Tag: producer

  • ಸುದೀಪ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ನ್ಯಾಯ ಸಿಗುವ ತನಕ ಪ್ರತಿಭಟನೆ- ಎನ್.ಕುಮಾರ್

    ಸುದೀಪ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ನ್ಯಾಯ ಸಿಗುವ ತನಕ ಪ್ರತಿಭಟನೆ- ಎನ್.ಕುಮಾರ್

    ಕಿಚ್ಚ ಸುದೀಪ್ (Kiccha Sudeep)-ನಿರ್ಮಾಪಕ ಎನ್.ಕುಮಾರ್ (N.Kumar) ನಡುವೆ ಮುಂದುವರೆದ ಜಟಾಪಟಿ ಮುಂದುವರೆದಿದೆ. ಹಣ ನಡೆದು, ಕಾಲ್‌ಶೀಟ್ ನೀಡಿಲ್ಲ ಎಂದು ಸುದೀಪ್ ವಿರುದ್ಧ ನಿರ್ಮಾಪಕ ಕುಮಾರ್ ಆರೋಪಿಸಿದ್ದರು. ಈ ವಿಚಾರಕ್ಕೆ ಕಿಚ್ಚ ಸುದೀಪ್ ಇದೆಲ್ಲವನ್ನು ನ್ಯಾಯಾಲಯದಲ್ಲಿಯೇ ನೋಡಿಕೊಳ್ಳುತ್ತೇವೆ ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ನಿರ್ಮಾಪಕ ಕುಮಾರ್ ಫಿಲ್ಮ್ ಚೆಂಬರ್ ಮುಂದೆ ಧರಣಿ ಕೂತಿದ್ದಾರೆ. ನ್ಯಾಯ ಸಿಗುವ ತನಕ ಫಿಲ್ಮ್ ಚೆಂಬರ್ (Film Chamber) ಮುಂದೆ ಪ್ರತಿಭಟನೆ ಮಾಡ್ತೀವಿ ಅಂತಾ ನಿರ್ಮಾಪಕ ಕುಮಾರ್ ಮಾತನಾಡಿದ್ದಾರೆ.

    ಪ್ರತಿಭಟನೆ ವೇಳೆ ಮಾತನಾಡಿದ ನಿರ್ಮಾಪಕ ಕುಮಾರ್, ಎಲ್ಲರಿಗೂ ಗೊತ್ತು ನಂಗೆ ಆಗಿರುವ ಸಮಸ್ಯೆ. ಫಿಲ್ಮ್ ಚೆಂಬರ್ ಚಿತ್ರರಂಗಕ್ಕೆ ಒಂದು ಮನೆ ಇದ್ದ ಹಾಗೆ. ಹೀಗಾಗಿ ಇಲ್ಲಿನೇ ಬಗೆಹರಿಸಿಕೊಳ್ಳಲು ಬಂದಿದ್ದೇನೆ. ಸುದೀಪ್ ಅವರ ಬಗ್ಗೆ ಎಲ್ಲಿಯೂ ಕೆಟ್ಟದಾಗಿ ಮಾತನಾಡಿಲ್ಲ. ನಮಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂಬುದಷ್ಟೇ ಹೇಳಿದ್ದೀನಿ. ವಾಣಿಜ್ಯ ಮಂಡಳಿಯಲ್ಲಿ ಬಗೆಹರಿಸಿಕೊಳ್ಳುವುದು ನನ್ನ ಉದ್ದೇಶ. ಸಮಸ್ಯೆ ಬಗೆಹರಿಸಿಕೊಳ್ಳುವ ತನಕ ಇಲ್ಲಿಯೇ ಧರಣಿ ಕುಳಿತುಕೊಳ್ಳುತ್ತೇನೆ. ಇದನ್ನೂ ಓದಿ:ನ್ಯಾಯಕ್ಕಾಗಿ ಇಂದು ಫಿಲ್ಮ್ ಚೇಂಬರ್ ಮುಂದೆ ನಿರ್ಮಾಪಕ ಎನ್.ಕುಮಾರ್ ಪ್ರತಿಭಟನೆ

    ನಾನು ಯಾರ ಸಹಾಯವನ್ನು ಕೇಳಿಲ್ಲ. ನಮ್ಮದು ಏನಿದೆ ಅದನ್ನ ಕ್ಲಿಯರ್ ಮಾಡಿದ್ರೆ ಸಾಕು. ನಾವೂ ನಿರ್ಮಾಪಕರು, ಸಾಕಷ್ಟು ಜನರನ್ನು ಬೆಳೆಸಿದ್ದೀವಿ. ಸಭೆಗೆ ಬರಲಿ, ಸಭೆಯ ಮುಂದೆ ಎಲ್ಲಾ ದಾಖಲೆಗಳನ್ನು ನೀಡುತ್ತೇನೆ. ಯಾರಿಗೂ ಅಗೌರವ ಆಗಬಾರದು, ಗೌರವ ಉಳಿಯಬೇಕು. ನನಗೆ ತೊಂದರೆಯಾದಾಗ ನಾನು ಯಾರ ಮುಖಾಂತರ ಕೇಳಬೇಕು. ಮಾಧ್ಯಮದವರ ಮುಂದೆಯೇ ಕೇಳಬೇಕು. ದಾಖಲೆಗಳು ಖಂಡಿತ ಇದೆ ಕೊಡ್ತೀನಿ.

    ರಾಜಿ ಸಂಧಾನಕ್ಕೆ ನಾವೂ ತಯಾರಿದ್ದೀವಿ. ಅವರು ಕರೆಯಬೇಕು, ಆದರೆ ನಾವೇ ಕರೆಯುತ್ತೀದ್ದೀವಿ. ಪ್ರೀತಿಯಿಂದ ನಡೆದರೆ ಮಾತ್ರ ವ್ಯವಹಾರ. ಯಾರನ್ನು, ಯಾವುದಕ್ಕೂ ಬಲವಂತ ಮಾಡುವುದಕ್ಕೆ ಆಗಲ್ಲ. ನಮ್ಮಲ್ಲಿರುವ ಹಿರಿಯರು ಅವರಿಗೆ ಮಾರ್ಗದರ್ಶನ ನೀಡಬೇಕು. ಶಿವಣ್ಣ ಭೇಟಿಗೆ ನಮ್ಮ ಅಧ್ಯಕ್ಷರು ಬಂದ ಮೇಲೆ ನಿರ್ಧಾರ ಮಾಡುತ್ತೇವೆ. ಈ ವೇಳೆ ಸೂರಪ್ಪ ಬಾಬು ಹಿಂದೆ ನಿಂತು ಮಾಡಿಸುತ್ತಿರುವ ವಿಚಾರ ಸುಳ್ಳು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖ್ಯಾತ ನಟ ಧನುಷ್ ಮೇಲೆ ನಿಷೇಧದ ತೂಗುಕತ್ತಿ

    ಖ್ಯಾತ ನಟ ಧನುಷ್ ಮೇಲೆ ನಿಷೇಧದ ತೂಗುಕತ್ತಿ

    ಮುಂಗಡ ಹಣ ಪಡೆದುಕೊಂಡು ಈವರೆಗೂ ಕಾಲ್ ಶೀಟ್ ನೀಡದೇ ಇರುವ ನಟ ನಟಿಯರ ವಿರುದ್ಧ ತಮಿಳು ಚಿತ್ರ ನಿರ್ಮಾಪಕರು ಗರಂ ಆಗಿದ್ದಾರೆ. ಮುಂಗಡ ಹಣ ಪಡೆದೂ, ಶೂಟಿಂಗ್ ಬಗ್ಗೆ ಚಕಾರ ಎತ್ತದ ನಟ-ನಟಿಯರು ವಿರುದ್ಧ ತಮಿಳು ಫಿಲ್ಮ್ ಚೇಂಬರ್ ನಲ್ಲಿ ದೂರು ದಾಖಲಾಗಿದ್ದು, ಧನುಷ್ (Dhanush) ಸೇರಿದಂತೆ ಹಲವು ಕಲಾವಿದರ ಮೇಲೆ ನಿಷೇಧದ (Ban) ತೂಗುಕತ್ತಿ ತೂಗಾಡುತ್ತಿದೆ.

    ಮೊನ್ನೆಯಷ್ಟೇ ಚೆನ್ನೈನ ಅಣ್ಣಾಸಾಲೈನಲ್ಲಿ ನಡೆದ ನಿರ್ಮಾಪಕರ (Film Chamber) ಹಾಗೂ ಕಲಾವಿದರ  ಸಂಘದ ಸಭೆಯಲ್ಲಿ ಅನೇಕ ನಿರ್ಮಾಪಕರು (Producer) ಕಲಾವಿದರ ಮೇಲೆ ಆರೋಪ ಮಾಡಿದ್ದಾರೆ.  ಅದರಲ್ಲೂ ಪ್ರಮುಖವಾಗಿ ಧನುಷ್, ರಾಯ್ ಲಕ್ಷ್ಮಿ(Roy Lakshmi) , ಅಮಲಾ ಪೌಲ್ (Amala Paul) ವಿರುದ್ಧವೂ ದೂರು ದಾಖಲಾಗಿದೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನಿಗೆ ‘ಮುಡಿ’ ಕೊಟ್ಟ ಖ್ಯಾತ ನಟ ಧನುಷ್

    ತೇನಾಂಡಾಲ್ ಫಿಲ್ಮ್ ಸಂಸ್ಥೆಯು ಧನುಷ್ ಗಾಗಿ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದೆ. ಒಂದು ತಿಂಗಳ ಕಾಲ ಶೂಟಿಂಗ್ ಕೂಡ ನಡೆದಿದೆ. ಕಾರಣಾಂತರಗಳಿಂದ ಶೂಟಿಂಗ್ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಶೂಟಿಂಗ್ ಮಾಡುವಂತೆ ಧನುಷ್ ಗೆ ಮನವಿ ಮಾಡಲಾಗಿದೆ. ಆದರೆ, ಅವರು ಸ್ಪಂದಿಸುತ್ತಿಲ್ಲ ಎಂದು ದೂರಿನಲ್ಲಿದೆ. ಈ ಸಿನಿಮಾಗಾಗಿ ಸಂಸ್ಥೆಯು 20 ಕೋಟಿ ರೂಪಾಯಿಯನ್ನು ಧನುಷ್ ಗೆ ನೀಡಿದೆಯಂತೆ.

    ಕಾಲ್ ಶೀಟ್ ನೀಡದೇ ಇರುವುದು ಒಂದು ಸಮಸ್ಯೆಯಾದರೆ, ಕೆಲ ನಟಿಯರು ಚಿತ್ರೀಕರಣಕ್ಕೆ ಬಂದರೆ, ಅವರಿಗೆ ಹತ್ತು ಜನ ಸೆಕ್ಯೂರಿಟಿ ಗಾರ್ಡ್ ಗಳು ಬೇಕೆಂದು ಹೇಳುತ್ತಾರಂತೆ. ಇದರಿಂದಾಗಿ ಭಾರೀ ಮೊತ್ತದ ಹಣವನ್ನೇ ಸಂಸ್ಥೆಯು ನೀಡಬೇಕಾಗಿದೆ. ಇದನ್ನು ತಪ್ಪಿಸುವಂತೆ ಫಿಲ್ಮ್ ಚೇಂಬರ್ ಗೆ ಕೆಲವು ನಿರ್ಮಾಪಕರು ಪತ್ರ ಬರೆದಿದ್ದಾರೆ. ಸೆಕ್ಯೂರಿಟಿ ಬೇಕಾದ ನಟಿಯರು ತಾವೇ ದುಡ್ಡು ಕೊಟ್ಟ ನೇಮಿಸಿಕೊಳ್ಳಲಿ ಎನ್ನುವುದು ನಿರ್ಮಾಪಕರ ವಾದ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್ ನಿಧನ

    ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್ ನಿಧನ

    ಸ್ಯಾಂಡಲ್‌ವುಡ್ (Sandalwood) ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್ (Producer Kcn Mohan) ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮೋಹನ್ ಅವರು ಚಿಕಿತ್ಸೆ ಫಲಿಸದೇ ಭಾನುವಾರ (ಜುಲೈ 2)ರಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.

    ಮೋಹನ್ ಒಡೆತನದಲ್ಲಿ ಜಯಸಿಂಹ, ಭಲೇ ಚತುರ, ರಮ್ಯಾ (Ramya) ನಟನೆಯ ಜೂಲಿ (Julie Film), ಹೂಮಳೆ, ಅಳಿಮಯ್ಯ, ಆಚಾರ್ಯ, ಪೊಲೀಸ್ ಪವರ್, ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ಮಾಣ ಮಾಡಿದ್ದ ಕೆಸಿಎನ್ ಮೋಹನ್ ಅವರು ತಮ್ಮ ತಂದೆ ನಿರ್ಮಾಪಕ ಕೆಸಿಎನ್ ಗೌಡ್ರು ಅವರ ನಿಧನ ಬಳಿಕ ಅನುಪಮ್ ಮೂವೀಸ್ ಜವಾಬ್ದಾರಿಯನ್ನ ಹೊತ್ತಿದ್ದರು. ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ಕೆಸಿಎನ್ ಮೋಹನ್ ಸಾಥ್ ನೀಡಿದ್ರು. ನಿರ್ಮಾಪಕ ಮೋಹನ್, ಬೆಂಗಳೂರಿನ ನವರಂಗ್ ಚಿತ್ರಮಂದಿರದ ಮಾಲಿಕರಾಗಿದ್ದಾರೆ. ಇದನ್ನೂ ಓದಿ:ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಸಾರಥ್ಯದಲ್ಲಿ ಪ್ಯಾನ್‌ ಇಂಡಿಯಾದತ್ತ ಗಣೇಶ್ ಗೋಲ್ಡನ್ ಹೆಜ್ಜೆ

    ಇದೀಗ 62ನೇ ವಯಸ್ಸಿಗೆ ಎಂದೂ ಬಾರದ ಲೋಕಕ್ಕೆ ಕೆಸಿಎನ್ ಮೋಹನ್ ಹೋಗಿದ್ದಾರೆ. ಕೆಲ ವರ್ಷಗಳ ಹಿಂದೆ ಮೋಹನ್ ಅವರ ಪತ್ನಿ ನಿಧನರಾಗಿದ್ದರು. ಸಹೋದರ ಚಂದ್ರಶೇಖರ್ ಕೂಡ ನಿಧನರಾಗಿದ್ದಾರೆ. ಇದೀಗ ಇಬ್ಬರೂ ಹೆಣ್ಣು ಮಕ್ಕಳನ್ನು ಬಿಟ್ಟು ಮೋಹನ್ ಅಗಲಿದ್ದಾರೆ. ಸಾಕಷ್ಟು ಸಮಯದಿಂದ ಮೋಹನ್ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನ ಕೂಡ ಪಡೆಯುತ್ತಿದ್ದರು. ಜುಲೈ 2ರ ಬೆಳಿಗ್ಗೆ ಕಿಡ್ನಿ ವೈಪಲ್ಯದಿಂದ ಕೆಸಿಎನ್ ಮೋಹನ್ ವಿಧಿವಶರಾಗಿದ್ದಾರೆ. ಮೋಹನ್ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ.

    ಕಸ್ತೂರಿ ನಿವಾಸ, ಭಕ್ತ ಸಿರಿಯಾಳ, ರಂಗನಾಯಕಿ, ಸನಾದಿ ಅಪ್ಪಣ್ಣ, ಸತ್ಯ ಹರಿಶ್ಚಂದ್ರ, ಬಬ್ರುವಾಹನ ಸೇರಿ ಅನೇಕ ಚಿತ್ರಗಳ ನಿರ್ಮಾಣ ಸಂಸ್ಥೆಯ ಕುಡಿ ಕೆಸಿಎನ್ ಮೋಹನ್ ಅವರಾಗಿದ್ದು, ಮೋಹನ್ ನಿಧನದ ಮೂಲಕ 50 ವರ್ಷಗಳ ಇತಿಹಾಸವುಳ್ಳ ಸಂಸ್ಥೆಯೇ ಯುಗಾಂತ್ಯವಾಗಿದೆ. ಕನ್ನಡ ಚಿತ್ರೋದ್ಯಮದಲ್ಲಿ ಬಿಗ್ ಬಜೆಟ್ ಚಿತ್ರಗಳನ್ನ ಪರಿಚಯಿಸಿದ್ದ ಸಂಸ್ಥೆ ಡಾ.ರಾಜ್ ಕುಮಾರ್ ಚಿತ್ರಗಳನ್ನ ನಿರ್ಮಿಸುವುದರ ಮೂಲಕ ಸ್ಯಾಂಡಲ್ವುಡ್ ಶ್ರೀಮಂತ ಚಿತ್ರ ನಿರ್ಮಾಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಳೆದ ಕೆಲ ವರ್ಷಗಳ ಹಿಂದೆ ಲೆಜೆಂಡ್ ‘ಕಸ್ತೂರಿ ನಿವಾಸ’ ಚಿತ್ರವನ್ನು ಕಲರ್ ಟಚ್ ಕೊಟ್ಟು ಆಧುನೀಕರಿಸಿ ನಿರ್ಮಾಪಕ ಕೆಸಿಎನ್ ಮೋಹನ್ ರೀ-ರಿಲೀಸ್ ಮಾಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರ್ಮಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಕಿರುತೆರೆ ನಟಿ

    ನಿರ್ಮಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಕಿರುತೆರೆ ನಟಿ

    ಹೆಸರಾಂತ ಧಾರಾವಾಹಿಯ ನಟಿಯೊಬ್ಬರು ಅದೇ ಧಾರಾವಾಹಿಯ ನಿರ್ಮಾಪಕನ (Producer) ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಆರೋಪ ಮಾಡಿದ್ದಾರೆ. ಸತತ ಹದಿನೈದು ವರ್ಷಗಳಿಂದ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ (Tarak Mehta Ka Ulta Chashma) ಧಾರಾವಾಹಿಯ ನಿರ್ಮಾಪಕ ಅಸಿತ್ ಕುಮಾರ್ ಮೋದಿ (Asit Kumar Modi) ಹಾಗೂ ಮತ್ತಿಬ್ಬರು ತಮಗೆ ಲೈಂಗಿಕ ಕಿರುಕುಳ ಹಾಗೂ ತಮ್ಮೊಂದಿಗೆ ದುರ್ವತನೆ ತೋರಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.

    ಈ ಆರೋಪವನ್ನು ನಿರ್ಮಾಪಕಿ ಮೋದಿ ಅಲ್ಲಗಳೆದಿದ್ದು, ತಾವು ಯಾವತ್ತಿಗೂ ಯಾರೊಂದಿಗೆ ಆ ರೀತಿಯಲ್ಲಿ ವರ್ತನೆ ಮಾಡಿಲ್ಲವೆಂದು ಪ್ರತಿಕ್ರಿಯಿಸಿದ್ದಾರೆ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ನಟಿ ಮುಂಬೈ ಪೊಲೀಸ್ ಹಾಗೂ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದು, ಆ ಪತ್ರದಲ್ಲಿ ನಿರ್ಮಾಪಕ ಅಸಿತ್ ಕುಮಾರ್ ಮೋದಿ, ಪ್ರಾಜೆಕ್ಟ್ ಹೆಡ್ ಸೋಹಾಲಿ ರೊಮಾನಿ ಹಾಗೂ ಕಾರ್ಯಕಾರಿ ನಿರ್ಮಾಪಕ ಜತಿನ್ ಬಜಾಜ್ ಹೆಸರನ್ನು ಉಲ್ಲೇಖಿಸಿದ್ದಾರೆ.  ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ

    ಈ ಧಾರಾವಾಹಿಯಲ್ಲಿ ನಟಿಯು ಮಾರ್ಚ್ 6ರಂದು ಕೊನೆಯ ಬಾರಿಗೆ ನಟಿಸಿದ್ದಾರೆ. ಮಾರ್ಚ್ 7 ರಂದು ಹೋಳಿಹಬ್ಬವಿದ್ದ ಕಾರಣದಿಂದಾಗಿ ಎರಡು ಗಂಟೆಗಳ ಕಾಲ ನಟಿ ಬ್ರೇಕ್ ಕೇಳಿದ್ದರಂತೆ. ಇತರ ನಟರಿಗೆ ಕೊಟ್ಟರೂ ತಮಗೆ ಕೊಡಲಿಲ್ಲ ಎನ್ನುವ ಕಾರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದಾಗಿ ನಿರ್ಮಾಪಕರಿಗೂ ನಟಿಗೂ ಜಗಳ ಆಗಿತ್ತು. ಅದನ್ನೆ ನೆಪವಾಗಿಟ್ಟುಕೊಂಡು ಲೈಂಗಿಕ ಆರೋಪ ಮಾಡಿದ್ದಾರೆ ಎನ್ನುವುದು ನಿರ್ಮಾಪಕರ ವಾದ.

    ಆದರೆ, ಆ ನಟಿ ಹೇಳುವುದು ಬೇರೆ. ಸುಖಾಸುಮ್ಮನೆ ಮೈಮುಟ್ಟಲು ಬರುತ್ತಿದ್ದರಂತೆ. ಸಿಂಗಾಪುರದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ರೂಮ್ ಗೆ ಆಹ್ವಾನ ಮಾಡಿದ್ದರಂತೆ. ಇದು ತಮ್ಮ ಅನುಭವ ಮಾತ್ರವಲ್ಲ, ಇತರ ನಟಿಯರಿಗೂ ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಈ ನಟಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

  • ಹಿರಿಯ ನಟ ಶ್ರೀನಿವಾಸ್ ಮೂರ್ತಿಗೆ 75 ವರ್ಷ: ಎರಡು ದಿನ ಕಾರ್ಯಕ್ರಮ

    ಹಿರಿಯ ನಟ ಶ್ರೀನಿವಾಸ್ ಮೂರ್ತಿಗೆ 75 ವರ್ಷ: ಎರಡು ದಿನ ಕಾರ್ಯಕ್ರಮ

    ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಹಿರಿಯ ನಟ (Actor) ಶ್ರೀನಿವಾಸ್ ಮೂರ್ತಿ (Srinivas Murthy). ಕೇವಲ ನಟರಾಗಿ ಮಾತ್ರವಲ್ಲ, ನಿರ್ಮಾಪಕರಾಗಿಯೂ (Producer) ಗುರುತಿಸಿಕೊಂಡವರು. ನಟನಾಗಿ ಗೆದ್ದು, ನಿರ್ಮಾಪಕರಾಗಿ ಸೋಲನ್ನುಂಡರು ಸಿನಿಮಾ ಬಗೆಗಿನ ಪ್ರೀತಿ ಯಾವತ್ತಿಗೂ ಅವರಿಗೆ ಕಡಿಮೆ ಆಗಿಲ್ಲ. ಈಗಲೂ ಸಿನಿಮಾ ಮತ್ತು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಅವರಿಗೆ ತುಂಬು 75 ವರ್ಷ.

    ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ಶ್ರೀನಿವಾಸಮೂರ್ತಿ ಅವರಿಗೆ ಈಗ 75 ವರ್ಷ (75 Years). ಅವರ ಬಣ್ಣದ ಬದುಕಿಗೆ 50 ವರ್ಷ. ಈ ಎರಡು ಸಂಭ್ರಮಗಳನ್ನು ಸಂಭ್ರಮಿಸಲು ಇದೇ ಮೇ 15 ಹಾಗೂ 16 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ತರಕಾರಿ ಚೆನ್ನಿ’ ಹಾಗೂ ‘ಸದಾರಮೆ ಕಳ್ಳ’ ಎಂಬ ಎರಡು ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಕುರಿತು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸಮೂರ್ತಿ ಮಾಹಿತಿ ನೀಡಿದರು. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ

    ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬಂದು ಸರ್ವೆ ಇಲಾಖೆ ಯಲ್ಲಿ ಕೆಲಸ ಮಾಡುತ್ತಿದ್ದೆ. ಆ ವೇಳೆ ನಾಟಕದಲ್ಲಿ ಅಭಿನಯಿಸಲು ಪ್ರಾರಂಭ ಮಾಡಿದೆ. ಒಂದು ಸಲ ನನ್ನ ನಾಟಕವನ್ನು ನೋಡಿದ ಬಂಗಾರಪ್ಪನವರು ನನ್ನನ್ನು ಅಭಿನಂದಿಸಿದರು. ಅಲ್ಲಿಂದ ನನ್ನ ನಟನೆ ಮತ್ತಷ್ಟು ಹೆಚ್ಚಾಯಿತು. ತಮಿಳಿನ ಒಂದು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೆ. ಆ ಚಿತ್ರ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕರಿಗೆ ತೊಂದರೆಯಾಯಿತು.  ‘ಅಪ್ಪು’ ಚಿತ್ರದ ನಂತರ ಪುರಿ ಜಗನ್ನಾಥ್ ಅವರು ತೆಲುಗು ಚಿತ್ರರಂಗಕ್ಕೆ ನನ್ನ ಕರೆದರೂ, ಆಗ ಇಲ್ಲಿ ನಾನು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೆ ಅಲ್ಲಿಗೆ ಹೋಗಲಿಲ್ಲ. ರಜನಿಕಾಂತ್ ಅವರು ಸಹ ನೀವು ಯಾಕೆ ತಮಿಳಿನಲ್ಲಿ ನಟಿಸಬಾರದು? ಎಂದು ಕೇಳುತ್ತಿರುತ್ತಾರೆ  ಎಂದು ಶ್ರೀನಿವಾಸಮೂರ್ತಿ ಅವರು ಬೇರೆ ಭಾಷೆಗಳಿಂದ ತಮಗೆ ಬಂದಿದ್ದ ಅವಕಾಶಗಳ ಕುರಿತು ಮಾತನಾಡಿದರು.

  • ‘ದಿ ಕೇರಳ ಫೈಲ್ಸ್’ ನಿರ್ಮಾಪಕನನ್ನು ಗಲ್ಲಿಗೇರಿಸಿ : ಸಿಡಿದೆದ್ದ ಎನ್.ಸಿ.ಪಿ ನಾಯಕ

    ‘ದಿ ಕೇರಳ ಫೈಲ್ಸ್’ ನಿರ್ಮಾಪಕನನ್ನು ಗಲ್ಲಿಗೇರಿಸಿ : ಸಿಡಿದೆದ್ದ ಎನ್.ಸಿ.ಪಿ ನಾಯಕ

    ವಿವಾದಿತ ‘ದಿ ಕೇರಳ ಫೈಲ್ಸ್’ (The Kerala Story) ಸಿನಿಮಾದ ನಿರ್ಮಾಪಕನ (Producer) ವಿರುದ್ಧ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್.ಸಿ.ಪಿ) (NCP)  ನಾಯಕ ಜಿತೇಂದ್ರ ಅವ್ಹಾದ್ (Jitendra Awhad) ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಿನಿಮಾದಲ್ಲಿ ಸುಳ್ಳುಗಳನ್ನೇ ತುಂಬಿಸಿರುವ ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ (Hanging) ಎಂದು ಹೇಳಿಕೆ ನೀಡಿದ್ದಾರೆ. ಮತಿಯ ಭಾವನೆಯನ್ನು ಹರಡುತ್ತಿರುವ ಈ ಸಿನಿಮಾವನ್ನು ಕೂಡಲೇ ಭಾರತದಾದ್ಯಂತ ನಿಷೇಧ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಮೊದ ಮೊದಲು ಈ ಸಿನಿಮಾದಲ್ಲಿ 32 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಹೇಳಿದ್ದರು. ಆನಂತರ ಅದು 3 ಸಾವಿರಕ್ಕೆ ಇಳಿಯಿತು. ಮೂವತ್ತೆರಡು ಸಾವಿರಕ್ಕೂ, ಮೂರು ಸಾವಿರಕ್ಕೂ ವ್ಯತ್ಯಾಸ ಗೊತ್ತಿಲ್ಲವಾ? ಎಂದು ಪ್ರಶ್ನೆ ಮಾಡಿರುವ ಜಿತೇಂದ್ರ, ಕೇರಳದಲ್ಲಿ ಹಿಂದೂಗಳ ಮದುವೆಯನ್ನು ಮುಸ್ಲಿಂ ನೆರವೇರಿಸಿದ್ದನ್ನು ಯಾಕೆ ತೋರಿಸಿಲ್ಲ ಎಂದು ಅವರು ಕೇಳಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ‘ಖುಷಿ’ಯ ಹಾಡು ರಿಲೀಸ್

    ಕೇರಳದಲ್ಲಿ ಥಿಯೇಟರ್ ಮಾಲೀಕರು ಚಿತ್ರ ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದರೆ, ತಮಿಳು ನಾಡಿನಲ್ಲೂ ಅಘೋಷಿದ ನಿಷೇಧ ಹೇರಲಾಗಿದೆ. ಹಾಗಾಗಿ ಆ ರಾಜ್ಯದಲ್ಲೂ ಚಿತ್ರ ಪ್ರದರ್ಶನವಿಲ್ಲ. ಇನ್ನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಚಿತ್ರಕ್ಕೆ ನಿಷೇಧವನ್ನೇ ಹೇರಿದ್ದಾರೆ. ಹೀಗಾಗಿ ನಿರ್ಮಾಪಕರು ಅಕ್ಷರಶಃ ಕಂಗಾಲಾಗಿದ್ದಾರೆ. ಈ ಕುರಿತಂತೆ ಅವರು ಕೋರ್ಟ್ ಮೊರೆ ಹೋಗಿದ್ದಾರೆ.

    ದಿ ಕೇರಳ ಸ್ಟೋರಿ ಚಿತ್ರದ ನಿರ್ಮಾಪಕರು ಪಶ್ಚಿಮ ಬಂಗಾಳದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಅದೇ ಅರ್ಜಿಯಲ್ಲೇ ತಮಿಳು ನಾಡು ಸರಕಾರಕ್ಕೆ ಚಿತ್ರಮಂದಿರಗಳಿಗೆ ಭದ್ರತೆ ನೀಡುವಂತೆ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಭದ್ರತೆ ದೃಷ್ಟಿ ಕಾರಣವನ್ನು ನೀಡಿ ತಮಿಳು ನಾಡಿನ ಚಿತ್ರಮಂದಿರಗಳ ಮಾಲೀಕರು ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದರಿಂದ ಒಂದೇ ಅರ್ಜಿಯಲ್ಲೇ ಎರಡೂ ವಿಷಯಗಳನ್ನು ಪ್ರಸ್ತಾಪ ಮಾಡಿದೆ ಚಿತ್ರತಂಡ.

    ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗಿದೆ. ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಕೇರಳದಲ್ಲೂ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದರು. ಕೇರಳ ಸರಕಾರದ ಸಪೋರ್ಟ್ ಇಲ್ಲದ ಕಾರಣದಿಂದಾಗಿ ಮತ್ತು ಪ್ರತಿಭಟನೆಯ ಕಾವು ಜೋರಾಗಿದ್ದರಿಂದ ಚಿತ್ರಮಂದಿರಗಳ ಮಾಲೀಕರು ಭಯದಲ್ಲಿದ್ದಾರಂತೆ. ಈ ಕಾರಣದಿಂದಾಗಿ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿಲ್ಲ.

  • ಸಾವಿನ ಬಗ್ಗೆ ಸುಳ್ಳು ಸುದ್ದಿ, ಅಪಪ್ರಚಾರ ಮಾಡಿದವರಿಗೆ ದ್ವಾರಕೀಶ್ ಸ್ಪಷ್ಟನೆ

    ಸಾವಿನ ಬಗ್ಗೆ ಸುಳ್ಳು ಸುದ್ದಿ, ಅಪಪ್ರಚಾರ ಮಾಡಿದವರಿಗೆ ದ್ವಾರಕೀಶ್ ಸ್ಪಷ್ಟನೆ

    ನ್ನಡ ಚಿತ್ರರಂಗ ಕಂಡ ಖ್ಯಾತ ನಟ- ನಿರ್ದೇಶಕ ದ್ವಾರಕೀಶ್ (Actor Dwarakish) ಅವರು ತಮ್ಮ ಬಗ್ಗೆ ಹರಿದಾಡುತ್ತಿದ್ದ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಆರೋಗ್ಯದ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳಿಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:3 ವರ್ಷಗಳ ನಂತರ ಸ್ವೀಟಿ ಅನುಷ್ಕಾ ಶೆಟ್ಟಿ ಕಮ್‌ಬ್ಯಾಕ್

    ನಟ, ನಿರ್ದೇಶಕ, ನಿರ್ಮಾಪಕನಾಗಿ (Producer) ಸಿನಿಮಾರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡವರು ದ್ವಾರಕೀಶ್ (Dwarakish) ಅವರು ಕೆಲ ತಿಂಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಅದಕ್ಕೆ ಸೂಕ್ತ ಚಿಕಿತ್ಸೆ ಕೂಡ ದ್ವಾರಕೀಶ್ ಅವರು ಪಡೆದುಕೊಂಡಿದ್ದರು. ಇದೀಗ ಅವರು ಫಿಟ್ ಆಗಿ ಆರಾಮಾಗಿದ್ದಾರೆ.

    ನಟ ದ್ವಾರಕೀಶ್ ಆರೋಗ್ಯದ ಬಗ್ಗೆ ಭಾನುವಾರ (ಏ.30) ಬೆಳಿಗ್ಗೆಯಿಂದ ಇಲ್ಲಸಲ್ಲದ ಊಹಾಪೋಹಗಳು ಹಬ್ಬಿತ್ತು. ಹಿರಿಯ ನಟ ದ್ವಾರಕೀಶ್ ನಿಧನ ಅಂತಾ ಅಪಪ್ರಚಾರ ಮಾಡಲಾಗಿತ್ತು. ಅದಕ್ಕೆ ಇದೀಗ ದ್ವಾರಕೀಶ್ ಅವರೇ ಸ್ವತಃ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಸಾಕಿ ಬೆಳೆಸಿದ ದ್ವಾರಕೀಶ್, ನಾನು ಚೆನ್ನಾಗಿದ್ದೀನಿ ನಿಮ್ಮೆಲ್ಲರ ಆಶೀರ್ವಾದ ಬೇಕು. ಗಟ್ಟಿ ಮುಟ್ಟಾಗಿದ್ದೀನಿ, ಯಾವ ಚಿಂತೆಯೂ ಇಲ್ಲಾ. ನಗು ನಗುತ್ತಾ ಚೆನ್ನಾಗಿದ್ದೀನಿ ಎಂದು ದ್ವಾರಕೀಶ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ನಿಧನದ ವದಂತಿಗೆ ಬ್ರೇಕ್ ಹಾಕಿದ್ದಾರೆ.

  • ಅನುಷ್ಕಾ ಕೆರಿಯರ್ ಹಾಳು ಮಾಡಲು ಹೊರಟಿದ್ರಾ ಕರಣ್ ಜೋಹರ್?

    ಅನುಷ್ಕಾ ಕೆರಿಯರ್ ಹಾಳು ಮಾಡಲು ಹೊರಟಿದ್ರಾ ಕರಣ್ ಜೋಹರ್?

    ಬಾಲಿವುಡ್ (Bollywood) ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಈಗಾಗಲೇ ಸಾಕಷ್ಟು ಟೀಕೆಗಳನ್ನ ಎದುರಿಸುತ್ತಿದ್ದಾರೆ. ನೆಪೋಟಿಸಂ ವಿಷ್ಯ ಸೇರಿದಂತೆ ಹಲವು ವಿಚಾರಗಳಿಗೆ ಕರಣ್ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಪ್ರಿಯಾಂಕಾ ಚೋಪ್ರಾ ವಿವಾದದ ಬೆನ್ನಲ್ಲೇ ಅನುಷ್ಕಾ ಶರ್ಮಾ (Anushka Sharma) ಸಿನಿಮಾ ಕೆರಿಯರ್ (Career) ನಾಶ ಮಾಡಿಬಿಡುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ಕರಣ್‌ ಜೋಹರ್ ಒಪ್ಪಿಕೊಂಡಿದ್ದಾರೆ.

    Rab Ne Bana Di Jodi ಸಿನಿಮಾ 2008ರಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಶಾರುಖ್ ಖಾನ್- ಅನುಷ್ಕಾ ಶರ್ಮಾ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು. ಆದರೆ ತೆರೆಯ ಹಿಂದೆ, ಈ ಸಿನಿಮಾ ಶೂಟಿಂಗ್‌ಗಿಂತ ಮುಂಚೆ ನಿರ್ದೇಶಕ ಆದಿತ್ಯಾ ಚೋಪ್ರಾಗೆ ತಮ್ಮ ಸಿನಿಮಾದಿಂದ ಅನುಷ್ಕಾರನ್ನು ಕೈ ಬಿಡುವಂತೆ ಸಲಹೆ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಅನುಷ್ಕಾ ಬೇಡ ಎಂದಿದ್ದೇಕೆ? ಬೇರೆ ಯಾವ ನಟಿಯ ಹೆಸರನ್ನು ಸೂಚಿಸಿದ್ದರು? ಅಸಲಿ ವಿಚಾರವೇನು ಎಂಬುದನ್ನ ಕರಣ್ ಜೋಹರ್ ಬಾಯ್ಬಿಟ್ಟಿದ್ದಾರೆ.

    ನಿರ್ದೇಶಕ ಆದಿತ್ಯ ಚೋಪ್ರಾ ‘ರಬ್ ನೆ ಬನಾ ದಿ ಜೋಡಿ’ ಸಿನಿಮಾ ಮಾಡಲು ಹೊರಟಿದ್ದರು. ಶಾರುಖ್ ಖಾನ್‌ಗೆ (Sharukh Khan) ಲೀಡ್ ರೋಲ್‌ಗೆ ಆಯ್ಕೆ ಮಾಡಲಾಗಿತ್ತು. ಇತ್ತ ಹೀರೊಯಿನ್ ಹುಡುಕಾಟ ನಡೆಯುತ್ತಿತ್ತು. ಈ ವೇಳೆ ಆದಿತ್ಯ ಚೋಪ್ರಾ, ಕರಣ್ ಬಳಿ ಅನುಷ್ಕಾ ಶರ್ಮಾ ಫೋಟೊ ತೋರಿಸಿ ಅಭಿಪ್ರಾಯ ಕೇಳಿದ್ದರು. ಆಗ ಕರಣ್ ಮತ್ತೊಬ್ಬ ನಟಿ ಸೋನಮ್ ಕಪೂರ್ (Sonam Kapoor) ಹೆಸರನ್ನು ಸೂಚಿಸಿದ್ದರು. ಇದನ್ನೂ ಓದಿ:ರಾಜಕೀಯಕ್ಕೆ ಶುಭಾ ಪೂಂಜಾ ಎಂಟ್ರಿ ಕೊಡ್ತಾರಾ? ಸ್ಪಷ್ಟನೆ ನೀಡಿದ ನಟಿ

    ಬೇಡ ಬೇಡ.. ಅನುಷ್ಕಾರನ್ನ ಸಿನಿಮಾಗೆ ಹಾಕಿಕೊಳ್ಳೋಕೆ ಹುಚ್ಚು ಹಿಡಿದಿದೆಯಾ? ಈ ಸಿನಿಮಾಗಾಗಿ ಅನುಷ್ಕಾ ಜೊತೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದೆ ಈ ಬಗ್ಗೆ ಕರಣ್ ಜೋಹರ್ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅನುಷ್ಕಾ ಶರ್ಮಾ ಸಿನಿಮಾ ಬದುಕು ನಾಶವಾಗುತ್ತಿತ್ತು ಎಂದು ಮಾತನಾಡಿದ್ದಾರೆ. ರಿಲೀಸ್ ಸಮಯದಲ್ಲಿ ಒಲ್ಲದ ಮನಸ್ಸಿನಿಂದ ಸಿನಿಮಾ ನೋಡಿದ್ದೆ, ಆ ಚಿತ್ರದ ಯಶಸ್ಸನ್ನ ತಡೆಯಲಾಗಲಿಲ್ಲ. ಈ ವಿಚಾರವಾಗಿ ಅನುಷ್ಕಾ ಬಳಿ ಕ್ಷಮೆಯಾಚಿಸುತ್ತೇನೆ ಎಂದು ಕರಣ್ ಜೋಹರ್ ಹೇಳಿದ್ದಾರೆ.

    ‘ರಬ್ ನೆ ಬನಾ ದಿ ಜೋಡಿ’ ಸಿನಿಮಾ ಬಳಿಕ ‘ಬ್ಯಾಂಡ್ ಬಾಜಾ ಬಾರಾತ್’ ಚಿತ್ರದಲ್ಲಿ ಅನುಷ್ಕಾ ಶರ್ಮಾ ನಟನೆ ನೋಡಿ ಮೆಚ್ಚಿಕೊಂಡರು. ಮುಂದೆ ತಮ್ಮದೇ ನಿರ್ಮಾಣದ ‘ಏ ದಿಲ್ ಹೇ ಮುಷ್ಕಿಲ್’ ಚಿತ್ರಕ್ಕೆ ಅನುಷ್ಕಾ ಶರ್ಮಾರನ್ನ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ರಣ್‌ಬೀರ್ ಕಪೂರ್, ಐಶ್ವರ್ಯ ರೈ ಜೊತೆ ಅನುಷ್ಕಾ ಶರ್ಮಾ ಅದ್ಭುತವಾಗಿ ನಟಿಸಿದರು.

  • Exclusive: ರಾಜಕೀಯ ಅಖಾಡಕ್ಕೆ ನಿರ್ಮಾಪಕ ಕೆ.ಮಂಜು

    Exclusive: ರಾಜಕೀಯ ಅಖಾಡಕ್ಕೆ ನಿರ್ಮಾಪಕ ಕೆ.ಮಂಜು

    ರಾಜ್ಯದ ರಾಜಕಾರಣಕ್ಕೆ ನಿರ್ಮಾಪಕ ಕೆ.ಮಂಜು (Producer K.Manju) ಅವರು ಎಂಟ್ರಿ ಕೊಡಲಿದ್ದಾರೆ. ಪಧ್ಮನಾಭ ನಗರ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗುವ ಬಗ್ಗೆ ಇದೀಗ ನಿರ್ಮಾಪಕ ಕೆ.ಮಂಜು ಮಾತನಾಡಿದ್ದಾರೆ. ಇದನ್ನೂ ಓದಿ: ಐಟಂ ಸಾಂಗ್ ಒಪ್ಪಿಕೊಂಡಿದ್ದಕ್ಕೆ ಕಾರಣವಿದೆ : ಸಮಂತಾ ಸಿಡಿಸಿಸ ಹೊಸ ಬಾಂಬ್

    ಸ್ಯಾಂಡಲ್‌ವುಡ್ (Sandalwood)ಸಾಕಷ್ಟು ಸಿನಿಮಾಗಳಿಗೆ ಕೆ.ಮಂಜು ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೆ.ಮಂಜು ಅವರ ಕೊಡುಗೆ ಅಪಾರ. ಇದೀಗ ರಾಜಕೀಯ (Politics) ಅಖಾಡಕ್ಕೆ ಇಳಿಯುವ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

    ಪಧ್ಮನಾಭ ನಗರ (Padmanabhnagara) ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗ್ತಿನಿ ಎಂದು ಕೆ.ಮಂಜು ಹೇಳಿದ್ದಾರೆ. ಶೀಘ್ರದಲ್ಲೇ ಅಧಿಕೃತವಾಗಿ ಅನೌನ್ಸ್ ಮಾಡ್ತಿನಿ. ನಮ್ಮ ಕೆಲವು ನಾಯಕರನ್ನ ಭೇಟಿ ಮಾಡ್ತಿನಿ. ಸದ್ಯದಲ್ಲಿಯೇ ಎಲ್ಲಾ ಫೈನಲ್ ಆಗುತ್ತದೆ. ಪದ್ಮನಾಭ ನಗರದಲ್ಲಿ ಒಕ್ಕಲಿಗರ ಓಟ್ ಜಾಸ್ತಿ ಇವೆ. ನನಗೆ ಹಲವು ನಾಯಕರ ಬೆಂಬಲ ಸಿಗೋ ಸಾಧ್ಯತೆ ಇದೆ. ಹೀಗಾಗಿ ಹಿರಿಯರ ಆಶೀರ್ವಾದ ಪಡೆದು ಚುನಾವಣೆಗೆ ಸ್ಪರ್ಧಿಸುತ್ತೀನಿ. ಹಲವು ವರ್ಷಗಳಿಂದ ಸಾಮಾಜಿಕ ಸೇವೆ ಮಾಡ್ತಿದ್ದೀನಿ ಎಂದು ಕೆ.ಮಂಜು ಮಾತನಾಡಿದ್ದಾರೆ.

    ರಾಜಕೀಯ ಅಖಾಡಕ್ಕೆ ಕೆ.ಮಂಜು ಅವರ ಎಂಟ್ರಿಯಾಗುತ್ತಾ? ಮುಂದಿನ ದಿನಗಳಲ್ಲಿ ಕೆ.ಮಂಜು ಅವರ ನಡೆ ಏನಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.

  • ನಟಿ ರಮ್ಯಾ ಜೊತೆಯಾಗಿ ಸಿನಿಮಾ ನಿರ್ಮಾಣ ಮಾಡಬೇಕು : ನಟಿ ಶರ್ಮಿಳಾ ಮಾಂಡ್ರೆ

    ನಟಿ ರಮ್ಯಾ ಜೊತೆಯಾಗಿ ಸಿನಿಮಾ ನಿರ್ಮಾಣ ಮಾಡಬೇಕು : ನಟಿ ಶರ್ಮಿಳಾ ಮಾಂಡ್ರೆ

    ಮೋಹಕ ತಾರೆ ರಮ್ಯಾ (Ramya) ಜೊತೆ ಸಿನಿಮಾವೊಂದನ್ನು ನಿರ್ಮಾಣ ಮಾಡುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ ನಟಿ ಶರ್ಮಿಳಾ ಮಾಂಡ್ರೆ (Sharmila Mandre). ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ (Award) ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಶರ್ಮಿಳಾ, ‘ರಮ್ಯಾ ಅವರ ಜೊತೆ ನಾನೊಂದು ಸಿನಿಮಾ ನಿರ್ಮಾಣ (Producer) ಮಾಡಬೇಕು. ಇಬ್ಬರೂ ಒಟ್ಟಾಗಿ ವೇದಿಕೆಯ ಮೇಲೆ ಬಂದು ಅತ್ಯುತ್ತಮ ನಿರ್ಮಾಪಕಿ ಪ್ರಶಸ್ತಿಯನ್ನು ತಗೆದುಕೊಳ್ಳಬೇಕು’ ಎಂದರು.

    ನಿರ್ಮಾಪಕಿಯಾಗಿ ಈಗಾಗಲೇ ರಮ್ಯಾ ಸಿನಿಮಾ ರಂಗ ಪ್ರವೇಶ ಮಾಡಿಯಾಗಿದೆ. ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೆ ರಮ್ಯಾ ಅವರೇ ಬಂಡವಾಳ ಹೂಡಿದ್ದಾರೆ. ಶರ್ಮಿಳಾ ಮಾಂಡ್ರೆ ಈಗಾಗಲೇ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ದಸರಾ ಸಿನಿಮಾಗೆ ಇವರೇ ಹಣ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ರಮ್ಯಾ ಮತ್ತು ಶರ್ಮಿಳಾ ಮಾಂಡ್ರೆ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡಿದರೆ ಅಚ್ಚರಿ ಪಡಬೇಕಿಲ್ಲ. ಇದನ್ನೂ ಓದಿ: ಮುರುಗದಾಸ್ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ

    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ 2023ರ ಅತ್ಯುತ್ತಮ  ನಟಿ ಪ್ರಶಸ್ತಿಯನ್ನು ಶರ್ಮಿಳಾ ‘ಗಾಳಿಪಟ 2’ ಚಿತ್ರಕ್ಕಾಗಿ ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಸ್ವತಃ ರಮ್ಯಾ ಅವರೇ ಪ್ರದಾನ ಮಾಡಿದ್ದು ವಿಶೇಷವಾಗಿತ್ತು. ಶರ್ಮಿಳಾ ಬಗ್ಗೆ ವೇದಿಕೆಯ ಮೇಲೆಯೇ ರಮ್ಯಾ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ತಮ್ಮ ಸ್ನೇಹಿದ ಬಗ್ಗೆ ನೆನಪಿಸಿಕೊಂಡರು. ಪ್ರಶಸ್ತಿ ಪಡೆದದ್ದಕ್ಕಾಗಿ ಅಭಿನಂದಿಸಿದರು.