Tag: production

  • ಚಿತ್ರ ನಿರ್ಮಾಣಕ್ಕೆ ಮುಂದಾದ ಬಾಲಿವುಡ್ ನಟಿ ಕೃತಿ ಸನೋನ್

    ಚಿತ್ರ ನಿರ್ಮಾಣಕ್ಕೆ ಮುಂದಾದ ಬಾಲಿವುಡ್ ನಟಿ ಕೃತಿ ಸನೋನ್

    ದಿಪುರುಷ (Adipurush) ಚಿತ್ರದ ನಾಯಕಿ ಕೃತಿ ಸನೋನ್ (Kriti Sanon), ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆದಿಪುರುಷ ಸಿನಿಮಾ ಬಿಡುಗಡೆಯ ಹೊತ್ತಲ್ಲಿ, ತಾವೇ ಒಂದು ಸಿನಿಮಾವನ್ನು ನಿರ್ಮಾಣ (Production) ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ, ಆ ಸಿನಿಮಾದಲ್ಲಿ ತಾವೇ ನಾಯಕಿಯಾಗಿ ನಟಿಸುತ್ತೇನೆ ಎಂದೂ ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ ಯಾರದೇ ಆಗಿರಲಿ, ಅಲ್ಲಿ ನಾಯಕಿಯರಿಗೆ ಸಿಗಬೇಕಾದ ಅವಕಾಶ ಸಿಗುವುದಿಲ್ಲ ಎಂದು ಈ ಹಿಂದೆ ಕೃತಿ ಹೇಳಿಕೊಂಡಿದ್ದರು. ನಾಯಕನಷ್ಟೇ ತಮಗೂ ನ್ಯಾಯ ಸಿಗಬೇಕು ಎಂದೂ ಅವರು ಮಾತನಾಡಿದ್ದರು. ಈ ಹೊತ್ತಿನಲ್ಲೇ ಸಿನಿಮಾ ನಿರ್ಮಾಣದ ಘೋಷಣೆ ಮಾಡಿದ್ದು, ತಮ್ಮಿಷ್ಟದಂತೆ ಚಿತ್ರವನ್ನು ಅವರು ತಯಾರಿಸಲಿದ್ದಾರೆ. ಇದನ್ನೂ ಓದಿ:ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು

    ಸಿನಿಮಾ ರಂಗದಲ್ಲಿ ಮಹಿಳಾ ಪಾತ್ರಗಳಿಗಿಂತ ಪುರುಷ ಪಾತ್ರಗಳೇ ತೆರೆಯ ಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತವೆ. ನಾಯಕಿಯರಿಗೆ ಹೆಚ್ಚು ಪ್ರಾಶಸ್ತ್ಯ ಇರುವುದಿಲ್ಲ. ಸಿಕ್ಕಿರುವ ಕಡಿಮೆ ಅವಧಿಯಲ್ಲೇ ನಮ್ಮ ಪ್ರತಿಭೆಯನ್ನು ತೋರಿಸುವಂತಹ ಅನಿವಾರ್ಯತೆ ಇರುತ್ತದೆ. ನನಗೆ ಈವರೆಗೂ ಸಿಕ್ಕಿರುವ ಪಾತ್ರಗಳು ಅಂಥದ್ದೇ ಆಗಿವೆ. ಅದರಲ್ಲಿಯೇ ನಾನು ತೃಪ್ತಿ ಪಟ್ಟಿದ್ದೇನೆ ಎಂದಿದ್ದರು ಕೃತಿ ಸನೋನ್.

    ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, “ಯಾವುದೇ ಸಿನಿಮಾ ರಂಗದಲ್ಲಿ ನಾಯಕ ಮತ್ತು ನಾಯಕಿಗೆ ಸಮಾನವಾಗಿ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲು ಅವಕಾಶ ಸಿಗುವುದು ಕಡಿಮೆ. ಕಥೆಯಲ್ಲಿ ಮಹಿಳೆಗೆ ಹೆಚ್ಚಿನ ಮಹತ್ವವಿದ್ದು ಪುರುಷನಿಗೆ ಕಡಿಮೆ ಇದ್ದರೆ, ಯಾವ ನಟನೂ ಅಂತಹ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಈ ಮನಸ್ಥಿತಿ ಚಿತ್ರರಂಗದಲ್ಲಿ ಬದಲಾಗಬೇಕು ಎಂದು ನಾನು ಬಯಸುತ್ತೇನೆ. ಕೆಲವರು ಇದಕ್ಕೆ ಅಪವಾದವಾಗಿಯೂ ಇರುತ್ತಾರೆ ಎಂದು ಅವರು ಮಾತನಾಡಿದ್ದರು.

    ಮುಂದುವರೆದು ಮಾತನಾಡಿದ್ದ ಕೃತಿ, ‘ಬರೇಲಿ ಕಿ ಬರ್ಫಿ’ ಚಿತ್ರದ ನಂತರ ನಾನು ಅನೇಕ ಕಥೆಗಳನ್ನು ಕೇಳಿದೆ. ನನ್ನ ಬಳಿ ಬಂದ ಸಿನಿಮಾಗಳಲ್ಲಿ ಶೇ.99ರಷ್ಟು ಸಿನಿಮಾಗಳಲ್ಲಿ ನನ್ನದು ಸಣ್ಣ ಪಾತ್ರವೇ ಆಗಿರುತ್ತಿತ್ತು. ಕೆಲವನ್ನು ಒಪ್ಪಿದೆ, ಕೆಲವನ್ನು ಬಿಟ್ಟೆ. ಮಾಡಿದ ಪಾತ್ರಗಳಿಂದಾಗಿ ಈಗ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಅದು ನನಗೆ ಖುಷಿ ತಂದಿದೆ ಎಂದಿರುವ ಕೃತಿ. ಈ ಎಲ್ಲ ನೋವುಗಳನ್ನು ಮರೆಯಲು ತಾವೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

  • ಮಲ್ಟಿಸ್ಟಾರ್ ಸಿನಿಮಾಗೆ ಹಣ ಹೂಡಲಿದ್ದಾರೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ

    ಮಲ್ಟಿಸ್ಟಾರ್ ಸಿನಿಮಾಗೆ ಹಣ ಹೂಡಲಿದ್ದಾರೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ

    ಭಾರತದ ಕ್ರಿಕೆಟ್ ತಂಡ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಈಗಾಗಲೇ ಹಲವು ಉದ್ಯಮಗಳಲ್ಲಿ ಹಣ ಹೂಡಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದೀಗ ಸಿನಿಮಾ (Cinema) ಕ್ಷೇತ್ರಕ್ಕೂ ಅವರು ಕಾಲಿಟ್ಟಿದ್ದು, ದಕ್ಷಿಣದ ಸಿನಿಮಾಗಳತ್ತ ಒಲವು ತೋರಿದ್ದಾರೆ. ಈಗಾಗಲೇ ತಮ್ಮದೇ ಪ್ರೊಡಕ್ಷನ್ (Production) ಹೌಸ್ ಶುರು ಮಾಡಿರುವ ಧೋನಿ, ಮೊದಲು ತಮಿಳು ಚಿತ್ರಕ್ಕೆ ಹಣ ಹಾಕಲಿದ್ದಾರಂತೆ.

    ಧೋನಿ ಸಿನಿಮಾ ರಂಗಕ್ಕೆ ಬರುತ್ತಾರೆ ಎನ್ನುವುದು ಹಲವು ದಿನಗಳಿಂದ ಕೇಳಿ ಬರುತ್ತಿರುವ ಸುದ್ದಿ. ಇದೀಗ ಆ ಸುದ್ದಿ ಪಕ್ಕಾ ಆಗಿದ್ದು, ತಮ್ಮ ಚೊಚ್ಚಲು ನಿರ್ಮಾಣದ ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರು ಇರಲಿದ್ದಾರೆ ಎಂದು ಗೊತ್ತಾಗಿದೆ. ಈಗಾಗಲೇ ದಕ್ಷಿಣದಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡಿರುವ ಇಬ್ಬರು ಕಲಾವಿದರ ಜೊತೆ ಧೋನಿ ಮಾತನಾಡಿದ್ದು, ಅವರ ಹೆಸರನ್ನು ಮಾತ್ರ ಬಹಿರಂಗಗೊಳಿಸಿಲ್ಲ. ಇದನ್ನೂ ಓದಿ:ಮೊನ್ನೆ ತುಟಿ, ಈಗ ಮಚ್ಚೆ ನೋಡಿ ಭವಿಷ್ಯ ಹೇಳಿದ ಆರ್ಯವರ್ಧನ್ ಗುರೂಜಿ

    ಈ ಹಿಂದೆ ನಯನತಾರಾ ಸಿನಿಮಾಗಾಗಿ ಧೋನಿ ಹಣ ಹೂಡಲಿದ್ದಾರೆ ಎಂದು ಹೇಳಲಾಗಿತ್ತು. ಅದೊಂದು ಮಹಿಳಾ ಪ್ರಧಾನ ಸಿನಿಮಾ ಎನ್ನುವ ಮಾಹಿತಿಯೂ ಇತ್ತು. ಆದರೆ, ಆ ಸಿನಿಮಾ ಡ್ರಾಪ್ ಆದಂತೆ ಕಾಣುತ್ತಿದೆ. ಅಥವಾ ಅದು ಗಾಸಿಪ್ ಆಗಿರಬಹುದು.  ಇದೀಗ ಪಕ್ಕಾ ಸುದ್ದಿ ಬಂದಿದ್ದು, ಮಲ್ಟಿಸ್ಟಾರ್ ಸಿನಿಮಾ ಮೂಲಕ ಧೋನಿ ನಿರ್ಮಾಪಕರಾಗುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿಯೇ ಕೆಲವು ಮಾಹಿತಿಗಳನ್ನು ಅವರು ಹಂಚಿಕೊಳ್ಳಲಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ನಿರ್ಮಾಪಕಿ: ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಆಪಲ್ ಬಾಕ್ಸ್ ಗಿಫ್ಟ್

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ನಿರ್ಮಾಪಕಿ: ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಆಪಲ್ ಬಾಕ್ಸ್ ಗಿಫ್ಟ್

    ಗಣೇಶ ಹಬ್ಬದಂದು ಬುಧವಾರ ಬೆಳಗ್ಗೆ 11.15ಕ್ಕೆ ಸ್ವೀಟ್ ನ್ಯೂಸ್ ಕೊಡುವುದಾಗಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕುತೂಹಲ ಮೂಡಿಸಿದ್ದರು. ಸಿಹಿ ಸುದ್ದಿ ಯಾವುದಿರಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದರು. ಕೊನೆಗೂ ರಮ್ಯಾ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಈವರೆಗೂ ಬೇರೆಯವರ ಬ್ಯಾನರ್ ನಲ್ಲಿ ನಟಿಸುತ್ತಿದ್ದ ರಮ್ಯಾ, ಸ್ವತಃ ತಮ್ಮದೇ ಬ್ಯಾನರ್ ಶುರು ಮಾಡಿ ಅಚ್ಚರಿ ಮೂಡಿಸಿದ್ದಾರೆ.

    ರಮ್ಯಾ ಕೊಡುವ ಸ್ವೀಟ್ ನ್ಯೂಸ್ ಯಾವುದು ಎನ್ನುವುದರ ಸುತ್ತ ಹಲವು ವಿಶ್ಲೇಷಣೆಗಳು ನಡೆದಿದ್ದವು. ನಟಿಯಾಗಿ ಅವರು ವಾಪಸ್ಸಾಗುತ್ತಿದ್ದಾರಾ? ಅಥವಾ ನಿರ್ಮಾಪಕಿಯಾಗಿ ನಿರ್ಮಾಣ ಸಂಸ್ಥೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರಾ ಎನ್ನುವ ಕುತೂಹಲ ಮೂಡಿಸಿತ್ತು. ಕೊನೆಗೂ ರಮ್ಯಾ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ತಮ್ಮದೇ ಆಪಲ್ ಬಾಕ್ಸ್ ಸ್ಟುಡಿಯೋಸ್ ಸಂಸ್ಥೆಯನ್ನು ಶುರು ಮಾಡಿದ್ದು, ಈ ಸಂಸ್ಥೆಯ ಮೂಲಕ ಸಿನಿಮಾ ಮಾಡಲಿದ್ದಾರೆ. ಈ ಸಂಸ್ಥೆಯ ಮೂಲಕ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಈ ಹಿಂದೆ ರಾಜ್ ಬಿ ಶೆಟ್ಟಿ ಅವರ ಸಿನಿಮಾದ ಮೂಲಕ ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ, ಇಂಥದ್ದೊಂದು ಮಾತುಕತೆ ನಡೆದೇ ಇಲ್ಲ ಎಂದೂ ಹೇಳಲಾಗುತ್ತಿದೆ. ರಾಜ್ ಬಿ ಶೆಟ್ಟಿ ಅವರು ರಮ್ಯಾಗಾಗಿ ಯಾವುದೇ ಸಿನಿಮಾ ಮಾಡುತ್ತಿಲ್ಲ ಎನ್ನುವ ಮಾಹಿತಿಯೂ ಇದೆ. ಹಾಗಾಗಿ ರಮ್ಯಾ ಬ್ಯಾನರ್ ನಲ್ಲಿ ಬರುವ ಮೊದಲ ಸಿನಿಮಾ ಯಾವುದು ಎನ್ನುವ ಕುತೂಹಲ ಮೂಡಿದೆ.

    Live Tv
    [brid partner=56869869 player=32851 video=960834 autoplay=true]

  • ನಾಳೆ ರಮ್ಯಾ ಕೊಡುವ ಗುಡ್ ನ್ಯೂಸ್ ಏನು? ನಿರ್ಮಾಣ ಸಂಸ್ಥೆ ಶುರು ಮಾಡ್ತಿದ್ದಾರಂತೆ ಸ್ಯಾಂಡಲ್ ವುಡ್ ಕ್ವೀನ್

    ನಾಳೆ ರಮ್ಯಾ ಕೊಡುವ ಗುಡ್ ನ್ಯೂಸ್ ಏನು? ನಿರ್ಮಾಣ ಸಂಸ್ಥೆ ಶುರು ಮಾಡ್ತಿದ್ದಾರಂತೆ ಸ್ಯಾಂಡಲ್ ವುಡ್ ಕ್ವೀನ್

    ನಾಳೆ ಬೆಳಗ್ಗೆ 11.30ಕ್ಕೆ ಸ್ವೀಟ್ ನ್ಯೂಸ್ ಕೊಡುವುದಾಗಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಸ್ವೀಟ್ ನ್ಯೂಸ್ ಯಾವುದು ಎಂಬುದರ ಕುರಿತು ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸಖತ್ ಚರ್ಚೆ ನಡೆಯುತ್ತಿದ್ದು, ರಮ್ಯಾ ನಡೆ ಭಾರೀ ಕುತೂಹಲವನ್ನಂತೂ ಮೂಡಿಸಿದೆ.

    ರಮ್ಯಾ ಕೊಡುವ ಸ್ವೀಟ್ ನ್ಯೂಸ್ ಯಾವುದು ಎನ್ನುವುದರ ಸುತ್ತ ಹಲವು ವಿಶ್ಲೇಷಣೆಗಳು ನಡೆದಿದ್ದು, ನಟಿಯಾಗಿ ಅವರು ವಾಪಸ್ಸಾಗುತ್ತಿದ್ದಾರಾ? ಅಥವಾ ನಿರ್ಮಾಪಕಿಯಾಗಿ ನಿರ್ಮಾಣ ಸಂಸ್ಥೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರಾ ಎನ್ನುವ ಕುತೂಹಲ ಮೂಡಿದೆ. ರಮ್ಯಾ ಅವರ ಆಪ್ತರ ಪ್ರಕಾರ ನಾಳೆ ರಮ್ಯಾ ಅವರು ತಮ್ಮ ನಿರ್ಮಾಣ ಸಂಸ್ಥೆಯನ್ನು ಪರಿಚಯಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಈ ಹಿಂದೆ ರಾಜ್ ಬಿ ಶೆಟ್ಟಿ ಅವರ ಸಿನಿಮಾದ ಮೂಲಕ ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ, ಇಂಥದ್ದೊಂದು ಮಾತುಕತೆ ನಡೆದೇ ಇಲ್ಲ ಎಂದೂ ಹೇಳಲಾಗುತ್ತಿದೆ. ರಾಜ್ ಬಿ ಶೆಟ್ಟಿ ಅವರು ರಮ್ಯಾಗಾಗಿ ಯಾವುದೇ ಸಿನಿಮಾ ಮಾಡುತ್ತಿಲ್ಲ ಎನ್ನುವ ಮಾಹಿತಿಯೂ ಇದೆ. ಹಾಗಾಗಿ ರಮ್ಯಾ ಬ್ಯಾನರ್ ನಲ್ಲಿ ಬರುವ ಮೊದಲ ಸಿನಿಮಾ ಯಾವುದು ಎನ್ನುವ ಕುತೂಹಲ ಮೂಡಿದೆ.

    Live Tv
    [brid partner=56869869 player=32851 video=960834 autoplay=true]

  • ಚಳಿಗಾಲದಲ್ಲೂ ಹೆಚ್ಚಾಯ್ತು ಬೇಡಿಕೆ – ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಮೇಲೆ ಒತ್ತಡ

    ಚಳಿಗಾಲದಲ್ಲೂ ಹೆಚ್ಚಾಯ್ತು ಬೇಡಿಕೆ – ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಮೇಲೆ ಒತ್ತಡ

    ರಾಯಚೂರು: ಸಾಮಾನ್ಯವಾಗಿ ಚಳಿಗಾಲದಲ್ಲಿ ವಿದ್ಯುತ್ ಬೇಡಿಕೆ ಕಮ್ಮಿ ಇರುತ್ತದೆ. ಆದರೆ ಈ ವರ್ಷ ಬೇಡಿಕೆ ಅಧಿಕವಾಗಿದೆ. ಹೀಗಾಗಿ ರಾಜ್ಯದ ಶಾಖೊತ್ಪನ್ನ ವಿದ್ಯುತ್ ಕೇಂದ್ರಗಳ ಮೇಲೆ ಹೆಚ್ಚು ವಿದ್ಯುತ್ ಉತ್ಪಾದನೆಯ ಒತ್ತಡ ಬಿದ್ದಿದೆ.

    ರಾಜ್ಯಕ್ಕೆ ಶೇಕಡಾ 40 ರಷ್ಟು ವಿದ್ಯುತ್ ನೀಡುವ ಪ್ರಮುಖ ಶಾಖೋತ್ಪನ್ನ ವಿದ್ಯುತ್ ಕೇಂದ್ರ ರಾಯಚೂರಿನ ಆರ್.ಟಿ.ಪಿ.ಎಸ್ (ರಾಯಚೂರು ಥರ್ಮಲ್ ಪವರ್ ಸ್ಟೇಷನ್) ಮೇಲೆ ಹೆಚ್ಚಿನ ಒತ್ತಡವಿದೆ. ಹೀಗಾಗಿ ಆರ್.ಟಿ.ಪಿ.ಎಸ್ ನ 8 ಘಟಕಗಳಲ್ಲಿ 7 ಘಟಕಗಳು ನಿರಂತರವಾಗಿ ದಾಖಲೆ ಪ್ರಮಾಣದ ವಿದ್ಯುತ್ ಉತ್ಪಾದನೆಗೆ ಮುಂದಾಗಿವೆ. ಕೃಷಿ, ನೀರಾವರಿ ಪಂಪ್ ಸೆಟ್ ಸೇರಿದಂತೆ ಇನ್ನಿತರ ಕಾರಣಗಳಿಗೆ ಹೆಚ್ಚು ವಿದ್ಯುತ್ ಬಳಕೆಯಿರುವುದರಿಂದ ಬೇಡಿಕೆಯೂ ಹೆಚ್ಚಾಗಿದೆ. ಹೀಗಾಗಿ ಮಳೆಗಾಲ, ಚಳಿಗಾಲದಲ್ಲಿ ವಾರ್ಷಿಕ ನಿರ್ವಹಣೆಗೆ ಒಳಪಡಬೇಕಾದ ಘಟಕಗಳು ನಿರಂತರವಾಗಿ ವಿದ್ಯುತ್ ಉತ್ಪಾದಿಸುತ್ತಿವೆ.

    ಆರ್.ಟಿ.ಪಿ.ಎಸ್ ನ 8 ಘಟಕಗಳಿಗೆ ಒಟ್ಟು 1,ಸ720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮಥ್ರ್ಯವಿದ್ದು, ಈಗ 7 ಘಟಕಗಳಿಂದ 1,083 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. 1,700 ಮೆಗಾ ವ್ಯಾಟ್ ಸಾಮಥ್ರ್ಯದ ಬಳ್ಳಾರಿ ಬಿಟಿಪಿಎಸ್ ನಲ್ಲಿ 453 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

    ರಾಜ್ಯದಲ್ಲಿ ಒಟ್ಟು 8,323 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಕಳೆದ ಎರಡು ದಿನಗಳ ಹಿಂದೆ 10,121 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಈ ಚಳಿಗಾಲದಲ್ಲಿ ಬೇಡಿಕೆ ಕಡಿಮೆ ಇರುತ್ತದೆ ಎನ್ನಲಾಗಿತ್ತು. ಆದರೆ ಚಳಿಗಾಲದಲ್ಲಿಯೇ ಅಧಿಕ ಬೇಡಿಕೆ ಇದೆ. ರಾಜ್ಯದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೆ ಸದ್ಯ ಕಲ್ಲಿದ್ದಲು ಕೊರತೆಯಿಲ್ಲದ ಕಾರಣ ನಿರಂತರ ವಿದ್ಯುತ್ ಉತ್ಪಾದನೆ ಯಾವ ತೊಡಕಿಲ್ಲದೆ ನಡೆದಿದೆ.

  • 100 ಕೋಟಿ ರೂ. ವೆಚ್ಚದಲ್ಲಿ ಪತಿಗಾಗಿ ಪ್ರಿಯಾ ಸುದೀಪ್ ಚಿತ್ರ ನಿರ್ಮಾಣ!

    100 ಕೋಟಿ ರೂ. ವೆಚ್ಚದಲ್ಲಿ ಪತಿಗಾಗಿ ಪ್ರಿಯಾ ಸುದೀಪ್ ಚಿತ್ರ ನಿರ್ಮಾಣ!

    ಬೆಂಗಳೂರು: ಸುದೀಪ್ ಪತ್ನಿ ಪ್ರಿಯಾ ಪತಿಗಾಗಿ 100 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನುವ ವಿಚಾರ ಈಗ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಸುದೀಪ್ ಈ ಮೊದಲು ‘ವೀರ ಮದಕರಿ’ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಈಗ ಮದಕರಿ ನಾಯಕನ ಕತೆಯನ್ನಾಧರಿಸಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರದುರ್ಗದ ಮದಕರಿ ನಾಯಕನ ಜೀವನಾಧಾರಿತ ಸಿನಿಮಾವನ್ನು ಮಾಡಲು ಹೊರಟಿದ್ದು ಈ ಚಿತ್ರವನ್ನು 100 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಸಿದ್ಧತೆ ನಡೆದಿದೆ.

    2009ರಲ್ಲಿ ವೀರ ಮದಕರಿ ಚಿತ್ರದಲ್ಲಿ ನಟಿಸಿದ ಸುದೀಪ್ ಅವರಿಗೆ ವಾಲ್ಮೀಕಿ ಟ್ರಸ್ಟ್ ಕಡೆಯವರು ಕಿಚ್ಚನಿಗೆ ಚಿತ್ರದುರ್ಗದ ಪಾಳೇಗಾರನ ಬಗ್ಗೆ ಸಿನಿಮಾ ಮಾಡುವಂತೆ ಮನವಿ ಮಾಡಿಕೊಂಡಿತ್ತು. ಹಾಗಾಗಿ ಕಳೆದ ಕೆಲ ವರ್ಷದಿಂದ ಸುದೀಪ್ ಈ ಬಗ್ಗೆ ನಿರಂತರವಾಗಿ ಚರ್ಚೆ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.

    ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗುವಿನಲ್ಲೂ ಚಿತ್ರ ತರಲು ಪ್ರಿಯಾ ಸುದೀಪ್ ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸುದೀಪ್ ಅವರ ಮದಕರಿ ಚಿತ್ರ ಸ್ಕ್ರಿಪ್ಟಿಂಗ್ ಹಂತದಲ್ಲಿದೆ. ಅಲ್ಲದೇ ಈ ಚಿತ್ರ ಸೆಟ್ಟೇರುವುದಕ್ಕೆ ಇನ್ನೊಂದು ವರ್ಷ ಬೇಕಾಗುತ್ತದೆ. ಅಲ್ಲದೇ ವಾಲ್ಮಿಕಿ ಮಠದ ಸ್ವಾಮೀಜಿ ಅವರು ಈ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಕತೆ ಬರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಸುದೀಪ್ ಅಭಿನಯದ ಮದಕರಿ ಚಿತ್ರಕ್ಕೆ `ದುರ್ಗದ ಹುಲಿ’ ಅಥವಾ `ನಾಯಕ’ ಹೆಸರನ್ನು ಇಡಲು ಚರ್ಚೆ ನಡೆದಿದ್ದು, `ದುರ್ಗದ ಹುಲಿ’ ಟೈಟಲ್ ಅಂತಿಮಗೊಳ್ಳುವ ಸಾಧ್ಯತೆಯಿದೆ. ಕೆಲ ದಿನಗಳಿಂದ ಈ ಚಿತ್ರದ ಕೆಲಸ ಆರಂಭಗೊಂಡಿದ್ದು, ವಿಶೇಷವಾಗಿ ಸುದೀಪ್ ಅವರೇ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ

    ಇತ್ತ ರಾಕ್‍ಲೈನ್ ವೆಂಕಟೇಶ್ ಅವರು ಈಗಾಗಲೇ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದು, ದರ್ಶನ್ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈ ಚಿತ್ರದ ಘೋಷಣೆಯಾದ ಬೆನ್ನಲ್ಲೇ ಸುದೀಪ್ ಅವರು ಮದಕರಿ ನಾಯಕನ ಕಥೆ ಇರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಶ್ವದಲ್ಲೇ ನಾಲ್ಕನೇ ಕೇಂದ್ರ -ಹೊಸ ದಾಖಲೆ ಬರೆದ ಕೈಗಾ ಅಣು ವಿದ್ಯುತ್ ಸ್ಥಾವರ

    ವಿಶ್ವದಲ್ಲೇ ನಾಲ್ಕನೇ ಕೇಂದ್ರ -ಹೊಸ ದಾಖಲೆ ಬರೆದ ಕೈಗಾ ಅಣು ವಿದ್ಯುತ್ ಸ್ಥಾವರ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರವು 766 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದನೆ ನಡೆಸುವ ಮೂಲಕ ದೇಶದಲ್ಲೇ ಮೊದಲ ನಿರಂತರ ವಿದ್ಯುತ್ ಉತ್ಪಾದನಾ ಘಟಕವಾಗಿದ್ದು, ವಿಶ್ವದಲ್ಲೇ ನಾಲ್ಕನೇ ಕೇಂದ್ರ ಎಂಬ ಹೊಸ ದಾಖಲೆ ನಿರ್ಮಿಸಿದೆ.

    ಕೈಗಾದಲ್ಲಿ ಸೆಪ್ಟೆಂಬರ್ 2000 ನೇ ಇಸವಿಯಲ್ಲಿ ಮೊದಲ ಯೂನಿಟ್ ಪ್ರಾರಂಭವಾಗಿದ್ದು, ಪ್ರಸಕ್ತ ನಾಲ್ಕು ಯೂನಿಟ್ ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಯೂನಿಟ್ 220 ಮೆಗಾವ್ಯಾಟ್ ಉತ್ಪಾದಿಸುವ ಸಾಮರ್ಥ್ಯ ವಿದ್ದು, 2016 ರಿಂದ 4019 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದೆ. 2000 ನೇ ಇಸವಿಯಲ್ಲಿ ಪ್ರಾರಂಭವಾದ ಮೊದಲ ಯೂನಿಟ್, ಈವರೆಗೆ 25 ಸಾವಿರ ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿದೆ.

    ಯೂನಿಟ್ 2,3 ಸತತ 464 ದಿನ, 4ನೇ ಯೂನಿಟ್ 525 ದಿನಗಳ ಕಾಲ ಕಾರ್ಯನಿರ್ವಹಿಸಿವೆ. ಮೊದಲ ಯೂನಿಟ್ 2016ರ ಮೇ 13 ರಂದು ಬೆಳಗ್ಗೆ 9:20 ಕ್ಕೆ ವಿದ್ಯುತ್ ಉತ್ಪಾದನೆಗೆ ಪ್ರಾರಂಭಿಸಿದ್ದು, ಅಂದಿನಿಂದ ನಿರಂತರವಾಗಿ ಚಾಲನೆಯಿದೆ. ಈ ಮೂಲಕ ರಾಜಸ್ಥಾನದ ರಾವತ್ ಭಾಟದಲ್ಲಿರುವ ಅಣು ವಿದ್ಯುತ್ ಕೇಂದ್ರದ ದಾಖಲೆಯನ್ನು ಹಿಂದಿಕ್ಕಿದೆ. ರಾವತ್ ಭಾಟದ ಕೇಂದ್ರದ 5ನೇ ಘಟಕವು 2012ರ ಆಗಸ್ಟ್ 2 ರಿಂದ 2014 ರ ಸೆಪ್ಬೆಂಬರ್ 17ರವರೆಗೆ ಒಟ್ಟು 765 ದಿನ ನಿರಂತರ ಚಾಲನೆಯಲ್ಲಿತ್ತು.

    ದೇಶದಲ್ಲಿ ಅಣು ಶಕ್ತಿ ಆಧರಿಸಿ ಅತೀ ಹೆಚ್ಚು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಮೂರನೇ ದೊಡ್ಡ ಕೇಂದ್ರ ಎಂಬ ಹೆಗ್ಗಳಿಕೆಗೆ ಕೈಗಾ ಪಾತ್ರವಾಗಿದೆ. ಈ ಕೇಂದ್ರವನ್ನು ದಕ್ಷಿಣ ಪವರ್ ಗ್ರಿಡ್ ಗೆ ಸಂಪರ್ಕಿಸಲಾಗಿದ್ದು, ನಮ್ಮ ರಾಜ್ಯ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಹಾಗೂ ಪುದುಚೇರಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.

    767 ದಿನಗಳ ಕಾಲ ನಿರಂತರವಾಗಿ ವಿದ್ಯುತ್ ಉತ್ಪಾದನೆಯನ್ನ ಮಾಡಿದ ಮೊದಲ ಘಟಕ ಎನ್ನುವ ಹೆಗ್ಗಳಿಕೆ ಪಡೆದಿದೆ. ಪ್ರಪಂಚದಲ್ಲಿಯೇ ನಾಲ್ಕನೇ ಘಟಕ ಅನ್ನುವ ದಾಖಲೆಯನ್ನ ಸಹ ಇದೀಗ ಕೈಗಾ ಪಡೆದಿದೆ. ಇಂಗ್ಲೆಂಡ್ ನ ಹೇಶಮ್ ಸ್ಥಾವರದಲ್ಲಿ 940 ದಿನಗಳ ಕಾಲ ವಿದ್ಯುತ್ ಉತ್ಪಾದಿಸಿ ಮೊದಲ ಸ್ಥಾನದಲ್ಲಿ ಇದ್ದರೆ, ಕೆನಡಾದ ಒಂಟಾರಿಯಾದಲ್ಲಿರುವ ಪಿಕರಿಕ್ ಸ್ಥಾವರದಲ್ಲಿ 894 ದಿನ ಉತ್ಪಾದಿಸಿ ಎರಡನೇ ಸ್ಥಾನ ಪಡೆದಿತ್ತು. ಸ್ಕಾಟ್ಲೆಂಡ್ ನ ಟೋರ್ನೆಸ್ ಸ್ಥಾವರದಲ್ಲಿ 825 ದಿನಗಳ ಕಾಲ ವಿದ್ಯುತ್ ಉತ್ಪಾದನೆ ಮಾಡಿ ಮೂರನೇ ಸ್ಥಾನದಲ್ಲಿತ್ತು. ಇದೀಗ ನಾಲ್ಕನೇ ಸ್ಥಾನದಲ್ಲಿ ಕೈಗಾ ಸೇರ್ಪಡೆಯಾಗಿದೆ. ಇನ್ನು ಒಟ್ಟು ಸುಮಾರು 1530 ಸಿಬ್ಬಂದಿಗಳು ಈ ಸಾಧನೆಯಲ್ಲಿ ಕಾರ್ಯನಿರ್ವಹಿಸಿದ್ದು, ಇದು ಇಡೀ ದೇಶಕ್ಕೆ ಹೆಮ್ಮೆಯನ್ನ ತಂದಿದೆ ಎಂದು ಕೈಗಾ ಅಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೈಗಾದಲ್ಲಿ ನಾಲ್ಕು ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆಯನ್ನ ಮಾಡಲಾಗುತ್ತಿದ್ದು, ಮೊದಲ ಸ್ಥಾವರ 767 ದಿನಗಳ ಕಾಲ ವಿದ್ಯುತ್ ಉತ್ಪಾದನೆ ಮಾಡಿದರೆ, ಎರಡನೇ ಸ್ಥಾವರ, 464 ದಿನ, ಮೂರನೇ ಸ್ಥಾವರ 467ದಿನ ಹಾಗೂ ನಾಲ್ಕನೇ ಸ್ಥಾವರ 550 ದಿನಗಳಿಂದ ನಿರಂತರವಾಗಿ ವಿದ್ಯುತ್ ಉತ್ಪಾದನೆಯನ್ನ ಮಾಡಲಾಗುತ್ತಿದೆ. ಪ್ರತಿ ಘಟಕದಲ್ಲಿ 220 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯನ್ನ ಮಾಡುತ್ತಿದ್ದು, ದೇಶದಲ್ಲಿಯೇ ಪ್ರಮುಖ ಘಟಕದ ಸಾಲಿಗೆ ಕೈಗಾ ಅಣು ವಿದ್ಯುತ್ ಸ್ಥಾವರ ಸೇರ್ಪಡೆಯಾಗಿದೆ.

  • ಜೂನ್‍ನಲ್ಲಿ ಬೆಂಗಳೂರಿನ ಪೀಣ್ಯದಲ್ಲಿ ಐಫೋನ್ ಉತ್ಪಾದನೆ ಆರಂಭ!

    ಬೆಂಗಳೂರು: ಆಪಲ್ ಕಂಪೆನಿಯ ಐಫೋನ್ ಉತ್ಪಾದನಾ ಘಟಕ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲವೇ ತಿಂಗಳಿನಲ್ಲಿ ಆರಂಭವಾಗಲಿದೆ. ರಾಜ್ಯದಲ್ಲಿ ಘಟಕ ಸ್ಥಾಪನೆ ನಡೆಸುವಂತೆ ರಾಜ್ಯ ಸರ್ಕಾರ ಐಫೋನ್ ಕಾರ್ಯಾಚರಣೆಯ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಮಣಿಯಂ ನೇತೃತ್ವದ ತಂಡದ ಜೊತೆ ಮಾತುಕತೆ ನಡೆಸಿತ್ತು. ಈ ಮಾತುಕತೆ ಫಲ ಕೊಟ್ಟಿದ್ದು ಪೀಣ್ಯದಲ್ಲಿ ಘಟಕ ಸ್ಥಾಪಿಸಲು ಆಪಲ್ ಒಪ್ಪಿಗೆ ನೀಡಿದೆ.

    ಭಾರತಕ್ಕೆ ಅವಶ್ಯ ಇರುವಷ್ಟು ಐ ಫೋನ್ ಗಳನ್ನು ಬೆಂಗಳೂರಿನಲ್ಲಿ ತಯಾರಿಸಲು ಆಪಲ್ ಮುಂದಾಗಿದೆ. ಆದರೆ ಯಾವಾಗ ಈ ಘಟಕ ಆರಂಭವಾಗಲಿದೆ ಎನ್ನುವ ಮಾಹಿತಿ ಸ್ಟಷ್ಟವಾಗಿ ಸಿಕ್ಕಿಲ್ಲ. ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಜೂನ್ ತಿಂಗಳಿನಲ್ಲಿ ಘಟಕ ಆರಂಭವಾಗುವ ಸಾಧ್ಯತೆಯಿದೆ.

    ಆಪಲ್ ಪ್ರಸ್ತುತ ಈಗ ಐಫೋನ್‍ಗಳನ್ನು ತೈವಾನ್ ಮೂಲದ ಫಾಕ್ಸ್ ಕನ್ ಮತ್ತು ಪೆಗಟ್ರಾನ್ ಕಂಪೆನಿ ತಯಾರಿಸುತ್ತದೆ. ಈ ಎರಡೂ ಕಂಪೆನಿಗಳ ಘಟಕಗಳು ಚೀನಾದಲ್ಲಿದ್ದು ಇಲ್ಲಿ ಎಲ್ಲ ಭಾಗಗಳನ್ನು ಜೋಡಿಸಿ ಮಾರುಕಟ್ಟೆಗೆ ಬಿಡಲಾಗುತ್ತದೆ.

    ಐಫೋನ್ ಒಂದೊಂದು ಭಾಗಗಳನ್ನು ಒಂದೊಂದು ಕಂಪೆನಿ ತಯಾರಿಸುತ್ತದೆ. 3ಜಿ, 4ಜಿ, ಎಲ್‍ಟಿಇ ನೆಟ್‍ವರ್ಕ್ ಚಿಪ್ ಕ್ವಾಲಕಂ ಕಂಪೆನಿ ತಯಾರಿಸಿದರೆ ಎ ಸಿರೀಸ್ ಪ್ರೊಸೆಸರ್ ಸ್ಯಾಮ್ ಸಂಗ್ ತಯಾರಿಸುತ್ತದೆ. ಬ್ಯಾಟರಿ ಸನ್‍ವೊಡಾ/ ಸ್ಯಾಮ್ ಸಂಗ್ ಕಂಪೆನಿ ತಯಾರಿಸಿದರೆ,ಗ್ಲಾಸ್ ಸ್ಕ್ರೀನ್ ಮತ್ತೊದು ಕಂಪನಿ ತಯಾರಿಸುತ್ತದೆ. ಈ ಎಲ್ಲ ಕಂಪೆನಿಗಳ ಭಾಗಗಳು ಅಂತಿಮವಾಗಿ ಫಾಕ್ಸ್ ಕನ್ ಫ್ಯಾಕ್ಟರಿಯಲ್ಲಿ ಜೋಡನೆಯಾಗಿ ಮಾರುಕಟ್ಟೆಗೆ ಬರುತ್ತದೆ.