Tag: property

  • ದ್ವೇಷಕ್ಕೆ 84 ತೆಂಗಿನ ಸಸಿಗಳ ಮಾರಣಹೋಮ

    ದ್ವೇಷಕ್ಕೆ 84 ತೆಂಗಿನ ಸಸಿಗಳ ಮಾರಣಹೋಮ

    ತುಮಕೂರು: ಜಮೀನು ವಿವಾದದ ದ್ವೇಷಕ್ಕೆ 84 ತೆಂಗಿನ ಸಸಿಗಳ (Coconut Saplings) ಮಾರಣಹೋಮ ನಡೆದಿರುವ ಘಟನೆ ತುಮಕೂರು (Tumakuru) ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಅಣೆಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ.

    ಎರೆಹಳ್ಳಿ ಸರ್ವೆ ನಂಬರ್ 21ರ ಸಾಗುವಳಿ ಜಮೀನಿನಲ್ಲಿದ್ದ 84 ತೆಂಗಿನ ಸಸಿಗಳನ್ನು ದುಷ್ಕರ್ಮಿಗಳು ನಾಶಪಡಿಸಿದ್ದಾರೆ. ಅಣೆಕಟ್ಟೆ ಗ್ರಾಮದ ವೃದ್ಧೆ ಶಿವಮ್ಮ ಅವರಿಗೆ ಸೇರಿದ ಜಮೀನಿನ ವಿವಾದ ಸದ್ಯ ಕೋರ್ಟ್ ಮೆಟ್ಟಿಲೇರಿತ್ತು.

    ಈ ದ್ವೇಷಕ್ಕೆ ಜಮೀನಿನಲ್ಲಿದ್ದ ತೆಂಗಿನಸಸಿಗಳನ್ನ ನಾಶ ಮಾಡಿ ದುಶ್ಕೃತ್ಯ ಎಸಗಿದ್ದಾರೆ. ಘಟನೆ ಸಂಬಂಧ ವಿಶ್ವನಾಥ ಮತ್ತು ಕುಮಾರ್ ಎನ್.ಎಸ್ ಎಂಬುವರ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಉತ್ಸವದಲ್ಲಿ ಮಂಗ್ಲಿ ಕಾರು ಒಡೆದ ಕಿಡಿಗೇಡಿಗಳು- ಮೇಕಪ್‌ ರೂಂಗೆ ನುಗ್ಗಿ ದಾಂಧಲೆ

    ಕೃತ್ಯ ಮಾಡಿದ ಬಳಿಕ ಕಂಡವರ ಜಮೀನಿಗೆ ಹೋದರೆ ಹೀಗೆ ಮಾಡುತ್ತೇವೆ ಮುಂದೆಯೂ ಹೀಗೆ ಮಾಡುತ್ತೇವೆ ಎಂದು ಆರೋಪಿ ಕುಮಾರ್ ತನ್ನ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾನೆ. ಆರೋಪಿ ಕುಮಾರ್‌ ಸಚಿವ ಮಾಧುಸ್ವಾಮಿ ಬೆಂಬಲಿಗ ಎಂಬ ಆರೋಪ ಬಂದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

    ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

    ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಹುಮ್ಮಸ್ಸಿನಲ್ಲಿದ್ದ ಜನಾರ್ದನ ರೆಡ್ಡಿಗೆ (Janardhan Reddy) ರಾಜ್ಯ ಸರ್ಕಾರ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ.

    ರೆಡ್ಡಿಯ ಆಸ್ತಿ ಜಪ್ತಿಗೆ ಸರ್ಕಾರ ಕೊನೆಗೂ ಅಸ್ತು ಎಂದಿದೆ. ಅಕ್ರಮ ಗಣಿಗಾರಿಕೆ (Illegal Mining) ಹಣದಿಂದ ರೆಡ್ಡಿ ಹೊಸದಾಗಿ ತೆಲಂಗಾಣ ರಾಜ್ಯಗಳಲ್ಲಿ 219 ಕಡೆ ಆಸ್ತಿಗಳನ್ನು ಖರೀದಿ ಮಾಡಿದ್ದಾರೆ. ಈ ಆಸ್ತಿಗಳನ್ನು ಜಪ್ತಿ ಮಾಡಲು ಅನುಮತಿ ನೀಡಬೇಕೆಂದು ಸರ್ಕಾರಕ್ಕೆ 2022ರ ಆಗಸ್ಟ್‌ 30 ರಂದು ಸಿಬಿಐ (CBI) ಪ್ರಾಸಿಕ್ಯೂಷನ್‌ಗೆ ಮನವಿ ಮಾಡಿತ್ತು.

    ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಸಿಬಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸಿಬಿಐ ಅರ್ಜಿಗೆ ಸರ್ಕಾರ ಯಾವುದೇ ಉತ್ತರ ನೀಡಿರಲಿಲ್ಲ. ಇದನ್ನೂ ಓದಿ: ಬಿಯರ್ ಬಾಟ್ಲಿಯಿಂದ ಹಲ್ಲೆ- ಉಬರ್ ಚಾಲಕಿಯ ಕುತ್ತಿಗೆಗೆ 10 ಸ್ಟಿಚ್!

    ಆಸ್ತಿ ಜಪ್ತಿ ಅರ್ಜಿ ವಿಚಾರ ತಿಳಿದ ರೆಡ್ಡಿ ಕರ್ನೂಲ್, ರಂಗಾರೆಡ್ಡಿ ಜಿಲ್ಲೆಗಳಲ್ಲಿ ಆಸ್ತಿ ಮಾರಾಟಕ್ಕೆ ಯತ್ನಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಜಪ್ತಿಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಬೇಕು ಅಂತಾ ಸಿಬಿಐ ಹೈಕೋರ್ಟ್‌ನಲ್ಲಿ  ವಾದ ಮಂಡಿಸಿತ್ತು.

    ನಿಮ್ಮ ಕಾರ್ಯವೈಖರಿ ಇದೇನಾ? ಐದು ತಿಂಗಳಾದರೂ ಯಾಕೆ ಕ್ರಮ ಕೈಗೊಂಡಿಲ್ಲ? ನಿಮ್ಮ ದೃಷ್ಟಿಯಲ್ಲಿ ನಿರ್ಧಾರ ಕೈಗೊಳ್ಳದೇ ಇರುವುದು ಒಂದು ಕ್ರಮವಿರಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಈ ಹಿಂದಿನ ವಿಚಾರಣೆಯಲ್ಲಿ ಹೈಕೋರ್ಟ್‌ ಚಾಟಿ ಬೀಸಿ ನೋಟಿಸ್ ಜಾರಿ ಮಾಡಿತ್ತು.

    ಗುರುವಾರ ಅರ್ಜಿ ವಿಚಾರಣೆ ವೇಳೆ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿರುವ ಬಗ್ಗೆ ಹೈಕೋರ್ಟ್‌ಗೆ ಸರ್ಕಾರಿ ವಕೀಲರು ಮಾಹಿತಿ ನೀಡಿದರು. ಸಿಬಿಐ ಸಲ್ಲಿಸಿದ್ದ ಅರ್ಜಿ ಇತ್ಯರ್ಥಗೊಳಿಸಿದ ಹೈಕೋರ್ಟ್ ಆಸ್ತಿ ಜಪ್ತಿಗೆ ಸಿಬಿಐ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಮುಂದುವರೆಯುವಂತೆ ಸೂಚನೆ ನೀಡಿತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆಸ್ತಿ ವಿಚಾರಕ್ಕೆ ಯುವಕನ ಮೇಲೆ ಗುಂಡೇಟು – ಕ್ಷಣಮಾತ್ರದಲ್ಲಿ ತಪ್ಪಿದ ಅನಾಹುತ

    ಆಸ್ತಿ ವಿಚಾರಕ್ಕೆ ಯುವಕನ ಮೇಲೆ ಗುಂಡೇಟು – ಕ್ಷಣಮಾತ್ರದಲ್ಲಿ ತಪ್ಪಿದ ಅನಾಹುತ

    ಮಡಿಕೇರಿ: ಆಸ್ತಿ (Property) ವಿಚಾರವಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದು, ಬಳಿಕ ಯುವಕನ ಮೇಲೆ ಗುಂಡು ಹಾರಿಸಿ ಕೊಲೆ ಯತ್ನಕ್ಕೂ ಮುಂದಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ನಡೆದಿದೆ.

    ಕಳೆದ ಎರಡು-ಮೂರು ತಿಂಗಳಿನಿಂದ ಆಸ್ತಿ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿದ್ದು‌, ನಿನ್ನೆ ಇದು ತಾರಕಕ್ಕೆ ಏರಿ ಯುವಕನ ಮೇಲೆ ಗುಂಡು ಹಾರಿಸಿದ್ದ ಆರೋಪ ಕೇಳಿಬಂದಿದೆ. ಅಲ್ಲದೇ ಗುಂಡು ಹಾರಿಸಿದ ಆರೋಪದಲ್ಲಿ ಮತ್ತೊಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

    ಹೊಡೆದಾಟದಲ್ಲಿ ನಿಶ್ಚಲ್ ಎಂಬ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ನಿಶ್ಚಲ್‌ ಎಂಬ ವ್ಯಕ್ತಿಯ ಕೈಮುರಿದಿದ್ದು, ತಲೆಗೂ ಗಂಭೀರ ಪೆಟ್ಟುಯಾಗಿದೆ. ಇದಕ್ಕೂ ಮೊದಲು ನಿಶ್ಚಲ್, ತೀರ್ಥ ಎಂಬಾತನ ಮೇಲೆ ಗನ್‌ನಿಂದ ಶೂಟ್ ಮಾಡಿದ ಆರೋಪವು ಕೇಳಿ ಬಂದಿದ್ದು, ಈ ವೇಳೆ ತೀರ್ಥನ ಕೈಗೆ ಸಣ್ಣ ಗಾಯವಾಗಿದೆ. ಆದರೆ ತೀರ್ಥ ಚಲಾಯಿಸುತ್ತಿದ್ದ ಜೀಪಿಗೆ ಗುಂಡೇಟು ಬಿದ್ದಿದೆ. ಜೀಪಿನ ಸೀಟನ್ನು ಸೀಳಿದೆ. ಆದರೆ ತೀಥ ಗುಂಡೇಟಿನಿಂದ ತಪ್ಪಿಸಿಕೊಂಡಿದ್ದಾರೆ.

    ಘಟನೆಯೇನು?: ಬಿಳಿಗೇರಿ ಗ್ರಾಮದಲ್ಲಿ ಇರುವ ಸುಮಾರು 7 ಎಕರೆ ಕಾಫಿ ತೋಟವನ್ನು ನಿಶ್ಚಲ್ ಇತ್ತೀಚಿಗೆ ಖರೀದಿ ಮಾಡಿದ್ದ. ಆದರೆ ಈ ಕಾಫಿ ತೋಟವನ್ನು ಕಳೆದ 30 ವರ್ಷಗಳಿಂದ ತೀರ್ಥ ಅವರ ತಂದೆ ನೋಡಿಕೊಳ್ಳುತ್ತಿದ್ದರು. ಅಲ್ಲದೇ ತೋಟದ ಜಾಗಕ್ಕೆ ದಾಖಲೆಗಳನ್ನು ಮಾಡಲು ಮುಂದಾಗಿದ್ದರು. ಆದರೆ ತೋಟವನ್ನು ಬೇರೆ ಅವರ ಕೈಯಿಂದ ನಿಶ್ಚಲ್ ಖರೀದಿ ಮಾಡಿರುವುದರಿಂದ ಈ ಪ್ರಕರಣ ಕಳೆದ 6 ತಿಂಗಳ ಹಿಂದೆಯೇ ಕೋರ್ಟ್‌ ಮೆಟ್ಟಿಲು ಏರಿತ್ತು. ಆದರೆ ತೀರ್ಥ ಕಾಫಿ ತೋಟವನ್ನು ಬೇರೆ ಅವರಿಗೆ ಕಾಫಿಗೆ ಲೀಜ್ ನೀಡಿದ್ದರು. ಇದನ್ನು ಪ್ರಶ್ನಿಸಲು ನಿಶ್ಚಲ್ ಸ್ಥಳಕ್ಕೆ ಹೋಗಿರುವಾಗ 2 ಕುಟುಂಬಗಳ ನಡುವೆ ‌ಮಾತಿಗೆ ಮಾತು ಬೆಳೆದು ಗುಂಡು ಹೊಡೆಯುವ ಹಂತಕ್ಕೆ ತಲುಪಿದೆ ಎನ್ನಲಾಗಿದೆ. ಇದನ್ನೂ ಓದಿ: ದಲಿತರ ನೀರಿನ ತೊಟ್ಟಿಗೆ ಮಲ ಸುರಿದು ವಿಕೃತಿ – ಹಲವರು ಅಸ್ವಸ್ಥ

    ಘಟನಾ ಸ್ಥಳಕ್ಕೆ ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಭೇಟಿ ಪರಿಶೀಲನೆ ನಡೆಸಿದರು. ಸದ್ಯ ಇಬ್ಬರು ಯುವಕರಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಇದನ್ನೂ ಓದಿ: ಗ್ಯಾಂಬಿಯಾ ಬಳಿಕ ಈಗ ಉಜ್ಬೇಕಿಸ್ತಾನದಿಂದ ಆರೋಪ – 18 ಮಕ್ಕಳ ಸಾವಿಗೆ ಭಾರತದ ಸಿರಪ್ ಕಾರಣ

    Live Tv
    [brid partner=56869869 player=32851 video=960834 autoplay=true]

  • ಆಸ್ತಿ ವಿಚಾರಕ್ಕೆ ಸೋದರ ಸಂಬಂಧಿಯ ತಲೆಯನ್ನೇ ಕಡಿದ್ರು – ಸೆಲ್ಫಿ ತೆಗೆದು ವಿಕೃತಿ ಮೆರೆದ್ರು

    ರಾಂಚಿ: ಆಸ್ತಿ (Property) ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನ ಸೋದರ ಸಂಬಂಧಿಯ (Cousin) ತಲೆಯನ್ನೇ ಕಡಿದು (beheading) ಹತ್ಯೆ ಮಾಡಿದ್ದಲ್ಲದೇ (Murder) ಆತನ ತಲೆಯನ್ನು ಹಿಡಿದುಕೊಂಡು ಸೆಲ್ಫಿಯನ್ನೂ (Selfie) ತೆಗೆದು ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ (Jharkhand) ಖುಂಟಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ವ್ಯಕ್ತಿ, ಆತನ ಪತ್ನಿ ಸೇರಿದಂತೆ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    20 ವರ್ಷದ ವ್ಯಕ್ತಿ ಸೋದರ ಸಂಬಂಧಿಯ ತಲೆ ಕಡಿದಿದ್ದಾನೆ. ಬಳಿಕ ಆ ತಲೆಯನ್ನು ಹಿಡಿದುಕೊಂಡು ಆತನ ಸ್ನೇಹಿತರು ಸೆಲ್ಫಿ ತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲೆಯಾದ ವ್ಯಕ್ತಿಯ ತಂದೆ ದೇಸಾಯಿ ಮುಂಡಾ ತನ್ನ ಮಗ ಅಪಹರಣವಾಗಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು. ಅವರು ಡಿಸೆಂಬರ್ 1 ರಂದು ಭತ್ತದ ಗದ್ದೆಯಲ್ಲಿ ಕೆಲಸಕ್ಕೆಂದು ಹೋಗಿದ್ದು, ತಮ್ಮ ಮಗ ಮನೆಯಲ್ಲಿ ಒಬ್ಬನೇ ಇದ್ದ. ಮನೆಗೆ ಹಿಂದಿರುಗಿದಾಗ ಮಗನನ್ನು ಅಪಹರಿಸಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಬಳಿಕ ಹುಡುಕಾಡಿದರೂ ಮಗ ಎಲ್ಲಿಯೂ ಸಿಗದ ಹಿನ್ನೆಲೆ ದೇಸಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ವೈರಸ್‌ ವುಹಾನ್‌ ಲ್ಯಾಬ್‌ನಿಂದಲೇ ಸೋರಿಕೆ – ವಿಜ್ಞಾನಿಯಿಂದ ಸ್ಫೋಟಕ ಹೇಳಿಕೆ

    ಎಫ್‌ಐಆರ್ ದಾಖಲಿಸಿಕೊಂಡ ಖುಂಟಿ ಉಪವಿಭಾಗದ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಆರೋಪಿ ಸಾಗರ್ ಮುಂಡಾನನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಆ ಪ್ರದೇಶದಿಂದ ಸುಮಾರು 15 ಕಿ.ಮೀ ದೂರದ ದುಲ್ವಾ ತುಂಗ್ರಿ ಪ್ರದೇಶದ ಅರಣ್ಯದಲ್ಲಿ ಮೃತ ವ್ಯಕ್ತಿಯ ತಲೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

    crime

    ಮೃತನ ಕುಟುಂಬ ಹಾಗೂ ಆರೋಪಿಗಳ ನಡುವೆ ಆಸ್ತಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದಲೇ ಕಲಹವಿತ್ತು. ಈ ಕಾರಣಕ್ಕೆ ಆರೋಪಿಗಳು ಶಿರಚ್ಛೇದ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳಿಂದ ಪೊಲೀಸರು 6 ಮೊಬೈಲ್ ಫೋನ್‌ಗಳು, 2 ಹರಿತವಾದ ರಕ್ತಸಿಕ್ತ ಆಯುಧಗಳು, 1 ಕೊಡಲಿ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಡೆತ್‍ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಬಳ್ಳಾರಿಯಲ್ಲಿ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ತಿರುಪತಿ ತಿಮ್ಮಪ್ಪ ಈಗ 10 ಟನ್ ಚಿನ್ನ, 15 ಸಾವಿರ ಕೋಟಿಯ ಒಡೆಯ

    ಅಮರಾವತಿ: ಪ್ರತಿನಿತ್ಯ ಲಕ್ಷಾಂತರ ಭಕ್ತರು ಆಗಮಿಸಿ, ಭಕ್ತಿಪೂರ್ವಕವಾಗಿ ನೀಡುವ ಕಾಣಿಕೆಗಳಿಂದ ಕಲಿಯುಗದ ವೈಕುಂಠದ ಖಜಾನೆ ತುಂಬಿ ಹೋಗಿದೆ. ಇದೀಗ ತಿರುಮಲ ತಿರುಪತಿ ದೇವಸ್ಥಾನಂ (TTD) ಶ್ವೇತಪತ್ರ ಬಿಡುಗಡೆ ಮಾಡಿದ್ದು, ತಿಮ್ಮಪ್ಪನ ಆಸ್ತಿ (Property) ಎಷ್ಟಿದೆ ಎಂಬುದನ್ನು ತಿಳಿಸಿದೆ.

    ತಿರುಪತಿ ದೇವಾಲಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ (Bank) ಸುಮಾರು 5,300 ಕೋಟಿ ರೂ.ಗೂ ಹೆಚ್ಚು ಮೌಲ್ಯದ 10.3 ಟನ್ ತೂಗುವ ಚಿನ್ನ (Gold) ಹಾಗೂ 15,938 ಕೋಟಿ ರೂ. ನಗದು (Money) ಠೇವಣಿ ಇದೆ ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.

    ಟಿಟಿಡಿ ಆಸ್ತಿಯ ಒಟ್ಟು ಮೌಲ್ಯ 2.26 ಲಕ್ಷ ಕೋಟಿ ರೂ. ಇದೆ ಎಂದು ವರದಿಯಾಗಿದೆ. ದೇವಾಲಯದ ಟ್ರಸ್ಟ್‌ನ ನಿವ್ವಳ ಮೌಲ್ಯ 2.26 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ ಧರ್ಮ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ದೇವಾಲಯಕ್ಕೆ ಸಂಬಂಧಿಸಿದಂತೆ 2019ರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿಗಳ ರೂಪದಲ್ಲಿ 13,025 ಕೋಟಿ ರೂ. ಹೂಡಿಕೆಯಾಗಿದ್ದು, ಅದು ಈಗ 15,938 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ 3 ವರ್ಷಗಳಲ್ಲಿ, ಹೂಡಿಕೆ 2,900 ಕೋಟಿ ರೂ. ಯಷ್ಟು ಹೆಚ್ಚಾಗಿದೆ ಎಂದು ರೆಡ್ಡಿ ಹೇಳಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ 4.5 ತೀವ್ರತೆಯ ಭೂಕಂಪ – ದೆಹಲಿ-ಎನ್‌ಸಿಆರ್‌ನಲ್ಲಿ ಲಘು ಕಂಪನದ ಅನುಭವ

    ಇತ್ತೀಚೆಗೆ ಟಿಟಿಡಿ ಅಧ್ಯಕ್ಷರು ಮತ್ತು ಮಂಡಳಿ ಹೆಚ್ಚುವರಿ ಹಣವನ್ನು ಆಂಧ್ರಪ್ರದೇಶ ಸರ್ಕಾರದ ಸೆಕ್ಯುರಿಟೀಸ್‌ಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಯನ್ನು ಟ್ರಸ್ಟ್ ನಿರಾಕರಿಸಿದೆ. ಹೆಚ್ಚುವರಿ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಟ್ರಸ್ಟ್ ಹೇಳಿದೆ.

    ದೇವಾಲಕ್ಕೆ ಭಾರೀ ಮಟ್ಟದ ಆದಾಯ ಭಕ್ತರು, ವ್ಯಾಪಾರಿಗಳು ಹಾಗೂ ಸಂಸ್ಥೆಗಳ ದೇಣಿಗೆಯಿಂದ ಬರುತ್ತದೆ. ಇದನ್ನೂ ಓದಿ: ಅಕ್ರಮ ಮೀನುಗಾರಿಕೆ – 15 ಭಾರತೀಯ ಮೀನುಗಾರರ ಬಂಧಿಸಿದ ಶ್ರೀಲಂಕಾ ನೌಕಾಪಡೆ

    Live Tv
    [brid partner=56869869 player=32851 video=960834 autoplay=true]

  • ಆಸ್ತಿ ಕೊಡಲ್ಲ ಎಂದಿದ್ದಕ್ಕೆ ಮಗ, ಸೊಸೆ ಸೇರಿ ತಾಯಿಗೆ ಬೆಂಕಿ ಹಚ್ಚಿದ್ರು

    ಆಸ್ತಿ ಕೊಡಲ್ಲ ಎಂದಿದ್ದಕ್ಕೆ ಮಗ, ಸೊಸೆ ಸೇರಿ ತಾಯಿಗೆ ಬೆಂಕಿ ಹಚ್ಚಿದ್ರು

    ಚೆನ್ನೈ: ಆಸ್ತಿ ವಿವಾದಕ್ಕೆ ಸಂಬಂಧಿಸಿ ಮಹಿಳೆಯೊಬ್ಬಳನ್ನು ಆಕೆಯ ಮಗ (Son) ಹಾಗೂ ಸೊಸೆ (Daughter In Law) ಸೇರಿ ಹತ್ಯೆಗೈದ ಘಟನೆ ತಮಿಳುನಾಡಿನ (Tamil Nadu) ತಿರುನೆಲ್ವೇಲಿಯಲ್ಲಿ ನಡೆದಿದೆ.

    ಎಸ್. ಅಣ್ಣಾಮಲೈ (47) ಮತ್ತು ಪತ್ನಿ ಎ. ಅನಿತಾ (42) ಸೇರಿ ಎಸ್. ಅರಸಮ್ಮಲ್ (70) ಅನ್ನು ಹತ್ಯೆ ಮಾಡಿದ್ದಾರೆ.  ಅರಸಮ್ಮಲ್ ತನ್ನ ಪತಿ ತೀರಿಕೊಂಡ ನಂತರ ತಿರುನಲ್ವೇಲಿಯ ಕೆಟಿಸಿ ನಗರದಲ್ಲಿನ ಮನೆಯಲ್ಲಿ ತನ್ನ ಮಗ ಹಾಗೂ ಸೊಸೆಯೊಂದಿಗೆ ವಾಸವಿದ್ದಳು. ಆದರೆ ಅರಸಮ್ಮಲ್ ಹಾಗೂ ಆಕೆಯ ಸೊಸೆ ಅನಿತಾ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ. ಆಗಾಗ ಇವರಿಬ್ಬರ ಮಧ್ಯೆ ಜಗಳವಾಗುತ್ತಿತ್ತು.

    crime

    ಅಷ್ಟೇ ಅಲ್ಲದೇ ಅರಸಮ್ಮಲ್‌ನ ಜೊತೆ ಆಕೆಯ ಮಗ ಅಣ್ಣಾಮಲೈ ಕೂಡ ಆಸ್ತಿಯನ್ನು (Property) ತನ್ನ ಹೆಸರಿಗೆ ನೋಂದಣಿ ಮಾಡಬೇಕೆಂದು ಜಗಳವಾಡುತ್ತಿದ್ದನು. ಆದರೆ ಅರಸಮ್ಮಲ್‌ಳಿಗೆ ಹಾಗೆ ಮಾಡಲು ಮನಸಿರಲಿಲ್ಲ. ಇದೇ ವಿಷಯಕ್ಕೆ ಅನಿತಾ ಹಾಗೂ ಅರಸಮ್ಮಲ್ ನಡುವೆ ಜಗಳವಾಗಿತ್ತು. ಈ ವೇಳೆ ಅರಸಮ್ಮಲ್‌ ಅನ್ನು ಅನಿತಾ ತಳ್ಳಿದ್ದಾಳೆ. ಈ ವೇಳೆ ಅರಸಮ್ಮಲ್‌ ಪ್ರಜ್ಞೆ ತಪ್ಪಿದ್ದಾಳೆ. ಇದನ್ನೂ ಓದಿ: ಚಿಕ್ಕಮಗಳೂರು, ಉಡುಪಿಯಲ್ಲಿ ಡೇಂಜರ್ ಸೇತುವೆ – ನಿರ್ವಹಣೆ ಇಲ್ಲದೇ ಬೀಳುವ ಸ್ಥಿತಿ

    POLICE JEEP

    ಇದಾದ ನಂತರ ಅನಿತಾ ಹಾಗೂ ಅಣ್ಣಾಮಲೈ ಸೇರಿ ಅರಸಮ್ಮಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಅದಾದ ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದಾರೆ. ಆದರೆ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರ ನಡೆಸಿದಾಗ ಘಟನೆಗೆ ನಿಜವಾದ ಕಾರಣ ತಿಳಿದುಬಂದಿದೆ. ಇದನ್ನೂ ಓದಿ: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು – ಬಸ್ ಚಾಲಕನಿಗೆ ಸಾರ್ವಜನಿಕರಿಂದ ಥಳಿತ

    Live Tv
    [brid partner=56869869 player=32851 video=960834 autoplay=true]

  • ಫೇಕ್ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿ – ಸತ್ತವನ 19 ಕೋಟಿ ಆಸ್ತಿ ಹೊಡೆದ್ಲು ಖತರ್ನಾಕ್ ಸುಂದ್ರಿ

    ಫೇಕ್ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿ – ಸತ್ತವನ 19 ಕೋಟಿ ಆಸ್ತಿ ಹೊಡೆದ್ಲು ಖತರ್ನಾಕ್ ಸುಂದ್ರಿ

    ಮುಂಬೈ: ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿಸಿ ಮೃತ ವ್ಯಕ್ತಿಯೊಬ್ಬರ 19.70 ಕೋಟಿ ಮೌಲ್ಯದ ಆಸ್ತಿಯನ್ನು ಕಬಳಿಸಿದ ಆರೋಪದಡಿ ಕ್ರೈಸ್ತ ಪ್ರಾದಿ, ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮತ್ತು ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳನ್ನು ಅಂಜಲಿ ಅಗರ್ವಾಲ್ (30), ಥಾಮಸ್ ರಾಮುಲ್ ಗೋಡ್ಪವಾರ್ (50) ಮತ್ತು ಮಹೇಶ್ ಕಾಟ್ಕರ್ (37) ಎಂದು ಗುರುತಿಸಲಾಗಿದೆ. ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಅಂಜಲಿ ಅಗರ್ವಾಲ್, ಅಲ್ಲಿಗೆ ಬರುತ್ತಿದ್ದ 35 ವರ್ಷದ ಗ್ರಾಹಕರೊಬ್ಬರನ್ನು ಪ್ರೀತಿಸುತ್ತಿದ್ದಳು. ನಂತರ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಆದರೆ 2021ರ ನವೆಂಬರ್‌ನಲ್ಲಿ ವ್ಯಕ್ತಿ ಸಾವನ್ನಪ್ಪಿದರು. ಈ ವಿಚಾರ ತಿಳಿದ ಅಂಜಲಿ, ಇಬ್ಬರು ಆರೋಪಿಗಳ ಸಹಾಯದಿಂದ ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ಸೃಷ್ಟಿಸಿ ಥಾಣೆ (Thane) ನಗರದ ಕವೇಸರ್‌ನಲ್ಲಿ 19.70 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದೋಚಿದ್ದಾಳೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಾಲೋಜಿ ಶಿಂಧೆ ಹೇಳಿದ್ದಾರೆ.

    ಈ ವಿಚಾರ ತಿಳಿದ ಬಳಿಕ ಮೃತ ವ್ಯಕ್ತಿಯ ತಾಯಿ, ನೌಪಾದ ಪೊಲೀಸ್ ಠಾಣೆಯಲ್ಲಿ (Naupada police station) ದೂರು ದಾಖಲಿಸಿದ್ದು, ಆರೋಪಿಗಳು ನಕಲಿ ಮ್ಯಾರೇಜ್ ಸರ್ಟಿಫಿಕೇಟ್ ತೋರಿಸಿ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕೆಎಸ್‍ಆರ್‌ಟಿಸಿಗೆ ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ ಡಿಕ್ಕಿ – 9 ಮಂದಿ ಸಾವು, 40 ಜನರಿಗೆ ಗಾಯ

    ಈ ದೂರಿನ್ವಯ ಮೂವರು ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 7 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದನ್ನೂ ಓದಿ: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ – 8 ಮಂದಿ ಸಾವು, ಮೋದಿ ಸಂತಾಪ

    Live Tv
    [brid partner=56869869 player=32851 video=960834 autoplay=true]

  • ನಾನು ಕೃಷಿಕ ಎಂದಿದ್ದ ಡಿಕೆಶಿಗೆ ಶಾಕ್‌ ನೀಡಲು ಸಿಬಿಐ ತಯಾರಿ

    ನಾನು ಕೃಷಿಕ ಎಂದಿದ್ದ ಡಿಕೆಶಿಗೆ ಶಾಕ್‌ ನೀಡಲು ಸಿಬಿಐ ತಯಾರಿ

    ಬೆಂಗಳೂರು: ನಾನೊಬ್ಬ ಕೃಷಿಕ, ನನಗೆ ಕೃಷಿಯಿಂದಲೇ(Agriculture) ಆದಾಯ ಬರುತ್ತಿದೆ ಎಂದಿದ್ದ ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್‌ಗೆ (DK Shivakumar) ಸಿಬಿಐಗೆ ಈಗ ಶಾಕ್ ಕೊಡಲು ತಯಾರಿ ನಡೆಸುತ್ತಿದೆ.

    ಡಿಕೆಶಿ ಆಸ್ತಿಯನ್ನು ಸಿಬಿಐ(CBI) ಈಗ ಮೌಲ್ಯಮಾಪನ ಮಾಡುತ್ತಿದೆ. ಡಿಕೆಶಿಯ ಆದಾಯದ ಮೂಲವನ್ನು ಬೆನ್ನತ್ತಿರುವ ಸಿಬಿಐ, ಯಾವ ಬೆಳೆ ಬೆಳೆಯುತ್ತಾರೆ? ತೋಟದಿಂದ ಎಷ್ಟು ವರ್ಷದಿಂದ ಫಲ ಬರುತ್ತಿದೆ? ಎಷ್ಟು ಲಾಭ ಬರುತ್ತಿದೆ? ಎಷ್ಟು ವರ್ಷದಿಂದ ವಾಣಿಜ್ಯ ಬೆಳೆ ಬೆಳೆಯುತ್ತಿದ್ದಾರೆ? ಜಮೀನು ಖರೀದಿಸಿದ್ದು ಯಾವಾಗ ಎಂಬ ಬಗ್ಗೆ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಇದನ್ನೂ ಓದಿ: 5.20 ಕೋಟಿ ರೂ. ನಷ್ಟ ಭರಿಸಲು ಪಿಎಫ್‍ಐಗೆ ಹೈಕೋರ್ಟ್ ಸೂಚನೆ

    ಅಷ್ಟೇ ಅಲ್ಲದೇ ಕೃಷಿ ಭೂಮಿಗೆ ಸಂಬಂಧಿಸಿದ ಕಳೆದ ಹತ್ತು ವರ್ಷದ ಪಹಣಿಯನ್ನು (RTC) ಪಡೆಯಲಾಗಿದೆ. ಮೂಲಗಳ ಪ್ರಕಾರ ಇನ್ನೆರಡು ದಿನದಲ್ಲಿ ವಾಣಿಜ್ಯ ಆಸ್ತಿಗಳ ಮೌಲ್ಯಮಾಪನ ಮಾಡಲಿದ್ದು, ಮಾಲ್‍ಗಳು, ಅಪಾರ್ಟ್‌ಮೆಂಟ್‌ ಮನೆಗಳ ಮೌಲ್ಯಮಾಪನ ನಡೆಯಲಿದೆ.

    ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ತನಿಖೆ ರದ್ದಿಗೆ ಮನವಿ ಮಾಡಿರುವ ಡಿಕೆಶಿಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡುವ ಮೂಲಕ ಮಾಸ್ಟರ್ ಸ್ಟ್ರೋಕ್ ನೀಡಲು ಸಿಬಿಐ ಸಿದ್ಧತೆ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಸ್ಪರ್ಧಿ, ನಟಿ ಸೊನಾಲಿ ಪೋಗಟ್ ಕೊಲೆಗೆ ನೂರು ಕೋಟಿ ಆಸ್ತಿ ಕಾರಣವಾ?

    ಬಿಗ್ ಬಾಸ್ ಸ್ಪರ್ಧಿ, ನಟಿ ಸೊನಾಲಿ ಪೋಗಟ್ ಕೊಲೆಗೆ ನೂರು ಕೋಟಿ ಆಸ್ತಿ ಕಾರಣವಾ?

    ಗೋವಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ನಟಿ ಸೊನಾಲಿ ಪೋಗಟ್ ಕುರಿತಾಗಿ ದಿನಕ್ಕೊಂದು ಮಾಹಿತಿ ಹೊರ ಬರುತ್ತಿವೆ. ನೂರಾರು ಕೋಟಿ ಆಸ್ತಿಗಾಗಿ ಸ್ವತಃ ಸೊನಾಲಿ ಅವರ ಪಿಎ ಸುಧೀರ್ ಅನ್ನುವವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಸೊನಾಲಿ ಅವರದ್ದು ನೂರು ಕೋಟಿಗೂ ಅಧಿಕ ಆಸ್ತಿಯಿದ್ದು, ಅದನ್ನು ತನ್ನ ಹೆಸರಿಗೆ ನೋಂದಾಯಿಸಲು ಸುಧೀರ್ ಪ್ಲ್ಯಾನ್ ಮಾಡಿದ್ದ ಎಂದು ಹೇಳಲಾಗುತ್ತಿದ್ದು, ಈ ಕುರಿತಾದ ದಾಖಲೆಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರಂತೆ.

    ಸುಧೀರ್, ಸೊನಾಲಿ ಸೇರಿದಂತೆ ಹಲವರು ಗೋವಾಗೆ ಶೂಟಿಂಗ್ ನೆಪದಲ್ಲಿ ಬಂದಿದ್ದರು. ಆದರೆ, ರಾತ್ರಿ ಸೊನಾಲಿ ಅವರಿಗೆ ಕುಡಿಸಿ, ಅದರಲ್ಲಿ ಡ್ರಗ್ಸ್ ಕೂಡ ಬೆರೆಸಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಸೊನಾಲಿ ಅತಿಯಾಗಿ ಡ್ರಗ್ಸ್ ಸೇವನೆ ಮಾಡಿದ್ದರಿಂದ, ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ, ಸೊನಾಲಿ ಉಳಿಯಲಿಲ್ಲ ಎಂದು ಹೇಳಲಾಗುತ್ತಿದೆ. ಸೊನಾಲಿಯನ್ನು ಕೊಲೆ ಮಾಡಲೆಂದೇ ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಆಕೆಯ ಕುಟುಂಬದ್ದು. ಇದನ್ನೂ ಓದಿ:200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ನಟಿ ನೋರಾ ಫತೇಹಿ ವಿಚಾರಣೆ

    ಗೋವಾ ಪೊಲೀಸರು ಈಗಾಗಲೇ ಸೊನಾಲಿ ಅವರ ಗುರುಗಾಂವ್‌ಗೆ ಬಂದಿದ್ದು, ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರಂತೆ. ಅಲ್ಲದೇ, ಸೊನಾಲಿ ಅವರಿಗೆ ಸೇರಿದ್ದು ಎನ್ನಲಾದ ಮೂರು ಡೈರಿಗಳು ಕೂಡ ಪತ್ತೆ ಆಗಿವೆಯಂತೆ. ಅವುಗಳು ಕೊಲೆಯ ರಹಸ್ಯ ಬೇಧಿಸಲು ಸಹಾಯಕ್ಕೆ ಬರುತ್ತಿವೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಆಸ್ತಿ ಕಬಳಿಸಲು ತನ್ನ ಸಿಬ್ಬಂದಿಯಿಂದಲೇ ಸೊನಾಲಿ ಕೊಲೆಯಾಗಿದ್ದಾರೆ ಎನ್ನುವುದು ಆಘಾತಕಾರಿ ವಿಷಯ.

    Live Tv
    [brid partner=56869869 player=32851 video=960834 autoplay=true]

  • ಆಸ್ತಿಗಾಗಿ ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆ? ಪೋಲಿಸರಿಗೆ ಮಹತ್ವದ ಸುಳಿವು

    ಆಸ್ತಿಗಾಗಿ ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆ? ಪೋಲಿಸರಿಗೆ ಮಹತ್ವದ ಸುಳಿವು

    ಗುರುಗ್ರಾಮ ಮೂಲದ ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ವಾರದ ಹಿಂದೆ ಗೋವಾದಲ್ಲಿ ನಿಧನರಾಗಿದ್ದರು. ಈ ಸಾವು ಹೃದಯಾಘಾತದಿಂದ ಸಂಭವಿಸಿದ್ದು ಎಂದು ಹೇಳಲಾಗಿತ್ತು. ಆನಂತರ ನಟಿಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತನಿಖೆಗೆ ಕೈಗೊಳ್ಳಲಾಗಿದ್ದು, ಸೊನಾಲಿ ಸಾವಿನ ಕುರಿತು ದಿನಕ್ಕೊಂದು ತಿರುವು ಸಿಗುತ್ತಿದೆ.

    ಸೋನಾಲಿ ಸಾವಿಗೆ ಆಕೆಯ ಆಪ್ತರಾದ ಸುಧೀರ್ ಸಾಂಗ್ವಾನ್ ಮತ್ತು ಸಖ್ಖೀಂದರ್ ಕಾರಣ ಎಂದು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದರು. ಆಕೆಗೆ ಡ್ರಗ್ಸ್ ನೀಡಿದ ಹಿನ್ನೆಲೆಯಲ್ಲಿ ಸಾವು ಆಗಿರಬಹುದು ಎಂದು ಆಪ್ತರು ಹೇಳಿಕೊಂಡಿದ್ದರು ಎನ್ನಲಾಗುತ್ತಿದೆ. ಈ ಸಾವು ಸೊನಾಲಿ ಆಸ್ತಿಗಾಗಿ ನಡೆದಿದೆ ಎನ್ನುವ ಮಾಹಿತಿಯನ್ನೂ ಇದೇ ಆಪ್ತರು ನೀಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ತಮ್ಮ ಸಂಭಾವನೆಯಲ್ಲಿ ʼಜವಾನ್‌ʼ ಚಿತ್ರಕ್ಕಾಗಿ 5 ಕೋಟಿ ಹೆಚ್ಚಿಸಿಕೊಂಡ ವಿಜಯ್ ಸೇತುಪತಿ!

    ಗುರುಗ್ರಾಮದಲ್ಲಿ ಸೊನಾಲಿ ಹೆಸರಿನಲ್ಲಿ ಫ್ಲ್ಯಾಟ್ ಇದ್ದು, ಇದು ಸೊನಾಲಿ ಮತ್ತು ಸುಧೀರ್ ಸಾಂಗ್ವಾನ್ ಹೆಸರಿನಲ್ಲಿ ನೋಂದಣಿ ಆಗಿದೆ ಎಂದು ಹೇಳಲಾಗುತ್ತಿದೆ. ಈ ನೋಂದಣಿ ಪತ್ರದಲ್ಲಿ ಸೊನಾಲಿ ಅವರು ಸುಧೀರ್ ಪತ್ನಿ ಎಂದು ನಮೂದಿಸಲಾಗಿದೆಯಂತೆ. ಅಲ್ಲದೇ, ಸೊನಾಲಿ ಅವರ ಆಸ್ತಿಯನ್ನು ಸುಧೀರ್ ನೋಡಿಕೊಳ್ಳುತ್ತಿದ್ದರು ಎಂದೂ ಹೇಳಲಾಗಿದ್ದು, ಈ ಆಸ್ತಿಗಾಗಿ ಅವರನ್ನು ಕೊಲೆ ಮಾಡಲಾಗಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.

    Live Tv
    [brid partner=56869869 player=32851 video=960834 autoplay=true]