Tag: products

  • GST Revision | ದೇಶದ ಜನತೆಗೆ ದಸರಾ ಗಿಫ್ಟ್‌ – ನಾವು ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ?

    GST Revision | ದೇಶದ ಜನತೆಗೆ ದಸರಾ ಗಿಫ್ಟ್‌ – ನಾವು ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ?

    ದಸರಾ ಹಬ್ಬ ಶುರುವಾಗೋದಕ್ಕೆ ಕ್ಷಣಗಣನೆ ಶುರುವಾಗಿದೆ. ಹಬ್ಬದ ಜೋಶ್‌ನಲ್ಲಿರುವ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ ‘ದಸರಾ ಗಿಫ್ಟ್‌’ ಕೊಟ್ಟಿದೆ. ಸೆಪ್ಟೆಂಬರ್‌ 22ರಿಂದಲೇ ಹೊಸ ಜಿಎಸ್‌ಟಿ ದರ (GST Rate) ಜಾರಿಗೆ ಬರಲಿದೆ. ಇದರಿಂದ ಅದೆಷ್ಟೋ ದಿನಬಳಕೆ ವಸ್ತುಗಳ ಬೆಲೆ ಕೈಗೆಟುಕುವ ದರದಲ್ಲಿ ಸಿಗಲಿದೆ. ಲೈಫಂತೂ ಈಗಿನಷ್ಟು ಕ್ಲಾಸಿ ಇರೋದಿಲ್ಲ, ಹಳೆಯ ದರಗಳೆಲ್ಲ ಭಾನುವಾರ ರಾತ್ರಿಗೆ ಎಂಡ್‌ ಆಗಲಿದೆ. ನಾವು ದಿನನಿತ್ಯ ಬಳಸುವ ಬಹುತೇಕ ವಸ್ತುಗಳ ಬೆಲೆಗೆ ಅಗ್ಗದಲ್ಲಿ ಸಿಗಲಿದೆ. ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆಯಾಗಿದೆ? ಹಳೆಯ ದರ ಎಷ್ಟಿತ್ತು? ಎಂಬುದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

    ಯಾವ ಉತ್ಪನ್ನಗಳ ಬೆಲೆ ಎಷ್ಟು?
    * ವಿಕ್ಸ್ ಆಕ್ಷನ್ 500 ಅಡ್ವಾನ್ಸ್‌ & ವಿಕ್ಸ್‌ ಇನ್ಹೆಲರ್‌
    ಹೊಸ ದರ 64 ರೂ. – ಹಳೆಯ ದರ 69 ರೂ.

    * ಓರಲ್-ಬಿ ಎವ್ವೆರಿಡೇ ಕೇರ್ ಟೂತ್ ಬ್ರಷ್‌
    ಹೊಸ ದರ 30 ರೂ. – ಹಳೆಯ ದರ 35 ರೂ.

    * ಡವ್ ಸೀರಮ್ ಬಾರ್ (75 ಗ್ರಾಂ ತೂಕದ ಬಾರ್)‌
    ಹೊಸ ದರ 40 ರೂ. – ಹಳೆಯ ದರ 45 ರೂ.

    * ಲೈಫ್‌ಬಾಯ್ (75 ಗ್ರಾಂನ 4 ಪ್ಯಾಕ್‌ಗಳು)
    ಹೊಸ ದರ – 60 ರೂ., ಹಳೆಯ ದರ – 68 ರೂ.

    * LUX ರೇಡಿಯಂಟ್ ಗ್ಲೋ ಸೋಪ್ (75 ಗ್ರಾಂನ 4 ಪ್ಯಾಕ್‌ಗಳು)
    ಹೊಸ ದರ – 85 ರೂ., ಹಳೆಯ ದರ – 96 ರೂ.

    * ಕ್ಲೋಸಪ್ ಟೂತ್‌ಪೇಸ್ಟ್ (150 ಗ್ರಾಂ)
    ಹೊಸ ದರ – 129 ರೂ, ಹಳೆಯ ದರ – 145 ರೂ.

    * ಲಕ್ಮೆ 5 to 9 PM ಕಾಂಪ್ಯಾಕ್ಟ್
    ಹೊಸ ದರ – 599 ರೂ., ಹಳೆಯ ದರ 675 ರೂ.

    * ಕಿಸಾನ್‌ ಕೆಚಪ್‌ (850 ಗ್ರಾಂ)
    ಹೊಸ ದರ – 93 ರೂ, ಹಳೆಯ ದರ 110 ರೂ.

    * ಕಿಸಾನ್‌ ಜಾಮ್‌ (200 ಗ್ರಾಂ)
    ಹೊಸ ದರ – 80 ರೂ, ಹಳೆಯ ದರ – 90 ರೂ.

    * ಹಾರ್ಲಿಕ್ಸ್ ಚಾಕೊಲೇಟ್ (200 ಗ್ರಾಂ)
    ಹೊಸ ದರ – 110 ರೂ., ಹಳೆಯ ದರ – 130 ರೂ.

    * ಬೂಸ್ಟ್ (200 ಗ್ರಾಂ)
    ಹೊಸ ದರ – 110 ರೂ. – ಹಳೆಯ ದರ 124 ರೂ.

    * BRU ಕಾಫಿ (75 ಗ್ರಾಂ)
    ಹೊಸ ದರ 270 ರೂ., ಹಳೆಯ ದರ 300 ರೂ.

    * ನಾರ್ ಟೊಮೆಟೊ ಸೂಪ್ (67 ಗ್ರಾಂ)
    ಹೊಸ ದರ – 55 ರೂ., ಹಳೆಯ ದರ – 65 ರೂ.

    * ಹೆಲ್‌ಮನ್‌ನ ನಿಜವಾದ ಮೇಯನೇಸ್ ಚೀಸ್‌ (250 ಗ್ರಾಂ)
    ಹೊಸ ದರ – 90 ರೂ., ಹಳೆಯ ದರ – 99 ರೂ.

    * ಬೊರೊಪ್ಲಸ್ ಆಯುರ್ವೇದಿಕ್ ಆಯಿಲ್ ಕೂಲ್ (180 ಮಿಲಿ)
    ಹೊಸ ದರ 155 ರೂ. – ಹಳೆಯ ದರ 165 ರೂ.

    * ನವರತ್ನ ಆಯುರ್ವೇದಿಕ್ ಆಯಿಲ್ ಕೂಲ್ (150 ಗ್ರಾಂ)
    ಹೊಸ ದರ 145 ರೂ. – ಹಳೆಯ ದರ 155 ರೂ.

    * ಡರ್ಮಿಕೂಲ್ ಪ್ರಿಕ್ಲಿ ಹೀಟ್ ಪೌಡರ್ ಮೆಂಥಾಲ್ ರೆಗ್ಯುಲರ್ (150 ಗ್ರಾಂ)
    ಹೊಸ ದರ 149 ರೂ. – ಹಳೆಯ ದರ 159 ರೂ.

    * ಝಂಡು ಸೋನಾ ಚಂಡಿ ಚ್ಯವಾನ್‌ಪ್ಲಸ್ (900 ಗ್ರಾಂ)
    ಹೊಸ ದರ 361 ರೂ. – ಹಳೆಯ ದರ – 385 ರೂ.

    * ಡವ್‌ ಹೇರ್‌ ಫಾಲ್‌ ಶಾಂಪು (340 ಮಿಲಿ)
    ಹೊಸ ದರ – 435 ರೂ., ಹಳೆಯ ದರ – 490 ರೂ.

    * ಕ್ಲಿನಿಕ್ ಪ್ಲಸ್ ಸ್ಟ್ರಾಂಗ್ & ಲಾಂಗ್ ಶಾಂಪೂ (355 ಮಿಲಿ)
    ಹೊಸ ದರ – 340, ಹಳೆಯ ದರ – 393

    * ಸನ್‌ಸಿಲ್ಕ್ ಬ್ಲಾಕ್ ಶೈನ್ ಶಾಂಪೂ (350 ಮಿಲಿ)
    ಹೊಸ ದರ – 370 ರೂ., ಹಳೆಯ ದರ – 430 ರೂ.

    * ಎಮಾಮಿ ಬೊರೊಪ್ಲಸ್ ಆಂಟಿಸೆಪ್ಟಿಕ್ ಮಾಯಿಶ್ಚರೈಸಿಂಗ್ ಸ್ಯಾಂಡಲ್ ಸೋಪ್ (6 ರ 125 ಗ್ರಾಂ ಪ್ಯಾಕ್)
    ಹೊಸ ದರ 342 ರೂ. – ಹಳೆಯ ದರ 384 ರೂ.

    ಈ ಉತ್ಪನ್ನಗಳ ಬೆಲೆಯೂ ಅಗ್ಗ
    * ಹೆಡ್‌ & ಶೋಲ್ಡರ್ಸ್‌, ಕೂಲ್‌ ಮೆಂಥಾಲ್‌ (300 ಮಿಲಿ) – 320 ರೂ.
    * ಹೆಡ್ & ಶೋಲ್ಡರ್ಸ್ ಸ್ಮೂತ್ & ಸಿಲ್ಕಿ (72 ಮಿಲಿ) – 79 ರೂ.
    * ಪ್ಯಾಂಟೀನ್ ಶಾಂಪೂ ಹೇರ್ ಫಾಲ್ ಕಂಟ್ರೋಲ್ ಮತ್ತು ಪ್ಯಾಂಟೀನ್ ಶಾಂಪೂ ಡೀಪ್ ರಿಪೇರಿ (340 ಮಿಲಿ) – 355 ರೂ.
    * ಜಿಲೆಟ್ ಶೇವಿಂಗ್ ಕ್ರೀಮ್ ರೆಗ್ಯುಲರ್ (30 ಗ್ರಾಂ) – 40 ರೂ.
    * ಜಿಲೆಟ್ ಶೇವಿಂಗ್ ಬ್ರಷ್ – 75 ರೂ.
    * ಓಲ್ಡ್ ಸ್ಪೈಸ್ ಆಫ್ಟರ್ ಶೇವ್ ಲೋಷನ್ ಒರಿಜಿನಲ್ (150 ಮಿಲಿ) – 284 ರೂ.
    * ಕೇಶ್ ಕಿಂಗ್ ಗೋಲ್ಡ್ ಆಯುರ್ವೇದಿಕ್ ಎಣ್ಣೆಯ ಬೆಲೆ (100 ಮಿಲಿ) – 178 ರೂ.
    * ಝಂಡು ಬಾಮ್ (25 ಮಿಲಿ) – 118 ರೂ.

    gst rate cut

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೆಪ್ಟೆಂಬರ್ 3 ರಂದು ಪ್ರಮುಖ ಜಿಎಸ್‌ಟಿ ದರ ಕಡಿತ ಮತ್ತು ಸ್ಲ್ಯಾಬ್ ಬದಲಾವಣೆಗಳನ್ನು ಘೋಷಿಸಿದ್ದರು. ಹೆಚ್ಚಿನ ವಸ್ತುಗಳು 5% ಮತ್ತು 18% ತೆರಿಗೆ ದರ ವರ್ಗಕ್ಕೆ ಬಂದಿವೆ. ಹಲವಾರು ಆಹಾರ ಪದಾರ್ಥಗಳು ಈಗ 0% ಅಥವಾ ಶೂನ್ಯ ಜಿಎಸ್ಟಿ ವ್ಯಾಪ್ತಿಗೆ ಸೇರಿವೆ. ಜೀವ ಮತ್ತು ಆರೋಗ್ಯ ವಿಮೆಗಳು ಸಹ ಶೂನ್ಯ ತೆರಿಗೆ ವರ್ಗಕ್ಕೆ ಬರುತ್ತವೆ.

    400 ವಸ್ತುಗಳ ಮೇಲಿನ ಜಿಎಸ್‌ಟಿ ದರ ಕಡಿತ
    ಸರಿಸುಮಾರು 400 ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಲಾಗಿದೆ. ಈಗ ಅವುಗಳ ಬೆಲೆ ಮಾರ್ಪಾಡಿಗಾಗಿ ಸರ್ಕಾರ ಸಮಗ್ರ ತಂತ್ರಗಳನ್ನು ರೂಪಿಸಿದೆ. ಹೊಸ ಜಿಎಸ್‌ಟಿ ರಚನೆ ಜಾರಿಗೆ ಬಂದ ನಂತರ ಪರೋಕ್ಷ ತೆರಿಗೆ ಅಧಿಕಾರಿಗಳು ಸರಕು ಮತ್ತು ಸೇವೆಗಳ ಪ್ರಸ್ತುತ ಬೆಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಅವುಗಳನ್ನು ದರಗಳೊಂದಿಗೆ ಹೋಲಿಸುತ್ತಿದ್ದಾರೆ.

  • ಖಾದ್ಯ ತೈಲ ಬೆಲೆ 30 ರೂ. ಭಾರೀ ಇಳಿಕೆ

    ಖಾದ್ಯ ತೈಲ ಬೆಲೆ 30 ರೂ. ಭಾರೀ ಇಳಿಕೆ

    ನವದೆಹಲಿ: 200ರ ಗಡಿ ದಾಟಿದ್ದ ಸೂರ್ಯಕಾಂತಿ ಖಾದ್ಯ ತೈಲ ಇದ್ದಕ್ಕಿದ್ದಂತೆ ಭಾರೀ ಇಳಿಕೆಯಾಗಿರುವುದು ಕಂಡುಬಂದಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯತೈಲ ಬೆಲೆ ಇಳಿಕೆಯಾದ ನಂತರ ದೇಶದ ಪ್ರಮುಖ ಖಾದ್ಯ ತೈಲ ಉತ್ಪಾದನಾ ಕಂಪನಿಯಾಗಿರುವ ಅದಾನಿ ಒಡೆತನದ `ಅದಾನಿ ವಿಲ್ಮರ್’ ಕಂಪನಿಯು ಫಾರ್ಚೂನ್ ಖಾದ್ಯತೈಲ ಬೆಲೆಯನ್ನು ಪ್ರತಿ ಲೀಟರ್‌ಗೆ 30 ರೂ. ವರೆಗೆ ಇಳಿಕೆ ಮಾಡಿದೆ. ಇದನ್ನೂ ಓದಿ: ಲೀಟರ್‌ ಗೋಮೂತ್ರಕ್ಕೆ 4 ರೂ. – ರೈತರಿಂದ ಖರೀದಿಗೆ ಮುಂದಾದ ಸರ್ಕಾರ

    ಇದರ ಬೆನ್ನಲ್ಲೇ ಅಲ್ಪಸ್ವಲ್ಪ ಇಳಿಕೆ ಮಾಡಿದೆ. ಇತರ ಕಂಪನಿಗಳು ಇದೇ ಹಾದಿ ಹಿಡಿಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಬೆಲೆ ಇಳಿಕೆ ಮತ್ತು ಕೇಂದ್ರ ಸರ್ಕಾರ ಆಮದು ಸುಂಕವನ್ನು ಶೇ.5ರಷ್ಟು ಇಳಿಸಿದ ಪರಿಣಾಮ ಫಾರ್ಚೂನ್ ವಿವಿಧ ಮಾದರಿಯ ಖಾದ್ಯ ತೈಲ ಬೆಲೆಯನ್ನು ಲೀ.ಗೆ 5 ರೂ. ನಿಂದ 30 ರೂ. ವರೆಗೂ ಇಳಿಸಿದೆ. ಹೀಗಾಗಿ ಅದಾನಿ ವಿಲ್ಮರ್ ಕಂಪನಿಯ ಸೋಯಾ ಎಣ್ಣೆ ದರದಲ್ಲಿ ಲೀ.ಗೆ 195 ರೂ. ನಿಂದ 165 ರೂ.ಗೆ, ಸೂರ್ಯಕಾಂತಿ ಎಣ್ಣೆ 210 ರೂ. ನಿಂದ 199 ರೂ.ಗೆ, ಎಳ್ಳೆಣ್ಣೆ 195 ರೂ. ನಿಂದ 190 ರೂ.ಗೆ, ಶೇಂಗಾ ಎಣ್ಣೆ 220 ರೂ. ನಿಂದ 210 ರೂ. ಇಳಿಕೆ ಆಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಪರಿಹಾರ ಸಾಮಗ್ರಿಗಳನ್ನು ಭುಜದ ಮೇಲೆ ಹೊತ್ತು ಸಾಗಿದ ಸಚಿವ- ಇತ್ತ ಬಿಸ್ಕೆಟ್ ಎಸೆದ ರೇವಣ್ಣ!

    ಪರಿಹಾರ ಸಾಮಗ್ರಿಗಳನ್ನು ಭುಜದ ಮೇಲೆ ಹೊತ್ತು ಸಾಗಿದ ಸಚಿವ- ಇತ್ತ ಬಿಸ್ಕೆಟ್ ಎಸೆದ ರೇವಣ್ಣ!

    ತಿರುವನಂತಪುರ: ಕೇರಳದ ಶಿಕ್ಷಣ ಸಚಿವರಾದ ರವೀಂದ್ರನಾಥ್‍ರವರು ಪರಿಹಾರ ಸಾಮಗ್ರಿಗಳನ್ನು ಸ್ವತಃ ಹೆಗಲ ಮೇಲೆ ಹೊತ್ತುಕೊಂಡು ನಿರಾಶ್ರಿತ ಕೇಂದ್ರಗಳಿಗೆ ಸಾಗಿಸಿದ್ದಾರೆ.

    ತುರ್ತು ಪರಿಸ್ಥಿತಿ ಅಥವಾ ಪ್ರವಾಹ ಪರಿಸ್ಥಿತಿ ಸಂದರ್ಭಗಳಲ್ಲಿ ಅಧಿಕಾರಿಗಳು ಹಾಗೂ ಸಚಿವರು ಯಾವ ರೀತಿ ಜನರ ಕಷ್ಟಕ್ಕೆ ಸ್ಪಂದಿಸುತ್ತಾರೆ ಎನ್ನುವುದು ಮುಖ್ಯ. ಇದೇ ರೀತಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭಗಳಲ್ಲಿ ಆಳುವ ಮಂದಿ ಹೇಗೆ ನಡ್ಕೋತಾರೆ ಅನ್ನೋದಕ್ಕೆ ಎರಡು ಉದಾಹರಣೆಗಳು ನಮ್ಮ ಮುಂದಿವೆ.

    ಕೇರಳದ ತ್ರಿಶೂರ್ ಜಿಲ್ಲೆಯ ನಿರಾಶ್ರಿತ ಕೇಂದ್ರದಲ್ಲಿ ನೆಲೆಸಿದ್ದ ನಿರಾಶ್ರಿತರಿಗೆ ಪರಿಹಾರ ಸಾಮಗ್ರಿಗಳು ಸಿಗದೇ ಜನ ನರಕ ಯಾತನೇ ಅನುಭವಿಸುತ್ತಿದ್ದರು. ಇದರ ಮಾಹಿತಿ ಪಡೆದ ರವೀಂದ್ರನಾಥ್‍ರವರು ಖುದ್ದು ಸ್ಥಳಕ್ಕೆ ಪರಿಹಾರ ಸಾಮಗ್ರಿಗಳ ಸಮೇತ ಭೇಟಿ ನೀಡಿದ್ದರು. ಈ ವೇಳೆ ಆಹಾರ ಸಾಮಾಗ್ರಿಗಳನ್ನು ತಮ್ಮ ಹೆಗಲ ಮೇಲೆಯೇ ಇಟ್ಟುಕೊಂಡು ನಿರಾಶ್ರಿತ ಕೇಂದ್ರಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ. ಜನರ ಕಷ್ಟಕ್ಕೆ ಸಚಿವರು ಹೆಗಲು ಕೊಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಸಚಿವರನ್ನು ಜನ ಬಾಹುಬಲಿಯಂದೇ ಕರೆಯುತ್ತಿದ್ದಾರೆ.

    ಆದರೆ ಇದಕ್ಕೆ ಭಿನ್ನವಾದ ಘಟನೆ ನಮ್ಮ ರಾಜ್ಯದಲ್ಲಿ ನಡೆದಿದ್ದು ದುರಾದೃಷ್ಟವೇ ಸರಿ, ಕಳೆದ ವಾರ ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣನವರು ಹಾಸನ ಜಿಲ್ಲೆಯ ರಾಮನಾಥಪುರ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿದ್ದಾಗ, ನಿರಾಶ್ರಿತರಿಗೆ ಪ್ರಾಣಿಗಳಿಗೆ ಎಸೆಯುವ ರೀತಿ ಬಿಸ್ಕೆಟ್ ಪ್ಯಾಕ್‍ಗಳನ್ನು ಎಸೆಯುವ ಮೂಲಕ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಎಂತಹುದೇ ಅನಿವಾರ್ಯ ಪರಿಸ್ಥಿತಿಯಲ್ಲಿದ್ದರು, ಆ ರೀತಿ ನಡೆದುಕೊಳ್ಳಬಾರದಿತ್ತೆಂದು ಸಾರ್ವಜನಿಕರು ಸಚಿವರ ನಡೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು.  ಇದನ್ನೂ ಓದಿ: ಅಧಿಕಾರದ ಮದದಲ್ಲಿ ಅಮಾನವೀಯ ಕೆಲಸ- ಕೊಡಗು ಸಂತ್ರಸ್ತರಿಗೆ ಬಿಸ್ಕೆಟ್ ಎಸೆದ ಸೂಪರ್ ಸಿಎಂ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಸಿಯೋಮಿಯ ಮೊಬೈಲ್ ಹೊರತು ಪಡಿಸಿ ಇತರೆ ಉತ್ಪನ್ನಗಳು ಮಾಹಿತಿ ಇಲ್ಲಿದೆ

    ಕ್ಸಿಯೋಮಿಯ ಮೊಬೈಲ್ ಹೊರತು ಪಡಿಸಿ ಇತರೆ ಉತ್ಪನ್ನಗಳು ಮಾಹಿತಿ ಇಲ್ಲಿದೆ

    ಬೆಂಗಳೂರು: ಕಡಿಮೆ ಅವಧಿಯಲ್ಲಿ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನ ಪಡೆದ ಕ್ಸಿಯೋಮಿ ಕೇವಲ ಸ್ಮಾರ್ಟ್ ಫೋನ್ ಅಲ್ಲದೇ ಇತರೆ ವಿನೂತನ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೀಗಾಗಿ ಇಲ್ಲಿ ಕ್ಸಿಯೋಮಿಯ ಕೆಲ ಉತ್ಪನ್ನಗಳ ಮಾಹಿತಿ ಮತ್ತು ಬೆಲೆಯನ್ನು ನೀಡಲಾಗಿದೆ.

    1. ಕ್ಸಿಯೋಮಿ ತೂಕದ ಯಂತ್ರ: ಸಿಲಿಕಾನ್‍ನಿಂದ ನಿರ್ಮಾಣವಾದ ಇದು, ಧೂಳು ಹಾಗೂ ತುಕ್ಕು ರಹಿತವಾಗಿದೆ. ಬೆಲೆ ರೂ.465.

    2. ಕ್ಸಿಯೋಮಿ ಎಲೆಕ್ಟ್ರಿಕ್ ಟೂತ್‍ಬ್ರಶ್: ಒಂದು ಬಾರಿ ಚಾರ್ಜ್ ಮಾಡಿದರೆ ಸುದೀರ್ಘ 60 ದಿನಗಳವರೆಗಿನ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಮೂರು ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಬೆಲೆ ರೂ.1999

    3. ಕ್ಸಿಯೋಮಿ ಟ್ರಾವೆಲ್ ಪಿಲ್ಲೋ: ಪ್ರಯಾಣದ ಸಂದರ್ಭದಲ್ಲಿ ಕುತ್ತಿಗೆಗೆ ಆರಾಮದಾಯಕ ನೀಡುವ ನೂತನ ಮಾದರಿಯ ಟ್ರಾವೆಲ್ ಪಿಲ್ಲೋ ಪರಿಚಯಿಸಿದೆ. ಬೆಲೆ ರೂ. 999

    4. ಕ್ಸಿಯೋಮಿ ಟೀಶರ್ಟ್: ಐ ಲವ್ ಎಂಐ ಹಾಗೂ ಎಂಐ ಎಂಬ ಬರಹವುಳ್ಳ ಪುರುಷ ಹಾಗೂ ಮಹಿಳಾ ಟಿ ಶರ್ಟ್ ಗಳನ್ನು ಕ್ಸಿಯೋಮಿ ಬಿಡುಗಡೆ ಮಾಡಿದೆ. ಇವು ಬಿಳಿ, ಕಪ್ಪು ಹಾಗೂ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಬೆಲೆ ರೂ.599

    5.ಕ್ಸಿಯೋಮಿ ರೋಲರ್ ಬಾಲ್ ಪೆನ್: ಸಿಲ್ವರ್ ಮತ್ತು ಗೋಲ್ಡ್ ಮಾದರಿಯ ಬಣ್ಣಗಳನ್ನು ಹೊಂದಿರುವ ರೋಲರ್ ಬಾಲ್ ಪೆನ್‍ಗಳಾಗಿದ್ದು ಪ್ರತ್ಯೇಕವಾಗಿ ರೀಫಿಲ್ ಖರೀದಿಸಬೇಕು. ಬೆಲೆ ರೂ.179

    6. ಕ್ಸಿಯೋಮಿ ಬ್ಯಾಕ್‍ಪ್ಯಾಕ್: 14″ ಲ್ಯಾಪ್‍ಟಾಪ್ ಹೊಂದುವ ವಾಟರ್ ಪ್ರೂಫ್ ಉತ್ಕೃಷ್ಟ ಬ್ಯಾಕ್‍ಪ್ಯಾಕ್ ಬಿಡುಗಡೆಗೊಳಿಸಿದ್ದು, ಬೆಲೆ ರೂ. 1,599

     

    7.ಕ್ಸಿಯೋಮಿ ರೈಸ್ ಕುಕ್ಕರ್: 3 ಲೀಟರ್ ಸಾಮರ್ಥ್ಯ ಹಾಗೂ ಸುಲಭವಾಗಿ ಸ್ವಚ್ಛಗೊಳಿಸುವ ರೈಸ್ ಕುಕ್ಕರ್ ಆಗಿದ್ದು, ಮೊಬೈಲ್ ಆಪ್ ಮುಖಾಂತರ ರೈಸ್ ತಯಾರಿಸಬಹುದಾಗಿದೆ. ಬೆಲೆ ರೂ. 5,900

    8.ಕ್ಸಿಯೋಮಿ ಸೂಟ್‍ಕೇಸ್: ಸಧೃಡ ನಿರ್ಮಾಣ ಹಾಗೂ ಗಡುಸುತನದಿಂದ ಕೂಡಿದ 29 ಕಿಲೋ ಸಾಮರ್ಥ್ಯದ ಟ್ರಾವೆಲರ್ ಸೂಟ್‍ಕೇಸ್ ಪರಿಚಯಿಸಿದೆ. ಬೆಲೆ ರೂ. 4,400

    9.ಕ್ಸಿಯೋಮಿ ಅಲಾರಂ ಕ್ಲಾಕ್: ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಹಾಗೂ 2600 ಎಂಎಎಚ್ ಬ್ಯಾಟರ್ ಸಾಮರ್ಥ್ಯದ ವಿನೂತನ ಅಲಾರಂ ಕ್ಲಾಕ್. ಬೆಲೆ ರೂ. 2,600

    10.ಕ್ಸಿಯೋಮಿ 4ಕೆ ಡ್ರೋನ್: 4ಕೆ ವಿಡಿಯೋ ರೆಕಾರ್ಡಿಂಗ್ ಜೊತೆಗೆ, 27 ನಿಮಿಷ ಹಾರಾಟ ಸಾಮರ್ಥ್ಯ ಹಾಗೂ ಜಿಪಿಎಸ್, ಮೊಬೈಲ್ ಕನೆಕ್ಟಿವಿಟಿ ಹೊಂದಿರುವ ಡ್ರೋನ್ ಗೆ ರೂ.21,000 ನಿಗದಿ ಮಾಡಿದೆ.

    11. ಕ್ಸಿಯೋಮಿ ಟಿಡಿಎಸ್ ವಾಟರ್ ಮೀಟರ್: ನೀರಿನ ಗುಣಮಟ್ಟವನ್ನು ಅಳೆಯುವ ಟಿಡಿಎಸ್ ಮೀಟರ್ ಅನ್ನು ಅಲ್ಯೂಮಿನಿಯಂ ಬಳಸಿ ತಯಾರಿಸಲಾಗಿದೆ. ಬೆಲೆ ರೂ. 664

    12.ಕ್ಸಿಯೋಮಿ ಎಲೆಕ್ಟ್ರಿಕ್ ಸ್ಕೂಟರ್: ಕಚೇರಿಗಳಲ್ಲಿ ಒಡಾಡಲು ಬಳಸುವ ನೂತನ ಸ್ಕೂಟರ್ ಪರಿಚಯಿಸಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 30 ಕಿ.ಮೀ. ಕ್ರಮಿಸಬಹುದಾಗಿದೆ. ಅಷ್ಟೇ ಅಲ್ಲದೇ ಸ್ಮಾರ್ಟ್ ಆ್ಯಪ್ ವ್ಯವಸ್ಥೆ ಹೊಂದಿದೆ. ಬೆಲೆ ರೂ.24,000(ಅಂದಾಜು)

    13.ಕ್ಸಿಯೋಮಿ ಸ್ಮಾರ್ಟ್ ಡಾಗ್ ಬಟನ್: ನಾಯಿಯ ಆರೋಗ್ಯವನ್ನು ತಿಳಿಯಲಿ ಫಿಟ್‍ನೆಸ್ ಬ್ಯಾಂಡ್ ಅನ್ನು ರೂ. 1,060 ಬೆಲೆಗೆ ಬಿಡುಗಡೆ ಮಾಡಿದೆ.

    14.ಕ್ಸಿಯೋಮಿ ಸ್ಮಾರ್ಟ್ ರೀಯರ್ ವೀವ್ ಮೀರರ್: ಕಾರ್‍ಗಳಲ್ಲಿ ಬಳಸುವ ರಿಯರ್ ವೀವ್ ಮಿರರ್ ನಲ್ಲಿ ಸ್ಮಾರ್ಟ್‍ಫೋನ್‍ಗಳಲ್ಲಿರುವ ತಂತ್ರಜ್ಞಾನವನ್ನು ಬಳಸಿದ್ದು, ಇದು ಮಿರರ್ ಹಾಗೂ ಮಾಹಿತಿಯ ಸಾಧನವಾಗಿಯೂ ಬಳಸಬಹುದಾಗಿದೆ. ಬೆಲೆ ರೂ. 12500 (ಅಂದಾಜು)

    ಕ್ಸಿಯೋಮಿ ವಸ್ತುಗಳು ಎಂಐ ಜಾಲತಾಣ ಹಾಗೂ ಅಮೇಜಾನ್ ಜಾಲತಾಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಸ್ಕೂಟರ್ ಹಾಗೂ ರೀಯರ್ ವೀವ್ ಮಿರರ್ ಸದ್ಯ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.