ಬೆಂಗಳೂರು: ನಗರದ ಬಗಲಗುಂಟೆಯಲ್ಲಿ (Bagalagunte) ಆಸ್ತಿಯ ಆಸೆಗೆ ಸ್ನೇಹಿತನೊಂದಿಗೆ ಸೇರಿ ತಂದೆಯನ್ನೇ ಕೊಲೆ ಮಾಡಿದ ಮಗನ ಮರ್ಡರ್ ಮಿಸ್ಟ್ರಿ ಪೋಸ್ಟ್ ಮಾರ್ಟಂ ರಿಪೋರ್ಟ್‌ನಲ್ಲಿ ಬಯಲಾಗಿದೆ.

ದಾಸರಹಳ್ಳಿಯ (Dasarahalli) ಕೆಂಪೇಗೌಡ ನಗರದ ಉದ್ಯಮಿ ಮಂಜಣ್ಣ ಮೃತ ದುರ್ದೈವಿ. ಮಗ ಮನೋಜ್ ಹಾಗೂ ಆತನ ಸ್ನೇಹಿತ ಕೊಲೆ ಮಾಡಿದ ಆರೋಪಿಗಳು. ಇದನ್ನೂ ಓದಿ: Nelamangala | ಕೆಲಸ ಮಾಡುವ ವೇಳೆ 2ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು
ಸೆ.2 ರಂದು ದಾಸರಹಳ್ಳಿಯ ಕೆಂಪೇಗೌಡ ನಗರದಲ್ಲಿ ಉದ್ಯಮಿ ಮಂಜಣ್ಣ ಮನೆಯಲ್ಲಿ ಮಲಗಿದ್ದ ಜಾಗದಲ್ಲೇ ಮೃತಪಟ್ಟಿದ್ದರು. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅಂತಾ ಮನೆಯವರು ಕೂಡ ಅಂತ್ಯಕ್ರಿಯೆ ಮಾಡಿದ್ರು. ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಇದೊಂದು ಕೊಲೆ ಅನ್ನೋದು ಗೊತ್ತಾಗಿದೆ.
ಮಂಜಣ್ಣ ಬಗಲುಗುಂಟೆಯಲ್ಲಿ ಒಳ್ಳೆಯ ಸ್ಥಿತಿವಂತರಾಗಿದ್ದರು. ಐದಾರು ಬಿಲ್ಡಿಂಗ್, ನಾಲ್ಕೈದು ಸೈಟ್, ಒಂದು ವುಡ್ ವರ್ಕ್ಸ್ ಫ್ಯಾಕ್ಟರಿ ಅನ್ನು ಹೊಂದಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ದೊಡ್ಡ ಮಗ ಮನೋಜ್ ಕೆಲಸ ಕಾರ್ಯ ಮಾಡದೆ ಸುತ್ತಾಡಿಕೊಂಡಿರುತ್ತಿದ್ದ. ಹೀಗಾಗಿ ತಂದೆ, ಮಗನಿಗೆ ಆಗಾಗ ಬುದ್ಧಿ ಹೇಳ್ತಿದ್ದರು. ಇದನ್ನೂ ಓದಿ: ತುಮಕೂರಲ್ಲಿ ಇಬ್ಬರು ಮಕ್ಕಳ ಜೊತೆ ತಾಯಿ ನೇಣುಬಿಗಿದುಕೊಂಡು ಆತ್ಮಹತ್ಯೆ ಕೇಸ್; ಮಹಿಳೆಯ ಪತಿ, ಅತ್ತೆ ಬಂಧನ
ಇದರಿಂದ ಮಗ ಮನೋಜ್, 5 ವರ್ಷದ ಹಿಂದೆಯೇ ಅಪ್ಪನನ್ನ ಕೊಂದು ಆಸ್ತಿ ಹೊಡೆಯೋ ಪ್ಲಾನ್ ಮಾಡಿದ್ದ. ಹೀಗಾಗಿ ಸ್ನೇಹಿತ ಪ್ರವೀಣ್‌ಗೆ 15 ಲಕ್ಷ ರೂ. ಸುಪಾರಿ ನೀಡಿ, 15,000 ರೂ. ಹಣವನ್ನು ಅಡ್ವಾನ್ಸ್ ಆಗಿ ನೀಡಿದ್ದ.
ಸೆ.2 ರಂದು ವುಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದ ತಂದೆಯನ್ನು, ಮನೋಜ್ ವಿಶಾಂತ್ರಿ ತೆಗೆದುಕೊಳ್ಳಿ ಎಂದು ಹೇಳಿ ಮನೆಗೆ ಕಳುಹಿಸಿದ್ದ. ಮಂಜಣ್ಣ ಮನೆಯಲ್ಲಿ ಸೋಫಾ ಮೇಲೆ ಮಲಗಿದ್ದಾಗ ಮದ್ಯಪಾನ ಮಾಡಿ, ಮನೋಜ್ ಹಾಗೂ ಆತನ ಸ್ನೇಹಿತ ಪ್ರವೀಣ್ ಬಂದಿದ್ದರು.
ಈ ವೇಳೆ ಇಬ್ಬರು ಸೇರಿ ಟವಲ್‌ನಿಂದ ಮಂಜಣ್ಣನ ಕುತ್ತಿಗೆಗೆ ಬಿಗಿದು ಕೊಂದಿದ್ದರು. ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಬಿಂಬಿಸಿದ್ರು. ಆದ್ರೆ ಮೃತದೇಹವನ್ನು ಕಂಡ ಪೋಲಿಸರಿಗೆ ಆಗಲೇ ಅನುಮಾನ ಶುರುವಾಗಿತ್ತು. ಇದೀಗ ಮರಣೋತ್ತರ ವರದಿಯಲ್ಲಿ ಮಗನ ಬಂಡವಾಳ ಬಯಲಾಗಿದೆ.
ಸುಪಾರಿ ಹಣವನ್ನು ಪ್ರವೀಣ್, ತಂಗಿಯ ಮನೆಯಲ್ಲಿ ಕೊಟ್ಟು ಟ್ರಿಪ್‌ಗೆ ತೆರಳಿದ್ದ. ಸದ್ಯ ಪೊಲೀಸರು ಕೊಲೆಗೆ ಸಹಕರಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಮಗ ಮನೋಜ್ ತಲೆಮರೆಸಿಕೊಂಡಿದ್ದಾನೆ.















