Tag: PRO

  • ಬೆಡ್ ಬ್ಲಾಕ್ ದಂಧೆ – ಖಾಸಗಿ ಆಸ್ಪತ್ರೆಗಳ ಪಿಆರ್‍ಓಗಳು, ಸಣ್ಣ ಆಸ್ಪತ್ರೆಗಳ ವೈದ್ಯರು ನೇರ ಭಾಗಿ

    ಬೆಡ್ ಬ್ಲಾಕ್ ದಂಧೆ – ಖಾಸಗಿ ಆಸ್ಪತ್ರೆಗಳ ಪಿಆರ್‍ಓಗಳು, ಸಣ್ಣ ಆಸ್ಪತ್ರೆಗಳ ವೈದ್ಯರು ನೇರ ಭಾಗಿ

    ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿದೆ. ಬ್ಲಾಕಿಂಗ್ ದಂಧೆಯಲ್ಲಿ ಇಬ್ಬರು ಮಾತ್ರ ಅಲ್ಲ 17 ಜನ ನೇರವಾಗಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಭಾಗಿಯಾಗಿರುವ ವಿಚಾರ ಸಿಸಿಬಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ಬಂಧಿತ ಆರೋಪಿಗಳಾದ ನೇತ್ರಾವತಿ ಮತ್ತು ರೋಹಿತ್ ಅವರ ಕರೆ ಡಿಟೇಲ್ ಪರಿಶೀಲಿಸಿದಾಗ ಸ್ಫೋಟಕ ವಿಚಾರಗಳು ಸಿಸಿಬಿ ಮೂಲಗಳಿಂದ ಲಭ್ಯವಾಗಿದೆ.

    ಕೆಲವು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಯ ಪಿಆರ್‍ಒಗಳು, ಸಣ್ಣ ಸಣ್ಣ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಈ ದಂಧೆಯಲ್ಲಿ ಭಾಗಿಯಾಗಿದ್ದರು. ವಾರ್ ರೂಂನ ಜೊತೆಯಲ್ಲಿ ನೇರವಾಗಿ ಸಂಪರ್ಕ ಹೊಂದಿದ್ದ ಇವರು ಆರೋಪಿಗಳಿಗೆ ನೇರವಾಗಿ ಕರೆ ಮಾಡಿದರ ಬಗ್ಗೆಯೂ ಮಾಹಿತಿಗಳು ಲಭ್ಯವಾಗಿದೆ.

    ಕಳೆದ ರಾತ್ರಿ ಜಯನಗರ ಪೊಲೀಸ್ ಠಾಣೆಗೆ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿ ಬೆಡ್ ಬ್ಲಾಕಿಂಗ್ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸಂಜೆಯ ವೇಳೆಗೆ ಮತ್ತಷ್ಟು ಆರೋಪಿಗಳು ಬಂಧನವಾಗುವ ಸಾಧ್ಯತೆಯಿದೆ.

  • ಪಿಆರ್‌ಒ ವಾರ್ – ರಮೇಶ್ ಜಾರಕಿಹೊಳಿಗೆ ತಿರುಗೇಟು ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್

    ಪಿಆರ್‌ಒ ವಾರ್ – ರಮೇಶ್ ಜಾರಕಿಹೊಳಿಗೆ ತಿರುಗೇಟು ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ನಾನು ನನ್ನ ಮತದಾರರಿಗೆ ಮಾತ್ರವೇ ಪಿಆರ್‌ಒ (ಪಬ್ಲಿಕ್ ರಿಲೇಷನ್ ಆಫೀಸರ್)ಎನ್ನುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪೌರಾಡಳಿತ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಸಚಿವರ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಐದು ವರ್ಷದಿಂದ ಯಾವ ಪಿಆರ್‌ಒ , ಯಾವುದಕ್ಕೇ ಪಿಆರ್‌ಒ ಆಗಿದ್ದೆ? ಐದು ವರ್ಷದಿಂದ ಪಿಆರ್‌ಒ ಆಗಿದ್ದೀನಿ ಎಂದು ಹೇಳಿದ್ದಾರೆ. ನಾನು ಸರ್ಕಾರಿ ಕೆಲಸದಲ್ಲಿದ್ದೀನಾ ಅವರ ಪಿಆರ್‌ಒ ಆಗಲು. ನಾನು ಒಬ್ಬ ಶಾಸಕಿಯಾಗಿದ್ದೇನೆ. ರಾಜಕೀಯ ಶಾಶ್ವತ ಅಲ್ಲ. ಶತ್ರುಗಳಾಗಿರುವಾಗ ನಡೆದ ಪ್ರಸಂಗಗಳನ್ನು ಬಿಟ್ಟು ಬಿಡಬೇಕು. ನಾನು ಹಳೆಯ ಕಹಿ ನೆನಪುಗಳನ್ನು ಮರೆಯುತ್ತಿದ್ದೇನೆ. ನಾವು ಈಗ ಅಭಿವೃದ್ಧಿ ಬಗ್ಗೆ ಮಾತ್ರವೇ ಮಾತನಾಡಬೇಕು. ನಾವು ಒಂದೇ ಪಕ್ಷದಲ್ಲಿದ್ದೇವೆ ಎಂದು ತಿಳಿಸಿದರು.

    ನಾನು ನನ್ನ ಕ್ಷೇತ್ರದ ಮತದಾರರ ಪಿಆರ್‌ಒ . ಮಾನ ಮರ್ಯಾದೆ ಇದ್ದವರು, ಹಾಗೆಲ್ಲ ಮಾತನಾಡಬಾರದು. ನನಗೂ ಸಹಿಸಿಕೊಂಡು, ಸಹಿಸಿಕೊಂಡು ಸಾಕಾಗಿದೆ. ಪಿಆರ್‌ಒ ಎಂದು ಹೇಳುವುದು ಸರಿಯಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಿ. ಹೀಗೆ ಪದೇ ಪದೇ ಮಾತನಾಡಬಾರದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

    ರಮೇಶ್ ಜಾರಕಿಹೊಳಿ ಹೇಳಿದ್ದೇನು?
    ಕಳೆದ ಐದು ವರ್ಷದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಪಿಆರ್‌ಒ ಆಗಿದ್ದರು. ಈಗ ಅವರು ಯಾಕಿಲ್ಲ? ಉಸ್ತುವಾರಿ ಸಚಿವರಾಗಿ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ನಾನೇ ಹೋಗಬೇಕೆಂದೇನಿಲ್ಲ. ಕಳೆದ ವರ್ಷವೂ ಸಿದ್ದರಾಮಯ್ಯರನ್ನು ಸ್ವಾಗತ ಮಾಡಲು ಹೋಗಿರಲಿಲ್ಲ. ಉಸ್ತುವಾರಿ ಸಚಿವ ಶೋ ಮಾಡೋದು ಅಲ್ಲ. ಅದು ಕೆಲಸ ಮಾಡುವುದು. ನಾನು ಪ್ರಚಾರ ಪ್ರಿಯನಲ್ಲವೆಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv