Tag: priyanka gupta

  • ಹೆಣ್ಮಕ್ಳು ಮನೆಯಲ್ಲಿರೋಕೆ ಲಾಯಕ್ಕು – ಚಹಾ ಅಂಗಡಿ ಬಂದ್ ಆಗಿದ್ದಕ್ಕೆ ಬಿಕ್ಕಿ, ಬಿಕ್ಕಿ ಅತ್ತ ಚಾಯ್‌ವಾಲಿ

    ಹೆಣ್ಮಕ್ಳು ಮನೆಯಲ್ಲಿರೋಕೆ ಲಾಯಕ್ಕು – ಚಹಾ ಅಂಗಡಿ ಬಂದ್ ಆಗಿದ್ದಕ್ಕೆ ಬಿಕ್ಕಿ, ಬಿಕ್ಕಿ ಅತ್ತ ಚಾಯ್‌ವಾಲಿ

    ಪಾಟ್ನಾ: ಯುವತಿಯೊಬ್ಬಳು ತಾನು ತೆರೆದ ಚಹಾದ ಮಳಿಗೆಯನ್ನು ಅಧಿಕಾರಿಗಳು ಬಂದ್ ಮಾಡಿದ್ದಕ್ಕೆ ಕಣ್ಣೀರಿಟ್ಟ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

    ಅರ್ಥಶಾಸ್ತ್ರ ಪದವೀಧರೆಯಾಗಿದ್ದ ಪ್ರಿಯಾಂಕಾ ಗುಪ್ತಾ (Priyanka Gupta) 2 ವರ್ಷಗಳಿಂದ ಅಲೆದಾಡಿ ಕೆಲಸ ಸಿಗದೇ ಚಹಾದ ಅಂಗಡಿ ತೆರೆದಿದ್ದರು. ಟೀ ಸ್ಟಾಲ್ (Tea Stall) ತೆರೆಯಲು ಪೊಲೀಸ್ ಕಮೀಷನರ್ ಬಳಿ ಅನುಮತಿ ಪಡೆದು ಇತರ ದಾಖಲೆ ಎಲ್ಲವನ್ನು ಹೊಂದಿದ್ದ ಪ್ರಿಯಾಂಕ `ಗ್ರಾಜುವೇಟ್ ಚಾಯಿವಾಲಿ’ (Graduate Chaiwali) ಎಂದು ಹೆಸರಿಟ್ಟಿದ್ದರು. ಚಾಯ್ ಸ್ಪೆಷಲಿಸ್ಟ್ ಆಗಿದ್ದ ಇವರ ಕೈ ರುಚಿ ಯುವಜನರನ್ನು ಬೇಗನೆ ಸೆಳೆಯುತ್ತಿದ್ದರು. ಉತ್ತಮವಾಗಿ ವ್ಯಾಪಾರ ನಡೆಯುತ್ತಿದ್ದ ಟೀಸ್ಟಾಲ್ ಅನ್ನು ರಾತ್ರೋರಾತ್ರಿ ಅಧಿಕಾರಿಗಳು ತೆರವು ಮಾಡಿಬಿಟ್ಟಿದ್ದರು. ಇದಾದ ಬಳಿಕ ಪ್ರಿಯಾಂಕ ಅವರ ಟೀಸ್ಟಾಲ್ ಗೆ ನಾನಾ ತೊಂದರೆಗಳು ಶುರುವಾಯಿತು. ಇದರಿಂದ ಬೇಸತ್ತು ಹೋದ ಪ್ರಿಯಾಂಕ ಸ್ಥಳೀಯ ರಾಜಕೀಯ ಮುಖಂಡರ (Political Leader) ಬಳಿ ಮನವಿ ಮಾಡಿ ಟೀಸ್ಟಾಲನ್ನು ಮತ್ತೆ ಅದೇ ಜಾಗದಲ್ಲಿ ಇಟ್ಟಿದ್ದರು.

    ಇತ್ತೀಚೆಗೆ ಮತ್ತೊಮ್ಮೆ `ಗ್ರಾಜುವೇಟ್ ಚಾಯಿವಾಲಿ’ ಸ್ಟಾಲ್ ತೆರವಿಗೆ ಬಿಹಾರದ ಪಾಟ್ನಾ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ನೋಟಿಸ್ ನೀಡಿದ್ದು, ಸ್ಥಳವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನುವ ಕಾರಣ ಕೊಟ್ಟಿದ್ದಾರೆ. ಇದರಿಂದ ಪ್ರಿಯಾಂಕಾ ಭಾವುಕರಾಗಿ ಅಧಿಕಾರಿಗಳ ವಿರುದ್ಧ, ವ್ಯವಸ್ಥೆಯ ವಿರುದ್ಧ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ

    ಇಲ್ಲಿ ಹೆಣ್ಣು ಎಂದರೆ ಅಡುಗೆ ಮನೆಯಲ್ಲಿ ಇರಲು ಲಾಯಕ್ಕು. ಹೆಣ್ಣಿಗೆ ಮುಂದುವರೆಸಲು ಅವಕಾಶವಿಲ್ಲ. ಬಿಹಾರದ ಪಾಟ್ನಾದಲ್ಲಿ ಅಕ್ರಮ ಮದ್ಯ ಮಾರಾಟ ಸೇರಿದಂತೆ ಹಲವು ಅಕ್ರಮ ಕೆಲಸಗಳು ನಡೆಯುತ್ತವೆ. ಇಲ್ಲಿ ವ್ಯವಸ್ಥೆ ಜೀವಂತವಾಗಿಲ್ಲ. ಇಲ್ಲಿ ಹೆಣ್ಣೊಬ್ಬಳು ವ್ಯಾಪಾರ ಆರಂಭಿಸಿದರೆ ಅವಳಿಗೆ ಪದೇ ಪದೇ ಅಡ್ಡಗಾಲು ಹಾಕುತ್ತಾರೆ. ನನ್ನ ಜೀವನವು ಅಡುಗೆ ಮನೆಗೆ, ನೆಲ ಗುಡಿಸೋದಕ್ಕೆ, ಮದುವೆಯಾಗೋಕೆ ಇದೆಯೇ ಹೊರತು ಮನೆಯಿಂದ ಹೊರಬಂದು ಸ್ವಂತ ವ್ಯವಹಾರ ಮಾಡೋದಕ್ಕೆ ಅಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಂತ ಉದ್ಯಮದ ಕನಸು ನನಸು – B ಟೆಕ್ ವಿದ್ಯಾರ್ಥಿನಿ ಈಗ `ಚಾಯ್‌ವಾಲಿ’

    ಕೆಲವರು ಇದಕ್ಕೆ ಋಣಾತ್ಮಕ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ, ಧನ್ಯವಾದಗಳು, ನೀವು ಮಹಿಳೆಯಾಗಿದ್ದೀರಿ, ಮನೆಯಲ್ಲಿದ್ದೀರಿ, ಹೊರಗೆ ಏನನ್ನೂ ಮಾಡುವ ಅಗತ್ಯವಿಲ್ಲ ಏಕೆಂದರೆ ಅದು ಬಿಹಾರ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಹಾ ಅಂಗಡಿ ತೆರೆದು ಬದುಕು ಕಟ್ಟಿಕೊಂಡ ಅರ್ಥಶಾಸ್ತ್ರ ಪದವೀಧರೆ

    ಚಹಾ ಅಂಗಡಿ ತೆರೆದು ಬದುಕು ಕಟ್ಟಿಕೊಂಡ ಅರ್ಥಶಾಸ್ತ್ರ ಪದವೀಧರೆ

    ಪಾಟ್ನಾ: ಉನ್ನತ ಶಿಕ್ಷಣ ಪಡೆದರೂ ಹಲವು ಮಂದಿಗೆ ಕೆಲಸ ಸಿಗದೆ ಮನೆಯಲ್ಲಿಯೇ ಇರುವ ಅನೇಕ ಉದಾಹರಣೆಗಳು ಮನಮ್ಮ ಕಣ್ಣ ಮುಂದಿವೆ. ಆದರೆ ಇಲ್ಲೊಬ್ಬ ಯುವತಿ ಮಾತ್ರ ತನಗೆ ಕೆಲಸ ಸಿಕ್ಕಿಲ್ಲ ಎಂದು ಕೈ ಕಟ್ಟಿ ಕುಳಿತುಕೊಳ್ಳದೆ ಪರ್ಯಾಯ ಉಪಾಯ ಕಂಡುಕೊಂಡು ಜೀವನ ರೂಪಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಹೌದು. ಪ್ರಿಯಾಂಕಾ ಗುಪ್ತಾ ಪರ್ಯಾಯ ಮಾರ್ಗ ಕಂಡುಕೊಂಡು ಯಶಸ್ಸು ಕಂಡ ಯುವತಿ. ಪಾಟ್ನಾ ಮೂಲದವರಾಗಿರುವ ಈಕೆ 2019ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಆದರೆ ಆ ಬಳಿಕ ಇವರು ಸಾಕಷ್ಟು ಕಡೆಗಳಲ್ಲಿ ಪ್ರಯತ್ನಿಸಿದರೂ ಎಲ್ಲಿಯೂ ಉದ್ಯೋಗ ದೊರಕಲಿಲ್ಲ. ಬರೋಬ್ಬರಿ 2 ವರ್ಷಗಳಿಂದ ಹುಡುಕಿದರೂ ಕೆಲಸ ಸಿಗದ ಪರಿಣಾಮ 24 ವರ್ಷದ ಪ್ರಿಯಾಂಕಾ, ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ. ಅಂತೆಯೇ ಚಹಾ ಅಂಗಡಿಯೊಂದನ್ನು ಓಪನ್ ಮಾಡಿದ್ದಾರೆ.

    ಪಾಟ್ನಾದ ಮಹಿಳಾ ಕಾಲೇಜು ಮುಂದೆ ಚಹಾ ಅಂಗಡಿ ತೆರೆದು, ಇದೀಗ ಇದರಲ್ಲಿ ಯಶಸ್ಸು ಕಂಡಿದ್ದಾರೆ. ತಮ್ಮ ಅಂಗಡಿಯಲ್ಲಿ ಅತೀ ಕಡಿಮೆ ಬೆಲೆಗೆ ಕುಲ್ಹಾದ್ ಟೀ, ಮಸಾಲಾ ಟೀ, ಪಾನ್ ಚಹಾ ಮತ್ತು ಚಾಕ್ಲೇಟ್ ಟೀ ಮಾರಾಟ ಮಾಡುತ್ತಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಟೀ ಸ್ಟಾಲ್ ಹೆಚ್ಚು ಜನಪ್ರಿಯವಾಗಿದ್ದು, ಕೇವಲ 15ರಿಂದ 20ರೂ.ಗೆ ಚಹಾ ಮಾರಾಟ ಮಾಡುತ್ತಿರುವುದರಿಂದ ಇದೀಗ ಪ್ರಿಯಾಂಕಾ ಹೆಚ್ಚಿನ ಆದಾಯ ಸಹ ಗಳಿಸುತ್ತಿದ್ದಾರೆ.

    ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಬ್ಯಾಂಕ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನುತ್ತೀರ್ಣವಾದ ಬಳಿಕ ಚಹಾ ಅಂಗಡಿ ಓಪನ್ ಮಾಡುವ ನಿರ್ಧಾರ ಮಾಡಿದ್ದೇನೆ. ಇದೀಗ ಸ್ವಂತ ಚಹಾ ಅಂಗಡಿ ನಡೆಸುತ್ತಿದ್ದು, ಆರಂಭದಲ್ಲಿ ನನ್ನ ಸ್ನೇಹಿತರು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಇದೀಗ ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಭಾರತದಿಂದ ವೈದ್ಯಕೀಯ ಉಪಕರಣ ಬಯಸಿದ ರಷ್ಯಾ

    ಪ್ರಿಯಾಂಕಾ ತಮ್ಮ ಟೀ ಸ್ಟಾಲ್‍ಗೆ ‘ಚಾಯ್ ವಾಲಿ’ ಎಂದು ಹೆಸರಿಟ್ಟಿದ್ದಾರೆ. ಇವರಿಗೆ ಬೆಂಗಳೂರಿನ ಎಂಬಿಎ ಚಾಯ್ ವಾಲಾ ಎಂದೇ ಖ್ಯಾತಿ ಪಡೆದಿರುವ ಪ್ರಫುಲ್ ಬಿಲೋರ್ ಅವರು ಮಾದರಿಯಂತೆ. ಅಲ್ಲದೆ ಅವರ ಅಂಗಡಿಯ ಕೆಲವೊಂದು ಪಂಚ್ ಲೈನ್ ಅನ್ನು ತಮ್ಮ ಅಂಗಡಿಯಲ್ಲಿ ಪ್ರಿಯಾಂಕಾ ಬರೆದುಕೊಂಡಿದ್ದಾರೆ.