Tag: proffesor

  • ಬೆಂಗಳೂರಿನಲ್ಲಿ ಮಹಿಳಾ ಪ್ರೊಫೆಸರ್ ಆತ್ಮಹತ್ಯೆ

    ಬೆಂಗಳೂರಿನಲ್ಲಿ ಮಹಿಳಾ ಪ್ರೊಫೆಸರ್ ಆತ್ಮಹತ್ಯೆ

    ಬೆಂಗಳೂರು: ಮಹಿಳಾ ಪ್ರೊಫೆಸರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಜ್ಞಾನಜ್ಯೋತಿ ನಗರದ ಕದಂಬ ಲೇಔಟ್‍ನಲ್ಲಿ ನಡೆದಿದೆ.

    ಮೃತರನ್ನು ಚೈತ್ರಾ ಎಂದು ಗುರುತಿಸಲಾಗಿದೆ. ಇವರು ಖಾಸಗಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೂ ಮುನ್ನ ಚೈತ್ರಾ ಡೆತ್ ನೋಟ್ ಬರೆದಿದ್ದು, ಇದೀಗ ಇದನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ. ನಾನು ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರು ಡೆತ್ ನೋಟ್‍ನಲ್ಲಿ ಉಲ್ಲೇಖಿಸಿದ್ದಾರೆ.

    CRIME

    ಚೈತ್ರಾ ಅವರು 23 ವರ್ಷದ ಹಿಂದೆ ಗುರುಪ್ರಸಾದ್ ಅವರನ್ನು ವರಿಸಿದ್ದಾರೆ. ಚೈತ್ರಾ ಪತಿ ಸಿ.ಟಿ ಗುರುಪ್ರಸಾದ್ ಅವರು ಶಿಗ್ಗಾವಿಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದಲ್ಲಿ ರಿಜಿಸ್ಟಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತಿ ಹಾವೇರಿಯಲ್ಲಿರಬೇಕಾದರೆ ಚೈತ್ರಾ ಅವರು ಕದಂಬ ಲೇಔಟ್‍ನಲ್ಲಿರುವ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಗೊಟಬಯ ರಾಜಪಕ್ಸೆಗೆ ಶಾಕ್ ಕೊಟ್ಟ ಸಿಂಗಾಪುರ – ದೇಶ ಬಿಟ್ಟು ಹೊರಡಿ ಎಂದು ಖಡಕ್ ಸೂಚನೆ

    ಇತ್ತ ಪತಿ ಎಂದಿನಂತೆ ಕರೆ ಮಾಡಿದಾಗ ಚೈತ್ರಾ ಕಾಲ್ ಸ್ವೀಕರಿಸಲಿಲ್ಲ. ಕೂಡಲೇ ಗುರುಪ್ರಸಾದ್ ಅವರು ಚೈತ್ರಾ ಸಹೋದರನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮನೆಗೆ ಬಂದ ಚೈತಾ ಸಹೋದರ ಬಾಗಿಲು ಮುರಿದು ನೋಡಿದಾಗ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಚೈತ್ರಾ ಶವ ಪತ್ತೆಯಾಗಿದೆ.

    ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಥೂ ಅಸಹ್ಯ..!, ಉಪನ್ಯಾಸಕಿಯನ್ನು ತಬ್ಕೊಂಡು ಯುವಕನ ಹಸ್ತಮೈಥುನ!

    ಥೂ ಅಸಹ್ಯ..!, ಉಪನ್ಯಾಸಕಿಯನ್ನು ತಬ್ಕೊಂಡು ಯುವಕನ ಹಸ್ತಮೈಥುನ!

    ನವದೆಹಲಿ: ದೆಹಲಿಯ ಮಹಿಳಾ ಪ್ರೊಫೆಸರ್ ಮುಂದೆಯೇ ಯುವಕನೊಬ್ಬ ಹಸ್ತಮೈಥುನ ಮಾಡಿಕೊಂಡು, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಿಕೃತ ಕಾಮಿ ಮಾಡಿದ ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಜರ್ಕಿನ್ ಜೊತೆಯಿದ್ದ ಟೋಪಿಯನ್ನು ಆತ ಹಾಕಿದ್ದ ಕಾರಣ ಈತನ ಗುರುತು ಪತ್ತೆಯಾಗಿಲ್ಲ. ದೆಹಲಿಯ ಕನೌಟ್ ಪ್ಲೇಸ್ ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೊಫೆಸರ್ ದೂರು ದಾಖಲಿಸಿದ್ದಾರೆ.

    ಪ್ರಕರಣ ನಡೆದಾಗ ಸಂತ್ರಸ್ತೆ ಟೆರೇಸ್ ನಲ್ಲಿ ಫೋನಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ 20ರ ಆಸುಪಾಸಿನಲ್ಲಿದ್ದ ಯುವಕನೊಬ್ಬ ತನ್ನನ್ನು ಹಿಂಬಾಲಿಸುತ್ತಿರುವು ಗೊತ್ತಾಗಿದೆ. ಈತನನ್ನು ಪ್ರಶ್ನಿಸಿದಾಗ ಈತ ತನ್ನ ವಿಕೃತಿ ಮೆರೆದಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

    ಗುರುವಾರ ಮಧ್ಯಾಹ್ನ 1.30ಕ್ಕೆ ನಾನು ಬ್ರೇಕ್ ಟೈಮಲ್ಲಿ ಟೆರೇಸ್ ಮೇಲೆ ಹೋಗಿದ್ದೆ. ಈ ವೇಳೆ ನಾನು ಫೋನಲ್ಲಿ ಮಾತನಾಡುತ್ತಿದ್ದೆ. ಆಗ ನನ್ನನ್ನು 20ರ ಆಸುಪಾಸಿನ ಯುವಕನೊಬ್ಬ ಹಿಂಬಾಲಿಸುತ್ತಿದ್ದ ವಿಚಾರ ನನ್ನ ಗಮನಕ್ಕೆ ಬಂತು. ನಾನು ಫೋನಲ್ಲಿ ಮಾತನಾಡುತ್ತಿರಬೇಕಾದರೆ ಆತ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ. ಫೋನ್ ಕರೆ ಕಟ್ ಆದ ಬಳಿಕ ನಾನು ಆತನಲ್ಲಿ ಏನಾದ್ರೂ ಸಮಸ್ಯೆ ಇದೆಯಾ ಎಂದು ಕೇಳಿದೆ. ಅದಕ್ಕೆ ಅವನು ಏನೂ ಇಲ್ಲ ಎಂದು ಹೇಳಿದ್ರೂ ಅಲ್ಲಿಂದ ಹೊರಡಲಿಲ್ಲ. ನಾನು ಅಲ್ಲಿಂದ ಹೊರಡಲನುವಾಗುತ್ತಿದ್ದಂತೆ ನನ್ನ ಮುಂದೆ ಬಂದ ಆತ ತನ್ನ ಪ್ಯಾಂಟ್ ಜಿಪ್ ಬಿಚ್ಚಿದ. ಅಲ್ಲೇ ಹಸ್ತಮೈಥುನ ಮಾಡಲು ಶುರು ಮಾಡಿದ ಎಂದು ಪ್ರೊಫೆಸರ್ ಎಎನ್‍ಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

    ನಾನು ಅಲ್ಲಿಂದ ಓಡಿಹೋಗಬೇಕು ಎನ್ನುವಷ್ಟರಲ್ಲಿ ಆತ ಮತ್ತೆ ಬಂದು ನನ್ನನ್ನು ಹಿಡಿದುಕೊಂಡು, ನನ್ನ ದೇಹದ ಮೇಲೆಲ್ಲಾ ಕೈಯಾಡಿಸಿದ. ನಾನು ಮತ್ತೆ ಅಲ್ಲಿಂದ ಓಡಿ ಹೋಗಲು ಯತ್ನಿಸಿ ಟೆರೇಸ್‍ನ ಬಾಗಿಲ ಬಳಿ ಬಂದಾಗ ನನ್ನನ್ನು ಬೆನ್ನತ್ತಿ ಬಂದ ಆತ ಬಾಗಿಲಿನ ಚಿಲಕ ಹಾಕಿದ. ಆ ವೇಳೆ ನಾನು ಆತನನ್ನು ತಳ್ಳಿ, ಕೂಗಾಡಲು ಆರಂಭಿಸಿದೆ. ಆಗ ಆತ ಮೊಬೈಲ್ ಫೋನ್ ಕಿತ್ತು ಪಕ್ಕದ ಕಟ್ಟಡದ ಟೆರೇಸ್ ಮೇಲೆ ಹಾರಿ ಪರಾರಿಯಾಗಿದ್ದಾನೆ ಎಂದು ಪ್ರೊಫೆಸರ್ ಹೇಳಿಕೊಂಡಿದ್ದಾರೆ.

    ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

  • ವಾಟ್ಸಪ್, ಎಸ್‍ಎಂಎಸ್‍ನಲ್ಲೇ ಅಲಿಘರ್ ವಿವಿ ಪ್ರಾಧ್ಯಾಪಕನಿಂದ ತಲಾಖ್ – ಪತ್ನಿಯಿಂದ ಆತ್ಮಹತ್ಯೆ ಬೆದರಿಕೆ

    ವಾಟ್ಸಪ್, ಎಸ್‍ಎಂಎಸ್‍ನಲ್ಲೇ ಅಲಿಘರ್ ವಿವಿ ಪ್ರಾಧ್ಯಾಪಕನಿಂದ ತಲಾಖ್ – ಪತ್ನಿಯಿಂದ ಆತ್ಮಹತ್ಯೆ ಬೆದರಿಕೆ

    ನವದೆಹಲಿ: ಸುಪ್ರೀಂಕೋರ್ಟ್ ಎರಡು ತಿಂಗಳ ಹಿಂದೆ ಮುಸ್ಲಿಮರ ತ್ರಿವಳಿ ತಲಾಕ್‍ಗೆ ನಿಷೇಧ ಹೇರಿರೋದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ತ್ರಿವಳಿ ತಲಾಖ್ ಭೂತ ಇನ್ನೂ ಕೊನೆಗೊಂಡಿಲ್ಲ.

    ಉತ್ತರಪ್ರದೇಶದ ಅಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥ ಖಾಲಿದ್ ಬಿನ್ ಯೂಸುಫ್ ಖಾನ್ ಅನ್ನೋರು ಪತ್ನಿಗೆ ತ್ರಿವಳಿ ತಲಾಖ್ ನೀಡೋಕೆ ಮುಂದಾಗಿದ್ದಾರೆ. ಮೂರರಲ್ಲಿ ವಾಟ್ಸಪ್ ಮತ್ತು ಎಸ್‍ಎಂಎಸ್ ಮೂಲಕ ಈಗಾಗಲೇ ಎರಡು ತಲಾಖ್ ಹೇಳಿದ್ದಾರೆ. ಇದ್ರಿಂದ ನೊಂದಿರುವ ಪತ್ನಿ ಯಸ್ಮೀನ್ ಖಾಲೀದ್ ಡಿಸೆಂಬರ್ 11ರೊಳಗೆ ತನಗೆ ನ್ಯಾಯ ಸಿಗದಿದ್ರೆ ಎಎಂಯು ಕುಲಪತಿಯ ಮನೆ ಮುಂದೆಯೇ ತನ್ನ ಮೂವರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.

    ಆದ್ರೆ ಪ್ರೊಫೆಸರ್ ಖಾಲಿದ್ ಯೂಸ್ ತಲಾಖ್ ನೀಡಿದ್ದನ್ನು ಸಮರ್ಥಿಸಿದ್ದಾರೆ. ಆಕೆ ಎರಡು ದಶಕಗಳಿಂದ ತನಗೆ ಕಿರುಕುಳ ನೀಡುತ್ತಿದ್ದಳು. ತಾನು ಪದವೀಧರೆ ಅಂತ ಸುಳ್ಳು ಹೇಳಿ ಮದುವೆಯಾಗಿದ್ದಾಳೆ. ತಾನು ವಾಟ್ಸಪ್ ಮತ್ತು ಎಸ್‍ಎಂಎಸ್‍ನಲ್ಲಿ ಮಾತ್ರ ಹೇಳಿದ್ದಲ್ಲ. ಷರಿಯಾ ಪ್ರಕಾರ ಇಬ್ಬರ ಸಮ್ಮುಖದಲ್ಲಿ ಸಮಯ ತೆಗೆದುಕೊಂಡೇ ಬಾಯಲ್ಲಿ ತಲಾಖ್ ಹೇಳಿದ್ದೇನೆ. ಸರಿಯಾದ ಸಮಯಕ್ಕೆ ಮೂರನೇ ತಲಾಖ್ ಕೂಡ ನೀಡಲಿದ್ದೇನೆ. ನನ್ನನ್ನು ಯಾರಿಗೂ ತಡೆಯೋಕೆ ಆಗಲ್ಲ. ಆಕೆ ಏನು ಮಾಡ್ಕೊಂಡ್ರು ನಾನು ಕ್ಯಾರೇ ಮಾಡಲ್ಲ ಅಂತ ದರ್ಪದ ಮಾತನ್ನಾಡಿದ್ದಾರೆ. ಆದ್ರೆ ತಾನು ಅಲಿಘಡ ವಿವಿಯಿಂದ ಎಂಎ ಮತ್ತು ಬಿಎಡ್ ಪದವಿ ಪಡೆದಿರೋದಾಗಿ ಪತ್ನಿ ಯಾಸ್ಮಿನ್ ತಿಳಿಸಿದ್ದಾರೆ.