Tag: PRK

  • ಅಪ್ಪು ಕಂಡ ಕನಸು: ನನಸಾಗಿಸುತ್ತಿದ್ದಾರೆ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್

    ಅಪ್ಪು ಕಂಡ ಕನಸು: ನನಸಾಗಿಸುತ್ತಿದ್ದಾರೆ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್

    ಪ್ಪು (Appu) ಇಲ್ಲ. ಆದರೆ ಅವರ ಕನಸುಗಳು ಇನ್ನೂ ಜೀವಂತವಾಗಿವೆ. ಒಂದಾ ಎರಡಾ? ಏನೇನೊ ಮಾಡಬೇಕೆಂದು ಅವರು ಬಯಸಿದ್ದರು. ಯಾವ್ಯಾವುದೋ ಸಿನಿಮಾಗಳನ್ನು ಮಾಡುವ ಬಯಕೆ ಹೊತ್ತಿದ್ದರು. ಆದರೆ ಅದು ಮುಗಿಯಲಿಲ್ಲ. ಆದರೆ ಅದನ್ನು ಪೂರ್ತಿ ಮಾಡಲು ಸಜ್ಜಾಗಿದ್ದಾರೆ ಪತ್ನಿ ಅಶ್ವಿನಿ (Ashwini Puneet Raj Kumar). ಪತಿಯ ಒಂದೊಂದೆ ಆಸೆ, ಒಂದೊಂದೇ ಕನಸು, ಒಂದೊಂದೇ ಲೋಕವನ್ನು ಜನರ ಮುಂದಿಡಲು ಸಜ್ಜಾಗಿದ್ದಾರೆ. ಅದಕ್ಕಾಗಿ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ.

    ಅಪ್ಪು ಮಹಾ ಕನಸುಗಳನ್ನು ಹೊತ್ತಿದ್ದರು. ಒಂದೊಂದೇ ಹೆಜ್ಜೆಗಳನ್ನು ಇಡುತ್ತಿದ್ದರು. ಅಭಿನಯದ ಜೊತೆಜೊತೆಗೆ ಬೇರೇನೊ ಮಾಡಬೇಕೆನ್ನುವ ಆಸೆ ಇಟ್ಟುಕೊಂಡಿದ್ದರು. ಅದಕ್ಕಾಗಿಯೇ ಅವರು ಮೊಟ್ಟ ಮೊದಲು ಆರಂಭಿಸಿದ್ದು ಪಿಆರ್‌ಕೆ (PRK) ಬ್ಯಾನರ್. ಪಾರ್ವತಮ್ಮ ರಾಜ್‌ಕುಮಾರ್ ಬ್ಯಾನರ್. ಆ ಬ್ಯಾನರ್‌ನಿಂದ ಅವರು ಅನೇಕ ಸಿನಿಮಾಗಳನ್ನು ಈಗಾಗಲೇ ಮಾಡಿದ್ದಾರೆ. ಅವರ ಉದ್ದೇಶ ಇದ್ದದ್ದು ಒಂದೇ. ಹೊಸಬರಿಗೆ ಅವಕಾಶ ಕೊಡಬೇಕು. ಹೊಸ ನಿರ್ದೇಶಕರು, ನಟ ನಟಿಯರು, ತಂತ್ರಜ್ಞರು ಎಲ್ಲರಿಗೂ ಬಣ್ಣದಲೋಕದಲ್ಲಿ ಬೆಳಗುವ ಅದೃಷ್ಟ ನೀಡಬೇಕು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದರು. ಅದಕ್ಕಾಗಿಯೇ ಅನೇಕ ಸಿನಿಮಾ ನಿರ್ಮಿಸಿದರು. ಇದನ್ನೂ ಓದಿ:ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ

    ಪಿಆರ್‌ಕೆ ಬ್ಯಾನರ್‌ನಿಂದ ಈಗಾಗಲೇ ಅನೇಕ ಸಿನಿಮಾ ಹೊರ ಬಂದಿವೆ. ಹೊಸ ಹೊಸ ನಿರ್ದೇಶಕರು ಹುಟ್ಟಿಕೊಂಡಿದ್ದಾರೆ. ಹೊಸ ಹೊಸ ನಟ ನಟಿಯರು ಹೊಳೆಯುತ್ತಿದ್ದಾರೆ. ಹೊಸ ಹೊಸ ತಂತ್ರಜ್ಞರು ಮೆರೆಯುತ್ತಿದ್ದಾರೆ. ಅವರಿಗೆಲ್ಲ ಅಣ್ಣನಂತೆ ನಿಂತಿದ್ದು ಪುನೀತ್ ರಾಜ್‌ಕುಮಾರ್ (Puneet Raj Kumar) . ಮೊಟ್ಟ ಮೊದಲು ಅವರು ಕತೆ ಕೇಳುತ್ತಿದ್ದರು. ಕತೆಯೇ ಜೀವಾಳ ಎಂದು ಕಾಸು ಸುರಿಯುತ್ತಿದ್ದರು. ಸಿನಿಮಾದ ಸೋಲು ಗೆಲುವು ಮುಖ್ಯ ಅಲ್ಲ. ಆಯಾ ಸಿನಿಮಾ ಜನರಿಗೆ ಮುಟ್ಟಿಸುವ ಸಂದೇಶ ಮುಖ್ಯ ಎನ್ನುತ್ತಿದ್ದರು. ಇನ್ನೂ ಅನೇಕ ಸಿನಿಮಾ ಮಾಡಬೇಕಿತ್ತು. ಅಷ್ಟರಲ್ಲಿ ಹೋಗಿ ಬಿಟ್ಟರು. ಈಗ ಪತಿ ಕನಸುಗಳನ್ನು ಈಡೇರಿಸಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಜ್ಜಾಗಿದ್ದಾರೆ. ಅಖಾಡಕ್ಕೆ ಇಳಿದಿದ್ದಾರೆ.

    ಅಪ್ಪು ಹೋಗಿ ಎರಡು ವರ್ಷಗಳಾದವು. ಆ ನೋವು ಈಗಲೂ ಎಲ್ಲರನ್ನೂ ಕಾಡುತ್ತಿದೆ. ಹಿಂಡುತ್ತಿದೆ. ಆದರೆ ಪತಿ ಕನಸುಗಳನ್ನು ಅಲ್ಲಲ್ಲೇ ಬಿಡಬಾರದಲ್ಲವೆ ? ಅದಕ್ಕಾಗಿಯೇ ಅಶ್ವಿನಿ ಅಂದೇ ಗಟ್ಟಿ ನಿರ್ಧಾರಕ್ಕೆ ಬಂದಿದ್ದರು. ಅಪ್ಪು ಏನೇನು ಆಸೆ ಪಟ್ಟಿದ್ದರೋ, ಏನೇನೊ ಸಿನಿಮಾಗಳನ್ನು ಮಾಡಬೇಕೆಂದು ತೀರ್ಮಾನಿಸಿದ್ದರೊ, ಅದನ್ನೆಲ್ಲ ಈಗ ಇವರು ಮಾಡಲು ತಯಾರಾಗಿದ್ದಾರೆ. ಪಿಆರ್‌ಕೆ ಬ್ಯಾನರ್ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅದರ ಮೊದಲ ಮೆಟ್ಟಿಲಾಗಿ ಎರಡು ಸಿನಿಮಾ ತಯಾರಾಗಿವೆ. ಬಿಡುಗಡೆಗೆ ಸಿದ್ಧವಾಗುತ್ತಿವೆ. ಆಚಾರ್ ಅಂಡ್ ಕೋ ಹಾಗೂ ಓಟು ಸಿನಿಮಾಗಳು ಜನರ ಮುಂದೆ ಬರಲು ಸಜ್ಜಾಗಿವೆ.

    ಇನ್ನೊಂದು ಕಡೆ ಅನೇಕ ಹೊಸಬರ ಕತೆಗಳನ್ನು ಕೇಳುತ್ತಿದ್ದಾರೆ. ಈಗಾಗಲೇ ಹೆಚ್ಚು ಕಮ್ಮಿ ಹದಿನೈದು ಕತೆಗಳನ್ನು ಕೇಳಿದ್ದಾರೆ. ಎಲ್ಲರೂ ಹೊಸಬರೇ. ಯಾರನ್ನೂ ಅವರು ನಿರಾಸೆ ಮಾಡುವುದಿಲ್ಲ. ಯಾವ್ಯಾವುದೋ ಕನಸು ಹೊತ್ತು ಬಂದಿರುವ ಆ ಜೀವಗಳನ್ನು ಪ್ರೀತಿಯಿಂದ ಕೂಡಿಸಿ ಕತೆ ಕೇಳುತ್ತಾರೆ. ಕೊನೆಗೆ ಅಂತಿಮ ನಿರ್ಧಾರಕ್ಕೆ ಬರುತ್ತಾರೆ. ಈ ಹದಿನೈದು ಕತೆಗಳಲ್ಲಿ 2 ಕತೆಯನ್ನು ಮಾತ್ರ ಅವರು ಓಕೆ ಮಾಡಿದ್ದಾರೆ. ಅದು ಯಾವುದೆಂದು ಗೊತ್ತಾಗಿಲ್ಲ. ಅದರ ಶೂಟಿಂಗ್ ಶುರು ಮಾಡುವ ಎಲ್ಲ ಸಿದ್ದತೆಗಳು ನಡೆಯುತ್ತಿವೆ. ಒಂದು ಹಂತ ಬಂದ ಮೇಲೆ ಆ ಸಿನಿಮಾ ಅನೌನ್ಸ್  ಮಾಡಲಿದ್ದಾರೆ.

    ಇನ್ನೊಂದು ಕಡೆ ಪಕ್ಕಾ ಹೊಸಬರ ತಂಡದ ಜತೆ ಸಿನಿಮಾ ಮಾಡಲು ತೀರ್ಮಾನಿಸಿದ್ದಾರೆ. ಮತ್ತೊಂದು ಅನುಭವಿ ತಂಡಕ್ಕೂ ಬಂಡವಾಳ ಹಾಕಲಿದ್ದಾರೆ. ಈ ವರ್ಷದ ಕೊನೆಗೆ ಎರಡೂ ಸಿನಿಮಾಗಳ ಮುಹೂರ್ತ ನಡೆಯಲಿದೆ. ಮುಂದಿನ ವರ್ಷ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಶ್ವಿನಿ ಪುನೀತ್ ಈಗ ಪಿಆರ್‌ಕೆ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡು ಹೊಸ ಹೆಜ್ಜೆ ಇಟ್ಟಿದ್ದಾರೆ. ಪತಿ ಕಂಡಿದ್ದ ಅನೇಕ ಕನಸುಗಳನ್ನು ಈಡೇರಿಸಲು ಏನೇನು ಬೇಕೊ ಎಲ್ಲವನ್ನೂ ಮಾಡುತ್ತಿದ್ದಾರೆ.

  • ವೈರಲ್ ಆಯ್ತು ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಫೋಟೋ

    ವೈರಲ್ ಆಯ್ತು ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಫೋಟೋ

    ಪುನೀತ್ ರಾಜ್ ಕುಮಾರ್ ನಿಧನದ ನಂತರ ಆ ಕುಟುಂಬ ಮತ್ತು ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವುದು ಪುನೀತ್ ಪತ್ನಿ ಅಶ್ವಿನಿ ಅವರು. ಅಪ್ಪು ಬದುಕಿದ್ದಾಗಲೇ ಪಿ.ಆರ್.ಕೆ ಪ್ರೊಡಕ್ಷನ್ ಹೌಸ್ ಮತ್ತು ಆಡಿಯೋ ಕಂಪೆನಿಗಳ ವ್ಯವಹಾರವನ್ನು ಅಶ್ವಿನಿ ಅವರೇ ನೋಡಿಕೊಳ್ಳುತ್ತಿದ್ದರು. ಇದೀಗ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಪುನೀತ್ ಅವರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಿನವೂ ಹೊಸ ಹೊಸ ನಿರ್ದೇಶಕರನ್ನು ಭೇಟಿ ಮಾಡುತ್ತಲೇ ಇರುತ್ತಾರಂತೆ ಅಶ್ವಿನಿ.

    ಹೊಸ ಸಿನಿಮಾಗಳ ತಯಾರಿ, ಸಿನಿಮಾ ಸಂಬಂಧಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಅಶ್ವಿನಿ ಅವರು ಬೆಂಗಳೂರಿನ ಗಾಂಧಿನಗರದಲ್ಲಿರುವ ತಮ್ಮ ಆಫೀಸಿಗೆ ನಿತ್ಯವೂ ಬರುತ್ತಾರೆ. ಆ ಆಫೀಸಿನಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರ ಫೋಟೋವನ್ನು ತಮ್ಮ ಪಕ್ಕದಲ್ಲೇ ಇಟ್ಟುಕೊಂಡಿದ್ದಾರೆ. ಹೀಗಾಗಿ ಡಾ.ರಾಜ್ ಕುಟುಂಬದ ಅಭಿಮಾನಿಗಳು ‘ಸೊಸೆ ಆಫ್ ಪಾರ್ವತಮ್ಮ’ ಟ್ಯಾಗ್ ಲೈನ್ ನಲ್ಲಿ ಆ ಫೋಟೋವನ್ನು ವೈರಲ್ ಮಾಡಿದ್ದಾರೆ. ಇದನ್ನೂ ಓದಿ : ಚಾಮುಂಡಿ ದರ್ಶನ ಮುಗಿಸಿ ಮೈಸೂರಿನಲ್ಲಿ ಉಪಾಧ್ಯಕ್ಷನನ್ನು ಭೇಟಿಯಾದ ಶಿವರಾಜ್ ಕುಮಾರ್

    ಡಾ.ರಾಜ್ ಕುಮಾರ್ ಅವರ ಶಕ್ತಿಯಾಗಿ ನಿಂತುಕೊಂಡು ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ ಸಾಕಷ್ಟು ಸಿನಿಮಾಗಳನ್ನು ಮಾಡಿದರು ಪಾರ್ವತಮ್ಮ ರಾಜ್ ಕುಮಾರ್. ಕನ್ನಡ ಸಿನಿಮಾಗಳಿಗೆ ಒಂದು ಘನತೆ ತಂದುಕೊಟ್ಟರು. ಪುನೀತ್ ರಾಜ್ ಕುಮಾರ್ ಅವರಿಗೂ ಅಶ್ವಿನಿ ಅವರು ಶಕ್ತಿಯಾಗಿಯೇ ನಿಂತುಕೊಂಡು ಪಿ.ಆರ್.ಕೆ ಪ್ರೊಡಕ್ಷನ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸಬರನ್ನು ಪರಿಚಯಿಸಿದರು. ಹೀಗಾಗಿ ಪಾರ್ವತಮ್ಮನವರನ್ನು ಅಶ್ವಿನಿ ಅವರಲ್ಲಿ ಕಾಣುತ್ತಿದ್ದಾರೆ ಅಭಿಮಾನಿಗಳು.

    Live Tv

  • ಪುನೀತ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರ ನಿರ್ದೇಶಕನಿಗೆ ಟಾಲಿವುಡ್ ನಿಂದ ಮೆಗಾ ಆಫರ್

    ಪುನೀತ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರ ನಿರ್ದೇಶಕನಿಗೆ ಟಾಲಿವುಡ್ ನಿಂದ ಮೆಗಾ ಆಫರ್

    ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ ಬ್ಯಾನರ್ ನಿಂದ ಮೂಡಿ ಬಂದಿರುವ “ಫ್ಯಾಮಿಲಿ ಪ್ಯಾಕ್” ಚಿತ್ರ ನಿರ್ದೇಶಕನಿಗೆ ಟಾಲಿವುಡ್ ನಿಂದ ಮೆಗಾ ಆಫರ್ ಬಂದಿದೆ. ಟಾಲಿವುಡ್ ನ ಎರಡು ನಿರ್ಮಾಣ ಸಂಸ್ಥೆಗಳು ನಿರ್ದೇಶಕ ಅರ್ಜುನ್ ಕುಮಾರ್ ಗೆ ಸಿನಿಮಾ ಮಾಡುವಂತೆ ಆಹ್ವಾನ ನೀಡಿವೆ. ಈ ಬಗ್ಗೆ ನಿರ್ದೇಶಕರು ಪ್ರತಿಕ್ರಿಯಿಸಿ, “ಎರಡು ನಿರ್ಮಾಣ ಸಂಸ್ಥೆಗಳು ತಮಗೆ ಸಿನಿಮಾ ಮಾಡುವಂತೆ ಕೇಳಿವೆ. ಆದರೆ, ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ. ಈಗಲೇ ಅದೆಲ್ಲವನ್ನು ನಾನು ರಿವೀಲ್ ಮಾಡುವುದಿಲ್ಲ. ಸದ್ಯ ಪಿಆರ್​ಕೆ ಸಂಸ್ಥೆ ವತಿಯಿಂದ ನಿರ್ಮಾಣವಾಗಿರುವ ಫ್ಯಾಮಿಲಿ ಪ್ಯಾಕ್ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಅದೇ ಖುಷಿಯ ವಿಚಾರ” ಅಂತಾರೆ. ಇದನ್ನೂ ಓದಿ : ಫೆ.27ಕ್ಕೆ ಡಾ.ಅಂಬರೀಶ್ ಸ್ಮಾರಕ ಶಂಕು ಸ್ಥಾಪನೆ : ಸಿಎಂ ಬಸವರಾಜ ಬೊಮ್ಮಾಯಿ ಭಾಗಿ

    ಫ್ಯಾಮಿಲಿ ಪ್ಯಾಕ್ ಸಿನಿಮಾದ ಬಗ್ಗೆ ಅವರು ಮಾತನಾಡಿ, “ಸಿನಿಮಾ ಶೀರ್ಷಿಕೆ ನೋಡಿ ಇದೊಂದು ಡಬಲ್ ಮೀನಿಂಗ್ ಸಿನಿಮಾ ಅಂದುಕೊಂಡವರೇ ಹೆಚ್ಚು. ಆದರೆ ಇದೊಂದು ಪಕ್ಕಾ ಕೌಟುಂಬಿಕ ಚಿತ್ರ. ಪಿಆರ್​ಆಕೆ ಸಿನಿಮಾ ಸಂಸ್ಥೆ ವಜ್ರೇಶ್ವರಿ ಸಂಸ್ಥೆ ಹಾಕಿಕೊಟ್ಟ ದಾರಿಯಲ್ಲಿಯೇ ನಡೆಯಲಿದೆ. ಆ ಸಂಸ್ಥೆ ಸಾಗಿ ಬಂದ ರೀತಿಯಲ್ಲಿಯೇ ಮನರಂಜನಾತ್ಮಕ ಸಿನಿಮಾಗಳನ್ನು ನೀಡುವುದು ಸಂಸ್ಥೆಯ ಉದ್ದೇಶ. ಹಾಗಾಗಿ ನಾವೂ ಕೂಡ ಶುದ್ಧ ಮನರಂಜನೆ ಸಿನಿಮಾ ಮಾಡಿದ್ದೇವೆ” ಅಂತಾರೆ. ಇದನ್ನೂ ಓದಿ : ವಿಮಾನದಲ್ಲೂ ಯಶ್-ರಾಧಿಕಾ ಪಂಡಿತ್ ಅವರ ಮಕ್ಕಳ ಆಟ

    ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ನಾಯಕ, ನಾಯಕಿಯಾಗಿ ನಟಿಸಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ.

  • ಶೀಘ್ರವೇ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ ಪುನೀತ್ ನಿರ್ಮಾಣದ 3 ಸಿನಿಮಾಗಳು

    ಶೀಘ್ರವೇ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ ಪುನೀತ್ ನಿರ್ಮಾಣದ 3 ಸಿನಿಮಾಗಳು

    ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ನಿಧನರಾದ ಬಳಿಕ ಅವರ ಪಿಆರ್ ಕೆ ಸಂಸ್ಥೆಯನ್ನು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಅಶ್ವಿನಿ ಅವರು ಅಪ್ಪು ಅವರ ಕನಸುಗಳನ್ನು ನನಸು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

    ಹೌದು. ಅಶ್ವಿನಿ ಅವರು ಪುನೀತ್ ನಿರ್ಮಾಣದ ಮೂರು ಸಿನಿಮಾಗಳು ಶೀಘ್ರವೇ ನಿಮ್ಮ ಮುಂದೆ ಬರಲಿದೆ ಎಂದು ತಿಳಿಸಿದ್ದಾರೆ. ಈ ವಿಚಾರವನ್ನು ಸ್ವತಃ ಅಶ್ವಿನಿ ಅವರೇ ತಮ್ಮ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇದನ್ನೂ ಓದಿ: ‘ಗರುಡ ಗಮನ ವೃಷಭ ವಾಹನ’ಕ್ಕೆ ನಟ ರಾಣಾ ಫಿದಾ

    ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿರುವ ಅಶ್ವಿನಿ, ಅಪ್ಪುವಿನ ಕನಸನ್ನು ಮುಂದಿಟ್ಟುಕೊಂಡು ಪ್ರೀತಿ, ಜೀವನ ಮತ್ತು ಸಂತೋಷದಿಂದ ತುಂಬಿರುವ 3 ಕಥೆಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

    ಪವರ್ ಸ್ಟಾರ್ ಅವರು ನಟನೆಯ ಜೊತೆಗೆ ನಿರ್ಮಾಣದಲ್ಲೂ ತೊಡಗಿಕೊಂಡಿದ್ದರು. ಅದಕ್ಕಾಗಿಯೇ ಪಿಆರ್‍ಕೆ ಸಂಸ್ಥೆಯೊಂದನ್ನು ಸ್ಥಾಪಿಸಿ 4 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಅದರಲ್ಲಿ ಇದೀಗ ‘ಒನ್ ಕಟ್ ಟೂ ಕಟ್’, ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾಗಳು ಅಮೇಜಾನ್ ಪ್ರೈಮ್ ನಲ್ಲಿ ಶೀಘ್ರವೇ ಬಿಡುಗಡೆಯಾಗಲಿವೆ. ವಾರಕ್ಕೆ ಒಂದರಂತೆ ಮೂರು ಚಿತ್ರಗಳು ಪ್ರೀಮಿಯರ್ ಆಗುತ್ತಿವೆ ಎಂಬುದಾಗಿ ತಿಳಿದುಬಂದಿದೆ.

  • ಪುನೀತ್ ನೀಡಿರುವ ಉತ್ಸಾಹ, ಸ್ಫೂರ್ತಿಯೊಂದಿಗೆ ಪ್ರಯಾಣ ಪುನಾರಂಭಿಸುತ್ತೇವೆ: ಪಿಆರ್​ಕೆ

    ಪುನೀತ್ ನೀಡಿರುವ ಉತ್ಸಾಹ, ಸ್ಫೂರ್ತಿಯೊಂದಿಗೆ ಪ್ರಯಾಣ ಪುನಾರಂಭಿಸುತ್ತೇವೆ: ಪಿಆರ್​ಕೆ

    ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಇಡೀ ಚಿತ್ರರಂಗ, ಅಭಿಮಾನಿಗಳು ಹಾಗೂ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಇದೀಗ ಈ ದುಃಖದಲ್ಲಿಯೇ ಪುನೀತ್ ನೀಡಿರುವ ಉತ್ಸಾಹ, ಸ್ಫೂರ್ತಿಯೊಂದಿಗೆ ಪ್ರಯಾಣ ಪುನಾರಂಭಿಸುವುದಾಗಿ ಪಿಆರ್ ಕೆ ಪ್ರೊಡಕ್ಷನ್ ಹೇಳಿದೆ.

    ಈ ಸಂಬಂಧ ಪತ್ರವನ್ನು ಟ್ವೀಟ್ ಮಾಡಿರುವ ಪಿಆರ್ ಕೆ, ನಮಗೆ ಹಿಂದಿನದನ್ನು ಬದಲಿಸುವುದು ಅಸಾಧ್ಯವಾಗಿದೆ. ಆದರೆ ಪುನೀತ್ ರಾಜ್ ಕುಮಾರ್ ರವರು ನಮಗೆ ನೀಡಿರುವ ಉತ್ಸಾಹ ಮತ್ತು ಸ್ಫೂರ್ತಿಯೊಂದಿಗೆ ಪಿ.ಆರ್.ಕೆ ಪ್ರೊಡಕ್ಷನ್ ಆಡಿಯೋದ ಮೂಲಕ ಉಜ್ವಲ ಭವಿಷ್ಯವನ್ನು ರಚಿಸಲು ಎದುರು ನೋಡುತ್ತೇವೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

    ನಮ್ಮ ಈ ಪ್ರಯಾಣವನ್ನು ಪುನರಾರಂಭಿಸುತ್ತಾ ಅವರ ಕನಸುಗಳನ್ನು ನನಸಾಗಿಸುವಲ್ಲಿ ನಿಮ್ಮ ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳ ಜವಾಬ್ದಾರಿ ಹೊರಲು ಸಿದ್ಧರಾದ ವಿಶಾಲ್ – ಅಪ್ಪು ಪತ್ನಿ ಅಶ್ವಿನಿ ಬಳಿ ಕೋರಿಕೆ

    ಪುನೀತ್ ರಾಜ್ ಕುಮಾರ್ ಅವರು ತಮ್ಮ ಕನಸಿನ ಪಿಆರ್ ಕೆ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದರು. ಹೊಸ ಮುಖಗಳಿಗೆ ಅವಕಾಶ ನೀಡುವ ಉದ್ದೇಶದಿಂದಲೇ 2017ರ ಜುಲೈ 20ರಂದು ಸ್ಥಾಪನೆ ಆಯಿತು. ಈ ಬ್ಯಾನರ್ ಅಡಿಯಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವರು ಅವಕಾಶ ನೀಡಿದ್ದರು. ಸಾಕಷ್ಟು ಸಿನಿಮಾಗಳನ್ನು ಪಿಆರ್ ಕೆ ಬ್ಯಾನರ್ ನಿರ್ಮಾಣ ಮಾಡಿದೆ. ಆದರೆ ಇದುವರೆಗೆ ಪುನೀತ್ ರಾಜ್ ಕುಮಾರ್ ಅವರು ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದನ್ನೂ ಓದಿ: ತಾನು ನೆಟ್ಟ ಗಿಡಕ್ಕೆ ಪುನೀತ್ ರಾಜ್ ಕುಮಾರ್ ಅಂತ ಹೆಸರಿಟ್ಟ ವಿಶಾಲ್

  • ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

    ಆಕ್ಟ್-1978: ಟ್ರೇಲರ್ ಮೂಲಕ ಕೌತುಕದ ಬಾಂಬಿಟ್ಟರು ಮಂಸೋರೆ!

    – ಕೊರೊನಾ ಕಂಟಕವನ್ನೂ ಛಿದ್ರಗೊಳಿಸೋ ಲಕ್ಷಣ!

    ಒಂದೊಳ್ಳೆ ಸಿನಿಮಾ ಎಂಟ್ರಿ ಕೊಟ್ರೆ ತಿಂಗಳಿಂದೀಚೆಗೆ ಕವುಚಿಕೊಂಡಿರೋ ಕೊರೊನಾ ಗ್ರಹಣ ತಂತಾನೇ ಕಳಚಿಕೊಳ್ಳುತ್ತೆ. ಇದು ಸಿನಿಮಾ ಪ್ರೇಮಿಗಳ ಒಕ್ಕೊರಲಿನ ಅಭಿಪ್ರಾಯ. ಅದರಲ್ಲಿಯೇ ಮತ್ತೆ ಸಿನಿಮಾ ಮಂದಿರಗಳು ಗಿಜಿಗುಡುತ್ತಾ ಕಳೆಗಟ್ಟಿಕೊಳ್ಳಲೆಂಬ ಹಾರೈಕೆಯೂ ಇದೆ. ಅದೆಷ್ಟೋ ಸಿನಿಮಾ ಪ್ರೇಮಿಗಳ ಈ ಮನದಿಂಗಿತವನ್ನು ನಿಜವಾಗಿಸುವಂಥಾ ಗಾಢ ಭರವಸೆ ಹೊತ್ತು ಆಕ್ಟ್-1978 ಚಿತ್ರದ ಟ್ರೇಲರ್ ಲಾಂಚ್ ಆಗಿದೆ.

    ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಅದಕ್ಕೆ ದಕ್ಕಿರೋ ವೀಕ್ಷಣೆ, ನಾನಾ ದಿಕ್ಕುಗಳಿಂದ ಹರಿದು ಬರುತ್ತಿರೋ ಸದಭಿಪ್ರಾಯಗಳೆಲ್ಲವೂ ಒಂದು ಮಹಾ ಗೆಲುವಿನ ಮುನ್ಸೂಚನೆಯಂತೆಯೂ, ಚಿತ್ರರಂಗದ ಪಾಲಿಗೆ ಸುಗ್ಗಿ ಸಂಭ್ರಮ ಪಡಿಮೂಡಿಕೊಳ್ಳುವ ಶುಭ ಸೂಚನೆಯಂತೆಯೂ ಕಾಣಿಸಲಾರಂಭಿಸಿದೆ.

    ಇದು ಹರಿವು ಮತ್ತು ನಾತಿಚರಾಮಿಯಂಥ ಸದಭಿರುಚಿಯ ಸಿನಿಮಾಗಳನ್ನು ಕೊಡಮಾಡಿರುವ ಮಂಸೋರೆ ನಿರ್ದೇಶನದ ಚಿತ್ರ. ಈ ಹಿಂದೆ ಒಂದೇ ಒಂದು ಪೋಸ್ಟರ್ ಮೂಲಕ ಈ ಸಿನಿಮಾ ಸೃಷ್ಟಿಸಿದ್ದ ಕ್ರೇಜ್ ಎಂಥಾದ್ದೆಂಬುದನ್ನ ಯಾರೂ ಮರೆಯಲು ಸಾಧ್ಯವಿಲ್ಲ. ಆ ದೆಸೆಯಿಂದಲೇ ಆಕ್ಟ್-1978  ಬಗ್ಗೆ ವಿಶೇಷವಾದ ಕುತೂಹಲ ಮೂಡಿಕೊಂಡಿತ್ತು. ಈಗ ಪುನೀತ್ ರಾಜ್ ಕುಮಾರ್ ಅವರ ಪಿಆರ್‍ಕೆ ಯೂಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗಿರೋ ಟ್ರೇಲರ್ ಎಲ್ಲ ನಿರೀಕ್ಷೆಗಳನ್ನೂ ಮತ್ತಷ್ಟು ಉದ್ದೀಪಿಸುವಂತೆ ಮೂಡಿ ಬಂದಿದೆ. ನಿರ್ದೇಶಕ ಮಂಸೋರೆ ಈ ಬಾರಿ ಎಲ್ಲರ ಮನಸುಗಳಿಗೂ ಕೌತುಕದ ಬಾಂಬಿಟ್ಟು ಬಿಟ್ಟಿದ್ದಾರೆ.

    ಮಂಸೋರೆ ಭಿನ್ನ ಪಥದಲ್ಲಿಯೇ ಸದ್ದು ಮಾಡುತ್ತಾ, ಪ್ರತಿ ಹೆಜ್ಜೆಯಲ್ಲಿಯೂ ಹೊಸಾ ಸಾಧ್ಯತೆಗಳತ್ತ ಕೈ ಚಾಚುತ್ತಾ ಈ ನೆಲದ ಕಥೆಗಳಿಗೆ ದೃಶ್ಯ ರೂಪ ನೀಡೋ ಅಪರೂಪದ ನಿರ್ದೇಶಕ. ಅವರು ಈ ಬಾರಿ ಪಕ್ಕಾ ಥ್ರಿಲ್ಲರ್ ಕಥಾನಕದೊಂದಿಗೆ ಅಡಿಯಿರಿಸುತ್ತಿದ್ದಾರೆ. ಈ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಒಂದು ಸರ್ಕಾರಿ ಕಚೇರಿಯನ್ನೇ ಹೈಜಾಕ್ ಮಾಡೋ ದೃಶ್ಯಾವಳಿಗಳೊಂದಿಗೆ ಈ ಟ್ರೇಲರ್ ಎಲ್ಲರನ್ನೂ ಸೆಳೆದುಕೊಂಡಿದೆ. ಮೈಗೆ ಬಾಂಬು ಕಟ್ಟಿಕೊಂಡಿರೋ ಬಸುರಿ ಹೆಂಗಸಿನ ರೆಬೆಲ್ ಪಾತ್ರದಲ್ಲಿ ಯಜ್ಞ ಶೆಟ್ಟಿ ಅಕ್ಷರಶಃ ಮಿಂಚಿದ್ದಾರೆ. ಮಿಕ್ಕುಳಿದ ಪಾತ್ರಗಳೂ ಕೂಡಾ ಅಷ್ಟೇ ಮಜವಾಗಿ ಮೂಡಿ ಬಂದಿರೋದರ ಸೂಚನೆಗಳೂ ಈ ಟ್ರೇಲರ್‌ನಲ್ಲಿ ಕಾಣಿಸಿವೆ.

    ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರೂ ಕೂಡಾ ಕುದಿತವೊಂದನ್ನು ಒಳಗಿಟ್ಟುಕೊಂಡಿರುತ್ತಾರೆ. ಆದರೆ, ಅದರ ವಿರುದ್ಧದ ಹೋರಾಟ, ಕ್ರಾಂತಿಗೆ ಮತ್ಯಾವುದೋ ಮಹಾ ಶಕ್ತಿಯೇ ಧರೆಗಿಳಿದು ಬರಬೇಕೆಂಬಂತೆ ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡಿರುತ್ತಾರೆ. ಆದರೆ ಮನಸು ಮಾಡಿದರೆ ಸಾಮಾನ್ಯರ ಕುದಿತ, ಬೇಗುದಿಗಳೂ ಅಸಾಧಾರಣ ರೀತಿಯಲ್ಲಿ ಆಸ್ಫೋಟಗೊಳ್ಳಬಹುದೆಂಬ ಕಥಾ ಹೂರಣ ಈ ಟ್ರೇಲರ್‍ನಲ್ಲಿ ಧ್ವನಿಸಿದೆ. ಅಂತೂ ಪ್ರತಿ ಕ್ಷಣವೂ ಉಸಿರು ಬಿಗಿಹಿಡಿದು ಕಾಯುವಂಥಾ ಬಿಗುವಿನೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಮೂಡಿಕೊಂಡಿದೆ.

    ಈ ಹಿಂದಿನ ಸಿನಿಮಾಗಳನ್ನು ನೋಡಿದ ಬಹುತೇಕರು ನಿರ್ದೇಶಕ ಮಂಸೋರೆಯ ಅಗಾಧ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರು. ಅವರೀಗ ಪರಭಾಷಾ ಚಿತ್ರರಂಗಗಳ ಮಂದಿಯೇ ನಿಬ್ಬೆರಗಾಗೋ ಕಥಾ ವಸ್ತುವಿನೊಂದಿಗೆ ಕಮಾಲ್ ಮಾಡಲು ಮುಂದಾಗಿದ್ದಾರೆ. ಯಜ್ಞ ಶೆಟ್ಟಿಯನ್ನಂತೂ ಈ ಬಸುರಿ ಹೆಂಗಸಿನ ಪಾತ್ರ ಮತ್ತೊಂದು ಎತ್ತರಕ್ಕೇರಿಸೋದರಲ್ಲಿ, ಈ ಸಿನಿಮಾ ಮೂಲಕವೇ ಅವರ ವೃತ್ತಿ ಬದುಕಿನ ದಿಕ್ಕು ಬದಲಾಗೋದು ಗ್ಯಾರೆಂಟಿ ಅಂತ ನೋಡುಗರೇ ಭವಿಷ್ಯ ನುಡಿಯುತ್ತಿದ್ದಾರೆ. ಒಂದು ಟ್ರೇಲರ್ ಇಂಥಾ ಅಭಿಪ್ರಾಯಗಳನ್ನು ಹೊಮ್ಮಿಸುವಂತೆ ಮಾಡೋದು ಆರಂಭಿಕ ಗೆಲುವು. ಅದು ಆಕ್ಟ್-1978  ಚಿತ್ರಕ್ಕೆ ದಕ್ಕಿದೆ. ಮುಂದೆ ಮಹಾ ಗೆಲುವೊಂದು ಬಾಚಿ ತಬ್ಬಿಕೊಳ್ಳಲು ಕಾದು ನಿಂತಿರುವಂತಿದೆ!

  • ಡಾಟರ್ ಆಫ್ ಪಾರ್ವತಮ್ಮನ ಅದ್ಭುತ ಲಿರಿಕಲ್ ವೀಡಿಯೋ!

    ಡಾಟರ್ ಆಫ್ ಪಾರ್ವತಮ್ಮನ ಅದ್ಭುತ ಲಿರಿಕಲ್ ವೀಡಿಯೋ!

    – ಜೀವಕಿಲ್ಲಿ ಜೀವ ಬೇಟೆ ಪಾಪಿ ಯಾರು ಇಲ್ಲಿ…?

    ಚಿತ್ರೀಕರಣ ಶುರುವಾದಾಗಿನಿಂದಲೂ ಹರಿಪ್ರಿಯಾ ಅಭಿನಯದ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಸದ್ದು ಮಾಡುತ್ತಲೇ ಸಾಗಿ ಬಂದಿದೆ. ಇದೀಗ ಈ ಚಿತ್ರದ ಲಿರಿಕಲ್ ವೀಡಿಯೋ ಒಂದು ಬಿಡುಗಡೆಯಾಗಿದೆ. ಪಿಆರ್‍ಕೆ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ಈ ಹಾಡನ್ನು ಬಿಡುಗಡೆಗೊಳಿಸಿರೋ ರೋರಿಂಗ್ ಸ್ಟಾರ್ ಶ್ರೀಮುರುಳಿ ಮನದುಂಬಿ ಮಾತಾಡಿದ್ದಾರೆ. ಚಿತ್ರತಂಡವನ್ನು ಮೆಚ್ಚಿಕೊಳ್ಳುತ್ತಲೇ ಶುಭ ಕೋರಿದ್ದಾರೆ.

    ವಿಶೇಷವೆಂದರೆ, ಈಗ ಬಿಡುಗಡೆಯಾಗಿರೋ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಬರೆದಿರೋದು ಟಗರು ಡಾಲಿ ಖ್ಯಾತಿಯ ಧನಂಜಯ್. `ಜೀವಕಿಲ್ಲಿ ಜೀವ ಬೇಟೆ ಪಾಪಿ ಯಾರು ಇಲ್ಲಿ. ಕೊಂದು ತಿನ್ನೊ ರೂಲೆ ಉಂಟು ಪಾಪ ಯಾವುದಿಲ್ಲಿ’ ಎಂಬ ಈ ಹಾಡಿಗೆ ಮಿಥುನ್ ಮುಕುಂದನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಾರ್ತಿಕ್, ಚೆನ್ನಾಜಿ ರಾವ್, ನಾರಾಯಣ್ ಶರ್ಮಾ ಮತ್ತು ಮಿಥುನ್ ಮುಕುಂದನ್ ಈ ಹಾಡಿಗೆ ಧ್ವನಿಯಾಗಿದ್ದಾರೆ.

    ದಿಶಾ ಎಂಟರ್ ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ಚಿತ್ರ ಡಾಟರ್ ಆಫ್ ಪಾರ್ವತಮ್ಮ. ಇದರ ಈ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡಿರುವ ರೋರಿಂಗ್ ಸ್ಟಾರ್ ಶ್ರೀಮುರುಳಿ ಧನಂಜಯ್ ಅವರ ಬಹುಮುಖ ಪ್ರತಿಭೆಯನ್ನು ಕೊಂಡಾಡಿದ್ದಾರೆ. ತಮಗೆ ಡಾಲಿಯ ನಟನೆ ಇಷ್ಟ ಅಂದಿರೋ ಶ್ರೀಮುರುಳಿ, ಡಾಟರ್ ಆಫ್ ಪಾರ್ವತಮ್ಮನಾಗಿ ನಟಿಸಿರೋ ಹರಿಪ್ರಿಯಾರ ನಟನೆಯನ್ನೂ ಮೆಚ್ಚಿ ಮಾತಾಡಿದ್ದಾರೆ.

    ಈ ಹಾಡು ಪಿಆರ್ ಕೆ ಸಂಸ್ಥೆಯ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾದಾಕ್ಷಣದಿಂದಲೇ ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಧನಂಜಯ್ ಅವರು ಬದುಕಿನ ದ್ವಂದ್ವ, ವಾಸ್ತವಗಳನ್ನು ಕಟ್ಟಿ ಕೊಡುವಂಥಾ ಸಾಲುಗಳ ಮೂಲಕವೇ ಈ ಹಾಡನ್ನು ವಿಶೇಷವಾಗಿಸಿದ್ದಾರೆ.

    ಬಹುಶಃ ಈ ಹಾಡು ಕೇಳಿದ ಯಾರೇ ಆದರೂ ಧನಂಜಯ್ ಅವರ ಟ್ಯಾಲೆಂಟಿನ ಬಗ್ಗೆ ಅಚ್ಚರಿ ಸೂಚಿಸದಿರಲು ಸಾಧ್ಯವಿಲ್ಲ. ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಅವರಂತೂ ಈ ಹಾಡನ್ನು ವಿಭಿನ್ನ ರಾಗಗಳ ಪಟ್ಟಿನಿಂದ ಮತ್ತೂ ವಿಶೇಷವಾಗಿಸಿದ್ದಾರೆ.

    ಒಟ್ಟಾರೆಯಾಗಿ ಹೇಳೋದಾದರೆ ಶಂಕರ್ ಜೆ ನಿರ್ದೇಶನದ ಈ ಚಿತ್ರವೀಗ ಈ ಹಾಡಿನ ಮೂಲಕ ಮತ್ತಷ್ಟು ಮಂದಿಯನ್ನು ಸೆಳೆದುಕೊಂಡಿದೆ. ಈ ಹಾಡೇ ಇಡೀ ಸಿನಿಮಾ ವಿಭಿನ್ನ ಕಂಟೆಂಟು ಹೊಂದಿದೆ ಎಂಬ ಸೂಚನೆಯನ್ನೂ ರವಾನಿಸುವಂತಿದೆ.

    ಹರಿಪ್ರಿಯಾ ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರೋ ಡಾಟರ್ ಆಫ್ ಪಾರ್ವತಮ್ಮನಿಗೆ ಈ ಲಿರಿಕಲ್ ವೀಡಿಯೋ ಸಾಂಗಿನಿಂದ ಮತ್ತಷ್ಟು ಫ್ಯಾನ್ಸ್ ಹುಟ್ಟಿಕೊಳ್ಳೋದಂತೂ ಗ್ಯಾರೆಂಟಿ!

  • ಅಕ್ಕನ ಅಂಗಳದಲ್ಲಿ ಬಿಡುಗಡೆಯಾಗಲಿದೆ ಕವಲುದಾರಿ ಟೀಸರ್!

    ಅಕ್ಕನ ಅಂಗಳದಲ್ಲಿ ಬಿಡುಗಡೆಯಾಗಲಿದೆ ಕವಲುದಾರಿ ಟೀಸರ್!

    ಬೆಂಗಳೂರು: ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕವೇ ನಾಯಕನಾಗಿ ನೆಲೆ ನಿಂತಿರುವವರು ರಿಷಿ. ಅವರು ಇದೀಗ ಹೇಮಂತ್ ನಿರ್ದೇಶನದ ಕವಲುದಾರಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರದ ಟೀಸರ್ ಬಿಡುಗಡೆಗೂ ದಿನಾಂಕ ನಿಗದಿಯಾಗಿದೆ. ವಿಶೇಷವಾದೊಂದು ಸ್ಥಳ ಮತ್ತು ಸಂದರ್ಭದಲ್ಲಿ ಈ ಟೀಸರ್ ಅನಾವರಣಗೊಳ್ಳಲಿದೆ.

    ಕನ್ನಡ ಚಿತ್ರಗಳ ಹಾಡು, ಟ್ರೈಲರ್ ಮುಂತಾದವುಗಳು ಆಗಾಗ ವಿದೇಶಗಳಲ್ಲಿ ಬಿಡುಗಡೆಯಾಗೋದಿದೆ. ಕವಲುದಾರಿ ಚಿತ್ರತಂಡ ಕೂಡಾ ಇದಕ್ಕಾಗಿ ವಿದೇಶವನ್ನೇ ಆಯ್ಕೆ ಮಾಡಿಕೊಂಡಿದೆ. ಯುಎಸ್‍ಎನ ದಲ್ಲಾಸ್ ನಲ್ಲಿ ನಡೆಯಲಿರೋ ಅಕ್ಕ ಸಮ್ಮೇಳನದಲ್ಲಿ ಸೆಪ್ಟೆಂಬರ್ ಎರಡರಂದು ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಇದನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ!

    ಈ ಚಿತ್ರ ಪುನೀತ್ ರಾಜ್‍ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಿಂದ ಹೊರ ಬರಲಿರೋ ಮೊದಲ ಚಿತ್ರ. ಇದರ ಹಾಡುಗಳಿಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಅನಂತ್ ನಾಗ್ ಅವರು ಮುಖ್ಯ ಪಾತ್ರವೊಂದರಲ್ಲಿ ನಟಿಸಿರೋ ಈ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಟೀಸರ್ ಲಾಂಚ್ ಆದ ನಂತರದಲ್ಲಿ ಬಿಡುಗಡೆಯ ದಿನಾಂಕವೂ ಹೊರ ಬೀಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೊಸವರ್ಷಕ್ಕೆ ಅಪ್ಪು ‘ಪವರ್ ಫುಲ್’ ವಿಶ್: ವಿಡಿಯೋ

    ಹೊಸವರ್ಷಕ್ಕೆ ಅಪ್ಪು ‘ಪವರ್ ಫುಲ್’ ವಿಶ್: ವಿಡಿಯೋ

    – ಪಿಆರ್‍ ಕೆ ಆಡಿಯೋ ಮೂಲಕ ಟಗರು ಮೇಕಿಂಗ್ ರಿಲೀಸ್

    ಬೆಂಗಳೂರು: ಹೊಸ ವರ್ಷಕ್ಕಂತೂ ದೊಡ್ಮನೆಯದ್ದೇ ಸುದ್ದಿ. ಈ ಹೊಸ ವರ್ಷಕ್ಕೆ ಪುನೀತ್ ಜಬರ್ದಸ್ತ್ ಆಗಿ ವಿಶ್ ಮಾಡಿದ್ದಾರೆ. ಅಷ್ಟೇ ಅಲ್ಲ ಅವರ ಪಿಆರ್‍ಕೆ ಆಡಿಯೋ ಪೇಜ್ ಮೂಲಕ ಟಗರು ಚಿತ್ರದ ಹೊಚ್ಚ ಹೊಸ ಮೇಕಿಂಗ್ ರಿಲೀಸ್ ಮಾಡಿದ್ದಾರೆ.

    ಹೊಸ ವರ್ಷಕ್ಕೆ ಎಲ್ಲಾ ತಾರೆಗಳೂ ವಿಶ್ ಮಾಡಿದ್ದು, ಪುನೀತ್ ಮಾತ್ರ ಡಿಫೇರೆಂಟ್ ಆಗಿ ವಿಶ್ ಮಾಡಿದ್ದಾರೆ. ಎಲ್ಲರೂ ನಿಂತು ಹೊಸ ವರ್ಷಕ್ಕೆ ಶುಭಾಶಯ ಹೇಳಿದರೆ ಪವರ್ ಸ್ಟಾರ್ ಮಾತ್ರ ವೆರಿ ಡಿಫರೆಂಟ್ ಆಗಿ ಸ್ಟಂಟ್ ಮಾಡುತ್ತಾ ವಿಶ್ ಮಾಡಿದ್ದಾರೆ.

    ಪುನೀತ್ ಅವರ ಈ ಖುಷಿಗೆ ಸಾಕಷ್ಟು ಕಾರಣಗಳಿವೆ. ಅಂಜನಿಪುತ್ರನಿಗೆ ಎದುರಾಗಿದ್ದ ಕಂಟಕ ನಿವಾರಣೆ, ಹೊಸ ಚಿತ್ರದ ಆರಂಭ, ಜೊತೆಗೆ ಅಣ್ಣನ ಚಿತ್ರಕ್ಕೆ ಸ್ವಾಗತ ಕೋರುವ ಘಳಿಗೆ ಎಲ್ಲ ಖುಷಿಯನ್ನೂ ಪುನೀತ್ ಒಟ್ಟೊಟ್ಟಿಗೆ ಅನುಭವಿಸುತ್ತಿದ್ದಾರೆ. ಇದೇ ಖುಷಿಯಲ್ಲಿ ಹೊಸ ವರ್ಷದ ದಿನವೇ ಪುನೀತ್ ಒಡೆತನದ ಪಿಆರ್‍ಕೆ ಆಡಿಯೋ ಯೂಟ್ಯೂಬ್ ಪೇಜ್‍ನಲ್ಲಿ ಟಗರು ಚಿತ್ರದ ಹೊಚ್ಚ ಹೊಸ ಮೇಕಿಂಗ್ ವಿಡಿಯೋ ರಿಲೀಸ್ ಮಾಡಲಾಗಿದೆ.

    https://twitter.com/PuneethOfficial/status/947691838202298368

    ಶಿವರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಟಗರು. ಸೂರಿ ನಿರ್ದೇಶನದಲ್ಲಿ ಮೂಡಿಬಂದಿರೋ ಈ ಚಿತ್ರದ ಅದ್ಧೂರಿ ಆಡಿಯೋ ಲಾಂಚ್ ಹೊಸಪೇಟೆಯಲ್ಲಿ ನಡೆಯಿತು. ಟ್ರೇಲರ್ ಕೂಡ ಭರ್ಜರಿ ಹಿಟ್ ಆಗಿದೆ. ಪಿಆರ್‍ಕೆ ಕಂಪನಿಯ ರೈಟ್ಸ್ ನಲ್ಲಿ ಚಿತ್ರದ ಹಾಡಿನ ಮ್ಯಾಷಪ್ ಮೇಕಿಂಗ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.

    ಸೂರಿ ಸಾರಥ್ಯದಲ್ಲಿ ಮೂಡಿಬಂದಿರುವ ಮೇಕಿಂಗ್ ಅದ್ಭುತವಾಗಿದ್ದು ಚಿತ್ರ ನೋಡುವ ಉತ್ಸಾಹವನ್ನ ಇಮ್ಮಡಿಗೊಳಿಸಿದೆ. ಬೆಂಗಳೂರು, ಮಂಗಳೂರು, ಗೋವಾದಲ್ಲಿ ತೆಗೆದ ಸನ್ನಿವೇಷಗಳ ಚಿತ್ರಣದ ಸ್ಯಾಂಪಲ್ ಚಿತ್ರದ ಮೇಲೆ ನಿರೀಕ್ಷೆ ಹುಟ್ಟಿಸಿದೆ. ಶಿವರಾಜ್‍ಕುಮಾರ್ ಜೊತೆ ಭಾವನಾ ಮೆನನ್, ಮಾನ್ವಿತಾ ಹರೀಶ್ ನಟಿಸಿದ್ದು ಹಾಡುಗಳ ಮೇಕಿಂಗ್ ಸ್ಯಾಂಡಲ್‍ವುಡ್‍ನಲ್ಲಿ ಕಲರವ ಮಾಡುತ್ತಿದೆ.

    ಅಣ್ಣ ಶಿವಣ್ಣನ ಚಿತ್ರಕ್ಕೆ ಪುನೀತ್ ಸ್ಪೆಷಲ್ ಕಾಳಜಿಯಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಸದ್ಯಕ್ಕೆ ಈ ತಿಂಗಳು ಅಪ್ಪು ಯಾವುದೇ ಶೂಟಿಂಗ್ ಒಪ್ಪಿಕೊಳ್ಳದೇ ರಿಲ್ಯಾಕ್ಸ್ ಆಗಿರುತ್ತಾರೆ. ಹೀಗಾಗಿ ಟಗರಿಗಾಗಿ ಪುನೀತ್ ವಿಶೇಷ ಗಮನ ಇರುತ್ತೆ ಎನ್ನುವುದಕ್ಕೆ ವರ್ಷಾರಂಭದಲ್ಲಿ ಮೇಕಿಂಗ್ ರಿಲೀಸ್ ಮಾಡಿರುವುದು ಸಾಕ್ಷಿ. ಒಟ್ಟಿನಲ್ಲಿ ಟಗರು ಆರ್ಭಟ ನೋಡೋಕೆ ಪ್ರೇಕ್ಷಕರು ಕಾಯುತ್ತಿದ್ದಾರೆ.

     

  • ಪವರ್ ಸ್ಟಾರ್ ಅಪ್ಪು ಅಭಿಮಾನಿಗಳಿಗೆ ಡಬಲ್ ಧಮಾಕಾ

    ಪವರ್ ಸ್ಟಾರ್ ಅಪ್ಪು ಅಭಿಮಾನಿಗಳಿಗೆ ಡಬಲ್ ಧಮಾಕಾ

    -ಅಂಜನಿಪುತ್ರ ಆಡಿಯೋ ಟೀಸರ್ ಬಿಡುಗಡೆ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಚಿತ್ರ ಅಂಜನಿಪುತ್ರ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ.

    ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಚಿತ್ರದ ಆಡಿಯೋ ಹಾಗೂ ಟೀಸರ್ ಅನ್ನು ಬಿಡುಗಡೆ ಮಾಡಿದರು. ಚಿತ್ರಕ್ಕೆ ರವಿ ಬಸ್ರೂರು ಅವರು ಸಂಗೀತ ನೀಡಿದ್ದು, ಎ ಹರ್ಷ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ.

    ಪುನೀತ್ ರಾಜ್ ಕುಮಾರ್ ಅವರ ಒಡೆತನದ ಪಿಆರ್ ಕೆ ಆಡಿಯೋ ಸಂಸ್ಥೆ ಮೊದಲ ಬಾರಿಗೆ ಹಾಡುಗಳ ಹಕ್ಕುಗಳನ್ನು ಪಡೆದಿದೆ. ಈ ವೇಳೆ ಮಾತನಾಡಿದ ಪುನೀತ್ ರಾಜಕುಮಾರ್ ನಾನು ಯಾರಿಗೂ ಕಾಂಪಿಟೇಷನ್ ಕೊಡುವುದಕ್ಕೆ ಈ ಆಡಿಯೋ ಸಂಸ್ಥೆ ಶುರು ಮಾಡಿಲ್ಲ. ನನಗೆ ಚಿಕ್ಕಂದಿನಿಂದಲೂ ಹಾಡು ಅಂದರೆ ಇಷ್ಟ. ‘ಪಿಆರ್ ಕೆ’ ಅಂದರೆ ಪಾರ್ವತಮ್ಮ ರಾಜ್ ಕುಮಾರ್ ವಿಥ್ ರಾಜ್ ಕುಮಾರ್. ಇದು ನನ್ನ ಬಹುದಿನಗಳ ಕನಸು. ಪ್ರಸ್ತುತ ಅಂಜನಿಪುತ್ರ ಹಾಡುಗಳ ಹಕ್ಕುಗಳನ್ನು ಪಡೆದುಕೊಂಡಿದೆ, ಮುಂದೆ ಟಗರು, ಕವಲುದಾರಿ ಚಿತ್ರಗಳ ಹಕ್ಕು ಪಡೆಯುವ ಮೂಲಕ ನಮ್ಮ ಪ್ರಯಾಣ ಸಾಗುತ್ತೆ ಎಂದರು.

    ಕಾರ್ಯಕ್ರಮದ ವೇಳೆ ಪುನೀತ್ ರಾಜ್ ಕುಮಾರ್ ಅವರು ವರನಟ ಡಾ. ರಾಜ್ ಕುಮಾರ್ ಚಿತ್ರಗಳ ಹಾಡನ್ನು ಹಾಡಿ ಎಲ್ಲರನ್ನೂ ರಂಜಿಸಿದರು. ಇನ್ನು ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಹಲವು ಸ್ಯಾಂಡಲ್‍ವುಡ್ ಗಣ್ಯರು ಭಾಗವಹಿಸಿದ್ದರು.

    ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.