Tag: procession

  • ವಿಡಿಯೋ: ಮೆರವಣಿಗೆ ವೇಳೆ ಜನರ ಮೇಲೆ ಹರಿದ ವರನ ಕಾರ್- 25 ಮಂದಿಗೆ ಗಾಯ

    ವಿಡಿಯೋ: ಮೆರವಣಿಗೆ ವೇಳೆ ಜನರ ಮೇಲೆ ಹರಿದ ವರನ ಕಾರ್- 25 ಮಂದಿಗೆ ಗಾಯ

    ರಾಯ್‍ಪುರ್: ಮದುವೆ ಸಮಾರಂಭದ ವೇಳೆ ಅವಘಡವೊಂದು ನಡೆದು ಅತಿಥಿಗಳು ಆಸ್ಪತ್ರೆಗೆ ದಾಖಲಾದ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ.

    ಸೋಮವಾರ ರಾತ್ರಿ ಇಲ್ಲಿನ ಜಾಂಜ್‍ಗಿರ್ ಚಂಪಾ ಜಿಲ್ಲೆಯಲ್ಲಿ ಮದುವೆಯ ಮೆರವಣಿಗೆ ವೇಳೆ ಸಂಬಂಧಿಕರು ಹಾಗೂ ಸ್ನೇಹಿತರು ರಸ್ತೆ ಮೇಲೆ ಡ್ಯಾನ್ಸ್ ಮಾಡುತ್ತಾ ಸಾಗುತ್ತಿದ್ದರು. ಈ ವೇಳೆ ವರ ಕುಳಿತಿದ್ದ ಎಸ್‍ಯುವಿ ಕಾರ್ ಇದ್ದಕ್ಕಿದ್ದಂತೆ ಜನರ ಮೇಲೆ ಹರಿದಿದೆ. ಪರಿಣಾಮ 25 ಮಂದಿಗೆ ಗಾಯಗಳಾಗಿದ್ದು, 9 ಜನರ ಸ್ಥಿತಿ ಗಂಭೀರವಾಗಿದೆ. ಘಟನೆಯ ವಿಡಿಯೋ ಲಭ್ಯವಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

    ಮೆರವಣಿಗೆ ಜೊತೆ ನಿಧಾನವಾಗಿ ಸಾಗುತ್ತಿದ್ದ ಸ್ಕಾರ್ಪಿಯೋ ಕಾರಿನಲ್ಲಿ ವರ ಕುಳಿತಿದ್ದ. ಹೆಂಗಸರು, ಪುರುಷರು ಹಾಗೂ ಮಕ್ಕಳು ಅಲ್ಲಲ್ಲಿ ನಿಂತು ಡ್ಯಾನ್ಸ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಕಾರಿನ ಚಾಲಕ ಬ್ರೇಕ್ ಬದಲು ಆಕ್ಸಿಲರೇಟರ್ ತುಳಿದಿದ್ದು, ಹಲವಾರು ಜನರ ಮೇಲೆ ಕಾರ್ ಹರಿಸಿದ್ದಾನೆ. ನಂತರ ರಿವರ್ಸ್ ತೆಗೆಯಲು ಯತ್ನಿಸಿದ್ದು, ಆಗ ಇನ್ನೂ ಹಲವರಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಚಾಲಕ ಕಾರಿನಿಂದ ಇಳಿದು ಪರಾರಿಯಾಗಿದ್ದಾನೆ. ಚಾಲಕ ಮದ್ಯಪಾನ ಮಾಡಿದ್ದನಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ವರನ ಜೊತೆ ಕೆಲವು ಮಕ್ಕಳು ಕೂಡ ಕಾರಿನಲ್ಲಿ ಕುಳಿತಿದ್ದರು ಎಂದು ವರದಿಯಾಗಿದೆ.

  • ಬೇಲ್ ಮೇಲೆ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ರಾಜಮರ್ಯಾದೆ- 500 ಬೈಕ್, ಕಾರ್‍ಗಳ ಜೊತೆ ಮೆರವಣಿಗೆ

    ಬೇಲ್ ಮೇಲೆ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ರಾಜಮರ್ಯಾದೆ- 500 ಬೈಕ್, ಕಾರ್‍ಗಳ ಜೊತೆ ಮೆರವಣಿಗೆ

    ಧಾರವಾಡ: ಇವನು ಯಾವುದೇ ಘನಂಧಾರಿ ಕೆಲಸ ಮಾಡಿದವನಲ್ಲ. ಯಾವುದೇ ಸಮಾಜ ಉದ್ಧಾರ ಕೆಲಸ ಕೂಡ ಮಾಡಿಲ್ಲ. ಆದ್ರೂ ತೆರೆದ ವಾಹನದಲ್ಲಿ ಈತನನ್ನ ಮೆರವಣಿಗೆ ಮಾಡಿದ್ರು, ಘೋಷಣೆ ಕೂಗಿದ್ರು. ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬನಿಗೆ ರಾಜ ಮರ್ಯಾದೆ ಮೂಲಕ ಬೆಂಬಲಿಗರು ಕರೆಯೊಯ್ದ ಘಟನೆ ಧಾರವಾಡದಲ್ಲಿ ನಡೆದಿದೆ.

    ಪೆಂಡಾರಗಲ್ಲಿಯ ರಿಯಲ್ ಎಸ್ಟೇಟ್ ಉದ್ಯಮಿ ಮಕ್ತುಮ್ ಸೊಗಲದ ಎರಡು ತಿಂಗಳ ಹಿಂದೆ ಹುಬ್ಬಳ್ಳಿಯ ಲಾಡ್ಜ್ ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ. ಗುರುವಾರದಂದು ನ್ಯಾಯಾಲಯದಿಂದ ಜಾಮೀನಿನ ಮೇಲೆ ಆರೋಪಿ ಮುಕ್ತುಂ ಸೊಗಲದ ಬಿಡುಗಡೆಯಾಗಿದ್ದ.

    ಬಿಡುಗಡೆಯಾದ ನಂತರ ಆರೋಪಿ ಮುಕ್ತುಂ ಸೊಗಲದಗೆ ಬೆಂಬಲಿಗರು ರಾಜಾ ಮರ್ಯಾದೆಯಿಂದ ಮೆರವಣಿಗೆ ಮಾಡುವ ಮೂಲಕ ಕರೆದುಕೊಂಡು ಹೋಗಿದ್ದಾರೆ.

    ಅತ್ಯಾಚಾರ ಆರೋಪಿಗೆ 500 ಬೈಕ್, ಕಾರು, ಆಟೋಗಳ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಗಿದೆ. ಮುಕ್ತುಂ ಸೊಗಲದ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

  • ಕೈಯಲ್ಲಿ ಹಾವು ಹಿಡಿದು ನೂರಾರು ಜನರ ಮೆರವಣಿಗೆ- ವಿಡಿಯೋ ಹಿಂದಿನ ನಿಜವಾದ ಸ್ಟೋರಿ ಏನು?

    ಕೈಯಲ್ಲಿ ಹಾವು ಹಿಡಿದು ನೂರಾರು ಜನರ ಮೆರವಣಿಗೆ- ವಿಡಿಯೋ ಹಿಂದಿನ ನಿಜವಾದ ಸ್ಟೋರಿ ಏನು?

    ಪಾಟ್ನಾ: ನೂರಾರು ಜನ ಯಾವುದೇ ಭಯವಿಲ್ಲದೆ ಕೈಯಲ್ಲಿ ಹಾವುಗಳನ್ನ ಹಿಡಿದುಕೊಂಡು ಮೆರವಣಿಗೆ ಸಾಗುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ಅದರಲ್ಲೂ ಈ ವಿಡಿಯೋದ ಬಗ್ಗೆ ಕೆಲವು ಯೂಟ್ಯೂಬ್ ಚಾನೆಲ್‍ಗಳು ಮತ್ತೊಂದು ಬಗೆಯದ್ದೇ ವಿವರಣೆ ನೀಡಿವೆ. ಬಿಹಾರದ ರತ್ನಪುರಿ ಗ್ರಾಮದಲ್ಲಿ ಮನೆ ನಿರ್ಮಿಸಲು ಪಾಯ ತೋಡುವಾಗ ಸಾವಿರಾರು ವರ್ಷಗಳಷ್ಟು ಹಳೆಯದಾದ 160 ಕೆಜಿ ತೂಕದ ಚಿನ್ನದ ಶಿವನ ವಿಗ್ರಹ ಸಿಕ್ಕಿದೆ. ಈ ವಿಗ್ರಹದ ಸುತ್ತ ಸಾವಿರಾರು ಹಾವುಗಳು ಪತ್ತೆಯಾಗಿದ್ದು, ವಿಗ್ರಹವನ್ನ ಕಾವಲು ಕಾಯುತ್ತಿದ್ದವು. ಅದನ್ನ ಜನರು ಹಿಡಿದುಕೊಂಡು ಮೆರವಣಿಗೆ ಹೊರಟಿದ್ದಾರೆ. ಇದೊಂದು ಪವಾಡ ಎಂದು ವಿಡಿಯೋದ ವಿವರಣೆಯಲ್ಲಿ ಹೇಳಲಾಗಿದ್ದು, ಕೆಲವು ವೆಬ್‍ಸೈಟ್‍ಗಳಲ್ಲೂ ಇದೇ ರೀತಿ ವರದಿಯಾಗಿದೆ. ಆದ್ರೆ ಈ ಸುದ್ದಿ ಎಷ್ಟು ಸತ್ಯ ಎಂಬುದನ್ನ ಗಮನಿಸಬೇಕಾಗುತ್ತದೆ.

    ಯಾಕಂದ್ರೆ ಕಳೆದ ವಾರ ಬಿಹಾರದಲ್ಲಿ ಶ್ರಾವಣ ಅಮಾವಾಸ್ಯೆಯ ಪ್ರಯುಕ್ತ ಜನರು ಕೈಯಲ್ಲಿ ಹಾವುಗಳನ್ನ ಹಿಡಿದು ಮೆರವಣಿಗೆ ಹೋಗುತ್ತಿರುವ ಬಗ್ಗೆ ಸುದ್ದಿ ಸಂಸ್ಥೆಯೊಂದು ಫೋಟೋವೊಂದನ್ನ ಪ್ರಕಟಿಸಿತ್ತು. ಕೆಲವು ಮಾಧ್ಯಮಗಳು ಕೂಡ ನಾಗ ಪಂಚಮಿ ಪ್ರಯುಕ್ತ ಜನ ಹಾವು ಹಿಡಿದು ಮೆರವಣಿಗೆ ಹೋಗುತ್ತಿರುವ ಬಗ್ಗೆ ವರದಿ ಮಾಡಿದ್ದವು. ಯೂಟ್ಯೂಬ್‍ನಲ್ಲಿ ಬಿಹಾರದ ನಾಗ ಪಂಚಮಿ ಎಂದು ಹುಡುಕಿದ್ರೆ ಇಂತಹ ಸಾಕಷ್ಟು ಹಳೆಯ ವಿಡಿಯೋಗಳು ಸಿಗುತ್ತವೆ. ಬಿಹಾರದಲ್ಲಿ ನಾಗ ಪಂಚಮಿ ಸಂದರ್ಭದಲ್ಲಿ ಈ ರೀತಿ ಹಾವುಗಳನ್ನ ಕೈಯಲ್ಲಿ ಹಿಡಿದು ಮೆರವಣಿಗೆ ಮಾಡ್ತಾರೆ.

    ಇದೇ ವಿಡಿಯೋವನ್ನ ಬಳಸಿ ಶಿವನ ವಿಗ್ರಹ ಕಾಯುತ್ತಿದ್ದ ಹಾವುಗಳಿವು ಎಂದು ಹೇಳಿರಬಹುದು. ಆದ್ರೆ ಶಿವನ ಚಿನ್ನದ ವಿಗ್ರಹ ನಿಜವಾಗಿಯೂ ಪತ್ತೆಯಾಗಿದ್ಯಾ ಅಥವಾ ಈ ಫೋಟೋ ಹಿಂದೆ ಬೇರೆಯದ್ದೇ ಕಥೆಯಿದ್ಯಾ? ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.

    https://www.youtube.com/watch?v=tLrjOcqeNo4

    https://www.youtube.com/watch?v=BUCuaMs4Vqs

     

  • ವ್ಯಕ್ತಿಗೆ ಅರ್ಧ ತಲೆ ಬೋಳಿಸಿ, ಲಂಗ ಹಾಕಿ, ಅರೆ ಬೆತ್ತಲು ಮಾಡಿ ಊರೆಲ್ಲಾ ಮೆರವಣಿಗೆ

    ವ್ಯಕ್ತಿಗೆ ಅರ್ಧ ತಲೆ ಬೋಳಿಸಿ, ಲಂಗ ಹಾಕಿ, ಅರೆ ಬೆತ್ತಲು ಮಾಡಿ ಊರೆಲ್ಲಾ ಮೆರವಣಿಗೆ

    ವಿಜಯಪುರ: ಯುವತಿವೊಬ್ಬಳನ್ನು ಚೂಡಾಯಿಸಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಮತ್ತು ಯುವತಿಯ ಕುಟುಂಬದವರು ಸೇರಿ ಅರಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸಿಂದಗಿ ತಾಲೂಕಿನ ಹಿಟ್ನಳ್ಳಿ ತಾಂಡಾದಲ್ಲಿ ಈ ಘಟನೆ ನಡೆದಿದೆ. ಶಂಕರ್(43) ಎಂಬಾತ ತಾಂಡಾದಲ್ಲಿರುವ ಯವತಿನ್ನು ಚೂಡಾಯಿಸುತ್ತಿದ್ದ. ಹೀಗಾಗಿ ಅಲ್ಲಿಯ ಗ್ರಾಮಸ್ಥರು ಮತ್ತು ಯುವತಿಯ ಕುಟುಂಬದವರು ಸೇರಿ ಶಂಕರ್‍ಗೆ ಲಂಗ ತೊಡಿಸಿ, ಅರ್ಧ ತಲೆ ಬೋಳಿಸಿ ಊರು ತುಂಬ ಮೆರವಣಿಗೆ ಮಾಡಿದ್ದಾರೆ.

    ಈ ಘಟನೆ ಜುಲೈ 11 ರಂದು ನಡೆದಿದದ್ದು ತಡವಾಗಿ ಬೆಳಕಿಗೆ ಬಂದಿದೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿ ಶಂಕರ್‍ನನ್ನು ಬಂಧಿಸಿದ್ದು ಪೊಲೀಸರು ತನಿಖೆ ಮಂದುವರೆಸಿದ್ದಾರೆ.

    https://youtu.be/E56QglLzlbM

  • ವೀಡಿಯೋ: ಸಿಂಹದ ಮೇಲೆ ಕುಳಿತು ವರನ ಮೆರವಣಿಗೆ!

    ವೀಡಿಯೋ: ಸಿಂಹದ ಮೇಲೆ ಕುಳಿತು ವರನ ಮೆರವಣಿಗೆ!

    ಇಸ್ಲಾಮಾಬಾದ್: ಕುದುರೆ ಮೇಲೆ, ಬೈಕ್‍ನಲ್ಲಿ, ದುಬಾರಿ ಕಾರಿನಲ್ಲಿ ಅಥವಾ ಪಲ್ಲಕ್ಕಿಯಲ್ಲಿ ಕುಳಿತು ವಧು/ವರ ಮದುವೆ ಮಂಟಪಕ್ಕೆ ಬರೋದನ್ನ ನೋಡಿದ್ದೀವಿ. ಆದ್ರೆ ಪಾಕಿಸ್ತಾನದಲ್ಲಿ ಕೋಟ್ಯಾಧಿಪತಿ ವ್ಯಕ್ತಿಯೊಬ್ಬರ ಮಗ ಸಿಂಹದ ಮೇಲೆ ಕುಳಿತು ಮೆರವಣಿಗೆ ಮೂಲಕ ಮದುವೆ ಮಂಟಪಕ್ಕೆ ಬಂದಿದ್ದಾರೆ.

    ಏನು ಸಿಂಹನಾ ಅಂತ ಅಚ್ಚರಿ ಪಡಬೇಡಿ. ವರ ಕುಳಿತಿದ್ದು ಸಿಂಹ ಇದ್ದ ಬೋನಿನ ಮೇಲಷ್ಟೆ. ಚಿನ್ನಾಭರಣಗಳನ್ನ ಮೈಮೇಲೆ ಧರಿಸಿ ವರ ಸಿಂಹವಿದ್ದ ಬೋನಿನ ಮೇಲೆ ಕುಳಿತು, ಸ್ನೇಹಿತರು ಹಾಗೂ ಸಂಬಂಧಿಕರು ಕುಣಿಯುತ್ತಾ, ನೋಟುಗಳ ಸುರಿಮಳೆಗೈಯ್ಯುತ್ತಾ ಅದ್ಧೂರಿ ಮೆರವಣಿಗೆ ಮೂಲಕ ಮಂಟಪ ತಲುಪಿದ್ದಾರೆ. ಈ ಮದುವೆಯ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳಲ್ಲೂ ವರದಿಯಾಗಿದೆ.

    ವರ ತಾನು ಸಿಂಹದ ಮೇಲೆ ಕುಳಿತು ಮದುವೆ ಮಂಟಪಕ್ಕೆ ಬರಬೇಕು ಅಂತ ಆಸೆ ಪಟ್ಟಿದ್ದರಂತೆ. ಮಗನ ಆಸೆ ಈಡೇರಿಸಬೇಕು ಎಂದು ವರನ ತಂದೆ ಅಂದುಕೊಂಡಿದ್ದರು. ಆದ್ರೆ ಸಿಂಹದ ಮೇಲೆ ಕುಳಿತು ಬರುವುದು ಸಾಧ್ಯವಿಲ್ಲದ ಮಾತು ಎಂದು ಅರಿತು ಬೋನಿನೊಳಗೆ ಹಾಕಲಾದ ಸಿಂಹವನ್ನ ತರಿಸಿದ್ದಾರೆ. ನಂತರ ಬೋನಿನ ಮೇಲೆ ಚೇರ್ ಹಾಕಿಸಿ ವರನನ್ನು ಅದರ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಿದ್ದಾರೆ. ಮದುವೆಗೆ 15 ಸಾವಿರಕ್ಕೂ ಹೆಚ್ಚು ಅತಿಥಿಗಳನ್ನ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.