ನವದೆಹಲಿ: ವಾಸದ ಮನೆಗಳನ್ನು ಖಾಸಗಿಗಳಿಗೆ ವೈಯಕ್ತಿಕ ಬಳಕೆಗಾಗಿ ಬಾಡಿಗೆಗೆ ನೀಡಿದ್ದರೆ ಅದಕ್ಕೆ ಜಿಎಸ್‌ಟಿ ಅನ್ವಯಸುವುದಿಲ್ಲ. ಬದಲಿಗೆ ವಾಣಿಜ್ಯ ಉದ್ದೇಶಕ್ಕೆ ನೀಡಿದ್ದರೆ ಮಾತ್ರ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಇತ್ತೀಚೆಗೆ ಜುಲೈ 18ರಂದು ಜಾರಿಗೆ ಬಂದ ಜಿಎಸ್‌ಟಿ ಹೊಸ ನಿಯಮಗಳ ಅನ್ವಯ ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಬಾಡಿಗೆದಾರರು ವಸುನೆಯ ಮಾಲಿಕರಿಗೆ ಪಾವತಿಸುವ ಹಣಕ್ಕೆ ಶೇ.18ರಷ್ಟು ಜಿಎಸ್‌ಟಿ ಪಾವತಿಸಬೇಕು ಎಂದು ವರದಿಯಾಗಿತ್ತು. ಇದರಿಂದಾಗಿ ಸಾಕಷ್ಟು ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಮನೆ ಬಾಡಿಗೆಗೆ ಜಿಎಸ್‌ಟಿ ಇಲ್ಲ ಎಂದು ಸರ್ಕಾರ ಖಚಿತ ಪಡಿಸಿದೆ. ಇದರಿಂದಾಗಿ ಬಾಡಿಗೆದಾರರು ನಿಟ್ಟುಸಿರು ಬಿಡುವಂತಾಗಿದೆ.
ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗಳಿಗೆ ಮನೆಯನ್ನು ಬಾಡಿಗೆಗೆ ನೀಡಿದ್ದರೆ ಅದಕ್ಕೆ ಜಿಎಸ್‌ಟಿ ದರ ಅನ್ವಯಿಸುವುದಿಲ್ಲ. ಮನೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಯಾವುದಾದರೂ ಸಂಸ್ಥೆಗೆ ಬಾಡಿಗೆಗೆ ನೀಡಿದ್ದರೇ ಮಾತ್ರ ಅದಕ್ಕೆ ಜಿಎಸ್‌ಟಿ ಅನ್ವಯಿಸುತ್ತದೆ ಎಂದು ಮಾಹಿತಿ ನೀಡಿದೆ.
ಉದ್ದಿಮೆಯ ಮಾಲೀಕ ಅಥವಾ ಪಾಲುದಾದರು ಖಾಸಗಿ ಬಳಕೆಗಾಗಿ ಬಾಡಿಗೆ ಮನೆಯನ್ನು ಪಡೆದಿದ್ದರೆ, ಅದಕ್ಕೂ ಜಿಎಸ್‌ಟಿ ಇಲ್ಲ ಎಂದು ತಿಳಿಸಿದೆ. ಇದರಿಂದಾಗಿ ಜಿಎಸ್‌ಟಿ ನೋಂದಣಿ ಮಾಡಿಕೊಂಡ ಉದ್ಯಮರು ಅಥವಾ ಪಾಲುದಾರರು ಖಾಸಗಿ ಬಳಕೆಗೆ ಮನೆಯನ್ನು ಬಾಡಿಗೆ ಪಡೆದಿದ್ದರೆ, ಅದಕ್ಕೆ ಜಿಎಸ್‌ಟಿ ಪಾವತಿಸಬೇಕು ಎಂದು ಕೆಲ ತೆರಿಗೆ ಸಲಹೆಗಾರರು ನೀಡುತ್ತಿದ್ದ ಸಲಹೆಯಿಂದಾಗಿ ಉದ್ಭವಿಸಿದ ಗೊಂದಲವೂ ಪರಿಹಾರವಾಗಿದೆ. ಇದನ್ನೂ ಓದಿ: ತ್ರಿವರ್ಣ ಧ್ವಜದ ಡಿಪಿ ಹಾಕಿದ ಆರ್‌ಎಸ್‌ಎಸ್
Live Tv
[brid partner=56869869 player=32851 video=960834 autoplay=true]
ನವದೆಹಲಿ: ಇನ್ಮುಂದೆ ಜುಲೈ 18ರಂದು ಜಾರಿಗೆ ಬಂದ ಜಿಎಸ್‌ಟಿ ಹೊಸ ನಿಯಮಗಳ ಅನ್ವಯ ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಹಿಡುವಳಿದಾರನು ಆಸ್ತಿಯನ್ನು ಬಾಡಿಗೆ ಪಡೆಯಲು ಶೇ.18 ರಷ್ಟು ತೆರಿಗೆ ಪಾವತಿಸಬೇಕು. ನೀವು ಪಾವತಿಸುವ ಬಾಡಿಗೆಗೆ ಶೇ.18 ರಷ್ಟು ಜಿಎಸ್‌ಟಿ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.
ಈ ಹಿಂದೆ ಬಾಡಿಗೆ ಅಥವಾ ಲೀಸ್‌ನಲ್ಲಿ (ಭೋಗ್ಯಕ್ಕೆ) ನೀಡಲಾದ ಕಚೇರಿಗಳು ಅಥವಾ ವಾಣಿಜ್ಯ ಆಸ್ತಿಗಳಿಗೆ ಮಾತ್ರ ಜಿಎಸ್‌ಟಿ ವಿಧಿಸಲಾಗಿತ್ತು. ಆದರೆ ಕಾರ್ಪೊರೇಟ್ ಹೌಸ್‌ಗಳು, ವ್ಯಕ್ತಿಗಳಿಂದ ಪಡೆಯುವ ಬಾಡಿಗೆ ಅಥವಾ ಗುತ್ತಿಗೆಯ ಆಸ್ತಿಗಳ ಮೇಲೆ ಯಾವುದೇ ಜಿಎಸ್‌ಟಿ ವಿಧಿಸಲಾಗಿರಲಿಲ್ಲ. ಆದರೆ ಹೊಸ ನೀತಿಯ ಅನ್ವಯ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮಕ್ಯಾನಿಸಂ (ಆರ್‌ಸಿಎಂ) ಅಡಿಯಲ್ಲಿ ತೆರಿಗೆ ಪಾವತಿಸಲು ಹೊಣೆಗಾರನಾಗಿರುತ್ತಾನೆ. ಇದನ್ನೂ ಓದಿ: ವೈಯಕ್ತಿಕ ಬಳಕೆಗಾಗಿ ಬಾಡಿಗೆ ನೀಡಿದ್ದರೆ ಜಿಎಸ್‌ಟಿ ಇಲ್ಲ- ಕೇಂದ್ರ
ಅಲ್ಲದೇ ಸಾಮಾನ್ಯ ವೇತನದಾರರು ವಸತಿ, ಮನೆ, ಫ್ಲಾಟ್ ಅನ್ನು ಬಾಡಿಗೆ ಅಥವಾ ಗುತ್ತಿಗೆ ಪಡೆದುಕೊಂಡರೆ ಅವರು ಜಿಎಸ್‌ಟಿ ಪಾವತಿಸಬೇಕಾಗಿಲ್ಲ. ವ್ಯಾಪಾರ ಅಥವಾ ಬ್ಯುಸಿನೆಸ್ ಮಾಡುವವರು ಮಾತ್ರ ನಿಯಮಿತಕ್ಕಿಂತ ಹೆಚ್ಚಿನ ವಹಿವಾಟು ನಿರ್ವಹಿಸುವಾಗ ಕಡ್ಡಾಯವಾಗಿ ತಮ್ಮ ಮಾಲೀಕರಿಗೆ ಜಿಎಸ್‌ಟಿ ಪಾವತಿಸಲೇಬೇಕಾಗುತ್ತದೆ ಎಂದು ಕ್ಲಿಯರ್‌ಟ್ಯಾಕ್ಸ್ನ ಸಂಸ್ಥಾಪಕ ಹಾಗೂ ಸಿಇಒ ಅರ್ಚಿತ್ ಗುಪ್ತಾ ವಿವರಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಜಿಎಸ್‌ಟಿ ಮಂಡಳಿಯು 47ನೇ ಸಭೆಯ ಬಳಿಕ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಇದೀಗ ಆರೋಪಿಗಳ ಆಸ್ತಿ ಸೀಜ್ ಮಾಡಲಾಗುತ್ತಿದ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಬೆಳ್ಳಾರೆಯಲ್ಲಿ ಆರು ಜಿಲ್ಲೆಯ ಎಸ್‍ಪಿ ಹಾಗೂ ಎನ್‍ಐಎ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಬೆಳ್ಳಾರೆ ಪ್ರವೀಣ್ ಕೊಲೆ ಕೇಸ್ ನಲ್ಲಿ ಮುಖ್ಯ ಆರೋಪಿಗಳ ಬಂಧನ ಆಗಬೇಕಿದೆ. ಆರೋಪಿಗಳ ದಸ್ತಗಿರಿಗೆ ಬೇರೆ ಬೇರೆ ಜಿಲ್ಲೆಯ ಅಧಿಕಾರಿಗಳ ಸಭೆ ಮಾಡುತ್ತೇವೆ. ಪ್ರಮುಖ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಸಭೆ ಮಾಡಲಿದ್ದೇವೆ. ಮಂಗಳೂರಿನ ಕಾನೂನು ಸುವ್ಯವಸ್ಥೆ ಬಗ್ಗೆಯೂ ಸಭೆ ಮಾಡುತ್ತೇವೆ. ಮುಖ್ಯ ಆರೋಪಿಗಳಿಗೆ ಪ್ರತ್ಯಕ್ಷ- ಪರೋಕ್ಷವಾಗಿ ಸಹಕಾರ ಮಾಡಿದವರಿಗೂ ಕ್ರಮ ಆಗಲಿದೆ ಎಂದರು.
ಎನ್‍ಐಎ ಅಧಿಕಾರಿಗಳ ಜೊತೆ ಸೇರಿ ಕ್ರಮ ಜರುಗಿಸುತ್ತೇವೆ. ಕೋರ್ಟ್ ಮೂಲಕ ವಾರೆಂಟ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಎನ್ ಐಎ ಅಧಿಕಾರಿಗಳ ಜೊತೆ ಕರ್ನಾಟಕ ತಂಡ ಈ ಕೆಲಸ ಮಾಡಲಿದೆ ಎಂದು ಹೇಳಿದರು.
ಪ್ರವೀಣ್ ಹತ್ಯೆಯ ಪ್ರಮುಖ ಆರೋಪಿಗಳ ಸಂಪೂರ್ಣ ಮಾಹಿತಿ ಇದೆ. ಅವರ ಫೋಟೋ, ಮನೆ ವಿಳಾಸ, ತಂದೆ-ತಾಯಿ, ಹೆಂಡತಿ ಮಾಹಿತಿ ಎಲ್ಲವೂ ಲಭ್ಯವಿದೆ. ಪ್ರಮುಖ ಆರೋಪಿಗಳನ್ನು ಬಚ್ಚಿಡುವ ಕೆಲಸ ನಡೆಯುತ್ತಿದೆ. ಆವಾಗವಾಗ ಅವರ ಸ್ಥಳ ಬದಲಾವಣೆ ಮಾಡಲಾಗುತ್ತಿದೆ. ಪೊಲೀಸರ ದಾಳಿ ವೇಳೆ ಪ್ರಮುಖ ಆರೋಪಿಗಳು ಪರಾರಿಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಬಿಕಿನಿ ಧರಿಸಿದ ಫೋಟೋ ಹಾಕಿದ್ದಕ್ಕೆ ಕೆಲಸ ಕಳೆದುಕೊಂಡ ಪ್ರಾಧ್ಯಾಪಕಿ
ಆರೋಪಿಗಳಿಗೆ ಪಿಎಫ್‍ಐ ಲಿಂಕ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಯಾವುದೇ ದಾಖಲೆ ಇಲ್ಲದೇ ಮಾತನಾಡೋದಿಲ್ಲ. ದಾಖಲೆ ಜೊತೆಗೆ ಮಾತನಾಡುತ್ತೇವೆ,ಸುಮ್ಮನೆ ಏನನ್ನೂ ಹೇಳೋದಿಲ್ಲ. ಕೆಲವು ಆರೋಪಿಗಳಿಗೆ ಪಿಎಫ್ ಐ ಲಿಂಕ್ ಇದೆ. ಈ ಬಗ್ಗೆ ತನಿಖೆಯನ್ನು ಮಾಡುತ್ತಿದ್ದೇವೆ. ತನಿಖೆಯ ಬಳಿಕ ಯಾರಿಗೆಲ್ಲಾ ಪಿಎಫ್‍ಐ ಲಿಂಕ್ ಇದೆ ಎಂಬುವುದರ ಬಗ್ಗೆ ಹೇಳುತ್ತೇವೆ ಎಂದು ಹೇಳಿದರು.
ಈಗಾಗಲೇ ಪ್ರಕರಣ ತನಿಖೆಯ ಹಂತದಲ್ಲಿದೆ. ಈ ಸಂಧರ್ಭದಲ್ಲಿ ಪ್ರಕರಣಕ್ಕೆ ಕೇರಳ ಲಿಂಕ್ ಇರುವ ಬಗ್ಗೆ ಹೇಳಲು ಸಾಧ್ಯವಿಲ್ಲ. ಈಗ ಬಂಧನವಾಗಿರುವ ಏಳು ಮಂದಿಯೂ ಸ್ಥಳೀಯರೇ ಆಗಿದ್ದಾರೆ. ಅವರಿಗೆ ನಿರ್ದೇಶನ ಕೊಟ್ಟಿರೋದು ಯಾರು ಎಂಬುವುದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡುತ್ತೇವೆ. ಬೆಳ್ಳಾರೆಯಲ್ಲಿ ಈ ಎಲ್ಲಾ ವಿಚಾರದ ಬಗ್ಗೆ ಸಭೆಯನ್ನು ಮಾಡುತ್ತೇವೆ. ಎನ್ ಐ ಎ ಅಧಿಕಾರಿಗಳು, ಚಾಮರಾಜನಗರ ಹಾಸನ, ಚಿಕ್ಕಮಗಳೂರು, ಉಡುಪಿ,ದಕ್ಷಿಣ ಕನ್ನಡ ಎಸ್‍ಪಿಗಳ ಜೊತೆ ಸಭೆ ಮಾಡುತ್ತೇವೆ ಎಂದು ತಿಳಿಸಿದರು.
Live Tv
[brid partner=56869869 player=32851 video=960834 autoplay=true]
ಲಾಕ್‍ಡೌನ್ ವೇಳೆ ಮೊರಾದಾಬಾದ್‍ನ 50 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅರವಿಂದ್ ಕುಮಾರ್ ಗೋಯಲ್ ಅವರು, ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದರು. ಅಲ್ಲದೇ ರಾಜ್ಯದಲ್ಲಿ ಬಡವರಿಗೆ ಉಚಿತ ಶಿಕ್ಷಣ ಮತ್ತು ಉತ್ತಮ ಚಿಕಿತ್ಸೆಯನ್ನು ಸಹ ಆಯೋಜಿಸಿದ್ದರು. ಇದನ್ನೂ ಓದಿ: ಡಿಕೆಶಿಗೆ ಜಮೀರ್ ಡಿಚ್ಚಿ – ಸಿದ್ದರಾಮಯ್ಯಗೆ ಜಮೀರ್ ಜಿಂದಾಬಾದ್
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ, ಪ್ರತಿಭಾ ದೇವಿ ಪಾಟೀಲ್, ಡಾ. ಎಪಿಜೆ ಅಬ್ದುಲ್ ಕಲಾಂ ಅವರು, ಡಾ. ಅರವಿಂದ್ ಗೋಯಲ್ ಅವರಿಗೆ ನಾಲ್ಕು ಬಾರಿ ಗೌರವ ಪ್ರಶಸ್ತಿಯನ್ನು ನೀಡಿದ್ದಾರೆ. ಅರವಿಂದ್ ಗೋಯಲ್ ಅವರಿಗೆ ರೇಣು ಗೋಯಲ್ ಎಂಬ ಪತ್ನಿ ಇದ್ದು, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.
Live Tv
[brid partner=56869869 player=32851 video=960834 autoplay=true]
ಮುಂಬೈ: ಆಸ್ತಿ ವಿಚಾರವಾಗಿ ಖಿನ್ನತೆಗೆ ಒಳಗಾಗಿದ್ದ 21 ವರ್ಷದ ಯುವಕನೊಬ್ಬ ತನ್ನ 46 ವರ್ಷದ ತಾಯಿಯ ಕತ್ತು ಸೀಳಿ ಹತ್ಯೆಗೈದು, ತಾನೂ ಕೂಡ ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ವರ್ಧಮಾನ್ ನಗರದ ಹೌಸಿಂಗ್ ಸೊಸೈಟಿಯಲ್ಲಿದ್ದ ಜಯೇಶ್ ಪಾಂಚಾಲ್ ಅವರ ಫ್ಲಾಟ್‍ನ ಹೊರಗೆ ಆಗಿದ್ದ ರಕ್ತದ ಕಲೆಗಳನ್ನು ಕಂಡು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ನೋಡಿದ್ದಾರೆ. ಅಲ್ಲದೇ ಘಟನಾ ಸ್ಥಳದಲ್ಲಿ ಗುಜರಾತಿ ಭಾಷೆಯಲ್ಲಿ ಬರೆದ ಚೀಟಿ ಹಾಗೂ ಚಾಕು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿಯ ನಾವುಂದ ಗ್ರಾಮದಲ್ಲಿ ನೆರೆ – ಮನೆ ತೊರೆಯಲು ಜನರ ನಕಾರ, ಕಾಳಜಿ ಕೇಂದ್ರ ಖಾಲಿ
ಬಳಿಕ ಪೊಲೀಸರು ಮೃತ ಮಹಿಳೆಯ ಪತಿಗೆ ಕರೆ ಮಾಡಿದ್ದು, ಈ ವೇಳೆ ಕೆಲವು ಆಸ್ತಿ ವಿಚಾರವಾಗಿ ಖಿನ್ನತೆಗೆ ಒಳಗಾಗಿದ್ದ ತಮ್ಮ ಮಗ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ. ಇದೀಗ ಸಣ್ಣ-ಪುಟ್ಟ ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಈ ತಾಯಿ ಮಗನನ್ನು ಕಳೆದುಕೊಂಡು ಇಳಿವಯಸ್ಸಿನಲ್ಲೂ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸೊಸೆಯ ಕಾಟದಿಂದಾಗಿ ಬದುಕೇ ಬರಡಾಗಿದೆ. ಸೊಸೆ ಎಂದು ಬಂದ ಆ ಖತರ್ನಾಕ್ ಲೇಡಿ ಇಡೀ ಕುಟುಂಬದ ನೆಮ್ಮದಿಯನ್ನೇ ಬೀದಿ ಪಾಲು ಮಾಡಿದ್ದಾಳೆ.
ಹೌದು ಈಕೆಯ ಹೆಸರು ರೇಣುಕಮ್ಮಾ. ವಯಸ್ಸು 60 ದಾಟಿದೆ. ಕೆಂಗೇರಿ ಬಳಿಯ ಸೂಲಿಕೆರೆಯಲ್ಲಿ ವಾಸವಾಗಿರುವ ಇವರ ಮಗ ಇತ್ತೀಚೆಗಷ್ಟೇ ಹೆಂಡತಿಯ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗಲೂ ತನ್ನ ಕಂದನ ನೆನೆದು ಈ ಜೀವ ಕಣ್ಣೀರು ಹಾಕುತ್ತಿದೆ. ಇಡೀ ಬದುಕೇ ಈಗ ಅಲ್ಲೋಲಕಲ್ಲೋಲವಾಗಿದೆ.
ಹೆಂಡತಿಯ ಕಾಟದಿಂದ ಬದುಕೇ ಸಾಕು ಎಂದು ಮಗ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಸೊಸೆಯ ಕಾರಣದಿಂದ ಈ ಬಡ ಜೀವ ಹೆತ್ತ ಮಗುವನ್ನೂ ಕಳೆದುಕೊಂಡಿದೆ. ಬದುಕು ದುಸ್ತರವಾಗಿದೆ. ಇವರ ಮಗ ಮಂಜುನಾಥ್ ಜೂನ್ 1 ರಂದು ಮನನೊಂದು ಡೆತ್ ನೋಟ್ ಬರೆದಿಟ್ಟು ಪ್ರಾಣ ಚೆಲ್ಲಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದೆ ಸೊಸೆ ಅನಸೂಯ.
ಈ ಅನಸೂಯ ಖತರ್ನಾಕ್ ಲೇಡಿ. ಮದುವೆಯಾಗಿ ಬಂದ ದಿನವೇ ದುಡ್ಡಿಗಾಗಿ ತನ್ನ ಅಸಲಿ ಮುಖವನ್ನು ಗಂಡ ಹಾಗೂ ಅತ್ತೆಗೆ ತೋರಿಸಿದ್ದಾಳೆ. ಮದುವೆಯ ದಿನದಂದೇ ಶುರುವಾದ ಕಲಹ ಸುಮಾರು 3-4 ವರ್ಷಗಳು ನಡೆದಿದೆ. ಕೊನೆಗೆ ಹೆಂಡತಿಯ ಹಿಂಸೆಗೆ ಡೆತ್ ನೋಟ್ ಬರೆದಿಟ್ಟು ಮಂಜುನಾಥ್ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾರೆ. ಇವಳ ಕಾಟ ಎಂಥದ್ದು ಎಂದರೆ, ರೌಡಿಗಳನ್ನು ಮನೆಗೆ ಕರೆಸಿ, ಪ್ರತಿನಿತ್ಯ ಪತಿ ಮಂಜುನಾಥ್ ಹಾಗೂ ತಾಯಿ ರೇಣುಕಮ್ಮಗೆ ದುಡ್ಡು, ಜಮೀನು ಅಂತ ಕಿರುಕುಳ ಕೊಡಿಸುತ್ತಿದ್ದಳು. ಗಂಡ ಸತ್ತ ಬಳಿಕವೂ ಇದೀಗ ಅನಸೂಯ ತನ್ನ ಅತ್ತೆಗೆ ಆಸ್ತಿ ಕೊಡುವಂತೆ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಬೈಕ್ ಜಪ್ತಿ ಮಾಡಿ ವಿಮೆ ಮಾಡಿಸಿದ ಪೊಲೀಸರು – ಕಣ್ಣೀರಿಟ್ಟ ಸವಾರ
ಜೂನ್ 1ರಂದು ಡೆತ್ ನೋಟ್ ಬರೆದಿಟ್ಟು ಕೆಂಗೇರಿ ಬಳಿಯ ರಾಮಸಂದ್ರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ್, ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಹೆಂಡತಿ ಅನಸೂಯಾ ಕಾರಣ ಎಂದು ಬರೆದಿದ್ದರು. ಅಲ್ಲದೆ ತನ್ನ ಆಸ್ತಿ, ಹಣ ಯಾವುದನ್ನೂ ಹೆಂಡತಿಗೆ ಕೊಡಬಾರದು, ತಾಯಿಗೆ ಕೊಡಬೇಕು ಎಂದು ಹೇಳಿದ್ದರು. ಮಂಜುನಾಥ್ ಜೊತೆಗಿನ ಖಾಸಗಿ ವೀಡಿಯೋ ಮುಂದಿಟ್ಟುಕೊಂಡು ಪುಡಿ ರೌಡಿಗಳ ಜೊತೆ ಸೇರಿ ಬ್ಲಾಕ್‌ಮೇಲ್ ಕೂಡ ಮಾಡುತ್ತಿದ್ದಳು. ಸೈಟು, ಆಸ್ತಿಯನ್ನೆಲ್ಲಾ ತನ್ನ ಹೆಸರಿಗೆ ಬರೆದುಕೊಡುವಂತೆ ಮದುವೆಯ ಮರುದಿನವೇ ಕಿರುಕುಳ ಕೊಟ್ಟಿದ್ದಳು. ಇದರಿಂದ ಮನನೊಂದು ಮಂಜುನಾಥ್ ಒಂದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವ್ಯವಸ್ಥೆಯನ್ನು ಪ್ರಶ್ನಿಸಿದವರ ವಿರುದ್ಧ ಕೇಸ್ ಹಾಕುವುದು, ಬೆದರಿಸುವುದು ಮಾಡುತ್ತಿದ್ದಾರೆ: ಪ್ರಿಯಾಂಗ್ ವಿರುದ್ಧ ಮಣಿಕಂಠ್ ಕಿಡಿ
ಈ ಹಿಂದೆ ಮಂಜುನಾಥ್ ಒಂದು ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ಅನಸೂಯಾಳನ್ನು ವರಿಸಿಕೊಂಡಿದ್ದರು. ಅನಸೂಯಾಳನ್ನು ಮದುವೆಯಾಗಿ ಕೆಲವೇ ವರ್ಷಕ್ಕೆ ಮನನೊಂದು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಜೈಲಿಗೂ ಹೋಗಿ ಬಂದಿದ್ದ ಮಂಜುನಾಥ್ ಎರಡನೇ ಪತ್ನಿ ಅನಸೂಯಾ, ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಮೃತ ಮಂಜುನಾಥ್ ತಾಯಿ ರೇಣುಕಮ್ಮಾರನ್ನು ಟಾರ್ಗೆಟ್ ಮಾಡಿದ್ದಾಳೆ. ಮಂಜುನಾಥ್ ಆಸ್ತಿ, ಹಣ ಎಲ್ಲವನ್ನೂ ತನಗೆ ಕೊಡುವಂತೆ ಕಿರುಕುಳ ಕೊಡುತ್ತಿದ್ದಾಳೆ. ಯಾರ ಆಶ್ರಯವೂ ಇಲ್ಲದೆ ರೇಣುಕಮ್ಮಾ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯನ್ನು ಇಬ್ಬರು ಸೇರಿ ಹತ್ಯೆ ಮಾಡಿದ್ದಲ್ಲ. 20 ರಿಂದ 25 ಜನರ ತಂಡ ಸೇರಿ ಕೊಲೆಯ ಸ್ಕೆಚ್ ಹಾಕಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.
ಹೌದು. ಮಂಗಳವಾರ ಮಧ್ಯಾಹ್ನ ಮಹಾಂತೇಶ್, ಮಂಜುನಾಥ ಇಬ್ಬರು ಹುಬ್ಬಳ್ಳಿ ಹೋಟೆಲ್‌ನಲ್ಲಿ ಗುರೂಜಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆದರೆ ಈ ಹತ್ಯೆಯ ಹಿಂದೆ ಒಂದು ತಂಡವೇ ಕೆಲಸ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ದ್ವೇಷಕ್ಕೆ ಕಾರಣ ಏನು?
ಮಹಾಂತೇಶ್ 2008ರಲ್ಲಿ ಗುರೂಜಿ ಅವರ ಚಂದ್ರಶೇಖರ ಗೌರಿ ಪರಿವಾರ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಕೆಲಸದ ಕೌಶಲ್ಯ ಮತ್ತು ಸಾಮರ್ಥ್ಯ ಕಂಡು ಈತನನ್ನು ಮುಂಬೈ ಬ್ರ್ಯಾಂಚ್ ಒಂದರ ಮುಖ್ಯಸ್ಥನನ್ನಾಗಿ ಗುರೂಜಿ ನೇಮಕ ಮಾಡುತ್ತಾರೆ. ತನಗೆ ನೀಡಿದ ಜವಾಬ್ದಾರಿಯನ್ನು ದುರುಪಯೋಗ ಪಡಿಸಿಕೊಂಡ ಈತ ಗುರೂಜಿ ಅವರ ಸಲಹೆ ಪಡೆಯಲು ಬರುವವರ ಜೊತೆಗೆ ನೇರವಾಗಿ ವ್ಯವಹಾರ ಮಾಡಲು ಆರಂಭಿಸುತ್ತಾನೆ. ಇದನ್ನೂ ಓದಿ: ಗುರೂಜಿಯನ್ನು ನಾವು ದೇವರಂತೆ ಕಾಣುತ್ತಿದ್ದೆವು: ವನಜಾಕ್ಷಿ
ಸರಳವಾಸ್ತು ಮಾಡಿಕೊಡಿಕೊಳ್ಳಲು ನಿಗದಿಪಡಿಸಿದ ಶುಲ್ಕವನ್ನು ಕಂಪನಿಗೆ ನೀಡದೇ ತಾನೇ ಗುಳುಂ ಮಾಡುತ್ತಾನೆ. ಇದೇ ಸಮಯದಲ್ಲಿ ಮಹಾಂತೇಶ್‌ಗೆ ಮಂಜುನಾಥನ ಪರಿಚಯವಾಗುತ್ತದೆ. ಕೊನೆಗೆ ಮಂಜುನಾಥ ಮತ್ತು ಇತನ ಜೊತೆಗೆ ಇನ್ನು ಹಲವು ಮಂದಿ ಮೋಸ ಮಾಡಿರುವ ವಿಚಾರ ಗುರೂಜಿಗೆ ತಿಳಿಯುತ್ತದೆ. ಇವರ ಮೇಲೆ ಸಿಟ್ಟಾದ ಗುರೂಜಿ ಮಹಾಂತೇಶ್ ತಂಡದಲ್ಲಿದ್ದ 20 ರಿಂದ 25 ಮಂದಿಯನ್ನು 2016ರಲ್ಲಿ ಕೆಲಸದಿಂದಲೇ ತೆಗೆದು ಹಾಕುತ್ತಾರೆ. ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಗುರೂಜಿ ಮೇಲೆ ಇವರಿಗೆ ದ್ವೇಷ ಆರಂಭವಾಗುತ್ತದೆ.
ಕಿರಾಣಿ ಅಂಗಡಿಯಲ್ಲಿ ನಷ್ಟ:
ಕೆಲಸ ಬಿಟ್ಟ ಬಳಿಕ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಮಹಾಂತೇಶ್ ಕಿರಾಣಿ ಅಂಗಡಿ ತೆರೆದಿದ್ದ. 2018 ರಿಂದ ಒಂದು ವರ್ಷಗಳ ಕಾಲ ಕಿರಾಣಿ ಅಂಗಡಿ ನಡೆಸಿದ್ದರೂ ನಷ್ಟ ಅನುಭವಿಸಿದ್ದ. ಇದಾದ ಬಳಿಕ ಮಹಾಂತೇಶ್ ರಿಯಲ್ ಎಸ್ಟೇಟ್ ವ್ಯವಹಾರ ಮಾಡಲು ಮುಂದಾದ. ಮಹಾಂತೇಶನ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಮಂಜುನಾಥನೂ ಸಹಕಾರ ನೀಡಿದ್ದ. ಇವರಿಬ್ಬರೂ ಸೇರಿ ಹುಬ್ಬಳ್ಳಿಯ ಖಾಸಗಿ ಕಟ್ಟಡದಲ್ಲಿ ರಿಯಲ್ ಎಸ್ಟೇಟ್ ಕಂಪನಿಯನ್ನು ತೆರೆದಿದ್ದರು. ಹುಬ್ಬಳ್ಳಿ, ಧಾರವಾಡ, ಜಮಖಂಡಿ, ಮುಧೋಳದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮಾಡುತ್ತಿದ್ದರು. ಆದರೆ ಈ ವ್ಯವಹಾರ ನಷ್ಟವಾಗಿತ್ತು. ಇದರಿಂದ ಇಬ್ಬರು ಭಾರೀ ಪ್ರಮಾಣದಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸಿದ್ದರು. ಈ ಆರ್ಥಿಕ ನಷ್ಟವನ್ನು ಸರಿಪಡಿಸಲು ಹೂಡಿದ ಕುತಂತ್ರವೇ ಬ್ಲ್ಯಾಕ್‌ಮೇಲ್. ಚಂದ್ರಶೇಖರ ಗುರೂಜಿ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಿ ಸುಲಿಗೆ ಮಾಡಲು ಇವರಿಬ್ಬರು ಮುಂದಾಗಿದ್ದರು. ಈ ಕುತಂತ್ರಕ್ಕೆ ಚಂದ್ರಶೇಖರ ಗುರೂಜಿ ಬಗ್ಗಿರಲಿಲ್ಲ.
ಬ್ಲ್ಯಾಕ್‌ಮೇಲ್ ಹೇಗೆ?
ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ವಿಮಾನ ನಿಲ್ದಾಣದ ರಸ್ತೆಯ ಡೆಕತ್ಲಾನ್ ಶೋರೂಂ ಹಿಂದೆ ʼಗೋಕುಲʼ ಹೆಸರಿನಲ್ಲಿ ಅಪಾರ್ಟ್‌ಮೆಂಟ್ ಕಟ್ಟಿಸಿದ್ದರು. ಆರಂಭದಲ್ಲಿ ಈ ಅಪಾರ್ಟ್‌ಮೆಂಟ್ ಗುರೂಜಿಯವರ ಬೇನಾಮಿ ಆಸ್ತಿಯಾಗಿದ್ದು ಮಹಾಂತೇಶ್ ಪತ್ನಿಯ ಹೆಸರಿನಲ್ಲಿ ನಿರ್ಮಿಸಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಈ ಆಸ್ತಿ ಬೇನಾಮಿ ಆಗಿರಲಿಲ್ಲ. ಗುರೂಜಿ ಅವರ ಸ್ವಂತ ಆಸ್ತಿಯಾಗಿದ್ದು ಈ ಅಪಾರ್ಟ್‌ಮೆಂಟ್‌ನಲ್ಲಿ ಮಹಾಂತೇಶ್ ಪತ್ನಿ ಜೊತೆ ವಾಸವಾಗಿದ್ದ.
ಈ ಅಪಾರ್ಟ್‌ಮೆಂಟ್ ವಿಚಾರವಾಗಿ ಮಹಾಂತೇಶ್ ಮತ್ತು ಮಂಜುನಾಥ ಕಾನೂನು ಸಮರಕ್ಕೆ ಇಳಿದಿದ್ದರು. ಅಪಾರ್ಟ್‌ಮೆಂಟ್ ಸರಿಯಾಗಿ ನಿರ್ಮಾಣಗೊಂಡಿಲ್ಲ, ಪಾರ್ಕಿಂಗ್‌ಗೆ ಜಾಗವಿಲ್ಲ, ಮಳೆ ನೀರು ಸರಿಯಾಗಿ ಹೋಗುತ್ತಿಲ್ಲ, ಸೋಲಾರ್ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ಧಾರವಾಡ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಈ ವಿಚಾರವಾಗಿ ಗುರೂಜಿ ಪ್ರಶ್ನೆ ಮಾಡಿದಾಗ ಹಣವನ್ನು ನೀಡಿದರೆ ದೂರನ್ನು ಹಿಂಪಡೆಯುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ಹಣ ನೀಡದೇ ಇದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದರು. ಆದರೆ ಗುರೂಜಿ ಹಂತಕರ ಜೀವ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್‌ಗೆ ಬಗ್ಗಿರಲಿಲ್ಲ. ಹಣ ನೀಡದ್ದಕ್ಕೆ ಸಿಟ್ಟಾಗಿದ್ದ ಇವರು ಗುರೂಜಿ ವಿರುದ್ಧ ದ್ವೇಷ ಸಾಧಿಸಲು ಮುಂದಾಗುತ್ತಿದ್ದರು. ಯಾವುದೇ ಬೆದರಿಕೆಗೆ ಜಗ್ಗದ ಕಾರಣ ಸಿಟ್ಟಾಗಿದ್ದ ಇವರು ಪೂರ್ವ ತಯಾರಿ ಮಾಡಿಕೊಂಡು ಬಂದು ಮಂಗಳವಾರ ಮಧ್ಯಾಹ್ನ ಕೊಲೆ ಮಾಡಿದ್ದಾರೆ.
ಎಫ್‌ಐಆರ್ ದಾಖಲು:
ಗುರೂಜಿ ಸಂಬಂಧಿ ಸಂಜಯ್ ಅಂಗಡಿ ಎಂಬವರು ನೀಡಿದ ದೂರಿನ ಆಧಾರದಲ್ಲಿ ವಿದ್ಯಾನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 34(ಏಕೋದ್ದೇಶಕ್ಕಾಗಿ ಹಲವು ವ್ಯಕ್ತಿಗಳು ಮಾಡಿದ ಕೃತ್ಯ), 302(ಕೊಲೆ) ಅಡಿ ಎಫ್‌ಐಆರ್ ದಾಖಲಾಗಿದೆ.
ಮಂಗಳವಾರ ಹೋಟೆಲ್‌ಗೆ ಬಂದಿದ್ದ ಮಹಾಂತೇಶ್ ಮತ್ತು ಮಜಂಜುನಾಥ್ ಅಪಾರ್ಟ್‌ಮೆಂಟ್ ವಿಚಾರ ಸಂಬಂಧ ಮಾತನಾಡಲು ಬನ್ನಿ ಎಂದು ಗುರೂಜಿ ಅವರನ್ನು ಕರೆದು ಹತ್ಯೆ ಮಾಡಿದ್ದಾರೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಆಸ್ತಿಯ ಕುರಿತು ಇದೀಗ ಎಲ್ಲೆಡೆ ಚರ್ಚೆ ಶುರುವಾಗಿದೆ. ವಯಸ್ಸು ಐವತ್ತು ದಾಟಿದರೂ, ಇನ್ನೂ ಸಲ್ಲು ಮದುವೆ ಆಗಿಲ್ಲ. ಲಗ್ನ ಆಗುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಮದುವೆ ವಿಚಾರ ಎತ್ತಿದರೆ, ಅಲ್ಲಿಂದ ತಪ್ಪಿಸಿಕೊಳ್ಳುತ್ತಾರಂತೆ ಸಲ್ಲುಭಾಯ್. ಹಾಗಾಗಿ ಇವರ ಆಸ್ತಿಗೆ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?
ಸಲ್ಮಾನ್ ಖಾನ್ ಅವರ ಒಟ್ಟು ಆಸ್ತಿ 2300 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಅದು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇರುತ್ತದೆ. ಅಲ್ಲದೇ ಬೆಲೆಬಾಳುವ ಕಾರುಗಳು, ಎಸ್ಟೇಟ್, ಬಹುಮಹಡಿ ಕಟ್ಟಡಗಳು, ಫಾರ್ಮ್ ಹೌಸ್, ವಿದೇಶದಲ್ಲೂ ಅವರು ಹಣ ತೊಡಗಿಸಿದ್ದಾರಂತೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಇವರ ಆಸ್ತಿಗೆ ಜಮಾ ಆಗುತ್ತಲೇ ಇದೆಯಂತೆ. ಇಷ್ಟೊಂದು ಹಣ ಇರುವಾಗ, ಸಲ್ಲು ಇನ್ನೂ ಯಾಕೆ ಮದುವೆ ಆಗಿಲ್ಲ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳದ್ದು. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್
ಈ ಹಿಂದೆ ಸಂದರ್ಶನೊಂದರಲ್ಲಿ ಸಲ್ಲು ಜಗಮೆಚ್ಚುವ ಮಾತುಗಳನ್ನು ಆಡಿದ್ದರು. ನಾನು ಮದುವೆಯಾದರೂ, ಆಗದೇ ಇದ್ದರೂ ಆಸ್ತಿಯ ಕೆಲವು ಭಾಗ ಜನಸೇವೆಗೆ ಮೀಸಲಿರುತ್ತದೆ. ಹಲವು ಟ್ರಸ್ಟ್ ಗಳಿಗೆ ಹಣ ಸಂದಾಯವಾಗುತ್ತದೆ. ಅದನ್ನು ಜನೋಪಯೋಗಿ ಕೆಲಸಕ್ಕೆ ಬಳಸಲಾಗುವುದು ಎಂದು ಹೇಳಿದ್ದರು. ಅಲ್ಲಿಯೂ ಅವರು ಮದುವೆ ವಿಚಾರವನ್ನು ಪ್ರಸ್ತಾಪ ಮಾಡಲಿಲ್ಲ. ಇದನ್ನೂ ಓದಿ : ಹಾಲಿವುಡ್‌ಗೆ ಹಾರಲಿದ್ದಾರೆ ಬಾಲಿವುಡ್ ರಾಧೆ ಆಲಿಯಾ ಭಟ್
ಸಲ್ಲು ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಹೊಂದಿದ್ದಾರೆ. ಆ ಮೂಲಕ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಇದೀಗ ಕಿಚ್ಚ ಸುದೀಪ್ ಅವರ ಜೊತೆ ಮತ್ತೊಂದು ಸಿನಿಮಾ ಮಾಡುವ ಮಾತಕತೆ ಕೂಡ ನಡೆದಿದೆ. ಈಗಾಗಲೇ ಸುದೀಪ್ ಅವರು ಸಲ್ಮಾನ್ ಅವರಿಗೆ ಕಥೆಯೊಂದನ್ನು ಹೇಳಿದ್ದಾರೆ ಎನ್ನುವ ಸುದ್ದಿ ಕೂಡ ಇದೆ.
ಧಾರವಾಡ: ಆಸ್ತಿಗಾಗಿ ಹೆತ್ತ ತಾಯಿಯನ್ನೆ ಕ್ರೂರಿ ಮಗನೊಬ್ಬ ಹತ್ಯೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ನಡೆದಿದೆ.
ಶಾಂತವ್ವ ಕಲ್ಲಪ್ಪ ಅಣ್ಣಿಗೇರಿ(65) ವೃದ್ಧೆಯೇ ಹತ್ಯೆಯಾದ ದುರ್ದೈವಿ. ಬಸವರಾಜ್ ಕಲ್ಲಪ್ಪ ಅಣ್ಣಿಗೇರಿ ತಾಯಿಯನ್ನೆ ಕೊಲೆ ಮಾಡಿದ ಮಗ. ಬಸವರಾಜ್ ಕ್ರೂರ ಕೃತ್ಯ ಸ್ಥಳೀಯರಿಗೆ ತಿಳಿದುಬಂದ ತಕ್ಷಣ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಪರಿಣಾಮ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸಿಐಡಿ ಕಚೇರಿಗೆ ಹೊಸಬಟ್ಟೆ ಸಮೇತ ಆಗಮಿಸಿದ ಆರೋಪಿ ಸದ್ದಾಂ ಫ್ಯಾಮಿಲಿ
ಕಾರಣವೇನು?
ಬಸವರಾಜ್ ನಿತ್ಯವೂ ‘ಆಸ್ತಿಯನ್ನು ನನಗೆ ಕೊಡು’ ಎಂದು ಶಾಂತವ್ವನನ್ನು ಪೀಡಿಸಿ ಕಿರುಕುಳ ನೀಡುತ್ತಿದ್ದ. ಇದಕ್ಕೆ ಶಾಂತವ್ವ ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ಸೋಮವಾರ(ಇಂದು) ಬಸವರಾಜ್ ಮತ್ತೆ ಆಸ್ತಿಗಾಗಿ ಪೀಡಿಸಿದ್ದು, ಶಾಂತವ್ವನನ್ನು ಹೊಡೆಯಲು ಮುಂದಾಗಿದ್ದಾನೆ. ಈ ವೇಳೆ ಅಲ್ಲೇ ಇದ್ದ ದೊಣ್ಣೆಯಿಂದ ಶಾಂತವ್ವನನ್ನು ಹೊಡೆದಿದ್ದಾನೆ. ಪರಿಣಾಮ ಆಕೆ ಮೃತಪಟ್ಟಿದ್ದಾಳೆ.
ಸುಕೇಶ್ ಚಂದ್ರಶೇಖರ್ ವಿರುದ್ಧದ ಸುಲಿಗೆ ಪ್ರಕರಣದಲ್ಲಿ ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡೀಸ್ ಅವರ 7.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ಜಪ್ತಿ ಮಾಡಿದೆ. ಜಾಕ್ವೆಲಿನ್ ಕನ್ನಡದಲ್ಲೂ ನಟಿಸಿದ್ದು, ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನಷ್ಟೇ ಈ ಸಿನಿಮಾ ರಿಲೀಸ್ ಆಗಬೇಕಿದೆ.
ಜಾಕ್ವೆಲಿನ್ ಹೆಸರಿನಲ್ಲಿ 7.12 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಠೇವಣಿಗಳನ್ನು ಲಗತ್ತಿಸಲಾದ ಆಸ್ತಿಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಜಾಕ್ವೆಲಿನ್ ಫೆರ್ನಾಂಡಿಸ್ ಸುಲಿಗೆ ಮಾಡಿದ ಹಣದ ಫಲಾನುಭವಿಯಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸುಕೇಶ್ ಚಂದ್ರಶೇಖರ್ ಸುಲಿಗೆ ಮಾಡಿದ ಹಣವನ್ನು ಬಳಸಿಕೊಂಡು ಜಾಕ್ವೆಲಿನ್ ಫರ್ನಾಂಡೀಸ್‌ಗೆ 5.71 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ನೀಡಿದ್ದ ಎಂಬ ಪುರಾವೆಗಳು ಅಧಿಕಾರಿಗಳಿಗೆ ಸಿಕ್ಕಿವೆ. ಉಡುಗೊರೆಗಳ ಹೊರತಾಗಿ, ಅವನು ಜಾಕ್ವೆಲಿನ್ ಅವರ ಕುಟುಂಬ ಸದಸ್ಯರಿಗೆ 173,000 ಯುಎಸ್ ಡಾಲರ್ ಮತ್ತು ಸುಮಾರು 27,000 ಆಸ್ಟ್ರೇಲಿಯನ್ ಡಾಲರ್‌ಗಳನ್ನು ನೀಡಿದ್ದನು.
ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಸುಕೇಶ್ ಚಂದ್ರಶೇಖರ್ ಜೊತೆಗಿನ ಸಂಪರ್ಕಕ್ಕಾಗಿ ಇಡಿ ಹಲವು ಬಾರಿ ಪ್ರಶ್ನಿಸಿತ್ತು. ಜಾಕ್ವೆಲಿನ್ ಸದ್ಯಕ್ಕೆ ಆರೋಪಿಯಲ್ಲ. ಆದರೆ ತನಿಖಾಧಿಕಾರಿಗಳು ಇನ್ನೂ ಜಾಕ್ವೆಲಿನ್‌ಗೆ ಕ್ಲೀನ್ ಚಿಟ್ ನೀಡಿಲ್ಲ. ಶ್ರೀಲಂಕಾ ಮೂಲದ ನಟಿಗೆ ದೇಶ ತೊರೆಯದಂತೆ ನಿಷೇಧ ಹೇರಲಾಗಿತ್ತು.
ದೆಹಲಿಯ ಉದ್ಯಮಿಯೊಬ್ಬರ ಪತ್ನಿಯಿಂದ ಸ್ಪೂಫ್ ಕರೆಗಳ ಮೂಲಕ ಸುಕೇಶ್ ಚಂದ್ರಶೇಖರ್ 215 ಕೋಟಿ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಸುಕೇಶ್ ದೆಹಲಿಯ ಜೈಲಿನಲ್ಲಿದ್ದಾಗ, ಪ್ರಧಾನಿ ಕಚೇರಿ, ಕಾನೂನು ಸಚಿವಾಲಯ ಮತ್ತು ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸಿ ಸಂತ್ರಸ್ತ ಮಹಿಳೆಯಿಂದ ಹಣ ವಸೂಲಿ ಮಾಡಿದ್ದಾನೆ. ಸಂತ್ರಸ್ತೆಯ ಪತಿಗೆ ಜಾಮೀನು ದೊರಕಿಸಿಕೊಡುವುದಾಗಿ ಮತ್ತು ಅವರ ಔಷಧ ವ್ಯಾಪಾರವನ್ನು ನಡೆಸುವುದಾಗಿ ಸುಕೇಶ್ ದೂರವಾಣಿ ಕರೆಗಳಲ್ಲಿ ಹೇಳಿಕೊಂಡಿದ್ದನು.
ರಾಜಕಾರಣಿ ಟಿಟಿವಿ ದಿನಕರನ್ ಒಳಗೊಂಡ ಐದು ವರ್ಷಗಳ ಹಿಂದಿನ ವಂಚನೆ ಪ್ರಕರಣದಲ್ಲಿ ಸುಕೇಶ್ ಕೂಡ ಭಾಗಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 4 ರಂದು ಇಡಿ ಅವರನ್ನು ಬಂಧಿಸಿತ್ತು.