Tag: property

  • ಆಸ್ತಿಗಾಗಿ ಮಲಗಿದ್ದ ಅಣ್ಣನನ್ನೇ ಕೊಡಲಿಯಿಂದ ಕಡಿದು ಕೊಂದ ತಮ್ಮ

    ಆಸ್ತಿಗಾಗಿ ಮಲಗಿದ್ದ ಅಣ್ಣನನ್ನೇ ಕೊಡಲಿಯಿಂದ ಕಡಿದು ಕೊಂದ ತಮ್ಮ

    ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಎರಡೆತ್ತಿನಹಳ್ಳಿ ಗ್ರಾಮದಲ್ಲಿ ಆಸ್ತಿಗಾಗಿ ತಮ್ಮನೋರ್ವ ಅಣ್ಣನನ್ನೇ ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದಾನೆ.

    33 ವರ್ಷದ ಹಾಲೇಶ್ ತಾಳೇದಹಳ್ಳಿ ಕೊಲೆಯಾದ ಅಣ್ಣ. 31 ವರ್ಷದ ಹೊನ್ನಪ್ಪ ತಾಳೇದಹಳ್ಳಿ ಅಣ್ಣನನ್ನು ಕೊಲೆಗೈದ ಆರೋಪಿ. ಆಸ್ತಿ ವಿಚಾರದಲ್ಲಿ ಸೋದರರಿಬ್ಬರ ನಡುವೆ ಕಲಹವಿತ್ತು. ಶುಕ್ರವಾರ ರಾತ್ರಿ ಸಹ ಆಸ್ತಿಯ ವಿಚಾರವಾಗಿ ಹಾಲೇಶ್ ಮತ್ತು ಹೊನ್ನಪ್ಪನ ನಡುವೆ ಗಲಾಟೆ ನಡೆದಿದೆ. ರಾತ್ರಿ ಸುಮಾರು 2 ಗಂಟೆಗೆ ಮಲಗಿದ್ದ ಹಾಲೇಶ್ ನನ್ನು ಕೊಡಲಿಯಿಂದ ಕಡಿದು ಬರ್ಬರವಾಗಿ ಕೊಲೆಗೈದು ಹೊನ್ನಪ್ಪ ಪರಾರಿಯಾಗಿದ್ದಾನೆ.

    ಘಟನಾ ಸ್ಥಳಕ್ಕೆ ಹರಪನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆಗೆ ಸಂಬಂಧ ಕುಟುಂಬಸ್ಥರು ಮತ್ತು ಗ್ರಾಮಸ್ಥರಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇಳಿ ವಯಸ್ಸಿನ ತಂದೆಗೆ ಹುಚ್ಚನ ಪಟ್ಟ ಕಟ್ಟಲು ಮುಂದಾದ ಮಗ

    ಇಳಿ ವಯಸ್ಸಿನ ತಂದೆಗೆ ಹುಚ್ಚನ ಪಟ್ಟ ಕಟ್ಟಲು ಮುಂದಾದ ಮಗ

    ಬೆಂಗಳೂರು: ಇಳಿ ವಯಸ್ಸಿನಲ್ಲಿ ತಂದೆಗೆ ಆಸರೆ ಆಗಬೇಕಿದ್ದ ಮಗ ವಿಲನ್ ಆಗಿದ್ದಾನೆ. ಆಸ್ತಿಗಾಗಿ ಮಗ ಜನ್ಮ ಕೊಟ್ಟ ತಂದೆಗೆ ಹುಚ್ಚನ ಪಟ್ಟ ಕಟ್ಟಲು ಮುಂದಾಗಿದ್ದಾನೆ

    ಮಾರತ್‍ಹಳ್ಳಿಯ ರಮೇಶ್ ಎಂಬವರು ವಯಸ್ಸಲ್ಲಿ ದುಡಿದು ಕೋಟ್ಯಾಂತರ ರೂ. ಆಸ್ತಿ ಮಾಡಿಟ್ಟಿದ್ದಾರೆ. ನನ್ನ ಕಾಲಾನಂತ್ರವಷ್ಟೇ ಸಂಪಾದನೆಯ ಆಸ್ತಿ ಮಗನಿಗೆ ಕೊಡೋದು ಎಂದು ರಮೇಶ್ ಹೇಳಿದ್ದಾರೆ. ತಂದೆ ಬದುಕಿರೋತನಕ ಆಸ್ತಿ ಸಿಗೋದಿಲ್ಲ ಅಂತ ತಿಳಿದ ಮಗ ಗಿರೀಶ್, ತಂದೆಗೆ ಹುಚ್ಚನ ಪಾತ್ರ ಕಟ್ಟಲು ರೆಡಿಯಾಗಿದ್ದಾನೆ. ತಂದೆ ಮಾಡಿಟ್ಟ ಆಸ್ತಿ ಮೇಲೆ ಕಣ್ಣಿಟ್ಟ ಮಗ ಗಿರೀಶ್, ತಂದೆಗೆ ಕೊಡಬಾರದ ಟಾರ್ಚರ್ ಕೊಡುತ್ತಿದ್ದಾನೆ. ಅಷ್ಟೇ ಅಲ್ಲ ರಾಡ್ ನಿಂದ ಮಾರಾಣಾಂತಿಕವಾಗಿ ಹಲ್ಲೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದ ಎಂದು ತಂದೆ ರಮೇಶ್ ಆರೋಪಿಸಿದ್ದಾರೆ.

    ಚಿಕಿತ್ಸೆ ಕೊಡಿಸುವ ನೆಪದಲ್ಲಿ ವಾರಗಳ ಕಾಲ ಮಗ ಗಿರೀಶ್, ತಂದೆ ರಮೇಶ್‍ರನ್ನು ಖಾಸಗಿ ಆಸ್ಪತ್ರೆಯಲ್ಲೆ ಬಿಟ್ಟಿದ್ದಾನೆ. ಖಾಸಗಿ ಆಸ್ಪತ್ರೆಯ ವೈದ್ಯರಿಂದ ರಮೇಶ್ ಹುಚ್ಚನ್ನಾಗಿದ್ದಾನೆ ಎಂದು ನಕಲಿ ಸರ್ಟಿಫಿಕೇಟ್ ಪಡೆದುಕೊಂಡಿದ್ದಾನೆ. ಆಸ್ಪತ್ರೆಯಲ್ಲಿ ಕೊಟ್ಟ ನಕಲಿ ಸರ್ಟಿಫಿಕೇಟ್ ತೋರಿಸಿ ನನ್ನ ತಂದೆ ರಮೇಶ್ ಹುಚ್ಚ ಎಂಬಂತೆ ಬಿಂಬಿಸಿ ಆಸ್ತಿ ತನ್ನ ಹೆಸರಿಗೆ ಮಾಡಿಕೊಳ್ಳಲು ಹೊರಟಿದ್ದ ಎಂದು ನೊಂದ ತಂದೆ ರಮೇಶ್ ಕಣ್ಣೀರು ಹಾಕುತ್ತಾರೆ.

    ನಕಲಿ ಸರ್ಟಿಫಿಕೇಟ್‍ನಿಂದ ವಿಚಲಿತರಾದ ತಂದೆ ರಮೇಶ್, ನಿಮಾನ್ಸ್ ಆಸ್ಪತ್ರೆಗೆ ಹೋಗಿ ಚೆಕಪ್ ಮಾಡಿಸಿದ್ದಾರೆ. ನಿಮಾನ್ಸ್ ವೈದ್ಯರು ಫಿಟ್ ಆಗಿದ್ದಿಯಾ ಯಾವುದೇ ಕಾಯಿಲೆಗಳು ಇಲ್ಲ ಎಂದು ಖಚಿತ ಪಡಿಸಿದ್ದಾರೆ. ತಂದೆ ರಮೇಶ್ ಮಗನ ವರ್ತನೆಯಿಂದ ಬೇಸತ್ತು ಹೆಚ್‍ಎಎಲ್ ಪೊಲೀಸ್ ಠಾಣೆಗೆ ದೂರು ಕೊಡಲು ಮುಂದಾಗಿದ್ದಾರೆ. ಪೊಲೀಸರು ನೊಂದ ರಮೇಶ್ ಸಹಾಯಕ್ಕೆ ಬರಲು ನಿರಾಕರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಹೆಚ್‍ಎಎಲ್ ಪೊಲೀಸರಿಗೆ ದೂರು ದಾಖಲಿಸಿಕೊಳ್ಳದಂತೆ ಸ್ಥಳೀಯ ರಾಜಕೀಯ ನಾಯಕರಿಂದ ಮಗ ಗಿರೀಶ್ ಒತ್ತಡ ಹಾಕಿಸ್ತಿದ್ದಾನೆ ಎಂದು ನೊಂದ ತಂದೆ ರಮೇಶ್ ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.

  • ಗುಂಡು ಹಾರಿಸಿ ಮಗನ ಹೊಟ್ಟೆ ಸೀಳಿದ ತಂದೆ

    ಗುಂಡು ಹಾರಿಸಿ ಮಗನ ಹೊಟ್ಟೆ ಸೀಳಿದ ತಂದೆ

    ಕಾರವಾರ: ಕುಡಿದ ಅಮಲಿನಲ್ಲಿ ಮಗನ ಮೇಲೆ ತಂದೆಯೇ ಗುಂಡು ಹಾರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನರೇಬೈಲ್ ನಲ್ಲಿ ನಡೆದಿದೆ.

    ರಾವಯ್ಯ ಗುಂಡು ಹಾರಿಸಿದ ತಂದೆ. ರಾವಯ್ಯ ಕುಡಿದ ಅಮಲಿನಲ್ಲಿ ತನ್ನ ಮಗ ನಾಗೇಂದ್ರ ಮೇಲೆ ಗುಂಡು ಹಾರಿಸಿದ್ದಾನೆ. ನಾಗೇಂದ್ರ ಗುಂಡು ತಗುಲಿ ತೀವ್ರ ಅಸ್ವಸ್ಥಗೊಂಡಿದ್ದಾನೆ.

    ರಾವಯ್ಯ ಹಾಗೂ ನಾಗೇಂದ್ರ ನಡುವೆ ಆಸ್ತಿ ಸಂಬಂಧ ಮನಸ್ತಾಪ ಇತ್ತು. ಬುಧವಾರ ಈ ವಿಚಾರದ ಬಗ್ಗೆ ಮಾತುಕತೆ ನಡೆದಿದೆ. ಈ ವೇಳೆ ಜಗಳ ತಾರಕಕ್ಕೇರಿದ್ದು ಕುಡಿದ ಅಮಲಿನಲ್ಲಿ ಇದ್ದ ತಂದೆ ರಾವಯ್ಯ ಬಂದೂಕಿನಿಂದ ಗುಂಡು ಹಾರಿಸಿದ್ದು, ಪರಿಣಾಮ ಮಗನ ಹೊಟ್ಟೆ ಸೀಳಿದೆ.

    ನಾಗೇಂದ್ರನ ಹೊಟ್ಟೆಗೆ ಗುಂಡು ಬೀಳುತ್ತಿದ್ದಂತೆ ರಾವಯ್ಯ ಗಾಬರಿಗೊಂಡು ಮಗನನ್ನು ಶಿರಸಿ ಟಿಎಸ್‍ಎಸ್ ಆಸ್ಪತ್ರೆಗೆ ಕೊರೆದುಕೊಂಡು ಹೋಗಿದ್ದಾನೆ. ಸದ್ಯ ನಾಗೇಂದ್ರಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುದಿದ್ದಾನೆ.

    ಈ ಬಗ್ಗೆ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಂದೆಯನ್ನು ವಶಕ್ಕೆ ಪಡೆಯಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಆಸ್ತಿಗಾಗಿ ಸೋದರನನ್ನೇ ಕೊಂದಿದ್ದ ತಮ್ಮನ ಸೆರೆ

    ಆಸ್ತಿಗಾಗಿ ಸೋದರನನ್ನೇ ಕೊಂದಿದ್ದ ತಮ್ಮನ ಸೆರೆ

    ಬೆಂಗಳೂರು: ಆಸ್ತಿ ಕೊಡದ ಸಹೋದರನ್ನು ಕೊಲೆಗೈದು ತಲೆ ಮರೆಸಿಕೊಂಡಿದ್ದ ತಮ್ಮ ಹಾಗೂ ಆತನ ಸ್ನೇಹಿತನನ್ನು ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಗೋವರ್ಧನ್ ಹಾಗೂ ವಿನೋದ್ ಎಂದು ಗುರುತಿಸಲಾಗಿದ್ದು, ಕಳೆದ ತಿಂಗಳು ಆನೇಕಲ್ ಬಸ್ ಡಿಪೋ ಹಿಂಬಾಗ ಆನೇಕಲ್ ನಿವಾಸಿ ಪದ್ಮನಾಬ್ ಎಂಬವರ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

    ಈ ಪ್ರಕರಣ ದಾಖಲಿಸಿಕೊಂಡ ಆನೇಕಲ್ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಕೊಲೆಯಾದ ಪದ್ಮನಾಬ್  ನನ್ನು ಮಲ ಸಹೋದರನೇ ಆಸ್ತಿಗಾಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಪೊಲೀಸರು ತಲೆಮರೆಸಿಕೊಂಡಿದ್ದ ಗೋವರ್ಧನ್ ಹಾಗೂ ವಿನೋದ್ ನನ್ನು ಬಂಧಿಸಿದ್ದಾರೆ.

    ಗೋವರ್ಧನ್ ತಂದೆಗೆ ಇಬ್ಬರು ಹೆಂಡತಿಯರಿದ್ದು, ತಂದೆ ಧರ್ಮರಾಜ್ ಎರಡನೇ ಪತ್ನಿ ಮತ್ತು ಮಗ ಗೋವರ್ಧನನಿಗೆ ಹಿಂಸೆ ನೀಡುತ್ತಿದ್ದನು. ಅಲ್ಲದೆ ಆಸ್ತಿಯನ್ನು ಕೊಡದೆ ಸತಾಯಿಸುತ್ತಿದ್ದನು. ಈ ಹಿನ್ನೆಲೆ ಗೋವರ್ಧನ್ ತನ್ನ ಸ್ನೇಹಿತ ವಿನೋದ್ ಸೇರಿ ಪದ್ಮನಾಬ್‍ನಿಗೆ ಮದ್ಯಪಾನ ಮಾಡಿಸಿ ತಲೆ ಮೇಲೆ ಸಿಮೆಂಟ್ ಬ್ಲಾಕ್ ಹಾಕಿ ಕೊಲೆ ಮಾಡಿದ್ದನು.

    ಈ ಕುರಿತು ಅನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.

  • ಹೆತ್ತ ತಾಯಿಯನ್ನೇ ಕೊಲ್ಲಲು ಮುಂದಾದ ಪಾಪಿ ಮಗ

    ಹೆತ್ತ ತಾಯಿಯನ್ನೇ ಕೊಲ್ಲಲು ಮುಂದಾದ ಪಾಪಿ ಮಗ

    ಬೆಂಗಳೂರು: ಪಾಪಿ ಮಗನೊಬ್ಬ ಆಸ್ತಿಗಾಗಿ ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಯ ಕೊರಳಿಗೆ ಮಚ್ಚು ಇಟ್ಟು ಕೊಲೆ ಮಾಡಲು ಮುಂದಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಶಿವಕುಮಾರ್ ತನ್ನ 76 ವರ್ಷದ ತಾಯಿ ಸರಸ್ವತಮ್ಮನನ್ನೇ ಕೊಲೆ ಮಾಡಲು ಮುಂದಾಗಿದ್ದಾನೆ. ಸರಸ್ವತಮ್ಮ ಮಂಡ್ಯ ನಿವಾಸಿಯಾಗಿದ್ದು, ಪತಿಯ ಸಾವಿನ ಬಳಿಕ ಕಿರಿಯ ಮಗನ ಜೊತೆ ವಾಸವಿದ್ದರು. ಮೊದ ಮೊದಲು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ನಾಟಕ ಮಾಡಿ ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿ ತಾಯಿಯ ಹೆಸರಿಗಿದ್ದ ಒಂದು ಕೋಟಿ ಆಸ್ತಿಯನ್ನ ತನ್ನ ಹೆಸರಿಗೆ ವರ್ಗಾಯಿಸಿದ್ದಾನೆ.

    ಇಷ್ಟಕ್ಕೆ ತೃಪ್ತಿಯಾಗದ ಪಾಪಿ ಮಗ, ತಾಯಿಯ ಕುತ್ತಿಗೆಯಲ್ಲಿರುವ ಬಂಗಾರವನ್ನು ಕೊಡುವಂತೆ ಹೇಳಿದ್ದಾನೆ. ಇದಕ್ಕೆ ವಿರೋಧಿಸಿದಾಗ ಕುತ್ತಿಗೆಯ ಮೇಲೆ ಮಚ್ಚು ಇಟ್ಟು ಹೆದರಿಸಿ ಕಿತ್ತುಕೊಂಡಿದ್ದಾನೆ. ರಾತ್ರಿ ವೇಳೆ ಕುಡಿದು ಮನೆಗೆ ಬಂದು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಮನೆಯಿಂದ ಹೆತ್ತತಾಯಿಯನ್ನೇ ಹೊರಹಾಕಿದ್ದಾನೆ. ಮಗನಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ, ಇದೀಗ ವೃದ್ಧೆ ತಾಯಿ ಬೆಂಗಳೂರಿನಲ್ಲಿರುವ ಮಗಳ ಮನೆಗೆ ಬಂದಿದ್ದಾರೆ.

    ಸರಸ್ವತಮ್ಮನಿಗೆ ಚಿತ್ರಹಿಂಸೆ ಕೊಡುವ ವಿಷಯ ಪಕ್ಕದ ಮನೆಯವರ ಮೂಲಕ ಬೆಂಗಳೂರಿನಲ್ಲಿರುವ ಮಗಳು ಶೋಭಾಗೆ ತಿಳಿದಿದೆ. ನೀರು ಇಲ್ಲದೆ ಸಾಯುವ ಸ್ಥಿತಿಯಲ್ಲಿದ್ದ ವೃದ್ಧ ತಾಯಿಯನ್ನು ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ತಾಯಿಗೆ ಹಿಂಸೆ ಕೊಟ್ಟ ತನ್ನ ಸಹೋದರನ ವಿರುದ್ಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೆ ಪೊಲೀಸರು ಕ್ಯಾರೆ ಅಂತಿಲ್ಲ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದಾರೆ. ಆದರೆ ಪೊಲೀಸರು ಮಾತ್ರ ನಮಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ವರ್ತಿಸುತ್ತಿದ್ದಾರೆ.

     

    ಮಗ ಶಿವಕುಮಾರ್, ಹೆತ್ತ ತಾಯಿಯ ಆಸ್ತಿಯನ್ನು ಕಬಳಿಸಿ, ಮನೆಯಿಂದ ಹೊರ ಹಾಕಿ ದುಬಾರಿ ಕಾರಿನಲ್ಲಿ ಗೋವಾ, ಮಹಾರಾಷ್ಟ್ರ ಎಂದು ಸುತ್ತಾಡುತ್ತಿದ್ದಾನೆ.

  • ಕೈ ನಾಯಕಿ ಹತ್ಯೆಗೆ ರೋಚಕ ಟ್ವಿಸ್ಟ್ – ರೇಷ್ಮಾಳ ಮತ್ತೊಂದು ಮುಖವಾಡ ಬಯಲು

    ಕೈ ನಾಯಕಿ ಹತ್ಯೆಗೆ ರೋಚಕ ಟ್ವಿಸ್ಟ್ – ರೇಷ್ಮಾಳ ಮತ್ತೊಂದು ಮುಖವಾಡ ಬಯಲು

    ವಿಜಯಪುರ: ವಿಜಯಪುರ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬಂಧಿತರಿಂದ ರೇಷ್ಮಾಳ ಮತ್ತೊಂದು ಮುಖವಾಡ ಹೊರಬಿದ್ದಿದೆ.

    ರೇಷ್ಮಾ ಪಡೇಕನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಆರೋಪಿ ಮಹಾರಾಷ್ಟ್ರದ ಎಂಐಎಂ ಮುಖಂಡ, ಸೊಲ್ಲಾಪುರ ಮಹಾನಗರ ಪಾಲಿಕೆ ಕಾರ್ಪೊರೇಟರ್ ತೌಫಿಕ್ ಶೇಖ್ ಹಾಗೂ ಮತ್ತೋರ್ವ ಆರೋಪಿ ಆತನ ಕಾರು ಚಾಲಕ ಇಜಾಜ್ ಬಿರಾದಾರನನ್ನ ಬಂಧಿಸಿದ್ದರು.

    ಮೃತ ರೇಷ್ಮಾ ಪಡೇಕನೂರ ಎಂಐಎಂ ಮುಖಂಡ ತೌಫಿಕ್‍ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಅಷ್ಟೇ ಅಲ್ಲದೇ ಹಣ ಹಾಗೂ ಆಸ್ತಿಗಾಗಿ ತೌಫಿಕ್‍ನನ್ನು ಬ್ಲಾಕ್‍ಮೇಲ್ ಮಾಡುತ್ತಿದ್ದು, ತೌಫಿಕ್‍ನ ಎಂಟು ಎಕರೆ ಆಸ್ತಿ ತನ್ನ ಹೆಸರಿಗೆ ಬರೆಯುವಂತೆ ಬ್ಲಾಕ್‍ಮೇಲ್ ಮಾಡಿದ್ದಳು ಎಂದು ಬಂಧಿತರು ಬಾಯಿಟ್ಟಿದ್ದಾರೆ.

    ಹಣ ಕೊಡುವಂತೆ ಪೀಡಿಸುತ್ತಿದ್ದಳಂತೆ. ಇದರಿಂದ ಬೇಸತ್ತು ಪ್ಲಾನ್ ಮಾಡಿ ಕೊಲೆ ಮಾಡಿದ್ದಾಗಿ ತೌಫಿಕ್ ಶೇಖ್ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆಂದು ವಿಜಯಪುರ ಎಸ್‍ಪಿ ಪ್ರಕಾಶ್ ನಿಕಮ್ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದ್ದಾರೆ.

    ಏನಿದು ಪ್ರಕರಣ?
    ಜೆಡಿಎಸ್‍ನ ಮಾಜಿ ಜಿಲ್ಲಾಧ್ಯಕ್ಷೆ ಹಾಗೂ ಹಾಲಿ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಶವ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕೋಲ್ಹಾರ ಬಳಿಯ ಕೃಷ್ಣಾ ನದಿಯಲ್ಲಿ ಮೇ 17 ರಂದು ಪತ್ತೆಯಾಗಿತ್ತು. ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ನಿಂದ ದೇವರಹಿಪ್ಪರಗಿ ಮತಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅಲ್ಲದೆ 2013ರಲ್ಲಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್ ನಿಂದ ರೇಷ್ಮಾ ಪಡೇಕನೂರ ಸ್ಪರ್ಧಿಸಿ ಸೋಲು ಕಂಡಿದ್ದರು. ಕೋಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

  • ಜೈಲಿನಿಂದ್ಲೇ ಸುಳ್ವಾಡಿ ಹಂತಕನ ದರ್ಬಾರ್ – ಮಠದ ಆಸ್ತಿಯನ್ನು ತನ್ನ ಹೆಸ್ರಿಗೆ ಮಾಡ್ಕೊಂಡ ಇಮ್ಮಡಿ

    ಜೈಲಿನಿಂದ್ಲೇ ಸುಳ್ವಾಡಿ ಹಂತಕನ ದರ್ಬಾರ್ – ಮಠದ ಆಸ್ತಿಯನ್ನು ತನ್ನ ಹೆಸ್ರಿಗೆ ಮಾಡ್ಕೊಂಡ ಇಮ್ಮಡಿ

    ಚಾಮರಾಜನಗರ: ಸುಳ್ವಾಡಿ ದುರಂತದ ಕ್ರಿಮಿ ಇಮ್ಮಡಿ ಮಹದೇವ ಸ್ವಾಮೀಜಿ ಜೈಲಿನಲ್ಲಿ ಇದ್ದುಕೊಂಡು ದರ್ಬಾರ್ ನಡೆಸುತ್ತಿದ್ದಾನೆ. ಈತನ ಪ್ಲಾನ್‍ಗೆ ಜೈಲಾಧಿಕಾರಿಗಳು ಫುಲ್ ಸಪೋರ್ಟ್ ಮಾಡಿದ್ದಾರೆ.

    ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಸುಳ್ವಾಡಿ ವಿಷಪ್ರಸಾದ ದುರಂತ ನಡೆದು 5 ತಿಂಗಳಾಯಿತು. ಚಾಮರಾಜನಗರ ಜಿಲ್ಲೆಯಲ್ಲಿರುವ ಸುಳ್ವಾಡಿ ಮಾರಮ್ಮ ದೇವಸ್ಥಾನದ ಆಡಳಿತದ ಚುಕ್ಕಾಣಿ ಹಿಡಿಯಲು ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮೀಜಿ, ಇತರ ಮೂವರು ಸೇರಿ ಮಾಡಿದ ಪಿತೂರಿಗೆ 17 ಮಂದಿ ಬಲಿಯಾಗಿ 112 ಮಂದಿ ಅಸ್ವಸ್ಥರಾಗಿದ್ದರು. ವಿಷವಿಕ್ಕಿದ ಪಾಪಿಗಳು ಜೈಲಲ್ಲಿದ್ದಾರೆ. ಆದರೆ ಇಮ್ಮಡಿ ಮಹದೇವಸ್ವಾಮಿ ಮಾತ್ರ ಜೈಲಿನಲ್ಲಿ ಇದ್ದುಕೊಂಡೇ ಸಾಲೂರು ಮಠದ ಆಸ್ತಿಯನ್ನು ತನ್ನ ವೈಯಕ್ತಿಕ ಖಾತೆ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

     

    1997ರಲ್ಲಿ ಇಮ್ಮಡಿ ಮಹದೇವಸ್ವಾಮಿ, ಕಾರ್ಯದರ್ಶಿ, ಮಲೆಮಹದೇಶ್ವರ ಕೃಪ ವಿದ್ಯಾಸಂಸ್ಥೆ ಹೆಸರಲ್ಲಿ ಲಿಂಗಣಾಪುರ ಎಂಬಲ್ಲಿ 2 ಎಕರೆ 44 ಸೆಂಟ್ಸ್ ಜಮೀನನ್ನು ಖರೀದಿಸಿದ್ದನು. ಆದರೆ ಈಗ ಈತ ಜೈಲಿಂದ ಹೇಗಾದ್ರೂ ಹೊರಬರಲು 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಈ ಆಸ್ತಿಯನ್ನು ಮಾರಾಟ ಮಾಡಲು ಇದೇ ಮೇ 3ರಂದು ತನ್ನ ಸ್ವಂತ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾನೆ ಎನ್ನಲಾಗಿದೆ.

    2018ರ ಫೆಬ್ರವರಿ 20 ರಂದು ಖಾತೆ ಮಾಡಿಕೊಡಲು ಇಮ್ಮಡಿ ಮಹದೇವಸ್ವಾಮೀಜಿ ಅರ್ಜಿ ಸಲ್ಲಿಸಿದ್ದ. ಅರ್ಜಿ ಕೊಟ್ಟ ಒಂದು ತಿಂಗಳೊಳಗೆ ವಿಲೇವಾರಿ ಮಾಡಬೇಕು. ಆದರೆ 1 ವರ್ಷವಾದ್ರೂ ಅರ್ಜಿಯ ಬಗ್ಗೆ ಕ್ರಮಕೈಗೊಳ್ಳದ ಅಧಿಕಾರಿಗಳು ಇದ್ದಕ್ಕಿದ್ದಂತೆ 2 ವಾರಗಳ ಹಿಂದೆ ಇಮ್ಮಡಿ ಮಹದೇವಸ್ವಾಮಿ ಹೆಸರಿಗೆ ಖಾತೆ ಮಾಡಿಕೊಟ್ಟಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

  • ಚುನಾವಣೆಗೆ ನಿಂತ ಸ್ವಾಮೀಜಿಯ ಆಸ್ತಿ 3 ಕೋಟಿ

    ಚುನಾವಣೆಗೆ ನಿಂತ ಸ್ವಾಮೀಜಿಯ ಆಸ್ತಿ 3 ಕೋಟಿ

    – ಸ್ವಾಮೀಜಿ ಬಳಿ ಪಾನ್ ಕಾರ್ಡ್ ಇಲ್ಲ

    ಮುಂಬೈ: ಬಿಜೆಪಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿರುವ ಜಯಸಿದ್ದೇಶ್ವರ ಸ್ವಾಮೀಜಿ ಒಟ್ಟು 3 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

    ಮಹಾರಾಷ್ಟ್ರದ ಸೋಲಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಜಯಸಿದ್ದೇಶ್ವರ ಸ್ವಾಮೀಜಿ ಬಳಿ 6 ಲಕ್ಷ 46 ಸಾವಿರ ನಗದು ಮತ್ತು 2 ಕೋಟಿ 72 ಲಕ್ಷ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಆದ್ರೆ ಸ್ವಾಮೀಜಿ ಪಾನ್ ಕಾರ್ಡ್ ಹೊಂದಿಲ್ಲ. ಮೀಸಲು ಕ್ಷೇತ್ರವಾಗಿರುವ ಸೋಲಾಪುರದಲ್ಲಿ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಸಿಂಧೆ ಮತ್ತು ವಂಚಿತ್ ಬಹುಜನ್ ಅದಾಡಿ (ವಿಬಿಎ) ನಾಯಕ ಪ್ರಕಾಶ್ ಅಂಬೇಡ್ಕರ್ ವಿರುದ್ಧ ಸ್ವಾಮೀಜಿ ಸ್ಪರ್ಧಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಪಾನ್ ಕಾರ್ಡ್ ಹೊಂದಿರದ ಏಕ ಮಾತ್ರ ಅಭ್ಯರ್ಥಿ ಜಯಸಿದ್ದೇಶ್ವರ ಸ್ವಾಮೀಜಿ. ನನಗೆ ಪಾನ್ ಕಾರ್ಡ್ ಅವಶ್ಯಕತೆ ಇಲ್ಲ. ಕಾರಣ ನಾನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಲ್ಲ ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.

    ಅಭ್ಯರ್ಥಿ ಬಳಿ ಪಾನ್ ಕಾರ್ಡ್ ಇಲ್ಲದಿದ್ರೂ ವಿಧಾನ ಸಭೆ ಮತ್ತು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಬಹುದು. ರೆಗ್ಯೂಲರ್ ಹಾಗು ನಿಶ್ಚಿತ ಆದಾಯವನ್ನು ಹೊಂದಿರದ ಕಾರಣ ಸ್ವಾಮೀಜಿ ಪಾನ್ ಕಾರ್ಡ್ ಹೊಂದಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ.

  • ಆಸ್ತಿಗಾಗಿ ಸ್ವಂತ ಮಗನನ್ನೇ ಕೊಲ್ಲಲು ಮುಂದಾದ ತಂದೆ!

    ಆಸ್ತಿಗಾಗಿ ಸ್ವಂತ ಮಗನನ್ನೇ ಕೊಲ್ಲಲು ಮುಂದಾದ ತಂದೆ!

    ಕೊಪ್ಪಳ: ಆಸ್ತಿಗಾಗಿ ಸ್ವಂತ ಪುತ್ರನನ್ನು ಕೊಲ್ಲಲು ತಂದೆಯೇ ಮುಂದಾದ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪ್‍ನಲ್ಲಿ ನಡೆದಿದೆ.

    ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪ್‍ನ ನಿವಾಸಿ ಮೆಳ್ಳುಪುಡಿ ಶ್ರೀರಾಮಮೂರ್ತಿ ತನ್ನ ಮಗ ವೆಂಕಟೇಶ್‍ನನ್ನು ಕೊಲ್ಲಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿವೆ. ಪಿತ್ರಾರ್ಜಿತ ಆಸ್ತಿಯನ್ನು ಮಗನಿಗೆ ತಿಳಿಸದೆ ಶ್ರೀರಾಮಮೂರ್ತಿ ಕಾರಟಗಿಯ ವಿ.ಬಿ ಚಿನಿವಾಲರ ಎಂಬ ಉದ್ಯಮಿಗೆ ಆಸ್ತಿ ಮಾರಾಟ ಮಾಡಿದ್ದನು. ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಬಳ್ಳಾರಿಯಲ್ಲಿ ವೆಂಕಟೇಶ್ ವಾಸವಾಗಿದ್ದರು. ಆದ್ರೆ 10 ವರ್ಷಗಳ ನಂತರ ಊರಿಗೆ ಬಂದಾಗ ಅಪ್ಪ ಆಸ್ತಿ ಮಾರಾಟ ಮಾಡಿರುವ ಬಯಲಾಗಿದೆ.

    ಬಹುವರ್ಷಗಳ ಬಳಿಕ ಮನೆಗೆ ಬಂದ ವೆಂಕಟೇಶ್‍ಗೆ ಮನೆ ಬಿಡುವಂತೆ ವಿ.ಬಿ.ಚಿನಿವಾಲ ಒತ್ತಾಯಿಸಿದ್ದಾನೆ. ಆದ್ರೆ ವೆಂಕಟೇಶ್ ಮನೆ ಬಿಡಲು ನಿರಾಕರಿಸಿದ್ದಾರೆ. ಆಗ ತಂದೆಯೇ ವಿ.ಬಿ.ಚಿನಿವಾಲ ಬೆಂಬಲಿಗರ ಮೂಲಕ ವೆಂಕಟೇಶ್ ಮತ್ತು ಪತ್ನಿ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಸಮೀಪದ ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು ಏನೂ ಪ್ರಯೋಜನವಾಗಿಲ್ಲ. ಪೊಲೀಸರು ಹಲ್ಲೆ ನಡೆಸಿದ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

    ಆಸ್ತಿ ವಿಚಾರವಾಗಿ ವೆಂಕಟೇಶ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಶ್ರೀರಾಮಮೂರ್ತಿ ವಿ.ಬಿ ಚಿನಿವಾಲ ಬೆಂಬಲಿಗರ ಮೂಲಕ ಪುತ್ರನಿಗೆ ಜೀವ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ರಕ್ಷಣೆ ಕೋರಿ ಹತ್ತಿರದ ಕಾರಟಗಿ ಪೊಲೀಸ್ ಠಾಣೆಗೆ ಹೋದರೂ ಪ್ರಯೋಜನವಾಗಿಲ್ಲ. ಪಿತ್ರಾರ್ಜಿತ ಆಸ್ತಿಗಾಗಿ ನಮ್ಮ ತಂದೆ ಅವರೊಡನೆ ಸೇರಿ ನಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ವೆಂಕಟೇಶ್ ಆರೋಪಿಸುತ್ತಿದ್ದಾರೆ.

    ಆಸ್ತಿ ಗೊಂದಲ ಪ್ರಕರಣ ಕೊರ್ಟ್ ನಲ್ಲಿ ಇರುವುದರಿಂದ ನ್ಯಾಯಾಂಗದ ತೀರ್ಪಿಗೆ ಬದ್ಧವಾಗಿರ್ತಿವಿ ಎಂದು ವೆಂಕಟೇಶ್ ದಂಪತಿ ಹೇಳಿದ್ದಾರೆ. ತೀರ್ಪು ಬರೊವರೆಗೂ ನಮಗೆ ರಕ್ಷಣೆ ಕೊಡಿಸಿ ಎಂದು ದಂಪತಿ ಕೊರ್ಟ್ ನಲ್ಲಿ ಮನವಿ ಮಾಡಿದ್ದಾರೆ.

  • ಆಸ್ತಿಗಾಗಿ ಹೆತ್ತವರನ್ನೇ ಕೂಡಿ ಹಾಕಿ ಹೊಡೆಯುತ್ತಿದ್ದ ಕಾಂಗ್ರೆಸ್ ಮುಖಂಡ!

    ಆಸ್ತಿಗಾಗಿ ಹೆತ್ತವರನ್ನೇ ಕೂಡಿ ಹಾಕಿ ಹೊಡೆಯುತ್ತಿದ್ದ ಕಾಂಗ್ರೆಸ್ ಮುಖಂಡ!

    – ಸಹೋದರಿಯರಿಂದ ಸಹೋದರನ ಮೇಲೆ ಆರೋಪ

    ಬೆಂಗಳೂರು: ಆಸ್ತಿಯನ್ನು ಬರೆದುಕೊಡದ್ದಕ್ಕೆ ಸಿಟ್ಟಾಗಿ ತಂದೆ, ತಾಯಿಯನ್ನು ಗೃಹ ಬಂಧನದಲ್ಲಿರಿಸಿ ಹಲ್ಲೆ ನಡೆಸಿದ ಆರೋಪ ಕಾಂಗ್ರೆಸ್ ಮುಖಂಡನ ಮೇಲೆ ಕೇಳಿ ಬಂದಿದೆ.

    ಸಹೋದರನಾದ ತೇಜುಮೂರ್ತಿ ನಮ್ಮ ತಂದೆ ಹಿರಪ್ಪ(80), ತಾಯಿ ಲಕ್ಷ್ಮಮ್ಮ(67) ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಹೋದರಿಯರು ಆರೋಪಿಸಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದ ನಿವಾಸಿ ತೇಜುಮೂರ್ತಿ ಆಸ್ತಿ ನೀಡದ್ದಕ್ಕೆ ಪೋಷಕರನ್ನು ಗೃಹ ಬಂಧನದಲ್ಲಿ ಇರಿಸಿದ್ದಾನೆ. ಈ ವಿಚಾರವನ್ನು ಪ್ರಶ್ನಿಸಲು ಬಂದಿದ್ದಕ್ಕೆ ನಮ್ಮ ಮೇಲೆಯೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಸಹೋದರಿಯರು ಹೇಳಿದ್ದಾರೆ. ತೇಜುಮೂರ್ತಿ ಹಲ್ಲೆ ನಡೆಸುವ ದೃಶ್ಯ ಮೊಬೈಲಿನಲ್ಲಿ ಸೆರೆ ಆಗಿದೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಬನ್ನೇರುಘಟ್ಟ ಠಾಣೆಯಲ್ಲಿ ದೂರು ದಾಖಲಿಸಿಸಲು ಹಿರಪ್ಪನ ಪುತ್ರಿಯರು ಹೋಗಿದ್ದರು. ಆದರೆ ತೇಜುಮೂರ್ತಿಯ ಒತ್ತಡಕ್ಕೆ ಮಣಿದ ಪೊಲೀಸರು ಕಾಟಾಚಾರಕ್ಕೆ ದೂರು ದಾಖಲಿಸಿಕೊಂಡಿದ್ದಾರೆ ಎಂದು ಹಿರಪ್ಪನ ಪುತ್ರಿ ಆರೋಪಿಸಿದ್ದಾರೆ.

    ಸದ್ಯ ಪುತ್ರಿಯರು ಪೋಷಕರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.