Tag: producer

  • ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕ ಅರುಣ್ ರೈ ವಿರುದ್ಧ ಎಫ್‌ಐಆರ್

    ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕ ಅರುಣ್ ರೈ ವಿರುದ್ಧ ಎಫ್‌ಐಆರ್

    ಣ ವಂಚನೆ ಆರೋಪದ ಮೇಲೆ ರಾಷ್ಟ್ರ ಪ್ರಶಸ್ತಿ (National Award) ವಿಜೇತ ಸಿನಿಮಾ ನಿರ್ಮಾಪಕ ಅರುಣ್ ರೈ (Arun Rai) ವಿರುದ್ಧ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಕಣ್ಣೀರಿಟ್ಟ ಶೋಭಾ- ಕಿಚ್ಚನ ಮಾತಿಗೆ ಡೋರ್ ಓಪನ್

    ಬೆಂಗಳೂರಿನ ಯಶವಂತಪುರ ತಾಜ್ ಹೋಟೆಲ್‌ನಲ್ಲಿ ಬಂಟ್ವಾಳ ಮೂಲದ ಉದ್ಯಮಿಯನ್ನು (Businessman) ನಿರ್ಮಾಪಕ ಅರುಣ್ ರೈ ಪರಿಚಯಿಸಿಕೊಂಡಿದ್ದರು. ‘ವೀರ ಕಂಬಳ’ (Veera Kambala) ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಅದರ ಲಾಭಾಂಶದಲ್ಲಿ 60 ಲಕ್ಷ ರೂ. ಕೊಡೋದಾಗಿ ಮೊದಲು ಉದ್ಯಮಿಗೆ ನಂಬಿಸಿ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅರುಣ್ ರೈ ವಿರುದ್ಧ ಪ್ರಕರಣ ದಾಖಲಾಗಿದೆ.

    ಈ ಕುರಿತು ಆರ್.ಎಂ.ಸಿ ಯಾರ್ಡ್ ಪೊಲೀಸರು ತನಿಖೆಗೊಂಡಿದ್ದಾರೆ.

    ಅಂದಹಾಗೆ, ತುಳುವಿನ ಜೀಟಿಗೆ, ವೀರ ಕಂಬಳ ಸಿನಿಮಾವನ್ನು ಅರುಣ್ ರೈ ನಿರ್ಮಾಣ ಮಾಡಿದ್ದಾರೆ.

  • ಬೆಂಗಳೂರು ಹೋಟೆಲ್‌ನಲ್ಲಿ ನಟನಿಗೆ ನಿರ್ಮಾಪಕ ರಂಜಿತ್ ಲೈಂಗಿಕ ಕಿರುಕುಳ- ದೂರು ದಾಖಲು

    ಬೆಂಗಳೂರು ಹೋಟೆಲ್‌ನಲ್ಲಿ ನಟನಿಗೆ ನಿರ್ಮಾಪಕ ರಂಜಿತ್ ಲೈಂಗಿಕ ಕಿರುಕುಳ- ದೂರು ದಾಖಲು

    ತಿರುವನಂತಪುರ: ನ್ಯಾ. ಹೇಮಾ ವರದಿ ಕೇರಳ ಚಿತ್ರೋದ್ಯಮದಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದಂತೆ ಪ್ರಖ್ಯಾತ ನಿರ್ಮಾಪಕ ರಂಜಿತ್ (Producer Ranjith) ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಈ ಆರೋಪ ಮಾಡಿರುವುದು ನಟ ಎನ್ನುವುದು ವಿಶೇಷ.

    ನಿರ್ಮಾಪಕ, ನಿರ್ದೇಶಕ ರಂಜಿತ್ ಲೈಂಗಿಕ ದೌರ್ಜನ್ಯ (Sex Assault) ಎಸಗಿದ್ದಾರೆ ಎಂದು ಆರೋಪಿಸಿ ಯುವ ನಟರೊಬ್ಬರು (Actor)  ಡಿಜಿಪಿಗೆ ದೂರು ನೀಡಿದ್ದಾರೆ.

    2012ರಲ್ಲಿ ಸಿನಿಮಾವೊಂದರ ಆಡಿಷನ್ ವಿಚಾರವಾಗಿ ಬೆಂಗಳೂರಿನ ಹೋಟೆಲ್‌ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದು ಆಡಿಷನ್ ಪ್ರಕ್ರಿಯೆ ಭಾಗವೆಂದು ಭಾವಿಸಿದ್ದೆ. ಇದರ ಬದಲಾಗಿ ಪಾತ್ರ ನೀಡೋದಾಗಿ ಭರವಸೆ ನೀಡಿ ರಂಜಿತ್ ತನಗೆ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ ನಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    https://youtu.be/Qdvm63N8Glo?si=ekAf4Xzg13fSyY7y

    ಈ ಘಟನೆಯ ಬಳಿಕ ಮರುದಿನ ಬೆಳಗ್ಗೆ ನನಗೆ ಹಣವನ್ನು ನೀಡಿದ್ದರು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಪರಿಶೀಲಿಸಿ ಕೈಗೊಳ್ಳಲಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

    ಲೈಂಗಿಕ ದೌರ್ಜನ್ಯ ಹೇಮಾ ವರದಿಯ ಬಳಿಕ ಮಲಯಾಳಂ ಚಿತ್ರರಂಗ ಅಲ್ಲೋಲ ಕಲ್ಲೋಲ ಆಗಿದೆ. ಹಲವು ನಟಿಯರು ತಾವು ಅನುಭವಿಸಿದ ಕಿರುಕುಳದ ಬಗ್ಗೆ ಧ್ವನಿಯೆತ್ತಿದ್ದಾರೆ. ಇನ್ನೂ ಬಂಗಾಳಿ ನಟಿ ಶ್ರೀಲೇಖಾ ಮಿತ್ರ (Sreelekha Mitra) ಕೂಡ ನಿರ್ಮಾಪಕ ರಂಜಿತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

  • ನ.1ರಿಂದ ತಮಿಳು ಸಿನಿಮಾ ಚಿತ್ರೀಕರಣ ಬಂದ್ ಮಾಡಲು ಮುಂದಾದ ನಿರ್ಮಾಪಕರು

    ನ.1ರಿಂದ ತಮಿಳು ಸಿನಿಮಾ ಚಿತ್ರೀಕರಣ ಬಂದ್ ಮಾಡಲು ಮುಂದಾದ ನಿರ್ಮಾಪಕರು

    ಕಾಲಿವುಡ್ (Kollywood) ಟಾಪ್ ಚಿತ್ರರಂಗಗಳಲ್ಲಿ ಒಂದಾಗಿದೆ. ಭಾರತದ 3ನೇ ಅತಿ ದೊಡ್ಡ ಚಿತ್ರರಂಗ ಕೂಡ ಹೌದು. ಈ ಚಿತ್ರರಂಗದಲ್ಲಿ ಲಕ್ಷಾಂತರ ಜನ ಉದ್ಯೋಗಿಗಳು ದುಡಿಯುತ್ತಿದ್ದಾರೆ. ಹೀಗಿರುವಾಗ ನವೆಂಬರ್ 1ರಿಂದ ತಮಿಳು ಸಿನಿಮಾ (Tamil Film Industry) ಚಿತ್ರೀಕರಣ ಬಂದ್ ಮಾಡಲು ನಿರ್ಮಾಪಕರು (Producers) ನಿರ್ಧರಿಸಿದ್ದಾರೆ. ಇದನ್ನೂ ಓದಿ:ಸಂಜಯ್ ದತ್ ಜೊತೆಗಿನ ಫೋಟೋ ಹಂಚಿಕೊಂಡ ಉಪ್ಪಿಯ ಟ್ರೋಲ್ ಹುಡುಗಿ ರೀಷ್ಮಾ

    ಸಿನಿಮಾ ನಟರ ಸಂಭಾವನೆ ಹೆಚ್ಚಳ, ನಟ- ನಟಿಯರ ಅನಧಿಕೃತ ಬೇಡಿಕೆಗಳು, ಫೈನಾನ್ಸ್ ಸಮಸ್ಯೆಗಳು ಹೀಗೆ ಇನ್ನೀತರ ಸಮಸ್ಯೆಗಳ ಬಗ್ಗೆ ನಿರ್ಮಾಪಕರು ಸಭೆ ನಡೆಸಿ ಚರ್ಚಿಸಲಿದ್ದಾರೆ. ತಮ್ಮ ಬೇಡಿಕೆಗಳು ಈಡೇರದೇ ಹೋದರೆ ನವೆಂಬರ್ 1ರಿಂದ ಚಿತ್ರರಂಗ ಬಂದ್ ಮಾಡುವುದಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಜು.29ರಂದು ನಡೆದ ಸಭೆಯಲ್ಲಿ ತಮಿಳುನಾಡು ಸಿನಿಮಾ ನಿರ್ಮಾಪಕರ ಸಂಘ, ತಮಿಳುನಾಡು ಸಿನಿಮಾ ಪ್ರದರ್ಶಕರ ಸಂಘ, ತಮಿಳುನಾಡಿನ ಸಿನಿಮಾ ವಿತರಕರು ಕೂಡ ಭಾಗವಹಿಸಿದ್ದರು. ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿತು.

    ಚಿತ್ರರಂಗದ ಯಾವುದೇ ಸಿನಿಮಾ ನಟರಾಗಿರಲಿ ಅವರ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾದ ನಂತರ ಒಟಿಟಿಯಲ್ಲಿ ಬಿಡುಗಡೆಯಾಗಬೇಕು. ಸ್ಟಾರ್ ನಟ ಒಂದು ಚಿತ್ರಕ್ಕೆ ಅಡ್ವಾನ್ಸ್ ಪಡೆದ ನಂತರ ಆ ಚಿತ್ರ ಮುಗಿಯುವವರೆಗೂ ಬೇರೆ ಚಿತ್ರದ ಅಡ್ವಾನ್ಸ್ ಪಡೆಯುವಂತಿಲ್ಲ. ನಟರ ಸಿಬ್ಬಂದಿಯ ಖರ್ಚನ್ನು ನಿರ್ಮಾಣ ಸಂಸ್ಥೆ ನೋಡಿಕೊಳ್ಳುವುದಿಲ್ಲ, ನಟರೇ ನೋಡಿಕೊಳ್ಳಬೇಕು. ಆಗಸ್ಟ್.16ರಿಂದ ವಾರದಲ್ಲಿ ಇಂತಿಷ್ಟೇ ಸಿನಿಮಾಗಳು ರಿಲೀಸ್ ಆಗಬೇಕು ಎಂದು ನಿಯಮ ಜಾರಿ ತರಬೇಕು.

    ಸ್ಟಾರ್ ನಟರ ಸಂಭಾವನೆ ಏರಿಕೆಯಾಗಿದೆ. ಇನ್ಮುಂದೆ ಇಳಿಕೆಯಾಗಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಸಿನಿಮಾಗಳ ಚಿತ್ರೀಕರಣವು ಅಕ್ಟೋಬರ್ 30ರೊಳಗೆ ಮುಗಿಯಬೇಕು. ಬಳಿಕ ನವೆಂಬರ್ 1ರಿಂದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿನಿಮಾರಂಗ ಬಂದ್ ಮಾಡಲಾಗುತ್ತಿದೆ.

  • ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಿರ್ಮಾಪಕಿ ಎಕ್ತಾ ಕಪೂರ್ ಭೇಟಿ

    ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಿರ್ಮಾಪಕಿ ಎಕ್ತಾ ಕಪೂರ್ ಭೇಟಿ

    ಬಾಲಿವುಡ್ (Bollywood) ನಿರ್ದೇಶಕಿ ಕಮ್ ನಿರ್ಮಾಪಕಿ ಎಕ್ತಾ ಕಪೂರ್ (Ekta Kapoor) ಇದೀಗ ಮಂಗಳೂರಿನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕುಟುಂಬದ ಜೊತೆ ಕಟೀಲು ದುರ್ಗಾಪರಮೇಶ್ವರಿ (Kateel Sri Durgaparameshwari Temple) ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಎಕ್ತಾ ಕಪೂರ್, ಈಗ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಲ ಸಮಯ ದೇವಸ್ಥಾನದಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ. ಬಳಿಕ ದೇವಸ್ಥಾನದ ವತಿಯಿಂದ ದೇವರ ವಿಶೇಷ ವಸ್ತ್ರ ನೀಡಿ ಗೌರವಿದ್ದಾರೆ. ನಂತರ ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಎಕ್ತಾ ಕಪೂರ್ ಕುಟುಂಬ ಭೇಟಿ ಕೊಟ್ಟಿದ್ದಾರೆ.

    ಇನ್ನೂ ಹಿಂದಿ ಸಿನಿಮಾರಂಗದಲ್ಲಿ ಸೀರಿಯಲ್ ಮತ್ತು ಸಿನಿಮಾ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಎಕ್ ವಿಲನ್, ಬಿಗ್ ಬಿ ಮತ್ತು ರಶ್ಮಿಕಾ ನಟನೆಯ ‘ಗುಡ್ ಬೈ’ ಸಿನಿಮಾ, ಯೂ ಟರ್ನ್ ಚಿತ್ರ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

  • ಸುದೀಪ್ ಜೊತೆ ಕಾಣಿಸಿಕೊಂಡ ನಿರ್ಮಾಪಕ ಸಂದೇಶ್

    ಸುದೀಪ್ ಜೊತೆ ಕಾಣಿಸಿಕೊಂಡ ನಿರ್ಮಾಪಕ ಸಂದೇಶ್

    ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ ನಿರ್ಮಾಪಕ ಎನ್.ಸಂದೇಶ್ (N. Sandesh). ಭೇಟಿಯ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಭೇಟಿಗೆ ನಾನಾ ಅರ್ಥವನ್ನು ಕಲ್ಪಿಸಿಕೊಳ್ಳಲಾಗುತ್ತಿದೆ. ಸುದೀಪ್ ಅಭಿಮಾನಿಗಳಂತೂ ಹೊಸ ಸಿನಿಮಾದ ಯೋಚನೆ ಏನಾದರೂ ಇದೆಯಾ ಎಂದು ಕೇಳುತ್ತಿದ್ದಾರೆ.

    ಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಮಹಾಬಲಿಪುರಂನಲ್ಲಿ (Mahabalipuram) ನಡೆಯುತ್ತಿದೆ. ಸಿನಿಮಾದ ಪ್ರಮುಖ ಸಾಹಸ ದೃಶ್ಯವನ್ನು ಚಿತ್ರೀಕರಣ ಮಾಡಲಾಗುತ್ತಿದ್ದು, ಈ ಸನ್ನಿವೇಶದ ಶೂಟಿಂಗ್ ನಲ್ಲಿ ಕಿಚ್ಚ ಭಾಗಿಯಾಗಿದ್ದಾರೆ. ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಇದಾದ ನಂತರ ಕಿಚ್ಚ ಯಾವ ಸಿನಿಮಾಗೆ ಕಾಲ್ ಶೀಟ್ ಕೊಟ್ಟಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಹಾಗಾಗಿ ಸಂದೇಶ್ ಭೇಟಿ ಮಹತ್ವ ಪಡೆದುಕೊಂಡಿದೆ.

    ‘ಮ್ಯಾಕ್ಸ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ತಮಿಳು ನಾಡಿನ (Tamil Nadu) ಮಹಾಬಲಿಪುರಂನಲ್ಲಿ ನಡೆಯುತ್ತಿದೆ. ಕಿಚ್ಚ ಸುದೀಪ್ ಸೇರಿದಂತೆ ಹಲವು ಕಲಾವಿದರು ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಮಾಹಿತಿಯನ್ನೂ ಸ್ವತಃ ಕಲಾವಿದರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    ಮೊನ್ನೆಯಷ್ಟೇ ಸುದೀಪ್ (Sudeep) ಮ್ಯಾಕ್ಸ್ ಚಿತ್ರದ ಬಗ್ಗೆ ಹೊಸ ಅಪ್ ಡೇಟ್ ನೀಡಿದ್ದರು. 15 ದಿನಗಳ ಕಾಲ ಶೂಟಿಂಗ್ ಮುಗಿಸಿದರೆ, ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗತ್ತೆ. ನಂತರ ಮೇ ತಿಂಗಳಿನಲ್ಲಿ ಚಿತ್ರ ರಿಲೀಸ್ (Release) ಆಗಬಹುದು ಅಂದಿದ್ದರು.

  • ಸೋಮವಾರ ನಿರ್ಮಾಪಕ ಸೌಂದರ್ಯ ಜಗದೀಶ್‌ ಅಂತ್ಯಕ್ರಿಯೆ

    ಸೋಮವಾರ ನಿರ್ಮಾಪಕ ಸೌಂದರ್ಯ ಜಗದೀಶ್‌ ಅಂತ್ಯಕ್ರಿಯೆ

    ನಿರ್ಮಾಪಕ, ಜೆಟ್ ಲ್ಯಾಗ್ ಮಾಲೀಕ ಸೌಂದರ್ಯ ಜಗದೀಶ್ (Producer Soundarya Jagadeesh) ಅವರು ತಮ್ಮ ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ಇಂದು (ಏ.14) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏ.15ರಂದು ಹಾಸನ ಜಿಲ್ಲೆಯ ಹಿರಿಸಾವೆ ಬಳಿ ಇರುವ ಫಾರಂಹೌಸ್‌ನಲ್ಲಿ ಸೌಂದರ್ಯ ಜಗದೀಶ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ನಟ ಕಮ್‌ ನಿರ್ಮಾಪಕ ರವಿಗೌಡ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:45 ಕೋಟಿ ಮೌಲ್ಯದ ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗ್ಡೆ

    ಸದ್ಯ ಸೌಂದರ್ಯ ಜಗದೀಶ್ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಮೃತದೇಹವನ್ನು ಕುಟುಂಬಸ್ಥರಿಗೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ ನಿವಾಸದಲ್ಲಿ ನಾಳೆ ಬೆಳಗ್ಗೆ 9 ಗಂಟೆಯವರೆಗೂ ಸಾರ್ವಜನಿಕರು ಹಾಗೂ ಚಿತ್ರರಂಗದ ಮಂದಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಹಾಸನ ಜಿಲ್ಲೆಯ ಚೆನ್ನರಾಯ ಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ಅಂತಿಮ ಕಾರ್ಯ ನಡೆಯಲಿದೆ.

    ಉದ್ಯಮಿಯಾಗಿದ್ದ ಜಗದೀಶ್ ಅವರು ಅಪ್ಪು & ಪಪ್ಪು, ಸ್ನೇಹಿತರು, ರಾಮ್ ಲೀಲಾ, ಮಸ್ತ್ ಮಜಾ ಮಾಡಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.

  • Breaking: ಬಾಲಿವುಡ್ ‘ರಾಮಾಯಣ’ ಸಿನಿಮಾಗೆ ಯಶ್ ಕೂಡ ನಿರ್ಮಾಪಕ

    Breaking: ಬಾಲಿವುಡ್ ‘ರಾಮಾಯಣ’ ಸಿನಿಮಾಗೆ ಯಶ್ ಕೂಡ ನಿರ್ಮಾಪಕ

    ಬಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ರಾಮಾಯಣ ಚಿತ್ರೀಕರಣ ಪ್ರಾರಂಭವಾಗಿದೆ. ಭಾರತೀಯ ಪುರಾಣದ ಕಥೆಯನ್ನು ತೆರೆದಿಡುವ ರಾಮಾಯಣ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಮಿತ್ ಮಲ್ಹೋತ್ರಾ ಕೈ ಜೋಡಿಸಿದ್ದಾರೆ.

    ರಾಮಾಯಣಕ್ಕೆ ರಾಕಿ (Yash) ಕೂಡ ನಿರ್ಮಾಪಕ ರಾಮಾಯಣ (Ramayana) ಸಿನಿಮಾವನ್ನು ಬಹಳ ಅದ್ಧೂರಿಯಾಗಿ ದೃಶ್ಯ ರೂಪಕ್ಕೆ ಇಳಿಸುವುದಕ್ಕೆ ದಂಗಲ್ ನಿರ್ದೇಶಕ ನಿತೀಶ್ ತಿವಾರಿ ಹೊರಟಿದ್ದಾರೆ. ಅದರಂತೆ ಬಹು ಕೋಟಿ ಬಜೆಟ್ ಹಾಕಿ ಈ ಚಿತ್ರ ನಿರ್ಮಾಣ ಮಾಡೋದಿಕ್ಕೆ ರಾಕಿಭಾಯ್ ಹಾಗೂ ನಮಿತ್ ಮಲ್ಹೋತ್ರಾ ಒಂದಾಗಿದ್ದಾರೆ. ಯಶ್ ಒಡೆತನದ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಹಾಗೂ ನಮಿತ್ ಮಲ್ಹೋತ್ರಾ ಸಾರಥ್ಯದ ಪ್ರೈಮ್ ಫೋಕಸ್ ಸ್ಟುಡಿಯೋ ರಾಮಾಯಣ ಸಿನಿಮಾವನ್ನು ನಿರ್ಮಿಸುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ನಮಿತ್ ಮಲ್ಹೋತ್ರಾ, ರಾಮಾಯಣ ಕಥೆಗೆ ನ್ಯಾಯ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ನಮ್ಮ ಸಂಸ್ಕ್ರತಿಯನ್ನು ಜಗತ್ತಿಗೆ ಪರಿಚಯಿಸಲು ನಾನು ಉತ್ಸಕನಾಗಿದ್ದು, ನಾನು ಯಶ್ ಅವರಲ್ಲಿಯೂ ಇದನ್ನು ಕಂಡುಕೊಂಡಿದ್ದೇನೆ. ಅವರ ಪಯಣದಿಂದ ನಾನು ಸ್ಪೂರ್ತಿ ಪಡೆದಿದ್ದೇನೆ. ಯಶ್ ಅವರಲ್ಲಿರುವ ಯೋಜನೆಯನ್ನು ಅರಿತುಕೊಂಡಿದ್ದೇನೆ. ರಾಮಾಯಣ ದೃಶ್ಯಕಾವ್ಯವನ್ನು ತೆರೆಗೆ ತರುತ್ತಿದ್ದೇವೆ ಎಂದರು.

    ಯಶ್ ಮಾತನಾಡಿ, ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರರ್ದಶಿಸುವುದು ನನ್ನ ಬಹುದಿನಗಳ ಕನಸು. ಅದರ ಹುಡುಗಾಟದಲ್ಲಿ ನಾನು ಅತ್ಯುತ್ತಮ VFC ಸ್ಟುಡಿಯೋ ಕಂಡುಕೊಂಡಿದ್ದೇನೆ. ಅದರ ಹಿಂದಿನ ಪ್ರೇರಕ ಶಕ್ತಿ ಒಬ್ನ ಭಾರತೀಯ. ನಾವು ಸಿನಿಮಾ ರಂಗದ ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸುವಾಗ ರಾಮಾಯಣ ವಿಷಯವು ಬಂದಿತು. ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪ್ರಸ್ತುತಪಡಿಸುವ ಸಿನಿಮಾ ಇದಾಗಿದ್ದು, ಈ ಮಹಾಕಾವ್ಯ ಸಿನಿಮಾ ರೂಪ ತಾಳುತ್ತಿದೆ. ಆ ಅತ್ಯುತ್ತಮ ಅನುಭವನ್ನು ಜಗತ್ತಿಗೆ ನೀಡಲು ನಾವು ಕಾತರರಾಗಿದ್ದೇವೆ ಎಂದರು.

     

    ನಮಿತ್ ಮಲ್ಹೋತ್ರಾ ಒಡೆತನದ ಪ್ರೈಮ್ ಫೋಕಸ್ ಸ್ಟುಡಿಯೋ ಜಾಗತಿಕ ಮಟ್ಟದ ಕಂಟೆಂಟ್ ಹಾಗೂ ವಿಭಿನ್ನ ಬಗೆಯ ಕ್ರಿಯೇಟ್ ಮಾಡುವ ಸ್ವತಂತ್ರ ನಿರ್ಮಾಣ ಕಂಪನಿಯಾಗಿದೆ. ಈ ಸಂಸ್ಥೆ ಸದ್ಯ ಮೂರು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಆ ಪೈಕಿ ರಾಮಾಯಣ ಕೂಡ ಒಂದು. ಯಶ್ ತಮ್ಮದೇ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಎಂಬ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಬ್ಯಾನರ್ ನಡಿ ‘ಟಾಕ್ಸಿಕ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.  ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ‘ಮಾನ್ಸ್ಟರ್ ಮೈಂಡ್’ ಕ್ರಿಯೇಷನ್ಸ್ ಕೂಡ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣದಲ್ಲಿ ಪಾಲುದಾರಿಕೆಯನ್ನು ಹೊಂದಿದೆ. ಇದೇ ಬ್ಯಾನರ್ ನಡಿ ‘ರಾಮಾಯಣ’ ಸಿನಿಮಾಗೂ  ಯಶ್ ಬಂಡವಾಳ ಹೂಡುತ್ತಿದ್ದಾರೆ.

  • 2 ಸಾವಿರ ಕೋಟಿ ರೂ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ: ಖ್ಯಾತ ನಿರ್ಮಾಪಕ ಜಾಫರ್ ಬಂಧನ

    2 ಸಾವಿರ ಕೋಟಿ ರೂ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ: ಖ್ಯಾತ ನಿರ್ಮಾಪಕ ಜಾಫರ್ ಬಂಧನ

    ಮಾದಕವಸ್ತುಗಳ (Drugs) ಕಳ್ಳ ಸಾಗಾಣಿಕೆ ಸಂಬಂಧಿಸಿದಂತೆ ತಮಿಳಿನ ಖ್ಯಾತ ನಿರ್ಮಾಪಕ (Producer) ಹಾಗೂ ರಾಜಕಾರಣಿ ಜಾಫರ್ ಸಾದಿಖ್‌ನನ್ನು ಬಂಧಿಸಲು (Arrest) ತಂಡವನ್ನೇ ರಚನೆ ಮಾಡಿತ್ತು ಎನ್‌ಸಿಬಿ. ಸತತ ಹುಡುಕಾಟದ ನಂತರ ಕೊನೆಗೂ ಜಾಫರ್ ಎನ್‌ಸಿಬಿ ಬೀಸಿದ ಬಲೆಗೆ ಬಿದ್ದಿದ್ದಾನೆ. ಎರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮಾದಕವಸ್ತು ಕಳ್ಳಸಾಗಣೆಯ ಆರೋಪ ಈತನ ಮೇಲಿದೆ.

    ಜಾಫರ್ ಸಾದಿಖ್ (Zafar Sadikh) ಬಂಧನದ ನಂತರ ಈತನೊಬ್ಬ ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾದ ಮಾಸ್ಟರ್ ಮೈಂಡ್ ಆಗಿದ್ದಾನೆ ಎಂದು ಎನ್.ಸಿ.ಬಿ ಆರೋಪ ಮಾಡಿದೆ. ಬಂಧಿತ ಜಾಫರ್ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾನೆ. ಜೊತೆಗೆ ಡಿಎಂಕೆ ಪಕ್ಷದ ಸದಸ್ಯನಾಗಿಯೂ ಗುರುತಿಸಿಕೊಂಡಿದ್ದ. ಈತನ ಮೇಲೆ ಡ್ರಗ್ಸ್‌ ಆರೋಪ ಕೇಳಿ ಬರುತ್ತಿದ್ದಂತೆಯೇ ಪಕ್ಷ ಈತನನ್ನು ಉಚ್ಚಾಟನೆ ಮಾಡಿತ್ತು.

    ಎನ್.ಸಿ.ಬಿ ಆರೋಪಿಸಿದಂತೆ ಈತ ಅಪಾಯಕಾರಿ ಡ್ರಗ್ಸ್‌ಗಳನ್ನು ಬೇರೆ ಬೇರೆ ದೇಶಗಳಿಗೆ ಕಳುಹಿಸುತ್ತಿದ್ದನಂತೆ. ನಿಷೇಧಿತ ಸ್ಯೂಡೋಫೆಡ್ರಿನ್ ರೀತಿಯ ಅಪಾಯಕಾರಿ ಡ್ರಗ್ಸ್ ಅನ್ನು ಆಸ್ಟ್ರೇಲಿಯಾಗೆ ಕಳುಹಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಡ್ರೈ ಪ್ರೂಟ್ಸ್ ಪ್ಯಾಕೆಟ್, ಒಣಗಿದ ತೆಂಗಿನ ಕಾಯಿ ಹೀಗೆ ಹಲವು ವಸ್ತುಗಳ ಮೂಲಕ ಡ್ರಗ್ಸ್ ಸಾಗಾಣಿಕೆ ಮಾಡುತ್ತಿದ್ದ ಎನ್ನುವುದು ಅಧಿಕಾರಿಗಳ ಆರೋಪ.

     

    ಕೆಲ ದಿನಗಳ ಹಿಂದೆಯಷ್ಟೇ ಚೆನ್ನೈನ ಡಂಪ್ ಯಾರ್ಡ್ ನಲ್ಲಿ ಶೇಖರಿಸಿಟ್ಟಿದ್ದ ಮಾದಕ ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದರು. ಈ ವಸ್ತುಗಳಿಗೂ ಜಾಫರ್‌ಗೂ ಸಂಬಂಧವಿದೆ ಎನ್ನುವ ಕಾರಣಕ್ಕಾಗಿ ಹುಡುಕಾಟ ನಡೆಸಿದ್ದರು. ಎರಡು ವಾರಗಳ ಹುಡುಕಾಟದ ನಂತರ ಜಾಫರ್‌ನನ್ನು ಬಂಧಿಸಲಾಗಿದೆ.

  • ಬಾಲಿವುಡ್ ನಿರ್ಮಾಪಕ ಕುಮಾರ್ ಶಹಾನಿ ನಿಧನ

    ಬಾಲಿವುಡ್ ನಿರ್ಮಾಪಕ ಕುಮಾರ್ ಶಹಾನಿ ನಿಧನ

    ಬಾಲಿವುಡ್ (Bollywood) ನಿರ್ದೇಶಕ ಕಮ್ ನಿರ್ಮಾಪಕ ಕುಮಾರ್ ಶಹಾನಿ (Kumar Shahani) ಅವರು 83ನೇ ವರ್ಷಕ್ಕೆ ವಿಧಿವಶರಾಗಿದ್ದಾರೆ. ಫೆ.24ರ ರಾತ್ರಿ 11 ಗಂಟೆಗೆ ಕೋಲ್ಕತ್ತಾದಲ್ಲಿ ಕೊನೆಯುಸಿರೆಳೆದರು. ಕುಮಾರ್ ಶಹಾನಿ ನಿಧನಕ್ಕೆ ಬಾಲಿವುಡ್ ನಟ-ನಟಿಯರು, ಆಪ್ತರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ಸಂಗೀತಾ ಹೆಸರು ಹೇಳಿ ಕಾರ್ತಿಕ್ ಕಾಲೆಳೆದ ಸಪ್ತಮಿ

    ಕೆಲದಿನಗಳಿಂದ ಕುಮಾರ್ ಶಹಾನಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಸೂಕ್ತ ಚಿಕಿತ್ಸೆಗಾಗಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಕುಮಾರ್ ಶಹಾನಿ ಅವರು ನಿಧನರಾಗಿದ್ದಾರೆ. ಕುಮಾರ್ ಶಹಾನಿ ನಿಧನದ ಬಗ್ಗೆ ಅವರ ಕುಟುಂಬದ ಆಪ್ತರಾದ ಮಿತಾ ವಸಿಷ್ಠ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಕುಮಾರ್ ಶಹಾನಿ ಅವರು ಕಳೆದ 6 ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಮಾಯ ದರ್ಪಣ್, ತರಂಗ್, ಖಯಾಲ್ ಗಥಾ, ಚಾರ್ ಅಧ್ಯಾಯ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.

  • ಮಲಯಾಳಂ ನಿರ್ಮಾಪಕನ ಜೊತೆ ತ್ರಿಷಾ ಮದುವೆ: ಕೊನೆಗೂ ಬಾಯ್ಬಿಟ್ಟ ನಟಿ

    ಮಲಯಾಳಂ ನಿರ್ಮಾಪಕನ ಜೊತೆ ತ್ರಿಷಾ ಮದುವೆ: ಕೊನೆಗೂ ಬಾಯ್ಬಿಟ್ಟ ನಟಿ

    ಕ್ಷಿಣದ ಖ್ಯಾತ ನಟಿ ತ್ರಿಷಾ (Trisha Krishnan) ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಬ್ರೇಕಿಂಗ್ ನ್ಯೂಸ್ ಆಗಿತ್ತು. ಹಲವಾರು ನಟರ ಜೊತೆ ತ್ರಿಷಾ ಹೆಸರು ಓಡಾಡುತ್ತಿದ್ದರೂ, ಕೇರ್ ಮಾಡದೇ ತನ್ನ ಪಾಡಿಗೆ ತಾನು ಕೆಲಸದಲ್ಲಿ ಬ್ಯುಸಿಯಾಗಿದ್ದರು. ಈ ನಟಿ ಮಾಧ್ಯಮಗಳ ಮುಂದೆ ಬಂದರೆ ಸಾಕು, ಮದುವೆ (Marriage) ವಿಚಾರವನ್ನೇ ಕೇಳಲಾಗುತ್ತಿತ್ತು. ಹಾಗಾಗಿ ತ್ರಿಷಾ ಮದುವೆ ಸಾಕಷ್ಟು ಚರ್ಚೆಯಲ್ಲಿತ್ತು.

    ಎರಡು ದಿನಗಳ ಹಿಂದೆಯಷ್ಟೇ ಮಲಯಾಳಂ ನಿರ್ಮಾಪಕನ ಜೊತೆ ತ್ರಿಷಾ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದೆ ಎಂದು ಹೇಳಲಾಗಿತ್ತು. ಆ ನಿರ್ಮಾಪಕ ಯಾರು? ಎನ್ನುವ ಹುಡುಕಾಟ ಕೂಡ ನಡೆದಿತ್ತು. ಈ ನಡುವೆ ತ್ರಿಷಾ ಆ ಮದುವೆ ಬಗ್ಗೆ ಪ್ರತಿಕ್ರಿಯೆ ಬರೆದುಕೊಂಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ತ್ರಿಷಾ ಬರೆದುಕೊಂಡಿದ್ದು, ಇಂತಹ ವಿಚಾರಗಳನ್ನು ಇಲ್ಲಿಗೆ ಬಿಟ್ಟುಬಿಡಿ. ರೂಮರ್ ಗಳನ್ನು ಹಂಚಬೇಡಿ ಎಂದು ಬರೆದುಕೊಳ್ಳುವ ಮೂಲಕ ಮದುವೆ ವಿಚಾರವನ್ನು ತಳ್ಳಿ ಹಾಕಿದ್ದಾರೆ. ಇದೊಂದು ಕೇವಲ ಶುದ್ಧ ಗಾಸಿಪ್ ಎಂದು ಅವರು ಹೇಳಿಕೊಂಡಿದ್ದಾರೆ.

    ಈ ಹಿಂದೆ ತ್ರಿಷಾ ಅವರದ್ದು ಉದ್ಯಮಿ ವರುಣ್ (Varun) ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥವಾಗಿತ್ತು. ಹಲವು ವೈಯಕ್ತಿಕ ಕಾರಣ, ಭಿನ್ನಾಭಿಪ್ರಾಯಗಳಿಂದ ವರುಣ್ ಜೊತೆಗಿನ ಸಂಬಂಧ ಮುರಿದು ಬಿತ್ತು. 2015ರಲ್ಲಿ ನಡೆದ ಈ ಕಹಿ ಘಟನೆಯಿಂದ ಹೊರಬಂದು ಈಗ ಸಿನಿಮಾಗಳಲ್ಲಿ ಪವರ್ ಚಿತ್ರದ ನಟಿ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ.

     

    ‘ಪೊನ್ನಿಯನ್ ಸೆಲ್ವನ್’ (Ponniyin Selvan) ಚಿತ್ರದ ಸಕ್ಸಸ್ ನಂತರ ಮತ್ತೆ ಸಾಲು ಸಾಲು ಬಿಗ್ ಪ್ರಾಜೆಕ್ಟ್‌ಗಳಿಗೆ ತ್ರಿಷಾ ನಾಯಕಿಯಾಗಿದ್ದಾರೆ. ಜೊತೆ ವೈಯಕ್ತಿಕ ಜೀವನದಲ್ಲೂ ಅವರು ಖುಷಿಯಾಗಿದ್ದಾರೆ. ಬೇಗ ತ್ರಿಷಾ ಮದುವೆ ಆಗಲಿ ಎನ್ನುವುದು ಅವರ ಅಭಿಮಾನಿಗಳ ಆಸೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]