Tag: priyanka kharge

  • ವೀಡಿಯೋ: ಬಿಜೆಪಿ ಅಂದ್ರೆ ಬ್ರೋಕರ್‌ ಜನತಾ ಪಕ್ಷವೆಂದ ಪ್ರಿಯಾಂಕ್ ಖರ್ಗೆ

    ವೀಡಿಯೋ: ಬಿಜೆಪಿ ಅಂದ್ರೆ ಬ್ರೋಕರ್‌ ಜನತಾ ಪಕ್ಷವೆಂದ ಪ್ರಿಯಾಂಕ್ ಖರ್ಗೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮರಿ ಖರ್ಗೆ ಹೆಸರು ಗಂಡೋ, ಹೆಣ್ಣೋ ಎಂಬ ಕ್ಲಾರಿಟಿ ಇಲ್ಲ: ಪ್ರತಾಪ್ ಸಿಂಹ

    ಮರಿ ಖರ್ಗೆ ಹೆಸರು ಗಂಡೋ, ಹೆಣ್ಣೋ ಎಂಬ ಕ್ಲಾರಿಟಿ ಇಲ್ಲ: ಪ್ರತಾಪ್ ಸಿಂಹ

    ಮೈಸೂರು: ಮರಿ ಖರ್ಗೆ ಹೆಸರು ಗಂಡೋ ಅಥವಾ ಹೆಣ್ಣೋ ಎಂಬುವುದು ಗೊತ್ತೆ ಆಗುವುದಿಲ್ಲ ಎಂದು ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

    ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಸಂಚಲನ ಸೃಷ್ಟಿಸಿದೆ. ಶನಿವಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಬಸವರಾಜ ಬೊಮ್ಮಾಯಿ ಅವರು ಗೃಹಸಚಿವರಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ. ಬಹುಕೋಟಿ ಹಗರಣದಲ್ಲಿ ಕರ್ನಾಟಕ ಸರ್ಕಾರವೇ ಭಾಗಿಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ಬಿಟ್‌ ಕಾಯಿನ್ ಹಗರಣದ ಹಿಂದೆ ಯಾರ‍್ಯಾರಿದ್ದಾರೆ ಖಂಡಿತವಾಗಿಯೂ ಬಲಿ ಹಾಕ್ತೇವೆ: ಬಸವರಾಜ ಬೊಮ್ಮಾಯಿ

    ಸದ್ಯ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಅವರು ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದೇ ವೇಳೆ ನಾನು ಪತ್ರಿಕೋದ್ಯಮದಿಂದ ಬಂದಂತಹ ವ್ಯಕ್ತಿ. ನಾನು ಪತ್ರಿಕೆ ಮೂಲಕವೇ ಘರ್ಜಿಸಿದ್ದಂತವನು. ಪೇಪರ್ ಸಿಂಹ ಅಂದರೆ ನನಗೆ ಯಾವುದೇ ಬೇಸರ ಇಲ್ಲ. ಪ್ರತ್ರಿಕೋದ್ಯಮದ ಮೂಖಾಂತರ ಇಂದು ನಾನು ಮೈಸೂರು ಮತ್ತು ಕೊಡಗಿನಂತಹ ಕಷ್ಟದ ಎರಡು ಕ್ಷೇತ್ರಗಳಲ್ಲಿ ಸಂಸದನಾಗಿದ್ದೇನೆ. ನನ್ನ ಪ್ರಾಮಾಣಿಕ ಬರವಣಿಗೆ ಮೂಲಕ ನಾನು ಇಂದು ಈ ಸ್ಥಾನದಲ್ಲಿ ಕುಳಿತುಕೊಂಡಿದ್ದೇನೆ. ಆದ್ರೆ ನನ್ನನ್ನು ಪೇಪರ್ ಸಿಂಹ ಎಂದು ಹೇಳುತ್ತಿರುವ ಮರಿ ಖರ್ಗೆ ಹೆಸರು ಗಂಡೋ, ಹೆಣ್ಣೋ ಯಾರಿಗೂ ಗೊತ್ತೆ ಆಗುವುದಿಲ್ಲ. ಏಕೆಂದರೆ ಅವರು ರಾಜೀವ್ ಗಾಂಧಿ ಮಗಳ ಹೆಸರು ಇಟ್ಟುಕೊಂಡಿದ್ದಾರೆ. ಹೆಸರಲ್ಲೂ ಕೂಡ ಸ್ವಂತತೆ ಇಲ್ಲ ಎಂದು ಅಣುಕಿಸಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದಲ್ಲಿ ಯಾವ ನಟರೂ ಇಲ್ಲ – ಕಾಂಗ್ರೆಸ್ ಆರೋಪಕ್ಕೆ ಸುಧಾಕರ್ ತಿರುಗೇಟು

    ಸ್ವಂತತೆ ಇಲ್ಲದಂತಹ ವ್ಯಕ್ತಿಯನ್ನು ಚುನಾವಣೆಯಲ್ಲಿ ನಿಲ್ಲಿಸಿ ಸೋತು. ಮತ್ತೆ ಎರಡನೇ ಭಾರೀ ಅವರನ್ನು ಗೆಲ್ಲಿಸಿ. ನಾನು ಬದುಕಿದ್ದಾಗಲೇ ಅವರನ್ನು ಮಂತ್ರಿ ಮಾಡಬೇಕೆಂದು ಮಲ್ಲಿಕಾರ್ಜುನ ಖರ್ಗೆ ಅವರು ಬಾಬು ರಾವ್ ಚಿಂತನ್ ಸುಳಿ, ಜಾಧವ್ ಅವರನ್ನೆಲ್ಲಾ ಬದಿಗೊತ್ತಿ ಮಗನಿಗೆ ಮಂತ್ರಿ ಸ್ಥಾನ ಕೊಡಿಸಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಸರದಾರ ಅಂತ ಅನಿಸಿಕೊಂಡು ಖರ್ಗೆ ಅವರು ಮೂಲೆ ಕುಳಿತುಕೊಳ್ಳಬೇಕಾಯಿತು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವ್ರೆ ಯಾರೋ ಬರೆದ್ಕೊಟ್ಟ ಬಜೆಟ್ ಓದಿದಂಗಲ್ಲಾ ಬಿಟ್ ಕಾಯಿನ್ ವಹಿವಾಟು: ಪ್ರತಾಪ್ ಸಿಂಹ

    ಬಡವ, ನಿರ್ಗತಿಕ ಶೋಷಿತ ವರ್ಗದವರು ತುಳಿತಕ್ಕೊಳಗದವರು ಅಂತ ಅನಿಸಿಕೊಂಡು ಡಾಲರ್ಸ್ ಕಾಲೋನಿ, ಸದಾ ಶಿವನಗರದಲ್ಲಿ ನಾಲ್ಕು-ನಾಲ್ಕು ಮನೆ ಕಟ್ಟಿಕೊಂಡು, ಕಾಲಿಗೊಂದು, ಕೈಗೊಂದು ಬಿಎಂಡಬ್ಲೂ, ಆಡಿ ಕಾರುಗಳನ್ನು ಇಟ್ಟುಕೊಂಡು ಓಡಾಡುವಂತಹ ವ್ಯಕ್ತಿಗಳ ಬಾಯಿಂದ ಹಳೆಯ ಕಾಲದ ಕುರ್ತಾ ಹಾಕಿಕೊಂಡು ಓಡಾಡುವಂತಹ ನಮ್ಮ ನಳಿನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಆರೋಪಗಳನ್ನು ಕೇಳುವಂತಹದು ಅಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ ಎಂದು ಪ್ರಿಯಾಂಕ ಖರ್ಗೆಗೆ ತಿರುಗೇಟು ನೀಡಿದ್ದಾರೆ.

  • ತಂದೆ ನಾಮಪತ್ರ ಸಲ್ಲಿಕೆ ಟೈಮ್ ಫಿಕ್ಸ್ ಮಾಡೋದು ನಮ್ಮ ತಾಯಿ: ಪ್ರಿಯಾಂಕ್ ಖರ್ಗೆ

    ತಂದೆ ನಾಮಪತ್ರ ಸಲ್ಲಿಕೆ ಟೈಮ್ ಫಿಕ್ಸ್ ಮಾಡೋದು ನಮ್ಮ ತಾಯಿ: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಅವರು ಯಾವ ಸಮಯದಲ್ಲಿ ನಾಮಪತ್ರ ಸಲ್ಲಿಕೆ ಮಾಡಬೇಕು ಎಂದು ಸಮಯ ನಿಗದಿ ಮಾಡುವುದು ನಮ್ಮ ತಾಯಿ. ಇನ್ನು ಅವರು ಈ ಬಗ್ಗೆ ಸಮಯ ನೀಡಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

    ಕಲಬುರಗಿಯ ಗ್ರ್ಯಾಂಡ್ ಹೋಟೆಲಿನಲ್ಲಿ ಮೈತ್ರಿ ಪಕ್ಷಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡುವ ಸಮಯವನ್ನು ತಾಯಿ ರಾಧಾಬಾಯಿ ಅವರು ಮಾಡುತ್ತಾರೆ. ನಾಳೆ ನಮ್ಮ ತಂದೆ ನಾಮಪತ್ರ ಸಲ್ಲಿಸಲಿದ್ದಾರೆ. ಆದರೆ ಯಾವ ಸಮಯಕ್ಕೆ ಎಂದು ಇನ್ನು ಸಮಯ ನಿಗದಿಯಾಗಿಲ್ಲ. ನಮ್ಮ ಕುಟುಂಬದಲ್ಲಿ ಇದೊಂದು ಜವಾಬ್ದಾರಿಯನ್ನ ಮಾತ್ರ ನಮ್ಮ ತಾಯಿ ಅವರಿಗೆ ನೀಡಿದ್ದೇವೆ. ಇಂದು ಸಂಜೆ ಖರ್ಗೆಯವರು ಶರಣಬಸವೇಶ್ವರ ದೇಗುಲ, ಖ್ಚಾಜಾ ಬಂದೇ ನವಾಜ್ ದರ್ಗಾ, ಬುದ್ಧವಿಹಾರಕ್ಕೆ ಭೇಟಿ ನೀಡಿ ಆರ್ಶೀವಾದ ಪಡೆಯಲಿದ್ದಾರೆ ಎಂದರು.

    ಇದೇ ವೇಳೆ ಮೈತ್ರಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಜೆಡಿಎಸ್ ಮುಖಂಡರಾದ ರೇವುನಾಯಕ್ ಬೆಳಮಗಿ ಸೇರಿದಂತೆ ಯಾರನ್ನು ಕಡೆಗಣಿಸಿಲ್ಲ. ಬಿಜೆಪಿ ನಾಯಕರು ಸುಳ್ಳಿನ ಸರಮಾಲೆಯನ್ನು ಹೆಣೆಯುತ್ತಿದ್ದಾರೆ. ‘ಸಬ್ ಕಾ ಸಾಥ್ ಸಬ್ ಬಾ ವಿಕಾಸ್’ ಎಲ್ಲಿ ಆಗಿದೆ ಹೇಳಿ? ಮೋದಿ ಕಲಬುರಗಿ ಬಂದಾಗ ಕೋಲಿ ಸಮಾಜವನ್ನ ಎಸ್‍ಟಿ ಸಮುದಾಯಕ್ಕೆ ಸೇರಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಕೋಲಿ ಸಮಾಜವನ್ನ ಎಸ್‍ಟಿಗೆ ಸೇರಿಸುವಂತೆ ಕೇಂದ್ರಕ್ಕೆ ನೀಯೋಗ ಕೂಡ ಕರೆದುಕೊಂಡು ಹೋಗಿದ್ದೆವು. ಆದರೆ ನಿಯೋಗಕ್ಕೆ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ ಎಂದರು.

    ಹಿರಿಯ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರ ಬಿಜೆಪಿ ಸೇರ್ಪಡೆ ವಿಚಾರ ಪ್ರತಿಕ್ರಿಯೆ ನೀಡಿ, ರತ್ನಪ್ರಭಾ ಅವರು ನಮ್ಮ ಸರ್ಕಾರದಲ್ಲಿ ಕೆಲಸ ಮಾಡಿದಕ್ಕೆ ಕಾಂಗ್ರೆಸ್ ಪಕ್ಷವನ್ನೇ ಸೇರಬೇಕೆಂಬ ನಿಯಮವಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಯಾವ ಪಕ್ಷಕ್ಕೂ ಸೇರ್ಪಡೆಯಾಗಬಹುದು. ಅಷ್ಟಕ್ಕೂ ರತ್ನಪ್ರಭಾ ಅವರು ಈ ಹಿಂದೆ ಬೀದರ್ ಡಿಸಿ ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತರಾಗಿದ್ದರು. ಅವರಿಗೆ ಖರ್ಗೆ ಅವರ ಕಾರ್ಯವೈಖರಿ ಚೆನ್ನಾಗಿ ಗೊತ್ತಿರುತ್ತೆ. ಹೀಗಾಗಿ ಏನು ಪ್ರಚಾರ ಮಾಡುತ್ತಾರೆ ಎಂಬುದು ನೋಡಬೇಕು. ಜಾಧವ್ ಪರ ಪ್ರಚಾರ ಮಾಡುವುದರಿಂದ ನಮಗೇ ಯಾವುದೇ ಹಿನ್ನೆಡೆಯಾಗಲ್ಲ ವಿಶ್ವಾಸ ವ್ಯಕ್ತಪಡಿಸಿದರು.

  • ಹಣಕಾಸು `ಕ್ಯಾತೆ’ ಆಯ್ತು ಈಗ ಕಾಂಗ್ರೆಸ್ ಪ್ರಭಾವಿ ಮಕ್ಕಳ ನಡುವೆ ಕುಸ್ತಿ!

    ಹಣಕಾಸು `ಕ್ಯಾತೆ’ ಆಯ್ತು ಈಗ ಕಾಂಗ್ರೆಸ್ ಪ್ರಭಾವಿ ಮಕ್ಕಳ ನಡುವೆ ಕುಸ್ತಿ!

    ಬೆಂಗಳೂರು: ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ರಚನೆ ಕಸರತ್ತು ಮುಂದುವರಿದಿದ್ದು, ಕಾಂಗ್ರೆಸ್ ನಾಯಕರ ಪುತ್ರರ ನಡುವೆ ಸಚಿವ ಸ್ಥಾನದ ಕುರಿತು ಪೈಪೋಟಿ ಆರಂಭವಾಗಿದೆ.

    ಇದರ ನಡುವೆ ರಾಜ್ಯದ ಪ್ರಭಾವಿ ಕಾಂಗ್ರೆಸ್ ಮುಖಂಡರು ಸಹ ತಮ್ಮ ಮಕ್ಕಳಿಗೆ ಸಚಿವ ಸ್ಥಾನ ಕೊಡಿಸಲು ಮುಂದಾಗಿದ್ದು, ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಲು ನಾಲ್ವರು ಕಾಂಗ್ರೆಸ್ ನಾಯಕರ ಮಕ್ಕಳ ಮಧ್ಯೆ ತೀವ್ರ ಪೈಪೋಟಿ ಆರಂಭವಾಗಿದೆ.

    ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಪುತ್ರ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಅವರು ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ಮೈಸೂರು ಭಾಗದ ಕೋಟಾದಲ್ಲಿ ಸಚಿವ ಸ್ಥಾನ ನೀಡಲು ಒತ್ತಡ ಹೆಚ್ಚಾಗಿದೆ. ಆದರೆ ಇಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ ಅವರು ಸಹ ಸಚಿವ ಸ್ಥಾನಕ್ಕೆ ಒತ್ತಡ ಹಾಕುತ್ತಿರುವ ಪರಿಣಾಮ ಪೈಪೋಟಿಗೆ ಕಾರಣವಾಗಿದೆ.

    ಕಲಬುರಗಿ ಜಿಲ್ಲಾ ಕೋಟಾದಡಿ ಸಂಸದ ಮಲ್ಲಿಕಾರ್ಜುನ ಖರ್ಗೆ ಪುತ್ರ ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ ಸಹ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಇಲ್ಲಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪುತ್ರ ಜೇವರ್ಗಿ ಶಾಸಕ ಅಜಯ್ ಸಿಂಗ್ ಇರುವ ಕಾರಣ ಯಾರಿಗೆ ಮಂತ್ರಿಸ್ಥಾನ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.

    ಈ ಬಾರಿಯ ಸಂಪುಟದಲ್ಲಿ ಸ್ಥಾನ ಪಡೆಯಲು ಮಹಿಳಾ ಶಾಸಕಿಯರ ನಡುವೆಯೂ ಸ್ಪರ್ಧೆ ಆರಂಭವಾಗಿದ್ದು, ಮಹಿಳಾ ಕೋಟಾದಡಿ ಕೇಂದ್ರದ ಮಾಜಿ ಸಚಿವ, ಸಂಸದ ಮುನಿಯಪ್ಪ ಪುತ್ರಿ ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಾ ಶಶಿಧರ್ ಹೆಸರು ಚರ್ಚೆಯಾಗುತ್ತಿದೆ. ಆದರೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಈ ರೇಸ್ ನಲ್ಲಿದ್ದಾರೆ.

    ಕಾಂಗ್ರೆಸ್ ನಾಯಕರ ಮಕ್ಕಳ ಈ ಪೈಪೋಟಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಡಿವಾಣ ಹಾಕುವ ಸಾಧ್ಯತೆ ಇದ್ದು, ಯುವ ನಾಯಕರಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವುದು ಕಾದುನೋಡಬೇಕಿದೆ.

  • ನಿಮ್ಮ ಕಾಲುಬಾಯಿ ರೋಗದಿಂದ ಉಪಚುನಾವಣೆ ಸೋತಿದ್ದೀರಿ- ಪ್ರತಾಪ್ ಸಿಂಹ, ಪ್ರಿಯಾಂಕ ಖರ್ಗೆ ಟ್ಟಿಟ್ಟರ್ ವಾರ್

    ನಿಮ್ಮ ಕಾಲುಬಾಯಿ ರೋಗದಿಂದ ಉಪಚುನಾವಣೆ ಸೋತಿದ್ದೀರಿ- ಪ್ರತಾಪ್ ಸಿಂಹ, ಪ್ರಿಯಾಂಕ ಖರ್ಗೆ ಟ್ಟಿಟ್ಟರ್ ವಾರ್

    ಮೈಸೂರು: ಸಂಸದ ಪ್ರತಾಪ್ ಸಿಂಹ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಮಧ್ಯೆ ಟ್ವಿಟ್ಟರ್ ವಾರ್ ನಡೆದಿದೆ.

    ಉಪಚುನಾವಣೆ ಫಲಿತಾಂಶ ಚರ್ಚೆಯ ವೇಳೆ ಪ್ರತಾಪ್ ಸಿಂಹರನ್ನು ಪ್ರಿಯಾಂಕ ಖರ್ಗೆ `ಪೇಪರ್ ಸಿಂಹ’ ಎಂದು ಕರೆದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಪ್ರತಾಪ್ ಸಿಂಹ, ನಿಮ್ಮ ಪ್ರಿಯಾಂಕಾ ಎಂಬ ಹೆಸರೇ ನೆಹರು ಕುಟುಂಬದ ಗುಲಾಮಗಿರಿಯ ಸಂಕೇತ. ಮಾತಾಡುವಾಗ ಎಚ್ಚರವಿರಲಿ ಎಂದಿದ್ದಾರೆ. ಇದೇ ವೇಳೆ ನಿಮಗೆ ತಾಕತ್ ಇದ್ದರೆ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಅಂತ ಪ್ರತಾಪ್ ಸಿಂಹ ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬೇಕಿದ್ದರೆ ನಿಮ್ಮ ಎದುರಲ್ಲೆ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಅಂತ ಪ್ರತಿಸವಾಲು ಹಾಕಿದ್ದಾರೆ.

    ಸವಾಲಿಗೆ ಉತ್ತರಿಸಿದ ಪ್ರತಾಪ್ ಸಿಂಹ, ನಾನು ನಿಮ್ಮ ಸಿಎಂ ತವರಿನಲ್ಲೆ ನಿಂತು ಗೆದ್ದಿದ್ದೇನೆ. ಮೀಸಲು ಕ್ಷೇತ್ರದಲ್ಲಿ ಸೋತಿರುವ ನೀವೇಕೆ, ನಿಮ್ಮ ತಂದೆಯೇ ನನ್ನ ಎದುರು ಸ್ಪರ್ಧಿಸಲಿ ಎಂದು ಪಂಥಾಹ್ವಾನ ನೀಡಿದ್ದಾರೆ.

    ಇದಕ್ಕೆ ಪ್ರಿಯಾಂಕ್ ಖರ್ಗೆ, ನೀವು ಸೋಲಿನಿಂದ ಪಾಠ ಕಲಿತಿಲ್ಲ. ನನ್ನನ್ನು ಗೇಲಿ ಮಾಡುತ್ತಿದ್ದೀರಿ. ನಿಮ್ಮ ಕಾಲುಬಾಯಿ ರೋಗದಿಂದ ಉಪ ಚುನಾವಣೆ ಸೋತಿದ್ದೀರಿ ಅಂತ ಕುಟುಕಿದ್ದಾರೆ.