Tag: priyanka mohan

  • ಕನ್ನಡ ಚಿತ್ರರಂಗ ಇಡೀ ದೇಶನೇ ತಿರುಗಿ ನೋಡುವಂತೆ ಮಾಡಿದೆ: ಪ್ರಿಯಾಂಕ ಮೋಹನ್

    ಕನ್ನಡ ಚಿತ್ರರಂಗ ಇಡೀ ದೇಶನೇ ತಿರುಗಿ ನೋಡುವಂತೆ ಮಾಡಿದೆ: ಪ್ರಿಯಾಂಕ ಮೋಹನ್

    ಹುಭಾಷಾ ನಟಿ ಪ್ರಿಯಾಂಕ ಮೋಹನ್ (Priyanka Mohan) ಅವರು ನಾನು ತಮಿಳು, ಮಲಯಾಳಂ ಸಿನಿಮಾ ಮಾಡಿದ್ರು ನಾನು ಕನ್ನಡದವಳು. ಕನ್ನಡ ಚಿತ್ರರಂಗ ಇಡೀ ದೇಶನೇ ತಿರುಗಿ ನೋಡುವಂತೆ ಮಾಡಿದೆ ಎಂದು ಕನ್ನಡ ಚಿತ್ರರಂಗವನ್ನು ನಟಿ ಹಾಡಿಹೊಗಳಿದ್ದಾರೆ.

    ಮಾರ್ಚ್‌ 1ರಂದು ನಡೆದ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅತಿಥಿಯಾಗಿ ಪ್ರಿಯಾಂಕ ಮೋಹನ್ ಭಾಗಿಯಾಗಿದ್ದರು. ಈ ವೇಳೆ, ಕನ್ನಡ ಸಿನಿಮಾ ರಂಗವನ್ನು ಕೊಂಡಾಡಿದ್ದಾರೆ. ಈ ಸಮಾಂಭದಲ್ಲಿ ನಾನು ಭಾಗವಾಗಿರೋದು ತುಂಬಾ ಖುಷಿಯಿದೆ ಎಂದಿದ್ದಾರೆ. ಸಾಧುಕೋಕಿಲ ಸರ್ ನನ್ನ ಕರೆದಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಇದನ್ನೂ ಓದಿ:ತಲೈವಾ ಜೊತೆ ಸೊಂಟ ಬಳುಕಿಸಲು 2 ಕೋಟಿ ಸಂಭಾವನೆ ಪಡೆದ್ರಾ ಪೂಜಾ ಹೆಗ್ಡೆ?

    ಸಿನಿಮಾಗೆ ಭಾಷೆ ಬೇಲಿ ಇಲ್ಲ, ಅದು ನಿಜ. ನಾನು ತಮಿಳು, ತೆಲುಗು, ಮಲಯಾಳಂನಲ್ಲಿ ಸಿನಿಮಾ ಮಾಡಿದ್ರು ಕೂಡ ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ ಇದರ ಬಗ್ಗೆ ಹೆಮ್ಮೆ ಇದೆ. ಕನ್ನಡ ಚಿತ್ರರಂಗ ದೊಡ್ಡದಾಗಿ ಬೆಳೆದಿದೆ. ಇಡೀ ದೇಶನೇ ತಿರುಗಿ ನೋಡೋ ಹಾಗೇ ಕನ್ನಡ ಚಿತ್ರರಂಗ ಸಿನಿಮಾ ಮಾಡುತ್ತಿದ್ದಾರೆ. ಇದರ ಬಗ್ಗೆ ತುಂಬಾ ಖುಷಿ ಮತ್ತು ಹೆಮ್ಮೆಯಿದೆ. ಸದ್ಯದಲ್ಲೇ ನಾನು ಕೂಡ ಕನ್ನಡ ಸಿನಿಮಾ ಮಾಡ್ತೀನಿ ಅಂತ ಭಾವಿಸಿದ್ದೇನೆ ಎನ್ನುತ್ತಾ ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆಯನ್ನು ಹಂಚಿಕೊಂಡಿದ್ದಾರೆ.

    ಈ ವೇಳೆ, ಕನ್ನಡ ಚಿತ್ರರಂಗದಲ್ಲಿ ಶಿವರಾಜ್‌ಕುಮಾರ್ ಸರ್ ಸೂಪರ್ ಸ್ಟಾರ್. ಆದರೂನು ತಮಿಳಿನಲ್ಲಿ ಜೈಲರ್, ‘ಕ್ಯಾಪ್ಟನ್ ಮಿಲ್ಲರ್’ ಮೂಲಕ ಅವರು ಫೇಮಸ್. ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಶಿವಣ್ಣ ಸರ್ ಜೊತೆ ತೆರೆಹಂಚಿಕೊಂಡಿರೋದು ಹೆಮ್ಮೆಯಿದೆ ಎಂದರು. ಭಾಷೆಗೆ ಬೇಲಿ ಇಲ್ಲ. ಸಿನಿಮಾ ಅಂದರೆ ನಾವೆಲ್ಲ ಒಂದೇ. ಹೀಗೆ ಬೆಂಬಲಿಸುತ್ತಾ ಇರಿ ಎಂದು ನಟಿ ಮಾತನಾಡಿದ್ದಾರೆ.

  • ಡಿವೋರ್ಸ್ ಬಳಿಕ ಪ್ರಿಯಾಂಕಾ ಜೊತೆ 2ನೇ ಮದುವೆಯಾದ್ರಾ ಜಯಂ ರವಿ?

    ಡಿವೋರ್ಸ್ ಬಳಿಕ ಪ್ರಿಯಾಂಕಾ ಜೊತೆ 2ನೇ ಮದುವೆಯಾದ್ರಾ ಜಯಂ ರವಿ?

    ಸೌತ್ ನಟ ಜಯಂ ರವಿ (Jayama Ravi) ಇತ್ತೀಚೆಗೆ ಆರತಿ ಜೊತೆಗಿನ ಡಿವೋರ್ಸ್ ಕುರಿತು ಘೋಷಿಸಿದ ಬೆನ್ನಲ್ಲೇ ಪ್ರಿಯಾಂಕಾ ಮೋಹನ್ (Priyanka Mohan) ಜೊತೆ ಮದುವೆಯಾಗಿದ್ದಾರೆ ಎನ್ನಲಾದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    15 ವರ್ಷಗಳ ದಾಂಪತ್ಯ ಅಂತ್ಯವಾಗಿರುವ ಬಗ್ಗೆ ಜಯಂ ರವಿ ಸೆ.10ರಂದು ಘೋಷಿಸಿದ್ದರು. ಬಳಿಕ ಗಾಯಕಿ ಕೆನಿಷಾ ಜೊತೆ ಜಯಂ ರವಿ ಎಂಗೇಜ್ ಆಗಿದ್ದಾರೆ ಎಂಬ ಸುದ್ದಿ ಕೇಳಿ ಬಂದ ಬೆನ್ನಲ್ಲೇ ಇದು ಸುಳ್ಳು ಸುದ್ದಿ ಎಂದು ನಟ ಜಯಂ ರವಿ ಸ್ಪಷ್ಟನೆ ನೀಡಿದ್ದರು. ಈಗ ಜಯಂ ರವಿ 2ನೇ ಮದುವೆ ಆಗಿದ್ದಾರೆ ಎನ್ನಲಾದ ಫೋಟೋವೊಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

    ಅಸಲಿಗೆ ಕನ್ನಡದ ನಟಿ ಪ್ರಿಯಾಂಕಾ ಮೋಹನ್ ಜೊತೆ ಜಯಂ ರವಿ ಮದುವೆ ಆಗಿಯೇ ಇಲ್ಲ. ಸದ್ಯ ವೈರಲ್ ಆಗಿರುವ ಫೋಟೋ ‘ಬ್ರದರ್’ ಸಿನಿಮಾದಲ್ಲಿರುವ ತುಣುಕಾಗಿದೆ. ಈ ಚಿತ್ರದಲ್ಲಿ ಜಯಂ ರವಿ ಮತ್ತು ಪ್ರಿಯಾಂಕಾ ಜೊತೆಯಾಗಿ ನಟಿಸಿದ್ದಾರೆ. ಚಿತ್ರದಲ್ಲಿನ ನಿಶ್ಚಿತಾರ್ಥದ ತುಣುಕು ನೋಡಿ ನಟನ 2ನೇ ಮದುವೆ ಆಗಿದೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಇದು ಚಿತ್ರೀಕರಣ ಫೋಟೋ ಆಗಿದೆ. ಇದನ್ನೂ ಓದಿ:‘ನನ್ನ ಹೃದಯದ ಒಂದು ಭಾಗ’ ಎನ್ನುತ್ತಾ ಸಿಹಿಸುದ್ದಿ ಕೊಟ್ಟ ಶ್ರೀನಿಧಿ ಶೆಟ್ಟಿ

    ಅಂದಹಾಗೆ, ಜಯಂ ರವಿ, ಪ್ರಿಯಾಂಕಾ ನಟನೆಯ ‘ಬ್ರದರ್’ ಸಿನಿಮಾ ಇದೇ ಅಕ್ಟೋಬರ್ 31ರಂದು ರಿಲೀಸ್ ಆಗುತ್ತಿದೆ.

  • ‘ಕಲ್ಕಿ 2898 ಎಡಿ’ ಸೀಕ್ವೆಲ್‌ನಲ್ಲಿ ನಟಿಸ್ತಾರಾ ನಾನಿ?- ಸ್ಪಷ್ಟನೆ ನೀಡಿದ ನಟ

    ‘ಕಲ್ಕಿ 2898 ಎಡಿ’ ಸೀಕ್ವೆಲ್‌ನಲ್ಲಿ ನಟಿಸ್ತಾರಾ ನಾನಿ?- ಸ್ಪಷ್ಟನೆ ನೀಡಿದ ನಟ

    ತೆಲುಗು ನಟ ನಾನಿ (Actor Nani) ಸದ್ಯ ‘ಸೂರ್ಯನ ಸಾಟರ್ಡೆ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಕಲ್ಕಿ ಸೀಕ್ವೆಲ್‌ನಲ್ಲಿ ನಾನಿ ನಟಿಸುತ್ತಾರೆ ಎಂದು ಹಬ್ಬಿದ ಸುದ್ದಿಗೆ ನಾನಿ ಕ್ಲ್ಯಾರಿಟಿ ನೀಡಿದ್ದಾರೆ. ‘ಕಲ್ಕಿ 2’ನಲ್ಲಿ ನಾನು ನಟಿಸುತ್ತಿಲ್ಲ ಎಂದು ನಾನಿ ಮಾತನಾಡಿದ್ದಾರೆ.

    ಸಂದರ್ಶನವೊಂದರಲ್ಲಿ ನಾನಿ ಮಾತನಾಡಿ, ನಾನು ‘ಕಲ್ಕಿ 2’ ಸಿನಿಮಾದಲ್ಲಿ ನಟಿಸುತ್ತಿಲ್ಲ. ಚಿತ್ರತಂಡ ನನಗೆ ಅಪ್ರೋಚ್ ಕೂಡ ಮಾಡಿಲ್ಲ. ಇದೆಲ್ಲಾ ಸುಳ್ಳು ಸುದ್ದಿ. ಇದೆಲ್ಲಾ ಹೇಗೆ ವೈರಲ್ ಆಯ್ತು ಎಂಬುದು ನನಗೆ ತಿಳಿಯುತ್ತಿಲ್ಲ. ನಿಜಕ್ಕೂ ಈ ಸುದ್ದಿ ಕೇಳಿ ನಾನು ಶಾಕ್‌ ಆದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:‘ಭೀಮ’ ಸಕ್ಸಸ್ ಬೆನ್ನಲ್ಲೇ ಹೊಸ ಸಿನಿಮಾ ಘೋಷಿಸಿದ ದುನಿಯಾ ವಿಜಯ್

    ಅಂದಹಾಗೆ, ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone) ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಯಶಸ್ಸು ಕಂಡಿದೆ. ‘ಕಲ್ಕಿ 2’ ಬರೋದಾಗಿ ಚಿತ್ರತಂಡ ಸುಳಿವು ನೀಡಿದೆ. ಕೆಲದಿನಗಳಿಂದ ‘ಕಲ್ಕಿ 2’ನಲ್ಲಿ ನಾನಿ ಕ್ಯಾಮಿಯೋ ರೋಲ್ ಮಾಡುತ್ತಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

    ಇನ್ನೂ ಆ.29ಕ್ಕೆ ಸೂರ್ಯನ ಸಾಟರ್ಡೆ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ನಾನಿಗೆ ಹೀರೋಯಿನ್ ಆಗಿ ಕನ್ನಡತಿ ಪ್ರಿಯಾಂಕಾ ಮೋಹನ್ (Priyanka Mohan) ನಟಿಸಿದ್ದಾರೆ.

  • ನ್ಯಾಚುರಲ್ ಸ್ಟಾರ್ ನಾನಿಗೆ ಕನ್ನಡತಿ ಪ್ರಿಯಾಂಕಾ ಮೋಹನ್ ಜೋಡಿ

    ನ್ಯಾಚುರಲ್ ಸ್ಟಾರ್ ನಾನಿಗೆ ಕನ್ನಡತಿ ಪ್ರಿಯಾಂಕಾ ಮೋಹನ್ ಜೋಡಿ

    ನ್ಯಾಚುರಲ್ ಸ್ಟಾರ್ ನಾನಿ (Natural Star Nani) ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ‘ಸರಿಪೋಧಾ ಸನಿವಾರಮ್’ (Saripodhaa Sanivaaram) ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗ ನಾನಿಗೆ ಜೋಡಿಯಾಗುವ ನಾಯಕಿಯ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ. ಕನ್ನಡತಿ ಪ್ರಿಯಾಂಕಾ ಮೋಹನ್ (Priyanka Mohan) ಅವರು ನಾನಿಗೆ ಮತ್ತೊಮ್ಮೆ ಜೋಡಿಯಾಗಿದ್ದಾರೆ.

    ಬೆಂಗಳೂರಿನ ಬೆಡಗಿ ಪ್ರಿಯಾಂಕಾ ಮೋಹನ್ ಈಗ ತೆಲುಗು, ತಮಿಳು ಸಿನಿಮಾದಲ್ಲಿ ಗುರುತಿಸಿಕೊಳ್ತಿದ್ದಾರೆ. ಸದ್ಯ ನಾನಿ ಸಿನಿಮಾದಲ್ಲಿನ‌ ಪ್ರಿಯಾಂಕಾ ಲುಕ್ ರಿವೀಲ್ ಆಗಿದೆ. ಪೊಲೀಸ್ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಚಾರುಲತಾ ಎಂಬ ಪಾತ್ರಕ್ಕೆ ನಟಿ ಜೀವ ತುಂಬಲಿದ್ದಾರೆ. ಇದನ್ನೂ ಓದಿ:ಕನ್ನಡ ಚಿತ್ರಕ್ಕೆ 30 ಲಕ್ಷ ಸಂಭಾವನೆ: ಶಾನ್ವಿ ಶ್ರೀವಾಸ್ತವ್

    ಈ ಹಿಂದೆ ನಾನಿಗೆ ಹೀರೋಯಿನ್ ಆಗಿ ‘ಗ್ಯಾಂಗ್ ಲೀಡರ್’ ಎಂಬ ಸಿನಿಮಾ ಮಾಡಿದ್ದರು. ಈ ಚಿತ್ರವನ್ನು ವಿವೇಕ್ ಆತ್ರೇಯಾ ನಿರ್ದೇಶನ ಮಾಡಿದ್ದರು. ಈಗ ನಾನಿ ಮತ್ತು ಪ್ರಿಯಾಂಕಾ ಹೊಸ ಚಿತ್ರಕ್ಕೂ ಅವರೇ ನಿರ್ದೇಶನ ಮಾಡ್ತಿದ್ದಾರೆ.

    ಅಂದಹಾಗೆ, ಪ್ರಿಯಾಂಕಾ ಸೌತ್‌ನಲ್ಲಿ ಗುರುತಿಸಿಕೊಳ್ಳುವ ಮುನ್ನ ಕನ್ನಡದ ‘ಒಂದ್ ಕಥೆ ಹೇಳ್ಲಾ’ ಎಂಬ ಸಿನಿಮಾ ಮಾಡಿದ್ದರು. 2019ರಲ್ಲಿ ಈ ಸಿನಿಮಾ ತೆರೆಕಂಡಿತ್ತು.

  • Nani 31: ನಾನಿಗೆ ನಾಯಕಿಯಾದ ಕನ್ನಡದ ನಟಿ ಪ್ರಿಯಾಂಕಾ ಅರುಳ್ ಮೋಹನ್

    Nani 31: ನಾನಿಗೆ ನಾಯಕಿಯಾದ ಕನ್ನಡದ ನಟಿ ಪ್ರಿಯಾಂಕಾ ಅರುಳ್ ಮೋಹನ್

    ನ್ಯಾಚುರಲ್ ಸ್ಟಾರ್ ನಾನಿ (Nani) ಈಗ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ದಸರಾ ಸಿನಿಮಾದ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಅವರು ಸಾಲು ಸಾಲು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ನಾನಿ 31ನೇ ಸಿನಿಮಾ ಅನೌನ್ಸ್ ಆಗಿತ್ತು. ಈ ಹಿಂದೆ ಕಾಮಿಡಿ ಕಥಾಹಂದರದ ‘ಅಂಟೆ ಸುಂದರಾನಿಕಿ’ ಎಂಬ ಚಿತ್ರ ನಿರ್ದೇಶನ ಮಾಡಿದ್ದ ವಿವೇಕ್ ಆತ್ರೇಯಾ ಮತ್ತೊಮ್ಮೆ ನಾನಿ ಜೊತೆ ಕೈ ಜೋಡಿಸಿದ್ದಾರೆ.

    ದಸರಾ ಹಬ್ಬದ ಅಂಗವಾಗಿ ಹೈದ್ರಾಬಾದ್‌ನಲ್ಲಿ ‘ಸೂರ್ಯನ ಶನಿವಾರ’ ಸಿನಿಮಾ ಸೆಟ್ಟೇರಿದೆ. ನಿರ್ಮಾಪಕ ಡಿವಿವಿ ದಾನಯ್ಯ ಚಿತ್ರಕಥೆಯನ್ನು ನಿರ್ದೇಶಕರಿಗೆ ಹಸ್ತಾಂತರಿಸಿದರು. ನಿರ್ಮಾಪಕ ದಿಲ್ ರಾಜು ಕ್ಯಾಮೆರಾಗೆ ಚಾಲನೆ ನೀಡಿದ್ರೆ, ವಿವಿ ವಿನಾಯಕ್ ಕ್ಲಾಪ್ ಮಾಡಿದರು. ನಟ ಎಸ್.ಜೆ.ಸೂರ್ಯ ಸೇರಿದಂತೆ ಇಡೀ ಚಿತ್ರತಂಡ ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ‘ಸೂರ್ಯನ ಶನಿವಾರ’ ಪಕ್ಕ ಮಾಸ್ ಆಕ್ಷನ್ ಎಂಟರ್ ಟೈನರ್ ಚಿತ್ರವಾಗಿದ್ದು, ಈ ಸಿನಿಮಾದ ಕಥೆ ಹಾಗೂ ಪಾತ್ರಕ್ಕಾಗಿ ನಾನಿ ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರೆ. ಕನ್ನಡದ ನಟಿ ಪ್ರಿಯಾಂಕಾ ಅರುಳ್ ಮೋಹನ್ ನಾಯಕಿಯಾಗಿದ್ದು, ತಮಿಳು ಸ್ಟಾರ್ ನಟ ಎಸ್‌ಜೆ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

    ಈ ಚಿತ್ರಕ್ಕೆ ಜೇಕ್ಸ್ ಬಿಜಾಯ್ ಸಂಗೀತ, ಮುರಳಿ ಜಿ ಛಾಯಾಗ್ರಹಣವಿದೆ. ‘ಸೂರ್ಯನ ಶನಿವಾರ’ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬರಲಿದೆ. ಆರ್‌ಆರ್‌ಆರ್ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಡಿಡಿವಿ ಎಂಟರ್ ಟೈನರ್ ಬ್ಯಾನರ್ ನಡಿಯಲ್ಲಿ ದಾನಯ್ಯ ಹಾಗೂ ಕಲ್ಯಾಣ್ ದಾಸರಿ ‘ಸೂರ್ಯನ ಶನಿವಾರ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]