– ಕಳೆದ ಬಾರಿಗಿಂತ 1,000 ಕೋಟಿ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಈ ವರ್ಷ ಅತ್ಯಧಿಕ ಆಸ್ತಿ ತೆರಿಗೆ ಸಂಗ್ರಹ ಮಾಡಲಾಗಿದೆ. 2023-24ನೇ ವರ್ಷಕ್ಕಿಂತ ಈ ವರ್ಷ 1,000 ಕೋಟಿ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ.
– 2024-25ನೇ ಸಾಲಿನಲ್ಲಿ 4,604 ಕೋಟಿ ಆಸ್ತಿ ತೆರಿಗೆ ಸಂಗ್ರಹ
ಬೆಂಗಳೂರು: ನಗರವಾಸಿಗಳಿಗೆ ಆಸ್ತಿ ತೆರಿಗೆ (Property Tax) ಪಾವತಿಗೆ ಇವತ್ತೇ ಕೊನೇ ದಿನವಾಗಿದೆ. ಇಂದು ಆಸ್ತಿ ತೆರಿಗೆ ಪಾವತಿ ಮಾಡದಿದ್ರೆ ತೆರಿಗೆ ಜೊತೆಗೆ 100% ದಂಡ ಪಾವತಿಸಬೇಕಾಗುತ್ತದೆ. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..
ಹೌದು. 2024-25ರ ಸಾಲಿನ ಆಸ್ತಿ ತೆರಿಗೆ ಸಂಗ್ರಹಕ್ಕೆ ಇಂದು ಕಡೇ ದಿನ. ಇಂದು ತೆರಿಗೆ ಪಾವತಿ ಮಾಡದಿದ್ದರೆ ತೆರಿಗೆ ಜೊತೆಗೆ ಅದರ 100% ದಂಡ ಕಟ್ಟಬೇಕಾಗುತ್ತದೆ. ಆಸ್ತಿ ತೆರಿಗೆ ಎಷ್ಟು ಬಾಕಿ ಇದೆಯೋ ಅಷ್ಟೇ ದಂಡವನ್ನೂ ಆಸ್ತಿ ಮಾಲೀಕರು ಪಾವತಿಸಬೇಕಿದೆ. ಇದರ ಜೊತೆಗೆ ವಾರ್ಷಿಕ 15% ಬಡ್ಡಿ ದರವೂ ಇರಲಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ: ಬಿರುಗಾಳಿಗೆ ಉರುಳಿ ಬಿದ್ದ ಮರ – 6 ಕ್ಕೂ ಹೆಚ್ಚು ಮಂದಿ ಸಾವು
ಈ ಹಿಂದೆ ಆಸ್ತಿ ತೆರಿಗೆಯ ದುಪ್ಪಟ್ಟು ಮೌಲ್ಯದ ದಂಡ ಪಾವತಿಸಬೇಕಿತ್ತು. ಆದರೆ ಸರ್ಕಾರ ಇದನ್ನು ಕಡಿತಗೊಳಿಸಿ ಆಸ್ತಿತೆರಿಗೆಯ ಸಮಾನ ಹಣವನ್ನು ದಂಡವಾಗಿ ಕಟ್ಟಲು ಸೂಚಿಸಿದೆ. ಅಂದರೆ 100 ರೂಪಾಯಿ ಆಸ್ತಿ ತೆರಿಗೆ ಬಾಕಿ ಇದ್ದರೆ, ಇದರ ಮೇಲೆ ಮತ್ತೆ 100 ರೂಪಾಯಿಯಷ್ಟು ದಂಡ ಬೀಳಲಿದೆ. ಆದರೆ ಈ ಅವಕಾಶವೂ ಮಾರ್ಚ್ 31ಕ್ಕೆ ಅಂದರೆ ಇಂದು ಕೊನೆಯಾಗಲಿದೆ. ನಂತರ 100% ದಂಡ ಹಾಗೂ 15% ಬಡ್ಡಿ ಜೊತೆಗೆ ಆಸ್ತಿ ತೆರಿಗೆ ಪಾವತಿಸಬೇಕಿದೆ. ಅಂದರೆ 1,000 ರೂ ಆಸ್ತಿ ತೆರಿಗೆ ಇದ್ದರೆ, 2,000 ರೂ ಜೊತೆಗೆ 15% ಬಡ್ಡಿಯನ್ನೂ ಕಟ್ಟಬೇಕಾಗುತ್ತದೆ. ಇದನ್ನೂ ಓದಿ: ಹುಟ್ಟುಹಬ್ಬದ ಮುನ್ನಾ ದಿನ ಹಾಸ್ಟೆಲ್‌ನ 5ನೇ ಮಹಡಿಯಿಂದ ಹಾರಿ IIIT ವಿದ್ಯಾರ್ಥಿ ಆತ್ಮಹತ್ಯೆ
ಬಿಬಿಎಂಪಿಯು 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 5,210 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ಈವರೆಗೆ 4,604 ಕೋಟಿ ರೂಪಾಯಿ ವಸೂಲಿ ಆಗಿದೆ. ಮಾರ್ಚ್ 31ರೊಳಗೆ ಬಾಕಿ ಆಸ್ತಿ ತೆರಿಗೆ ಪಾವತಿಸದಿದ್ದರೆ ಡಬಲ್ ಹಣ ದಂಡದ ರೂಪದಲ್ಲಿ ವಸೂಲಿ ಮಾಡಲು ಬಿಬಿಎಂಪಿ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಇಂದು ರಾತ್ರಿ 11 ಗಂಟೆ ಒಳಗಡೆ ತೆರಿಗೆ ಪಾವತಿಸಿದ್ರೆ ದುಪ್ಪಟ್ಟು ತೆರಿಗೆ ಪಾವತಿಸುವ ಹೊರೆ ತಪ್ಪಲಿದೆ. ಇದನ್ನೂ ಓದಿ: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇನೆ: ಟ್ರಂಪ್ ಬೆದರಿಕೆ
ಒಟ್ಟಾರೆ ಆರ್ಥಿಕ ವರ್ಷ ಅಂತ್ಯ ಆಗ್ತಾ ಇದೆ.. ಆಸ್ತಿ ತೆರಿಗೆ ಪಾವತಿಗೆ ಮಾರ್ಚ್ 31ರ ವರೆಗೂ ಅವಕಾಶ ನೀಡಲಾಗಿತ್ತು. ಯಾರು ತೆರಿಗೆ ಪಾವತಿಸಿಲ್ಲವೋ ಅವರಿಗೆ 100% ದಂಡ ಹಾಕಿ ವಸೂಲಿ ಮಾಡಲಿದ್ದು ತೆರಿಗೆ ಪಾವತಿದಾರರು ಇಂದು ರಾತ್ರಿ 12 ಗಂಟೆ ಒಳಗಡೆ ತೆರಿಗೆ ಪಾವತಿಸಿದ್ರೆ ದಂಡದಿಂದ ಬಚಾವ್ ಆಗಬಹುದು. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ರಥೋತ್ಸವ: ಲಕ್ಷಾಂತರ ಮಂದಿ ಭಾಗಿ
ಬೆಂಗಳೂರು: ವಿಧಾನಸೌಧ, ರಾಜಭವನ (Raj Bhavan) ಸೇರಿ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಒಟ್ಟು 258 ಸರ್ಕಾರಿ ಕಟ್ಟಡಕ್ಕೆ ಬಿಬಿಎಂಪಿ ನೋಟಿಸ್ ನೀಡಿದೆ.
ಈಗಾಗಲೇ ರಾಜ್ಯಾದ್ಯಂತ ಬಹುತೇಕ ಸರ್ಕಾರಿ ಇಲಾಖೆಗಳು (Government Departments) ಬರೋಬ್ಬರಿ 8 ಸಾವಿರ ಕೋಟಿ ರೂ.ಗಳಷ್ಟು ವಿದ್ಯುಲ್ ಬಿಲ್ ಬಾಕಿ ಉಳಿಸಿಕೊಂಡಿವೆ. ಈ ಬೆನ್ನಲ್ಲೇ ಇಂತಹದ್ದೊಂದು ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಖುದ್ದು ಬಿಬಿಎಂಪಿ ಅಧಿಕಾರಿಗಳೇ ಈ ಬಗ್ಗೆ ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿದ್ದಾರೆ.
ಹೌದು. ವಿಧಾನಸೌಧ (Vidhana Soudha), ವಿಕಾಸ ಸೌಧ, ರಾಜಭವನ ಸೇರಿ ಅನೇಕ ಸರ್ಕಾರಿ ಕಟ್ಟಗಳು ಕೋಟಿಗಟ್ಟಲೆ ಆಸ್ತಿ ತೆರಿಗೆ (Property Tax) ಬಾಕಿ ಉಳಿಸಿಕೊಂಡಿವೆ. ಈಗಾಗಲೇ ನೋಟಿಸ್ ಸಹ ನೀಡಲಾಗಿದೆ. ಈ ಪೈಕಿ ಕೆಲವು ಕಟ್ಟಡಗಳು 17 ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿವೆ. ಹೀಗಾಗಿ ಆಯಾ ಇಲಾಖೆ ಮುಖ್ಯಸ್ಥರಿಗೆ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.
ಒಂದು ವೇಳೆ ತೆರಿಗೆ ಪಾವತಿ ಮಾಡದಿದ್ದರೆ, ಸರ್ಕಾರದ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಅಧಿಕಾರಿ ತಿಳಿಸಿದ್ದಾರೆ.
– ಮನೆಯಲ್ಲೇ ಕುಳಿತು ತೆರಿಗೆ ಪಾವತಿ ಮಾಡಬಹುದು – ಹೇಗೆ ಗೊತ್ತಾ?
ಹುಬ್ಬಳ್ಳಿ: ಪ್ರಸಕ್ತ ಆರ್ಥಿಕ ವರ್ಷ 2024-25ನೇ ಸಾಲಿನ ಆಸ್ತಿ ತೆರಿಗೆಯನ್ನು (Property Tax) ಪಾವತಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubballi Dharwad Municipal Corporation) ಬಂಪರ್ ಆಫರ್ ಮಾಡಿಕೊಟ್ಟಿದೆ. 5% ರಿಯಾಯಿತಿಯೊಂದಿಗೆ ತೆರಿಗೆ ಪಾವತಿಸಲು ಏಪ್ರೀಲ್ 1 ರಿಂದ 30ರ ವರೆಗೆ ಅವಕಾಶ ಕಲ್ಪಿಸಿದೆ.
ಸಾರ್ವಜನಿಕರು ಆಸ್ತಿ ತೆರಿಗೆಯನ್ನು 2024-25 ನೇ ಸಾಲಿನಲ್ಲಿ ಕೇವಲ ಹುಬ್ಬಳ್ಳಿ ಧಾರವಾಡ-1 (ಕರ್ನಾಟಕ ಒನ್ ) ಸೇವಾ ಕೇಂದ್ರಗಳ ಮುಖಾಂತರ ಅಥವಾ ಪರ್ಯಾಯ ವ್ಯವಸ್ಥೆಯಾಗಿ ಸಂದಾಯ ಮಾಡಲು http://www.hdmc.in ವೆಬ್ ಸೈಟ್‌ನಲ್ಲಿ ಎಲ್ಲ ವಿಧದ ಆನ್‌ಲೈನ್ ಪಾವತಿ ವ್ಯವಸ್ಥೆಗಳ ಮುಖಾಂತರ ಆಸ್ತಿ ಕರ ಸಂದಾಯ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.
ಹಿಂದಿನ ವರ್ಷದ ಆಸ್ತಿ ತೆರಿಗೆ ಬಾಕಿ ಪಾವತಿಸದಿದ್ದವರೂ ಸಹ ತಮ್ಮ ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸಿ, ಪಾಲಿಕೆ ಕೈಗೊಳ್ಳಲಿರುವ ಅಭಿವೃದ್ಧಿ ಕಾರ್ಯಗಳಲ್ಲಿ ಜವಾಬ್ದಾರಿಯುತ ಪಾಲುದಾರರಾಗಿ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. ಇದನ್ನೂ ಓದಿ: ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಅಮಿತ್ ಶಾ ಶಕ್ತಿ ಪ್ರದರ್ಶನ; ರೋಡ್ ಶೋನಲ್ಲೂ ಜೈ ಶ್ರೀರಾಮ್ ಘೋಷಣೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಜನರಿಗೆ ಬಿಬಿಎಂಪಿಯ (BBMP) ಕಂದಾಯ ಸೇವೆಗಳು ದೊಡ್ಡ ತಲೆನೋವಾಗಿವೆ. ಖಾತೆ ಬದಲಾವಣೆ, ಆಸ್ತಿ ತೆರಿಗೆ ಪಾವತಿ, ಪಹಣಿ ಇವೆಲ್ಲ ಮಾಡಿಸೋದು ಕಷ್ಟಕರವಾಗಿದೆ. ಇದೀಗ ಬಿಬಿಎಂಪಿ ಇದನ್ನು ಸರಳೀಕರಣ ಮಾಡಲು ಮುಂದಾಗಿದೆ. ಈ ಬಾರಿಯ ಬಿಬಿಎಂಪಿ ಬಜೆಟ್‌ನಲ್ಲಿ ಕಂದಾಯ ಸೇವೆಗಳ (Revenue Service) ಸರಳೀಕರಣ ಘೋಷಣೆ ಆಗಲಿದೆ.
ಆಸ್ತಿ ತೆರಿಗೆ ಪಾವತಿಯನ್ನು (Property Tax Payment) ಆನ್‌ಲೈನ್‌ನಲ್ಲಿ ಮಾಡುವಂತೆ ಬಿಬಿಎಂಪಿ ಅವಕಾಶ ಮಾಡಿಕೊಟ್ಟಿದೆ. ಆನ್‌ಲೈನ್‌ನಲ್ಲಿ ಸಾರ್ವಜನಿಕರು ತಾಂತ್ರಿಕ ಸಮಸ್ಯೆಯನ್ನು ಕೂಡ ಎದುರಿಸುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಇದೇ ಮೊದಲ ಬಾರಿಗೆ ಬೆಂಗಳೂರು ಒನ್‌ಗಳಲ್ಲಿ (Bengaluru One) ಆಸ್ತಿ ತೆರಿಗೆ ಪಾವತಿ ಮಾಡೋದಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ಮಾಡಿದ್ದು, ಬಜೆಟ್‌ನಲ್ಲಿ ಘೋಷಣೆ ಮಾಡಲು ಮುಂದಾಗಿದೆ. ಇದನ್ನೂ ಓದಿ: ರಾತ್ರೋರಾತ್ರಿ ಹನುಮ ಧ್ವಜ ತೆರವಿಗೆ ಅಧಿಕಾರಿಗಳ ಎಂಟ್ರಿ – ರೊಚ್ಚಿಗೆದ್ದ ಗ್ರಾಮಸ್ಥರು
ಬಿಬಿಎಂಪಿ ಬಜೆಟ್‌ಗೆ ಸಾರ್ವಜನಿಕರಿಂದ ಸಾಲು ಸಾಲು ಸಲಹೆಗಳು ಬರುತ್ತಿವೆ. ಅದರಲ್ಲೂ ಕಂದಾಯ ವಿಭಾಗಕ್ಕೆ ಹಲವು ಸಲಹೆಗಳು ಬಂದಿವೆ. ಖಾತೆ ಬದಲಾವಣೆ, ಹೊಸ ಖಾತೆ ಮಾಡಿಸಲು ಅರ್ಜಿ ಸಲ್ಲಿಕೆ, ಹೀಗೆ ಹಲವು ಕಂದಾಯ ಸೇವೆಗಳನ್ನು ಸರಳೀಕರಣ ಮಾಡಲು ಸಲಹೆ ಬಂದಿದೆ. ಹೀಗಾಗಿ ಈ ಬಾರಿ ಬಜೆಟ್‌ನಲ್ಲಿ ಹಲವಾರು ಕಂದಾಯ ಸೇವೆಗಳನ್ನು ಸರಳೀಕರಣ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 6,000 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನ ಕೇಸ್ – ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರ ಅರೆಸ್ಟ್
ಯಾವೆಲ್ಲಾ ಕಂದಾಯ ಸೇವೆ ಸರಳೀಕರಣ ಆಗಲಿವೆ?
1. ಬೆಂಗಳೂರು ಒನ್‌ಗಳಲ್ಲಿ ಆಸ್ತಿ ತೆರಿಗೆ ಪಾವತಿ ಬಗ್ಗೆ ಬಜೆಟ್‌ನಲ್ಲಿ ಘೋಷಣೆ
2. ಆನ್‌ಲೈನ್‌ನಲ್ಲಿ ಖಾತೆ ಬದಲಾವಣೆ ಸೇವೆ
3. ಹೊಸ ಖಾತೆ ಮಾಡಿಸಲು ಅರ್ಜಿ ಸಲ್ಲಿಕೆ, ಖಾತೆ ಮಾಡಿಸಲು ಆನ್‌ಲೈನ್ ಸೇವೆ
4. ಡಿಜಿಟಲ್‌ನಲ್ಲಿ ಆಸ್ತಿ ಮ್ಯಾಪ್ ರೆಕಾರ್ಡಿಂಗ್ ಸೇವೆ
5. ಕಂದಾಯ ಸೇವೆಯನ್ನು ಡಿಜಿಟಲೀಕರಣ ಆಗಿ ಮಾರ್ಪಾಡು ಮಾಡುವುದು
ಬೆಂಗಳೂರು: ಆಸ್ತಿ ತೆರಿಗೆ ವಸೂಲಿಗೆ ಬಿಬಿಎಂಪಿ (BBMP) ಮೊಬೈಲ್ ನೋಟಿಸ್ ಜಾರಿ ಮಾಡಲಿದೆ. ಎರಡನೇ ಹಂತದಲ್ಲಿ ಬರೋಬ್ಬರಿ ಆರು ಲಕ್ಷ ಜನರಿಗೆ ಮೊಬೈಲ್ ನೋಟಿಸ್ ಜಾರಿ ಮಾಡಲು ಮುಂದಾಗಿದೆ. ಆಸ್ತಿ ತೆರಿಗೆ ಕಟ್ಟಲು ಬಾಡಿಗೆದಾರರ ಹೆಸರೇಳಿ ಮನೆ ಮಾಲೀಕರು ನುಳುಚಿಕೊಳ್ತಾ ಇದ್ದಾರೆ. ಆಸ್ತಿ ತೆರಿಗೆ (Property Tax) ಕಟ್ಟದೇ ನುಳುಚಿಕೊಳ್ತಿರುವ ಮನೆ ಮಾಲೀಕರ ವಿರುದ್ಧ ಬಿಬಿಎಂಪಿ ಕ್ರಮಕ್ಕೆ ಮುಂದಾಗಿದೆ.
ಆಸ್ತಿ ತೆರಿಗೆ ವಸೂಲಿಗೆ ಬಿಬಿಎಂಪಿ ನಾನಾ ಕಸರತ್ತು ಮಾಡುತ್ತಿದೆ. ತೆರಿಗೆ ವಸೂಲಿಗೆ ಹೊಸ ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ತೆರಿಗೆ ಪಾವತಿ ಮಾಡಿ ಎಂದು ಮೊಬೈಲ್‌ಗೆ ಸಂದೇಶ ಕಳುಹಿಸುತ್ತಿದೆ. ವಾಟ್ಸಾಪ್‌ಗೆ ನೋಟಿಸ್ ಕಳಿಸಲಾಗುತ್ತಿದೆ. ಆರಂಭದಲ್ಲಿ ಬರೋಬ್ಬರಿ 3.5 ಲಕ್ಷ ಜನರಿಗೆ ಮೊಬೈಲ್ ನೋಟಿಸ್ ಜಾರಿ ಮಾಡಲಾಗಿತ್ತು. ಈಗ ಮತ್ತೆ 6 ಲಕ್ಷ ಜನರಿಗೆ ಮೊಬೈಲ್ ನೋಟಿಸ್ ಕಳಿಸಲು ಬಿಬಿಎಂಪಿ ಮುಂದಾಗಿದೆ. ಈಗಾಗಲೇ ಬಿಬಿಎಂಪಿ ಎಂಟು ವಲಯದ ಜನರಿಗೂ ನೋಟಿಸ್ ಜಾರಿ ಮಾಡುತ್ತಿದೆ. ಇದನ್ನೂ ಓದಿ: ರೈತನ ಕಾರ್ ಗ್ಲಾಸ್ ಒಡೆದು 10 ಲಕ್ಷ ರೂ. ಕಳವು – ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಆಸ್ತಿ ತೆರಿಗೆ ಪಾವತಿ ಮಾಡುವಂತೆ ಬರೀ ಮೊಬೈಲ್‌ನಲ್ಲಿ ಅಲ್ಲದೇ ಮನೆ ಮನೆಗೂ ತೆರಳಿ ನೋಟಿಸ್ ನೀಡಲಾಗುತ್ತಿದೆ. ಮನೆ ಮಾಲೀಕರು ಇಲ್ಲದ ಕಾರಣ ಬಾಡಿಗೆದಾರರಿಗೆ ನೋಟಿಸ್ ಕೊಟ್ಟು ಬರುತ್ತಾ ಇದ್ದಾರೆ. 8 ರಿಂದ 10 ವರ್ಷಗಳ ಕಾಲ ವಾಸ ಇರುವ ಬಾಡಿಗೆದಾರರೇ ಆಸ್ತಿ ತೆರಿಗೆ ಪಾವತಿಸಲಿ ಎಂದು ಹೇಳಿ ಕೆಲ ಮನೆ ಮಾಲೀಕರು ನುಳುಚಿಕೊಳ್ಳಲು ಮುಂದಾಗಿದ್ದರು. ಆಸ್ತಿ ತೆರಿಗೆ ಯಾರ ಹೆಸರಲ್ಲಿ ಇದೆಯೋ ಅವರೇ ಆಸ್ತಿ ತೆರಿಗೆ ಪಾವತಿ ಮಾಡಬೇಕು. ಇಲ್ಲದೇ ಹೋದರೆ ಕಾನೂನು ಪ್ರಕಾರ ಕ್ರಮವಹಿಸುತ್ತೇವೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಆಸ್ತಿ ತೆರಿಗೆ ಪಾವತಿ ಮಾಡದೇ ಇದ್ದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಹೇಳಿದೆ. ಬಾಡಿಗೆದಾರರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗ್ಳೂರಲ್ಲಿ ನ. 25, 26ರಂದು ಕಂಬಳ
ಬೆಂಗಳೂರು: 42.63 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಂತ್ರಿ ಮಾಲ್ (Mantri Square Mall) ಮೇಲೆ ಬಿಬಿಎಂಪಿ (BBMP) ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಈ ಹಿಂದೆಯೇ ಮಂತ್ರಿ ಮಾಲ್ ಕೊಟ್ಟಿದ್ದ ಚೆಕ್ ಬೌನ್ಸ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ನೋಟಿಸ್ ಕೊಟ್ಟಿದ್ದರೂ ತೇರಿಗೆ ಕಟ್ಟದ ಮಂತ್ರಿ ಮಾಲ್ ಮೇಲೆ ಬಿಬಿಎಂಪಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಆಸ್ತಿ ತೆರಿಗೆ (Property Tax) ಕಟ್ಟದ ಹಿನ್ನೆಲೆಯಲ್ಲಿ ಮಾಲ್‌ನಲ್ಲಿರುವ ಕಚೇರಿ ವಸ್ತುಗಳನ್ನ ವಶಪಡಿಸಿಕೊಳ್ಳೋದಕ್ಕೆ ಬಿಬಿಎಂಪಿ ಮುಂದಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ಬಳಿಕ 500 ವಿಮಾನಗಳ ಖರೀದಿಗೆ IndiGo ಆರ್ಡರ್
ಈ ಕುರಿತು ಮಾತನಾಡಿರುವ ಬಿಬಿಎಂಪಿ ಆಯುಕ್ತ ಯೋಗೇಶ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ ಆಸ್ತಿ ತೆರಿಗೆ ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ವ್ಯಾಪ್ತಿಯಲ್ಲಿ ಮಂತ್ರಿ ಮಾಲ್ 42. 63 ಕೋಟಿ ರೂ. ಬಾಕಿ ಉಳಿಸಿಕೊಂಡಿಸಿದೆ. ನೋಟಿಸ್ ಕೊಟ್ಟರೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದ್ದರಿಂದ ವಸ್ತುಗಳನ್ನ ವಶಪಡಿಸಿಕೊಳ್ಳೋದಕ್ಕೆ ಮುಂದಾಗಿದ್ದೇವೆ. ಚರಾಸ್ತಿಗಳ ಮೊತ್ತ ಎಷ್ಟಿದೆ ಎಂದು ಪರಿಶೋಧನೆ ಮಾಡುತ್ತಿದ್ದೇವೆ. ಮಾರ್ಗಸೂಚಿ ಪ್ರಕಾರವೇ ದಾಳಿ ಮಾಡಿದ್ದು, ಇನ್ನಷ್ಟು ವಸ್ತುಗಳನ್ನ ವಶಪಡಿಸಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಮಂತ್ರಿ ಮಾಲ್ ಮುಖ್ಯ ವ್ಯವಸ್ಥಾಪಕ ಶಬೀರ್ ಮಾತನಾಡಿ, ಆಸ್ತಿ ಉಳಿಸಿಕೊಂಡಿರೋದು ಅಭಿಷೇಕ್ ಡೆವಲಪರ್ಸ್. ಮಂತ್ರಿ ಮಾಲ್ ಬಾಕಿ ಉಳಿಸಿಕೊಂಡಿಲ್ಲ. ಬಿಬಿಎಂಪಿ ದಾಳಿ ಮಾಡ್ತಿರೋದು ಕಾನೂನು ಬಾಹಿರ. ನಾವು ಕೋರ್ಟ್ನಿಂದ ತಡೆಯಾಜ್ಞೆ ಕೂಡಾ ತಂದಿದ್ದೇವೆ. ಏಕಾಏಕಿ ಈ ರೀತಿ ಮಾಡಿರೋದು ಸರಿಯಲ್ಲ. ನಾವು ಕೋರ್ಟಿಗೆ ಹೋಗ್ತೇವೆ ಎಂದಿದ್ದಾರೆ.
LIVE TV
[brid partner=56869869 player=32851 video=960834 autoplay=true]
ಲಕ್ನೋ: ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಭಾರತಕ್ಕೆ ಸೆಳೆಯುವ ಆಗ್ರಾದ ತಾಜ್ ಮಹಲ್ (Taj Mahal) ಕಟ್ಟಡಕ್ಕೆ ಆಸ್ತಿ ತೆರಿಗೆ (Property Tax) ಹಾಗೂ ನೀರಿನ ಬಿಲ್‍ಗಳನ್ನು (Water Bill) ಪಾವತಿಸುವಂತೆ ಮೊದಲ ಬಾರಿಗೆ ಯುಪಿ ಸರ್ಕಾರ (Uttar Pradesh Government) ನೋಟಿಸ್ ನೀಡಿದೆ.
ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿವಿಧ ಘಟಕಗಳು 320 ವರ್ಷಗಳ ಇತಿಹಾಸ ಇರುವ ಆಗ್ರಾದ ತಾಜ್ ಮಹಲ್ ಹಾಗೂ ಆಗ್ರಾ ಕೋಟೆ ಎರಡಕ್ಕೂ ಬಾಕಿ ಬಿಲ್‍ಗಳನ್ನು ಪಾವತಿಸುವಂತೆ ನೋಟಿಸ್ ನೀಡಿದೆ. ಬಿಲ್‍ಗಳ ಮೊತ್ತ 1 ಕೋಟಿಗೂ ಹೆಚ್ಚು ಬಾಕಿ ಇದೆ ಎಂದು ಎಎಸ್‍ಐಗೆ ತಿಳಿಸಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‍ಐ) ಅಧಿಕಾರಿಗಳು ಇದು, ತಪ್ಪು, ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ಆಗ್ರಾದ ಎಎಸ್‍ಐನ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ರಾಜ್‍ಕುಮಾರ್ ಪಟೇಲ್ ಮಾತನಾಡಿ, ಇಲ್ಲಿಯವರೆಗೆ 3 ನೋಟಿಸ್‍ಗಳು ಬಂದಿದ್ದು, ತಾಜ್‍ಮಹಲ್‍ಗೆ ಎರಡು ಮತ್ತು ಆಗ್ರಾ ಕೋಟೆಗೆ ಒಂದು ಎಂದು ದೃಢಪಡಿಸಿದ್ದಾರೆ.
ತಾಜ್ ಮಹಲ್‍ಗೆ ಸಂಬಂಧಿಸಿದಂತೆ, ನಮಗೆ ಎರಡು ನೋಟಿಸ್‍ಗಳು ಬಂದಿವೆ. ಒಂದು ಆಸ್ತಿ ತೆರಿಗೆ ಮತ್ತು ಇನ್ನೊಂದು ನೀರು ಸರಬರಾಜು ಇಲಾಖೆಯಿಂದಾಗಿದೆ. ಒಟ್ಟು 1 ಕೋಟಿಗೂ ಅಧಿಕ ರೂ.ಗಳನ್ನು ಎಎಸ್‍ಐನಿಂದ ಬೇಡಿಕೆಯಿಡಲಾಗಿದೆ. ಆದರೆ ಅಂತಹ ತೆರಿಗೆಗಳು ಸ್ಮಾರಕಗಳಿಗೆ ಅನ್ವಯಿಸುವುದಿಲ್ಲವಾದ್ದರಿಂದ ಇದು ತಪ್ಪಾಗಿರಬಹುದು ಎಂದು ಹೇಳಿದರು. ಇದನ್ನೂ ಓದಿ:ಡಿಕೆಶಿ ಮನೆಯಲ್ಲಿಯೇ ED, CBI ಕಚೇರಿ ಓಪನ್ ಮಾಡಿ: ರಣದೀಪ್ ಸಿಂಗ್ ಸುರ್ಜೇವಾಲಾ
ಮೊದಲನೆಯದಾಗಿ, ಸ್ಮಾರಕದ ಆವರಣಗಳಿಗೆ ಆಸ್ತಿ ತೆರಿಗೆ ಅಥವಾ ಮನೆ ತೆರಿಗೆ ಅನ್ವಯಿಸುವುದಿಲ್ಲ. ಉತ್ತರ ಪ್ರದೇಶದಲ್ಲೂ ಈ ಕಾನೂನು ಇದೆ. ಜೊತೆಗೆ ನಾವು ಯಾವುದೇ ವಾಣಿಜ್ಯ ಉದ್ದೇಶಗಳಿಗಾಗಿ ನೀರನ್ನು ಬಳಸುತ್ತಿಲ್ಲ. ಬದಲಿಗೆ ತಾಜ್ ಸಂಕೀರ್ಣದ ಒಳಗೆ, ಹುಲ್ಲುಹಾಸುಗಳಿಗಾಗಿ, ಸಾರ್ವಜನಿಕ ಸೇವೆಗಾಗಿ ಬಳಸುತ್ತಿದ್ದೇವೆ. ಇದರಿಂದಾಗಿ ಬಾಕಿಯ ಪ್ರಶ್ನೆಯೇ ಇಲ್ಲ ಎಂದು ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಗಡಿ ವಿವಾದ – ಮಹಾರಾಷ್ಟ್ರ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯಿಲ್ಲ: ದೇವೇಂದ್ರ ಫಡ್ನವಿಸ್
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಬಿಜೆಪಿ ಸರ್ಕಾರದ ಹಲವು ನೀತಿಗಳನ್ನು ಖಂಡಿಸಿ ಕಾಂಗ್ರೆಸ್ ಬಿಬಿಎಂಪಿ ಮುತ್ತಿಗೆ ಹಾಕಿದೆ. ಜನವಿರೋಧಿ ಕೇಂದ್ರ, ರಾಜ್ಯ ಹಾಗೂ ಬಿಬಿಎಂಪಿ ನೀತಿಗಳ ವಿರುದ್ಧ ಕೈ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ಕೇಂದ್ರ, ದಕ್ಷಿಣ, ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಲೀಂ ಅಹಮ್ಮದ್, ರಿಜ್ವಾನ್ ಅರ್ಷದ್, ರಾಮಲಿಂಗ ರೆಡ್ಡಿ ನಾಯಕರ ನೇತೃತ್ವದಲ್ಲಿ ಪಾಲಿಕೆಗೆ ಮುತ್ತಿಗೆ ಹಾಕಲಾಗಿದೆ. ಬಿಬಿಎಂಪಿ ಚಲೋ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ.
ನಗರದಲ್ಲಿ ಆಸ್ತಿ ತೆರಿಗೆ ಹೆಚ್ಚಳ, ವಲಯ ವರ್ಗೀಕರಣ ನೆಪದಲ್ಲಿ ಸ್ವತ್ತು ಮಾಲೀಕರ ಮೇಲೆ 120 ಕೋಟಿ ಕಂದಾಯಕ್ಕೆ 240 ಕೋಟಿ ಬಡ್ಡಿ ವಸೂಲಿ ಮತ್ತು ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ದರ ಹೆಚ್ಚಳದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ರಾಜ್ಯ ಹಾಗೂ ಕೇಂದ್ರದ ವಿರುದ್ಧ ಎಂಎಲ್‍ಸಿ ಪಿ.ಆರ್. ರಮೇಶ್ ಅಸಮಾಧಾನ ಹೊರಹಾಕಿ, ವಿನಾಕರಣ ನಗರದ ಜನತೆ ಮೇಲೆ ಆರ್ಥಿಕ ಹೊರೆ ಹೇರುತ್ತಿದ್ದಾರೆ. ಬಿಡಿಎ ಯನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಎಲ್ಲಾ ಕಾಂಪ್ಲೆಕ್ಸ್ ಗಳನ್ನ ಮಾರಾಟ ಮಾಡಲು ಹೊರಟಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಮುಂದಾಗಿದ್ದಾರೆ. ಕೂಡಲೇ ಅನಧಿಕೃತ ಹೊರೆ ಹಾಕ್ತಿರೋ ಹೆಚ್ಚುವರಿ ತೆರಿಗೆಯನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ರಾಣಾ, ರಕುಲ್, ರವಿತೇಜ, ಚಾರ್ಮಿಗೆ ಜಾರಿ ನಿರ್ದೇಶನಾಲಯದ ನೋಟಿಸ್
ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಕೋವಿಡ್ ಇರುವುದರಿಂದ ಹೆಚ್ಚು ಸಂಖ್ಯೆಯಲ್ಲಿ ಸೇರದೆ ಪ್ರತಿಭಟನೆ ಮಾಡುತ್ತಿದ್ದೇವೆ. ಬಿಬಿಎಂಪಿಯಿಂದ ಆಸ್ತಿ ತೆರಿಗೆ ವಿಚಾರದಲ್ಲಿ ತಪ್ಪಾಗಿದೆ. ಸರಿಪಡಿಸಲು ನೀಡಿದ ಗಡುವು ಮುಗಿದಿದ್ದು, ಈಗ ಮುತ್ತಿಗೆ ಹಾಕಿದ್ದೇವೆ. ವಲಯ ವರ್ಗೀಕರಣದ ನೆಪ ಹೇಳಿ ಆಸ್ತಿಮಾಲೀಕರಿಗೆ ವಿನಾಕಾರಣ 104 ಕೋಟಿ ರೂ ಕಂದಾಯಕ್ಕೆ 240 ಕೋಟಿ ರೂ ಬಡ್ಡಿ ಹಾಗೂ ದಂಡ ವಸೂಲಿ ಮಾಡಲು ಮುಂದಾಗಿದ್ದು ತಪ್ಪು. ಬಿಜೆಪಿ ಸರ್ಕಾರ ಜನರ ಹಿತ ಕಾಯುವಲ್ಲಿ ವಿಫಲವಾಗಿದೆ. ಪೆಟ್ರೋಲ್ 105, ಗ್ಯಾಸ್ ಬೆಲೆ 900 ದಾಟಿದೆ. ಅಧಿಕಾರದಲ್ಲಿ ಇಲ್ಲದೇ ಇರುವಾಗ ಒಂದು, ಇದ್ದಾಗ ಒಂದು ಜನವಿರೋಧಿ ನೀತಿ ಕೈಗೊಳ್ಳುತ್ತಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ನಂತರ 23 ಕೋಟಿ ಜನ ಬಡತನ ರೇಖೆಗಿಂತ ಕೆಳಗೆ ಬಂದಿದ್ದಾರೆ. ಕೇವಲ ಬಣ್ಣಬಣ್ಣದ ಮಾತಾಡಿ, ಜನರ ಸಂಕಷ್ಟ ಕೇಳೋರಿಲ್ಲ ಎಂದರು.
ಬೆಂಗಳೂರು: ಆಸ್ತಿ ತೆರಿಗೆ ಬೇಡಿಕೆ, ಬಿಬಿಎಂಪಿ ವಿಧಿಸಿರುವ ದಂಡ ವಿರೋಧಿಸಿ ಆಮ್ ಆದ್ಮಿ ಪಕ್ಷ ಆಯುಕ್ತರಿಗೆ ಪತ್ರ ಬರೆದಿದೆ.
2020 ಮತ್ತು 2021ರ ಕೋವಿಡ್ ಬಿಕ್ಕಟ್ಟು ಮತ್ತು ಲಾಕ್‍ಡೌನ್‍ಗಳಿಂದಾಗಿ ನಾಗರಿಕರು ಅನೇಕ ಸಂಕಷ್ಟಗಳಿಗೆ ಒಳಾಗಿದ್ದಾರೆ. ಸತತ 15 ತಿಂಗಳು, ಉದ್ಯೋಗವನ್ನು ಕಳೆದುಕೊಂಡು ಆದಾಯವಿಲ್ಲದೆ ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳು ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇತರ ದೇಶಗಳಲ್ಲಿನ ಸರ್ಕಾರಗಳು ಆಸ್ತಿ ತೆರಿಗೆಗಳಲ್ಲಿ ವಿನಾಯಿತಿ ನೀಡಿ, ಹಣಕಾಸಿನ ನೆರವು ನೀಡುವ ಮೂಲಕ ಬದುಕಿನ ಭದ್ರತೆ ನೀಡಿವೆ. ನಮ್ಮ ದೇಶದಲ್ಲಿ ಸರ್ಕಾರ ನಾಗರಿಕರ ಬಗ್ಗೆ ಸರ್ಕಾರ ಕಾಳಜಿ ತೋರಿಸುತ್ತಿಲ್ಲ. ಸೋಂಕಿತರು ಆಸ್ಪತ್ರೆ ವೆಚ್ಚವನ್ನು ಭರಿಸಲು ತಮ್ಮ ಉಳಿತಾಯವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ.
ಇಂತಹ ಸಂದಿಗ್ಧತೆಯ ಸಮಯದಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಬೇಡಿಕೆ ನೋಟಿಸ್ ಕಳುಹಿಸುವ ಮೂಲಕ ಮತ್ತು ಹೆಚ್ಚುವರಿಯಾಗಿ ದಂಡ ವಿಧಿಸುವ ಮೂಲಕ ಜನತೆಗೆ ಆಘಾತಕಾರಿ ಶಾಕ್ ನೀಡಿದೆ.
ಬೆಂಗಳೂರಿನ ಹಲವು ನಿವಾಸಿಗಳು ಆಮ್ ಆದ್ಮಿ ಪಕ್ಷದ (ಎಎಪಿ) ಇತರ ಸದಸ್ಯರ ಜೊತೆಗೆ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಎಸ್‍ಎಎಸ್ ಯೋಜನೆಯಡಿ ಶ್ರದ್ಧೆಯಿಂದ ತೆರಿಗೆ ಪಾವತಿಸುವ ನಿವಾಸಿಗಳಿಗೆ ಕೂಡ ಈ ದಂಡ ಸಹಿತ ತೆರಿಗೆ ಬಡ್ಡಿ ಪಾವತಿಸಲು ನೋಟಿಸ್‍ಗಳನ್ನು ನೀಡಲಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಏಕೆಂದರೆ ವಲಯ ಮರು ವರ್ಗೀಕರಣದ ಆಧಾರದ ಮೇಲೆ ಅನ್ವಯವಾಗುವ ದರಗಳ ಪ್ರಕಾರ ಅವರು ಆಸ್ತಿ ತೆರಿಗೆಯನ್ನು ಪಾವತಿಸಲಿಲ್ಲ ಎಂಬ ಕಾರಣಕ್ಕೆ.
ಈ ಕಾರಣಗಳಿಗಾಗಿ ನೋಟಿಸ್ ಹಿಂಪಡೆಯುವಂತೆ ಆಪ್ ಆಗ್ರಹ 1. ಕೋವಿಡ್ ಸಂದರ್ಭದಲ್ಲಿ ಈ ರೀತಿ ದಂಡ ವಿಧಿಸುವುದು ನಾಗರಿಕರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರ ತಳೆದಿರುವ ಬೇಜವಾಬ್ದಾರಿಯುತ ಅಸಡ್ಡೆ ತೋರಿಸುತ್ತದೆ. 2. ನೀವು ನಾಗರಿಕರ ಸ್ಥಿತಿಯನ್ನು ನಿರ್ಲಕ್ಷಿಸುತ್ತಿದ್ದೀರಿ ಮತ್ತು ಈ ದಂಡವನ್ನು ಪಾವತಿಸಲು ಒತ್ತಾಯಿಸುತ್ತಿದ್ದೀರಿ. ವಿಪರ್ಯಾಸ ಎಂದರೆ ಪ್ರಾಮಾಣಿಕ ತೆರಿಗೆ ಪಾವತಿಸುವ ನಾಗರಿಕರ ಮೇಲೆ ಕೂಡ ದಂಡ ವಿಧಿಸಲಾಗಿದೆ. 3. ತಂತ್ರಜ್ಞಾನ ಮತ್ತು ಜಿಪಿಎಸ್ ಮ್ಯಾಪಿಂಗ್ ಯುಗದಲ್ಲಿ, ಜಿಪಿಎಸ್ ಬಳಸಿ ವಲಯ ವರ್ಗೀಕರಣ ಮತ್ತು ಮರು ವರ್ಗೀಕರಣವನ್ನು ಖಾತ್ರಿಪಡಿಸುವ ಹಲವು ವೇಗದ ಮತ್ತು ತಾಂತ್ರಿಕವಾಗಿ ಮುಂದುವರಿದ ಮಾರ್ಗಗಳಿವೆ. ಹೀಗಿರುವಾಗ ಕಟ್ಟಡದ ಗಾತ್ರಗಳನ್ನು ಪರಿಶೀಲಿಸಲು ತಂತ್ರಜ್ಞಾನವನ್ನು ಬಳಸಬೇಕು. 4. ಬೆಸ್ಕಾಂ ಮತ್ತು ಇತರ ಯುಟಿಲಿಟಿ ಬಿಲ್ ಗಳನ್ನು ಲಿಂಕ್ ಮಾಡುವುದರಿಂದ ವಾಣಿಜ್ಯ/ವಸತಿ ಬಳಕೆಗಳ ಬಗ್ಗೆ ಸ್ಪಷ್ಟತೆ ನೀಡಬೇಕು. 5. ವಲಯಗಳ ವರ್ಗೀಕರಣದಲ್ಲಿ ಪಾರದರ್ಶಕತೆಯ ಕೊರತೆಯಿದೆ, ಸರಳ ಮಧ್ಯಮ ವರ್ಗದ ನಿವಾಸಿಗಳು ತಮ್ಮ ವಸತಿ ವಲಯಗಳನ್ನು ನಿಖರವಾಗಿ ನಿರ್ಣಯಿಸಲು ಅಸಾಧ್ಯ.
ಆದ್ದರಿಂದ, ಬಿಬಿಎಂಪಿಯಿಂದ ನೀಡಲಾದ ತೆರಿಗೆ ಸೂಚನೆಯನ್ನು ಹಿಂತೆಗೆದುಕೊಳ್ಳುವಂತೆ ನಾನು ಒತ್ತಾಯಿಸುತ್ತಿದ್ದೇವೆ. ಮತ್ತು ವಸತಿ ಆಸ್ತಿ ಮಾಲೀಕರಿಗೆ 6 ತಿಂಗಳು ಹೆಚ್ಚುವರಿ ಸಮಯವನ್ನು ಮತ್ತು ವಾಣಿಜ್ಯ ಆಸ್ತಿ ಮಾಲೀಕರಿಗೆ ಆಸ್ತಿ ತೆರಿಗೆ ವ್ಯತ್ಯಾಸವನ್ನು ಪಾವತಿಸಲು 3 ತಿಂಗಳು ಹೆಚ್ಚುವರಿ ಸಮಯವನ್ನು ಒದಗಿಸಬೇಕು ಹಾಗೂ ದಂಡವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಎಎಪಿ ಆಗ್ರಹಿಸಿದೆ. ಇದನ್ನೂ ಓದಿ:ಮಾಸ್ಕ್ ಧರಿಸದೇ ಜನರ ಓಡಾಟ- ದಾಂಡೇಲಿಯಲ್ಲಿ 1,02,800 ರೂ. ದಂಡ ವಸೂಲಿ