Tag: procession

  • ಮದುವೆ ಮೆರವಣಿಗೆಯಲ್ಲಿ ಬರೋಬ್ಬರಿ 90 ಲಕ್ಷ ರೂ. ಹಣ ಎಸೆದು ಸಂಭ್ರಮ

    ಮದುವೆ ಮೆರವಣಿಗೆಯಲ್ಲಿ ಬರೋಬ್ಬರಿ 90 ಲಕ್ಷ ರೂ. ಹಣ ಎಸೆದು ಸಂಭ್ರಮ

    ಗಾಂಧಿನಗರ: ಮದುವೆ ಕಾರ್ಯಕ್ರಮದಲ್ಲಿ ಬರೋಬ್ಬರಿ 90 ಲಕ್ಷ ರೂ. ಹಣ ಎಸೆದು ಸಂಭ್ರಮಿಸಿದ ಘಟನೆ ಗುಜರಾತಿನ ಜಾಮ್‍ನಗರದಲ್ಲಿ ನಡೆದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ನವೆಂಬರ್ 30ರಂದು ವರ ಮದುವೆಮನೆಗೆ ಮೆರವಣಿಗೆ ಮೂಲಕ ಹೋಗುತ್ತಿದ್ದನು. ಈ ವೇಳೆ ವರನ ಕುಟುಂಬಸ್ಥರು ಹಾಗೂ ಸಂಬಂಧಿಕರು ರಸ್ತೆಯುದ್ದಕ್ಕೂ ಹಣವನ್ನು ಎಸೆಯುವ ಮೂಲಕ ಡ್ಯಾನ್ಸ್ ಮಾಡುತ್ತಾ ಸಂಭ್ರಮಿಸಿದ್ದಾರೆ. ಈ ಮದುವೆಯನ್ನು ಚೇಲಾ ಗ್ರಾಮದ ಜಡೇಜಾ ಕುಟುಂಸ್ಥರು ಆಯೋಜಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಹಣದ ಸುರಿಮಳೆ-ಕಂತೆ ಕಂತೆ ಹಣ ನೋಡಿದ ಜನ ಅಚ್ಚರಿ

    ವರದಿಗಳ ಪ್ರಕಾರ ಮೆರವಣಿಗೆಯಲ್ಲಿ 90 ಲಕ್ಷ ರೂ. ಅನ್ನು ಎಸೆಯಲಾಗಿದೆ. ಇದರಲ್ಲಿ ಕೇವಲ 2 ಸಾವಿರ ಹಾಗೂ 500 ರೂ. ನೋಟುಗಳನ್ನು ಸುರಿಮಳೆ ಗೈದಿದ್ದಾರೆ. ಹಣ ಎಸೆದು ಸಂಭ್ರಮಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ನವಜೋಡಿ ಮೇಲೆ ಲಕ್ಷಾಂತರ ರೂ. ಸುರಿಮಳೆ: ವಿಡಿಯೋ ನೋಡಿ

    ಮೆರವಣಿಗೆ ವೇಳೆ ಒಂದು ಹಣದ ಕಂತೆ ಖಾಲಿ ಆಗುತ್ತಿದ್ದಂತೆ ಮತ್ತೊಂದು ಹಣದ ಕಂತೆಯನ್ನು ತೆಗೆದು ಸುರಿಮಳೆ ಗೈದಿದ್ದಾರೆ. ನೋಟುಗಳನ್ನು ಎಸೆಯುತ್ತಿದ್ದ ಕಾರಣ ಅಲ್ಲಿದ್ದ ಜನರಿಗೆ ನೋಟಿನ ಮಳೆ ಆಗುತ್ತಿದೆ ಎಂದು ಎನಿಸುತ್ತಿತ್ತು. ಮೆರವಣಿಗೆ ಮುಂದೆ ಹೋದ ತಕ್ಷಣ ಸ್ಥಳೀಯರು ಕೆಳಗೆ ಬಿದ್ದಿದ್ದ ನೋಟುಗಳನ್ನು ಎತ್ತಿಕೊಂಡಿದ್ದಾರೆ.

    ಮದುವೆಯಾದ ನಂತರ ವರ ವಧುವನ್ನು ಹೆಲಿಕಾಪ್ಟರ್ ಮೂಲಕ ಕುಂದಾದ್ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲದೆ ವರನ ಸಹೋದರ ಮದುವೆ ಉಡುಗೊರೆಯಾಗಿ ಒಂದು ಕೋಟಿ ಮೌಲ್ಯದ ಕಾರನ್ನು ಉಡುಗೊರೆ ಆಗಿ ನೀಡಿದ್ದಾರೆ ಎನ್ನಲಾಗುತ್ತಿದೆ.

  • ಗಣೇಶೋತ್ಸವ ಮೆರವಣಿಗೆಯಲ್ಲಿ ದೈವಪಾತ್ರಿ ವೇಷ

    ಗಣೇಶೋತ್ಸವ ಮೆರವಣಿಗೆಯಲ್ಲಿ ದೈವಪಾತ್ರಿ ವೇಷ

    – ವಿವಾದಕ್ಕೀಡಾದ ನಂತ್ರ ಕ್ಷಮೆ ಕೇಳಿದ ಪಾತ್ರಧಾರಿ

    ಉಡುಪಿ: ದೈವದ ಪಾತ್ರಿಯ ವೇಷ ಧರಿಸಿ ವ್ಯಕ್ತಿಯೊಬ್ಬ ಗಣೇಶೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡ ಘಟನೆ ವಿವಾದಕ್ಕೆ ಕಾರಣವಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಈ ಘಟನೆ ನಡೆದಿದೆ.

    ಗಣಪತಿ ಮೂರ್ತಿ ವಿಸರ್ಜನೆ ವೇಳೆ ವೈಭವದ ಶೋಭಾಯಾತ್ರೆ ನಡೆಯುತ್ತದೆ. ಮೆರವಣಿಗೆಯಲ್ಲಿ ಟ್ಯಾಬ್ಲೋ, ವಿವಿಧ ವೇಷಗಳಿರುತ್ತದೆ. ಈ ಮಧ್ಯೆ ಸ್ಥಳೀಯ ಸುಧಾಕರ್ ಎಂಬವರು ದೈವದ ಪಾತ್ರಿಯ ವೇಷ ಹಾಕಿದ್ದಾರೆ. ಆವೇಷ ಬಂದವರಂತೆ ನಟಿಸಿ, ದೈವದ ನುಡಿಕೊಡುವವರಂತೆ ಮಾತನಾಡಿ ಸ್ಥಳದಲ್ಲಿದ್ದವರನ್ನು ರಂಜಿಸಿದ್ದಾರೆ.

    ಆ ವೀಡಿಯೋ ಎಲ್ಲಾ ಕಡೆ ಈಗ ಹರಿದಾಡುತ್ತಿದೆ. ಭೂತಾರಾಧನೆಯಲ್ಲಿ ದೈವಪಾತ್ರಿಗೆ ಮಹತ್ವದ ಸ್ಥಾನವಿದೆ. ಈ ರೀತಿ ಅಣಕ ಮಾಡಿರುವುದರಿಂದ ಹಿಂದೂ ಧಾರ್ಮಿಕತೆಗೆ ಧಕ್ಕೆ ಬರುತ್ತದೆ ಎಂದು ಭಕ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಶ್ರೀರಾಮಸೇನೆ ಮತ್ತು ಹಿಂದೂ ಜಾಗರಣ ವೇದಿಕೆ ಪ್ರಮುಖರು ವೇಷಧಾರಿ ಸುಧಾಕರ್ ಗೆ ಕರೆಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ದೈವಪಾತ್ರಿಯ ಪಾತ್ರಧಾರಿ ಸುಧಾಕರ್ ಕೊನೆಗೆ ಕ್ಷಮೆ ಕೇಳಿದ್ದಾರೆ.

    ಮೆರವಣಿಗೆ, ಶೋಭಾಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭ ದೈವ, ದೇವರನ್ನು ವೇದಿಕೆಗೆ, ರಸ್ತೆಗೆ ತರಬಾರದೆಂದು ನಾಲ್ಕೈದು ವರ್ಷಗಳ ಹಿಂದೆ ಕರಾವಳಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದೀಗ ಮತ್ತೆ ಹಳೇ ಚಾಳಿಯನ್ನು ಶುರುಮಾಡಿರುವುದು ಆಸ್ತಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೋಟ್ಯಂತರ ಜನರ ನಂಬಿಕೆಯನ್ನು ಅಣಕ ಮಾಡಬಾರದು ಎಂಬ ಕೂಗು ಕೇಳಿಬಂದಿದೆ.

  • ಮಳೆಗಾಗಿ ಜನರ ಜೊತೆ ಮೆರವಣಿಗೆ ಹೋಗಿ ಮಂಗನ ಪ್ರಾರ್ಥನೆ

    ಮಳೆಗಾಗಿ ಜನರ ಜೊತೆ ಮೆರವಣಿಗೆ ಹೋಗಿ ಮಂಗನ ಪ್ರಾರ್ಥನೆ

    ರಾಯಚೂರು: ರಾಜ್ಯದಲ್ಲಿ ಬರಗಾಲ ಇರುವುದರಿಂದ ಜನರು ದೇವರ ಮೋರೆ ಹೋಗುತ್ತಿದ್ದಾರೆ. ಈಗ ರಾಯಚೂರಿನ ಜನರು ಮಳೆಗಾಗಿ ದೇವರ ಮೋರೆ ಹೋಗಿದ್ದು, ಇದರಲ್ಲಿ ಮಂಗವೊಂದು ಭಾಗವಹಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದೆ.

    ರಾಯಚೂರಿನ ಮಾನ್ವಿಯ ಆದಾಪುರದ ಜನರು ಮಳೆಗಾಗಿ ಮಣ್ಣೆತ್ತಿನ ಅಮವಾಸೆ ಪ್ರಯುಕ್ತ ಎತ್ತಿನ ಗಾಡಿಯ ಮೇಲೆ ಕಾಮಧೇನುವಿನ ಮೆರವಣಿಗೆ ಮಾಡುತ್ತಿದ್ದರು. ಈ ಮೆರವಣೆಗೆಯಲ್ಲಿ ಮಂಗವೊಂದು ಭಾಗವಹಿಸಿ ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದೆ.

    ಮಂಗಳವಾರ ಅಮವಾಸೆ ಇದ್ದ ಕಾರಣ ಇಂದು ಎತ್ತಿನ ಗಾಡಿಯಲ್ಲಿ ಕಾಮಧೇನುವಿನ ಮೆರವಣಿಗೆ ಮಾಡಲಾಯಿತು. ಈ ಮೆರವಣೆಗೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಇದರ ಜೊತೆಗೆ ತಮಟೆ ಡೊಳ್ಳು ಶಬ್ದದ ಮಧ್ಯೆಯಲ್ಲೂ ಸುಮಾರು 3 ಕಿಲೋ ಮೀಟರ್ ಮೆರವಣಿಗೆಯಲ್ಲಿ ಸಾಗಿದ ಮಂಗ ಜನರ ಜೊತೆ ಮಳೆಗಾಗಿ ದೇವರನ್ನು ಪ್ರಾರ್ಥನೆ ಮಾಡಿತು.

  • ರಂಜಾನ್ ಮೆರವಣಿಗೆ ವೇಳೆ ಸೋಮವಾರಪೇಟೆಯಲ್ಲಿ ಕಿಡಿಗೇಡಿಗಳ ಪುಂಡಾಟ

    ರಂಜಾನ್ ಮೆರವಣಿಗೆ ವೇಳೆ ಸೋಮವಾರಪೇಟೆಯಲ್ಲಿ ಕಿಡಿಗೇಡಿಗಳ ಪುಂಡಾಟ

    ಮಡಿಕೇರಿ: ರಂಜಾನ್ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಪುಂಡಾಟ ನಡೆಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಒಕ್ಕಲಿಗರ ಕಲ್ಯಾಣ ಮಂಟಪದ ಬಳಿ ನಡೆದಿದೆ.

    ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಕೊಡಗಿನ ಸೋಮವಾರಪೇಟೆಯಲ್ಲಿ ಮೆರವಣಿಗೆ ಮಾಡಲಾಗುತಿತ್ತು. ಈ ವೇಳೆ ಕಿಡಿಗೇಡಿಗಳು ನಿಂತಿದ್ದ ಕಾರಿಗೆ ಕಲ್ಲು ತೂರಿದ್ದಾರೆ. ಕಲ್ಲು ತೂರಿದ ಪರಿಣಾಮ ಕಾರಿನ ಗಾಜುಗಳು ಪುಡಿ ಪುಡಿ ಆಗಿದೆ.

    ಕಲ್ಲು ತೂರಿದ್ದರಿಂದ ಗಾಂಧಿನಗರದ ಪ್ರವೀಣ್ ಎಂಬವರಿಗೆ ಸೇರಿದ ಕಾರು ಜಖಂಗೊಂಡಿದೆ. ಮೆರವಣಿಗೆಯಲ್ಲಿ ಸಾಗುತ್ತಿದ್ದ ಕೆಲ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಘಟನೆಯಿಂದ ಸೋಮವಾರಪೇಟೆ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

    ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.

  • ರಸ್ತೆಯ ಇಕ್ಕೆಲಗಳಲ್ಲಿ ಜನ ಸಾಗರ: ವೀರಯೋಧನಿಗೆ ಕನ್ನಡಿಗರ ನಮನ

    ರಸ್ತೆಯ ಇಕ್ಕೆಲಗಳಲ್ಲಿ ಜನ ಸಾಗರ: ವೀರಯೋಧನಿಗೆ ಕನ್ನಡಿಗರ ನಮನ

    – ಸೇನಾ ವಾಹನದ ಜೊತೆ ಮೆರವಣಿಗೆಯಲ್ಲಿ ಸಾಗಿದ ಜನತೆ
    – ಎರಡು ಬದಿಯಲ್ಲಿ ನಿಂತು ಹುತಾತ್ಮ ಗುರುವಿಗೆ ನಮನ

    ಬೆಂಗಳೂರು: ಅಮರ್ ರಹೇ, ಗುರು ಅಮರ್ ರಹೇ, ಹುತಾತ್ಮ ಯೋಧ ಗುರುವಿಗೆ ಜಯವಾಗಲಿ, ಭಾರತ್ ಮಾತಾ ಕೀ ಜೈ… ಇದು ಹುತಾತ್ಮ ಗುರು ಅವರ ಮೃತ ಶರೀರರವನ್ನು ರಸ್ತೆಯಲ್ಲಿ ಸಾಗುತ್ತಿದ್ದಾಗ ಕೇಳಿ ಬಂದ ಧ್ವನಿ.

    ಎಚ್‍ಎಎಲ್‍ನಿಂದ ಸೇನಾ ವಾಹನದ ಮೂಲಕ ರಸ್ತೆ ಮಾರ್ಗವಾಗಿ ಗುರು ಅವರ ಮೃತ ದೇಹವನ್ನು ಹುಟ್ಟೂರು ಮದ್ದೂರು ತಾಲೂಕಿನ ಗುಡುಗೆರಿಯನ್ನು ತಲುಪಲಿದೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆ ಜನ ರಸ್ತೆ ಇಕ್ಕೆಲಗಳಲ್ಲಿ ನಿಂತು ಕಾಯ ತೊಡಗಿದರು. ಸೇನಾ ವಾಹನ ರಸ್ತೆಯಲ್ಲಿ ಸಾಗುತ್ತಿದ್ದಂತೆ ಗುರು ಅಮರ್ ರಹೇ ಎಂಬ ಘೋಷಣೆಗಳನ್ನು ಕೂಗಿ ಜನ ಗೌರವ ಸಲ್ಲಿಸಿದರು. ಇನ್ನು ಕೆಲವರು ಸೇನಾ ವಾಹನ ನಿಲ್ಲಿಸಿ ಹೂವಿನ ಹಾರವನ್ನು ಹಾಕಿ ಅಂತಿಮ ನಮನ ಸಲ್ಲಿಸಿದರು.

    ಗುರು ಮೃತದೇಹವಿದ್ದ ಸೇನಾ ವಿಮಾನ ದೆಹಲಿಯಿಂದ ಹೊರಟು ಎಚ್‍ಎಎಲ್ ವಿಮಾನ ನಿಲ್ದಾಣವನ್ನು 11.45ಕ್ಕೆ ತಲುಪಿತು. ಈ ವೇಳೆ ಸಿಎಂ ಕುಮಾಸ್ವಾಮಿ ಅವರು, ಗುರು ಅವರಿಗೆ ಹೂಗುಚ್ಚವನ್ನಿಟ್ಟು ಅಂತಿಮ ನಮನ ಸಲ್ಲಿಸಿ, ಹುತಾತ್ಮ ಗುರು ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಧನವನ್ನು ಫೋಷಿಸಿದರು. ಬಳಿಕ ಕೇಂದ್ರ ಸಚಿವ ಸದಾನಂದಗೌಡ, ಗೃಹ ಸಚಿವ ಎಂ.ಬಿ.ಪಾಟೀಲ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಗಣ್ಯರು ಹುತಾತ್ಮ ಗುರು ಅವರಿಗೆ ಹೂಮಾಲೆ ಅರ್ಪಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು.

    ಗುರು ಪಾರ್ಥಿವ ಶರೀರವನ್ನು ಸಾಗಿಸಲು ರಾಜ್ಯ ಸರ್ಕಾರವು ಸೇನಾ ಹೆಲಿಕಾಪ್ಟರ್ ಕೇಳಿತ್ತು. ಆದರೆ ಕೊನೆ ಕ್ಷಣದಲ್ಲಿ ಸರ್ಕಾರದಿಂದ ಈ ಮನವಿ ಬಂದಿದ್ದರಿಂದ ಹೆಲಿಕಾಪ್ಟರ್ ನೀಡಲು ಸಾಧ್ಯವಿಲ್ಲ ಎಂದು ಸೇನೆ ತಿಳಿಸಿತ್ತು. ಹೀಗಾಗಿ ಗುರು ಶವ ಸೇನಾ ವಾಹನದಲ್ಲಿ ರಸ್ತೆ ಮೂಲಕ ಸಾಗಿಸಲು ನಿರ್ಧರಿಸಲಾಗಿತ್ತು.

    ಬೆಂಗಳೂರು ನಗರ ದಾಟುವವರೆಗೂ ರಸ್ತೆಯ ಎರಡೂ ಬದಿಯಲ್ಲಿ ಜನರು ನಿಂತು ಹುತಾತ್ಮ ಯೋಧ ಗುರು ಅವರ ಹೆಸರನ್ನು ಹೇಳಿ ಜೈ ಕಾರ ಹಾಕಿದರು. ಕೆಲವರು ವಾಹನವನ್ನು ಹತ್ತಿ ಗುರು ಅವರ ಅಂತಿಮ ದರ್ಶನ ಪಡೆದರು. ಭಾರತ್ ಮಾತಾಕೀ ಜೈ, ವೀರ್ ಯೋಧ ಗುರು ಅವರಿಗೆ ಜೈ ಎನ್ನುವ ಘೋಷಣೆ ರಸ್ತೆಯ ಉದ್ದಗಲಕ್ಕೂ ಕೇಳಿ ಬರುತ್ತಿತ್ತು. ಗುರು ಅವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಸೇನಾ ವಾಹನದ ಹಿಂದೆ ಕೆಲವರು ಬೈಕ್‍ನಲ್ಲಿ ಸಾಗಿದರು.

    ಕೆಂಗೇರಿ, ಕುಂಬಳಗೋಡು, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು ತಾಲೂಕಿನ ಶಿವಪುರದ ಜನರು ಸೇನಾ ವಾಹನ ಬರುವಿಕೆಗಾಗಿ ಸುಮಾರು ಹೊತ್ತು ಕಾದು ನಿಂತಿದ್ದರು. ವಾಹನ ಬರುತ್ತಿದ್ದಂತೆ ಜಯ ಘೋಷ ಕೂಗಿ, ಸ್ವಲ್ಪ ಹೊತ್ತು ನಿಲ್ಲಿಸಿ ಅಂತಿಮ ನಮನ ಸಲ್ಲಿಸಿದರು.

    https://www.youtube.com/watch?v=8VMxyfP3zjM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೋಮುಸೂಕ್ಮ್ಷ ಪ್ರದೇಶದಲ್ಲಿ ಹಿಂದೂ, ಮುಸ್ಲಿಂ ಭಾಯಿಭಾಯಿ- ಈದ್ ಮಿಲಾದ್ ಮೆರವಣಿಗೆಗೆ ಹಿಂದೂಗಳ ಸಾಥ್

    ಕೋಮುಸೂಕ್ಮ್ಷ ಪ್ರದೇಶದಲ್ಲಿ ಹಿಂದೂ, ಮುಸ್ಲಿಂ ಭಾಯಿಭಾಯಿ- ಈದ್ ಮಿಲಾದ್ ಮೆರವಣಿಗೆಗೆ ಹಿಂದೂಗಳ ಸಾಥ್

    ಉಡುಪಿ: ಕೋಮುಸೂಕ್ಷ್ಮ ಪ್ರದೇಶವಾದ ಉಡುಪಿಯಲ್ಲಿ ಹಿಂದು ಮುಸ್ಲಿಂ ಭಾಯಿ ಭಾಯಿ ಅಂತ ಎರಡು ಧರ್ಮೀಯರು ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ಮಾಸವನ್ನು ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ.

    ಉಡುಪಿಯ ಸಂತೆಕಟ್ಟೆ ಸಮೀಪದ ನೇಜಾರು ಪ್ರದೇಶ ಪೊಲೀಸರಿಗೆ ಸದಾ ತಲೆನೋವಿನ ಸ್ಥಳ. ನೇಜಾರಿನಲ್ಲಿ ಆಗಾಗ ಹಿಂದೂ ಮುಸ್ಲಿಂ ನಡುವೆ ಸಂಘರ್ಷಗಳು ನಡೆಯುತ್ತಿತ್ತು. ಆದರೆ ಈ ಬಾರಿ ನೇಜಾರ್ ಜುಮ್ಮಾ ಮಸೀದಿಯ ಆಶ್ರಯದಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಹಿಂದೂಗಳು ಸಾಥ್ ಕೊಟ್ಟಿದ್ದಾರೆ.

    ಪ್ರವಾದಿ ಮಹಮ್ಮದರ ಸಂದೇಶ ಜಾಥಾ ನಡೆದಾಗ ಭಜನಾ ಮಂಡಳಿ ಹಾಗೂ ಯುವಕ ಸಂಘಗಳು ಶರಬತ್ತು, ಐಸ್ ಕ್ರೀಂ, ಪಾನಕ, ಸಿಹಿತಿಂಡಿ ಮಜ್ಜಿಗೆ ನೀಡಿದ್ದಾರೆ. ನೇಜಾರ್ ನಿಂದ ಆರಂಭವಾದ ಮೆರವಣಿಗೆ ಸಂತೆಕಟ್ಟೆ- ಕಲ್ಯಾಣಪುರದವರೆಗೆ ಸಾಗಿ ವಾಪಾಸ್ಸಾಗಿದೆ. ಮೆರವಣಿಗೆ ಸಾಗಿದ 5 ಕಿಲೋಮೀಟರ್ ಉದ್ದಕ್ಕೂ ಶ್ರೀ ಗುರೂ ಯುವಕ ಮಂಡಳಿ, ಶಾರದಾಂಬಾ ಭಜನಾ ಮಂಡಳಿ, ಸಂತಕಟ್ಟೆ ಟೆಂಪೋ ಚಾಲಕ ಮಾಲಕರು ಪಾನೀಯ, ತಿಂಡಿ-ತಿನಸುಗಳನ್ನು ಹಂಚಿದ್ದಾರೆ.

    ಮೆರವಣಿಗೆಯಲ್ಲಿ 1000 ಮಿಕ್ಕಿ, ದಫ್, ಸ್ಕೌಟ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ಈ ಬಾರಿ ಮೆರವಣಿಗೆ ವೇಳೆ ಪೊಲೀಸ್ ಇಲಾಖೆ ನಿರಾಳವಾಗುತ್ತು ಹಾಗೆಯೆ ಯಾವುದೇ ಗೊಂದಲಗಳಿಲ್ಲದೆ ಕಾರ್ಯಕ್ರಮ ನಡೆಯಿತು.

    ಇಸ್ಲಾಮಿಕ್ ಷರಿಯತ್ ಕಾಲೇಜು ಉಪಪ್ರಾಂಶುಪಾಲ ನೌಫಲ್ ಮದನಿ ಮಾತನಾಡಿ, ಈ ಬಾರಿ ತುಂಬಾ ಸಂತೋಷ ಆಗಿದೆ. ಹಿಂದೂಗಳಿಗೂ ಆಮಂತ್ರಣ ಕೊಟ್ಟಿದ್ದೇವೆ. ಅವರೂ ಊಟಕ್ಕೆ ಬಂದಿದ್ದಾರೆ. ಮೆರವಣಿಗೆ ವೇಳೆ ಜ್ಯೂಸ್, ಐಸ್ ಕ್ರೀಂ, ನೀರು ಕೊಟ್ಟು ಉತ್ತಮ ಬಾಂಧವ್ಯ ಸೃಷ್ಟಿಯಾಗುವಂತೆ ಮಾಡಿದ್ದಾರೆ. ಧಾರ್ಮಿಕ ಗ್ರಂಥದಲ್ಲಿ ಉಲ್ಲೇಖಿಸಿದಂತೆ ದೇಶವನ್ನು ಮೊದಲು ಪ್ರೀತಿಸಬೇಕು. ನೆರೆಮನೆಯವರು ಹಸಿದಿರುವಾಗ ತಾನೊಬ್ಬನೆ ಹಬ್ಬ ಮಾಡುವವ ಮುಸಲ್ಮಾನ ಅಲ್ಲ ಎಂಬ ಮಾತು ಈ ಬಾರಿ ನಿಜವಾಗಿದೆ. ಶಾಂತಿ, ಸಹಬಾಳ್ವೆ ಕರುಣೆಯಿಂದ ಮೆರವಣಿಗೆ ನಡೆದಿದೆ ಮುಂದೆಯೂ ಹೀಗೆಯೇ ಸಹಬಾಳ್ವೆಯಿಂದ ನೇಜಾರು ಪ್ರಸಿದ್ಧಿಯಾಗಲಿ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ- 13ಕ್ಕೂ ಹೆಚ್ಚು ಮಂದಿಗೆ ಗಾಯ

    ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ- 13ಕ್ಕೂ ಹೆಚ್ಚು ಮಂದಿಗೆ ಗಾಯ

    ಹಾವೇರಿ: ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೀರೂರು ಗ್ರಾಮದಲ್ಲಿ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.

    ಘಟನೆಯಲ್ಲಿ ಇಬ್ಬರು ಪೊಲೀಸರು ಸೇರಿ ಹನ್ನೊಂದು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಘಟನೆ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆಯೂ ನಡೆದಿದೆ.

    ಘಟನಾ ಸ್ಥಳಕ್ಕೆ ಎಸ್ಪಿ ಕೆ.ಪರಶುರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂ ಬೆಳಗ್ಗೆ ಕರವೇ ವತಿಯಿಂದ ಪಂಜಿನ ಮೆರವಣಿಗೆ

    ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂ ಬೆಳಗ್ಗೆ ಕರವೇ ವತಿಯಿಂದ ಪಂಜಿನ ಮೆರವಣಿಗೆ

    ಚಿಕ್ಕಬಳ್ಳಾಪುರ: ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ನೀಡಿರುವ ಭಾರತ್ ಬಂದ್‍ಗೆ ಚಿಕ್ಕಬಳ್ಳಾಪುರದಲ್ಲಿ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ.

    ಬೆಳ್ಳಂ ಬೆಳಗ್ಗೆ ಬೀದಿಗೆ ಇಳಿದಿರೋ ಕರವೇ ಯುವಸೇನೆಯಯ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸುವ ಮೂಲಕ ಭಾರತ್ ಬಂದ್‍ಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ನಗರದ ಬಲಮುರಿ ವೃತ್ತದಿಂದ ಬಿಬಿ ರಸ್ತೆ ಮೂಲಕ ಅಂಬೇಡ್ಕರ್ ವೃತ್ತದವರೆಗೂ ಪ್ರತಿಭಟನಾ ಪಂಜಿನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಶಿಡ್ಲಘಟ್ಟ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

    ಪೆಟ್ರೋಲ್ ಹಾಗೂ ಡೀಸಲ್ ಸೇರಿದಂತೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದ್ದು, ಪೆಟ್ರೋಲ್ ಡೀಸಲ್ ಬೆಲೆ ಇಳಿಸುವಂತೆ ಕಾರ್ಯಕರ್ತರು ಆಗ್ರಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 800 ಅಡಿ ಉದ್ದದ ರಾಷ್ಟ್ರಧ್ವಜ ಹಿಡಿದು ವಿದ್ಯಾರ್ಥಿಗಳ ಮೆರವಣಿಗೆ

    800 ಅಡಿ ಉದ್ದದ ರಾಷ್ಟ್ರಧ್ವಜ ಹಿಡಿದು ವಿದ್ಯಾರ್ಥಿಗಳ ಮೆರವಣಿಗೆ

    ಚಿಕ್ಕಮಗಳೂರು: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಜಿಲ್ಲೆಯ ವಿದ್ಯಾರ್ಥಿಗಳು ಸುಮಾರು 800 ಅಡಿ ಉದ್ದದ ಧ್ವಜವನ್ನು ಹಿಡಿದು ನಗರದಾದ್ಯಂತ ಮೆರವಣಿಗೆ ನಡೆಸಿದ್ದಾರೆ.

    ಇಂದು ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು 800 ಅಡಿ ಉದ್ದದ ಧ್ವಜವನ್ನ ಮೆರವಣಿಗೆ ಮಾಡಿದ್ದಾರೆ. ನಗರದ ಹನುಮಂತಪ್ಪ ವೃತ್ತದಿಂದ ಮೆರವಣೆಗೆ ಹೊರಟ ವಿದ್ಯಾರ್ಥಿಗಳು ಎಂ.ಜಿ.ರಸ್ತೆ ಹಾಗೂ ಐ.ಜಿ. ರಸ್ತೆ ಮೂಲಕ ಸಾಗಿ ಕುವೆಂಪು ಕಲಾಮಂದಿರದವರೆಗೂ ಮೆರವಣಿಗೆ ನಡೆಸಿದ್ದಾರೆ.

    ಮೆರವಣಿಗೆಯುದ್ದಕ್ಕೂ ಸೈನಿಕರ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳು, ಮೆರವಣಿಗೆಯ ಬಳಿಕ ಕುವೆಂಪು ಕಲಾಮಂದಿರದಲ್ಲಿ ಮಾಜಿ ಸೈನಿಕರಿಗೆ ಸನ್ಮಾನ ಮಾಡಿದ್ದಾರೆ. ಸಮಾರಂಭದಲ್ಲಿ ಸೈನಿಕರು ತಮ್ಮ ವೃತ್ತಿ ಜೀವನದ ರೋಚಕ ಮಾಹಿತಿಗಳನ್ನು ವಿದ್ಯಾರ್ಥಿಗಳ ಬಳಿ ಹಂಚಿಕೊಂಡಿದ್ದಾರೆ.

  • ಶಾಸಕರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿಸಿದ ಬೆಂಬಲಿಗರು!

    ಶಾಸಕರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿಸಿದ ಬೆಂಬಲಿಗರು!

    ಚಿಕ್ಕಬಳ್ಳಾಪುರ: ಎರಡನೇ ಬಾರಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಡಾ.ಕೆ.ಸುಧಾಕರ್ ಅವರನ್ನ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿಸುವುದರ ಮೂಲಕ ಶಾಸಕ ಸುಧಾಕರ್ ಬೆಂಬಲಿಗರು ವಿಶೇಷ ಸನ್ಮಾನ ನೇರವೇರಿಸಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದ ವೃತ್ತದಿಂದ ಶ್ರೀ ಭೋಗನಂಧಿಶ್ವರ ದೇವಾಲಯದ ಮುಂಭಾಗದವರೆಗೂ ಶಾಸಕ ಸುಧಾಕರ್ ಹಾಗೂ ಅವರ ತಂದೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೇಶವರೆಡ್ಡಿ ಅವರನ್ನು ಕುಳ್ಳಿರಿಸಿ ಸುಧಾಕರ್ ಬೆಂಬಲಿಗರು ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಸಿದರು.

    ಅಂದ ಹಾಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಬಾರಿ ಮರು ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿರುವ ಶಾಸಕ ಸುಧಾಕರ್ ಗೆ ಸುಧಾಕರ್ ಬೆಂಬಲಿಗರು ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ರು. ಹೀಗಾಗಿ ಶ್ರೀ ಭೋಗನಂಧಿಶ್ವರ ದೇಗುಲಕ್ಕೆ ಭೇಟಿ ನೀಡಿದ ಶಾಸಕ ಸುಧಾಕರ್ ಶ್ರೀ ಭೋಗನಂದೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕ ಸುಧಾಕರ್ ಗೆ ವಿಶೇಷ ಸನ್ಮಾನ ನೇರವೇರಿಸಿದರು. ಇದನ್ನೂ ಓದಿ: ಜೆಡಿಎಸ್ ಮಂತ್ರಿಗಳು ಈಗ ಹೊಸ ಬಟ್ಟೆ ಹಾಕ್ಕೊಂಡು ಓಡಾಡ್ತಿದ್ದಾರೆ- ಸಿದ್ದರಾಮಯ್ಯ ಪರ ಶಾಸಕ ಸುಧಾಕರ್ ಬ್ಯಾಟಿಂಗ್

    ಎರಡನೇ ಬಾರಿ ಶಾಸಕರಾಗಲಿ ಹಾಗೂ ಅತೀ ಹೆಚ್ಚಿನ ಬಹುಮತದಿಂದ ಆಯ್ಕೆಯಾಗಲಿ ಅಂತ ಭೋಗನಂದೀಶ್ವರನಿಗೆ ಹರಕೆ ಹೊತ್ತಿಕೊಂಡಿದ್ದ ಬೆಂಬಲಿಗರು, ಹರಕೆಯಂತೆ ಇಂದು 1001 ತೆಂಗಿನಕಾಯಿ ಹೊಡೆಯುವುದರ ಮೂಲಕ ತಮ್ಮ ಹರಕೆ ತೀರಿಸಿಕೊಂಡರು. ಮತ್ತೊಂದೆಡೆ ಅನ್ನಸಂತರ್ಪಣೆ ಕೂಡ ಆಯೋಜನೆ ಮಾಡಿ ಶಾಸಕ ಸುಧಾಕರ್ ಗೆ ಸಚಿವ ಸ್ಥಾನ ಸಿಗಲಿ ಅಂತ ದೇವರಿಗೆ ಮೊರೆಯಿಟ್ಟಿರು.