Tag: priyanka

  • ನಾನು ಬೆತ್ತಲೆಯಾಗಿ ಮದುವೆಯಾಗ್ತೀನಿ, ನನ್ನ ಮದುವೆಗೆ ಬರುವವರಿಗೆ ಒಂದ್ ಕಂಡೀಷನ್- ರಾಖಿ ಸಾವಂತ್

    ನಾನು ಬೆತ್ತಲೆಯಾಗಿ ಮದುವೆಯಾಗ್ತೀನಿ, ನನ್ನ ಮದುವೆಗೆ ಬರುವವರಿಗೆ ಒಂದ್ ಕಂಡೀಷನ್- ರಾಖಿ ಸಾವಂತ್

    ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ಎಂದೇ ಹೆಸರು ಪಡೆದಿರುವ ನಟಿ ರಾಖಿ ಸಾವಂತ್ ನಾನು ಬೆತ್ತಲೆಯಾಗಿ ಮದುವೆಯಾಗುತ್ತೀನಿ. ನನ್ನ ಮದುವೆಗೆ ಬರುವವರೂ ಬೆತ್ತಲೆಯಾಗೇ ಬರಬೇಕೆಂದು ಕಂಡೀಷನ್ ಹಾಕುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾಳೆ.

    ಹೌದು, ಸದಾ ಒಂದಿಲ್ಲೊಂದು ಸುದ್ದಿಗಳನ್ನು ಸೋಶಿಯಲ್ ಮಿಡಿಯಾಗಳಲ್ಲಿ ಹಾಕುವ ಮೂಲಕ ಸುದ್ದಿಯಲ್ಲಿರುವ ರಾಖಿ ಈಗ ಮತ್ತೊಂದು ವಿಡಿಯೋ ಮೂಲಕ ಸುದ್ದಿಯಲ್ಲಿದ್ದಾಳೆ. ತನ್ನ ಭಾವಿ ಪತಿ ದೀಪಕ್ ಲಾಲ್ ನೊಂದಿಗೆ ಡಿಸೆಂಬರ್ 31 ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಪತಿಯ ಆಶಯದಂತೆ ಬೆತ್ತಲೆಯಾಗಿ ಮದುವೆಯಾಗಲು ತೀರ್ಮಾನಿಸಿದ್ದಾಳೆ. ಅಲ್ಲದೇ ಮದುವೆಗೆ ಬರುವವರಿಗೂ ಬೆತ್ತಲೆಯಾಗೇ ಬರುವಂತೆ ಕಂಡೀಷನ್ ಹಾಕಿದ್ದಾಳೆ.

    https://www.instagram.com/p/BqzxZs_hnFw/?utm_source=ig_embed

    ರಾಖಿ ತನ್ನ ಮದುವೆ ಕುರಿತು ವಿಡಿಯೋ ಒಂದರಲ್ಲಿ ಮಾತನಾಡಿ, ಹಾಯ್ ಪ್ರಿಯಾಂಕಾ ನಾನೂ ಕೂಡ ಮದುವೆಯಾಗುತ್ತಿದ್ದೀನಿ. ನನ್ನ ಭಾವಿ ಪತಿ ದೀಪಕ್ ತುಂಬಾ ಚಿಕ್ಕ ವಯಸ್ಸಿನವರು. ನಿನ್ನ ಪತಿ ನಿಕ್ ಜೋನ್ಸ್‍ಗಿಂತಲೂ ಇವರೇ ಚಿಕ್ಕವರು. ಹೀಗಾಗಿ ಮದುವೆ ವಿಚಾರದಲ್ಲಿ ನನಗೂ ನಿನಗೂ ಸ್ಪರ್ಧೆ ಇದೆ. ನೀನು ಅಮೆರಿಕದಲ್ಲಿದ್ದು, ಭಾರತದಲ್ಲಿ ಮದುವೆ ಮಾಡಿಕೊಂಡೆ. ನಾನು ಭಾರತದಲ್ಲಿದ್ದು ಅಮೆರಿಕದಲ್ಲಿ ಮದುವೆಯಾಗುತ್ತಿದ್ದೇನೆ. ನಿನಗೆ ಗೊತ್ತಾ ಇತ್ತೀಚೆಗೆ ನನಗೆ ತುಂಬಾ ದೃಷ್ಟಿಯಾಗುತ್ತಿದೆ ಎಂದು ಹೇಳಿದ್ದಾರೆ.

    ನನ್ನ ಮದುವೆಗೆ ಶಾರುಖ್, ಸಲ್ಮಾನ್, ಅಮೀರ್ ಖಾನ್, ಸವ್ಯಸಾಚಿ ಸೇರಿದಂತೆ ಎಲ್ಲಾ ಸ್ಟಾರ್ ನಟ-ನಟಿಯರು ಬರುತ್ತಿದ್ದಾರೆ. ಇದರಿಂದಾಗಿ ನಾನು ತುಂಬಾನೇ ಎಕ್ಸೈಟ್ ಆಗಿದ್ದೇನೆ. ನನ್ನ ಮದುವೆಯ ವಿಶೇಷತೆ ಏನೆಂದರೆ, ಮದುವೆಯಲ್ಲಿ ಪಾಲ್ಗೊಳ್ಳುವವರು ಎಲ್ಲರೂ ಬೆತ್ತಲೆಯಾಗಿಯೇ ಬರಬೇಕು. ನಾನು ಸಹ ಬೆತ್ತಲೆಯಾಗಿಯೇ ಈ ಮಾತುಗಳನ್ನು ಆಡುತ್ತಿದ್ದೇನೆ. ನನ್ನ ಮದುವೆಯಲ್ಲಿ ಬಟ್ಟೆ ತೊಟ್ಟು ಬರಲು ಅವಕಾಶವಿಲ್ಲವೆಂದು ಹೇಳಿದ್ದಾಳೆ.

    ಇತ್ತೀಚೆಗೆ ರಾಖಿ ತನ್ನ ಕನ್ಯತ್ವದ ಪ್ರಮಾಣಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಸಖತ್ ಸುದ್ದಿಯಲ್ಲಿದ್ದಳು. ಅಭಿಮಾನಿಗಳು ಸಹ ರಾಖಿಗೆ ಭರಪೂರ ಕಾಮೆಂಟ್ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಮಿಳು ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣು!

    ತಮಿಳು ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣು!

    ಚೆನ್ನೈ: ತಮಿಳಿನ ಫೇಮಸ್ ನಟಿ ಪ್ರಿಯಾಂಕ ರವರು ಬುಧವಾರ ಅವರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬುಧವಾರ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದು, ಮನೆಯ ಕೆಲಸದವಳು ಬಾಗಿಲು ಬಡಿದರೂ ತೆಗೆಯುವುದಿಲ್ಲ. ಹಾಗಾಗಿ ಕಿಟಕಿಯಲ್ಲಿ ನೋಡಿದಾಗ ನಟಿ ಪ್ರಿಯಾಂಕರವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದೆ. ಕೂಡಲೇ ಕೆಲಸದವಳು ನೆರೆಹೊರೆಯವರಿಗೆ ತಿಳಿಸಿದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪ್ರಿಯಾಂಕರವರು ತಮಿಳು ಟಿವಿ ಯಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದು, ಸದ್ಯಕ್ಕೆ ‘ವಂಶಂ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಅದರಲ್ಲಿ ಬಾಹುಬಲಿ ಖ್ಯಾತಿಯ ನಟಿ ರಮ್ಯಾ ಕೃಷ್ಣನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಆತ್ಮಹತ್ಯೆ ಮಾಡಿಕೊಳ್ಳಲು ಸಾಂಸರಿಕ ಕಲಹ ಕಾರಣವೆಂದು ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಅವರು ಆತ್ಮಹತ್ಯೆಗೆ ಶರಣಾದ ವೇಳೆ ಪತಿ ಬಾಲಾ ಸ್ಥಳದಲ್ಲಿ ಇರಲಿಲ್ಲ. ಅವರಿಬ್ಬರಿಗೂ ಮೂರು ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಇಬ್ಬರ ನಡುವೆ ಆಗಾಗ ಕಲಹಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

  • ಉಡುಪಿ ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣ- 5 ಮರಳು ದಂಧೆಕೋರರ ಗಡಿಪಾರು

    ಉಡುಪಿ ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣ- 5 ಮರಳು ದಂಧೆಕೋರರ ಗಡಿಪಾರು

    ಉಡುಪಿ: ಜಿಲ್ಲಾಧಿಕಾರಿ ಮತ್ತು 6 ಮಂದಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ 14 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅದರಲ್ಲಿ ಐದು ಮಂದಿಯನ್ನು ಗಡಿಪಾರು ಮಾಡಿದ್ದಾರೆ.

    ಉಡುಪಿ ಎಸ್‍ಪಿ ಕೆಟಿ ಬಾಲಕೃಷ್ಣ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಘಟನೆ ನಡೆದ ನಂತರ ಈವರೆಗೆ 150 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ. 8 ಮರಳುಗಾರಿಕಾ ಬೋಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಂಡ್ಲೂರು ಮರಳು ಧಕ್ಕೆ ಯಾರಿಗೆ ಸೇರಿದ್ದು ಎನ್ನುವುದರ ಬಗ್ಗೆ ತನಿಖೆಯಾಗುತ್ತಿದೆ ಎಂದರು.

    ಪ್ರಕರಣ ಸಂಬಂಧ 60 ಮಂದಿಯ ಮೇಲೆ ಐಪಿಸಿ ಸೆಕ್ಷನ್ 107 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. 4 ಮಂದಿಯ ಮೇಲೆ ಐಪಿಸಿ ಸೆಕ್ಷನ್ 110ರ ಅನ್ವಯ ಕೇಸು ದಾಖಲು ಮಾಡಲಾಗಿದೆ. ಈ ಹಿಂದಿನ ಎಲ್ಲಾ ಪ್ರಕರಣಕ್ಕೆ ಸಂಬಂಧಪಟ್ಟಂತೆ 5 ಮಂದಿ ಅಕ್ರಮ ಮರಳು ದಂಧೆಕೋರರನ್ನು ಗಡಿಪಾರು ಮಾಡುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

    ಜಿಲ್ಲಾಧಿಕಾರಿಗಳಿಗೆ ಹಲ್ಲೆ ಮತ್ತು ಕೊಲೆಯತ್ನ ನಡೆಸಿದ ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಅಂದು ಸ್ಥಳದಲ್ಲಿದ್ದವರು ತಲೆಮರೆಸಿಕೊಂಡಿದ್ದಾರೆ ಎಂದು ಎಸ್‍ಪಿ ಕೆಟಿ ಬಾಲಕೃಷ್ಣ ಮಾಹಿತಿ ನೀಡಿದರು.