Tag: procession

  • ಗಣಪತಿ ವಿಸರ್ಜನೆ ಬಳಿಕ 6 ಟ್ರಕ್ ತುಂಬುವಷ್ಟು ಚಪ್ಪಲಿಗಳನ್ನು ಸಂಗ್ರಹಿಸಿದ ಘನತ್ಯಾಜ್ಯ ಇಲಾಖೆ

    ಗಣಪತಿ ವಿಸರ್ಜನೆ ಬಳಿಕ 6 ಟ್ರಕ್ ತುಂಬುವಷ್ಟು ಚಪ್ಪಲಿಗಳನ್ನು ಸಂಗ್ರಹಿಸಿದ ಘನತ್ಯಾಜ್ಯ ಇಲಾಖೆ

    ಮುಂಬೈ: ಗಣಪತಿ ವಿಸರ್ಜನೆ ಬಳಿಕ ಪುಣೆಯ ಮುನ್ಸಿಪಲ್ ಕಾರ್ಪೊರೆಷನ್(ಪಿಎಂಸಿ) ಘನತ್ಯಾಜ ಇಲಾಖೆ(ಎಸ್‌ಡಬ್ಲ್ಯುಎಂ) ನಗರದಲ್ಲಿ ಸುಮಾರು 21 ಟನ್‌ಗಳಷ್ಟು ಕಸವನ್ನು ಸಂಗ್ರಹಿಸಿದೆ. ಇದರಲ್ಲಿ ಸುಮಾರು 6 ಮಿನಿ ಟ್ರಕ್‌ಗಳಲ್ಲಿ ತುಂಬಲಾಗುವಷ್ಟು ಚಪ್ಪಲಿಗಳೇ ದೊರೆತಿವೆ ಎಂದು ವರದಿಯಾಗಿದೆ.

    ಪುಣೆಯಲ್ಲಿ ನಡೆದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಹಬ್ಬ ಕಳೆದ ಬಳಿಕ ಸುಮಾರು 1,037 ಪಿಎಂಸಿ ಸಿಬ್ಬಂದಿ ಬೀದಿಗಿಳಿದು ಕಸವನ್ನು ಸಂಗ್ರಹಿಸಿದ್ದಾರೆ. ಸ್ವಚ್ಛ ಸಂಸ್ಥೆ, ಜನವಾಣಿ ಸಂಸ್ಥೆ, ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ, ರೋಟರಿ ಕ್ಲಬ್, ಮರಾಠವಾಡ ಕಾಲೇಜು ಹಾಗೂ ಇತರ ಸಂಸ್ಥೆಗಳ ಸುಮಾರು 650 ಸ್ವಯಂ ಸೇವಕರು ಈ ಸ್ವಚ್ಛ ನಗರ ಅಭಿಯಾನಕ್ಕೆ ಕೈ ಜೋಡಿಸಿದ್ದರು ಎಂದು ಎಸ್‌ಡಬ್ಲ್ಯುಎಂ ಉಪ ಆಯುಕ್ತ ಆಶಾ ರಾವತ್ ತಿಳಿಸಿದರು. ಇದನ್ನೂ ಓದಿ: ಕೊನೆಗೂ ತೇಜಸ್ವಿ ನಿವಾಸಕ್ಕೆ ತಲುಪಿತು ಕಾಂಗ್ರೆಸ್ ದೋಸೆ – ಡೆಲಿವರಿ ಬಾಯ್ ಪೊಲೀಸರ ವಶಕ್ಕೆ

    ಗಣಪತಿ ವಿಸರ್ಜನೆ ಮೆರವಣಿಗೆ ಲಕ್ಷ್ಮಿ ರಸ್ತೆ, ತಿಲಕ್ ರಸ್ತೆ, ಕುಮ್ಟೇಕರ್ ರಸ್ತೆ, ನಾರಾಯಣ ಪೇಠ ರಸ್ತೆ, ಬಾಜಿರಾವ್ ರಸ್ತೆ, ಶಿವಾಜಿ ರಸ್ತೆ, ಅಲ್ಕಾ ಚೌಕ್, ಖಂಡುಜಿ ಬಾಬಾ ಚೌಕ್, ಕರವೇ ರಸ್ತೆ, ಜಂಗ್ಲಿ ಮಹಾರಾಜ್ ರಸ್ತೆ, ಸೇನಾಪತಿ ಬಾಪಟ್ ರಸ್ತೆ, ಗಣೇಶಖಿಂಡ್ ರಸ್ತೆ, ಫರ್ಗುಸನ್ ಕಾಲೇಜು ರಸ್ತೆ, ಪ್ರಭಾತ್ ಮಾರ್ಗವಾಗಿ ಸಾಗಿದೆ ಎಂದು ವರದಿಗಳು ತಿಳಿಸಿವೆ.

    ಮೆರವಣಿಗೆ ಸಾಗಿದ ಪ್ರದೇಶದಲ್ಲಿ ಕಸ ಸಂಗ್ರಹಿಸಲು ಪಿಎಂಸಿ 9 ಕಾಂಪ್ಯಾಕ್ಟರ್‌ಗಳು, 13 ಸಣ್ಣ ವಾಹನಗಳು, 6 ಟೆಂಪೋಗಳು, 8 ಟಿಪ್ಪರ್‌ಗಳು ಮತ್ತು 8 ಇತರ ವಾಹನಗಳನ್ನು ಬಳಸಿದೆ ಎನ್ನಲಾಗಿದೆ. ಇದನ್ನೂ ಓದಿ: ಕುಂಬಳಕಾಯಿ 47,000 ರೂ.ಗೆ ಹರಾಜು

    Live Tv
    [brid partner=56869869 player=32851 video=960834 autoplay=true]

  • ಗಣೇಶೋತ್ಸವಕ್ಕೂ ಮೊದಲೇ ಶುರುವಾಯ್ತು ಕಲ್ಲುತೂರಾಟ – ವಡೋದರಾದಲ್ಲಿ 13 ಮಂದಿ ಬಂಧನ

    ಗಣೇಶೋತ್ಸವಕ್ಕೂ ಮೊದಲೇ ಶುರುವಾಯ್ತು ಕಲ್ಲುತೂರಾಟ – ವಡೋದರಾದಲ್ಲಿ 13 ಮಂದಿ ಬಂಧನ

    ಗಾಂಧಿನಗರ: ಗುಜರಾತ್‌ನ ವಡೋದರಾದಲ್ಲಿ ಸೋಮವಾರ ರಾತ್ರಿ ಗಣೇಶನ ಮೂರ್ತಿಯನ್ನು ಹೊತ್ತ ಮೆರವಣಿಗೆ ಸೂಕ್ಷ್ಮ ಪ್ರದೇಶದಲ್ಲಿ ಸಾಗುತ್ತಿದ್ದಾಗ ಎರಡು ಸಮುದಾಯದವರು ಪರಸ್ಪರ ಕಲ್ಲುತೂರಾಟ ನಡೆಸಿರುವುದಾಗಿ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ 13 ಜನರನ್ನು ಬಂಧಿಸಲಾಗಿದೆ.

    ಎರಡು ಸಮುದಾಯದವರ ನಡುವೆ ಘರ್ಷಣೆ ನಡೆಯುತ್ತಿದ್ದಂತೆ ಎರಡೂ ಕಡೆಯವರ ವಿರುದ್ಧ ವಡೋದರಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 13 ಜನರನ್ನು ಬಂಧಿಸಿದ್ದಾರೆ. ಸದ್ಯ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಮಹಿಳೆಯೊಂದಿಗೆ ಚಕ್ಕಂದ – ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ASI

    ವರದಿಗಳ ಪ್ರಕಾರ ಕೋಮು ಸೂಕ್ಷ್ಮ ಪ್ರದೇಶ ಮಾಂಡವಿಯ ಪಾಣಿಗೇಟ್ ದರ್ವಾಜಾ ಮೂಲಕ ರಾತ್ರಿ 11:15ರ ವೇಳೆಗೆ ಗಣೇಶನ ಮೂರ್ತಿ ಹೊತ್ತು ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ 2 ಸಮುದಾಯದ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಹತ್ತಿರದ ಮಸೀದಿಯೊಂದರ ಮುಖ್ಯ ದ್ವಾರದ ಗಾಜಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವರದಕ್ಷಿಣೆಗಾಗಿ ಸೊಸೆಯನ್ನು ಹೊರಹಾಕಿದವರ ಮನೆ ಮುಂದೆ ಘರ್ಜಿಸಿತು ಬುಲ್ಡೋಜರ್‌ – ಮುಂದೇನಾಯ್ತು?

    ಬಳಿಕ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗಣೇಶನ ಮೂರ್ತಿಯನ್ನು ಶಾಂತಯುತವಾಗಿ ಗಮ್ಯ ಸ್ಥಳಕ್ಕೆ ಕೊಂಡೊಯ್ಯಲಾಯಿತು ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಾರಹುಣ್ಣಿಮೆ ಕರಿ ಹರಿಯುವ ವೇಳೆ ಭೀಮಾ ನದಿಗೆ ಹಾರಿ ಪ್ರಾಣಬಿಟ್ಟ ಎತ್ತು

    ಕಾರಹುಣ್ಣಿಮೆ ಕರಿ ಹರಿಯುವ ವೇಳೆ ಭೀಮಾ ನದಿಗೆ ಹಾರಿ ಪ್ರಾಣಬಿಟ್ಟ ಎತ್ತು

    ವಿಜಯಪುರ: ಕಾರಹುಣ್ಣಿಮೆ ಪ್ರಯುಕ್ತ ಕರಿ ಹರಿಯುವ ವೇಳೆ ಭೀಮಾ ನದಿಗೆ ಹಾರಿ ಎತ್ತು ಪ್ರಾಣಬಿಟ್ಟ ಘಟನೆ ವಿಜಯಪುರದ ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದಲ್ಲಿ ನಡೆದಿದೆ.

    ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ನಡೆದಿದ್ದ ಕರಿ ಹರಿಯುವ ವೇಳೆ ಎತ್ತುಗಳ ಮೆರವಣಿಗೆ ವೇಳೆ ಈ ಅವಘಡ ನಡೆದಿದೆ. ಗ್ರಾಮದ ರೈತ ಸತೀಶ ಪಾಟೀಲ್ ಎಂಬುವವರಿಗೆ ಸೇರಿದ ಎತ್ತು ಇದಾಗಿದೆ. ಇದನ್ನೂ ಓದಿ: ಪ್ರಾರ್ಥನಾ ಮಂದಿರಗಳಲ್ಲಿ ಮೈಕ್‌ ಸಕ್ರಮಕ್ಕೆ ನೀಡಿದ್ದ ಗಡುವು ಅಂತ್ಯ – ಇಂದಿನಿಂದ ಪೊಲೀಸ್‌ ಕಾರ್ಯಾಚರಣೆ

    ಕರಿ ಹರಿಯುವ ವೇಳೆ ಹಲಗೆ ಬಾರಿಸುವ ಶಬ್ದಕ್ಕೆ ಬೆದರಿದ ಎತ್ತು ಗ್ರಾಮದ ಹೊರಗೆ ಓಡಿದೆ. ಹೊರವಲಯದಲ್ಲಿರುವ ಭೀಮಾ ನದಿಗೆ ಬಿದ್ದ ಎತ್ತು ಮೀನುಗಾರರ ಬಲೆಗೆ ಸಿಲುಕಿ ಮೃತಪಟ್ಟಿದೆ. ಇದನ್ನೂ ಓದಿ: 2 ಶಿಕ್ಷಕ, 2 ಪದವೀಧರ ಕ್ಷೇತ್ರಗಳ ಫಲಿತಾಂಶ ಇಂದು- 3 ಪಕ್ಷಗಳ ಭವಿಷ್ಯ ನಿರ್ಧಾರ

  • ಬಸವ ಜಯಂತಿ ಮೆರವಣಿಗೆಯಲ್ಲಿ ಕುಡುಕರ ಹಾಡು – ಸಾರ್ವಜನಿಕರಿಂದ ಟೀಕೆ

    ಬಸವ ಜಯಂತಿ ಮೆರವಣಿಗೆಯಲ್ಲಿ ಕುಡುಕರ ಹಾಡು – ಸಾರ್ವಜನಿಕರಿಂದ ಟೀಕೆ

    ದಾವಣಗೆರೆ: ಬಸವ ಜಯಂತಿಯಂದು ಕುಡುಕರ ಸಾಂಗ್ ಹಾಕಿ ಮೆರವಣಿಗೆಯಲ್ಲಿ ಬಸವಣ್ಣನವರಿಗೆ ಅವಮಾನ ಮಾಡಲಾಗಿದೆ.

    basavanna

    ಬಸವ ಜಯಂತಿ ಎಂದರೆ ಶ್ರದ್ಧಾ ಭಕ್ತಿಗಳಿಂದ ಬಸವಣ್ಣನವರ ವಚನಗಳನ್ನು ಅವರ ಅದರ್ಶಗಳನ್ನು ಜನರಿಗೆ ತಲುಪಿಸುವಂತಹ ಕೆಲಸ ಮಾಡಬೇಕು. ಆದರೆ ಜಿಲ್ಲೆಯ ಜಗಳೂರು ತಾಲೂಕಿನ ರಸ್ತೆಯ ಮಾಕುಂಟೆ ಗ್ರಾಮದಲ್ಲಿ ಬಸವಣ್ಣನವರಿಗೆ ಅವಮಾನ ಮಾಡುವ ರೀತಿ ಮೆರವಣೆಗೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

    ಪ್ರತಿ ವರ್ಷ ಬಸವ ಜಯಂತಿಯಂದು ಗ್ರಾಮದಲ್ಲಿ ಶ್ರೀ ಬಸವಣ್ಣನವರ ಭಾವಚಿತ್ರ ಹಿಡಿದು ಮೆರವಣೆಗೆ ಮಾಡುತ್ತಿರುವುದು ವಾಡಿಕೆ. ಆದರೆ ಮಾಕುಂಟೆ ಗ್ರಾಮದ ಮೆರವಣಿಗೆಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎನ್ನುವ ಸಾಂಗ್‍ಗೆ ಬಾಟಲಿ ಹಿಡಿದು ಡ್ಯಾನ್ಸ್ ಮಾಡಿದ್ದಾರೆ.

    ಗ್ರಾಮದ ಮುಖಂಡರು ಸ್ಥಳದಲ್ಲಿಯೇ ಇದ್ದರೂ ಅದನ್ನು ವಿರೋಧಿಸುವ ಬದಲು ಅವರು ಕೂಡ ಸಂಭ್ರಮಿಸಿದ್ದಾರೆ. ವೀಡಿಯೋಗೆ ಸಾರ್ವಜನಕರಿಂದ ಟೀಕೆ ವ್ಯಕ್ತವಾಗಿದೆ.

  • ಎತ್ತುಗಳ ಮೆರವಣಿಗೆ ವೇಳೆ ಚಪ್ಪಲಿ ತೂರಿದ ಯುವಕನನ್ನು ಥಳಿಸಿದ ಗ್ರಾಮಸ್ಥರು

    ಎತ್ತುಗಳ ಮೆರವಣಿಗೆ ವೇಳೆ ಚಪ್ಪಲಿ ತೂರಿದ ಯುವಕನನ್ನು ಥಳಿಸಿದ ಗ್ರಾಮಸ್ಥರು

    ಹಾವೇರಿ: ಬಸವ ಜಯಂತಿ ಪ್ರಯುಕ್ತ ನಡೆದ ಎತ್ತುಗಳ ಮೆರವಣಿಗೆ ವೇಳೆ ಸವಣೂರು ತಾಲೂಕಿನ ಗ್ರಾಮದಲ್ಲಿ ಯುವಕನೊಬ್ಬ ಚಪ್ಪಲಿ ತೂರಿ ವಿಕೃತಿ ಮೆರೆದಿದ್ದಾನೆ.

    ಮಂಗಳವಾರ ರಾತ್ರಿ ಕಾರಡಗಿ ಗ್ರಾಮದಲ್ಲಿ ಮೆರವಣಿಗೆ ಹೋಗುತ್ತಿದ್ದ ವೇಳೆ ಎತ್ತುಗಳ ಮೇಲೆ ಖಾಜಾಮುದ್ದೀನ್ ಕೋಲ್ಕಾರ(29) ಎಂಬಾತ ಚಪ್ಪಲಿ ತೂರಿದ್ದಾನೆ.

    ಚಪ್ಪಲಿ ತೂರಿದ್ದಕ್ಕೆ ಆಕ್ರೋಶಗೊಂಡ ಜನರು ಯುವಕನನ್ನು ಹಿಡಿದು ಕಟ್ಟಿ ಹಾಕಿ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಖಾಜಾಮುದ್ಧೀನ್‌ನನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಮೇ 6ರಂದು ಮಾಜಿ ಸಚಿವ ಬಿ.ಜೆ ಪುಟ್ಟಸ್ವಾಮಿ ಸನ್ಯಾಸ ದೀಕ್ಷೆ ಸ್ವೀಕಾರ

    ಥಳಿತಕ್ಕೆ ಒಳಗಾದ ಆರೋಪಿ ತಲೆಗೆ ಗಾಯವಾದ ಹಿನ್ನೆಲೆಯಲ್ಲಿ ಈಗ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾಸ್ಕ್, ಸೋಶಿಯಲ್ ಡಿಸ್ಟನ್ಸ್ ಇಲ್ಲ- ವರನಿಗೆ ಬಿತ್ತು 50 ಸಾವಿರ ದಂಡ

    ಮಾಸ್ಕ್, ಸೋಶಿಯಲ್ ಡಿಸ್ಟನ್ಸ್ ಇಲ್ಲ- ವರನಿಗೆ ಬಿತ್ತು 50 ಸಾವಿರ ದಂಡ

    -ವರನ ಮೆರವಣಿಗೆಯಲ್ಲಿ ಕುಟುಂಬಸ್ಥರ ಬಿಂದಾಸ್ ಡ್ಯಾನ್ಸ್

    ಭುವನೇಶ್ವರ: ಮದುವೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡದಕ್ಕೆ ಅಧಿಕಾರಿಗಳು ವರನಿಗೆ 50 ಸಾವಿರ ರೂ. ದಂಡ ವಿಧಿಸಿದ್ದಾರೆ. ಓಡಿಶಾದ ಗಂಜಾಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

    ಓಡಿಶಾದ ಗಂಜಾಮಾ ಜಿಲ್ಲೆಯ ಕೊರೊನಾ ಹಾಟ್‍ಸ್ಪಾಟ್ ಆಗಿದೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ ಎಂದು ಸೂಚಿಸಿದೆ. ಆದ್ರೆ ಗಂಜಾಮಾದ ಮದುವೆಯಲ್ಲಿ ತೆರೆದ ಕಾರಿನಲ್ಲಿ ವರನ ಮೆರವಣಿಗೆ ಮಾಡಲಾಗಿದೆ. ಇನ್ನು ಕುಟುಂಬಸ್ಥರು ಮಾಸ್ಕ್ ಹಾಕದೇ ಹೆಜ್ಜೆ ಹಾಕಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, ನಿಮ್ಮ ಖುಷಿಗಾಗಿ ಬೇರೆಯವರ ಜೀವಕ್ಕೆ ಕುತ್ತು ತರುವಂತಹ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ. ವರನ ಮೆರವಣಿಗೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  • ತವರು ಜಿಲ್ಲೆಯಲ್ಲಿ ಬಿಗ್‍ಬಾಸ್ ವಿನ್ನರ್ ಶೈನ್‍ಗೆ ಅದ್ಧೂರಿ ಸ್ವಾಗತ

    ತವರು ಜಿಲ್ಲೆಯಲ್ಲಿ ಬಿಗ್‍ಬಾಸ್ ವಿನ್ನರ್ ಶೈನ್‍ಗೆ ಅದ್ಧೂರಿ ಸ್ವಾಗತ

    ಉಡುಪಿ: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ವಿನ್ನರ್ ಶೈನ್‍ಶೆಟ್ಟಿ ಗೆದ್ದ ನಂತರ ತವರು ಜಿಲ್ಲೆ ಉಡುಪಿಗೆ ಪ್ರಪ್ರಥಮ ಬಾರಿಗೆ ಆಗಮಿಸಿದ್ದು, ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ.

    ಶೈನ್ ಶೆಟ್ಟಿ ಬಿಗ್‍ಬಾಸ್ ಗೆದ್ದ ಬಳಿ ಮೊದಲ ಬಾರಿಗೆ ಉಡುಪಿಗೆ ಮಂಗಳವಾರ ಆಗಮಿಸಿದ್ದರು. ಹೀಗಾಗಿ ಶೈನ್ ಶೆಟ್ಟಿಯನ್ನು ನಗರದ ಜೋಡುಕಟ್ಟೆಯಿಂದ ಅದ್ಧೂರಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗಿತ್ತು. ಶೈನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ನೂರಾರು ಅಭಿಮಾನಿಗಳು ಮುಗಿಬಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಅವರ ಮೆರವಣಿಗೆ ಮಾಡಲಾಗಿದೆ. ಇದನ್ನೂ ಓದಿ: ಶೈನ್ ಜೇಬಿಗೆ 50 ಅಲ್ಲ 61 ಲಕ್ಷ ಜೊತೆಗೆ ನ್ಯೂ ಕಾರ್

    ಕಾಲೇಜು ವಿದ್ಯಾರ್ಥಿಗಳು, ಕಲಾತಂಡಗಳು ಚಂಡೆ, ಕೀಲುಕುದುರೆ ಮತ್ತಿತರ ಸಾಂಸ್ಕೃತಿಕ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮಂಗಳವಾರ ಸಂಜೆ ಕಾಲೇಜು ಬಿಡುವ ಸಮಯವಾದ್ದರಿಂದ ರಸ್ತೆಯ ಇಕ್ಕೆಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ಜಮಾಯಿಸಿದ್ದರು. ತಮ್ಮ ಮೊಬೈಲ್‍ಗಳಲ್ಲಿ ಶೈನ್ ಶೆಟ್ಟಿಯ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.

    ನಟ ಶೈನ್ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯವರಾಗಿದ್ದು, ಶೈನ್ ತಂದೆ ಕುಂದಾಪುರದ ಆರ್ಡಿಯವರು. ಉಡುಪಿಯಲ್ಲಿ ಶಿಕ್ಷಣವನ್ನು ಮುಗಿಸಿ ಬೆಳ್ಳಿತೆರೆಗೆ ಮನಸೋತು ಶೈನ್ ಬೆಂಗಳೂರು ಸೇರಿದ್ದರು. ಆದರೆ ಚಿತ್ರರಂಗದಲ್ಲಿ ಹಿನ್ನಡೆಯಾದರೂ ಸಣ್ಣ ಹೋಟೆಲ್ ಉದ್ಯಮ ಆರಂಭಿಸಿದರು. ಇದೀಗ ‘ಬಿಸ್‍ಬಾಸ್’ ವಿನ್ನರ್ ಆಗಿ ಶೈನ್ ಮತ್ತೆ ಮಿಂಚುತ್ತಿದ್ದಾರೆ.

  • ಸಿಎಎ-ಎನ್‌ಆರ್‌ಸಿ ಬೆಂಬಲಿಸಿ ಬೃಹತ್ ಮೆರವಣಿಗೆ

    ಸಿಎಎ-ಎನ್‌ಆರ್‌ಸಿ ಬೆಂಬಲಿಸಿ ಬೃಹತ್ ಮೆರವಣಿಗೆ

    ಚಿಕ್ಕಬಳ್ಳಾಪುರ: ಸಿಎಎ ಹಾಗೂ ಎನ್‌ಆರ್‌ಸಿ ಬೆಂಬಲಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಇಂದು ಬೃಹತ್ ಮೆರವಣಿಗೆ ನಡೆಸಲಾಯಿತು.

    ರಾಷ್ಟ್ರೀಯ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸಂಘ ಸಂಸ್ಥೆಗಳು, ಮಹಿಳೆಯರು, ಅಯ್ಯಪ್ಪ ಮಾಲಾಧಾರಿಗಳು ಸೇರಿದಂತೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಬೃಹತ್ ಜಾಥಾ ಪ್ರಮುಖ ರಸ್ತೆಗಳ ಮೂಲಕ ಸಾಗಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸುವ ಮೂಲಕ ಅಂತ್ಯಗೊಳಿಸಲಾಯಿತು.

    ಸಿಎಎ ಹಾಗೂ ಎನ್‌ಆರ್‌ಸಿ ಪರ ಬೃಹತ್ ಮೆರವಣಿಗೆ ಹಿನ್ನೆಲೆಯಲ್ಲಿ ಕೆಲ ಅಂಗಡಿ ಮುಂಗಟ್ಟುಗಳನ್ನ ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಮೆರವಣಿಗೆಗೆ ಬೆಂಬಲ ಸೂಚಿಸಲಾಗಿತ್ತು. ಬೃಹತ್ ಮೆರವಣಿಗೆ ಚಿಂತಾಮಣಿ ನಗರ ಸೂಕ್ಷ ಪ್ರದೇಶವಾದ ಹಿನ್ನೆಲೆಯಲ್ಲಿ ಸ್ವತಃ ಎಸ್‍ಪಿ ಅಭಿನವ್ ಖರೆ ನೇತೃತ್ವದಲ್ಲಿ ರ್‍ಯಾಲಿಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

  • ಲೋಕ ಕಲ್ಯಾಣರ್ಥವಾಗಿ ದೇವಿಯ ಮೆರವಣಿಗೆ – ತ್ಯಾಮಗೊಂಡ್ಲು ಗ್ರಾಮಸ್ಥರ ಸಂಭ್ರಮ

    ಲೋಕ ಕಲ್ಯಾಣರ್ಥವಾಗಿ ದೇವಿಯ ಮೆರವಣಿಗೆ – ತ್ಯಾಮಗೊಂಡ್ಲು ಗ್ರಾಮಸ್ಥರ ಸಂಭ್ರಮ

    ನೆಲಮಂಗಲ: ಬೆಂಗಳೂರು ನಗರದಲ್ಲಿ ಪ್ರಾರಂಭವಾದ ವಾಸವಿ ಪ್ರಚಾರ ರಥ ಹಾಗೂ ಅಮ್ಮನವರ ರಜತ ವಿಗ್ರಹದ ಪೂಜೆ, ಭಜನೆ, ಉತ್ಸವವನ್ನು ತ್ಯಾಮಗೊಂಡ್ಲು ಆರ್ಯವೈಶ್ಯ ಮಂಡಳಿಯವರು ವಾಸವಾಂಬ ತಾಯಿ ಹಾಗೂ ಮನೆ ಮನೆಗೆ ವಾಸವಿ ಟ್ಯಾಬ್ಲೋವನ್ನು ಆತ್ಮೀಯವಾಗಿ ಬರಮಾಡಿಕೊಂಡರು.

    ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಪ್ರಮುಖ ಬೀದಿಗಳಲ್ಲಿ ಬೆಂಗಳೂರಿನಿಂದ ಆಗಮಿಸಿದ ಕನ್ನೀಕಾ ಪರಮೇಶ್ವರಿ ತಾಯಿಯನ್ನು ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳಾದ ಕಂಸಾಳೆ, ವೀರಗಾಸೆ, ವೀಣಾ ಮಕ್ಕಳ ಮಂದಿರ ಶಾಲೆಯ ಮಕ್ಕಳಿಂದ ಚಂಡೆವಾದನ ಹಾಗೂ ವಾಸವಿ ಮಹಿಳಾ ಮಣಿಗಳಿಂದ ಕೋಲಾಟ ಕಾರ್ಯಕ್ರಮದ ಮುಖಾಂತರ ಮನೆ ಮನೆಗೆ ವಾಸವಿ ಮಾತೆಯನ್ನು ಆತ್ಮೀಯವಾಗಿ ಬರಮಾಡಿಕೊಂಡರು.

    ಈ ಸಂದರ್ಭದಲ್ಲಿ ಮನೆ ಮನೆಗೆ ಹೋಗಿ ವಾಸವಿ ಟ್ರಸ್ಟ್ ನ ಅಧ್ಯಕ್ಷ ಕುಮಾರ ಗುಪ್ತಾ ಮಾತನಾಡಿ, ರಾಜಧಾನಿ ಬೆಂಗಳೂರನ್ನು ಬಿಟ್ಟು ಮೊದಲ ಬಾರಿಗೆ ವಾಸವಿ ತಾಯಿ ಗ್ರಾಮಾಂತರ ಪ್ರದೇಶವಾದ ತ್ಯಾಮಗೊಂಡ್ಲುವಿಗೆ ಆಗಮಿಸಿದೆ. ಬೆಂಗಳೂರಿನಲ್ಲಿ 96 ಮನೆಗಳಿಗೆ ದೇವಿಯನ್ನು ಕರೆತಂದಿದ್ದೇವೆ. ನಮ್ಮ ಸಮುದಾಯದವರಲ್ಲಿ ತಾಯಿಯ ಮಹಿಮೆ ತಿಳಿಸುವ ಅರಿವಿನ ಕಾರ್ಯ ಇದ್ದಾಗಿದ್ದು, ನಮ್ಮ ಸಮುದಾಯದವರಲ್ಲಿ ವಿವಾಹದಲ್ಲಿ ಯಾವುದೇ ವರ-ವಧು ಮಧ್ಯೆ ವಿಚ್ಛೇದನ ಬಾರದಂತೆ ತಾಯಿಯ ಸಮ್ಮಖದಲ್ಲೇ ವಿವಾಹ ಎಂಬ ಕಾರ್ಯವನ್ನು ಏರ್ಪಡಿಸಿ ವಿಚ್ಛೇದನವನ್ನು ಕಡಿಮೆಮಾಡಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿದ್ದೇವೆ. ಈ ಮನೆ ಮನೆಗೆ ವಾಸವಿಯಿಂದ ಸಮುದಾಯದವರಲ್ಲಿ ಒಗ್ಗಟ್ಟು ಸಾಧಿಸಿದ್ದೇವೆ ಎಂದರು.

    ಈ ಸಂದರ್ಭದಲ್ಲಿ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಆರ್.ಎಸ್. ಅನಿಲ್ ಕುಮಾರ್, ವಾಸವಿ ಜನಸಂಘದ ಕಾರ್ತೀಕ್, ಗಣಪತಿ ಕಾಫಿ ವಕ್ರ್ಸ್ ನ ಆರ್.ಎಸ್. ಮೋಹನ್ ಕುಮಾರ್, ಎಸ್.ಪಿ. ಮೆಡಿಕಲ್ಸ್ ನ ಹರೀಶ್ ಬಾಬು, ಮಂಡಳಿಯ ಶ್ರೀನಿವಾಸ್ ಬಾಬು, ನಟೇಶ್, ಟಿ.ವಿ. ನರೇಂದ್ರ, ನಾಗರ್ಜುನ್, ಈಶ್ವರ್, ಬದ್ರಿನಾಥ್, ವಾಸವಿ ಮಹಿಳಾ ಸಂಘದ ಸುಮ, ರಮ್ಯಾ, ರಶ್ಮಿ, ಸರಸ್ವತೀ, ಜ್ಯೋತಿ, ಇನ್ನೀತರರು ಹಾಜರಿದ್ದರು.

  • ವಿಶ್ವನಾಥ್ ಸಜ್ಜನರ್ ಬೃಹತ್ ಫೋಟೋ ಇಟ್ಟು ಬೃಹತ್ ಮೆರವಣಿಗೆ

    ವಿಶ್ವನಾಥ್ ಸಜ್ಜನರ್ ಬೃಹತ್ ಫೋಟೋ ಇಟ್ಟು ಬೃಹತ್ ಮೆರವಣಿಗೆ

    ಗದಗ: ಪೊಲೀಸ್ ಅಫೀಸರ್ ವಿಶ್ವನಾಥ್ ಸಜ್ಜನರ್ ಬೃಹತ್ ಫೋಟೋ ಇಟ್ಟು ಅವರ ಸ್ವಗ್ರಾಮ ಅಸೂತಿಯಲ್ಲಿ ಮಧ್ಯರಾತ್ರಿಯಲ್ಲಿ ಬೃಹತ್ ಮೆರವಣಿಗೆ ಮಾಡಲಾಗಿದೆ.

    ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಹೈದರಾಬಾದ್ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಅವರು ಎನ್‍ಕೌಂಟರ್ ಮಾಡಿದ್ದರು. ಕಾಮುಕರನ್ನು ಹುಟ್ಟಡಗಿಸಿದ್ದು ವೀರ ಕನ್ನಡಿಗ ಅನ್ನೋದು ಗೊತ್ತಾಗುತ್ತಿದ್ದಂತೆ ಕರ್ನಾಟಕದ ಮೂಲೆ ಮೂಲೆಯಿಂದಲೂ ಪ್ರಶಂಸೆ ವ್ಯಕ್ತವಾಗಿ ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿತ್ತು.

    ಶನಿವಾರ ಮಧ್ಯರಾತ್ರಿ ವಿಶ್ವನಾಥ್ ಸಜ್ಜನರ ಅವರ ಸ್ವಗ್ರಾಮ ಅಸೂತಿ ಗ್ರಾಮದಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು. ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂತಿ ಗ್ರಾಮದಲ್ಲಿ ವಿಶ್ವನಾಥ್ ಸಜ್ಜನರ್ ಅವರ ತಂದೆ ಚನ್ನಬಸಪ್ಪ ವಾಸವಿದ್ದಾರೆ. ವಿಶ್ವನಾಥ್ ಸಜ್ಜನರ್ ಅವರು ಕೂಡ ಹುಟ್ಟಿ ಬೆಳೆದ ಊರು ಇದಾಗಿದ್ದು, ನಮ್ಮ ಮನೆ ಮಗ ಎಂದು ಜನ ಮಧ್ಯೆ ರಾತ್ರಿ ಸಂಭ್ರಮಾಚರಣೆ ಮಾಡಿದ್ದಾರೆ.

    ಟ್ಯಾಕ್ಟರ್ ನಲ್ಲಿ ಪೊಲೀಸ್ ಆಫೀಸರ್ ವಿಶ್ವನಾಥ್ ಸಜ್ಜನರ್ ಅವರ ಬೃಹತ್ ಫೋಟೋ ಮೆರವಣಿಗೆ ಮಾಡಿದ್ದಾರೆ. ದಾರಿಯದ್ದಕ್ಕೂ ಡೋಲು, ಮೇಳ ಬಾರಿಸುತ್ತಾ ಪಟಾಕಿ ಸಿಡಿಸಿ ಮೆರವಣಿಗೆ ಮಾಡಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ನಮ್ಮೂರ ಹೆಮ್ಮೆಯ ನಾಯಕ ಎಂದು ಓಕುಳಿ ಆಡಿ, ಪಟಾಕಿ ಸಿಡಿಸಿ, ಮನೆ ಮನೆಯಲ್ಲೂ ಹಬ್ಬ ಆಚರಿಸಿದ್ದಾರೆ. ಶನಿವಾರ ಸಂಜೆ 6.39 ರಿಂದ ಮೆರವಣಿಗೆ ಆರಂಭವಾಗಿದ್ದು, ಮಧ್ಯರಾತ್ರಿ 1 ಗಂಟೆಯವರೆಗೂ ಗ್ರಾಮ ಕೇರಿ ಕೇರಿಯಲ್ಲೂ ಮೆರವಣಿಗೆ ಮಾಡಿ ಸಂಭ್ರಮಿಸಿದ್ದಾರೆ.