Tag: Professor

  • ಕಲ್ಲಂಗಡಿ ಹಣ್ಣಿನಂತೆ ಹುಡುಗಿಯರ ಎದೆ: ಪ್ರೊಫೆಸರ್ ವಿರುದ್ಧ ಯುವತಿಯರಿಂದ ಟಾಪ್‍ಲೆಸ್ ಪ್ರತಿಭಟನೆ

    ಕಲ್ಲಂಗಡಿ ಹಣ್ಣಿನಂತೆ ಹುಡುಗಿಯರ ಎದೆ: ಪ್ರೊಫೆಸರ್ ವಿರುದ್ಧ ಯುವತಿಯರಿಂದ ಟಾಪ್‍ಲೆಸ್ ಪ್ರತಿಭಟನೆ

    ತಿರುವನಂತಪುರಂ: ಕಾಲೇಜಿನಲ್ಲಿ ಪ್ರೊಫೆಸರ್ ಒಬ್ಬರು ಮಹಿಳೆಯರ ಸ್ತನವನ್ನು ಕಲ್ಲಂಗಡಿಗೆ ಹೊಲಿಸಿದ್ದಕ್ಕೆ ಯುವತಿಯರು ಫೇಸ್‍ಬುಕ್‍ನಲ್ಲಿ ಟಾಪ್‍ಲೆಸ್ ಪ್ರತಿಭಟನೆ ಮಾಡಿದ್ದಾರೆ.

    ಕ್ಯಾಲಿಕಟ್‍ನಲ್ಲಿರುವ ಫಾರೂಕ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಭಾಷಣ ಮಾಡುವಾಗ ಕಾಲೇಜಿನ ಯುವತಿಯರ ಸ್ತನ ಕಲ್ಲಂಗಡಿ ಹಣ್ಣಿನ ರೀತಿ ಇರುತ್ತದೆ ಎಂದು ಹೇಳಿದ್ದರು.

    ಪ್ರೊಫೆಸರ್ ಭಾಷಣದಲ್ಲಿ, “ನಾನು ಒಬ್ಬ ಶಿಕ್ಷಕನಾಗಿದ್ದು, ನನ್ನ ಕಾಲೇಜಿನಲ್ಲಿ 80% ವಿದ್ಯಾರ್ಥಿಗಳು ಯುವತಿಯರೇ. ಅದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಜಾಸ್ತಿ. ಇವರು ಸಂಪ್ರದಾಯಕ್ಕೆ ತಕ್ಕಂತೆ ಉಡುಪು ಧರಿಸುತ್ತಿಲ್ಲ. ಅವರು ತಮ್ಮ ಸ್ತನವನ್ನು ಹಿಜಾಬ್ ನಲ್ಲಿ ಸರಿಯಾಗಿ ಮುಚ್ಚಿಕೊಳ್ಳುವುದಿಲ್ಲ. ಇದು ತುಂಡರಿಸಿದ ಕಲ್ಲಂಗಡಿ ಹಣ್ಣನ್ನು ಪ್ರದರ್ಶನಕ್ಕೆ ಇಟ್ಟಂತೆ ಕಾಣುತ್ತದೆ” ಎಂದು ಹೇಳಿದ್ದರು.

    ಇದ್ದರಿಂದ ರೊಚ್ಚಿಗೆದ್ದ ಯುವತಿಯರು ಪ್ರೊಫೆಸರ್ ವಿರುದ್ಧ ಫೇಸ್‍ಬುಕ್‍ನಲ್ಲಿ ಟಾಪ್‍ಲೆಸ್ ಪ್ರತಿಭಟನೆ ಮಾಡುತ್ತಿದ್ದಾರೆ. ವಿಷ್ಣು ಎಂಬವರು ತನ್ನ ಗೆಳತಿ ಆರತಿ ಎಸ್‍ಎ ಅವರ ಟಾಪ್‍ಲೆಸ್ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ. ಇದಾದ ನಂತರ ತಿರುವನಂತಪುರಂ ಮೂಲದ ದಿಯಾ ಸನಾ ಎಂಬವವರು ಕೂಡ ತನ್ನ ಸ್ತನವನ್ನು ಕಲ್ಲಂಗಡಿ ಹಣ್ಣನಿಂದ ಮುಚ್ಚಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಎರಡೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ರೀತಿಯ ಫೋಟೋವನ್ನು ಶೇರ್ ಮಾಡಿದ ವ್ಯಕ್ತಿಗಳ ಖಾತೆಯನ್ನು ಫೇಸ್‍ಬುಕ್ ಬ್ಲಾಕ್ ಮಾಡಿದೆ ಎಂದು ವರದಿಯಾಗಿದೆ.

  • ಕಾಲೇಜಿನ ಸ್ಟಾಫ್  ರೂಂಗೆ ನುಗ್ಗಿ ಕುಳಿತ್ತಿದ್ದ ಪ್ರಾಧ್ಯಾಪಕರಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

    ಕಾಲೇಜಿನ ಸ್ಟಾಫ್ ರೂಂಗೆ ನುಗ್ಗಿ ಕುಳಿತ್ತಿದ್ದ ಪ್ರಾಧ್ಯಾಪಕರಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

    ಚಂಡೀಗಢ: ವಿದ್ಯಾರ್ಥಿಯೊಬ್ಬ ಕಾಲೇಜ್ ಸ್ಟಾಫ್ ರೂಂಗೆ ನುಗ್ಗಿ ಸಹಾಯಕ ಪ್ರಾಧ್ಯಾಪಕರೊಬ್ಬರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.

    ಹರ್ಯಾಣದ ಸೋನೆಪತ್ ನ ಪಿಪ್ಲಿ ಹಳ್ಳಿಯಲ್ಲಿನ ಶಹೀದ್ ದಲ್ಬಿರ್ ಸಿಂಗ್ ಕಾಲೇಜ್ ಕ್ಯಾಂಪಸ್ ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ರಾಜೇಶ್ ಮಲ್ಲಿಕ್ ವಿದ್ಯಾರ್ಥಿಯಿಂದ ಹತ್ಯೆಯಾದ ಸಹಾಯಕ ಪ್ರಾಧ್ಯಾಪಕ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಪ್ರಾಧ್ಯಾಪಕ ಮಲ್ಲಿಕ್ ಜೊತೆ ಸಹಪಾಠಿ ರಾಜೇಶ್ ಸ್ಟಾಫ್ ರೂಮಿನಲ್ಲಿ ಕುಳಿತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ವಿದ್ಯಾರ್ಥಿ ಏಕಾಏಕಿ ನಾಲ್ಕು ಬಾರಿ ಗುಂಡು ಹಾರಿಸಿದ್ದಾನೆ. ಆತ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದಿದ್ದ ಕಾರಣ ಅಲ್ಲಿದ್ದ ಯಾರು ಅವನನ್ನು ಗುರುತಿಸಲು ಸಾಧ್ಯವಾಗಿಲ್ಲ. ತಕ್ಷಣ ಗುಂಡಿನ ಶಬ್ಧ ಕೇಳಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ದಂಗಾಗಿದ್ದಾರೆ ಎಂದು ರಾಜೇಶ್ ತಿಳಿಸಿದ್ದಾರೆ.

    ಆರೋಪಿ ವಿದ್ಯಾರ್ಥಿ ಗುಂಡು ಹೊಡೆದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ರಾಜೇಶ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ಪ್ರಾಧ್ಯಾಪರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಸುಮಾರು ಬೆಳಿಗ್ಗೆ 9 ಗಂಟೆಯಲ್ಲಿ ನಡೆದಿದ್ದು, ಆರೋಪಿಗಾಗಿ ಶೋಧಕಾರ್ಯ ಶುರುವಾಗಿದೆ. ಪ್ರಾಧ್ಯಾಪಕರ ಶವವನ್ನು ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ವೀರೇಂದರ್ ಸಿಂಗ್ ಹೇಳಿದರು.

     

  • ನಿನ್ನ ಮುದ್ದಾಡಬೇಕು – ಪೋಲಿ ಪ್ರೊಫೆಸರ್ ನಿಂದ ಕಾಲೇಜು ವಾಟ್ಸಪ್ ಗ್ರೂಪ್‍ನಲ್ಲಿ ಸಂದೇಶ

    ನಿನ್ನ ಮುದ್ದಾಡಬೇಕು – ಪೋಲಿ ಪ್ರೊಫೆಸರ್ ನಿಂದ ಕಾಲೇಜು ವಾಟ್ಸಪ್ ಗ್ರೂಪ್‍ನಲ್ಲಿ ಸಂದೇಶ

    ಬೆಳಗಾವಿ: ಕಾಲೇಜು ವಾಟ್ಸಪ್ ಗ್ರೂಪ್‍ನಲ್ಲಿ ನಿನ್ನ ಮುದ್ದಾಡಬೇಕು ಅನ್ನಿಸುತ್ತಿತ್ತು ಇವತ್ತು ಎಂದು ಕಾಲೇಜು ಪ್ರೊಫೆಸರ್ ಒಬ್ಬ ಬಹಿರಂಗವಾಗಿ ಮಾಡಿರುವ ಸಂದೇಶ ಈಗ ಚರ್ಚೆಗೆ ಗ್ರಾಸವಾಗಿದೆ.

    ಜಿಲ್ಲೆಯ ಹುಕ್ಕೇರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರೊಫೆಸರ್ ದೇವರಾಜ ತಳವಾರ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕಿಯರು ಇರುವ ಕಾಲೇಜಿನ ಗ್ರೂಪ್‍ನಲ್ಲಿ ಈ ರೀತಿ ಅಸಭ್ಯವಾದ ಸಂದೇಶ ಹಾಕಿದ್ದಾನೆ. ಇದರಿಂದ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕಿಯರಿಗೆ ಇರುಸು ಮುರುಸು ತರಿಸಿದೆ.

    ಪ್ರೊಫೆಸರ್ ದೇವರಾಜ ತಳವಾರ ಮೊದಲಿನಿಂದಲೂ ವಿದ್ಯಾರ್ಥಿನಿಯರಿಗೆ ಈ ರೀತಿಯ ಮೆಸೇಜ್ ಕಳಿಸಿ ಸತಾಯಿಸುತ್ತಿದ್ದನು. ಎನ್‍ಎಸ್‍ಎಸ್ ಕ್ಯಾಂಪ್‍ ನ ಕೋ ಆರ್ಡಿನೇಟರ್ ಆಗಿರುವ ಈತ ಶಿಬಿರಗಳಲ್ಲೂ ಕೂಡ ನಿದ್ದೆ ಬರುತ್ತಿಲ್ವಾ… ಎಂದು ಮಧ್ಯರಾತ್ರಿಯಲ್ಲಿ ವಿದ್ಯಾರ್ಥಿನಿಯರಿಗೆ ಮೆಸೇಜ್ ಕಳಿಸುತ್ತಿದ್ದ ಎಂಬ ಆರೋಪವು ಈತನ ಮೇಲಿದೆ.

    ಪ್ರೊಫೆಸರ್ ನ ಸಂದೇಶಗಳ ಪುರಾಣ ಇದೇ ಮೊದಲೇನಲ್ಲ. ಈ ಹಿಂದೆಯೂ ಇದೇ ರೀತಿ ಸಂದೇಶ ಕಳಹಿಸಿದ್ದು, ಇದರಿಂದ ವಿದ್ಯಾರ್ಥಿನಿಯರು ತಮ್ಮ ಮುಂದೆ ಅಳಲು ತೋಡಿಕೊಂಡಿದ್ದರು ಎಂದು ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ. ಆದರೆ ಇದು ನನಗೆ ಗೊತ್ತಿಲ್ಲದೇ ತಪ್ಪಾಗಿದೆ ಎಂದು ಬೆಪ್ಪನಂತೆ ಉಪನ್ಯಾಸಕನಾದ ದೇವರಾಜ ತಳವಾರ ಹೇಳುತ್ತಿದ್ದಾನೆ.

  • ದುರ್ಗಾ ಮಾತೆ ವೇಶ್ಯೆಯಂತೆ: ಎಫ್‍ಬಿಯಲ್ಲಿ ಪ್ರಾಧ್ಯಾಪಕನ ಪೋಸ್ಟ್ ವಿವಾದ

    ದುರ್ಗಾ ಮಾತೆ ವೇಶ್ಯೆಯಂತೆ: ಎಫ್‍ಬಿಯಲ್ಲಿ ಪ್ರಾಧ್ಯಾಪಕನ ಪೋಸ್ಟ್ ವಿವಾದ

    ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ (ಡಿಯು) ಸಹಾಯಕ ಪ್ರಾಧ್ಯಾಪಕರೊಬ್ಬರು ಹಿಂದೂ ದುರ್ಗಾ ದೇವತೆಯನ್ನು ಅಶ್ಲೀಲ ಪದಗಳಿಂದ ಬರೆದು ಪ್ರಕಟಿಸಿದ ಫೇಸ್‍ಬುಕ್‍ನ ಪೋಸ್ಟ್ ಇದೀಗ ವಿವಾದವನ್ನು ಸೃಷ್ಟಿಸಿದೆ.

    ದೆಹಲಿಯ ದಾಯಲ್ ಸಿಂಗ್ ಕಾಲೇಜಿನ ಪ್ರಾಧ್ಯಾಪಕ ಕೇದರ್ ಕುಮಾರ್ ಮಂಡಲ್ “ಭಾರತೀಯ ಪುರಾಣದಲ್ಲಿ ದುರ್ಗಾ ಅತ್ಯಂತ ವೇಶ್ಯೆ” ಎಂದು ಬರೆದಿದ್ದು, ಸೆಪ್ಟಂಬರ್ 22 ರಂದು ಸಂಜೆ ಸುಮಾರು 6.43 ಕ್ಕೆ ಪೋಸ್ಟ್ ಪ್ರಕಟವಾಗಿತ್ತು.

    ಈ ಪೋಸ್ಟ್ ಕುರಿತು ಆಕ್ಷೇಪವನ್ನು ವ್ಯಕ್ತಪಡಿಸಿರುವ ಬಿಜೆಪಿ ಅಂಗಸಂಸ್ಥೆಯಾದ ನ್ಯಾಷನಲ್ ಡೆಮೋಗ್ರಸಿ ಟೀಚರ್ಸ್ ಫ್ರಂಟ್ (ಎನ್‍ಡಿಟಿಎಫ್) ಪ್ರಾಧ್ಯಾಪಕ ಮಂಡಲ್ ವಿರುದ್ಧ ದೆಹಲಿಯ ಲೋಧಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

    ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ನ್ಯಾಷನಲ್ ಸ್ಟುಡೆಂಟ್ಸ್ ಯುನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯುಐ) ನಂತಹ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು  ದೆಹಲಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ತಕ್ಷಣ ಕುಮಾರ್ ಮಂಡಲ್ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.