Tag: priyanka chopra

  • ಮೂರು ವರ್ಷಗಳ ಬಳಿಕೆ ತಾಯ್ನಾಡಿಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ

    ಮೂರು ವರ್ಷಗಳ ಬಳಿಕೆ ತಾಯ್ನಾಡಿಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮದುವೆಯಾದ ಬಳಿಕ ಪತಿ ನಿಕ್ ಜೋನಸ್ ಜೊತೆ ಅಮೆರಿಕಾದಲ್ಲಿ (America) ನೆಲೆಸಿದ್ದರು. ಅಲ್ಲಿಂದಲೇ ಅವರು ಅನೇಕ ಕಾರ್ಯಕ್ರಮಗಳಿಗೂ ಭಾಗಿಯಾದರು. ಮಗುವಾದ ನಂತರ ಬಹುತೇಕ ಅಮೆರಿಕಾದಲ್ಲೇ ಉಳಿದರು. ಇದೀಗ ಬರೋಬ್ಬರಿ ಮೂರು ವರ್ಷಗಳ ಬಳಿಕ ತವರಿಗೆ ಬಂದಿಳಿದಿದ್ದಾರೆ ನಟಿ. ಮುಂಬೈಗೆ (Mumbai) ಬಂದಿಳಿದ ಬೋರ್ಡಿಂಗ್ ಪಾಸ್ ಸಮೇತ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಮಗಳ ಜೊತೆ ಭಾರತಕ್ಕೆ ಬಂದಿಳಿದಿರುವ ಪ್ರಿಯಾಂಕಾ, ಅಂತಿಮವಾಗಿ ಮನೆಗೆ ಹೋಗುತ್ತಿದ್ದೇನೆ ಎಂದು ಮಗಳೊಂದಿಗೆ ಇರುವ ಫೋಟೋವನ್ನು ಅವರು ಶೇರ್ ಮಾಡಿದ್ದಾರೆ. ಮೊಮ್ಮಗಳನ್ನು ನೋಡಲು ಅಮೆರಿಕಾಗೆ ಹೋಗಿದ್ದ ಪ್ರಿಯಾಂಕಾ ತಾಯಿ, ಇದೀಗ ಮೊಮ್ಮಗಳನ್ನು ಮನೆ ತುಂಬಿಸಿಕೊಂಡು ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಖಾಸಗಿ ವಿಮಾನ ಖರೀದಿಸಿದ್ರಾ ರಿಷಬ್ ಶೆಟ್ಟಿ? ‘ಬಡವ್ರ ಮಕ್ಕಳು ಬೆಳಿಬೇಕು’ ಟ್ರೋಲ್

    ಗಾಯಕ ನಿಕ್ ಜೋನಸ್ (Nick Jonas) ಜೊತೆ ಪ್ರಿಯಾಂಕಾ ಮದುವೆಯಾದ ನಂತರ ಬಾಲಿವುಡ್ ಸಿನಿಮಾ ರಂಗದಿಂದಲೇ ದೂರ ಉಳಿದಿದ್ದರು. ಹಾಲಿವುಡ್ ನಲ್ಲಿ ಸಿನಿಮಾ, ವೆಬ್ ಸೀರಿಸ್ ಹಾಗೂ ಶೋ ಗಳನ್ನು ನಡೆಸಿಕೊಡುತ್ತಿದ್ದರು. ಮೂರು ವರ್ಷಗಳ ಬಳಿಕ ಮುಂಬೈಗೆ ವಾಪಸ್ಸಾಗಿದ್ದರಿಂದ ಬಾಲಿವುಡ್ ಸಿನಿಮಾದಲ್ಲಿ ಅವರು ಮುಂದೆ ನಟಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಆ ಕುರಿತು ಅವರು ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರನ್ನು ಸಂದರ್ಶಿಸಿದ ಬಾಲಿವುಡ್ ನಟಿ ಪಿಗ್ಗಿ

    ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರನ್ನು ಸಂದರ್ಶಿಸಿದ ಬಾಲಿವುಡ್ ನಟಿ ಪಿಗ್ಗಿ

    ಬಾಲಿವುಡ್ (Bollywood) ಸಿನಿಮಾ ರಂಗದಿಂದಲೇ ದೂರ ಉಳಿದಿರುವ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಜಾಗತಿಕ ಮಟ್ಟದ ವಾಹಿನಿಯೊಂದಕ್ಕೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಅಮೆರಿಕನ್ (America) ಟಿವಿ ಶೋ ಕ್ವಾಂಟಿಕೋದಲ್ಲಿ ಪ್ರಸಿದ್ಧ ವ್ಯಕ್ತಿಗಳನ್ನು ಸಂದರ್ಶಿಸುತ್ತಾರೆ. ಈ ಬಾರಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಅವರನ್ನು ಸಂದರ್ಶಿಸಿದ್ದಾರೆ (Interview). ಆ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಶುಕ್ರವಾರ ಈ ಕಾರ್ಯಕ್ರಮ ನಡೆದಿದ್ದು, ಯುಎಸ್.ಎ ಬಂದೂಕು ಹಕ್ಕು, ವೇತನ ಸಮಾನತೆ ಸೇರಿದಂತೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ತಮ್ಮ ಬದುಕಿನಲ್ಲೂ ನಡೆದ ಹಲವು ಘಟನೆಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದು, ತಾವೂ ಕೂಡ ವೇತ ತಾರತಮ್ಯವನ್ನು ಎದುರಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಎರಡು ದಶಕದ ನಂತರ ತಾವು ಸಹ ನಟನ ಸಮಾನ ವೇತನವನ್ನು ಪಡೆದಿರುವ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಖ್ಯಾತ ನಟಿ ಆಶಾ ಪರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಕಮಲಾ ಹ್ಯಾರಿಸ್ ಜೊತೆ ಗರ್ಭಪಾತ ಕಾನೂನುಗಳ ಬಗ್ಗೆಯೂ ಮಾತನಾಡಿರುವ ಪ್ರಿಯಾಕಾ, ಇತ್ತೀಚೆಗಷ್ಟೇ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೇ ಗರ್ಭಪಾತವನ್ನು ಕಾನೂನು ಬದ್ಧಗೊಳಿಸಿರುವ ಭಾರತದ ಸುಪ್ರೀಂ ಕೋರ್ಟ್ ತೀರ್ಪನ್ನು ಅವರು ಸ್ವಾಗತಿಸಿ, ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಶನದ ಫೋಟೋಗಳನ್ನು ಮತ್ತು ವೈಟ್ ಹೌಸ್ ನ ಚಿತ್ರಗಳನ್ನು ಅವರು ಅಭಿಮಾನಿಗಳ ಜೊತೆ ಶೇರ್ ಮಾಡಿದ್ದಾರೆ.

    ಸದ್ಯ ಪ್ರಿಯಾಂಕಾ ಚೋಪ್ರಾ (Priyanka Chopra) ಬಾಲಿವುಡ್ ಸಿನಿಮಾ ರಂಗದಲ್ಲಿ ಸಕ್ರೀಯರಾಗಿಲ್ಲ. ಆದರೂ, ಅವರು ಟಿವಿ ಶೋನಿಂದಾಗಿ ಜಗತ್ತಿನ ಅನೇಕ ದಿಗ್ಗಜರ ಜೊತೆ ಒಡನಾಟ ಬೆಳೆಸಿದ್ದಾರೆ. ಪತಿ ನಿಕ್ ಜೋನಾಸ್ ಮತ್ತು ಮಗುವಿನ ಜೊತೆ ಕ್ವಾಲಿಟಿ ಟೈಮ್ ಅನ್ನು ಕಳೆಯುತ್ತಿದ್ದಾರೆ. ಮತ್ತೆ ಸಿನಿಮಾ ರಂಗಕ್ಕೆ ಬರುವ ಆಸೆಯನ್ನು ಪಿಗ್ಗಿ ವ್ಯಕ್ತ ಪಡಿಸಿದ್ದು, ಫರ್ಹಾನ್ ಅಖ್ತರ್ ನಟನೆಯ ಚಿತ್ರದ ಮೂಲಕ ವಾಪಸ್ಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಲಾಸ್ ಏಂಜಲೀಸ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಐಷಾರಾಮಿ ಮನೆ ಹೇಗಿದೆ ಗೊತ್ತಾ.?

    ಲಾಸ್ ಏಂಜಲೀಸ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಐಷಾರಾಮಿ ಮನೆ ಹೇಗಿದೆ ಗೊತ್ತಾ.?

    ಟಿ ಪ್ರಿಯಾಂಕಾ ಚೋಪ್ರಾ ಸದ್ಯ ಮಗಳ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅಮೆರಿಕಾದಲ್ಲಿ ಪತಿ ನಿಕ್ ಜೊತೆ ಪ್ರಿಯಾಂಕಾ ಸೆಟಲ್ ಆಗಿದ್ದಾರೆ. ಸದ್ಯ ತಮ್ಮ ಐಷರಾಮಿ ಮನೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಬಾಲಿವುಡ್‌ನ ಸಿನಿಮಾಗಳ ಮೂಲಕ ಮೋಡಿ ಮಾಡುತ್ತಾ, ಹಾಲಿವುಡ್‌ನಲ್ಲಿ ಮಿಂಚ್ತಿರುವ ಪ್ರಿಯಾಂಕಾ ಚೋಪ್ರಾ ತಮ್ಮ ವಿವಾಹದ ಬಳಿಕ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನೆಲೆಸಿದ್ದಾರೆ. ಅಲ್ಲಿ ಪ್ರಿಯಾಂಕಾ ದಂಪತಿ ಭವ್ಯವಾದ ಮನೆ ಖರೀದಿಸಿದ್ದಾರೆ. ಇತ್ತೀಚೆಗೆ ಕಂಟೆಂಟ್ ಕ್ರಿಯೇಟರ್ ಸಾರಾ ಶರೀಫ್ ಪ್ರಿಯಾಂಕಾ ಮನೆಗೆ ಭೇಟಿ ನೀಡಿದ್ದರು. ಇದನ್ನೂ ಓದಿ:ನಾನು ಅಂಬರೀಶ್ ಅಣ್ಣನ ಅಭಿಮಾನಿ, ಅವರ ಮಗನಿಗೆ ಸಿನಿಮಾ ಮಾಡುತ್ತಿರುವುದು ಹೆಮ್ಮೆ : ನಿರ್ದೇಶಕ ಮಹೇಶ್ ಕುಮಾರ್

     

    View this post on Instagram

     

    A post shared by SS (@iamsarahshareef)

    ಇತ್ತೀಚೆಗಷ್ಟೇ ಲಾಸ್ ಏಂಜಲೀಸ್‌ನಲ್ಲಿರುವ ಪ್ರಿಯಾಂಕಾ ಮನೆಗೆ ಸಾರಾ ಶರೀಫ್ ಭೇಟಿ ನೀಡಿ, ಸುಂದರ ಕ್ಷಣಗಳನ್ನ ಕಳೆದಿದ್ದಾರೆ. ಪ್ರಿಯಾಂಕಾ ಅವರ ಐಷರಾಮಿ ಮನೆಯ ಒಳ ಭಾಗದಲ್ಲಿ ನಿಂತು ನಟಿಯ ಜತೆ ಸಾರಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸುತ್ತಲು ಬಿಳಿ ಗೋಡೆ ಮಧ್ಯೆ ಬೃಹತ್ ಪೈಟಿಂಗ್ ಇಡಲಾಗಿದೆ. ಫೋಟೋಗಳನ್ನ ಗಾಜಿನ ಟೈಬಲ್ ಮೇಲೆ ಇಡಲಾಗಿದೆ. ಒಟ್ನಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಐಷಾರಾಮಿ ಮನೆ ನೋಡಿ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

    ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ, ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮಗಳ ಜತೆ ಚಿಲ್ ಮಾಡುತ್ತಿರುವ ಚೆಂದದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಹಿಂದಿ, ಹಾಲಿವುಡ್ ಸಿನಿಮಾಗಳಲ್ಲಿ ಮಿಂಚ್ತಿರುವ ಪ್ರಿಯಾಂಕಾ ಸಿನಿಮಾಗಳ ಜೊತೆ ತಮ್ಮ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಇದೀಗ ಮುದ್ದು ಮಗಳ ಫೋಟೋವನ್ನ ಪ್ರಿಯಾಂಕಾ ಶೇರ್ ಮಾಡಿದ್ದಾರೆ. ಮಗಳ ಜೊತೆ ಖುಷಿಯಾಗಿ ಚಿಲ್ ಮಾಡುತ್ತಿರುವ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ವರುಣ್ ತೇಜ್ ಜೊತೆ ಲಾವಣ್ಯ ತ್ರಿಪಾಠಿ ಮದುವೆ?

     

    View this post on Instagram

     

    A post shared by Priyanka (@priyankachopra)

    ನಿಕ್ ಜತೆ ದಾಂಪತ್ಯ ಜೀವನವನ್ನ ಖುಷಿಯಾಗಿ ನಿಭಾಯಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಸದ್ಯ ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳಿಗೆ ಮಾಲ್ತಿ ಮೇರಿ ಎಂದು ಪ್ರಿಯಾಂಕಾ ದಂಪತಿ ಹೆಸರಿಟ್ಟಿದ್ದಾರೆ. ಸದ್ಯ ತಮ್ಮ ಹೊಸ ಫೋಟೋಶೂಟ್‌ ಮೂಲಕ ಪ್ರಿಯಾಂಕಾ ಸೌಂಡ್‌ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಾಲಿವುಡ್‌ನ ಮತ್ತೊಂದು ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಗ್ರೀನ್ ಸಿಗ್ನಲ್

    ಹಾಲಿವುಡ್‌ನ ಮತ್ತೊಂದು ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಗ್ರೀನ್ ಸಿಗ್ನಲ್

    ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಈಗ ಹಾಲಿವುಡ್ ನಟಿಯಾಗಿ ಮಿಂಚ್ತಿದ್ದಾರೆ. ಒಂದೊಂದೇ ಚಿತ್ರಗಳಲ್ಲಿ ನಟಿಸುತ್ತಾ ಹಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈಗ ಹಾಲಿವುಡ್‌ನ ಮತ್ತೊಂದು ಪ್ರಾಜೆಕ್ಟ್ಗೆ ಪ್ರಿಯಾಂಕಾ ಚೋಪ್ರಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಬಿಟೌನ್‌ನ ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ, ಅದ್ಯಾವಾಗ ಹಾಲಿವುಡ್ ಚಿತ್ರರಂಗದಿಂದ ಬುಲಾವ್ ಬಂತೋ ಅಲ್ಲಿನ ಚಿತ್ರಗಳಲ್ಲಿ ನಟಿಸುತ್ತಾ ಅಲ್ಲಿನ ಹಾಲಿವುಡ್ ಸ್ಟಾರ್ ನಿಕ್ ಜೋನಸ್ ಅವರನ್ನ ಮದುವೆಯಾಗಿ ಅಲ್ಲಿಯೇ ಸೆಟೆಲ್ ಆಗಿಬಿಟ್ಟಿದ್ದಾರೆ. ಸಾಲು ಸಾಲು ಇಂಗ್ಲೀಷ್ ಚಿತ್ರಗಳ ಅಪರೂಪಕ್ಕೆ ಹಿಂದಿ ಚಿತ್ರಗಳಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಈಗ ಹಾಲಿವುಡ್‌ನ ಮತ್ತೊಂದು ಚಿತ್ರಕ್ಕೆ ನಟಿ ಸೈನ್ ಮಾಡಿದ್ದಾರೆ. ಇದನ್ನೂ ಓದಿ:ಅಹೋರಾತ್ರ ಮತ್ತು ಶಿಷ್ಯ ಚರಣ್ ವಿರುದ್ಧ ಕ್ರಮಕ್ಕಾಗಿ ಸುದೀಪ್ ಪರ ದೂರು ದಾಖಲಿಸಿದ ಫಿಲ್ಮ್ ಚೇಂಬರ್

    ಮಿಂಡಿ ಕಾಳಿಂಗ್ ನಿರ್ಮಾಣದ ಹೊಸ ಪ್ರಾಜೆಕ್ಟ್ ಕಥೆಯಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತೀಯ ಜೋಡಿಯ ಅದ್ದೂರಿ ಕಥೆಯಾಗಿದ್ದು, ಅಮೆರಿಕಾದಲ್ಲಿ ಸೆಟೆಲ್ ಆದ ಭಾರತೀಯ ಮಹಿಳೆ ಪಾತ್ರದಲ್ಲಿ ಮಿಂಡಿ ಕಾಳಿಂಗ್ ನಟಿಸಲಿದ್ದಾರೆ. ಚಿತ್ರದ ಪ್ರಮುಖ ಪಾತ್ರ ಪಂಜಾಬಿ ಮಹಿಳೆಯ ಪಾತ್ರದಲ್ಲಿ ಪ್ರಿಯಾಂಕಾ ಜೀವ ತುಂಬಲಿದ್ದಾರೆ. ಇನ್ನು ಹಿಂದಿಯ ಒಂದಿಷ್ಟು ಪ್ರಾಜೆಕ್ಟ್‌ನಲ್ಲಿ ಪ್ರಿಯಾಂಕ ಕಾಣಿಸಿಕೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗಳು ಬಂದ ಮೇಲೆ ಜೀವನ ಬದಲಾಗಿದೆ: ನಿಕ್ ಜೋನಸ್

    ಮಗಳು ಬಂದ ಮೇಲೆ ಜೀವನ ಬದಲಾಗಿದೆ: ನಿಕ್ ಜೋನಸ್

    ಹಾಲಿವುಡ್‌ನ ಸ್ಟಾರ್ ಗಾಯಕ ನಿಕ್ ಜೋನಸ್ ಇದೀಗ ತಮ್ಮ ಮಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮುದ್ದು ಮಗಳ ಎಂಟ್ರಿಯಿಂದ ಜೀವನ ಹೇಗೆಲ್ಲಾ ಬದಲಾವಣೆ ಆಗಿದೆ ಅಂತಾ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

    ೨೦೧೮ರಲ್ಲಿ ಪ್ರಿಯಾಂಕ ಚೋಪ್ರಾ, ಹಾಲಿವುಡ್ ಸ್ಟಾರ್ ಗಾಯಕ ನಿಕ್ ಅವರನ್ನ ಪ್ರೀತಿಸಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈ ವರ್ಷದ ಆರಂಭದಲ್ಲಿ ಮನೆಗೆ ಮುದ್ದು ಮಗಳ ಎಂಟ್ರಿಯಾಗಿದೆ. ಬಾಡಿಗೆ ತಾಯಿಯ ಮೂಲಕ ಮಗಳನ್ನ ಪಡೆದಿದ್ದಾರೆ. ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ಹೆಸರಿಡಲಾಗಿದೆ. ಇದೀಗ ಸಂದರ್ಶನವೊಂದರಲ್ಲಿ ಮಗಳು ಬಂದ ಜೀವನ ಹೇಗಿದೆ ಎಂಬುನ್ನ ನಿಕ್ ಜೋನಸ್ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ‘ಕೆಜಿಎಫ್ 2’, ‘ಆರ್.ಆರ್.ಆರ್’ ದಾಖಲೆ ಮುರಿಯತ್ತಾ ರಾಮ್ ಗೋಪಾಲ್ ವರ್ಮಾ ಅವರ ‘ಲಡ್ಕಿ’ ಸಿನಿಮಾ ?

    ತಂದೆಯಾದ ಮೇಲೆ ಜವಾಬ್ದಾರಿ ಹೆಚ್ಚಿದೆ, ಅವಳ ಪಾಲನೆಯಲ್ಲಿ ಖುಷಿಯಿದೆ. ಮಗಳು ಬಂದ ಜೀವನ ಬದಲಾಗಿದೆ. ಮಗು ಆರೋಗ್ಯದಲ್ಲಿ ಹೇಗೆಲ್ಲಾ ಬದಲಾವಣೆ ಆಗುತ್ತದೆ ಎಂದು ಕೂಡ ತಿಳಿಸಿದ್ದಾರೆ. ಎಲ್ಲಾ ಚೆನ್ನಾಗಿದೆ ಮಗಳು ಬಂದ ಮೇಲೆ ಖುಷಿ ಇನ್ನೂ ಜಾಸ್ತಿಯಾಗಿದೆ ಎಂದು ಮುದ್ದು ಮಗಳ ಬಗ್ಗೆ ಖುಷಿಯಿಂದ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತಿ ನಿಕ್ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ಪ್ರಿಯಾಂಕಾ ಚೋಪ್ರಾ

    ಪತಿ ನಿಕ್ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಪತಿ ನಿಕ್ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದಾರೆ. ಸದ್ಯ ಕಡಲ ಕಿನಾರೆಯಲ್ಲಿ ಕಳೆದ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ ಇದರ ಬೆನ್ನಲ್ಲೇ ಇತ್ತಿಚೆಗೆ ಸೋನಾ ಎನ್ನುವ ಹೊಸ ರೆಸ್ಟೋರೆಂಟ್ ಕೂಡ ಓಪನಿಂಗ್ ಮಾಡಿದ್ದಾರೆ. ಸಿನಿಮಾ ನಂತರ ಬಿಸಿನೆಸ್ ಕ್ಷೇತ್ರಕ್ಕೂ ಪತಿ ನಿಕ್ ಜತೆ ಪ್ರಿಯಾಂಕಾ ಹೆಜ್ಜೆ ಇಟ್ಟಿದ್ದಾರೆ. ಕೈತುಂಬಾ ಕೆಲಸಗಳ ಮಧ್ಯೆ ಈಗ ವಯಕ್ತಿಕ ಜೀವನಕ್ಕೆ ಟೈಮ್ ಕೊಟ್ಟು ಬೀಚ್‌ನಲ್ಲಿ ಪತಿ ಜೊತೆ ಏಂಜಾಯ್ ಮಾಡ್ತಿದ್ದಾರೆ. ಈ ಚೆಂದದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಸಂಜನಾ ಗಲ್ರಾನಿ ಮಗು `ಅಲಾರಿಕ್’ ಹೆಸರಿನ ಅರ್ಥವೇನು ಗೊತ್ತಾ?

    View this post on Instagram

     

    A post shared by Priyanka (@priyankachopra)

    ಕೆಲ ತಿಂಗಳ ಹಿಂದೆ ಬಾಡಿಗೆ ತಾಯಿಯ ಮೂಲಕ ಮುದ್ದು ಮಗಳನ್ನ ಬರಮಾಡಿಕೊಂಡರು. ಈಗ ಮಗಳ ಆರೈಕೆ, ಸಿನಿಮಾ, ಬಿಸಿನೆಸ್‌ ಕ್ಷೇತ್ರ ಅಂತಾ ಪ್ರಿಯಾಂಕಾ ಚೋಪ್ರಾ ಬ್ಯುಸಿಯಾಗಿದ್ದಾರೆ. ಸದ್ಯ ಪತಿ ಜತೆಗಿನ ರೊಮ್ಯಾಂಟಿಕ್‌ ಲುಕ್‌ನಿಂದ ಸೌಂಡ್‌ ಮಾಡುತ್ತಿದ್ದಾರೆ.

    Live Tv

  • ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್‌ನಲ್ಲಿ ಮಿಂಚಿದ ಪ್ರಿಯಾಂಕ ಚೋಪ್ರಾ

    ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್‌ನಲ್ಲಿ ಮಿಂಚಿದ ಪ್ರಿಯಾಂಕ ಚೋಪ್ರಾ

    ಹಿಂದಿ ಚಿತ್ರರಂಗದ ಟಾಪ್ ನಟಿ ಪ್ರಿಯಾಂಕ ಚೋಪ್ರಾ ಈಗ ಹಾಲಿವುಡ್‌ನಲ್ಲೂ ಬ್ಯುಸಿಯಿರೋ ನಟಿ, ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಿರೋ ಬ್ಯೂಟಿ ಈಗ ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಕೊಂಚ ಬಿಡುವು ಮಾಡಿಕೊಂಡು ಫಿಲ್ಮಂಫೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಹಾಟ್ ಆಗಿ ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್‌ನಲ್ಲಿ ಪ್ರಿಯಾಂಕಾ ಮಿಂಚಿದ್ದಾರೆ.

    ಬಾಲಿವುಡ್‌ನಲ್ಲಿ ಬ್ಯೂಟಿ ಜತೆ ಪ್ರತಿಭೆಯಿರೋ ನಟಿ ಪ್ರಿಯಾಂಕ ಚೋಪ್ರಾ, ಬೇಡಿಕೆ ಇರೋವಾಗಲೇ ನಿಕ್ ಜೊನಸ್ ಅವರನ್ನು ಮದುವೆಯಾಗಿ ಖುಷಿಯಾಗಿ ಬಾಳುತ್ತಿದ್ದಾರೆ. ಮನೆಗೆ ಮುದ್ದು ಮಗಳ ಆಗಮನದಿಂದ ಪೋಷಣೆಯಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕ ಈಗ ತುಸು ಬಿಡುವು ಮಾಡಿಕೊಂಡು ಫಿಲ್ಮಂಫೇರ್‌ನಲ್ಲಿ ಭಾಗಿಯಾಗಿದ್ದಾರೆ. ಯಾವಾಗಲೂ ಯೂನಿಕ್ ಸ್ಟೈಲಿನಲ್ಲಿ ಕಾಣಿಸಿಕೊಳ್ಳುವ ಪ್ರಿಯಾಂಕ, ಈಗ ಸಮಾರಂಭದಲ್ಲಿ ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್‌ನಲ್ಲಿ ಡಿಫರೆಂಟ್ ಸ್ಟೈಲ್‌ನಿಂದ ಗಮನ ಸೆಳೆದಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

     

    View this post on Instagram

     

    A post shared by Priyanka (@priyankachopra)

    ಫಿಲ್ಮಂಫೇರ್‌ನಲ್ಲಿ ಬ್ಲಾಕ್ ಆ್ಯಂಡ್ ವೈಟ್ ಡ್ರೆಸ್‌ನಲ್ಲಿ ಮಿರ ಮಿರ ಅಂತಾ ಪ್ರಿಯಾಂಕಾ ಚೋಪ್ರಾ ಮಿಂಚಿದ್ದಾರೆ. 39ರ ಹರೆಯದಲ್ಲೂ ಫಿಟ್‌ ಆಗಿ ಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುವ ಪ್ರಿಯಾಂಕಾ ನಯಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

  • ಗೋಲ್ಡನ್ ಕಲರ್ ಗೌನ್‌ನಲ್ಲಿ ಮಿಂಚಿದ ಪ್ರಿಯಾಂಕ ಚೋಪ್ರಾ

    ಗೋಲ್ಡನ್ ಕಲರ್ ಗೌನ್‌ನಲ್ಲಿ ಮಿಂಚಿದ ಪ್ರಿಯಾಂಕ ಚೋಪ್ರಾ

    ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಈಗ ಹಾಲಿವುಡ್‌ನಲ್ಲೂ ಬ್ಯುಸಿಯಿರೋ ನಟಿ,  ಕೈ ತುಂಬಾ ಆಫರ್ಸ್‌ಗಳ ಮಧ್ಯೆ ಕಥೆಯ ಆಯ್ಕೆಯ ವಿಚಾರದಲ್ಲೂ ಸಖತ್ ಚ್ಯೂಸಿ ಆಗಿದ್ದಾರೆ. ಇನ್ನು ಈಗ ಮಗುವಿನ ಪೋಷಣೆಯಲ್ಲಿ ಬ್ಯುಸಿಯಿರೋ ಪ್ರಿಯಾಂಕಾ, ಕೊಂಚ ಬಿಡುವು ಮಾಡಿಕೊಂಡು ಫಿಲ್ಮಂಫೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿರೋ ಪ್ರಿಯಾಂಕಾ ಫೋಟೋ ಸಖತ್ ವೈರಲ್ ಆಗುತ್ತಿದೆ.

    ಹಿಂದಿ ಚಿತ್ರರಂಗದಲ್ಲಿ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಪ್ರಿಯಾಂಕ ಚೋಪ್ರಾ, ಬೇಡಿಕೆ ಇರೋವಾಗಲೇ ನಿಕ್ ಜೊನಸ್ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮನೆಗೆ ಮುದ್ದು ಮಗಳ ಆಗಮನದ ನಂತರ ಪೋಷಣೆಯಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕ ಈಗ ತುಸು ಬಿಡುವು ಮಾಡಿಕೊಂಡು ಫಿಲ್ಮಂಫೇರ್‌ನಲ್ಲಿ ಭಾಗಿಯಾಗಿದ್ದಾರೆ. ಈ ಸಮಾರಂಭದಲ್ಲಿ ಡಿಫರೆಂಟ್ ಸ್ಟೈಲ್‌ನಿಂದ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಗಲಿಕೆಗೆ ಎರಡು ವರ್ಷ : ಕುಟುಂಬದಿಂದ ಇಂದು ವಿಶೇಷ ಪೂಜೆ

    ಫಿಲ್ಮಂಫೇರ್‌ನಲ್ಲಿ, ಗೋಲ್ಡನ್ ಕಲರ್ ಗೌನ್‌ನಲ್ಲಿ ಮಿರ ಮಿರ ಅಂತಾ ಪ್ರಿಯಾಂಕಾ ಚೋಪ್ರಾ ಮಿಂಚಿದ್ದಾರೆ. ಅಮೆರಿಕನ್ ನಟಿಯರಾದ ಆನ್ನೆ ಹ್ಯಾಥ್‌ವೇ ಮತ್ತು ಲೀಸಾ ಜತೆ ಒಳ್ಳೆಯ ಸಮಯವನ್ನು ಕಳೆದಿದ್ದಾರೆ. ಸದ್ಯ ಪ್ರಿಯಾಂಕ ಅವರ ನಯಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

  • ಪ್ರಿಯಾಂಕಾ ಚೋಪ್ರಾ ರಕ್ತ ಸಿಕ್ತ ಮುಖ ನೋಡಿ ಬೆಚ್ಚಿ ಬಿದ್ದ ಫ್ಯಾನ್ಸ್: ಅಷ್ಟಕ್ಕೂ ಆಗಿದ್ದೇನು?

    ಪ್ರಿಯಾಂಕಾ ಚೋಪ್ರಾ ರಕ್ತ ಸಿಕ್ತ ಮುಖ ನೋಡಿ ಬೆಚ್ಚಿ ಬಿದ್ದ ಫ್ಯಾನ್ಸ್: ಅಷ್ಟಕ್ಕೂ ಆಗಿದ್ದೇನು?

    ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇರುವ ಈ ನಟಿ, ರಕ್ತ ಸಿಕ್ತ ಆಗಿರುವ ಮುಖದ ಫೋಟೋ ಶೇರ್‌ ಮಾಡಿದ್ದು, ಫೋಟೋ ನೋಡಿ ಅಭಿಮಾನಿಗಳು ಗಾಬರಿಯಾಗಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಬ್ಯೂಟಿ ಜತೆ ಪ್ರತಿಭೆ ಇರುವ ನಟಿ ಪ್ರಿಯಾಂಕ ಚೋಪ್ರಾ, ಸದ್ಯ ಹಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ದೈನಂದಿನ ಬದುಕಿನ ಪ್ರತಿಯೊಂದು ಅಪ್‌ಡೇಟ್‌ಗಳನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುವ ನಟಿ ಪ್ರಿಯಾಂಕಾ, ಇದೀಗ ಅವರು ಹಂಚಿಕೊಂಡಿರುವ ಫೋಟೋವೊಂದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

    ಹಾಲಿವುಡ್‌ನ `ಸಿಟಾಡೆಲ್’ ಚಿತ್ರೀಕರಣದಲ್ಲಿರುವ ನಟಿ ಪ್ರಿಯಾಂಕ, ಶೂಟಿಂಗ್ ಸೆಟ್‌ನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಿಯಾಂಕಾ ಮುಖಕ್ಕೆ ಏಟು ಬಿದ್ದಂತಿದೆ ಜತೆಗೆ ರಕ್ತಸಿಕ್ತವಾಗಿದೆ. `ನಿಮಗೂ ಇದು ಕಠಿಣ ದಿನವಾಗಿದೆಯೇ’ ಎಂದು ಕ್ಯಾಷ್ಯನ್ ನೀಡಿದ್ದಾರೆ. ಹಾಗೆಯೇ ಹ್ಯಾಶ್ ಟ್ಯಾಗ್‌ನಲ್ಲಿ ಕಲಾವಿದರ ಜೀವನ, `ಸಿಟಾಡೆಲ್’ ಎಂದು ಬರೆದುಕೊಂಡಿದ್ದಾರೆ. ಒಟ್ನಲ್ಲಿ ನೆಚ್ಚಿನ ನಟಿಯ ಮುಖ ನೋಡಿ ನಿಜವಾಗಲೂ ಪ್ರಿಯಾಂಕಾಗೆ ಏನೋ ಆಗಿದೆ ಎಂದು ಆತಂಕಗೊಂಡಿದ್ದಾರೆ. ಜತೆಗೆ ನಟಿಯ ಯೋಗಕ್ಷೇಮ ವಿಚಾರಿಸಿದ್ದಾರೆ.

     

    View this post on Instagram

     

    A post shared by Priyanka (@priyankachopra)

    `ಸಿಟಾಡೆಲ್’ ಇದೊಂದು ಸೈನ್ಸ್ ಫಿಕ್ಷನ್ ಸೀರೀಸ್ ಆಗಿದ್ದು, ರಿಚರ್ಡ್ ಮ್ಯಾಡೆನ್ ಜತೆ ಪ್ರಿಯಾಂಕಾ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿಯ ಸಾಲು ಸಾಲು ಸಿನಿಮಾಗಳ ಜತೆಗೆ ಬಾಲಿವುಡ್‌ಗೆ ಪ್ರಿಯಾಂಕಾ ಕಮ್ ಬ್ಯಾಕ್ ಆಗುತ್ತಿದ್ದಾರೆ.