Tag: procession

  • ಕಲ್ಲು ತೂರಾಟ, ತಲವಾರ್‌ ಪ್ರದರ್ಶನ, ಸಿಕ್ಕ ಸಿಕ್ಕ ವಾಹನಗಳ ಮೇಲೆ ದಾಳಿ – ನಾಗಮಂಗಲ ಧಗಧಗಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ಸುದ್ದಿ

    ಕಲ್ಲು ತೂರಾಟ, ತಲವಾರ್‌ ಪ್ರದರ್ಶನ, ಸಿಕ್ಕ ಸಿಕ್ಕ ವಾಹನಗಳ ಮೇಲೆ ದಾಳಿ – ನಾಗಮಂಗಲ ಧಗಧಗಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ಸುದ್ದಿ

    ಮಂಡ್ಯ: ಉದ್ರಿಕ್ತರ ಕಿಚ್ಚಿಗೆ ನಾಗಮಂಗಲ (Nagamangala) ಉದ್ವಿಘ್ನಗೊಂಡಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಶನಿವಾರದವರೆಗೆ 144 ಸೆಕ್ಷನ್‌ ಹಾಕಲಾಗಿದೆ. ಪ್ರಕರಣ ಸಂಬಂಧ ಇಲ್ಲಿಯವರೆಗೆ 46 ಮಂದಿಯನ್ನು ಬಂಧಿಸಲಾಗಿದೆ.

    ಅಷ್ಟಕ್ಕೂ ಈ ಗಲಾಟೆ ನಡೆದಿದ್ದು ಹೇಗೆ? ಶಾಂತವಾಗಿದ್ದ ನಾಗಮಂಗಲ ಧಗಧಗಿಸಿದ್ದು (Communal Violence) ಹೇಗೆ ಎನ್ನುವುದರ ಸಂಪೂರ್ಣ ವಿವರವವನ್ನು ಇಲ್ಲಿ ನೀಡಲಾಗಿದೆ.

    ಮೆರವಣಿಗೆ ಆರಂಭ
    ನಾಗಮಂಗಲದ ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಮೆರವಣಿಗೆ (Ganpati Idol Procession) ಮೂಲಕ ತರಲಾಗುತ್ತಿತ್ತು. ಅದ್ದೂರಿ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆಗೆ ಆಯೋಜಕರು ಸಜ್ಜಾಗಿದ್ದರು.

    ಕಲ್ಲು ತೂರಾಟ ಆರಂಭ
    ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬರುತ್ತಿದ್ದಂತೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ದರ್ಗಾ ಬಳಿ ತಮಟೆ, ಡೊಳ್ಳು ಬಾರಿಸದಂತೆ ಕಿರಿಕ್ ಮಾಡಿ ಕಲ್ಲು ತೂರಿದ್ದಾರೆ. ಈ ವೇಳೆ ಎರಡು ಗುಂಪಿನ ಯುವಕರ ಮಧ್ಯೆ ವಾಕ್ಸಮರ ಶುರುವಾಗಿದೆ. ನೋಡನೋಡುತ್ತಿದ್ದಂತೆ ತಳ್ಳಾಟ, ನೂಕಾಟ ನಡೆದಿದೆ.

    ಗಣೇಶ ಮೂರ್ತಿ ನಿಲ್ಲಿಸಿ ಪ್ರತಿಭಟನೆ
    ಕಿಡಿಗೇಡಿಗಳ ಕೃತ್ಯ ಖಂಡಿಸಿ ಪೊಲೀಸ್ ಠಾಣೆ ಎದುರು ಗಣೇಶ ಮೂರ್ತಿಯನ್ನು ನಿಲ್ಲಿಸಿ ಹಿಂದೂಗಳು ಪ್ರತಿಭಟನೆ ಮಾಡಿದ್ದಾರೆ. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಬೇಕು, ಕ್ರಮ ಜರುಗಿಸಬೇಕು ಅಂತ ಆಗ್ರಹಿಸಿದ್ದಾರೆ.  ಇದನ್ನೂ ಓದಿ: ನಾಗಮಂಗಲದಲ್ಲಿ 144 ಸೆಕ್ಷನ್‌ ಜಾರಿ – ಇಂದು ಪಟ್ಟಣದ ಶಾಲಾ, ಕಾಲೇಜುಗಳಿಗೆ ರಜೆ

    ತಲವಾರ್ ಪ್ರದರ್ಶನ
    ಈ ಸಂದರ್ಭದಲ್ಲಿ ಕಿಡಿಗೇಡಿಗಳ ಗುಂಪು ತಲವಾರ್ ಪ್ರದರ್ಶಿಸಿ, ಜೀವ ಬೆದರಿಕೆ ಹಾಕಿದೆ. ದರ್ಗಾ ಬಳಿ ಗಣೇಶ ಮೆರವಣೆಗೆ ಬಂದರೆ ನಿಮ್ಮನ್ನು ಉಳಿಸುವುದಿಲ್ಲ ಎಂಬಂತೆ ಜೀವ ಬೆದರಿಕೆ ಹಾಕಿ ತಲವಾರ್‌ಗಳನ್ನು ತೋರಿಸಿದ್ದಾರೆ.

    ಘರ್ಷಣೆ; ಲಾಠಿ ಚಾರ್ಜ್
    ಯಾವಾಗ ತಲವಾರ್ ಪ್ರದರ್ಶಿಸಿ ಕಿರಿಕ್‌ ಮಾಡಿದರೋ ಆಗ ಎರಡು ಗುಂಪಿನ ಯುವಕರ ಮಧ್ಯೆ ಘರ್ಷಣೆ ಶುರುವಾಗಿ ಪರಸ್ಪರ ಹೊಡೆದಾಟ ನಡೆದಿದೆ. ಘಟನಾ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಯುವಕರು ಜಮಾಯಿಸಿದ್ದರಿಂದ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

    ಮತ್ತೆ ಕಲ್ಲು ತೂರಾಟ, ಪೋಲಿಸರಿಗೂ ಗಾಯ
    ಲಾಠಿ ಚಾರ್ಜ್ ಆದ ಬಳಿಕ ಮತ್ತೆ ಕಿಡಿಗೇಡಿಗಳ ಗ್ಯಾಂಗ್ ಕಲ್ಲು ತೂರಾಟ ನಡೆಸಿ ಉದ್ದಟತನ ಮೆರೆದಿದೆ. ಕಲ್ಲು ತೂರಾಟದ ವೇಳೆ ಪೊಲೀಸ್ ಕಾನ್‌ಸ್ಟೇಬಲ್‌ ಅವರಿಗೂ ಗಾಯಗಳಾಗಿವೆ. ಇದನ್ನೂ ಓದಿ: ತಪ್ಪಿತಸ್ಥರ ವಿರುದ್ಧ ಕ್ರಮ, ಬಂಧನ ಆಗುತ್ತೆ: ಗಣೇಶ ವಿಸರ್ಜನೆ ಗಲಾಟೆ ಬಗ್ಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ

    ತಲವಾರ್ ವಶಕ್ಕೆ
    ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕಿಡಿಗೇಡಿಗಳ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಬಳಿಕ ಅವರ ಬಳಿಯಿದ್ದ ತಲವಾರ್‌ ಅನ್ನು ವಶಕ್ಕೆ ಪಡೆದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಿದರು.

    ಅಂಗಡಿಗಳ ಮೇಲೆ ಕಲ್ಲು:
    ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ ಎನ್ನುವಷ್ಟರಲ್ಲಿ ಉದ್ರಿಕ್ತರ ಗುಂಪಿನಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿ ಮತ್ತೆ ಕಿಡಿಗೇಡಿ ಕೃತ್ಯಕ್ಕೆ ಮುಂದಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಿಡಿಗೇಡಿಗಳು ಸೇರಿದ ನಂತರ ಅಲ್ಲೇ ಇದ್ದ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನೂರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತರು ನಿರಂತರವಾಗಿ ಕಲ್ಲು ತೂರಾಟ ನಡೆಸುವ ಮೂಲಕ ಗಲಭೆಯನ್ನು ಮತ್ತಷ್ಟು ಜಾಸ್ತಿ ಮಾಡಿದ್ದಾರೆ.

    ಪೆಟ್ರೋಲ್ ಬಾಂಬ್ ದಾಳಿ
    ಕಲ್ಲು ತೂರಾಟ ನಡೆಸುವುದರ ಜೊತೆ ಕಿಡಿಗೇಡಿ ಯುವಕರು ಪೆಟ್ರೋಲ್ ಬಾಂಬ್ ದಾಳಿ ಮಾಡಿ, ಅಂಗಡಿಗಳಿಗೆ ವಾಹನಗಳಿಗೂ ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿದ್ದಾರೆ. ಇದರ ಜೊತೆಗೆ ಅಲ್ಲೇ ಇದ್ದ ಗುಜರಿ ಅಂಗಡಿಯೊಂದು ಕಿಡಿಗೇಡಿಗಳ ಅಟ್ಟಹಾಸಕ್ಕೆ ಸುಟ್ಟು ಭಸ್ಮವಾಗಿದೆ.

    ಸಿಕ್ಕ ಸಿಕ್ಕ ವಾಹನಗಳ ಮೇಲೆ ದಾಳಿ
    ಅಂಗಡಿ, ಮುಂಗಟ್ಟು ಮಾತ್ರವೇ ಅಲ್ಲ, ರಸ್ತೆಯಲ್ಲಿ ಸಿಕ್ಕ-ಸಿಕ್ಕ ವಾಹನಗಳ ಮೇಲೂ ಪೆಟ್ರೋಲ್ ಬಾಂಬ್ ದಾಳಿ ಮಾಡಿದ್ದಾರೆ. ನೋಡನೋಡುತ್ತಿದ್ದಂತೆ ಅಲ್ಲಿದ್ದ ವಾಹನಗಳು ಸುಟ್ಟು ಕರಕಲಾಗಿದೆ.

    ಬೆಂಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿ
    ಇಷ್ಟೆಲ್ಲಾ ಘಟನೆ ನಂತರ ನಾಗಮಂಗಲದಲ್ಲಿ ಉದ್ವಿಗ್ನ ವಾತಾವರಣ ಮತ್ತಷ್ಟು ಹೆಚ್ಚಾಯಿತು. ಎತ್ತ ನೋಡಿದರೂ ಬೆಂಕಿಯ ಜ್ವಾಲೆ ಜೋರಾಗಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಇದನ್ನೂ ಓದಿ: ಸರ್ಕಾರ ಒಂದು ಗುಂಪನ್ನು ಓಲೈಸುತ್ತಿರೋದ್ರಿಂದ ಇಂಥ ಉದ್ಧಟತನ ಆಗ್ತಿದೆ: ಮಂಡ್ಯ ಗಣೇಶ ವಿಸರ್ಜನೆ ಗಲಾಟೆಗೆ ಹೆಚ್‌ಡಿಕೆ ಬೇಸರ

     

    ಬಿಲ್ಡಿಂಗ್ ಒಳಗಡೆಯಿಂದ ಕಲ್ಲು ತೂರಾಟ
    ಇದಾದ ಬಳಿಕ ಮತ್ತೆ ಬಿಲ್ಡಿಂಗ್ ಒಳಗಡೆಯಿಂದ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಒಬ್ಬೊಬ್ಬರಾಗಿ ಹಿಂದೂ ಯುವಕರ ಮೇಲೆ ಕಲ್ಲಿನ ದಾಳಿಯೇ ಮಾಡುತ್ತಾರೆ. ಶಾಂತವಾಗಿದ್ದ ಯುವಕರ ಮೇಲೆ ಮತ್ತೆ ಕಲ್ಲು ತೂರಾಟ ಮಾಡುವ ಮೂಲಕ ಪರಿಸ್ಥಿತಿಯನ್ನು ಮತ್ತೆ ಉದ್ವಿಗ್ನ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಾರೆ.

    ವಾಹನಗಳ ಮೇಲೆ ರಾಡ್‌ನಿಂದ ದಾಳಿ
    ಇದಷ್ಟೆ ಅಲ್ಲದೆ ರಸ್ತೆ ಬದಿ ನಿಂತಿದ್ದ ವಾಹನಗಳ ಮೇಲೂ ರಾಡ್‌ನಿಂದ ದಾಳಿ ಮಾಡಿ ಜಖಂಗೊಳಿಸುತ್ತಾರೆ. ಕಾರು, ಬೈಕ್, ಸ್ಕೂಟರ್‌ಗಳ ಮೇಲೆ ದಾಳಿ ಮಾಡುತ್ತಾರೆ. ಮತ್ತೆ ಉದ್ದಟತನ ಪ್ರದರ್ಶಿಸಿದ ಗ್ಯಾಂಗ್ ಹಿಂದೂಗಳ ವಾಹನಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಾರೆ. ಅಲ್ಲದೇ ಹಿಂದೂ ಯುವಕರ ಮೇಲೂ ಹಲ್ಲೆ ಮಾಡಿದ್ದಾರೆ. ಈ ವೇಳೆ ಕೆಲ ಯುವಕರಿಗೆ ಗಾಯಗಳಾದ ಘಟನೆಯೂ ನಡೆದಿದೆ.

    ಪೊಲೀಸ್ ಭದ್ರತೆ ಹೆಚ್ಚಳ
    ಪರಿಸ್ಥಿತಿಯನ್ನು ನಿಯಂತ್ರಣ ಮಾಡಲೇಬೇಕು ಎಂದು ಪಣತೊಟ್ಟ ಖಾಕಿ ಟೀಂ ಭದ್ರತೆ ಹೆಚ್ಚಳ ಮಾಡಿ ನಾಗಮಂಗಲಕ್ಕೆ ಬರುವ ನಾಲ್ಕು ದಿಕ್ಕಿನಲ್ಲೂ ವಾಹನಗಳನ್ನ ತಡೆದು, ನಾಗಮಂಗಲಕ್ಕೆ ಎಂಟ್ರಿಕೊಡಂತೆ ವಾರ್ನ್ ಮಾಡಿ ನಾಕಬಂದಿ ಹಾಕ್ತಾರೆ.

    ಮತ್ತೆ ಲಾಠಿ ಚಾರ್ಜ್; ಪರಿಸ್ಥಿತಿ ಕಂಟ್ರೋಲ್
    ಯಾವಾಗ ಪೊಲೀಸ್ ಭದ್ರತೆ ಹೆಚ್ಚಾಗುತ್ತದೋ ಅವಾಗ ಅಸಲಿ ಆಟಕ್ಕೆ ಬ್ರೇಕ್ ಬಿತ್ತು. ಫೀಲ್ಡ್‌ಗೆ ಇಳಿದ ಪೊಲೀಸರು ಗಲ್ಲಿಗಲ್ಲಿಗೂ ನುಗ್ಗಿ ಕಿಡಿಗೇಡಿಗಳ ಮೇಲೆ ಲಾಠಿ ಚಾರ್ಜ್ ಮಾಡುವ ಮೂಲಕ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುತ್ತಾರೆ.

    ಹಣ್ಣುಗಳ ಅಂಗಡಿ ಚೆಲ್ಲಾಪಿಲ್ಲಿ
    ಅನ್ಯಕೋಮಿನ ಕಿಡಿಗೇಡಿಗಳ ಅಟ್ಟಹಾಸ ಹೇಗಿತ್ತು ಅಂದರೆ ಹಣ್ಣುಗಳ ಅಂಗಡಿಗಳ ಮೇಲೂ ದಾಳಿ ಮಾಡಿದ್ದಾರೆ. ಹಣ್ಣುಗಳೆಲ್ಲಾ ರಸ್ತೆ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

    ಎಸ್‌ಪಿ, ಡಿಸಿ, ಐಜಿಪಿ ಭೇಟಿ, ರೌಂಡ್ಸ್
    ಇದಾದ ಬಳಿಕ ಘಟನಾ ಸ್ಥಳಕ್ಕೆ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ, ಐಜಿಪಿ ಬೋರಲಿಂಗಯ್ಯ ಸೇರಿದಂತೆ ಜಿಲ್ಲಾಧಿಕಾರಿ ಕೂಡ ಭೇಟಿ ಕೊಟ್ಟು ನಾಗಮಂಗಲ ಪಟ್ಟಣವನ್ನು ಒಂದು ರೌಂಡ್ಸ್ ಹಾಕಿ ಪರಿಶೀಲನೆ ನಡೆಸುತ್ತಾರೆ.

    ಠಾಣೆ ಪಕ್ಕದ ಅಂಗಡಿಗೆ ಬೆಂಕಿ
    ಪೊಲೀಸರು ರೌಂಡ್ಸ್ ಹಾಕಿ ತೆರಳಿದ ಬಳಿಕವೂ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಅಂಗಡಿಗೆ ಬೆಂಕಿ ಹಚ್ಚಿ ಉದ್ದಟತನ ಮೆರೆದಿದ್ದಾರೆ.

     

  • ನಾಗಮಂಗಲದಲ್ಲಿ 144 ಸೆಕ್ಷನ್‌ ಜಾರಿ – ಇಂದು ಪಟ್ಟಣದ ಶಾಲಾ, ಕಾಲೇಜುಗಳಿಗೆ ರಜೆ

    ನಾಗಮಂಗಲದಲ್ಲಿ 144 ಸೆಕ್ಷನ್‌ ಜಾರಿ – ಇಂದು ಪಟ್ಟಣದ ಶಾಲಾ, ಕಾಲೇಜುಗಳಿಗೆ ರಜೆ

    ಮಂಡ್ಯ: ಗಣೇಶ ವಿಸರ್ಜನೆ ವೇಳೆ (Ganpati Idol Procession) ಕೋಮುಗಲಭೆ (Communal Violence) ಸಂಭವಿಸಿದ ಹಿನ್ನೆಲೆಯಲ್ಲಿ ಶನಿವಾರದವರೆಗೆ ನಾಗಮಂಗಲ ಪಟ್ಟಣದಲ್ಲಿ (Nagamangala town) 144 ಸೆಕ್ಷನ್‌ ಜಾರಿ ಮಾಡಲಾಗಿದೆ.

    ಬುಧವಾರ ರಾತ್ರಿಯಿಂದಲೇ 144 ಸೆಕ್ಷನ್‌ ಜಾರಿ ಮಾಡಲಾಗಿದ್ದು ಇಂದು ಪಟ್ಟಣ ವ್ಯಾಪ್ತಿಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರಕರಣ ಸಂಬಂಧ ಇಲ್ಲಿಯವರೆಗೆ 46 ಮಂದಿಯನ್ನು ಬಂಧಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ನಾಗಮಂಗಲ ಪಟ್ಟಣದ್ಯಾಂತ ಪೊಲೀಸರ ಸರ್ಪಗಾವಲು ಹಾಕಿದ್ದಾರೆ. ಇದನ್ನೂ ಓದಿ: ಸರ್ಕಾರ ಒಂದು ಗುಂಪನ್ನು ಓಲೈಸುತ್ತಿರೋದ್ರಿಂದ ಇಂಥ ಉದ್ಧಟತನ ಆಗ್ತಿದೆ: ಮಂಡ್ಯ ಗಣೇಶ ವಿಸರ್ಜನೆ ಗಲಾಟೆಗೆ ಹೆಚ್‌ಡಿಕೆ ಬೇಸರ

     

    ನಾಗಮಂಗಲ ಬಂದ್‌: ಅನ್ಯಕೋಮಿನ ಯುವಕರ ಕೃತ್ಯ ಖಂಡಿಸಿ ಇಂದು ನಾಗಮಂಗಲ ಬಂದ್‌ಗೆ ವಿಶ್ವಹಿಂದೂ ಪರಿಷತ್, ಭಜರಂಗ ದಳ ಹಾಗೂ ಇತರೇ ಹಿಂದೂಪರ ಸಂಘಟನೆಗಳು  ಕರೆ ನೀಡಿವೆ.

  • ಮಡಿಕೇರಿ ದಸರಾ ಶೋಭಯಾತ್ರೆ ವೇಳೆ ಅವಘಡ – ಇಬ್ಬರಿಗೆ ಗಾಯ

    ಮಡಿಕೇರಿ ದಸರಾ ಶೋಭಯಾತ್ರೆ ವೇಳೆ ಅವಘಡ – ಇಬ್ಬರಿಗೆ ಗಾಯ

    ಮಡಿಕೇರಿ: ಮಡಿಕೇರಿ ದಸರಾ (Mdikeri Dasara) ದಶಮಂಟಪಗಳ ಶೋಭಯಾತ್ರೆ (Procession) ವೇಳೆ ಮಂಟಪವೊಂದರ ಟ್ರಾಕ್ಟರ್ (Tractor) ಮಗುಚಿ ಬಿದ್ದಿದ್ದು, ಮೂವರು ಗಾಯಗೊಂಡಿದ್ದಾರೆ.

    ಶೋಭಯಾತ್ರೆ ಆರಂಭವಾದ ಬಳಿಕ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಸಮಿತಿಯ ಮಂಟಪವು ದೇಗುಲದಿಂದ ಮೆರವಣಿಗೆಯಲ್ಲಿ ಹೊರಟಿತ್ತು. ಡಿಸಿಸಿ ಬ್ಯಾಂಕ್ ಸಮೀಪ ಇಳಿಜಾರಿನ ರಸ್ತೆಯಲ್ಲಿ ಮಂಟಪ ಇರಿಸಲಾಗಿದ್ದ ಟ್ರಾಕ್ಟರ್ ಬುಧವಾರ ನಸುಕಿನ ಜಾವ 3:30ರ ವೇಳೆ ಮಗುಚಿದೆ. ಇದರಿಂದ ಮೂವರಿಗೆ ಗಾಯಗಳಾಗಿವೆ. ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಅಪಾರ ನೂಕುನುಗ್ಗಲು ಉಂಟಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರು ಪರದಾಡಿದರು. ಇದನ್ನೂ ಓದಿ: ಕೋಲಿನಿಂದ ಹೊಡೆದಾಡೋ ಜಾತ್ರೆ- ಮೂವರ ಸ್ಥಿತಿ ಗಂಭೀರ, ನೂರಕ್ಕೂ ಹೆಚ್ಚು ಮಂದಿಗೆ ಗಾಯ

    ಈ ಕುರಿತು ಪ್ರತಿಕ್ರಿಯಿಸಿದ ದೇಗುಲ ಸಮಿತಿಯ ಸದಸ್ಯರೊಬ್ಬರು, ದೇಗುಲದ ಸಮೀಪ ಹಾಗೂ ಮೆರವಣಿಗೆಯಲ್ಲಿ ಒಟ್ಟು ಎರಡು ಪ್ರದರ್ಶನ ನೀಡಿದ್ದೆವು. ನಸುಕಿನ ಜಾವ 4 ಗಂಟೆಗೆ ತೀರ್ಪುಗಾರರ ಮುಂದೆ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಆ ಸ್ಥಳ ತಲುಪುವ ಮುನ್ನ ಟ್ರಾಕ್ಟರ್ ಮಗುಚಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಚೇರಿ ಲಾಕರ್‌ನಲ್ಲಿದ್ದ 1.24 ಕೋಟಿ ಕಳವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿರುಕುಳಕ್ಕೊಳಗಾದ ಮಗಳನ್ನು ಮೆರವಣಿಗೆಯಲ್ಲಿ ಪತಿ ಮನೆಯಿಂದ ಕರೆತಂದ ತಂದೆ!

    ಕಿರುಕುಳಕ್ಕೊಳಗಾದ ಮಗಳನ್ನು ಮೆರವಣಿಗೆಯಲ್ಲಿ ಪತಿ ಮನೆಯಿಂದ ಕರೆತಂದ ತಂದೆ!

    ರಾಂಚಿ: ತಂದೆಯೊಬ್ಬ ತನ್ನ ಮಗಳನ್ನು ಆಕೆಯ ಪತಿ ಮನೆಯಿಂದ ಪಟಾಕಿ ಸಿಡಿಸಿ, ವಾದ್ಯ ಹಾಗೂ ಮೆರವಣಿಗೆಯಲ್ಲಿ ಕರೆತಂದ ವೀಡಿಯೋವೊಂದು ವೈರಲ್ ಆಗಿದೆ.

    ಈ ಘಟನೆ ಜಾರ್ಖಂಡ್‍ನಲ್ಲಿ (Jharkhand) ನಡೆದಿದೆ. ತಂದೆ ಪ್ರೇಮ್ ಗುಪ್ತಾ ತನ್ನ ಮಗಳನ್ನು ಸಾಕ್ಷಿ ಗುಪ್ತಾಳನ್ನು ಮೆರವಣಿಗೆ ಮೂಲಕ ತವರು ಮನೆಗೆ ಕರೆತಂದಿದ್ದಾರೆ. ಸದ್ಯ ಇದರ ವಿಡಿಯೋವನ್ನು ಪ್ರೇಮ್ ಗುಪ್ತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಪೋಷಕರು ತಮ್ಮ ಮಗಳನ್ನು ಬಹಳ ಆಡಂಬರದಿಂದ ಮದುವೆ ಮಾಡಿಕೊಡುತ್ತಾರೆ. ಒಮದು ವೇಳೆ ಮದುವೆ ಬಳಿಕ ಸಂಗಾತಿ ಮತ್ತು ಅವರ ಕುಟುಂಬದವರು ಆಕೆಗೆ ಕಷ್ಟ ನೀಡಲು ಪ್ರಾರಂಭಿಸಿದರೆ, ನಿಮ್ಮ ಮಗಳನ್ನು ಅತ್ಯಂತ ಗೌರವದಿಂದ ಮನೆಗೆ ಕರೆದುಕೊಂಡು ಬರಬೇಕು. ಯಾಕೆಂದರೆ ಎಲ್ಲಾ ಹೆಣ್ಣು ಮಕ್ಕಳು ಅಮೂಲ್ಯ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    2020ರ ಏಪ್ರಿಲ್ ತಿಂಗಳಲ್ಲಿ ಸಾಕ್ಷಿಯನ್ನು ಜಾರ್ಖಂಡ್ ವಿದ್ಯುತ್ ವಿತರಣಾ ನಿಗಮದಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಚಿನ್ ಕುಮಾರ್‍ಗೆ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆ ಬಳಿಕ ಸಚಿನ್ ಹಾಗೂ ಆತನ ಮನೆಯವರು ಸಾಕ್ಷಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ, ನನ್ನ ನಡುವೆ ಏನೂ ಇಲ್ಲ: ಡಿಕೆಶಿ

    ಸಚಿನ್ ಕೂಡ ಸಾಕ್ಷಿ ಜೊತೆ ಜಗಳವಾಡಿ ಮನೆಯಿಂದ ಹೊರಹಾಕಿದ್ದನು. ಆದರೂ ಜಗ್ಗದೆ ಸಾಕ್ಷಿ ಪತಿ ಜೊತೆಯೇ ವಾಸವಾಗಿದ್ದಳು. ಮದುವೆಯಾಗಿ ವರ್ಷದ ಬಳಿಕ ಸಚಿನ್‍ಗೆ ಈ ಮೊದಲೇ ಎರಡು ಮದುವೆಯಾಗಿರುವ ವಿಚಾರ ಸಾಕ್ಷಿ ಗಮನಕ್ಕೆ ಬಂದಿದೆ. ಇದೆಲ್ಲಾ ತಿಳಿದರೂ ಏನೂ ತಿಳಿಯದಂತೆ ಸಾಕ್ಷಿ ಸುಮ್ಮನಿದ್ದಳು.

    ಇತ್ತ ಪತಿ ಹಾಗೂ ಆತನ ಪೋಷಕರ ಕಿರುಕುಳ ಹೆಚ್ಚಾದ ಬಳಿಕ ತವರು ಮನೆಗೆ ವಿಷಯ ತಿಳಿಸಿದಳು. ತನಗೆ ಸಂಬಂಧ ಕಡಿದುಕೊಳ್ಳುವ ನಿಧಾರ ಮಾಡಿ ಮನೆಯವರಿಗೆ ಹೇಳಿದಳು. ಅಂತೆಯೇ ಮಗಳ ನಿರ್ದಾರಕ್ಕೆ ಸೈ ಎಂದ ತಂದೆ ಪ್ರೇಮ್. ಗಂಡನ ಮನೆಯಿಂದ ಆಕೆ ಬರುವಾಗ ಮೆರವಣಿಗೆ ಮೂಲಕ ಸಂಗೀತ ವಾದ್ಯ ಮೇಳಗಳೊಂದಿಗೆ ಕರೆತಂದಿದ್ದಾರೆ. ಜೊತೆಗೆ ದಾರಿಯುದ್ದಕ್ಕೂ ಪಟಾಕಿ ಸಿಡಿಸಿದ್ದಾರೆ.

    ಮಗಳಿಗೆ ಆಕೆಯ ಗಂಡನ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಇದರಿಂದ ಬೇಸರಗೊಂಡ ತಂದೆ ತನ್ನ ಮಗಳನ್ನು ಆಕೆಯ ಅತ್ತೆ ಮನೆಯಿಂದ ಅದ್ಧೂರಿ ಮೆರವಣಿಗೆಯ ಮೂಲಕ ತಾಯಿ ಮನೆಗೆ ಕರೆದುಕೊಂಡು ಬಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೊಲೀಸರ ಮೇಲೆ ಕಲ್ಲು ತೂರಾಟ ಹೊಸದೇನಲ್ಲ: ಪರಮೇಶ್ವರ್ ಬೇಜವಾಬ್ದಾರಿ ಮಾತು

    ಪೊಲೀಸರ ಮೇಲೆ ಕಲ್ಲು ತೂರಾಟ ಹೊಸದೇನಲ್ಲ: ಪರಮೇಶ್ವರ್ ಬೇಜವಾಬ್ದಾರಿ ಮಾತು

    ಬೆಂಗಳೂರು: ಶಿವಮೊಗ್ಗದಲ್ಲಿ (Shivamogga) ಸಣ್ಣ ಗಲಾಟೆ ಆಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ (Stone Pelting) ಆಗಿರೋದು ಹೊಸದೇನಲ್ಲ ಎಂದು ಗೃಹಸಚಿವ ಜಿ. ಪರಮೇಶ್ವರ್ (G Parameshwara) ಬೇಜವಾಬ್ದಾರಿಯ ಮಾತುಗಳನ್ನಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ಹಲವರ ಬಂಧನ ಆಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡೋದು ಹೊಸದೇನಲ್ಲ. ಈ ಹಿಂದೆಯೂ ಆಗಿದೆ, ಈಗಲೂ ಆಗುತ್ತಿದೆ. ಘಟನೆ ನಡೆದು ಹೋಗಿದೆ. ಅದನ್ನು ನಿಯಂತ್ರಿಸಲು ಪೊಲೀಸರು ಸಮರ್ಥರಿದ್ದಾರೆ ಎಂದರು.

    ಅಂತಹ ಸೂಕ್ಷ್ಮ ಪ್ರದೇಶದಲ್ಲಿ ಮೊದಲೇ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಹೀಗಾಗಿ ದೊಡ್ಡ ಪ್ರಮಾಣದ ಗಲಾಟೆ ನಡೆಯುವುದನ್ನು ತಡೆಯಲಾಗಿದೆ. ಸಣ್ಣ ಪ್ರಮಾಣದ ಗಲಾಟೆ ಆಗಿದೆ. ಅದನ್ನು ಅಧಿಕಾರಿಗಳು ನಿಯಂತ್ರಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗ ಕೋಮು ಗಲಭೆ ಪ್ರಕರಣದಲ್ಲಿ 43 ಜನರ ಬಂಧನ: ಸಿದ್ದರಾಮಯ್ಯ

    ಇಡೀ ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಬ್ಯಾನರ್, ಪೋಸ್ಟರ್‌ಗಳನ್ನು ಅಳವಡಿಸುವ ಮೂಲಕ ಪ್ರಚೋದನೆ ನೀಡುತ್ತಾರೆ. ಇದು ಎಲ್ಲಾ ಕಡೆ ಆಗಿದೆ. ಅದನ್ನು ನಮ್ಮ ಅಧಿಕಾರಿಗಳು ನಿಯಂತ್ರಿಸುತ್ತಾರೆ. ಎಲ್ಲೂ ಅಂತಹ ಅಹಿತಕರ ದೊಡ್ಡ ಗಲಾಟೆ ಆಗಲು ಬಿಟ್ಟಿಲ್ಲ. ಪ್ರತಿ ಬಾರಿ ಮೆರವಣಿಗೆ ಮಾಡುವ ಸಂದರ್ಭ ಗಲಾಟೆ ಮಾಡಬೇಡಿ ಎಂದು ತಿಳಿಸುತ್ತಾರೆ. ಅದನ್ನು ಮೀರಿ ಹೋದ್ರೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಇದು ಕೋಮು ಗಲಭೆಯಲ್ಲ, ಮಾನಸಿಕ ಸ್ಥಿಮಿತ ಕಳೆದುಕೊಂಡವರು ಮಾಡಿದ್ದು: ಮಧು ಬಂಗಾರಪ್ಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ – 35 ಜನ ಪೊಲೀಸ್ ವಶಕ್ಕೆ

    ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ – 35 ಜನ ಪೊಲೀಸ್ ವಶಕ್ಕೆ

    ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ (Eid Milad Procession) ವೇಳೆ ಕಲ್ಲು ತೂರಾಟ (Stone Pelting) ನಡೆಸಿರುವ ಘಟನೆ ಶಿವಮೊಗ್ಗದ (Shivamogga) ರಾಗಿಗುಡ್ಡ (Ragigudda) ಶಾಂತಿನಗರದಲ್ಲಿ ನಡೆದಿದೆ. 2 ಗುಂಪಿನ ನಡುವೆ ಕಲ್ಲು ತೂರಾಟ ನಡೆದು, 6 ಮಂದಿ ಗಾಯಗೊಂಡಿದ್ದಾರೆ. 7 ಮನೆ, 1 ಕಾರು, 1 ಬೈಕ್ ಜಖಂಗೊಂಡಿವೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. 35 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಈದ್ ಮಿಲಾದ್ ಹಬ್ಬದ ಅಂಗವಾಗಿ ಶಿವಮೊಗ್ಗದಲ್ಲಿ ಮುಸ್ಲಿಂ ಬಾಂಧವರು ಮೆರವಣಿಗೆ ಹಮ್ಮಿಕೊಂಡಿದ್ದರು. ಕಳೆದ 28ನೇ ದಿನದಂದು ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ಇದ್ದಿದ್ದರಿಂದ, ಈದ್ ಮಿಲಾದ್ ಮೆರವಣಿಗೆಯನ್ನು ನಿನ್ನೆಗೆ (ಭಾನುವಾರ) ಮುಸ್ಲಿಂ ಮುಖಂಡರು ಹಮ್ಮಿಕೊಂಡಿದ್ದರು. ಹೀಗಾಗಿ ಈದ್ ಮಿಲಾದ್ ಮೆರವಣಿಗೆಗೆ ಇಡೀ ಶಿವಮೊಗ್ಗ ನಗರವನ್ನು ಹಸಿರುಮಯ ಮಾಡಲಾಗಿತ್ತು. ಹಸಿರು ಬಾವುಟ, ಟಿಪ್ಪು ಸುಲ್ತಾನ್, ಔರಂಗಜೇಬ್ ಕಟೌಟ್ ಹಾಕಿದ್ದರು.

    ನಿನ್ನೆ ಸರಿಸುಮಾರು ಮಧ್ಯಾಹ್ನ 3 ಗಂಟೆಗೆ ಗಾಂಧಿ ಬಜಾರಿನ ಜಾಮೀಯಾ ಮಸೀದಿಯಿಂದ ಮೆರವಣಿಗೆ ಆರಂಭವಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಲು ನಗರದ ಎಲ್ಲಾ ಬಡಾವಣೆಗಳಿಂದ ಮುಸ್ಲಿಂ ಬಾಂಧವರು ಆಗಮಿಸಿದರು. ರಾಗಿಗುಡ್ಡದಿಂದಲೂ ಮೆರವಣಿಗೆಯಲ್ಲಿ ಭಾಗಿಯಾಗಲು ಕೆಲ ಮುಸ್ಲಿಂ ಬಾಂಧವರು ತೆರಳುತ್ತಿದ್ದರು. ಈ ವೇಳೆ ರಾಗಿಗುಡ್ಡದ ಶನೇಶ್ವರ ದೇವಸ್ಥಾನದ ಬಳಿ ಮೆರವಣಿಗೆ ಸಾಗುವಾಗ ಕಲ್ಲು ತೂರಾಟ ನಡೆದಿದೆ. ಈ ವೇಳೆ ಪ್ರತಿಯಾಗಿ ಮೆರವಣಿಗೆಯಲ್ಲಿ ಇದ್ದವರು ಕಲ್ಲು ತೂರಾಟ ನಡೆಸಿದರು. ಪರಿಣಾಮ ಹಿಂದೂಗಳಿಗೆ ಸೇರಿದ 7 ಮನೆಗಳು ಹಾಗೂ 1 ಬೈಕ್, 1 ಕಾರು ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ – ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

    ಭಾನುವಾರ ಮುಂಜಾನೆ ಕೂಡ ರಾಗಿಗುಡ್ಡದಲ್ಲಿ ಗೊಂದಲ ಉಂಟಾಗಿತ್ತು. ರಾಗಿಗುಡ್ಡದ ವೃತ್ತವೊಂದರಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಹಾಕಿದ್ದರು. ಟಿಪ್ಪು ಸುಲ್ತಾನ್ ಇಬ್ಬರು ಹಿಂದೂ ಮಾದರಿಯ ಸೈನಿಕರನ್ನು ತುಳಿಯುತ್ತಿರುವ ರೀತಿ ಕಟೌಟ್ ಹಾಕಿದ್ದರು. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಬಣ್ಣ ಹಚ್ಚಿ ಮುಚ್ಚಿದ್ದರು. ಇದಕ್ಕೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದರು. ನಂತರ ಸ್ಥಳಕ್ಕೆ ಎಸ್‌ಪಿ ಮಿಥುನ್ ಕುಮಾರ್ ಭೇಟಿ ನೀಡಿ ಮನವೊಲಿಸಿದ್ದರು.

    ಇಷ್ಟಾದ ಮೇಲೂ ರಾಗಿಗುಡ್ಡದಿಂದ ಗಾಂಧಿ ಬಜಾರಿಗೆ ಮೆರವಣಿಗೆ ತೆರಳುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ. ಪ್ರತಿಯಾಗಿ ಮೆರವಣಿಗೆಯಲ್ಲಿ ಇದ್ದವರು ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ಮನೆಯ ಕಿಟಕಿಗಳಿಗೆ, ವಾಹನಗಳಿಗೆ ಹಾನಿಯಾಗಿದೆ. ಪೊಲೀಸರು ಸೇರಿದಂತೆ 6 ಮಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಸದ್ಯ ಕಲ್ಲು ತೂರಾಟ ನಡೆಸಿದವರ ಪತ್ತೆ ಹಚ್ಚಿ ಮನೆ ಮನೆಗೆ ತೆರಳಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪತ್ತೆಗೆ ಎಸ್‌ಪಿ 3 ವಿಶೇಷ ತಂಡ ರಚನೆ ಮಾಡಿದ್ದು, ಇದುವರೆಗೆ 11ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಗಿಗುಡ್ಡ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸದ್ಯ ಗಲಭೆ ನಡೆದ ಸ್ಥಳದಲ್ಲಿ ಆರ್‌ಎಎಫ್, ಡಿಎಆರ್, ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಕಲ್ಲು ತೂರಾಟ; ಟಿಪ್ಪುವಿನ ಕಾರಣ ಬಲಿಷ್ಠವಾಗಿ ನಿಂತುಬಿಡ್ತು ಅನ್ನಿಸುತ್ತೆ ಎಂದ ಶಾಸಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಣ್ಣನ ಮೇಲಿನ ಗೌರವದಿಂದ ಜೆಸಿಬಿಯಲ್ಲೇ ಮದುವೆ ಮಂಟಪ ತಲುಪಿದ ವರ

    ಅಣ್ಣನ ಮೇಲಿನ ಗೌರವದಿಂದ ಜೆಸಿಬಿಯಲ್ಲೇ ಮದುವೆ ಮಂಟಪ ತಲುಪಿದ ವರ

    ಭುವನೇಶ್ವರ: ಸಾಮಾನ್ಯವಾಗಿ ಮದುವೆ ಕಾರ್ಯಕ್ರಮವು ಡ್ಯಾನ್ಸ್, ಮ್ಯೂಸಿಕ್ ಹಾಗೂ ಮೋಜಿನಿಂದ ಕೂಡಿರುತ್ತದೆ. ಆದರೆ ಒಡಿಶಾ (Odisha) ದ ನವದಂಪತಿ ತಮ್ಮ ಮದುವೆ ಕಾರ್ಯಕ್ರಮವನ್ನು ಬಹಳ ವಿಭಿನ್ನ ಹಾಗೂ ವಿಶೇಷವಾಗಿ ಮಾಡಿದ್ದಾರೆ.

    ಹೌದು. ವರನೊಬ್ಬ ಜೆಸಿಬಿ (JCB) ಯ ಮೂಲಕ ಮೆರವಣಿಗೆ ಹೊರಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ. ಈ ಘಟನೆ ಒಡಿಶಾದ ಬೌದ್ ಜಿಲ್ಲೆಯ ಚತ್ರರಂಗ ಗ್ರಾಮದಲ್ಲಿ ನಡೆದಿದೆ.

    ವರನನ್ನು ಗಂಗಾಧರ್ ಬೆಹೆರಾ ಎಂದು ಗುರುತಿಸಲಾಗಿದೆ. ವರನ ಮದುವೆಯ ಮೆರವಣಿಗೆಯು ನಯಾಗಢ ಜಿಲ್ಲೆಯ ಖಂದಪದ ಬ್ಲಾಕ್‍ನ ಕಿಯಾಜರಾ ಗ್ರಾಮಕ್ಕೆ ತೆರಳಬೇಕಿತ್ತು. ಆದರೆ ವರ ಯಾವುದೇ ಐಷಾರಾಮಿ ವಾಹನಗಳನ್ನು ಬಳಸದೇ ಜೆಸಿಬಿ ಮೂಲಕ ವಧು ಮನೆ ತಲುಪಿದ್ದಾನೆ. ಹೀಗಾಗಿ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಅಚ್ಚರಿಪಟ್ಟಿದ್ದಾರೆ.

    ಮೂಲಗಳ ಪ್ರಕಾರ, ವರ ಗಂಗಾಧರ್ ಸಹೋದರ ಜೆಸಿಬಿ ಆಪರೇಟರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಗಂಗಾಧರ್ ಜೆಸಿಬಿಯಲ್ಲಿ ಮದುವೆ ಮೆರವಣಿಗೆ ಹೊರಡಲು ನಿರ್ಧಾರ ಮಾಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಬಿಜೆಪಿ ಪ್ರಣಾಳಿಕೆಯಲ್ಲಿ ಪಂಚರತ್ನ ಯೋಜನೆ ನಕಲು ಮಾಡಿದ್ದಾರೆ: ಕುಮಾರಸ್ವಾಮಿ

    ಒಟ್ಟಿನಲ್ಲಿ ಗಂಗಾಧರ್ ಸಹೋದರನನ್ನು ಗೌರವಿಸುವ ಸಲುವಾಗಿ ಜನರು ಶ್ಲಾಘಿಸುವುದರೊಂದಿಗೆ ವಿಶಿಷ್ಟ ಮದುವೆಯ ಮೆರವಣಿಗೆಯು ಈಗ ಇಡೀ ಪಟ್ಟಣದಲ್ಲಿ ಚರ್ಚೆಯಾಗಿದೆ.

  • ಹಾವೇರಿಯಲ್ಲಿ ರಾಯಣ್ಣ ಮೆರವಣಿಗೆ ವೇಳೆ ಪುಂಡಾಟ – ಮನೆ, ಆಟೋ, ಕಾರುಗಳಿಗೆ ಹಾನಿ

    ಹಾವೇರಿಯಲ್ಲಿ ರಾಯಣ್ಣ ಮೆರವಣಿಗೆ ವೇಳೆ ಪುಂಡಾಟ – ಮನೆ, ಆಟೋ, ಕಾರುಗಳಿಗೆ ಹಾನಿ

    – ರಟ್ಟಿಹಳ್ಳಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ

    ಹಾವೇರಿ: ಹಿಂದೂಪರ ಸಂಘಟನೆಗಳು ಸೇರಿ ರಟ್ಟಿಹಳ್ಳಿ ಪಟ್ಟದಲ್ಲಿ ಇಂದು ಪ್ರಮುಖ ಬೀದಿಯಲ್ಲಿ ಬೃಹತ್ ರ್‍ಯಾಲಿ ಮಾಡಿದರು. ರ್‍ಯಾಲಿ ವೇಳೆ ಜಮಾಯಿಸಿದ ನೂರಾರು ಹಿಂದೂಪರ ಸಂಘಟನೆ ಕಾರ್ಯಕರ್ತರು ರ್‍ಯಾಲಿ ಮಧ್ಯದಲ್ಲಿ ಅನ್ಯಕೋಮಿನ ಜನರ ಮಂದಿರ ಹಾಗೂ ಶಾಲೆ ಮನೆಗಳ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ.

    ಒಂದು ವಾರಗಳ ಹಿಂದೆ ರಟ್ಟಿಹಟ್ಟಿ ಪಟ್ಟದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ ಮಾಡಿದ್ರಂತೆ. ಈ ಹಿನ್ನೆಲೆ ಇಂದು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕಲ್ಲು ತೂರಾಟ ಖಂಡಿಸಿ ಶೋಭಾಯಾತ್ರೆ ಹಮ್ಮಿಕೊಂಡಿದ್ರು. ನಗರದ ಪ್ರಮುಖ ಬೀದಿಯಲ್ಲಿ ಸಾಗಿದ ಬೃಹತ್ ಬೈಕ್ ರ್‍ಯಾಲಿ ವೇಳೆ ಕಿಡಗೇಡಿಗಳು ಕಲ್ಲು ತೂರಿದ್ದಾರೆ. ಇಲ್ಲಿ ಜಾತಿ ಮತ ಪಂತ ಬಿಟ್ಟು ನಾವೆಲ್ಲರು ಒಂದೇ ರೀತಿ ಇದ್ದೇವೆ. ನಮ್ಮ ದೇಹದಲ್ಲಿ ಇರೋ ರಕ್ತ ಕೆಂಪೇ ಆಗಿರುತ್ತದೆ. ಆದರೆ ಯಾರೋ ಹೊರಗಿನವರು ಬಂದು ನಮ್ಮ ಮನೆಯ ಮೇಲೆ ಕಲ್ಲುತೂರಿ ನಮ್ಮಲ್ಲಿ ಜಗಳ ಹಚ್ಚೋ ಕೆಲಸ ಮಾಡ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಚಕ್ರವ್ಯೂಹ ಮಾಡಿ ಸೋಲಿಸಿದ್ರು, ರಾಮನಗರದಲ್ಲೂ ಆ ಸಂಚು ನಡೀತಿದೆ- ನಿಖಿಲ್ ಕಿಡಿ

    ಕಲ್ಲು ತೂರಾಟದ ಬಗ್ಗೆ ನನಗೆ ಅದರ ಮಾಹಿತಿ ಬಂದಿಲ್ಲ. ಪೊಲೀಸ್ ಅಧಿಕಾರಿಗಳ ಬಳಿ ಕೇಳಿ ತಿಳಿದುಕೊಳ್ಳುತ್ತೇನೆ. ಶಾಂತ ರೀತಿಯಿಂದ ಹೋಗಬೇಕು ಅಂತಾ ಪ್ರಾರಂಭದಲ್ಲಿ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಏರಿಯಾದಲ್ಲಿ ಹೋಗುವ ಸಮಯದಲ್ಲಿ ಸ್ವಾಗತ ಮಾಡಬೇಕಾದವರು ಕಲ್ಲು ತೆಗೆದುಕೊಂಡು ಹೆದರಿಸಿ ಕಳಿಸಿದ್ದಾರೆ. ಬ್ರಿಟಿಷ್ ವಿರುದ್ಧ ಕತ್ತಿ ಝಳಪಿಸಿದ ವ್ಯಕ್ತಿಗೆ ಅವಮಾನ ಮಾಡಿದ್ದಾರೆ. ಅದನ್ನ ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದರು.

    ರಟ್ಟಿಹಳ್ಳಿ ಪಟ್ಟಣದಲ್ಲಿ ಸದ್ಯ ಬಿಗುವಿನ ವಾತಾವರಣದ ನಿರ್ಮಾಣವಾಗಿದೆ. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ.

     

  • ಧಾರ್ಮಿಕ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶ – 5 ಸಾವು

    ಧಾರ್ಮಿಕ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶ – 5 ಸಾವು

    ಲಕ್ನೋ: ಧಾರ್ಮಿಕ ಮೆರವಣಿಗೆ (Procession) ವೇಳೆ ವಿದ್ಯುತ್ ಸ್ಪರ್ಶಿಸಿ (Electrocution) ಐವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಹ್ರೈಚ್ (Bahraich) ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

    ವರದಿಗಳ ಪ್ರಕಾರ ಮೆರವಣಿಗೆ ಸಾಗುತ್ತಿದ್ದ ವೇಳೆ ಮೆರವಣಿಗೆಯ ಗಾಡಿಗೆ ಅಳವಡಿಸಲಾಗಿದ್ದ ಹೈಟೆನ್ಷನ್ ತಂತಿಯ ಕಬ್ಬಿಣದ ರಾಡ್ ಅನ್ನು ವ್ಯಕ್ತಿಯೊಬ್ಬರು ಸ್ಪರ್ಶಿಸಿದ್ದಾರೆ. ಬಳಿಕ ಇನ್ನೂ ನಾಲ್ವರಿಗೆ ವಿದ್ಯುತ್ ಸ್ಪರ್ಶವಾಗಿದೆ. ಇದನ್ನೂ ಓದಿ: ಚೆನ್ನೈನ ಬೀದಿಬದಿಯಲ್ಲಿ ತರಕಾರಿ ಖರೀದಿಸಿದ ನಿರ್ಮಲಾ ಸೀತಾರಾಮನ್ – ವೀಡಿಯೋ ವೈರಲ್

    ವಿದ್ಯುತ್ ಸ್ಪರ್ಶವಾದ ಐವರ ಪೈಕಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕೊನೆಯ ವ್ಯಕ್ತಿಯನ್ನು ಚಿಕಿತ್ಸೆಗೆಂದು ಲಕ್ನೋಗೆ ಸಾಗಿಸುತ್ತಿದ್ದ ವೇಳೆ ಅವರು ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: 2024ರೊಳಗೆ UPಯ ರಸ್ತೆಗಳನ್ನು ಅಮೆರಿಕಗಿಂತಲೂ ಉತ್ತಮಗೊಳಿಸುತ್ತೇವೆ: ಗಡ್ಕರಿ

    ಬಹ್ರೈಚ್‌ನಲ್ಲಿ ನಡೆದ ದುರ್ಘಟನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಕ್ಷಣವೇ ಸ್ಥಳಕ್ಕೆ ತೆರಳುವಂತೆ ಸೂಚನೆಯನ್ನೂ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಸರಾ ಮೆರವಣಿಗೆ ವೇಳೆ ಮದರಸಾಗೆ ನುಗ್ಗಿ ಪೂಜೆ – 9 ಜನರ ವಿರುದ್ಧ ಎಫ್‌ಐಆರ್

    ದಸರಾ ಮೆರವಣಿಗೆ ವೇಳೆ ಮದರಸಾಗೆ ನುಗ್ಗಿ ಪೂಜೆ – 9 ಜನರ ವಿರುದ್ಧ ಎಫ್‌ಐಆರ್

    ಬೀದರ್: ದಸರಾ (Dasara) ಮೆರವಣಿಗೆ ವೇಳೆ ಹಿಂದೂ (Hindu) ಸಮುದಾಯದ ಗುಂಪೊಂದು ಮದರಸಾಗೆ (Madrasa) ನುಗ್ಗಿ ಪೂಜೆ ಮಾಡಿರುವ ಘಟನೆ ಬೀದರ್ (Bidar) ನಗರದ ಓಲ್ಡ್ ಸಿಟಿಯಲ್ಲಿರುವ ಐತಿಹಾಸಿಕಾ ಮೊಹಮ್ಮದ್ ಗವಾನ್ ಮದರಸಾದಲ್ಲಿ ನಡೆದಿದೆ.

    ಪ್ರತಿ ವರ್ಷ ನವರಾತ್ರಿಯ ಮೆರವಣಿಗೆ ವೇಳೆ ಮೊಹಮ್ಮದ್ ಗವಾನ್ ಮದರಸಾದ ಹೊರಗಡೆ ಹಿಂದೂ ಸಮುದಾಯದವರು ದೇವಿಗೆ ಪೂಜೆ ಮಾಡುತ್ತಿದ್ದರು. ಆದರೆ ಈ ಬಾರಿ ನೇರವಾಗಿ ಮದರಸಾಕ್ಕೆ ನುಗ್ಗಿ, ಜೈ ಭವಾನಿ, ವಂದೇ ಮಾತರಂ, ಹಿಂದೂ ಧರ್ಮಕೀ ಜೈ ಎಂದು ಘೋಷಣೆ ಕೂಗಿ ಪೂಜೆ ಮಾಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಮುರ್ಮುಗೆ ಚಮಚಾಗಿರಿ ಎಂದ ಕಾಂಗ್ರೆಸ್ ನಾಯಕ

    ಘಟನೆಯ ಬಗ್ಗೆ ಮೊಹಮ್ಮದ್ ಶಫಿಯುದ್ದೀನ್ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮದರಸಾದ ಬೀಗ ಮುರಿದು, ಸೆಕ್ಯೂರಿಟಿ ಮೇಲೆ ಹಲ್ಲೆಗೆ ಯತ್ನ ಮಾಡಿ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ್ದಾರೆ ಎಂದು ದೂರು ನೀಡಿದ್ದಾರೆ.

    ದೂರಿನ ಆಧಾರದ ಮೇಲೆ ಪೊಲೀಸರು 9 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ದಲಿತರ ವಿರೋಧಿ, ದ್ವೇಷ ಹಬ್ಬಿಸುವ ಸರ್ಕಾರ: ರಾಹುಲ್ ಗಾಂಧಿ

    Live Tv
    [brid partner=56869869 player=32851 video=960834 autoplay=true]