Tag: producer umapathy

  • ಒಡೆದ ಮನಗಳ ಸರಿ ಮಾಡಿ: ಉದ್ಯಮದ ಹಿರಿಯರು, ವಾಣಿಜ್ಯ ಮಂಡಳಿಗೆ ಜಗ್ಗೇಶ್ ಮನವಿ

    ಒಡೆದ ಮನಗಳ ಸರಿ ಮಾಡಿ: ಉದ್ಯಮದ ಹಿರಿಯರು, ವಾಣಿಜ್ಯ ಮಂಡಳಿಗೆ ಜಗ್ಗೇಶ್ ಮನವಿ

    ಬೆಂಗಳೂರು: ಚಂದನವನದಲ್ಲಿ ಆಗುತ್ತಿರುವ ಬೆಳವಣಿಗೆ ಕುರಿತು ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದು, ಉದ್ಯಮದ ಹಿರಿಯರು ಮತ್ತು ವಾಣಿಜ್ಯ ಮಂಡಳಿ ಮಧ್ಯಪ್ರವೇಶಿಸಿ ಒಡೆದ ಮನಗಳ ಸರಿ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಜಗ್ಗೇಶ್, ಹಲವು ವಿಷಯದ ಜೊತೆ ತಮ್ಮ ಕಷ್ಟದ ದಿನಗಳನ್ನು ತಿಳಿಸಿದ್ದಾರೆ. ಜೊತೆಗೆ ತಮ್ಮ ವೃತ್ತಿ ಆರಂಭದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

    ಜಗ್ಗೇಶ್ ಹೇಳಿದ್ದೇನು?
    ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಯ ಆನಡುಗು ಗ್ರಾಮದ ಸಣ್ಣ ಕುಟುಂಬದ ಹಳ್ಳಿಹುಡುಗ ನಾನು ಈಶ್ವರ್ ಗೌಡ, ಜಗ್ಗೇಶ್. ಅಂದು ಡಾ.ರಾಜ್‍ಕುಮಾರ್ ಅವರನ್ನು ಕಂಡು ಆಶೀರ್ವಾದ ಪಡೆದು ಸಿನಿಮಾ ನಟಗನಾಗಬೇಕು ಎಂಬುವುದು ನನ್ನ ಗುರಿಯಾಗಿತ್ತು. 1980ರಲ್ಲಿ ಈ ಕಾರ್ಯ ಆರಂಭಗೊಂಡಿತು. ಆಗ ಹೇಗಿದ್ದೆ ನಾನು ದಾಖಲಿಸಿರುವೆ ಚಿತ್ರಗಳಲ್ಲಿ ಮತ್ತೊಮ್ಮೆ ಮುಖ ನೋಡಿ ನಕ್ಕುಬಿಡಿ. ಆ ಮುಖಕ್ಕೆ ಆಕಾಲಕ್ಕೆ ಸಿನಿಮಾ ನಟ ಆಗುವ ಕನಸು? ಈಗಿನ ಜಗ್ಗೇಶನ ಮರೆತು ಇದು ಸಾಧ್ಯನಾ ಎಂದು ಒಮ್ಮೆ ಯೋಚಿಸಿ. ಇದನ್ನೂ ಓದಿ: ನಾನೊಬ್ಬ ಹಾರ್ಡ್ ವರ್ಕಿಂಗ್ ಆರ್ಡಿನರಿ ಮ್ಯಾನ್ – ಪಬ್ಲಿಕ್ ಟಿವಿ ಜೊತೆ ದರ್ಶನ್ ಆಪ್ತ ಹರ್ಷ ಮಾತು

    ಉಗಿದು ಮುಚ್ಕೊಂಡು ಅನ್ನ ಸಿಗುವ ಕೆಲಸ ನೋಡಿಕೊಳ್ಳಬೇಕು ಎಂದು ಆಗ ಅಪ್ಪ-ಅಮ್ಮ ಬಂಧು ಮಿತ್ರರು ಹೇಳಿದ್ದರು. ಶಿವಲಿಂಗಪ್ಪನ ಮರ್ಯಾದೆ ಉಳಿಸು ಮಂಗ ಮುಂಡೆದೆ ಎಂದು ಹೇಳುತ್ತಿದ್ದರು. ಗುರು ಹಿಂದೆ ಗುರಿ ಮಂದೆ ಹಠ ಬಿಡಲಿಲ್ಲ. ಗಾಂಧಿನಗರ ಅಲೆದು ಚಪ್ಪಲಿ ಸವೆಸಿ ದಡಮುಟ್ಟಿದೆ ಎಂದು ಬಿಟ್ಟರೆ ಆತ್ಮ ದ್ರೋಹ ಆಗಿಬಿಡುತ್ತದೆ. ಕಾರಣ ದಡ ಮುಟ್ಟಿಸಿದ್ದು ಅಂದಿನ ನಿರ್ದೇಶಕರು, ನಿರ್ಮಾಪಕರು, ಮಾಧ್ಯಮ ಮಿತ್ರರು ಹಾಗೂ ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು. ಇದನ್ನೂ ಓದಿ: ಇಂದೇ ಸ್ಟಿಂಗ್ ಆಪರೇಷನ್ ಮಾಡಿದರೂ ನಾನು ಹೆದರಲ್ಲ: ದರ್ಶನ್

    ಹೇಳಿ ಹೇಗಿದ್ದರಬೇಕು ಅಪಮಾನ ಅವಮಾನ ಹಸಿವಿನಿಂದ ನಿದ್ರೆಗೆಟ್ಟು ಗೆದ್ದ ಒಬ್ಬ ಸಾಮಾನ್ಯನ ಬದುಕು. ಆಗ ನಮ್ಮ ಬಗ್ಗೆ ಹೇಳಲು ಇದ್ದದ್ದು ಒಂದೇ ಬರಹ ಮಾಧ್ಯಮ. ನೆನಪಿಡಿ ಇಂದು ನೂರಾರು ಮಾಧ್ಯಮಗಳಿವೆ. ಅಂಗೈಯಲ್ಲೆ ಆಕಾಶ ತೋರಿ ಹತ್ತಾರು ವರ್ಷ ಸಾಧನೆ ಕ್ಷಣ ಮಾತ್ರದಲ್ಲೆ ಅನುಮಾನದಿಂದ ಸಾಧಕನ ನೋಡುವಂತ ಮಾಯಾಜಾಲವೇ ಸಾಮಾಜಿಕ ಜಾಲತಾಣ. ಇದು ಸಿಕ್ಕಸಿಕ್ಕವರ ಕೈಯಲ್ಲಿ ವಯಸ್ಸು ಸಾಧನೆ ಅವರ ಮೂಗಿನ ನೇರಕ್ಕೆ ಅವರು ಬದುಕಿದ ಪರಿಸರ ಭಾಷೆ ಬಳಸಿ ಅವಮಾನ ಮಾಡಿ ವಿಕೃತ ಆನಂದ ಅನುಭವಿಸುವುದು? ವಿಪರ್ಯಾಸ ದಿನಗಳು. ಇಂದಿನ ಸಾರ್ವಜನಿಕ ಜೀವನ ಸಾರ್ವಜನಿಕ ಶೌಚಾಲಯದಂತೆ ಆಗಿದೆ. ಆದರೂ ವಿಧಿಯಿಲ್ಲಾ ಚರ್ಮ ದಪ್ಪಮಾಡಿ ಬದುಕಬೇಕು. ಇದನ್ನೂ ಓದಿ: ಇಂಡಸ್ಟ್ರಿ ನಮ್ಮ ಮನೆ, ಇಲ್ಲಿ ಯಾರೂ ದೊಡ್ಡವರು ಚಿಕ್ಕವರಿಲ್ಲ- ದರ್ಶನ್ ವಿರುದ್ಧ ರಕ್ಷಿತಾ ಬೇಸರ

    ಉದ್ಯಮದ ಕಲಾಬಂಧುಗಳಿಗೆ ನನ್ನ ಸಣ್ಣ ಅನುಭವದ ನುಡಿ:
    ಮಾನ್ಯರೇ, ನಶ್ವರ ಬಣ್ಣದ ಬದುಕು. ಕಲಾವಿದನ ಜೀವನ ನಡೆಯುವವರೆಗೆ ನಾಣ್ಯ ಮಿಕ್ಕಂತೆ ಸವಕಲು. ಎಲ್ಲಿಯವರೆಗು ಕಲಾವಿದ ವರ್ಷಕ್ಕೆ ಮಾತ್ರ ಹೊರಬರುವ ಊರ ಮೆರೆ ದೇವರಂತೆ ಹೊರ ಬರಬೇಕು. ಆಗ ದೇವರಪರ ಅದ್ಭುತ ಅನನ್ಯ ದಿನ. ಆ ದೇವರು ಬೀದಿಗೆ ಬಂದರೆ ಮೌಲ್ಯ ಇರುವುದಿಲ್ಲ. ರಾಜನಾಗಲಿ, ಸೇವಕನಾಗಲಿ ಜಗಳ ಘರ್ಷಣೆ ಸಹಜ. ಆ ಘರ್ಷಣೆ ನಿಭಾಯಿಸುವ ಕಲೆ ಕರಗತ ಆಗಿರಬೇಕು. ಆಗ ಕಾಡ್ಗಿಚ್ಚನ್ನು ತಣ್ಣಗೆ ಮಾಡಬಹುದು. ಹಾಗೆ ಅನ್ಯತ ಭಾವಿಸದೆ ನನ್ನ ಮಾತು ಆಲಿಸಬೇಕು.  ಇದನ್ನೂ ಓದಿ: ದರ್ಶನ್ ಹೊಡೆದಿದ್ದು ನಿಜ: ಸಂದೇಶ್ ಪ್ರಿನ್ಸ್ ಸೆಕ್ಯೂರಿಟಿ ಗಾರ್ಡ್ ಸ್ಫೋಟಕ ಹೇಳಿಕೆ

    ಆತ್ಮೀಯ ಮಾಧ್ಯಮ ಮಿತ್ರರು ಕಲಾರಂಗದ ನಮ್ಮ ಕಾಯಕ ಜನರಿಗೆ ತಲುಪಿಸೋ ನಾವಿಕರು. ನಾವು ನೀವು ದೇಹದ ಎರಡು ಕಣ್ಣಂತೆ ಯಾವುದಕ್ಕೂ ನೋವಾದರು ನಮಗೆ ನಷ್ಟ. ದಯಮಾಡಿ ವಿಶೇಷ ಹೃದಯ ನಿಮ್ಮದಾಗಿ ನಮ್ಮ ಚಿತ್ರರಂಗ ಬೀದಿ ಚರ್ಚೆಗೆ ವಿಷಯವಾಗದಿರಲಿ ವಿನಂತಿ. ಈಗಾಗಲೆ ಚಿತ್ರರಂಗ ಕೊರೊನಾ ಹೆಮ್ಮಾರಿ ಹೊಡೆತಕ್ಕೆ ನಲುಗಿದೆ. ಉದ್ಯಮದ ಹಿರಿಯರು, ವಾಣಿಜ್ಯ ಮಂಡಳಿ ಮಧ್ಯ ಪ್ರವೇಶಿಸಿ ಒಡೆದ ಮನಗಳ ಸರಿಮಾಡಿ ಎಂದು ಎಂದು ಜಗ್ಗೇಶ್ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್ ಅವ್ರೇ ನನಗ್ಯಾವ ಕೊಂಬೂ ಬರ್ಲಿಲ್ಲ, ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ: ಪ್ರೇಮ್

  • ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ

    ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ

    – ಪುನೀತ್, ರಾಘವೇಂದ್ರ ಹೆಸರಿನ ಆಸ್ತಿ ಖರೀದಿಗೆ ಮುಂದಾಗಿದ್ರಾ ದರ್ಶನ್?
    – ‘ಲೋನ್’ ಕದನಕ್ಕೆ ‘ಆಸ್ತಿ’ ಜಗಳ ಮೂಲ ಕಾರಣನಾ?

    ಬೆಂಗಳೂರು: ನಟ ದರ್ಶನ್, ಅರುಣಾ ಕುಮಾರಿ ಮತ್ತು ನಿರ್ಮಾಪಕ ಉಮಾಪತಿ ಲೋನ್ ಕದನಕ್ಕೆ ಸ್ಫೋಟಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಲೋನ್ ಕದನಕ್ಕೆ ದರ್ಶನ್ ಮತ್ತು ಉಮಾಪತಿ ನಡುವಿನ ಆಸ್ತಿ ಜಗಳ ಕಾರಣನಾ ಅನ್ನೋ ಪ್ರಶ್ನೆಯೊಂದು ಮುನ್ನಲೆ ಬಂದಿದೆ. ಇಂದು ಉಮಾಪತಿ ಅವರೇ, ನನ್ನ ಬಳಿಯಲ್ಲಿರುವ ಪ್ರಾಪರ್ಟಿ ದರ್ಶನ್ ಕೇಳಿದ್ದು ನಿಜ, ನಾನು ಕೊಡಲ್ಲ ಅಂತ ಹೇಳಿರೋದು ಸಹ ನಿಜ ಅಂತ ಒಪ್ಪಿಕೊಂಡಿದ್ದಾರೆ.

    ನಾನು ಪ್ರಾಪರ್ಟಿ ಕೊಡಲ್ಲ ಅಂತ ಹೇಳಿದ್ಮೇಲೆ ದರ್ಶನ್ ಸುಮ್ಮನಾಗಿದ್ದರು. ಆದ್ರೆ ಈ ವಿಚಾರ ಮಾಧ್ಯಮಗಳಲ್ಲಿ ಬಂದಿದ್ದರಿಂದ ಸ್ಪಷ್ಟನೆ ನೀಡುತ್ತಿದ್ದೇನೆ. ಅದು ಪುನೀತ್ ರಾಜ್‍ಕುಮಾರ್ ಮತ್ತು ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಸೇರಿದ ಆಸ್ತಿ. ಸದ್ಯದ ಅದು ನನ್ನ ಬಳಿಯಲ್ಲಿದ್ದರಿಂದ ದರ್ಶನ್ ಕೇಳಿದ್ದರು. ಈ ವಿಷಯವನ್ನು ಇಲ್ಲಿಗೆ ಬಿಡೋದು ಉತ್ತಮ. ಅದು ದೊಡ್ಮನೆಯ ಆಸ್ತಿ ಎಂದರು. ಈ ವಿಷಯವಾಗಿ ದರ್ಶನ್ ನನ್ನ ಮೇಲೆ ಕೋಪ ಮಾಡಿಕೊಂಡಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಆ ಆಸ್ತಿಯನ್ನ ದರ್ಶನ್ ಅವರಿಗೆ ನೀಡಿದ್ರೆ ಅದು ಬೇರೆ ಆಯಾಮ ಪಡೆದುಕೊಳ್ಳುತ್ತೆ ಅಂತ ನೀಡಲಿಲ್ಲ ಎಂದು ಉಮಾಪತಿ ಸ್ಪಷ್ಟಪಡಿಸಿದರು.

    ಅರುಣಾ ಕುಮಾರಿ ಬ್ಯಾಂಕ್ ಲೋನ್ ವಿಷಯ ಮತ್ತೊಂದು ಆಯಾಮ ಪಡೆದುಕೊಳ್ಳುವುದು ಬೇಡ. ಅರುಣಾ ಕುಮಾರಿ ಪ್ರಕರಣದ ತನಿಖೆ ನಡೆಯುತ್ತಿದೆ. ಆದ್ರೆ ಪ್ರಾಪರ್ಟಿ ವಿಚಾರ ಮುಗಿದಿರೋದು ಅಧ್ಯಾಯ. ಈ ವಿಷಯವನ್ನು ಮುಂದುವರಿಸಲು ನನಗೂ ಮತ್ತು ದರ್ಶನ್ ಅವರಿಗೆ ಇಷ್ಟವಿಲ್ಲ ಎಂದರು.

    ಜೂನ್ 18ರಂದು ದರ್ಶನ್ ಮನೆಯಲ್ಲಿ ಸಭೆ ಸೇರಿದ್ದಾಗ ನನ್ನನ್ನೂ ಕರೆದಿದ್ರೆ ಇದು ಸಣ್ಣ ಮಟ್ಟದಲ್ಲಿಯೇ ಮುಗಿತಿತ್ತು. ಆದ್ರೆ ಅವರೆಲ್ಲ ಏನೋ ಮಾಡೋಕೆ ಹೊರಟಂತಿದೆ. ಹಾಗಾಗಿ ನಾನು ಕಾನೂನು ಮೂಲಕವಾಗಿಯೇ ಹೋರಾಟ ನಡೆಸುತ್ತೇನೆ. ಮಾಧ್ಯಮಗಳ ಮುಂದೆ ನಾನು ಒಬ್ಬನೇ ಬಂದು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡೋಕೆ ಕಾರಣ ಸತ್ಯ. ಇಂದ್ರಜಿತ್ ಲಂಕೇಶ್ ಬಳಿ ಸಹಾಯ ಪಡೆದುಕೊಳ್ಳುವ ಅವಶ್ಯಕತೆ ನನಗಿಲ್ಲ. ಇಲ್ಲಿಯರೆಗೂ ಒಬ್ಬನೇ ಹೋರಾಟ ನಡೆಯುತ್ತಿದ್ದು, ಮುಂದುವರಿಯಲಿದೆ. ಬ್ಲ್ಯಾಕ್‍ಮೇಲ್ ಮಾಡಿಸಿಕೊಳ್ಳುವಂತೆ ವ್ಯಕ್ತಿ ಅಲ್ಲ. ನನ್ನ ಮೇಲೆ ಆರೋಪ ಮಾಡಿರೋ ಸಾಚಾಗಳಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ನಾನೊಬ್ಬ ಹಾರ್ಡ್ ವರ್ಕಿಂಗ್ ಆರ್ಡಿನರಿ ಮ್ಯಾನ್ – ಪಬ್ಲಿಕ್ ಟಿವಿ ಜೊತೆ ದರ್ಶನ್ ಆಪ್ತ ಹರ್ಷ ಮಾತು

  • ದರ್ಶನ್ 25 ಕೋಟಿ ಲೋನ್ ಕೇಸ್‍ಗೆ ಬಿಗ್ ಟ್ವಿಸ್ಟ್ – ಆರೋಪಿ ಜೊತೆ ನಿರ್ಮಾಪಕ ಉಮಾಪತಿಗೆ ನಂಟು!

    ದರ್ಶನ್ 25 ಕೋಟಿ ಲೋನ್ ಕೇಸ್‍ಗೆ ಬಿಗ್ ಟ್ವಿಸ್ಟ್ – ಆರೋಪಿ ಜೊತೆ ನಿರ್ಮಾಪಕ ಉಮಾಪತಿಗೆ ನಂಟು!

    – ಯಾರಿದ್ರೂ ಬಿಡಲ್ಲ ಅಂತ ದರ್ಶನ್ ವಾರ್ನಿಂಗ್
    – ಮಿತ್ರದ್ರೋಹಿ ಹುಟಕಾಟದಲ್ಲಿ ದರ್ಶನ್!!

    ಬೆಂಗಳೂರು: ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನಿಸಿದ ಪ್ರಕರಣ ಪೊಲೀಸರಿಗೆ ಅಷ್ಟೇನೂ ಸವಾಲು ಅನ್ನಿಸಿಲ್ಲ. ಆದರೆ ನಟ ದರ್ಶನ್ ತಮ್ಮ ಆಪ್ತ ವಲಯದಲ್ಲಿರುವ ನಂಬಿಕೆ ದ್ರೋಹಿ ಯಾರು ಅಂತ ಹುಡುಕಾಟ ಶುರು ಮಾಡಿದ್ದಾರೆ. ಮೈಸೂರಿನಲ್ಲಿಂದು ತುರ್ತು ಸುದ್ದಿಗೋಷ್ಠಿ ನಡೆಸಿದ ನಟ ದರ್ಶನ್, ನಿರ್ಮಾಪಕ ಉಮಾಪತಿಯತ್ತ ಬೊಟ್ಟು ಮಾಡಿದ್ದಾರೆ.

    ದರ್ಶನ್ ನಿನ್ನೆ ಏಕಾಏಕಿ ಮೈಸೂರಿನ ಎನ್.ಆರ್. ಉಪವಿಭಾಗ ಪೊಲೀಸ್ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು. ದರ್ಶನ್ ಹೆಸರಿನ ಆಸ್ತಿಗೆ ಸಂಬಂಧಪಟ್ಟ ನಕಲಿ ದಾಖಲೆ ಸೃಷ್ಟಿಸಿ 25 ಕೋಟಿ ರೂ. ಬ್ಯಾಂಕ್ ಸಾಲ ಪಡೆಯಲು ಯತ್ನಿಸಲಾಗಿದೆ. 25 ಲಕ್ಷ ರೂ. ಲಂಚ ಕೇಳಿದ್ದಾರೆ ಅಂತೆಲ್ಲ ಆರೋಪ ಕೇಳಿ ಬಂದಿದ್ದವು. ಈ ಸಂಬಂಧ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಅಲ್ಲದೆ ನಿನ್ನೆ ಪೊಲೀಸರು ಆರೋಪಿ ಅರುಣಾ ಕುಮಾರಿಯ ಹೇಳಿಕೆ ದಾಖಲಿಸಿಕೊಂಡಿದ್ದರು. ಇಂದು ಸಿಆರ್ ಪಿಸಿ 41/ಎ ಅನ್ವಯ ನೋಟಿಸ್ ನೀಡಿ ಬಿಟ್ಟು ಕಳುಹಿಸಿದ್ದಾರೆ.

    ಹರ್ಷ-ಅರುಣಾ ಕುಮಾರಿ ಭೇಟಿ:
    ಯಾವುದೇ ಸಂದರ್ಭದಲ್ಲಿ ಪ್ರಕರಣದ ತನಿಖೆಗೆ ಬರಬೇಕು. ಸಾಕ್ಷ್ಯನಾಶ ಮಾಡಬಾರದು ಅಂತೆಲ್ಲ ಷರತ್ತು ವಿಧಿಸಲಾಗಿದೆ. ಆರೋಪಿ ಅರುಣಾ ಕುಮಾರಿ ಮತ್ತು ದೂರುದಾರ ಹರ್ಷ ಮೆಲಂಟಾ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಹೋಟೆಲ್ ನಲ್ಲಿ ಭೇಟಿಯಾಗಿದ್ದರು. ಅದಕ್ಕೆ ಸಂಬಂಧಪಟ್ಟ ಸಿಸಿ ಕ್ಯಾಮೆರಾ ಫೋಟೇಜ್ ಗಳನ್ನು ವಶಪಡಿಸಿಕೊಂಡಿದ್ದಾರೆ.

    ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ನಟ ದರ್ಶನ್ ಸುದ್ದಿಗೋಷ್ಠಿ ನಡೆಸಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಸುಮಾರು ಒಂದು ಗಂಟೆಯಷ್ಟು ಸುದೀರ್ಘವಾಗಿ ಮಾತನಾಡಿದ ದರ್ಶನ್, ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಸಂಬಂಧಿ ಧೀರಜ್ ಪ್ರಸಾದ್ ಭಾಗವಹಿಸಿದ್ದು ಅಚ್ಚರಿ ಮೂಡಿಸಿತ್ತು. ಉಳಿದಂತೆ ಸ್ನೇಹಿತರಾದ ನಾಗರಾಜ್, ಶರ್ಮಾ, ರಾಕೇಶ್ ಪಾಪಣ್ಣ, ಹರ್ಷ ಮೆಲಂಟಾ ಹಾಜರಿದ್ದರು.

    ಒಂದಲ್ಲ, ಎರಡಲ್ಲ 25 ಕೋಟಿ:
    ಇದೆಲ್ಲವೂ ಶುರುವಾಗಿದ್ದು ಏಪ್ರಿಲ್ 9ರಂದು. ನಿರ್ಮಾಪಕ ಉಮಾಪತಿ ಕರೆ ಮಾಡಿ, ಹರ್ಷ ಮೆಲಂಟಾ ಬ್ಯಾಂಕ್ ಲೋನ್‍ಗೆ ಅಪ್ಲೈ ಮಾಡಿದ್ದಾರೆ. ನಿಮ್ಮ ಆಸ್ತಿ ದಾಖಲೆಗಳ ಶ್ಯೂರಿಟಿ ಕೊಟ್ಟಿದ್ದಾರೆ ಅಂತ ತಿಳಿಸಿದ್ರು. ಒಂದಲ್ಲ, ಎರಡಲ್ಲ 25 ಕೋಟಿ ರೂ. ವ್ಯವಹಾರ ಅನ್ನುತ್ತಿದ್ದಂತೆಯೇ ನಾನು ಅಲರ್ಟ್ ಆದೆ. ನಾವೆಲ್ಲರೂ ಸ್ನೇಹಿತರು. ಯಾರ ಮೇಲೆ ಅನುಮಾನ ಪಡಬೇಕು ಅಂತಾನೇ ಗೊತ್ತಾಗುತ್ತಿಲ್ಲ ಎಂದು ದರ್ಶನ್ ಹೇಳಿದ್ದಾರೆ.

    ಇನ್ನು ಸುದ್ದಿಗೋಷ್ಠಿ ಉದ್ದಕ್ಕೂ ನಿರ್ಮಾಪಕ ಉಮಾಪತಿ ನಡೆಯ ಬಗ್ಗೆ ದರ್ಶನ್ ಅನುಮಾನ ವ್ಯಕ್ತಪಡಿಸಿದ್ರು. ಅದಕ್ಕೆ ಪೂರಕವಾದ ಒಂದಷ್ಟು ವಾಟ್ಸಪ್ ಚಾಟ್ ಸ್ಕ್ರೀನ್ ಶಾಟ್, ಹರ್ಷ ಮೆಲಂಟಾ ಅವರೊಂದಿಗೆ ಅರುಣಾ ಕುಮಾರಿ ಮಾತನಾಡಿರುವ ಫೋನ್ ಕಾಲ್ ಆಡಿಯೋ, ಅರುಣಾಕುಮಾರಿ ಕಳುಹಿಸಿರುವ ತಮಗೆ ಕಳುಹಿಸಿದ ವಾಯ್ಸ್ ಮೆಸೇಜ್ ಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ರು.

    ವಾಟ್ಸಪ್ ಚಾಟ್, ಆಡಿಯೋ ವೈರಲ್:
    ಇನ್ನು ವಂಚನೆ ಯತ್ನ ಕಥೆಯೊಳಗಿನ ಮತ್ತೊಂದು ಉಪಕತೆಯನ್ನೂ ದರ್ಶನ್ ಜಗಜ್ಜಾಹೀರು ಮಾಡಿದ್ರು. ಆರೋಪಿ ಅರುಣಾಕುಮಾರಿ ತನ್ನ ಪುತ್ರನೊಂದಿಗೆ ಈಗ ಬೆಂಗಳೂರಿನಲ್ಲಿದ್ದಾಳೆ. ಗಂಡನಿಂದ ದೂರವಾಗಿ ಆರೇಳು ವರ್ಷಗಳಾಗಿವೆ. ಇನ್ನು ಅಚ್ಚರಿಯ ವಿಚಾರ ಏನಂದ್ರೆ, ಆಕೆಯ ಗಂಡ ಕುಮಾರ್ ಪ್ರಕರಣದ ದೂರುದಾರ ಹರ್ಷ ಮೆಲಂಟಾ ಮಾಲೀಕತ್ವದ ಹೋಟೆಲ್‍ನಲ್ಲೇ ಕೆಲಸ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿ ಮಧ್ಯ ಮಾತನಾಡಿದ ಕುಮಾರ್, ನನ್ನ ಹೆಂಡತಿಯಾಗಿದ್ದ ಅರುಣಕುಮಾರಿ ಓದಿರೋದೇ ಪಿಯುಸಿ. ಅದ್ಹೇಗೆ ಬ್ಯಾಂಕ್ ಮ್ಯಾನೇಜರ್ ಆದ್ಲೋ ಗೊತ್ತಿಲ್ಲ ಅಂತ ಮುಗ್ಧತೆ ತೋರಿಸಿದರು. ಇದೆಲ್ಲದರ ನಡುವೆ ಉಮಾಪತಿ ಮಹಿಳೆಯೊಂದಿಗೆ ಮಾಡಿರುವ ವಾಟ್ಸಪ್ ಚಾಟ್, ಆಡಿಯೋ, ಅರುಣಾ ಕುಮಾರಿ ದರ್ಶನ್ ತೋಟಕ್ಕೆ ಹೋದ ದೃಶ್ಯ ಎಲ್ಲವು ವೈರಲ್ ಆಗಿದೆ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ಇನ್ನೊಬ್ಬರ ಭಿಕ್ಷೆಯಲ್ಲಿ ಬದುಕಬೇಕಿಲ್ಲ: ಉಮಾಪತಿ

    ಉಮಾಪತಿ ಸುತ್ತ ಅನುಮಾನದ ಹುತ್ತ:
    ಒಟ್ಟಾರೆ, ಇಡೀ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ನಡೆಯ ಸುತ್ತಲೂ ಅನುಮಾನದ ಹುತ್ತ ಬೆಳೆಯುತ್ತಲೇ ಇದೆ. ಈಗ ಚಂಡು ಉಮಾಪತಿ ಅಂಗಳದಲ್ಲಿದ್ದು, ಉಮಾಪತಿ ಇನ್ನೆರಡು ದಿನಗಳಲ್ಲಿ ಸಾಬೀತುಪಡಿಸುತ್ತೇನೆ ಎಂದಿದ್ದಾರೆ. ಸದ್ಯ ಪೊಲೀಸ್ ತನಿಖೆಗೆ ಅಷ್ಟೇನೂ ಸವಾಲು ಅನ್ನಿಸದೇ ಇರುವ ಈ ಪ್ರಕರಣದಲ್ಲಿ, ದರ್ಶನ್ ತೋರುತ್ತಿರುವ ಆಸಕ್ತಿ ಹಾಗೂ ಉಮಾಪತಿಯ ಹೇಳಿಕೆ ಎಲ್ಲವು ಸಾಕಷ್ಟು ಗೊಂದಲ ಉಂಟುಮಾಡುತ್ತಿರೋದಂತು ಸುಳ್ಳಲ್ಲ. ಇದನ್ನೂ ಓದಿ:  ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ – ಗುಡುಗಿದ ದರ್ಶನ್

  • ರಾಬರ್ಟ್ ಸಿನಿಮಾ ನಿರ್ಮಾಪಕನ ಕೊಲೆಗೆ ಸಂಚು ಪ್ರಕರಣ- ಪ್ರಮುಖ ಆರೋಪಿಯ ಬಂಧನ

    ರಾಬರ್ಟ್ ಸಿನಿಮಾ ನಿರ್ಮಾಪಕನ ಕೊಲೆಗೆ ಸಂಚು ಪ್ರಕರಣ- ಪ್ರಮುಖ ಆರೋಪಿಯ ಬಂಧನ

    ಬೆಂಗಳೂರು: ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್ ಹಾಕಿದ್ದ ಪ್ರಕರಣ ಸಂಬಂಧ ಮತ್ತೊಬ್ಬ ಕಿಂಗ್ ಪಿನ್ ರಾಜೇಶ್ ಅಲಿಯಾಸ್ ಕರಿಯನನ್ನ ಬೆಂಗಳೂರಿನ ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ.

    ಮೂರು ತಿಂಗಳ ಹಿಂದೆ ನಿರ್ಮಾಪಕ ಉಮಾಪತಿ ಹತ್ಯೆಗೆ ಸ್ಕೆಚ್ ನಡೆದಿತ್ತು. ಕೊನೆ ಕ್ಷಣದಲ್ಲಿ ಎಚ್ಚೆತ್ತ ಪೊಲೀಸರು, ಆ ಕೊಲೆಗೆ ರೆಡಿಯಾಗಿದ್ದ ಆರೋಪಿಗಳನ್ನು ಮಾರಕಾಸ್ತ್ರಗಳ ಸಮೇತ ಬಂಧಿಸಿದ್ದರು. ಈ ವೇಳೆ ಹಲವರು ಎಸ್ಕೇಪ್ ಕೂಡ ಆಗಿದ್ರು. ಅವರಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ರಾಜೇಶ್ ಅಲಿಯಾಸ್ ಕರಿಯ ಬಾಂಬೆ ರವಿ ಟೀಂ ನಲ್ಲಿ ಗುರುತಿಸಿಕೊಂಡಿದ್ದು, ಬಾಂಬೆ ರವಿ ಸೂಚನೆ ಯಂತೆ ಉಮಾಪತಿಯನ್ನು ಕೊಲೆ ಮಾಡಲು ತಂಡದೊಂದಿಗೆ ಪ್ಲ್ಯಾನ್ ಮಾಡಿಕೊಂಡಿದ್ದ ಎನ್ನಲಾಗಿದೆ.

    ಪೊಲೀಸರ ಎಂಟ್ರಿಯಾಗುತ್ತಲೇ ಕರಿಯ ತಪ್ಪಿಸಿಕೊಂಡು ನೇಪಾಳದ ಬಾರ್ಡರ್ ನಲ್ಲಿ ತಲೆಮರೆಸಿಕೊಂಡಿದ್ದನು. ಸತತ ಮೂರು ತಿಂಗಳು ಕಾರ್ಯಚರಣೆ ನಡೆಸಿದ ಪೊಲೀಸರು ರಾಜೇಶ್ ಅಲಿಯಾಸ್ ಕರಿಯನ್ನು ನೇಪಾಳದ ಗಡಿಯಲ್ಲಿ ಬಂಧಿಸಿದ್ದಾರೆ. ಲೋಕಲ್ ರೌಡಿಯಾಗಿದ್ದ ಕರಿಯ, ಬಾಂಬೆ ರವಿ ಜೊತೆಗೆ ಸೇರಿ ನ್ಯಾಷನಲ್ ಲೆವೆಲ್ ರೌಡಿ ಆಗಬೇಕು. ಹೆಸರು ಮಾಡಬೇಕು ಅಂತಾ ಆಸೆ ಪಟ್ಟಿದ್ದ. ಅದರಂತೆ ಕೆಲ ಉದ್ಯಮಿಗಳು, ಸಿನಿಮಾ ನಿರ್ಮಾಪಕರು, ನಟರಿಗೆ ಬೆದರಿಕೆ ಹಾಕುವುದು, ಕೊಲೆ, ವಸೂಲಿಯಂತ ದಂಧೆಗಳಲ್ಲಿ ತಲೆ ಹಾಕಿ ಬೆದರಿಸುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

    ಸದ್ಯ ಪೊಲೀಸರ ವಶದಲ್ಲಿರುವ ರಾಜೇಶ್ ಅಲಿಯಾಸ್ ಕರಿಯನ ವಿಚಾರಣೆಯಿಂದ ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರಬರಬೇಕಿದೆ.

  • ಕಲರ್ ಫುಲ್ ಲೈಟುಗಳ ಮಧ್ಯೆ ರೆಟ್ರೋ ಲುಕ್‍ನಲ್ಲಿ ಚಕ್ರವರ್ತಿ

    -ಸಾರಥಿಯ ಸ್ಟೈಲ್‍ಗೆ ಫ್ಯಾನ್ಸ್ ಫಿದಾ

    ಬೆಂಗಳೂರು: ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಸಿನಿಮಾ ರಾಬರ್ಟ್ ಚಿತ್ರ ತಂಡದಿಂದ ಕಲರ್ ಫುಲ್ ಆಗಿರುವ ಚಕ್ರವರ್ತಿಯ ಹೊಸ ಲುಕ್ ಝಗಮಗಿಸುತ್ತಿದೆ.

    ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನಿರ್ಮಾಪಕರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿರುವ ಯಜಮಾನ, ಉಮಾಪತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಅವರ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಹಾರೈಸಿ, ಪೋಸ್ಟರ್ ಹಂಚಿಕೊಂಡಿದ್ದಾರೆ.

    ಪಕ್ಕಾ ರೆಟ್ರೋ ಲುಕ್, ಕೈಯಲ್ಲೊಂದು ಸಿಗರೇಟ್, ಕೆಂಪು ಕನ್ನಡ, ಮುಂದೊಂದು ಮೈಕ್, ಪಕ್ಕದಲ್ಲೊಂದು ಗಿಟಾರ್ ಇಟ್ಟುಕೊಂಡು ವಿರಾಜಮಾನವಾಗಿರು ಚಕ್ರವರ್ತಿಗೆ ಅಭಿಮಾನಿಗಳು ಉಘೇ ಉಘೇ ಅನ್ನುತ್ತಿದ್ದಾರೆ.

    ಉಮಾಪತಿ ನಿರ್ಮಾಣ, ತರುಣ್ ಸುಧೀರ್ ನಿರ್ದೇಶನದಲ್ಲಿ ರಾಬರ್ಟ್ ಚಿತ್ರ ಸಿದ್ಧವಾಗುತ್ತಿದೆ. ಮೊದಲ ಬಾರಿಗೆ ದರ್ಶನ್ ತ್ರಿಪಾತ್ರದಲ್ಲಿ ನಟಿಸುತ್ತಿರೋದರಿಂದ ಚಿತ್ರ ಹೆಚ್ಚು ಭರವಸೆಯನ್ನು ಮೂಡಿಸಿದೆ. ರಾಬರ್ಟ್ ಗೆ ಜೊತೆಯಾಗಿ ಆಶಾ ಭಟ್ ನಟಿಸುತ್ತಿದ್ದು, ಜಗಪತಿ ಬಾಬು, ರವಿ ಕಿಶನ್, ರವಿ ಶಂಕರ್, ದೇವರಾಜ್ ಸೇರಿದಂತೆ ದೊಡ್ಡ ತಾರಾಬಳಗವನ್ನ ಸಿನಿಮಾ ಹೊಂದಿದೆ. ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ.