Tag: producer

  • ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ಚಿತ್ರರಂಗದಲ್ಲಿ ಗಟ್ಟಿಮೆಳದ ಸೌಂಡ್ ಜೋರಾಗಿದೆ. ಅಥಿಯಾ ಶೆಟ್ಟಿ-ರಾಹುಲ್, ಸಿದ್ ಮತ್ತು ಕಿಯಾರಾ ಜೋಡಿ ನಂತರ ಹೃತಿಕ್ ರೋಷನ್ (Hrithik Roshan) ಮತ್ತು ಸಬಾ (Saba Azad) ಮದುವೆ (Wedding) ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಇದೀಗ ಹೃತಿಕ್- ಸಬಾ ಮದುವೆಯಾಗುತ್ತಿರೋದು ನಿಜಾನಾ ಎಂಬುದರ ಬಗ್ಗೆ ಹೃತಿಕ್ ತಂದೆ (Father) ರಾಕೇಶ್ ರೋಷನ್ (Rakesh Roshan) ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ಮತ್ತು ಮಕ್ಕಳನ್ನು ಬೀದಿಗೆ ತಳ್ಳಿದ: ನವಾಜುದ್ದೀನ್ ವಿರುದ್ಧ ಪತ್ನಿ ಕಣ್ಣೀರು

    ಬಾಲಿವುಡ್‌ನ (Bollywood) ಟಾಪ್ ನಟ ಹೃತಿಕ್ ರೋಷನ್ ಇದೀಗ ಸಿನಿಮಾಗಿಂತ ಸಬಾ ಜೊತೆಗಿನ ಡೇಟಿಂಗ್ ವಿಚಾರವಾಗಿಯೇ ಸಖತ್ ಸುದ್ದಿಯಲ್ಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಲಿಪ್ ಕಿಸ್ ಮಾಡುತ್ತಾ, ಮುಂಬೈ ಬೀದಿಗಳಲ್ಲಿ ಕೈ ಕೈ ಹಿಡಿದು ಸುತ್ತಾಡುತ್ತಿದ್ದಾರೆ. ಬಿಟೌನ್ ಪಾರ್ಟಿಗಳಿಗೆ ಸಬಾ ಜೊತೆನೇ ಹೃತಿಕ್ ವಿಸಿಟ್ ಮಾಡ್ತಿದ್ದಾರೆ. ತನ್ನ ಗೆಳತಿ ಎಂದೇ ಹೃತಿಕ್ ಸ್ನೇಹಿತರ ಬಳಿ ಪರಿಚಯಿಸುತ್ತಿದ್ದಾರೆ.

    ಮಾಜಿ ಪತ್ನಿ ಸುಸಾನ್ ಖಾನ್ (Sussane Khan) ಜೊತೆ ಡಿವೋರ್ಸ್ (Divorce) ಬಳಿಕ ಸಬಾ ಆಜಾದ್ (Saba Azad) ಜೊತೆ ಸಾಕಷ್ಟು ಸಮಯದಿಂದ ಹೃತಿಕ್ ರೋಷನ್ ಡೇಟಿಂಗ್ ಮಾಡ್ತಿರೋದು ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹೃತಿಕ್-ಸಬಾ ಮದುವೆ ಬಗ್ಗೆ ಚರ್ಚೆಯಾಗಿತ್ತು. ಈ ವರ್ಷ ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಹೃತಿಕ್ ತಂದೆ ನಿರ್ದೇಶಕ ರಾಕೇಶ್ ರೋಷನ್ ಸ್ಪಷ್ಟನೆ ನೀಡಿದ್ದಾರೆ.

    ಇವರಿಬ್ಬರ ಮದುವೆ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲಿ ನ್ಯೂಸ್ ಆಗುತ್ತಿದ್ದಂತೆ ಹೃತಿಕ್ ತಂದೆಗೆ ಶುಭಾಶಯಗಳನ್ನ ತಿಳಿಸುತ್ತಿದ್ದಂತೆ ಈ ಮದುವೆಯ ಕುರಿತು ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಕೌತುಕದ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಪುತ್ರ ಹೃತಿಕ್ ರೋಷನ್ ಮತ್ತು ಸಾಬಾ ಆಜಾದ್ ಅವರ ವಿವಾಹದ ಕುರಿತು ಮಾತನಾಡಿರುವ ಅವರು, ನಮ್ಮ ಕುಟುಂಬದಲ್ಲಿ ಯಾವುದೇ ಮದುವೆಯ ಬಗ್ಗೆ ತಮಗೆ ತಿಳಿದಿಲ್ಲ ಎಂದಿದ್ದಾರೆ. ನಾನು ಮದುವೆ ಬಗ್ಗೆ ಇನ್ನೂ ಏನೂ ಕೇಳಿಲ್ಲ. ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಪರಸ್ಪರ ಅರ್ಥಮಾಡಿಕೊಳ್ಳಲು ಮತ್ತು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಬಿಟ್ಟು ನಮ್ಮ ಕುಟುಂಬದಲ್ಲಿ ಯಾವುದೇ ಮದುವೆಗಳ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ. ಈ ಮೂಲಕ ತಮ್ಮ ಮಗನ ಮದುವೆಯ ಸುದ್ದಿ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

  • ಲೇಡಿ ಸೂಪರ್ ಸ್ಟಾರ್ ನಯನತಾರಾ ಮೇಲೆ ಮುನಿಸಿಕೊಂಡ ತಮಿಳು ನಿರ್ಮಾಪಕರು

    ಲೇಡಿ ಸೂಪರ್ ಸ್ಟಾರ್ ನಯನತಾರಾ ಮೇಲೆ ಮುನಿಸಿಕೊಂಡ ತಮಿಳು ನಿರ್ಮಾಪಕರು

    ಮಿಳು ಸಿನಿಮಾ ರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಯನತಾರಾ (Nayantara) ಮೇಲೆ ಅಲ್ಲಿನ ನಿರ್ಮಾಪಕರು ಕೋಪಗೊಂಡಿದ್ದಾರೆ. ತಮಗೊಂದು ಬೇರೆಯವರಿಗೊಂದು ರೂಲ್ಸ್ ಮಾಡಿಕೊಳ್ಳುವ ನಯನತಾರಾ ಅವರ ಇಬ್ಬಂದಿತನವನ್ನು ಪ್ರಶ್ನಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೋಪ ಎಲ್ಲಿಗೆ ತಿರುಗುತ್ತದೆಯೋ ಕಾದು ನೋಡಬೇಕಿದೆ. ಅಷ್ಟಕ್ಕೂ ನಯನತಾರಾ ಮೇಲೆ ನಿರ್ಮಾಪಕರು ಮುನಿಸಿಕೊಳ್ಳುವುದಕ್ಕೆ ಕಾರಣವಿದೆ.  ಆ ಕಾರಣವನ್ನು ಕೆಲವರು ಬಹಿರಂಗವಾಗಿಯೇ ಪ್ರಶ್ನೆ ಮಾಡಿದ್ದಾರೆ.

    ನಯನತಾರಾ ತಮ್ಮ ಬದುಕಿನಲ್ಲಿ ಒಂದು ಬದ್ಧತೆಯನ್ನು ಮಾಡಿಕೊಂಡಿದ್ದರು. ಅದನ್ನು ಈಗ ಅವರು ತಮ್ಮ ಗಂಡನಿಗಾಗಿ ಮುರಿದಿದ್ದಾರೆ. ಇದೇ ನಿರ್ಮಾಪಕರ ಕೋಪಕ್ಕೆ ಕಾರಣವಾಗಿದೆ. ನಯನತಾರಾ ಸಿನಿಮಾಗಳನ್ನು ಒಪ್ಪಿಕೊಂಡರೆ, ಅಲ್ಲೊಂದು ನಿಬಂಧನೆ ಹಾಕುತ್ತಿದ್ದರು. ತಮ್ಮ ಕೆಲಸ ಕೇವಲ ನಟಿಸುವುದು ಮಾತ್ರ. ಯಾವುದೇ ಕಾರಣಕ್ಕೂ ಸಿನಿಮಾ ಪ್ರಚಾರಕ್ಕೆ ಬರುವುದಿಲ್ಲ ಎಂದು ಅಗ್ರಿಮೆಂಟ್ ಹಾಕಿಕೊಳ್ಳುತ್ತಿದ್ದರು. ಈವರೆಗೂ ಅದನ್ನು ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಅವರು ಅದನ್ನು ಮುರಿದಿದ್ದಾರೆ. ಇದನ್ನೂ ಓದಿ: ಡೇಂಜರ್ ಝೋನ್‌ನಲ್ಲಿ 8 ಸ್ಪರ್ಧಿಗಳು, ಯಾರ ಆಟಕ್ಕೆ ಬ್ರೇಕ್ ಹಾಕಲಿದ್ದಾರೆ ಬಿಗ್ ಬಾಸ್

    ನಯನತಾರಾ ಪತಿ ವಿಘ್ನೇಶ್ ಶಿವನ್ (Vignesh Sivan) ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಕನೆಕ್ಟ್’ (Connect) ಸಿನಿಮಾ ಇದೇ ತಿಂಗಳು 23ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ನಯನತಾರಾ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರದಲ್ಲಿ ಅವರು ತೊಡಗಿದ್ದಾರೆ. ಚಿತ್ರಮಂದಿರಗಳಿಗೆ ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದಾರೆ. ಈ ಕೆಲಸವೇ ನಿರ್ಮಾಪಕರನ್ನು ಕೆಣಕಿದೆ. ತಮಗೊಂದು ರೂಲ್ಸ್ ಬೇರೆಯವರಿಗೊಂದು ರೂಲ್ಸ್ ನಯನತಾರಾ ಮಾಡುವುದು ಯಾಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

    ತಮಿಳು ಸಿನಿಮಾ ರಂಗದಲ್ಲಿ ಈ ರೀತಿ ರೂಲ್ಸ್ (Rules) ಮಾಡಿಕೊಳ್ಳುವುದು ಹೊಸದೇನೂ ಅಲ್ಲ. ಅಜಿತ್ ಅವರು ಇದನ್ನು ಪಾಲಿಸಿಕೊಂಡು ಬಂದಿದ್ದಾರೆ. ಅಜಿತ್ ಯಾವುದೇ ಸಿನಿಮಾದ ಪ್ರಮೋಷನ್ ಮಾಡುವುದಿಲ್ಲ. ನಟಿಸಿ ಹಿಂದಕ್ಕೆ ಸರಿದು ಬಿಡುತ್ತಾರೆ. ನಯನತಾರಾ ಇದನ್ನೇ ಪಾಲಿಸಿಕೊಂಡು ಬಂದಿದ್ದರು. ಆದರೆ, ಇದೀಗ ಗಂಡನ ಸಿನಿಮಾಗಾಗಿ ಆ ರೂಲ್ಸ್ ಅನ್ನು ಬ್ರೇಕ್ ಮಾಡಿದ್ದಾರೆ. ಈ ನಡೆಯೇ ಚರ್ಚೆಗೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅನಿರುದ್ಧ ಹೊಸ ಧಾರಾವಾಹಿಗೆ ನಿರ್ಮಾಪಕರ ಸಂಘದಿಂದ ತೀವ್ರ ವಿರೋಧ

    ಅನಿರುದ್ಧ ಹೊಸ ಧಾರಾವಾಹಿಗೆ ನಿರ್ಮಾಪಕರ ಸಂಘದಿಂದ ತೀವ್ರ ವಿರೋಧ

    ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬಂದ ನಂತರ  ಅನಿರುದ್ಧ ಮತ್ತೊಂದು ಹೊಸ ಧಾರಾವಾಹಿಯನ್ನು ಘೋಷಣೆ ಮಾಡಿದ್ದರು. ಉದಯ ವಾಹಿನಿಗಾಗಿ ‘ಸೂರ್ಯವಂಶ’ ಹೆಸರಿನಲ್ಲಿ ಧಾರಾವಾಹಿ ಮಾಡುತ್ತಿರುವುದಾಗಿ ನಿನ್ನೆಯಷ್ಟೇ ಮಾಹಿತಿ ನೀಡಿದ್ದರು. ಈ ಸುದ್ದಿ ಹೊರ ಬರುತ್ತಿದ್ದಂತೆಯೇ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ ಗರಂ ಆಗಿದೆ. ಎರಡು ವರ್ಷಗಳ ಕಾಲ ಅನಿರುದ್ಧ ಅವರಿಗೆ ಯಾವುದೇ ಧಾರಾವಾಹಿಯಲ್ಲಿ ನಟಿಸಲು ಅನುಮತಿ ಕೊಡಬೇಡಿ ಎಂದು ನಿರ್ಮಾಪಕರ ಸಂಘ ಮನವಿ ಮಾಡಿದ್ದರೂ, ಮತ್ತೆ ಅವರು ಧಾರಾವಾಹಿ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

    ಕನ್ನಡ ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧ ಅವರಿಗೆ ಎರಡು ವರ್ಷಗಳ ಕಾಲ ನಿಷೇಧ ಹೇರುವ ಕುರಿತು ತೀರ್ಮಾನ ತಗೆದುಕೊಂಡಿತ್ತು. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕಿರಿಕ್ ಮಾಡಿದರು ಎನ್ನುವ ಕಾರಣಕ್ಕಾಗಿ ಎರಡು ವರ್ಷಗಳ ಕಾಲ ಅನಿರುದ್ಧ ಅವರಿಗೆ ಯಾರೂ ಕೆಲಸ ಕೊಡಬಾರದು ಎಂದು ಹೇಳಲಾಗಿತ್ತು. ಆದರೆ, ಘಟನೆ ನಡೆದ ಕೆಲವೇ ತಿಂಗಳಲ್ಲೇ ಅನಿರುದ್ಧ ಮತ್ತೊಂದು ಧಾರಾವಾಹಿಗೆ ಹೀರೋ ಆಗಿ ಆಯ್ಕೆಯಾಗಿದ್ದಾರೆ.

    ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ನಡೆದ ನಂತರ ನಟ ಅನಿರುದ್ಧ ಮುಂದೇನು ಮಾಡುತ್ತಾರೆ ಎನ್ನುವ ಕುತೂಹಲ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಇತ್ತು. ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧಗಾಗಿ ಯಾರೂ ಧಾರಾವಾಹಿ ಮಾಡಬಾರದು ಎಂದು ಅಲಿಖಿತ ಫಾರ್ಮಾನು ಹೊರಡಿಸಿತ್ತು. ಯಾವುದೇ ವಾಹಿನಿಗಳು ಕೂಡ ಇವರಿಗೆ ಕೆಲಸ ಕೊಡದಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಚಿತ್ರಣ ಬೇರೆ ರೀತಿಯಲ್ಲೇ ಬದಲಾಗಿದೆ. ಇದನ್ನೂ ಓದಿ: ಸಿಂಹಪ್ರಿಯ ಜೋಡಿಯ ಎಂಗೇಜ್‌ಮೆಂಟ್‌ನ ಸುಂದರ ಕ್ಷಣಗಳು

    ನಿರ್ಮಾಪಕರ ಸಂಘ ಮಾಡಿಕೊಂಡಿದ್ದ ಮನವಿಯನ್ನು ಉದಯವಾಹಿನಿ ತಳ್ಳಿಹಾಕಿದೆ. ಪರಿಣಾಮ ಸೂರ್ಯವಂಶ ಧಾರಾವಾಹಿಗೆ ಅನಿರುದ್ಧ ಅವರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ಅನಿರುದ್ಧ ಅವರೇ ಸ್ಪಷ್ಟ ಪಡಿಸಿದ್ದಾರೆ. ತಾವು ಉದಯ ವಾಹಿನಿಯಲ್ಲಿ ಪ್ರಸಾರ ಕಾಣಲಿರುವ ಸೂರ್ಯವಂಶ ಧಾರಾವಾಹಿಯಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ‘ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ’ ಎಂದು ಬರೆದುಕೊಂಡಿದ್ದಾರೆ.

    ಸೂರ್ಯವಂಶ ಹೆಸರನ್ನು ಕೇಳಿದ ತಕ್ಷಣವೇ ನೆನಪಾಗುವ ಕಲಾವಿದ ವಿಷ್ಣುವರ್ಧನ್. ಇದೀಗ ಅದೇ ಹೆಸರಿನಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಗೆ ವಿಷ್ಣು ಅಳಿಯ ಅನಿರುದ್ಧ ನಾಯಕ. ಹೀಗಾಗಿ ಧಾರಾವಾಹಿ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿದೆ. ಈ ಕುರಿತು ಕಿರುತೆರೆ ನಿರ್ಮಾಪಕ ಸಂಘ ಏನು ಹೇಳುತ್ತದೆ ಎನ್ನುವುದನ್ನು ಕಾದು ನೋಡಬೇಕು. ಜೊತೆ ಜೊತೆಯಲಿ ಬಿಟ್ಟ ನಂತರ ಮತ್ತೊಂದು ಧಾರಾವಾಹಿಗೆ ನಾಯಕನಾಗಿರುವ  ಅನಿರುದ್ಧ ಅವರಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟ ಅನಿರುದ್ಧ ಆಯ್ಕೆಯ ಕುರಿತು ಇಂದು ನಿರ್ಮಾಪಕರ ಸಂಘದ ಮಹತ್ವದ ಸಭೆ

    ನಟ ಅನಿರುದ್ಧ ಆಯ್ಕೆಯ ಕುರಿತು ಇಂದು ನಿರ್ಮಾಪಕರ ಸಂಘದ ಮಹತ್ವದ ಸಭೆ

    ನ್ನಡ ಕಿರುತೆರೆ ನಿರ್ಮಾಪಕರ ಸಂಘವು ನಟ ಅನಿರುದ್ಧ ಅವರಿಗೆ ಎರಡು ವರ್ಷಗಳ ಕಾಲ ನಿಷೇಧ ಹೇರುವ ಕುರಿತು ತೀರ್ಮಾನ ತಗೆದುಕೊಂಡಿತ್ತು. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕಿರಿಕ್ ಮಾಡಿದರು ಎನ್ನುವ ಕಾರಣಕ್ಕಾಗಿ ಎರಡು ವರ್ಷಗಳ ಕಾಲ ಅನಿರುದ್ಧ ಅವರಿಗೆ ಯಾರೂ ಕೆಲಸ ಕೊಡಬಾರದು ಎಂದು ಹೇಳಲಾಗಿತ್ತು. ಆದರೆ, ಘಟನೆ ನಡೆದ ಕೆಲವೇ ತಿಂಗಳಲ್ಲೇ ಅನಿರುದ್ಧ ಮತ್ತೊಂದು ಧಾರಾವಾಹಿಗೆ ಹೀರೋ ಆಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಇಂದು ನಿರ್ಮಾಪಕರ ಸಂಘವು ಸಭೆ ಮಾಡಲಿದ್ದು, ಅಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ನಡೆದ ನಂತರ ನಟ ಅನಿರುದ್ಧ ಮುಂದೇನು ಮಾಡುತ್ತಾರೆ ಎನ್ನುವ ಕುತೂಹಲ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಇತ್ತು. ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧಗಾಗಿ ಯಾರೂ ಧಾರಾವಾಹಿ ಮಾಡಬಾರದು ಎಂದು ಅಲಿಖಿತ ಫಾರ್ಮಾನು ಹೊರಡಿಸಿತ್ತು. ಯಾವುದೇ ವಾಹಿನಿಗಳು ಕೂಡ ಇವರಿಗೆ ಕೆಲಸ ಕೊಡದಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಚಿತ್ರಣ ಬೇರೆ ರೀತಿಯಲ್ಲೇ ಬದಲಾಗಿದೆ. ಇದನ್ನೂ ಓದಿ: ನಟಿ ಅಶು ರೆಡ್ಡಿ ಕಾಲು ಹಿಡಿದ ರಾಮ್ ಗೋಪಾಲ್ ವರ್ಮಾ: ನೆಟ್ಟಿಗರು ಶಾಕ್

    ನಿರ್ಮಾಪಕರ ಸಂಘ ಮಾಡಿಕೊಂಡಿದ್ದ ಮನವಿಯನ್ನು ಉದಯವಾಹಿನಿ ತಳ್ಳಿಹಾಕಿದೆ. ಪರಿಣಾಮ ಸೂರ್ಯವಂಶ ಧಾರಾವಾಹಿಗೆ ಅನಿರುದ್ಧ ಅವರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ಅನಿರುದ್ಧ ಅವರೇ ಸ್ಪಷ್ಟ ಪಡಿಸಿದ್ದಾರೆ. ತಾವು ಉದಯ ವಾಹಿನಿಯಲ್ಲಿ ಪ್ರಸಾರ ಕಾಣಲಿರುವ ಸೂರ್ಯವಂಶ ಧಾರಾವಾಹಿಯಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ‘ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ’ ಎಂದು ಬರೆದುಕೊಂಡಿದ್ದಾರೆ.

    ಸೂರ್ಯವಂಶ ಹೆಸರನ್ನು ಕೇಳಿದ ತಕ್ಷಣವೇ ನೆನಪಾಗುವ ಕಲಾವಿದ ವಿಷ್ಣುವರ್ಧನ್. ಇದೀಗ ಅದೇ ಹೆಸರಿನಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಗೆ ವಿಷ್ಣು ಅಳಿಯ ಅನಿರುದ್ಧ ನಾಯಕ. ಹೀಗಾಗಿ ಧಾರಾವಾಹಿ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿದೆ. ಈ ಕುರಿತು ಕಿರುತೆರೆ ನಿರ್ಮಾಪಕ ಸಂಘ ಏನು ಹೇಳುತ್ತದೆ ಎನ್ನುವುದನ್ನು ಕಾದು ನೋಡಬೇಕು. ಜೊತೆ ಜೊತೆಯಲಿ ಬಿಟ್ಟ ನಂತರ ಮತ್ತೊಂದು ಧಾರಾವಾಹಿಗೆ ನಾಯಕನಾಗಿರುವ  ಅನಿರುದ್ಧ ಅವರಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿರಿಯ ನಿರ್ಮಾಪಕ ಕೆ.ಮುರಳೀಧರನ್ ನಿಧನ

    ಹಿರಿಯ ನಿರ್ಮಾಪಕ ಕೆ.ಮುರಳೀಧರನ್ ನಿಧನ

    ಸೌತ್ ಸಿನಿಮಾರಂಗದ ಹಿರಿಯ ನಿರ್ಮಾಪಕ ಮುರಳೀಧರನ್ (Producer K.Muralidharan) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ತಮಿಳುನಾಡಿನ ಕುಂಭಕೋಣಂನಲ್ಲಿರುವ ತಮ್ಮ ನಿವಾಸದಲ್ಲಿ ಇಂದು (ಡಿ.2) ಬೆಳಗ್ಗೆ ನಿಧನರಾದರು. ಇದನ್ನೂ ಓದಿ: ಸ್ಟಾರ್ ನಟಿಯರಿಗೆ ಸೆಡ್ಡು ಹೊಡೆದು ತೆಲುಗಿನ 7 ಚಿತ್ರಗಳಿಗೆ ಸಹಿ ಹಾಕಿದ ಶ್ರೀಲೀಲಾ

    ಮುರಳೀಧರನ್ ಅವರು ತಮಿಳು(Tamil) ನಿರ್ಮಾಪಕರ ಮಂಡಳಿಯ ಮಾಜಿ ಅಧ್ಯಕ್ಷರು ಆಗಿದ್ದರು. ಕೆ. ಮುರಳೀಧರನ್ ಲಕ್ಷ್ಮಿ ಮೂವೀ ಮೇಕರ್ಸ್ ಎನ್ನುವ ಸಿನಿಮಾ ನಿರ್ಮಾಣ ಹುಟ್ಟುಹಾಕಿದ್ದರು. ಈ ಸಂಸ್ಥೆ ಮೂಲಕ ಅವರು ಅನ್ಬೇ ಶಿವಂ, ಪುದುಪೆಟ್ಟೈ ಹಲವಾರು ಸೂಪರ್ ಹಿಟ್‌ಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಅವರಿಗಿದೆ.

    ಲಕ್ಷ್ಮಿ ಮೂವೀ ಮೇಕರ್ಸ್(Lakshmi Movie Makers) ತಮಿಳು ಸಿನಿಮಾರಂಗದ ಪ್ರಸಿದ್ಧ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಬ್ಯಾನರ್‌ನಲ್ಲಿ ಬಂದ ಅನೇಕ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ದೊಡ್ಡ ಕಲಾವಿದರ ಜೊತೆಯೂ ಅನೇಕ ಸಿನಿಮಾಗಳನ್ನು ಮಾಡಿದೆ. ಮುರಳೀಧರನ್ ಅವರ ಲಕ್ಷ್ಮಿ ಮೂವೀ ಮೇಕರ್ಸ್ ಸಂಸ್ಥೆಯಡಿ ಕಮಲ್ ಹಾಸನ್ ಜೊತೆ ಅನ್ಬೇ ಶಿವಂ, ಕಾರ್ತಿಕ್ ಜೊತೆ ಗೋಕುಲತಿಲ್ ಸೀತೈ, ವಿಜಯ್ ಜೊತೆ ಪ್ರಿಯಾಮುದನ್, ನಟ ಧನುಷ್ ಜೊತೆ ಪುದುಪೆಟ್ಟೈ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಣ್ವೀರ್ ಸಿಂಗ್ ಗೂ ಕಾಸ್ಟಿಂಗ್ ಕೌಚ್ ಅನುಭವ : ನಟ ಬಿಚ್ಚಿಟ್ಟ ಕರಾಳ ಸತ್ಯ

    ರಣ್ವೀರ್ ಸಿಂಗ್ ಗೂ ಕಾಸ್ಟಿಂಗ್ ಕೌಚ್ ಅನುಭವ : ನಟ ಬಿಚ್ಚಿಟ್ಟ ಕರಾಳ ಸತ್ಯ

    ಸಾಮಾನ್ಯವಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ನಾಯಕಿಯರು ಮಾತನಾಡಿದ್ದನ್ನು ಕೇಳಿದ್ದೇವೆ, ಓದಿದ್ದೇವೆ. ಬಾಲಿವುಡ್ ಸ್ಟಾರ್ ನಟನೊಬ್ಬ ತಮ್ಮಗೂ ಅಂಥದ್ದೊಂದು ಕೆಟ್ಟ ಅನುಭವ ಆಗಿತ್ತು ಎಂದು ಹೇಳುವ ಮೂಲಕ ಲೈಂಗಿಕ ಶೋಷಣೆ ಎಲ್ಲರ ಮೇಲೂ ಆಗುತ್ತಿದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಪತಿ, ನಟ ರಣ್ವೀರ್ ಸಿಂಗ್ ತಮಗೂ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದು ಹೇಳಿಕೊಳ್ಳುವ ಮೂಲಕ ಬಾಲಿವುಡ್ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.

    ಸದ್ಯ ರಣ್ವೀರ್ ಸಿಂಗ್ ಮೊರಾಕೊದಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷಿನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರೋತ್ಸವದಲ್ಲಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಗುತ್ತಿದೆ. ಈ ಸಮಾರಂಭದಲ್ಲಿ ಮಾತನಾಡಿದ ರಣ್ವೀರ್, ತಾವು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಸಂದರ್ಭದಲ್ಲಿ ದುಷ್ಟರು, ದುರುಳರು ತಮಗೂ ಲೈಂಗಿಕ ಶೋಷಣೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ, ಅವರು ಯಾರು ಎನ್ನುವುದನ್ನು ಅವರು ಹೇಳಲಿಲ್ಲ. ಇದನ್ನೂ ಓದಿ:ಡಿವೋರ್ಸ್ ವದಂತಿಯ ನಡುವೆ ಸಾನಿಯಾ ಮಿರ್ಜಾ ಬರ್ತ್‌ಡೇಗೆ ಶೋಯೆಬ್ ಮಲಿಕ್ ವಿಶ್

    ‘ಅವರು ಚಿತ್ರವೊಂದರ ನಿರ್ಮಾಪಕರು. ನನಗೆ ತುಂಬಾ ಕೆಟ್ಟದ್ದಾಗಿಯೇ ನಡೆಸಿಕೊಂಡರು. ಕೆಟ್ಟ ಸ್ಥಳಕ್ಕೆ ಕರೆದುಕೊಂಡು ಹೋಗಿ, ಏನೆಲ್ಲ ಪ್ರಶ್ನೆಗಳನ್ನು ಕೇಳಿದರು. ಅವರು ಪ್ರಶ್ನೆಗಳಿಗೆ ನನ್ನ ಉತ್ತರ ಒಂದೇ ಆಗಿತ್ತು. ನಾನು ಹಾರ್ಡ್ ವರ್ಕ್ ಮೂಲಕ ಗೆಲ್ಲುತ್ತೇನೆ ಎಂದು ಹೇಳಿದ್ದೆ. ಆದರೆ, ಅವರು ನನ್ನ ಡಾರ್ಲಿಂಗ್, ಬಿ ಸೆಕ್ಸಿ ಎಂದೆಲ್ಲ ಕರೆದರು. ಅವರು ಯಾಕೆ ಹಾಗೆ ಕರೆಯುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗಲು ತುಂಬಾ ಸಮಯ ಬೇಕಾಗಲಿಲ್ಲ’ ಎಂದು ರಣ್ವೀರ್ ಹೇಳಿದರು.

    ಸಿನಿಮಾ ರಂಗಕ್ಕೆ ಎಂಟ್ರಿ ಆದ ನಂತರ ಮೂರುವರೆ ವರ್ಷಗಳ ಕಾಲ ನನಗೆ ಈ ರೀತಿಯ ಅನುಭವಗಳು ಆಗಿವೆ. ಅವುಗಳನ್ನು ನಾನು ಸಮರ್ಥವಾಗಿಯೇ ಎದುರಿಸಿದ್ದೇನೆ. ಹಾಗಂತ ಎಲ್ಲರೂ ಹಾಗೆಯೇ ಮಾಡಲಿಲ್ಲ. ತುಂಬಾ ಗೌರವದಿಂದ ನಡೆಸಿಕೊಂಡವರೂ ಇದ್ದಾರೆ. ನಿರ್ದೇಶಕರಿಗಿಂತ ನಿರ್ಮಾಪಕರಿಂದ ನಾನು ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಿದ್ದೇನೆ. ಮೂರು ವರ್ಷಗಳ ಯಮಯಾತನೆಯ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ಮೈ ಉರಿಯುತ್ತದೆ ಎಂದಿದ್ದಾರೆ ರಣ್ವೀರ್ ಸಿಂಗ್.

    Live Tv
    [brid partner=56869869 player=32851 video=960834 autoplay=true]

  • ಈ ಬಾರಿ  ಲೈಂಗಿಕ ದೌರ್ಜನ್ಯ ಆರೋಪಕ್ಕಾಗಿ ನಟ, ನಿರ್ಮಾಪಕ ಕಮಲ್ ಆರ್ ಖಾನ್ ಬಂಧನ

    ಈ ಬಾರಿ ಲೈಂಗಿಕ ದೌರ್ಜನ್ಯ ಆರೋಪಕ್ಕಾಗಿ ನಟ, ನಿರ್ಮಾಪಕ ಕಮಲ್ ಆರ್ ಖಾನ್ ಬಂಧನ

    ವಹೇಳನಕಾರಿ ಟ್ವಿಟ್ ಗೆ ಸಂಬಂಧಿಸಿದಂತೆ ಬಂಧನವಾಗಿದ್ದ ನಟ, ನಿರ್ಮಾಪಕ ಕಮಲ್ ಆರ್ ಖಾನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಅನ್ನುವ ಕಾರಣಕ್ಕಾಗಿ ಇವತ್ತು ಮತ್ತೆ ಬಂಧನವಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಬಾಂದ್ರಾ ನ್ಯಾಯಾಲಯ ಆದೇಶ ನೀಡಿದೆ.

    ಶಿವಸೇನೆ ನಾಯಕರೊಬ್ಬರ ಮೇಲೆ ವಿವಾದ್ಮಾತಕ ಕಾಮೆಂಟ್ ಆರೋಪಗಳ ಮೇಲೆ ಕೆ.ಆರ್.ಕೆ ಆಗಸ್ಟ್ 30 ವರೆಗೂ ನ್ಯಾಯಾಂಗ ಬಂಧನದಲ್ಲಿದ್ದರು. ಆದರೆ ಇದೀಗ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪಕ್ಕಾಗಿ ಮತ್ತೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಘಟನೆಯು 2017ರಲ್ಲೇ ನಡೆದಿದ್ದು, ತಾವು ನಿರ್ಮಾಣ ಮಾಡುವ ಚಿತ್ರದಲ್ಲಿ ಅವಕಾಶ ಕೊಡಿಸುವುದಾಗಿ ಆ ನಟಿಗೆ ನಂಬಿಸಿ ಮೋಸ ಮಾಡಿದ್ದಾರೆಂದು ಆ ನಟಿ ದೂರಿದ್ದಾರೆ. ಇದನ್ನೂ ಓದಿ:ವಿಜಯ್ ಸೇತುಪತಿ ಅಭಿಮಾನಿಗಳಿಗೆ ಡಬಲ್ ಧಮಾಕಾ: ‘ವಿಡುದಲೈ’ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್

    ಕಮಲ್ ತಾವೊಬ್ಬ ನಿರ್ಮಾಪಕರು ಎಂದು ಪರಿಚಯ ಮಾಡಿಕೊಂಡು, ಆ ನಂತರ ನಟಿಯ ನಂಬರ್ ಪಡೆದಿದ್ದರಂತೆ. ಮೊದ ಮೊದಲು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರಂತೆ. ತನ್ನ ಹುಟ್ಟು ಹಬ್ಬದಲ್ಲಿ ಪಾಲ್ಗೊಳ್ಳಲು ನಟಿಗೆ ಕಮಲ್ ಆಹ್ವಾನ ಮಾಡಿದ್ದರಂತೆ. ಈ ಸಂದರ್ಭದಲ್ಲಿ ಜ್ಯೂಸ್ ಕುಡಿಸಿ, ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದರಂತೆ. ಆ ನಟಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದರು ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ನಿರ್ಮಾಪಕಿ: ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಆಪಲ್ ಬಾಕ್ಸ್ ಗಿಫ್ಟ್

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ನಿರ್ಮಾಪಕಿ: ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಆಪಲ್ ಬಾಕ್ಸ್ ಗಿಫ್ಟ್

    ಗಣೇಶ ಹಬ್ಬದಂದು ಬುಧವಾರ ಬೆಳಗ್ಗೆ 11.15ಕ್ಕೆ ಸ್ವೀಟ್ ನ್ಯೂಸ್ ಕೊಡುವುದಾಗಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕುತೂಹಲ ಮೂಡಿಸಿದ್ದರು. ಸಿಹಿ ಸುದ್ದಿ ಯಾವುದಿರಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದರು. ಕೊನೆಗೂ ರಮ್ಯಾ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಈವರೆಗೂ ಬೇರೆಯವರ ಬ್ಯಾನರ್ ನಲ್ಲಿ ನಟಿಸುತ್ತಿದ್ದ ರಮ್ಯಾ, ಸ್ವತಃ ತಮ್ಮದೇ ಬ್ಯಾನರ್ ಶುರು ಮಾಡಿ ಅಚ್ಚರಿ ಮೂಡಿಸಿದ್ದಾರೆ.

    ರಮ್ಯಾ ಕೊಡುವ ಸ್ವೀಟ್ ನ್ಯೂಸ್ ಯಾವುದು ಎನ್ನುವುದರ ಸುತ್ತ ಹಲವು ವಿಶ್ಲೇಷಣೆಗಳು ನಡೆದಿದ್ದವು. ನಟಿಯಾಗಿ ಅವರು ವಾಪಸ್ಸಾಗುತ್ತಿದ್ದಾರಾ? ಅಥವಾ ನಿರ್ಮಾಪಕಿಯಾಗಿ ನಿರ್ಮಾಣ ಸಂಸ್ಥೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರಾ ಎನ್ನುವ ಕುತೂಹಲ ಮೂಡಿಸಿತ್ತು. ಕೊನೆಗೂ ರಮ್ಯಾ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ತಮ್ಮದೇ ಆಪಲ್ ಬಾಕ್ಸ್ ಸ್ಟುಡಿಯೋಸ್ ಸಂಸ್ಥೆಯನ್ನು ಶುರು ಮಾಡಿದ್ದು, ಈ ಸಂಸ್ಥೆಯ ಮೂಲಕ ಸಿನಿಮಾ ಮಾಡಲಿದ್ದಾರೆ. ಈ ಸಂಸ್ಥೆಯ ಮೂಲಕ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಈ ಹಿಂದೆ ರಾಜ್ ಬಿ ಶೆಟ್ಟಿ ಅವರ ಸಿನಿಮಾದ ಮೂಲಕ ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ, ಇಂಥದ್ದೊಂದು ಮಾತುಕತೆ ನಡೆದೇ ಇಲ್ಲ ಎಂದೂ ಹೇಳಲಾಗುತ್ತಿದೆ. ರಾಜ್ ಬಿ ಶೆಟ್ಟಿ ಅವರು ರಮ್ಯಾಗಾಗಿ ಯಾವುದೇ ಸಿನಿಮಾ ಮಾಡುತ್ತಿಲ್ಲ ಎನ್ನುವ ಮಾಹಿತಿಯೂ ಇದೆ. ಹಾಗಾಗಿ ರಮ್ಯಾ ಬ್ಯಾನರ್ ನಲ್ಲಿ ಬರುವ ಮೊದಲ ಸಿನಿಮಾ ಯಾವುದು ಎನ್ನುವ ಕುತೂಹಲ ಮೂಡಿದೆ.

    Live Tv
    [brid partner=56869869 player=32851 video=960834 autoplay=true]

  • ನಾಳೆ ರಮ್ಯಾ ಕೊಡುವ ಗುಡ್ ನ್ಯೂಸ್ ಏನು? ನಿರ್ಮಾಣ ಸಂಸ್ಥೆ ಶುರು ಮಾಡ್ತಿದ್ದಾರಂತೆ ಸ್ಯಾಂಡಲ್ ವುಡ್ ಕ್ವೀನ್

    ನಾಳೆ ರಮ್ಯಾ ಕೊಡುವ ಗುಡ್ ನ್ಯೂಸ್ ಏನು? ನಿರ್ಮಾಣ ಸಂಸ್ಥೆ ಶುರು ಮಾಡ್ತಿದ್ದಾರಂತೆ ಸ್ಯಾಂಡಲ್ ವುಡ್ ಕ್ವೀನ್

    ನಾಳೆ ಬೆಳಗ್ಗೆ 11.30ಕ್ಕೆ ಸ್ವೀಟ್ ನ್ಯೂಸ್ ಕೊಡುವುದಾಗಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಸ್ವೀಟ್ ನ್ಯೂಸ್ ಯಾವುದು ಎಂಬುದರ ಕುರಿತು ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸಖತ್ ಚರ್ಚೆ ನಡೆಯುತ್ತಿದ್ದು, ರಮ್ಯಾ ನಡೆ ಭಾರೀ ಕುತೂಹಲವನ್ನಂತೂ ಮೂಡಿಸಿದೆ.

    ರಮ್ಯಾ ಕೊಡುವ ಸ್ವೀಟ್ ನ್ಯೂಸ್ ಯಾವುದು ಎನ್ನುವುದರ ಸುತ್ತ ಹಲವು ವಿಶ್ಲೇಷಣೆಗಳು ನಡೆದಿದ್ದು, ನಟಿಯಾಗಿ ಅವರು ವಾಪಸ್ಸಾಗುತ್ತಿದ್ದಾರಾ? ಅಥವಾ ನಿರ್ಮಾಪಕಿಯಾಗಿ ನಿರ್ಮಾಣ ಸಂಸ್ಥೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರಾ ಎನ್ನುವ ಕುತೂಹಲ ಮೂಡಿದೆ. ರಮ್ಯಾ ಅವರ ಆಪ್ತರ ಪ್ರಕಾರ ನಾಳೆ ರಮ್ಯಾ ಅವರು ತಮ್ಮ ನಿರ್ಮಾಣ ಸಂಸ್ಥೆಯನ್ನು ಪರಿಚಯಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಈ ಹಿಂದೆ ರಾಜ್ ಬಿ ಶೆಟ್ಟಿ ಅವರ ಸಿನಿಮಾದ ಮೂಲಕ ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ, ಇಂಥದ್ದೊಂದು ಮಾತುಕತೆ ನಡೆದೇ ಇಲ್ಲ ಎಂದೂ ಹೇಳಲಾಗುತ್ತಿದೆ. ರಾಜ್ ಬಿ ಶೆಟ್ಟಿ ಅವರು ರಮ್ಯಾಗಾಗಿ ಯಾವುದೇ ಸಿನಿಮಾ ಮಾಡುತ್ತಿಲ್ಲ ಎನ್ನುವ ಮಾಹಿತಿಯೂ ಇದೆ. ಹಾಗಾಗಿ ರಮ್ಯಾ ಬ್ಯಾನರ್ ನಲ್ಲಿ ಬರುವ ಮೊದಲ ಸಿನಿಮಾ ಯಾವುದು ಎನ್ನುವ ಕುತೂಹಲ ಮೂಡಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ಯಾಂಡಲ್‍ವುಡ್ ಹಿರಿಯ ನಿರ್ಮಾಪಕ ನರ್ಗಿಸ್ ಬಾಬು ಇನ್ನಿಲ್ಲ

    ಸ್ಯಾಂಡಲ್‍ವುಡ್ ಹಿರಿಯ ನಿರ್ಮಾಪಕ ನರ್ಗಿಸ್ ಬಾಬು ಇನ್ನಿಲ್ಲ

    ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಿರ್ಮಾಪಕ ನರ್ಗಿಸ್ ಬಾಬು(76) ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನರ್ಗಿಸ್ ಬಾಬು ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಒತ್ತಡ –ಜಮೀರ್ ಬಾಯಿ ಮುಚ್ಚಿಸಿದ ನಾಯಕರು

    ನರ್ಗಿಸ್ ಬಾಬು ಅವರು, ನರ್ಗಿಸ್ ಆಂಡ್ ಎಂಟರ್‌ಪ್ರೈಸಸ್ ಮೂಲಕ 23 ಚಿತ್ರಗಳನ್ನ ನಿರ್ಮಿಸಿದ್ದರು. ಮೊದಲು ಚಿತ್ರ ಹಂಚಿಕೆ ಮಾಡುತ್ತಾ ಚಿತ್ರೋದ್ಯಮಕ್ಕೆ ಕಾಲಿಟ್ಟ ಇವರು ಕನ್ನಡದಲ್ಲಿ ಸುಂದರ ಪುರುಷ ಸಿನಿಮಾವನ್ನು ಮೊದಲ ಬಾರಿಗೆ ನಿರ್ಮಾಣ ಮಾಡಿದರು. ನಂತರ ಯಾರಿಗೆ ಬೇಡ ದುಡ್ಡು, ಧನ್ ಧನಾ ಧನ್, ಅನಂತ್ ಗೌಡ ವರ್ಸಸ್ ರೆಡ್ಡಿ ಸಿನಿಮಾಗಳನ್ನು ನಿರ್ಮಿಸಿದರು.

    ಅನಂತ್ ನಾಗ್, ಶಶಿಕುಮಾರ್, ನೆನಪಿರಲಿ ಪ್ರೇಮ್ ಹೀಗೆ ಹಲವಾರು ನಟರ ಸಿನಿಮಾಗಳಿಗೆ ನರ್ಗಿಸ್ ಬಾಬು ಅವರು ಬಂಡವಾಳ ಹೂಡಿದ್ದರು. ಕಳೆದ 50 ವರ್ಷಗಳಿಂದ ವಿತರಕರಾಗಿ 600ಕ್ಕೂ ಹೆಚ್ಚು ಸಿನಿಮಾಗಳನ್ನ ವಿತರಣೆ ಮಾಡಿದ್ದಾರೆ. ಅಲ್ಲದೇ 2014ರಲ್ಲಿ ತೆರೆ ಕಂಡ ಶಿವರಾಜ್‍ಕುಮಾರ್ ಹಾಗೂ ರಮ್ಯಾ ಅಭಿನಯದ ಆರ್ಯನ್ ಚಿತ್ರವನ್ನು ನಿರ್ಮಿಸಿದ್ದರು. ಇದನ್ನೂ ಓದಿ: ಲಂಪಿ ರೋಗ: ರಾಜಸ್ಥಾನದಲ್ಲಿ 12 ಸಾವಿರಕ್ಕೂ ಹೆಚ್ಚು ಮೂಕಪ್ರಾಣಿಗಳು ಬಲಿ

    ನರ್ಗಿಸ್ ಬಾಬು ಅವರಿಗೆ 6 ಮಕ್ಕಳಿದ್ದು, ಇವರಲ್ಲಿ ಕಮಾರ್ ಹಾಗೂ ವಸೀಮ್ ಎಂಬ ಇಬ್ಬರು ಮಕ್ಕಳು ಸ್ಯಾಂಡಲ್‍ವುಡ್‍ನಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. 73 ವರ್ಷದ ನರ್ಗಿಸ್ ಬಾಬು ಅವರ ಅಂತ್ಯಕ್ರಿಯೆಯನ್ನು ಮುನುರೆಡ್ಡಿ ಪಾಳ್ಯದಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಇಂದು ಮಧ್ಯಾಹ್ನ ನಡೆಸಲು ನಿರ್ಧರಿಸಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]