕೂ ಕುಗ್ಗದೇ ಸೌತ್ ಸಿನಿ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ.

    ಸದ್ಯ ನಯನತಾರ ದಕ್ಷಿಣ ಭಾರತದ ಶ್ರೀಮಂತ ನಟಿ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸುತ್ತಾಡಲು ಪ್ರೈವೇಟ್ ವಿಮಾನವನ್ನೇ ಹೊಂದಿರುವ ಇವರ ಬಳಿ ಸುಮಾರು 70 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ನಯನತಾರ ಬಳಿ 80 ಲಕ್ಷದ ಆಡಿ ಕ್ಯೂ 7 ಕಾರು, 75.21 ಲಕ್ಷದ ಬಿಎಂಡಬ್ಲೂ ಎಕ್ಸ್ 5 ಎರಡು ದುಬಾರಿ ವೆಚ್ಚದ ಕಾರುಗಳಿದೆ.

    ಒಂದು ಸಿನಿಮಾದಲ್ಲಿ ಅಭಿನಯಿಸಲು ನಯನತಾರರವರು ಸುಮಾರು 3 ಕೋಟಿ ಸಂಭಾವನೆ ಪಡೆಯುತ್ತಾರೆ. 2019ರಲ್ಲಿ 7 ಸಿನಿಮಾಗಳಲ್ಲಿ ನಟಿಸಿರುವ ನಯನತಾರ, 2020ರಲ್ಲಿ 2 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ನೆಟ್ರಿಕಣ್, ಅಣ್ಣಾತ್ತೆ ಹಾಗೂ ವಿಜಯ್ ಸೇತುಪತಿ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

    ಮೂಲತಃ ಕೇರಳದವರಾಗಿರುವ ನಟಿ ನಯನತಾರ ಸದ್ಯ ಚೆನ್ನೈನ ಅಪಾರ್ಟ್‍ಮೆಂಟ್‍ನಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಲೀವಿಂಗ್ ಟೂ ಗೆದರ್ ರಿಲೇಷನ್ ಶಿಪ್‍ನಲ್ಲಿದ್ದಾರೆ.

  • ಆಸ್ತಿ ವಿಚಾರವಾಗಿ ಅಣ್ಣನನ್ನೇ ಕೊಂದ- ಒಂದು ಎಕರೆ ಜಮೀನಿಗಾಗಿ ಹರಿಯಿತು ನೆತ್ತರು

    ಆಸ್ತಿ ವಿಚಾರವಾಗಿ ಅಣ್ಣನನ್ನೇ ಕೊಂದ- ಒಂದು ಎಕರೆ ಜಮೀನಿಗಾಗಿ ಹರಿಯಿತು ನೆತ್ತರು

    ಹುಬ್ಬಳ್ಳಿ: ಆಸ್ತಿ ವಿಚಾರವಾಗಿ ತಮ್ಮನಿಂದಲೇ ಅಣ್ಣನ ಕೊಲೆಯಾಗಿರುವ ಘಟನೆ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನಡೆದಿದೆ.

    ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಮ್ಮಿಹಾಳ ನಿವಾಸಿಯಾದ ಮೈಲಾರಿ ತಿರ್ಲಾಪುರ (39) ಮೃತ ದುರ್ದೈವಿ. ಮೈಲಾರಿಯ ಚಿಕ್ಕಪ್ಪನ ಮಗ ರವಿ ತಿರ್ಲಾಪುರ ಎಂಬುವವನೇ ಆಸ್ತಿ ವಿಚಾರವಾಗಿ ಅಣ್ಣನನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

    ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೈಲಾರಿಯನ್ನು ನಿನ್ನೆ ರಾತ್ರಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುತ್ತಿಗೆ, ಬೆನ್ನಿನ ಭಾಗಕ್ಕೆ ಮಾರಣಾಂತಿಕ ಕೊಡಲಿ ಪೆಟ್ಟು ಬಿದ್ದಿರುವ ಹಿನ್ನಲೆಯಲ್ಲಿ ಚಿಕಿತ್ಸೆ ಫಲಿಸದೇ ಮೈಲಾರಿ ಕೊನೆಯುಸಿರೆಳೆದಿದ್ದಾರೆ.

    ಕಲಘಟಗಿ ಜಮ್ಮಿಹಾಳದಲ್ಲಿನ ಒಂದು ಎಕರೆ ಜಮೀನು ವಿಚಾರವಾಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಆರೋಪಿ ರವಿ ಪರಾರಿಯಾಗಿದ್ದಾನೆ. ಆರೋಪಿ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಸ್ತಿ ವಿವಾದ- ಮಾರಕಾಸ್ತ್ರಗಳಿಂದ ಕೊಚ್ಚಿ ಹಾಡಹಗಲೇ ಬರ್ಬರ ಕೊಲೆ

    ಆಸ್ತಿ ವಿವಾದ- ಮಾರಕಾಸ್ತ್ರಗಳಿಂದ ಕೊಚ್ಚಿ ಹಾಡಹಗಲೇ ಬರ್ಬರ ಕೊಲೆ

    ತುಮಕೂರು: ಆಸ್ತಿ ವಿವಾದದ ಹಿನ್ನೆಲೆ ಹಾಡಹಗಲೇ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಕಾಚೀಹಳ್ಳಿಯಲ್ಲಿ ನಡೆದಿದೆ.

    ಶಶಿ ಕುಮಾರ್ (35) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಹರೀಶ್ ಕೊಲೆ ಮಾಡಿದ್ದಾನೆ. ಮನೆ ಬಳಿ ಬಂದು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಲಾಗಿದೆ. ಆಸ್ತಿ ವಿವಾದದ ಹಿನ್ನೆಲೆ ಕಳೆದ ಅನೇಕ ವರ್ಷಗಳಿಂದ ವೈಷಮ್ಯ ಇತ್ತು. ಇಂಧು ಸಿಟ್ಟಿಗೆದ್ದ ಹರೀಶ್ ಶಶಿ ಕುಮಾರ್ ಮನೆ ಬಳಿ ಆಗಮಿಸಿ ಕೊಲೆ ಮಾಡಿದ್ದಾನೆ.

    ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

  • 10 ಮದ್ವೆಯಾದ್ರೂ ಮಕ್ಕಳಾಗಲಿಲ್ಲ – ಸಾವಿಗೆ ಕಾರಣವಾಯ್ತು ಕೊನೆಯ ನಿರ್ಧಾರ

    10 ಮದ್ವೆಯಾದ್ರೂ ಮಕ್ಕಳಾಗಲಿಲ್ಲ – ಸಾವಿಗೆ ಕಾರಣವಾಯ್ತು ಕೊನೆಯ ನಿರ್ಧಾರ

    – ಕಣ್ಣು ಕೆಂಪಾಗಿಸಿತ್ತು ಮೈದುನನ ನಿರ್ಧಾರ

    ಲಕ್ನೋ: 10 ಮದುವೆಯಾದರೂ ಮಕ್ಕಳಾಗದ ವ್ಯಕ್ತಿ ಅತ್ತಿಗೆಯಿಂದಲೇ ಕೊಲೆಯಾದ ಘಟನೆ ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯ ಬೋಜಿಪುರದಲ್ಲಿ ನಡೆದಿದೆ.

    55 ವರ್ಷದ ಜಗನ್ ಲಾಲ್ ಕೊಲೆಯಾದ ವ್ಯಕ್ತಿ. ಜನವರಿ 20ರಂದು ಜಗನ್ ಕತ್ತು ಹಿಸುಕಿ ಕೊಲೆಗೈಯಲಾಗಿತ್ತು. ಸದ್ಯ ಪ್ರಕರಣವನ್ನ ಭೇದಿಸಿರುವ ಪೊಲೀಸರು ಜಗನ್ ಅತ್ತಿಗೆ ಸೇರಿದಂತೆ ನಾಲ್ವರನ್ನ ಬಂಧಿಸಿದ್ದಾರೆ. ಜಗನ್ 10 ಪತ್ನಿಯರ ಪೈಕಿ ಕೆಲವರು ಮೃತಪಟ್ಟಿದ್ರೆ, ಕೆಲವರು ಈತನಿಂದ ದೂರವಾಗಿದ್ದಾರೆ. ಇಬ್ಬರು ಪತ್ನಿಯರ ಜೊತೆ ಜಗನ್ ಗ್ರಾಮದಲ್ಲಿ ವಾಸವಾಗಿದ್ದನು. ಸಂತಾನಕ್ಕಾಗಿ ಜಗನ್ ಒಟ್ಟು 10 ಮದುವೆಯಾಗಿದ್ದರು.

    ಸಾವಿಗೆ ಕಾರಣ ‘ಆ’ ನಿರ್ಧಾರ: ಯೆಸ್, 10 ಮದುವೆಯಾದ ಜಗನ್ ತನಗೆ ಮಕ್ಕಳಾಗಲ್ಲೆಂಬ ಸತ್ಯ ಅರಿತಕೂಡಲೇ ತನ್ನ ಕೋಟ್ಯಂತರ ರೂ. ಮೌಲ್ಯದ 14 ಎಕರೆ ಜಮೀನು ತಮ್ಮನ್ನ ನೋಡಿಕೊಳ್ಳುತ್ತಿದ್ದ ಸಂಬಂಧಿ ಯುವಕನ ಹೆಸರಿಗೆ ಬರೆಯುವ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸಿದರು. ಈ ವಿಷಯ ಕೇಳಿದ ಜಗನ್ ಅತ್ತಿಗೆ ಮುನ್ನಿದೇವಿಯ ಚಡಪಡಿಸಿದ್ದಳು. 14 ಎಕರೆ ಜಮೀನು ಬೇರೆಯವರ ಪಾಲಾಗೋದನ್ನ ತಡೆಯಲು ಮೈದುನನ ಕೊಲೆಗೆ ಸುಪಾರಿ ನೀಡಿದ್ದಳು.

    ಆಸ್ತಿಗಾಗಿ ಹಂತಕಿಯಾದ ಅತ್ತಿಗೆ: ತನ್ನ ಪರಿಚಯದ ಕೆಲ ಯುವಕರಿಗೆ ಹಣದಾಸೆ ತೋರಿಸಿದ ಮುನ್ನಿದೇವಿ ಮೈದುನನ ಕೊಲೆಗೆ ಸುಪಾರಿ ನೀಡಿದ್ದಳು. ಜನವರಿ 20ರಂದು ರಾತ್ರಿ ಒಂಟಿಯಾಗಿ ಹೊರಟಿದ್ದ ಜಗನ್ ಕತ್ತು ಹಿಸುಕಿ ಕೊಲ್ಲಲಾಗಿತ್ತು. ಕೊಲೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಕೊಲೆ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ತಿಗಾಗಿ ಹಂತಕಿಯಾಗಿದ್ದ ಮುನ್ನಿದೇವಿಯನ್ನ ಕತ್ತಲು ಮನೆಗೆ ಅಟ್ಟಿದ್ದಾರೆ.

    ಕೆಂಪಾಗಿತ್ತು ಮುನ್ನಿದೇವಿ ಕಣ್ಣು: ಪ್ರಕರಣದ ತನಿಖೆ ನಡೆಸಲು ಬೋಜಿಪುರಿ ಠಾಣೆಯ ಇನ್‍ಸ್ಪೆಕ್ಟರ್ ಮನೋಜ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. 10 ಮದುವೆಯಾದರೂ ಮಕ್ಕಳಗಾದ ಕಾರಣ ಜಗನ್ ತಮಗೆ ಆಸರೆಯಾಗಿದ್ದ ಯುವಕನ ಹೆಸರಿಗೆ ಆಸ್ತಿ ಬರೆಯಲು ನಿರ್ಧರಿಸಿದ್ದರು. ಈ ವಿಷಯ ಅತ್ತಿಗೆ ಮುನ್ನಿದೇವಿಯ ಕಣ್ಣು ಕೆಂಪಾಗಿಸಿತ್ತು. ಜಮೀನಿಗಾಗಿ ಮೈದುನ ಕೊಲೆಗೆ ಸುಪಾರಿ ನೀಡಿದ್ದಳು. ಸದ್ಯ ದೇವ್‍ಸಿಂಗ್, ಪ್ರಹ್ಲಾದ್, ದರ್ಶನ್ ಸಿಂಗ್ ಮತ್ತು ಮುನ್ನಿದೇವಿಯನ್ನ ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಸ್‍ಎಸ್‍ಪಿ ರೋಹಿತ್ ಸಿಂಗ್ ಹೇಳಿದ್ದಾರೆ.

  • ಬೆಂಗ್ಳೂರಿನಲ್ಲಿ ವೀಕೆಂಡ್‌ ಪ್ರಾಪರ್ಟಿ ಎಕ್ಸ್‌ಪೋ- ಬನ್ನಿ, ಭಾಗವಹಿಸಿ ಸೈಟ್‌‌ ಖರೀದಿಸಿ

    ಬೆಂಗ್ಳೂರಿನಲ್ಲಿ ವೀಕೆಂಡ್‌ ಪ್ರಾಪರ್ಟಿ ಎಕ್ಸ್‌ಪೋ- ಬನ್ನಿ, ಭಾಗವಹಿಸಿ ಸೈಟ್‌‌ ಖರೀದಿಸಿ

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಿವೇಶನ ಮಾಡಬೇಕು, ಪ್ರಾಪರ್ಟಿ ಖರೀದಿ ಮಾಡಬೇಕು, ಮನೆ ಕಟ್ಟಬೇಕು ಎಂದು ಕನಸು ಕಾಣ್ತಿದೀರಾ..? ಹಾಗಿದ್ದರೆ ನಿಮಗೆ ಇಲ್ಲಿದೆ ಸದವಕಾಶ. ನಿಮ್ಮ ಕನಸು ನನಸು ಮಾಡಲು ಈ ಬಾರಿ ನಿಮಗೆ ಡಬಲ್ ಧಮಾಕಾ ಸಿಗಲಿದೆ.

    ಜೆನೆಟಿಕ್ ಇವೆಂಟ್ಸ್ ಬೆಂಗಳೂರಿನ ಎರಡು ಭಾಗದಲ್ಲಿ ಎಕ್ಸ್ ಪೋ ಆಯೋಜಿಸಿದ್ದು ಜನವರಿ 23 ಮತ್ತು 24ರಂದು ‘ಯೂನಿಕ್ ಪ್ರಾಪರ್ಟಿ ಎಕ್ಸ್ ಪೋ-2021’ ನಡೆಯಲಿದೆ.

    ಬೆಂಗಳೂರು ದಕ್ಷಿಣ ಭಾಗದ ಗ್ರಾಹಕರಿಗಾಗಿ ಜೆಪಿ ನಗರ 6ನೇ ಹಂತದ ಕೆಆರ್ ಲೇಔಟ್‍ನ ಎಲೈಟ್ ಕನ್ವೆನ್ಷನ್ ಸೆಂಟರ್ ಹಾಗೂ ಬೆಂಗಳೂರು ನಾರ್ತ್ ಭಾಗದ ಗ್ರಾಹಕರಿಗಾಗಿ ಯಲಹಂಕ ಬೈಪಾಸ್ ರಸ್ತೆಯ ಶಿವನಹಳ್ಳಿಯಲ್ಲಿರುವ ಎಲಾನ್ ಕನ್ವೆನ್ಷನ್ ಸೆಂಟರ್ ನಲ್ಲಿ ಈ ಪ್ರಾಪರ್ಟಿ ಎಕ್ಸ್ ಪೋ ಆಯೋಜಿಸಲಾಗಿದೆ.

    ಯಾರೆಲ್ಲಾ ಸಿಗ್ತಾರೆ..?: ಬೆಂಗಳೂರಿನ ಪ್ರಮುಖ ಬಿಲ್ಡರ್ ಗಳು ಈ ಪ್ರಾಪರ್ಟಿ ಎಕ್ಸ್ ಪೋದಲ್ಲಿ ಭಾಗವಹಿಸಲಿದ್ದಾರೆ. ಡಿಎಸ್ ಮ್ಯಾಕ್ಸ್, ಗಾಡ್ರೆಜ್ ಪ್ರಾಪರ್ಟೀಸ್, ಎಸ್‍ಎಂಆರ್ ಹೋಲ್ಡಿಂಗ್ಸ್, ಅರಿಹಂತ್ ಡೆವಲಪರ್ಸ್, ಎಟಿಝೆಡ್ ಪ್ರಾಪರ್ಟೀಸ್, ಅಪರ್ಣ, ಉಪಕಾರ್ ಡೆವಲಪರ್ಸ್, ಫೈವ್ ಎಲಿಮೆಂಟ್ಸ್ ರಿಯಾಲಿಟಿ, ಎಲಿಗೆಂಟ್ ಬಿಲ್ಡರ್ಸ್ & ಡೆವಲಪರ್ಸ್, ಸಾಯಿ ಕಲ್ಯಾಣ್ ಬಿಲ್ಡರ್ಸ್ & ಡೆವಲಪರ್ಸ್, ಗೃಹ, ಸಿಲ್ವರ್ ಟ್ರೀ ಪ್ರಾಜೆಕ್ಟ್ಸ್, ಆರ್ನಾ ಶೆಲ್ಟರ್ಸ್ ಮುಂತಾದ ಪ್ರಮುಖ ರಿಯಲ್ ಎಸ್ಟೇಟ್ ಕಂಪೆನಿಗಳು ಯೂನಿಕ್ ಪ್ರಾಪರ್ಟಿ ಎಕ್ಸ್ ಪೋದಲ್ಲಿ ಭಾಗವಹಿಸಲಿವೆ.

    ಈ ಎಲ್ಲಾ ಕಂಪನಿಗಳು ಗ್ರಾಹಕರಿಗೆ ತಮ್ಮ ವಸತಿ ಯೋಜನೆಗಳ ಸಂಪೂರ್ಣ ವಿವರಗಳನ್ನು ನೀಡಲಿದೆ. ಈ ಎಕ್ಸ್ ಪೋಗೆ ಆಗಮಿಸಿ ನಿಮ್ಮ ಕನಸಿನ ಮನೆಯನ್ನು ನೀವು ನಿಮ್ಮದಾಗಿಸಿಕೊಳ್ಳಬಹುದು. ನುರಿತ ಮಾರ್ಗದರ್ಶಕರು, ಇಂಟೀರಿಯರ್ ಡಿಸೈನರ್‌ಗಳು ಹಾಗೂ ಸಲಹೆಗಾರರು ಈ ಎಕ್ಸ್‌ಪೋದಲ್ಲಿ ನಿಮಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಗ್ರಾಹಕರು ನಿವೇಶನ, ಫ್ಲ್ಯಾಟ್ ಖರೀದಿಸಲು ಬಯಸಿದರೆ ಬ್ಯಾಂಕ್‍ಗಳು ನೀಡುವ ಸಾಲದ ಬಗ್ಗೆಯೂ ಇದೇ ಸೂರಿನಲ್ಲಿ ನೀವು ಮಾಹಿತಿ ಪಡೆಯಬಹುದು. ಜನವರಿ 23 ಮತ್ತು 24ರಂದು ಶಿವನಹಳ್ಳಿ ಹಾಗೂ ಜೆಪಿ ನಗರದಲ್ಲಿ ನಡೆಯುವ ಪ್ರಾಪರ್ಟಿ ಎಕ್ಸ್ ಪೋಗೆ ಬಂದು ನಿಮ್ಮ ಕನಸು ನನಸಾಗಿಸಿಕೊಳ್ಳಬಹುದು.