Tag: priyanka gandhi

  • ಕರ್ನಾಟಕದಲ್ಲಿ ಮೋದಿ, ಶಾ ತಂತ್ರಕ್ಕೆ ಕಾಂಗ್ರೆಸ್‍ನಿಂದ ಪ್ರಿಯಾಂಕಗಾಂಧಿ ಅಸ್ತ್ರ ಬಳಕೆ!

    ಕರ್ನಾಟಕದಲ್ಲಿ ಮೋದಿ, ಶಾ ತಂತ್ರಕ್ಕೆ ಕಾಂಗ್ರೆಸ್‍ನಿಂದ ಪ್ರಿಯಾಂಕಗಾಂಧಿ ಅಸ್ತ್ರ ಬಳಕೆ!

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಚುರುಕಾಗುತ್ತಿದ್ದು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಜೋಡಿಯ ರಾಜನೀತಿಯನ್ನು ಉಲ್ಟಾ ಪಲ್ಟಾ ಮಾಡಲು ಪ್ರಿಯಾಂಕಗಾಂಧಿ ಅಸ್ತ್ರ ಬಳಕೆಗೆ ಚಿಂತಿನೆ ನಡೆಸಿವೆ.

    ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಜೊತೆಗೆ ಮಾತುಕತೆ ನಡೆಸಿರುವ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಪ್ರಿಯಾಂಕಾಗಾಂಧಿ ಅವರನ್ನು ಪ್ರಚಾರಕ್ಕೆ ಬಳಸಿಕೊಂಡರೆ ಪಕ್ಷಕ್ಕೆ ಆಗುವ ಅನುಕೂಲಗಳನ್ನು ಮನದಟ್ಟು ಮಾಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಪ್ರತಿ ವಿಧಾನಸಭಾ ಚುನಾವಣೆಗಳು ಬಂದಾಗ ಪ್ರಿಯಾಂಕ ಗಾಂಧಿ ಅವರ ರಾಜಕೀಯ ನಡೆಯ ಬಗ್ಗೆ ಚರ್ಚೆ ಆಗುತ್ತದೆ. ಆದರೆ ಇದೂವರೆಗೂ ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ. ಉತ್ತರ ಪ್ರದೇಶ ಚುನಾವಣೆಯ ವೇಳೆ ಪ್ರಿಯಾಂಕ ಗಾಂಧಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಬೇಕು ಎನ್ನುವ ಮಾತು ಕೇಳಿ ಬಂದಿತ್ತು. ಒಂದು ವೇಳೆ ಪ್ರಿಯಾಂಕ ಗಾಂಧಿಗೆ ಮಣೆ ಹಾಕಿದರೆ ರಾಹುಲ್ ಗಾಂಧಿ ವರ್ಚಸ್ಸು ಕಡಿಮೆಯಾಗಲಿದೆ ಎನ್ನುವ ಮಾತುಗಳೂ ಕೇಳಿ ಬಂದಿವೆ.

    ಖರ್ಗೆಗೆ ಪಟ್ಟ ಕಟ್ಟಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಪಟ್ಟ ಕಟ್ಟುವ ಬಗ್ಗೆ ಪಕ್ಷದಲ್ಲೇ ಅಪಸ್ವರ ಕೇಳಿಬಂದಿದ್ದು, ಅವರ ಬದಲು ಮಲ್ಲಿಕಾರ್ಜುನ ಖರ್ಗೆಗೆ ಈ ಜವಾಬ್ದಾರಿ ವಹಿಸಬೇಕೆಂಬ ಆಗ್ರಹ ಕೇಳಿಬಂದಿದೆ. ಈ ಸಂಬಂಧ, ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಬಲಗೈ ಭಂಟ, ಸಂಸದ ವೀರಪ್ಪ ಮೊಯ್ಲಿ ಸಂಬಂಧಿಕ ಕೆಪಿಸಿಸಿ ಸದಸ್ಯ ಸಂಜೀವ ಮೊಯ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

    ರಾಷ್ಟ್ರ ಮಟ್ಟದಲ್ಲಿ ಪಕ್ಷದ ನಾಯಕತ್ವ ಬದಲಿಸುವುದಿದ್ದರೆ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕರಾದ ಖರ್ಗೆ ಅವರಿಗೆ ಈ ಹೊಣೆಗಾರಿಕೆ ನೀಡಬೇಕು. ಇದರಿಂದ ಪಕ್ಷದ ಸಂಘಟನೆಗೂ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

  • ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‍ನ ದೊಡ್ಡ ಆಸ್ತಿ: ಮಾರ್ಗರೆಟ್ ಆಳ್ವಾ

    ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‍ನ ದೊಡ್ಡ ಆಸ್ತಿ: ಮಾರ್ಗರೆಟ್ ಆಳ್ವಾ

    ಮಂಗಳೂರು: ಕಾಂಗ್ರೆಸ್‍ಗೆ ಪ್ರಿಯಾಂಕಾ ಗಾಂಧಿ ದೊಡ್ಡ ಆಸ್ತಿ. ಅವರನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸರಿಯಾದ ಸಮಯದಲ್ಲಿ ಬಳಸಿಕೊಳ್ಳುತ್ತಾರೆ. ಆಕೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುವುದಕ್ಕಿಂತ ಫುಲ್ ಟೈಮ್ ಇದ್ದು ಕೆಲಸ ಮಾಡಿದರೆ ಕಾಂಗ್ರೆಸಿಗೆ ಉತ್ತಮ ಅನ್ನೋದು ನನ್ನ ಭಾವನೆ ಎಂದು ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವಾ ಹೇಳಿದರು.

    ಎಸ್‍ಎಂಕೆ ಬಗ್ಗೆ ವ್ಯಂಗ್ಯ: ಕಾಂಗ್ರೆಸ್‍ನಿಂದ ಬಿಜೆಪಿಗೆ ಹೋಗಿರುವ ಎಸ್‍ಎಂ ಕೃಷ್ಣ ಅವರು ರಾಷ್ಟ್ರಪತಿಯಾಗಲು ಸೂಕ್ತ ವ್ಯಕ್ತಿ ಅಂತ ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ಸಿನಲ್ಲಿ ಎಲ್ಲವನ್ನೂ ಅನುಭವಿಸಿದವರು ಎಸ್‍ಎಂ ಕೃಷ್ಣ. ಈಗ ಬಿಜೆಪಿಗೆ ಹೋಗಿ ರಾಷ್ಟ್ರಪತಿ ಸ್ಥಾನ ದೊರಕಬಹುದು. ಕಾಂಗ್ರೆಸಿನಲ್ಲಿದ್ದು ರಾಷ್ಟ್ರಪತಿ ಸ್ಥಾನ ಮಾತ್ರ ಅವರಿಗೆ ಸಿಕ್ಕಿರಲಿಲ್ಲ ಎಂತಾ ಕುಹಕವಾಡಿದ್ರು. ಕೃಷ್ಣ ಅವರ ಬಗ್ಗೆ ತುಂಬಾ ಗೌರವ ಇದೆ. ಆದರೆ ಸಂಧ್ಯಾ ಕಾಲದಲ್ಲಿ ಕಾಂಗ್ರೆಸ್ ಬಗ್ಗೆ ಹೀಯಾಳಿಸಿ ಬೇರೆ ಪಕ್ಷಕ್ಕೆ ಹೋಗುವ ಬಗ್ಗೆ ನನ್ನ ಸಹಮತ ಇಲ್ಲ ಎಂದು ಹೇಳಿದರು.

    ಬಿಜೆಪಿಗೂ ಸ್ಥಾನ ಸಿಗದ ರಾಜ್ಯಗಳಿವೆ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ದೊಡ್ಡ ವಿಚಾರವಲ್ಲ, ಕೆಲವೊಂದು ಸಲ ಈ ರೀತಿ ಆಗುತ್ತದೆ. ಬಿಜೆಪಿಗೂ ಒಂದೇ ಒಂದು ಸ್ಥಾನ ಸಿಗದ ರಾಜ್ಯಗಳೂ ಇದೆ ಅಂತಾ ಮಾರ್ಗರೆಟ್ ಆಳ್ವ ಹೇಳಿದ್ರು.