Tag: Production House

  • ನಿರ್ಮಾಣ ಸಂಸ್ಥೆ ಶುರು ಮಾಡಿದ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜು

    ನಿರ್ಮಾಣ ಸಂಸ್ಥೆ ಶುರು ಮಾಡಿದ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜು

    ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಲೋಕೇಶ್ ಕನಗರಾಜು (Lokesh Kanagaraj), ಇದೀಗ ತಮ್ಮ ಮತ್ತೊಂದು ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಈವರೆಗೂ ಬೇರೆ ಬೇರೆ ನಿರ್ಮಾಣ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಲೋಕೇಶ್, ಇದೀಗ ತಮ್ಮದೇ ಪ್ರೊಡಕ್ಷನ್ ಹೌಸ್ (Production House)ರು ಮಾಡಿದ್ದು,  ಝೀ ಸ್ಕ್ಯಾಡ್ ಎಂದು ಅದಕ್ಕೆ ಹೆಸರಿಟ್ಟಿದ್ದಾರೆ. ಈ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದಾಗಿ ಅವರು ತಿಳಿಸಿದ್ದಾರೆ.

    ಸದ್ಯ ಲೋಕೇಶ್ ಅವರು ರಜನಿಕಾಂತ್ ಸಿನಿಮಾದ ತಯಾರಿಯಲ್ಲಿದ್ದು, ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದೆ. ಇದು ಜನಿಕಾಂತ್ (Rajinikanth) ನಟನೆಯ 171ನೇ ಸಿನಿಮಾವಾಗಿದ್ದು, ಭಾರೀ ಭಾರೀ ಸುದ್ದಿಗಳು ಹೊರ ಬರುತ್ತಿವೆ. ಅದರಲ್ಲೂ ತಾರಾಗಣದ ಕುರಿತಂತೆ ರೋಚಕ ವಿಷಯಗಳು ಕೇಳುತ್ತಿವೆ. ಅವುಗಳು ನಿಜವೋ ಸುಳ್ಳೋ ಗೊತ್ತಿಲ್ಲ. ಒಟ್ಟಿನಲ್ಲಿ ಥ್ರಿಲ್ ಅನುಭವಿಸುತ್ತಿದ್ದಾರೆ ರಜನಿ ಫ್ಯಾನ್ಸ್. ಇದೀಗ ಮತ್ತೊಂದು ಹೊಸ ಸುದ್ದಿ ಹರಿದಾಡುತ್ತಿದ್ದು ರಜನಿ ಜೊತೆ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ (Mammootty) ಕೂಡ ಪಾತ್ರ ಮಾಡಲಿದ್ದಾರೆ.

    ‘ಜೈಲರ್’ (Jailer) ಸಿನಿಮಾದ ಭರ್ಜರಿ ಸಕ್ಸಸ್ ನಂತರ ರಜನಿಕಾಂತ್ ಸಿನಿಮಾ ಆಯ್ಕೆಯಲ್ಲಿ ಮತ್ತಷ್ಟು ಚ್ಯುಸಿಯಾಗಿದ್ದಾರೆ. ಹೀಗಿರುವಾಗ ತಮ್ಮ 171ನೇ ಚಿತ್ರಕ್ಕೆ ಲೋಕೇಶ್ ಕನಗರಾಜ್ ಜೊತೆ ಕೈಜೋಡಿಸಿದ್ದಾರೆ. ತಲೈವಾ ಮುಂದೆ ಅಬ್ಬರಿಸಲು ನಟ ರಾಘವ್ ಲಾರೆನ್ಸ್ ಕೂಡ ಸಜ್ಜಾಗಿದ್ದಾರೆ.

    ರಜನಿಕಾಂತ್ ಅವರ 171ನೇ ಚಿತ್ರದಲ್ಲಿ ವಿಲನ್‌ಗೂ ಕೂಡ ತೂಕವಾಗಿರುವಂತಹ ಪಾತ್ರವಿದ್ದು, ತಲೈವಾ ಮುಂದೆ ಅಬ್ಬರಿಸೋಕೆ ರಾಘವ್ ಸೂಕ್ತ ಎಂದೇನಿಸಿ ನಿರ್ದೇಶಕರು ಆಯ್ಕೆ ಮಾಡಿದ್ದಾರೆ. ಹಾಗಾಗಿ ರಾಘವ್ ವಿಶೇಷ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತಿವೆ ಮೂಲಗಳು.

    ರಜನಿಕಾಂತ್ 171ನೇ ಸಿನಿಮಾ, ಲೋಕೇಶ್ ಕನಗರಾಜ್ ಅವರ 6ನೇ ಸಿನಿಮಾ ಆಗಲಿದೆ. ರಜನೀಕಾಂತ್‌ಗೆ ನಿರ್ದೇಶಿಸಲಿರುವ ಮೊದಲ ಸಿನಿಮಾ ಇದಾಗಿದ್ದು, ರಾಘವ್ ಲಾರೆನ್ಸ್-ತಲೈವಾ ಮೊದಲ ಬಾರಿಗೆ ಜೊತೆಯಾಗಿ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಪ್ರಾರಂಭ ಆಗಲಿದೆ.

  • ಯಶ್ ಮುಂದಿನ ಚಿತ್ರಕ್ಕೆ ಅವರ ಮಗಳೇ ನಿರ್ಮಾಪಕಿ: ಐರಾ ಹೆಸರಲ್ಲಿ ಪ್ರೊಡಕ್ಷನ್ ಹೌಸ್

    ಯಶ್ ಮುಂದಿನ ಚಿತ್ರಕ್ಕೆ ಅವರ ಮಗಳೇ ನಿರ್ಮಾಪಕಿ: ಐರಾ ಹೆಸರಲ್ಲಿ ಪ್ರೊಡಕ್ಷನ್ ಹೌಸ್

    ರಾಕಿಂಗ್ ಸ್ಟಾರ್ ಯಶ್ ಅಡ್ಡದಿಂದ ಮತ್ತೊಂದು ಹೊಸ ಸುದ್ದಿ ಬಂದಿದ್ದು, ಅವರ ಮುಂದಿನ ಸಿನಿಮಾಗೆ ಮಗಳು ಐರಾನೇ ನಿರ್ಮಾಪಕಿ ಎನ್ನಲಾಗುತ್ತಿದೆ. ಐರಾ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಮಾಡಿ, ಮೊದಲ ಸಿನಿಮಾವಾಗಿ ಯಶ್ ಅವರೇ ನಟಿಸಲಿದ್ದಾರಂತೆ. ಈಗಾಗಲೇ ನಿರ್ಮಾಣ ಸಂಸ್ಥೆಗೆ ಬೇಕಿರುವ ಚಟುವಟಿಕೆಗಳು ಕೂಡ ನಡೆದಿವೆ ಎನ್ನುತ್ತವೆ ಅವರ ಆಪ್ತ ಮೂಲಗಳು.

    ಯಶ್ ಸಿನಿಮಾ ವಿಚಾರವಾಗಿ ತಿಂಗಳಿಗೊಂದು ಸುದ್ದಿ ಹೊರ ಬರುತ್ತಿದೆ. ಈ ಮೊದಲು ನರ್ತನ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ನಿರ್ದೇಶಕ ನರ್ತನ್ ಕೂಡ ಯಶ್ ಗಾಗಿ ಒಂದೂವರೆ ವರ್ಷದಿಂದ ಕಥೆ ಬರೆಯುವುದರಲ್ಲಿ ತೊಡಗಿಕೊಂಡಿದ್ದರು. ಆದರೆ, ಇತ್ತೀಚೆಗಷ್ಟೇ ಸದ್ಯ ಆ ಸಿನಿಮಾ ಆಗುವುದಿಲ್ಲ ಎನ್ನುವ ಸುದ್ದಿ ಸಿಕ್ಕಿದೆ. ನರ್ತನ್ ಕೂಡ ಮತ್ತೊಂದು ಸಿನಿಮಾ ತಯಾರಿಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಬ್ಯಾನ್ ಆಕ್ರೋಶದ ಬೆನ್ನಲ್ಲೇ ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ

    ನರ್ತನ್ ಸಿನಿಮಾ ಡ್ರಾಪ್ ಆಗುತ್ತಿದ್ದಂತೆಯೇ ಕೆವಿಎನ್ ಪ್ರೊಡಕ್ಷನ್ ನಲ್ಲಿ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತು. ಈ ಸುದ್ದಿಯ ಬೆನ್ನಲ್ಲೇ ಕೆಜಿಎಫ್ 3 ಸಿನಿಮಾ ವಿಷಯ ಹೊರ ಬಂತು. ಈಗ ಎಲ್ಲವನ್ನೂ ದಾಟಿಕೊಂಡು ಮತ್ತೊಂದು ಹೊಸ ಸುದ್ದಿ ಬಂದಿದ್ದು, ತಮ್ಮದೇ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.  ಅವರ ಹುಟ್ಟು ಹಬ್ಬದ ದಿನದಂದು ಈ ಸುದ್ದಿಯನ್ನು ಹೇಳಲಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]