Tag: Pro-Pak Slogan

  • ಪಾಕ್ ಪರ ಘೋಷಣೆ ಕೂಗಿದ್ರಲ್ಲಿ ನಾಸೀರ್ ಹುಸೇನ್ ಪಾತ್ರವಿದ್ದರೆ ಪ್ರಮಾಣವಚನ ಸ್ವೀಕಾರಕ್ಕೆ ಬಿಡಬಾರದು: ಸಚಿವ ಕೆ.ಎನ್.ರಾಜಣ್ಣ

    ಪಾಕ್ ಪರ ಘೋಷಣೆ ಕೂಗಿದ್ರಲ್ಲಿ ನಾಸೀರ್ ಹುಸೇನ್ ಪಾತ್ರವಿದ್ದರೆ ಪ್ರಮಾಣವಚನ ಸ್ವೀಕಾರಕ್ಕೆ ಬಿಡಬಾರದು: ಸಚಿವ ಕೆ.ಎನ್.ರಾಜಣ್ಣ

    ತುಮಕೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ (Pro-Pak Slogan) ಕೂಗಿದ್ರಲ್ಲಿ ನಾಸೀರ್ ಹುಸೇನ್ ಪಾತ್ರ ಇದ್ದರೆ ಅವರನ್ನು ಪ್ರಮಾಣ ವಚನ ಮಾಡದಂತೆ ಬಿಪಿಯವರು ತಡೆಯಬೇಕು ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ (K.N.Rajanna) ಆಗ್ರಹಿಸಿದ್ದಾರೆ.

    ತುಮಕೂರಿನಲ್ಲಿ (Tumakuru) ಮಾತನಾಡಿದ ಅವರು, ಪಾಕ್ ಪರ ಘೋಷಣೆ ಕೂಗಿರೋದ್ರಲ್ಲಿ ನಾಸೀರ್ ಹುಸೇನ್ (Naseer Hussain) ಪಾತ್ರ ಸಾಭೀತಾದರೆ ಅವರನ್ನು ರಾಜ್ಯಸಭಾ ಸದಸ್ಯರಾಗಿ ಮಾಡಬಾರದು. ಅಷ್ಟೇ ಅಲ್ಲ ಸಂಸತ್‌ನಲ್ಲಿ ಪ್ರಮಾಣ ವಚನ ಮಾಡದಂತೆ ಬಿಜೆಪಿಯವರು ತಡೆಯಬೇಕು. ಇದು ನನ್ನ ಆಗ್ರಹ ಎಂದಿದ್ದಾರೆ. ಇದನ್ನೂ ಓದಿ: ಸರ್‌, ನಾನು ನೂರಾರು ಕೋಟಿಗೆ ಬಾಳ್ತೀನಿ: ಪಾಕ್‌ ಪರ ಘೋಷಣೆ ಕೂಗಿದ್ದ ನಾಶಿಪುಡಿ ಯಾರು?

    ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಜಣ್ಣ, ಸಮಾಜಘಾತುಕ ಕೆಲಸ ಮಾಡುವವರ ವಿರುದ್ಧ ಶೂಟ್‌ಡೌನ್ ಕಾನೂನು ತರಬೇಕು. ಯಾರೇ ಒಬ್ಬರು ಸಮಾಜಘಾತುಕ ಕೆಲಸ ಮಾಡಿದ್ರೆ ಖಂಡಿಸಲೇಬೇಕು ಎಂದು ತಿಳಿಸಿದ್ದಾರೆ.

    ದೇಶದ್ರೋಹಿ ಕೆಲಸ ನಾನೇ ಮಾಡಲಿ, ಇನ್ನೊಬ್ಬನೇ ಮಾಡಲಿ, ಬೇರೆ ದೇಶಗಳಲ್ಲಿ ಹೇಗೆ ತಕ್ಷಣ ಶೂಟ್‌ಡೌನ್ ಮಾಡುತ್ತಾರೋ ಇಲ್ಲಿಯೂ ಶೂಟ್‌ಡೌನ್ ಕಾನೂನು ಜಾರಿಯಾಗಬೇಕು ಎಂದು ಬಲವಾಗಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಕುರಿತು ಕ್ಲೀನ್‌ ಚಿಟ್‌ ಕೊಟ್ಟ ಪ್ರಿಯಾಂಕ್‌ ಖರ್ಗೆ ಕ್ಷಮೆಯಾಚಿಸ್ಬೇಕು: ಸಿ.ಟಿ ರವಿ ಆಗ್ರಹ

  • ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೇಸ್‌; ಪರಪ್ಪನ ಅಗ್ರಹಾರ ಜೈಲು ಸೇರಿದ ನಾಶೀಪುಡಿ

    ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೇಸ್‌; ಪರಪ್ಪನ ಅಗ್ರಹಾರ ಜೈಲು ಸೇರಿದ ನಾಶೀಪುಡಿ

    ಬೆಂಗಳೂರು: ವಿಧಾನಸೌಧ ಅವರಣದಲ್ಲಿ ಪಾಕಿಸ್ತಾನ ಜಿಂದಾಬಾದ್ (Pakistan Zindabad) ಘೋಷಣೆ ಕೂಗಿದ ಪ್ರಕರಣದಲ್ಲಿ ಆರೋಪಿ ನಾಶೀಪುಡಿಯನ್ನ ವಿಧಾನಸೌಧ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳಿಸಿಕೊಟ್ಟಿದ್ದಾರೆ.

    ಆರೋಪಿ ನಾಶೀಪುಡಿಯನ್ನ (Mohammed Shafi Nashipudi) ಎರಡನೇ ಬಾರಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದರು. ಮೊದಲನೇ ಬಾರಿ ಪಾಕ್ ಪರ ಘೋಷಣೆ ಕೂಗಿದ್ದ ಕಾರಣ ಪ್ರಕರಣ ಸಂಬಂದ ವಿಧಾನಸೌಧ ಪೊಲೀಸರು ಮುನಾವರ್ ಅಹ್ಮದ್‌, ಇಲ್ತಿಯಾಸ್, ನಾಶೀಪುಡಿಯನ್ನ ಬಂಧಿಸಿ ಮೂವರನ್ನ ಎರಡು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ಮಾಡಿದ್ದರು. ನಿನ್ನೆ ಇಲ್ತಿಯಾಸ್ ಹಾಗೂ ಮುನಾವರ್ ಅಹ್ಮದ್‌ನನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಬಿಡಲಾಗಿತ್ತು. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಕುರಿತು ಕ್ಲೀನ್‌ ಚಿಟ್‌ ಕೊಟ್ಟ ಪ್ರಿಯಾಂಕ್‌ ಖರ್ಗೆ ಕ್ಷಮೆಯಾಚಿಸ್ಬೇಕು: ಸಿ.ಟಿ ರವಿ ಆಗ್ರಹ

    ಪ್ರಕರಣದ ಎ1 ಆರೋಪಿ ನಾಶೀಪುಡಿಯನ್ನ ಹೆಚ್ಚಿನ ವಿಚಾರಣೆಗೆ ಅವಶ್ಯಕತೆ ಇದೇ ಎನ್ನುವ ಕಾರಣಕ್ಕೆ ಒಂದು ದಿನ ಹೆಚ್ಚುವರಿಯಾಗಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದರು. ಘಟನೆ ಸಂಬಂದ ಆರೋಪಿ ನಾಶೀಪುಡಿಯ ವಿಚಾರಣೆ ಮುಗಿಸಿ ಇಂದು 12 ಗಂಟೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.

    ವಿಧಾನಸೌಧ ಪೊಲೀಸರ ತನಿಖೆ ಪೂರ್ಣವಾಗಿದ್ದರಿಂದ ಕಸ್ಟಡಿಗೆ ಕೇಳದ ಕಾರಣ ಪ್ರಕರಣದ ಎ1 ಆರೋಪಿ ನಾಶೀಪುಡಿಯನ್ನ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದು ನಿಜ : ಉನ್ನತ ಪೊಲೀಸ್‌ ಮೂಲಗಳು

  • ಪಾಕ್‌ ಪರ ಘೋಷಣೆ ಕುರಿತು ಕ್ಲೀನ್‌ ಚಿಟ್‌ ಕೊಟ್ಟ ಪ್ರಿಯಾಂಕ್‌ ಖರ್ಗೆ ಕ್ಷಮೆಯಾಚಿಸ್ಬೇಕು: ಸಿ.ಟಿ ರವಿ ಆಗ್ರಹ

    ಪಾಕ್‌ ಪರ ಘೋಷಣೆ ಕುರಿತು ಕ್ಲೀನ್‌ ಚಿಟ್‌ ಕೊಟ್ಟ ಪ್ರಿಯಾಂಕ್‌ ಖರ್ಗೆ ಕ್ಷಮೆಯಾಚಿಸ್ಬೇಕು: ಸಿ.ಟಿ ರವಿ ಆಗ್ರಹ

    ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿರುವ ಸಂಬಂಧ ನಿಮ್ಮದೇ ಸರ್ಕಾರದ ಇಲಾಖೆ ಮೂವರನ್ನು ಬಂಧಿಸಿದೆ. ಆದರೆ ನೀವು ಕ್ಲೀನ್ ಚಿಟ್ ಕೊಟ್ಟಿದ್ರಿ. ಹೀಗಾಗಿ ನೀವು ಸಾರ್ವಜನಿಕ ಕ್ಷಮೆಯಾಚನೆ ಮೂಲಕ ನಿಮ್ಮ ಗೌರವ ಹೆಚ್ಚಿಸಿಕೊಳ್ಳಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಮಾಜಿ ಸಚಿವ ಸಿ.ಟಿ. ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.

    ಪಾಕ್ ಪರ ಘೋಷಣೆ ಆರೋಪದಡಿ ಮೂವರ ಬಂಧನ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನ್ಮಾನ್ಯ ಪ್ರಿಯಾಂಕ್ ಖರ್ಗೆ (Priyank Kharge) ಅವರೇ ತನಿಖಾಧಿಕಾರಿಯಂತೆ ಹೇಳಿಕೆ ಕೊಟ್ಟಿದ್ದರು. ಇಂದು ಖಾಸಗಿ FSL ವರದಿ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ ಕ್ಲೀನ್ ಚಿಟ್ ಕೊಡಲು ಸಾಧ್ಯವಾಗಲಿಲ್ಲ ಅಂತಾ ಅನ್ನಿಸುತ್ತದೆ. ಸಮಗ್ರ ತನಿಖೆಗೆ ಪೊಲೀಸರನ್ನು ಒತ್ತಾಯಿಸುತ್ತೇನೆ ಎಂದರು. ಇದನ್ನೂ ಓದಿ: ಆರೋಪಿಗಳ ಪತ್ತೆಗೆ ಭಾರೀ ಕಸರತ್ತು – 15 ಜನರ ಧ್ವನಿ ಪರೀಕ್ಷೆ ನಡೆಸಿದ್ದ ಎಫ್‌ಎಸ್‌ಎಲ್

    ಕಾಂಗ್ರೆಸ್ (Congress) ಗೆಲುವನ್ನು ಪಾಕಿಸ್ತಾನದ (Pro-Pakistan Slogan) ಜೊತೆ ಯಾಕೆ ಸಮೀಕರಿಸಿದರು?, ಇದರ ಹಿಂದೆ ಇರುವ ಸಂಘಟನೆ ಯಾವುದು?, ಕೂಗಲು ಪ್ರಚೋದನೆ ಎಲ್ಲಿಂದ ಬಂತು?, ಭಯೋತ್ಪಾದನೆಗೆ ಬೀಜಾಂಕುರ ಆಗುವುದೇ ಮಾನಸಿಕತೆಯಿಂದ, ಮಾನಸಿಕ ಒಲವು ವ್ಯಕ್ತಪಡಿಸುತ್ತಾ ಭಯೋತ್ಪಾದಕರಾಗಿ ಬದಲಾಗುತ್ತಾರೆ. ಮದರಸಾಗಳಿಂದ ತಾಲಿಬಾನ್ ಸೃಷ್ಟಿಯಾಗುತ್ತಿದೆ. ಪಾಕಿಸ್ತಾನ ಪರ ಕೂಗಲು ಎಲ್ಲಿಂದ ಪ್ರಚೋದನೆ ಸಿಕ್ಕಿತು ಎಂಬ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

    ಬೇರು ಸಹಿತ ಕಿತ್ತು ಹಾಕಿದಿದ್ರೆ ಸರಣಿ ಸ್ಫೋಟಗಳೂ ಪ್ರಾರಂಭವಾಗಬಹುದು. ದೇಶದ್ರೋಹಿಗಳು ರಕ್ತ ಬೀಜಾಸುರನಂತೆ ಬೆಳೆಯುವ ಸಾಧ್ಯತೆಗಳಿವೆ. ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಈಗೇನು ಹೇಳುತ್ತೀರಿ?. ನೀವು ಸಾರ್ವಜನಿಕ ಕ್ಷಮೆಯಾಚಿಸಬೇಕು. ಎಲ್ಲದಕ್ಕೂ ತನಿಖಾಧಿಕಾರಿಯಾಗುವ ಆತುರದ ಕ್ರಮ ಒಳ್ಳೆಯದಲ್ಲ. ನಿಮ್ಮದೇ ಸರ್ಕಾರದ ಇಲಾಖೆ ಇಂದು ಮೂವರನ್ನು ಬಂಧಿಸಿದೆ, ಆದರೆ ನೀವು ಕ್ಲೀನ್ ಚಿಟ್ ಕೊಟ್ಟಿದ್ರಿ. ಈ ಹಿನ್ನೆಲೆಯಲ್ಲಿ ನೀವು ಸಾರ್ವಜನಿಕವಾಗಿ ಕ್ಷಮೆ ಕೇಳುವ ಮೂಲಕ ನಿಮ್ಮ ಗೌರವ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.

    ಮಾಧ್ಯಮದಲ್ಲಿ ಪ್ರಸಾರವಾಗಿದ್ದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯಿತು. ಪತ್ರಕರ್ತರನ್ನೇ ಬಳಸಿ ಮುಚ್ಚಿ ಹಾಕುವ ಪ್ರಯತ್ನ ನಡೆಸಿದರು. ಹಾವೇರಿ ಬಿಜೆಪಿ ಘಟಕ ನಾಶಿಪುಡಿ ಮೇಲೆ ದೂರು ನೀಡಿತ್ತು. ಮುಚ್ಚಿ ಹಾಕುವ ಪ್ರಯತ್ನದ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು. ಹಮಾಸ್ ಪರವಾಗಿ ಇಲ್ಲಿ ಪ್ರತಿಭಟನೆ ಆದಾಗ ಅವರ ಮೇಲೆ ಯಾವುದೇ ಕೇಸ್ ಆಗಲಿಲ್ಲ. ಇಂದು ಬಿಜೆಪಿ ತಿರಂಗಾ ಯಾತ್ರೆಗೆ ಅನುಮತಿ ಕೊಡಲಿಲ್ಲ. ಇದೆಲ್ಲವೂ ಸರ್ಕಾರದ ಮೇಲೆ ಅಪನಂಬಿಕೆ ಹುಟ್ಟು ಹಾಕುತ್ತದೆ ಎಂದು ಹೇಳಿದರು.

    ಎಫ್ ಎಸ್ ಎಲ್ ವರದಿ ದೊಡ್ಡ ಕಬ್ಬಿಣದ ಕಡಲೆ ಅಲ್ಲ. ನಾಸೀರ್ ಹುಸೇನ್ ವರ್ತನೆಯಲ್ಲಿ ಇಂತಹ ಘಟನೆ ಆಗಬಾರದಿತ್ತು ಎಂಬ ನೋವು ವ್ಯಕ್ತವಾಗಲಿಲ್ಲ. ಪಾಕಿಸ್ತಾನದ ಜೊತೆ ಕಾಂಗ್ರೆಸ್ ಗೆಲುವನ್ನು ಸಮೀಕರಿಸಿದ್ದು ಯಾಕೆ?, ಕಾಂಗ್ರೆಸ್ ಗೆದ್ದಾಗ ಪಾಕಿಸ್ತಾನ ಬೆಂಬಲಿಗರಿಗೆಲ್ಲಾ ಉತ್ಸಾಹ ಬಂದುಬಿಡುತ್ತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದರು.

  • ಪಾಕ್‌ ಪರ ಘೋಷಣೆ ಆರೋಪ; ಪೊಲೀಸರಿಂದ ನಾಸೀರ್‌ ಹುಸೇನ್‌ ಬೆಂಬಲಿಗನ ವಿಚಾರಣೆ

    ಪಾಕ್‌ ಪರ ಘೋಷಣೆ ಆರೋಪ; ಪೊಲೀಸರಿಂದ ನಾಸೀರ್‌ ಹುಸೇನ್‌ ಬೆಂಬಲಿಗನ ವಿಚಾರಣೆ

    – ನನ್ನ ತಾಯಿ ಮೇಲಿನ ಆಣೆಗೂ ದೇಶದ್ರೋಹಿ ಘೋಷಣೆ ಕೂಗಿಲ್ಲ ಎಂದ ಶಫಿ

    ಹಾವೇರಿ: ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ ‘ಪಾಕಿಸ್ತಾನ ಜಿಂದಾಬಾದ್‌’ (Pakistan Zindabad) ಘೋಷಣೆ ಕೂಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್‌ ಬೆಂಬಲಿಗನನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ.

    ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ವಿಧಾನಸೌಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ನಿನ್ನೆ ತಡರಾತ್ರಿ ಮಹಮ್ಮದ್‌ ಶಫಿ ನಾಶಿಪುಡಿ ಎಂಬ ವ್ಯಕ್ತಿಯನ್ನು ಧ್ವನಿ ಪರೀಕ್ಷೆಗಾಗಿ ಪೊಲೀಸರು ಕರೆದೊಯ್ದಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಆರೋಪ – ಬಿಜೆಪಿ ನಾಯಕರ ವಿರುದ್ಧ ನಲಪಾಡ್ ದೂರು

    ಮಹಮ್ಮದ್‌ ಶಫಿ ನಾಶಿಪುಡಿ ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್‌ ಅವರ ಬೆಂಬಲಿಗ. ಬ್ಯಾಡಗಿ ಮೆಣಸಿಕಾಯಿ ವರ್ತಕರಾಗಿದ್ದಾರೆ. ಬ್ಯಾಡಗಿ ತಾಲೂಕು ಮೋಟೆಬೆನ್ನೂರ ಬಳಿಯಿರುವ ತಮ್ಮ SAN ಕೋಲ್ಡ್ ಸ್ಟೋರೇಜ್‌ನಲ್ಲಿದ್ದರು. ಅಲ್ಲಿಂದ ಪೊಲೀಸರು ವಿಚಾರಣೆಗೆ ಕರೆತಂದಿದ್ದಾರೆ.

    ಧ್ವನಿ ಹೋಲಿಕೆ ವಿಚಾರಣೆ ಹಿನ್ನೆಲೆಯಲ್ಲಿ‌ ವಿಚಾರಣೆ ನಡೆಸಲಾಗುತ್ತಿದೆ. ಪಾಕಿಸ್ತಾನದ ಪರ ಫೋಷಣೆ ಕೂಗಿದ್ದಾರೆಂದು ಮಹಮ್ಮದ್ ಶಫಿ ವಿರುದ್ಧ ಬ್ಯಾಡಗಿ ಬಿಜೆಪಿ ಮುಖಂಡರು ಆರೋಪ ಮಾಡಿದ್ದರು. ಇದನ್ನೂ ಓದಿ:

    ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿರುವ ಮಹಮ್ಮದ್‌ ಶಫಿ, ನಾನು ನಾಸೀರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದೇನೆ. ನನ್ನ ತಾಯಾಣೆಗೂ ಆ ರೀತಿ ದೇಶದ್ರೋಹಿ ಘೋಷಣೆ ಕೂಗಿಲ್ಲ. ಯಾವ ತನಿಖೆಗೂ ಸಿದ್ಧನಿದ್ದೇನೆ ಎಂದು ತಿಳಿಸಿದ್ದರು.