Tag: producers

  • ವಿಷ್ಣುವರ್ಧನ್ ಅವರಿಗೆ ಮಸಿ ಬಳಿಯುವಂತಹ ಕೆಲಸ ಅನಿರುದ್ಧ ಮಾಡಿರಲ್ಲ: ಎಸ್.ನಾರಾಯಣ್

    ವಿಷ್ಣುವರ್ಧನ್ ಅವರಿಗೆ ಮಸಿ ಬಳಿಯುವಂತಹ ಕೆಲಸ ಅನಿರುದ್ಧ ಮಾಡಿರಲ್ಲ: ಎಸ್.ನಾರಾಯಣ್

    ಟ ಅನಿರುದ್ಧ ಹೊಸ ಧಾರಾವಾಹಿಯನ್ನು ಘೋಷಿಸುತ್ತಿದ್ದಂತೆಯೇ ವಿರೋಧ ವ್ಯಕ್ತವಾಗಿದೆ. ಎಸ್.ನಾರಾಯಣ್ ನಿರ್ದೇಶನದ ಸೂರ್ಯವಂಶ ಧಾರಾವಾಹಿಯಲ್ಲಿ ಅನಿರುದ್ಧ ನಾಯಕನಾಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯನ್ನು ತಡೆಯಬೇಕು ಎಂದು ಕನ್ನಡ ಕಿರುತೆರೆ ನಿರ್ಮಾಪಕರು ಆಗ್ರಹಿಸಿದ್ದಾರೆ. ಅನಿರುದ್ಧ ಮೇಲೆ ಎರಡು ವರ್ಷಗಳ ಕಾಲ ಅಲಿಖಿತ ನಿಷೇಧ ಹೇರಿದ್ದರಿಂದ ಅವರಿಗಾಗಿ ಸೀರಿಯಲ್ ಮಾಡದಂತೆ ನಾರಾಯಣ್ ಅವರಿಗೆ ಮನವಿ ಮಾಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಎಸ್.ನಾರಾಯಣ್, ‘ ಅನಿರುದ್ದ ಅವರ ಬಗ್ಗೆ ಬಹಳಷ್ಟು ಆರೋಪಗಳನ್ನ ಮಾಡಿದ್ದಾರೆ.ಆ ಆರೋಪಗಳು ಸುಳ್ಳಾಗಲಿ ಅಂತ ನಾನು ಆಶಿಸುತ್ತೇನೆ. ಅನಿರುದ್ದ  ಅವರು ವಿಷ್ಣುವರ್ಧನ್ ಅಳಿಯ. ಅವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡಲ್ಲ ಅನ್ನುವುದು ನನ್ನ ನಂಬಿಕೆ. ಮಾತು ಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಇದೆ.  ಕಿರುತರೆಯ ನಿರ್ಮಾಪಕರು ನನ್ನ ಬಳಿ ಮಾತನಾಡಿ ಅವರು ಎದುರಿಸಿದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಇಂದು ಸಂಜೆ ಸಭೆಯಲ್ಲಿ ಆ ಕುರಿತು ಮಾತನಾಡುತ್ತೇನೆ’ ಎಂದಿದ್ದಾರೆ. ಇದನ್ನೂ ಓದಿ: ‘ಅನ್ ಲಾಕ್ ರಾಘವ’ ಸಿನಿಮಾಗೆ ಕೊನೆ ಹಂತದ ಶೂಟಿಂಗ್

    ಕನ್ನಡ ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧ ಅವರಿಗೆ ಎರಡು ವರ್ಷಗಳ ಕಾಲ ನಿಷೇಧ ಹೇರುವ ಕುರಿತು ತೀರ್ಮಾನ ತಗೆದುಕೊಂಡಿತ್ತು. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕಿರಿಕ್ ಮಾಡಿದರು ಎನ್ನುವ ಕಾರಣಕ್ಕಾಗಿ ಎರಡು ವರ್ಷಗಳ ಕಾಲ ಅನಿರುದ್ಧ ಅವರಿಗೆ ಯಾರೂ ಕೆಲಸ ಕೊಡಬಾರದು ಎಂದು ಹೇಳಲಾಗಿತ್ತು. ಆದರೆ, ಘಟನೆ ನಡೆದ ಕೆಲವೇ ತಿಂಗಳಲ್ಲೇ ಅನಿರುದ್ಧ ಮತ್ತೊಂದು ಧಾರಾವಾಹಿಗೆ ಹೀರೋ ಆಗಿ ಆಯ್ಕೆಯಾಗಿದ್ದಾರೆ.

    ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ನಡೆದ ನಂತರ ನಟ ಅನಿರುದ್ಧ ಮುಂದೇನು ಮಾಡುತ್ತಾರೆ ಎನ್ನುವ ಕುತೂಹಲ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಇತ್ತು. ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧಗಾಗಿ ಯಾರೂ ಧಾರಾವಾಹಿ ಮಾಡಬಾರದು ಎಂದು ಅಲಿಖಿತ ಫಾರ್ಮಾನು ಹೊರಡಿಸಿತ್ತು. ಯಾವುದೇ ವಾಹಿನಿಗಳು ಕೂಡ ಇವರಿಗೆ ಕೆಲಸ ಕೊಡದಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಚಿತ್ರಣ ಬೇರೆ ರೀತಿಯಲ್ಲೇ ಬದಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ ಕತ್ತಲು ಆವರಿಸಿದೆ : ರಾಜೇಂದ್ರ ಸಿಂಗ್ ಬಾಬು

    ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ ಕತ್ತಲು ಆವರಿಸಿದೆ : ರಾಜೇಂದ್ರ ಸಿಂಗ್ ಬಾಬು

    ಬೆಂಗಳೂರು: ನಮ್ಮ ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ  ಕತ್ತಲು ಹಿಡಿದಿದೆ. ಅದು ಬಿಟ್ಟು ಹೋಗೋದಿಲ್ಲ ಅನಿಸುತ್ತದೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿಕೆ ನೀಡಿದ್ದಾರೆ.

    ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ನಡೆ ವಿಚಾರವಾಗಿ ಇಂದು ಸ್ಯಾಂಡಲ್‍ವುಡ್‍ನ ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರು ಸುದ್ದಿಗೋಷ್ಠಿ ನಡೆಸಿದರು. ರಾಜೇಂದ್ರಸಿಂಗ್ ಬಾಬು ಮಾತನಾಡಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಚುನಾವಣೆಗೆ ತಡೆಯೊಡ್ಡಿ ಸಹಕಾರ ಸಂಘಗಳ ಉಪನಿಬಂಧನಾ ಅಧಿಕಾರಿ ಮಧ್ಯಂತರ ಆದೇಶ ಹೊರಡಿಸಿದೆ. ಆದರೂ ವಾಣಿಜ್ಯ ಮಂಡಳಿ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಸಮಾನ ಮನಸ್ಕರೆಲ್ಲ ಸೇರಿ ಈ ಬಗ್ಗೆ ಹೋರಾಟ ಮಾಡಲು ನಿರ್ಧಸಿದ್ದೇವೆ ಎಂದು ತಿಳಿಸಿದರು.

    ನಮ್ಮ ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ ಕತ್ತಲು ಹಿಡಿದಿದೆ. ಅದು ಬಿಟ್ಟು ಹೋಗುವುದಿಲ್ಲ ಎನಿಸುತ್ತದೆ. ಚೇಂಬರ್‍ನಿಂದಾಗಿ ನಾವೇ ಧ್ವನಿ ಇಲ್ಲದೇ ಇರುವ ಹಾಗೇ ಆಗಿದ್ದೇವೆ. ಅಲ್ಲದೆ ರಿಜಿಸ್ಟ್ರಾರ್ ಆಫ್ ಸೊಸೈಟಿಯಿಂದ  ಫಿಲಂ ಚೇಂಬರ್ ಗೆ ಒಂದು ಪತ್ರ ಬಂದಿದೆ. ಅದರಲ್ಲಿ ಸಾಕಷ್ಟು ಆರೋಪಗಳಿವೆ ಎಂದು ಹೇಳಿದರು.

    ಚೇಂಬರ್ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದು ತಿಳಿಯುತ್ತಿಲ್ಲ. ಕೃಷ್ಣೇ ಗೌಡ ಮತ್ತು ಜೆಡಿ ಎಂಬುವವರು 20 ಅಂಶಗಳಲ್ಲಿ ಅಕ್ರಮ ನಡೆದಿದೆ ಎಂಬುವುದರ ಬಗ್ಗೆ ದೂರು ನೀಡಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯನ್ನು ತಡೆಹಿಡಿಯಲಾಗಿದೆ. ಈಗಾಗಲೇ ರಿಜಿಸ್ಟ್ರಾರ್‌ನ್ನ ಮಂಡಳಿಗೆ ನೇಮಕ ಮಾಡಲಾಗಿದೆ. ಆದರೆ ಮಂಡಳಿಯಿಂದ ರಾಜಕೀಯವಾಗಿ ಒತ್ತಡ ತಂದು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಇಲ್ಲಿ ಸತ್ಯ ಹೊರ ಬರಬೇಕು ಎಂಬ ಉದ್ದೇಶದಿಂದ ನಾವು  ರಿಜಿಸ್ಟ್ರಾರ್‌ಗೆ ಮನವಿ ಮಾಡುತ್ತಿದ್ದೇವೆ. ರಿಜಿಸ್ಟ್ರಾರ್ ಆಫೀಸಿಗೆ ಈ ಮನವಿ ನೀಡಿ ಅದು ಸಿಎಂ ಬಳಿಗೆ ತಲುಪಿಸುತ್ತೇವೆ. ಇಲ್ಲಿ ಯಾರು ತಪ್ಪು ಮಾಡಿದ್ದಾರೆ, ಸತ್ಯ ಯಾವುದು ಎನ್ನುವುದು ಎಲ್ಲರಿಗೂ ಗೊತ್ತಾಗಬೇಕು ಎಂದರು.

    ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೋವಿಡ್ ಸಂಕಷ್ಟ ಸಾಕು ಎನ್ನುತ್ತೀರುವಾಗಲೇ ಈ ಮರಿ ಕೋವಿಡ್ ಗಳನ್ನು ನೋಡಿ ಗಾಬರಿಯಾಗಿದೆ. ಚುನಾವಣಾ ಪ್ರಕ್ರಿಯೆ ನಡೆಯುವವರೆಗೂ ಯಾವುದು ಸರಿಯಾಗುವುದಿಲ್ಲ. ಅಲ್ಲಿ ಒಂದು ಗುಂಪು ಸೇರಿಕೊಂಡಿದೆ. ಅವರು ಬೈಲಾ ತಿದ್ದುಪಡಿ ಮಾಡುತ್ತಾರೆ, ಅದರಿಂದ ಅವರಿಗೆ ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡಿಕೊಳ್ಳುತ್ತಾರೆ. ನಾವು ನಮ್ಮ ಪಾಡಿಗೆ ಶೂಟಿಂಗ್ ಮಾಡುವುದರಲ್ಲಿ ನಿರತರಾಗಿರುತ್ತೇವೆ. ಆದರೆ ಇಲ್ಲಿ ನಡೆಯುವುದನ್ನು ಕೇಳುವವರು ಇಲ್ಲ ಎಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಶೈಲೇಂದ್ರ ಬಾಬು, ಸುರೇಶ್, ಮುರಳಿ, ಮದನ್ ಪಟೇಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

  • ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್ ನೀಡಿದ್ದು ಯಾಕೆ? – ನಿರ್ಮಾಪಕರು, ನಟರ ಮನೆ ಮೇಲಿನ ದಾಳಿಗೆ ಕಾರಣ ಇಲ್ಲಿದೆ

    ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್ ನೀಡಿದ್ದು ಯಾಕೆ? – ನಿರ್ಮಾಪಕರು, ನಟರ ಮನೆ ಮೇಲಿನ ದಾಳಿಗೆ ಕಾರಣ ಇಲ್ಲಿದೆ

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಯಾಂಡಲ್‍ವುಡ್ ನಟರು ಮತ್ತು ನಿರ್ಮಾಪಕ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

    ಸ್ಯಾಂಡಲ್‍ವುಡ್ ಇತಿಹಾಸದಲ್ಲೇ ಇದು ಅತಿದೊಡ್ಡ ಐಟಿ ದಾಳಿಯಾಗಿದ್ದು ನಟರಾದ ಪುನೀತ್, ಯಶ್, ಸುದೀಪ್, ಶಿವರಾಜ್ ಕುಮಾರ್, ನಿರ್ಮಾಪಕರಾದ ಸಿಆರ್ ಮನೋಹರ್, ರಾಕ್‍ಲೈನ್ ವೆಂಕಟೇಶ್, ವಿಜಯ್ ಕಿರಗಂದೂರ್, ಜಯಣ್ಣ ನಿವಾಸದ ಮೇಲೆ ದಾಳಿ ನಡೆದಿದೆ.

    ದಾಳಿ ನಡೆಸಿದ್ದು ಯಾಕೆ?
    ರಿಯಲ್ ಎಸ್ಟೇಟ್ ಮತ್ತು ಫೈನ್ಯಾನ್ಶಿಯರ್ಸ್‍ ಗಳು ಬ್ಲಾಕ್ ಮನಿಯನ್ನು ವೈಟ್ ಮನಿ ಮಾಡಲು ಸಿನಿಮಾದಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಇವರೆಲ್ಲ ಹೆಸರಾಂತ ನಿರ್ಮಾಪಕರ ಮೂಲಕ ದೊಡ್ಡ ದೊಡ್ಡ ಬಜೆಟ್ ಸಿನಿಮಾಗೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಇವರು ಥಿಯೇಟರ್, ವಿತರಕರ ಮೂಲಕ ಕೋಟ್ಯಂತರ ರೂಪಾಯಿ ಸುಳ್ಳು ಲೆಕ್ಕ ನೀಡಿ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ದಾಳಿ ನಡೆದಿದೆ.

    ನಟರ ಮನೆ ಮೇಲೆ ದಾಳಿ ನಡೆಸಿದ್ದು ಯಾಕೆ?
    ಈಗ ನಟರು ಚಲನಚಿತ್ರದಲ್ಲಿ ಷೇರನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಲಾಭ ನಷ್ಟಕ್ಕೆ ನಿರ್ಮಾಪಕರು ಮಾತ್ರ ಹೊಣೆ ಆಗಿರುತ್ತಿದ್ದಾರೆ. ಹೀಗೆ ಬಂದ ಲಾಭವನ್ನು ಬ್ಲಾಕ್ ಮೂಲಕ ವೈಟ್ ಮಾಡುತ್ತಿದ್ದಾರೆ. ಕೇವಲ ಆದಾಯ ತೆರಿಗೆ ವಂಚನೆ ಮಾತ್ರ ಅಲ್ಲ. ಚಿತ್ರದಲ್ಲಿ ಬಂದ ಲಾಭವನ್ನು ಗೌಪ್ಯವಾಗಿಟ್ಟು ಬ್ಲಾಕ್ ಮನಿಯನ್ನು ವೈಟ್ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ. ಈ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಲೆಕ್ಕ ಪತ್ರಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

    ಸುದೀಪ್, ಶಿವರಾಜ್ ಕುಮಾರ್ ಅಭಿನಯದ ‘ದಿ ವಿಲನ್’ ಅಕ್ಟೋಬರ್ 18 ರಂದು ಬಿಡುಗಡೆಯಾಗಿದ್ದರೆ, ಯಶ್ ಅಭಿನಯದ ‘ಕೆಜಿಎಫ್’ ಡಿಸೆಂಬರ್ 21 ರಂದು ಬಿಡುಗಡೆಯಾಗಿತ್ತು. ಪುನೀತ್ ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಫೆಬ್ರವರಿ 7ಕ್ಕೆ ಬಿಡುಗಡೆಯಾಗಲಿದೆ.

    ಐಟಿ ದಾಳಿ ನಡೆಸಿದ ಮಾತ್ರಕ್ಕೆ ತೆರಿಗೆ ವಂಚನೆ ನಡೆಸಿದ್ದಾರೆ ಎಂದರ್ಥವಲ್ಲ. ತಮ್ಮ ಆದಾಯಕ್ಕೆ ಸರಿಯಾಗಿ ಮಾಹಿತಿ ನೀಡಿದರೆ ಯಾರೂ ಹೆದರುವ ಅಗತ್ಯವಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv