Tag: priyanka chopra

  • ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ

    ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಬ್ಯಾಕ್ ಟು ಬ್ಯಾಕ್ ಹಾಲಿವುಡ್ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸಿನಿಮಾ ಜೊತೆಗೆ ಮಗಳ ಆರೈಕೆಯಲ್ಲೂ ಬ್ಯುಸಿಯಾಗಿದ್ದಾರೆ. ಮುದ್ದು ಮಗಳ ಒಳಿತಿಗೆ ಕೆಲಸ ತೊರೆದು, ದೇಶ ಬಿಡಲು ಸಿದ್ಧ ಎಂದು ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಹೈಸ್ಕೂಲ್ ದತ್ತು ಪಡೆದ ಗೀತಾ ಶಿವರಾಜ್ ಕುಮಾರ್

    ಹಿಂದಿ ಸಿನಿಮಾರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದ ನಟಿ ಪ್ರಿಯಾಂಕಾ ಚೋಪ್ರಾ, ಬೇಡಿಕೆಯಿರುವಾಗಲೇ ನಿಕ್ ಜೋನಸ್ (Nick Jonas) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ವರ್ಷ ಬಾಡಿಗೆ ತಾಯ್ತನದ ಮೂಲಕ ಮುದ್ದಾದ ಮಗುವನ್ನ ಪಡೆದರು. ಸಿನಿಮಾದಲ್ಲಿ ಅದೆಷ್ಟೇ ಬ್ಯುಸಿಯಿದ್ದರು ಕೂಡ ಮಗಳಿಗಾಗಿ ಬಿಡುವು ಮಾಡಿಕೊಂಡು ಸಮಯ ಕಳೆಯುತ್ತಾರೆ. ಪ್ರಿಯಾಂಕಾ ದಂಪತಿ, ಮಗುವಿನ ಫೋಟೋವನ್ನು ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇನ್ನೂ ಮಗಳ ಭವಿಷ್ಯಕ್ಕಾಗಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಯಾವುದೇ ತ್ಯಾಗಕ್ಕೂ ಸಿದ್ಧವಾಗಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

    ಪ್ರಿಯಾಂಕಾ 17ನೇ ವಯಸ್ಸಿನಲ್ಲಿದ್ದಾಗ ಅವರ ತಂದೆ-ತಾಯಿ ಬರೇಲಿಯಲ್ಲಿ ಆಸ್ಪತ್ರೆ ನಡೆಸುತ್ತಿದ್ದರು. ಆದರೆ ಮಗಳ ಭವಿಷ್ಯಕ್ಕಾಗಿ ಅವರು ಎಲ್ಲವನ್ನೂ ತೊರೆದು ಮುಂಬೈಗೆ ಶಿಫ್ಟ್ ಆಗಿದ್ದರು. ಆ ಸಂದರ್ಭವನ್ನು ಪ್ರಿಯಾಂಕಾ ಚೋಪ್ರಾ ಅವರು ಈಗ ನೆನಪಿಸಿಕೊಂಡಿದ್ದಾರೆ. ನನ್ನ ತಂದೆ-ತಾಯಿಯಂತೆಯೇ ನನ್ನ ಮಗಳಿಗಾಗಿ ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

    ಅಂದು ಅಪ್ಪ-ಅಮ್ಮನ ತ್ಯಾಗವನ್ನು ನಾನು ಹಗುರವಾಗಿ ತೆಗೆದುಕೊಂಡೆ. ಅದು ಅವರ ಕೆಲಸ ಅಂತ ಭಾವಿಸಿದ್ದೆ. ನನಗೆ ನನ್ನ ಭವಿಷ್ಯ ಮುಖ್ಯವಾಗಿತ್ತು. ನಾನು ಒಂದು ಪುಸ್ತಕ ಬರೆಯುವವರೆಗೂ ಅವರ ತ್ಯಾಗದ ಬಗ್ಗೆ ನಾನು ಯೋಚಿಸಿರಲಿಲ್ಲ. ಈಗ ನನಗೆ 40 ವರ್ಷ ವಯಸ್ಸಾಗಿದೆ. ಮಗಳಿಗಾಗಿ ನನ್ನ ಕೆಲಸ ಬಿಟ್ಟು, ಬೇರೆ ದೇಶಕ್ಕೆ ಹೋಗಬೇಕಾದ ಪ್ರಸಂಗ ಬಂದರೆ ನಾನು ಮರುಮಾತಿಲ್ಲದೇ ಒಪ್ಪಿಕೊಳ್ಳುತ್ತೇನೆ ಎಂದು ನಟಿ ಹೇಳಿದ್ದಾರೆ.

  • ಕಾಲು ಒರೆಸುವ ಬಟ್ಟೆಯಂತೆ ಬಳಸಿಕೊಂಡಿದ್ದರು- ಮಾಜಿ ಬಾಯ್‌ಫ್ರೆಂಡ್‌ಗಳ ಬಗ್ಗೆ ಪ್ರಿಯಾಂಕಾ ಮಾತು

    ಕಾಲು ಒರೆಸುವ ಬಟ್ಟೆಯಂತೆ ಬಳಸಿಕೊಂಡಿದ್ದರು- ಮಾಜಿ ಬಾಯ್‌ಫ್ರೆಂಡ್‌ಗಳ ಬಗ್ಗೆ ಪ್ರಿಯಾಂಕಾ ಮಾತು

    ಬಾಲಿವುಡ್ (Bollywood) ಸುಂದರಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಇದೀಗ ಹಾಲಿವುಡ್ (Hollywood) ನಟಿಯಾಗಿ ಸದ್ದು ಮಾಡ್ತಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಹಾಲಿವುಡ್ ರಂಗದಲ್ಲಿ ಗುರುತಿಸಿಕೊಳ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಹಳೆಯ ಬ್ರೇಕಪ್‌ಗಳ ಬಗ್ಗೆ ನಟಿ ಮಾತನಾಡಿದ್ದಾರೆ.

    ನಟಿ ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಸ್ (Nick Jonas) ಜೊತೆ ಮದುವೆಯಾಗಿ ವಿದೇಶದಲ್ಲಿ ಸೆಟೆಲ್ ಆಗಿದ್ದಾರೆ. ಸಿನಿಮಾ ಜೊತೆಗೆ ಮುದ್ದು ಮಗಳ ಆರೈಕೆ ಕೂಡ ಮಾಡ್ತಿದ್ದಾರೆ. ಇತ್ತೀಚಿನ ‘ಸಿಟಾಡೆಲ್’, ‘ಲವ್ ಅಗೈನ್’ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:The Kerala Story ಚಿತ್ರದ ಸಕ್ಸಸ್ ಬಳಿಕ ‘ರಣವಿಕ್ರಮ’ ನಟಿಗೆ ಬಿಗ್‌ ಆಫರ್

    ಸಂದರ್ಶನವೊಂದರಲ್ಲಿ ಈ ಹಿಂದಿನ ತಮ್ಮ ಸಂಬಂಧಗಳ ಪ್ರಿಯಾಂಕಾ ಚೋಪ್ರಾ ಮೌನ ಮುರಿದಿದ್ದಾರೆ. ಈ ಹಿಂದಿನ ನನ್ನ ರಿಲೇಶನ್‌ಶಿಪ್‌ನಲ್ಲಿ (Relationship) ನನ್ನನ್ನು ಕಾಲು ಒರೆಸುವ ಬಟ್ಟೆಯಂತೆ ಬಳಸಿಕೊಳ್ಳಲಾಗಿತ್ತು ಎಂದಿದ್ದಾರೆ. ನಾನು ಕೇರ್ ಟೇಕರ್ ರೀತಿ ವರ್ತಿಸುತ್ತಿದ್ದೆ. ನನ್ನ ಬಾಯ್‌ಫ್ರೆಂಡ್ ಬಗ್ಗೆ ಅತಿಯಾಗಿ ಕಾಳಜಿ ಮಾಡುವುದು, ಅವನು ಸದಾ ಕಂಫರ್ಟ್‌ನಲ್ಲಿರುವಂತೆ ನೋಡಿಕೊಳ್ಳುವುದು. ಅವನ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳುವುದು ಮಾಡುತ್ತಿದ್ದೆ. ಇದರಿಂದಾಗಿ ನಾನು ನನ್ನತನವನ್ನೇ ಕಳೆದುಕೊಂಡಿದ್ದೆ. ಹಲವು ಅವಕಾಶಗಳನ್ನು ಕೈಬಿಟ್ಟೆ, ನನ್ನ ಮೇಲಿನ ಅಧಿಕಾರವನ್ನು ನಾನು ಅವನಿಗೆ ಕೊಟ್ಟುಬಿಟ್ಟಿದ್ದೆ ಎಂದು ನಟಿ ಮಾತನಾಡಿದ್ದಾರೆ.

    ಅವನಿಗಾಗಿ ನನ್ನ ಖುಷಿಯನ್ನು ತ್ಯಾಗ ಮಾಡುವುದು ಕೆರಿಯರ್ ತ್ಯಾಗ ಮಾಡುವುದು, ಸ್ವಂತ ಇಚ್ಛೆಯನ್ನು ಕೊಂದು ಅವನ ಇಚ್ಛೆಯಂತೆ ಬದುಕುವುದು ನನ್ನ ಕರ್ತವ್ಯ ಎಂದೆಲ್ಲ ನನಗೆ ನಾನೇ ನಿರ್ಧರಿಸಿಬಿಟ್ಟಿದ್ದೆ. ಅದು ತಪ್ಪು ಎಂದು ನನಗೆ ಅನಿಸುತ್ತಲೇ ಇರಲಿಲ್ಲ. ನನ್ನ ಮೇಲಿನ ನಿಯಂತ್ರಣವನ್ನು ಬೇರೆ ವ್ಯಕ್ತಿಗೆ ನೀಡಿದಾಗ ಆತ ನನ್ನನ್ನು ಅವನಿಷ್ಟದಂತೆ ಬಳಸಿಕೊಳ್ಳಲು ಪ್ರಾರಂಭಿಸಿದ. ನನ್ನನ್ನು ಡೋರ್‌ಮ್ಯಾಟ್‌ನಂತೆ ಬಳಸಿಕೊಳ್ಳಲಾಯಿತು. ಮಹಿಳೆಯರಿಗೆ ಇದನ್ನೇ ಹೇಳಿಕೊಟ್ಟಿರುವುದಲ್ಲವೆ, ಕುಟುಂಬಕ್ಕಾಗಿ ತ್ಯಾಗ ಮಾಡಬೇಕು, ಪತಿ ಹೊರಗಿನಿಂದ ಬಂದಾಗ ಅವನನ್ನು ಸಂತೈಸಬೇಕು, ಅವನು ಕಂಫರ್ಟ್ ಆಗಿರುವಂತೆ ನೋಡಿಕೊಳ್ಳಬೇಕು ಎಂದೆಲ್ಲ ಎಂದಿದ್ದಾರೆ. ಒಂದು ಸಮಯದಲ್ಲಿ ನಾನು ಒಂದು ರಿಲೇಶನ್‌ಶಿಷ್‌ನಿಂದ ಮತ್ತೊಂದು ರಿಲೇಶನ್‌ಶಿಪ್‌ಗೆ ಹೀಗೆ ಹಾರುತ್ತಲೇ ಇದ್ದೆ. ನನಗಾಗಿ ನಾನು ಸಮಯವನ್ನೂ ನೀಡುತ್ತಿರಲಿಲ್ಲ ಎಂದು ಪ್ರಿಯಾಂಕಾ ಮಾತನಾಡಿದ್ದಾರೆ. ಈ ಮೂಲಕ ತನ್ನ ಹಳೆಯ ಬ್ರೇಕಪ್ (Breakup)  ಸ್ಟೋರಿ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.

  • ಮೂಗಿನ ಶಸ್ತ್ರಚಿಕಿತ್ಸೆ ಬಳಿಕ ಖಿನ್ನತೆಗೆ ಒಳಗಾಗಿದ್ಯಾಕೆ? ಅಸಲಿ ವಿಚಾರ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

    ಮೂಗಿನ ಶಸ್ತ್ರಚಿಕಿತ್ಸೆ ಬಳಿಕ ಖಿನ್ನತೆಗೆ ಒಳಗಾಗಿದ್ಯಾಕೆ? ಅಸಲಿ ವಿಚಾರ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್ ರಂಗದಲ್ಲಿ ನಟಿಯಾಗಿ ಸಂಚಲನ ಮೂಡಿಸುತ್ತಿದ್ದಾರೆ. ಸಿಟಾಡೆಲ್ ನಂತರ ‘ಲವ್ ಅಗೇನ್’ (Love Again) ಎನುತ್ತಾ ಪಿಗ್ಗಿ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ತಾವು ಈ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಕ್ಕೆ ಸಿನಿಮಾದಿಂದ ಪ್ರಿಯಾಂಕಾ ಕಿಕ್ ಔಟ್ ಆಗಿದ್ದರ ಬಗ್ಗೆ ಬಾಯ್ಬಿಟ್ಟಿದ್ದಾರೆ.

    ಹಾಲಿವುಡ್‌ನಲ್ಲಿ (Hollywood) ಸಿನಿಮಾ- ಆಲ್ಬಂ ಸಾಂಗ್‌ಗಳ ಮೂಲಕ ಸದ್ದು ಮಾಡ್ತಿದ್ದಾರೆ. ಮೂಗಿನ ಶಸ್ತ್ರಚಿಕಿತ್ಸೆಯಿಂದಾಗಿ ತಮ್ಮ ವೃತ್ತಿ ಜೀವನಕ್ಕೆ ಪೆಟ್ಟು ಬಿದ್ದಿದ್ದು ಹೇಗೆ ಎಂದು ಹಂಚಿಕೊಂಡಿದ್ದಾರೆ. 3 ಸಿನಿಮಾಗಳಿಗೆ ಪ್ರಿಯಾಂಕಾ ಸಹಿ ಹಾಕಿದ್ದರು. ಆದರೆ, ಮೂಗಿನ ಶಸ್ತ್ರಚಿಕಿತ್ಸೆಯಿಂದಾಗಿ ಪ್ರಿಯಾಂಕಾ ಚೋಪ್ರಾ ಅಂದ ಹಾಳಾಗಿತ್ತು. ನಟಿಯ ಮುಖ ಸಂಪೂರ್ಣವಾಗಿ ಬದಲಾಯಿತು. ಅವರ ವೃತ್ತಿ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರಿತು. ಅವಕಾಶಗಳನ್ನ ಕಳೆದುಕೊಂಡ ಪ್ರಿಯಾಂಕಾ ಮಾನಸಿಕ ಖಿನ್ನತೆಗೆ ಒಳಗಾದರು ಎಂದು ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಬಣ್ಣದ ಲೋಕಕ್ಕೆ ಡಾ ಬ್ರೋ- ‘ಡೇರ್ ಡೆವಿಲ್ ಮುಸ್ತಾಫಾ’ಗೆ ಬೆಂಬಲ

    ನೇಸಲ್ ಕ್ಯಾವಿಟಿಯಲ್ಲಿನ ಪಾಲಿಪ್ ತೆಗೆಯಬೇಕು ಎಂದು  ಪ್ರಿಯಾಂಕಾಗೆ ಡಾಕ್ಟರ್ ಸಲಹೆ ನೀಡಿದ್ದರು. ಹಾಗಾಗಿ ಪಿಗ್ಗಿ ಮೂಗಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಆಗ ಅವಕಾಶಗಳನ್ನ ಕಳೆದುಕೊಂಡು ಡೀಪ್ ಡಿಪ್ರೆಶನ್‌ಗೆ ಜಾರಿದ್ದ ಮಗಳು ಪ್ರಿಯಾಂಕಾಗೆ ಆತ್ಮಸ್ಥೈರ್ಯ ತುಂಬಿದ್ದು, ತಂದೆ ಅಶೋಕ್ ಚೋಪ್ರಾ. ಶಸ್ತ್ರಚಿಕಿತ್ಸೆಯಿಂದ ಹಾಳಾಗಿದ್ದ ಮೂಗನ್ನ ಸರಿಪಡಿಸಲು ಮತ್ತೊಂದು ಸರ್ಜರಿ ಮಾಡಿಸುವಂತೆ ಅಶೋಕ್ ಚೋಪ್ರಾ ಸಲಹೆ ನೀಡಿದರು. ಎರಡನೇ ಬಾರಿ ಶಸ್ತ್ರಚಿಕಿತ್ಸೆ ನಡೆಯುವಾಗ ಪ್ರಿಯಾಂಕಾ ಜೊತೆಗೆ ಆಪರೇಶನ್ ಥಿಯೇಟರ್‌ನಲ್ಲಿ ಡಾ.ಅಶೋಕ್ ಚೋಪ್ರಾ ಇದ್ದರು. ಎರಡನೇ ಬಾರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಆ ನಂತರ ಪ್ರಿಯಾಂಕಾಗೆ ಧೈರ್ಯ ಹೆಚ್ಚಾಯಿತು ಎಂದು ನಟಿ ಹಳೆಯ ದಿನಗಳ ಸವಾಲುಗಳ ಬಗ್ಗೆ ಹಂಚಿಕೊಂಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಗಳ ಆರೈಕೆ ಹೊಣೆ ಜೊತೆ ಸಿನಿಮಾಗಳತ್ತ ಕೂಡ ಗಮನ ಹರಿಸುತ್ತಿದ್ದಾರೆ. ‘ಲವ್ ಅಗೇನ್’ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ- ಪತಿ ನಿಕ್ ಜೋನಸ್ ಕೂಡ ತೆರೆ ಹಂಚಿಕೊಂಡಿದ್ದಾರೆ.

  • ‘ಲವ್ ಅಗೇನ್’ ಎನ್ನುತ್ತಾ ಪತಿಯ ಎದುರಲ್ಲೇ ಪ್ರಿಯಾಂಕಾ ಬೇರೆ ನಟನ ಜೊತೆ ಕಿಸ್

    ‘ಲವ್ ಅಗೇನ್’ ಎನ್ನುತ್ತಾ ಪತಿಯ ಎದುರಲ್ಲೇ ಪ್ರಿಯಾಂಕಾ ಬೇರೆ ನಟನ ಜೊತೆ ಕಿಸ್

    ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್‌ನಲ್ಲಿ (Hollywood)  ಸೆಟೆಲ್ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದಾರೆ. ಇದೀಗ ‘ಲವ್ ಅಗೇನ್’ (Love Again) ಎನ್ನುತ್ತಾ ಪತಿಯ ಮುಂದೆಯೇ ಪ್ರಿಯಾಂಕಾ ಚೋಪ್ರಾ ಬೇರೇ ನಟನಿಗೆ ಸಿಹಿಮುತ್ತು ಹಂಚಿಕೊಂಡಿದ್ದಾರೆ. ಈ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ:ಪವಿತ್ರಾ ಲೋಕೇಶ್- ನರೇಶ್ ‘ಮತ್ತೆ ಮದುವೆ’ ಡೇಟ್ ಫಿಕ್ಸ್

     

    View this post on Instagram

     

    A post shared by Jerry x Mimi ???? (@jerryxmimi)

    ನಟಿ ಪ್ರಿಯಾಂಕಾ ಚೋಪ್ರಾ ಅವರು ಸಖತ್ ಬ್ಯುಸಿ ಆಗಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ‘ಸಿಟಾಡೆಲ್'(Citadel) ವೆಬ್ ಸರಣಿಯ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಸಿಟಾಡೆಲ್ ರಿಲೀಸ್ ಬೆನ್ನಲ್ಲೇ ಈಗ ‘ಲವ್ ಅಗೇನ್’ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ. ಈ ಟೈಟಲ್‌ಗೆ ತಕ್ಕಂತೆಯೇ ಪ್ರಿಯಾಂಕಾ ಅವರಿಗೆ ಮತ್ತೆ ಲವ್ ಆಗಿದೆಯಾ ಎಂಬ ಅನುಮಾನ ನೆಟ್ಟಿಗರಿಗೆ ಶುರುವಾಗಿದೆ. ಏಕೆಂದರೆ, ಪತಿ ನಿಕ್ ಎದುರಲ್ಲೇ ಪ್ರಿಯಾಂಕಾ ಅವರು ಬೇರೆ ನಟನ ಜೊತೆ ಸಿಹಿಮುತ್ತು ಹಂಚಿಕೊಂಡಿದ್ದಾರೆ. ‘ಲವ್ ಅಗೇನ್’ ಸಿನಿಮಾದಲ್ಲಿ ಸ್ಯಾಮ್ ಹ್ಯೂವನ್ ಮತ್ತು ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್ ವೇಳೆ ಕ್ಯಾಮೆರಾಗೆ ಪೋಸ್ ಕೊಡುವಾಗ ಪ್ರಿಯಾಂಕಾ ಅವರ ಮೂಗಿಗೆ ಸ್ಯಾಮ್ ಹ್ಯೂವನ್ ಅವರು ಕಿಸ್ ಮಾಡಿದ್ದಾರೆ.

     

    View this post on Instagram

     

    A post shared by Jerry x Mimi ???? (@jerryxmimi)

    ಸಿಟಾಡೆಲ್ ಬಳಿಕ ‘ಲವ್ ಅಗೇನ್’ ಮೇ 5ರಂದು ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ನಿಕ್ ಜೋನಸ್ (Nick Jonas) ಕೂಡ ನಟಿಸಿದ್ದಾರೆ. ಪ್ರಿಯಾಂಕಾ- ಸ್ಯಾಮ್ ಹ್ಯೂವನ್ ಜೋಡಿ ಚೆನ್ನಾಗಿ ಬಂದಿದೆ. ಟ್ರೈಲರ್ ಝಲಕ್‌ಗೆ ಸಿನಿಮಾ ಬಗ್ಗೆ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡ ಹಾಗೆ ಹಾಲಿವುಡ್‌ನಲ್ಲೂ ಗಿಟ್ಟಿಸಿಕೊಳ್ತಾರಾ ಕಾದುನೋಡಬೇಕಿದೆ.

  • Met Gala ಕಾರ್ಯಕ್ರಮದಲ್ಲಿ 204 ಕೋಟಿ ಮೌಲ್ಯದ ಡೈಮಂಡ್ ನೆಕ್ಲೇಸ್ ಧರಿಸಿ ಬಂದ ಪ್ರಿಯಾಂಕಾ

    Met Gala ಕಾರ್ಯಕ್ರಮದಲ್ಲಿ 204 ಕೋಟಿ ಮೌಲ್ಯದ ಡೈಮಂಡ್ ನೆಕ್ಲೇಸ್ ಧರಿಸಿ ಬಂದ ಪ್ರಿಯಾಂಕಾ

    ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇದೀಗ ಹಾಲಿವುಡ್ (Hollywood) ರಂಗದಲ್ಲಿ ಮಿಂಚ್ತಿದ್ದಾರೆ. ‘ಸಿಟಾಡೆಲ್’ ವೆಬ್ ಸರಣಿ ಮೂಲಕ ಗಮನ ಸೆಳೆಯುತ್ತಿರುವ ನಟಿ ಈ ನಡುವೆ ಮೆಟಾ ಗಾಲಾ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ದುಬಾರಿ ಮೊತ್ತದ ನೆಕ್ಲೇಸ್ (Necklace) ಧರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

    ಇತ್ತೀಚಿಗೆ ಅಮೆರಿಕದ ಮೊಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಮೆಟಾ ಗಾಲಾ 2023 (Meta Gala 2023) ಕಾರ್ಯಕ್ರಮ ನೆರವೇರಿದೆ. ಉದ್ಯಮಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ- ನಿಕ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ:ಬ್ಲೌಸ್ ಇಲ್ಲದೇ ಸೀರೆಯುಟ್ಟು ಮಿಂಚಿದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಾಯಕಿ

     

    View this post on Instagram

     

    A post shared by Priyanka (@priyankachopra)

    ಇದೀಗ ‘ಮೆಟಾ ಗಾಲಾ’ದಲ್ಲಿ ಪ್ರಿಯಾಂಕಾ ಚೋಪ್ರಾ ಕಪ್ಪು ಬಣ್ಣದ ಗೌನ್‌ನಲ್ಲಿ ಮಿಂಚಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಗೌನ್ ಜೊತೆ ಡೈಮೆಂಟ್ ನೆಕ್ಲೇಸ್ ಎಲ್ಲರ ಗಮನ ಸೆಳೆಯುತ್ತಿದೆ. ನೆಕ್ಲೇಸ್ ಅಸಲಿ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದರ ಬೆಲೆ ತಿಳಿದರೆ ನಿಜಕ್ಕೂ ನೀವು ಶಾಕ್ ಆಗ್ತೀರಾ.

    ಮೆಟಾ ಗಾಲಾ ಕಾರ್ಯಕ್ರಮಕ್ಕೆ ಪತಿ ನಿಕ್ ಜೊತೆ ಪ್ರಿಯಾಂಕಾ ಚೋಪ್ರಾ ಆಗಮಿಸಿದ್ದರು. ಮೂಲಗಳ ಪ್ರಕಾರ, ಪ್ರಿಯಾಂಕಾ ಧರಿಸಿರುವ ಡೈಮಂಡ್ ನೆಕ್ಲೇಸ್ 25 ಮಿಲಿಯನ್ ಡಾಲರ್ ಮೌಲ್ಯದಾಗಿದೆ. ಇಂಡಿಯನ್ ಕರೆನ್ಸಿ ಪ್ರಕಾರ 204 ಕೋಟಿ ರೂಪಾಯಿದಾಗಿದೆ. ಇದೀಗ ಪಿಗ್ಗಿ ನೆಕ್ಲೇಸ್ ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ.

  • ಪತಿ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾಂಟಿಕ್ ಫೋಟೋಶೂಟ್

    ಪತಿ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾಂಟಿಕ್ ಫೋಟೋಶೂಟ್

    ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ‘ಸಿಟಾಡೆಲ್’ (Citadel) ವೆಬ್ ಸರಣಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಪತಿ ಜೊತೆ ಮತ್ತೆ ರೊಮ್ಯಾಂಟಿಕ್ ಪೋಸ್‌ನಲ್ಲಿ ಕಾಣಿಸಿಕೊಂಡು ಪ್ರಿಯಾಂಕಾ ಸುದ್ದಿಯಾಗಿದ್ದಾರೆ.

    ಹಿಂದಿ ಸಿನಿಮಾರಂಗದಲ್ಲಿ ಸ್ಟಾರ್ ನಟಿಯಾಗಿ ಬೆಳೆದ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್‌ನತ್ತ (Hollywood) ಮುಖ ಮಾಡಿದ್ದಾರೆ. ಅಲ್ಲಿ ಆಲ್ಬಂ ಸಾಂಗ್, ಸಿನಿಮಾ ಅಂತಾ ಪ್ರಿಯಾಂಕಾ ಚೋಪ್ರಾ ಗಮನ ಸೆಳೆಯುತ್ತಿದ್ದಾರೆ. ನಿಕ್ ಜೋನಸ್ (Nick Jonas) ಜೊತೆ ಮದುವೆಯಾದ ಮೇಲೆ ಹಾಲಿವುಡ್ ಸಿನಿಮಾಗಳತ್ತ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ರಾಡ್ ನಿಂದ ಹೊಡೆದು ಪವನ್ ಕಲ್ಯಾಣ್ ಅಭಿಮಾನಿ ಕೊಂದ ಪ್ರಭಾಸ್ ಫ್ಯಾನ್

     

    View this post on Instagram

     

    A post shared by Priyanka (@priyankachopra)

    ಸದ್ಯ ‘ಸಿಟಾಡೆಲ್’ (Citadel) ಪ್ರಚಾರಕ್ಕೆ ರೋಮ್‌ಗೆ ತೆರಳಿದ್ದ ಪ್ರಿಯಾಂಕಾ ದಂಪತಿ, ಈ ವೇಳೆ ಭರ್ಜರಿ ಫೋಟೋಶೂಟ್ ಮಾಡಿಸಿದ್ದಾರೆ. ಹಸಿರು ಬಣ್ಣದ ಉಡುಗೆಯಲ್ಲಿ ಪ್ರಿಯಾಂಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಿಕ್ ನೀಲಿ ಬಣ್ಣದ ಸೂಟ್‌ನಲ್ಲಿ ಮಿಂಚಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ‘ಸಿಟಾಡೆಲ್’ ವೆಬ್ ಸೀರಿಸ್ ಇದೇ ಏ.28ಕ್ಕೆ ಒಟಿಟಿಯಲ್ಲಿ ತೆರೆ ಕಾಣಲಿದೆ. ನಟಿ ಪ್ರಿಯಾಂಕಾ ಚೋಪ್ರಾ ಭರ್ಜರಿ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

  • ರೋಮ್‌ನಲ್ಲಿ ಪ್ರಿಯಾಂಕಾ ಚೋಪ್ರಾ- ನಿಕ್ ಜೋನಸ್ ಲಿಪ್‌ಲಾಕ್

    ರೋಮ್‌ನಲ್ಲಿ ಪ್ರಿಯಾಂಕಾ ಚೋಪ್ರಾ- ನಿಕ್ ಜೋನಸ್ ಲಿಪ್‌ಲಾಕ್

    ‘ಸಿಟಾಡೆಲ್’ (Citadel) ವೆಬ್ ಸರಣಿ ರಿಲೀಸ್‌ಗೂ ಮೊದಲೇ ಪತಿ ನಿಕ್ ಜೋನಸ್ (Nick Jonas) ಜೊತೆ ಪ್ರಿಯಾಂಕಾ ಚೋಪ್ರಾ (Priyanka Chopra) ರೋಮ್‌ಗೆ ಹಾರಿದ್ದಾರೆ. ರೋಮ್‌ನಲ್ಲಿ (Rome) ರೊಮ್ಯಾಂಟಿಕ್ ಡೇಟ್ ಮಾಡುತ್ತಾ ಪತ್ನಿಗೆ ಸಿಹಿಮುತ್ತನಿಟ್ಟಿದ್ದಾರೆ.

    ಇತ್ತೀಚಿಗೆ ‘ಸಿಟಾಡೆಲ್’ ಪ್ರೀಮಿಯರ್‌ಗಾಗಿ ಲಂಡನ್‌ಗೆ ಪ್ರಿಯಾಂಕಾ ಚೋಪ್ರಾ ದಂಪತಿ ಒಟ್ಟಾಗಿ ಹೋಗಿದ್ದರು. ಲಿಫ್ಟ್‌ನಲ್ಲಿ ರೊಮ್ಯಾಂಟಿಕ್ ಆಗಿ ಪೋಸ್ ಕೊಡುವ ಮೂಲಕ ಪ್ರಿಯಾಂಕಾ-ನಿಕ್ ಗಮನ ಸೆಳೆದಿದ್ದರು. ಸಿನಿಮಾ, ಮನೆ ಜವಾಬ್ದಾರಿಗೆ ಬ್ರೇಕ್ ಹಾಕಿ ವೆಕೇಷನ್ ಮೂಡ್‌ನಲ್ಲಿ ಈ ಜೋಡಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಜುಲೈನಲ್ಲಿ ಹೆರಿಗೆ : ಗುಟ್ಟು ಬಿಟ್ಟುಕೊಟ್ಟ ರಾಮ್ ಚರಣ್ ಪತ್ನಿ ಉಪಾಸನಾ

    ಹಾಲಿವುಡ್‌ನ (Hollywood) ‘ಸಿಟಾಡೆಲ್’ ರಿಲೀಸ್‌ಗೂ ಮುನ್ನವೇ ವೆಕೇಷನ್‌ಗಾಗಿ ರೋಮ್‌ಗೆ ಪ್ರಿಯಾಂಕಾ ದಂಪತಿ ತೆರಳಿದ್ದಾರೆ. ರೋಮ್‌ನ ಬೀದಿಯಲ್ಲಿ ರೊಮ್ಯಾಂಟಿಕ್ ಆಗಿ ವಾಕ್ ಮಾಡುತ್ತಾ ಪತ್ನಿ ಪ್ರಿಯಾಂಕಾಗೆ ನಿಕ್ ಸಿಹಿ ಚುಂಬನ ಕೊಟ್ಟಿದ್ದಾರೆ. ಈ ವೀಡಿಯೋ ಸದ್ದು ಮಾಡ್ತಿದ್ದಂತೆ ಅಭಿಮಾನಿಗಳು, ಜೋಡಿ ಅಂದರೆ ಹೀಗಿರಬೇಕು ಎಂದು ಹಾಡಿ ಹೊಗಳಿದ್ದಾರೆ.

     

    View this post on Instagram

     

    A post shared by Nick Jonas (@nickjonas)

    ನಿಕ್ ಜೋನಸ್‌ಗಿಂತ ಪ್ರಿಯಾಂಕಾ 10 ವರ್ಷ ದೊಡ್ಡವರು, ಆದ್ರೂ ವಯಸ್ಸಿಗೆ ಕ್ಯಾರೆ ಅನ್ನದೇ ಇಬ್ಬರು ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ. ದೇಶ ಬೇರೇ, ಧರ್ಮ ಬೇರೇಯಾಗಿದ್ರು ಕೂಡ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಅನೇಕರಿಗೆ ಪ್ರಿಯಾಂಕಾ- ನಿಕ್ ಜೋಡಿ ಮಾದರಿಯಾಗಿದ್ದಾರೆ.

  • ಲಿಫ್ಟ್‌ನಲ್ಲಿ ಪತಿ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾನ್ಸ್

    ಲಿಫ್ಟ್‌ನಲ್ಲಿ ಪತಿ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾನ್ಸ್

    ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್ (Hollywood) ರಂಗದಲ್ಲಿ ಸೆಟಲ್ ಆಗಿದ್ದಾರೆ. ‘ಸಿಟಾಡೆಲ್’ ಪ್ರಚಾರ ಕಾರ್ಯದಲ್ಲಿ ಬ್ಯುಸಿ ನಡುವೆ ಪತಿ ನಿಕ್ ಜೋನಸ್ ಜೊತೆ ರೊಮ್ಯಾಂಟಿಕ್ ಪ್ರಿಯಾಂಕಾ ಪೋಸ್ ಕೊಟಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    ಹಾಲಿವುಡ್- ಬಾಲಿವುಡ್‌ನಲ್ಲಿ (Bollywood) ದಿ ಬೆಸ್ಟ್ ಕಪಲ್ ಆಗಿರುವ ನಿಕ್-ಪ್ರಿಯಾಂಕಾ ಒಬ್ಬರ ಕೆಲಸಕ್ಕೆ ಮತ್ತೊಬ್ಬರು ಸಾಥ್ ನೀಡುತ್ತಾ ಬರುತ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಮಗಳ ಆರೈಕೆ, ಸಿನಿಮಾಗೆ ಸಂಬಂಧಿಸಿದ ಕೆಲಸಗಳಿಗೆ ಬೆಂಬಲಿಸುತ್ತಿದ್ದಾರೆ.

     

    View this post on Instagram

     

    A post shared by Nick Jonas (@nickjonas)

    ಇದೀಗ ನಿಕ್- ಪ್ರಿಯಾಂಕಾ ಲಿಫ್ಟ್‌ನಲ್ಲಿ ರೊಮ್ಯಾನ್ಸ್ ಮಾಡ್ತಿರುವ ಫೋಟೋವನ್ನ ನಿಕ್ ಜೋನಸ್ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಕೆಂಪು ಬಣ್ಣದ ಗೌನ್‌ನಲ್ಲಿ ಮಿಂಚಿದ್ರೆ, ನಿಕ್ ಕಪ್ಪು ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೆಚ್ಚಿನ ಜೋಡಿಯ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅಂದಹಾಗೆ ಈ ಫೋಟೋಶೂಟ್‌ ‘ಸಿಟಾಡೆಲ್‌ʼ ಪ್ರೀಮಿಯರ್‌ ಶೋ ಸಮಯದಲ್ಲಿ ಕ್ಲಿಕ್ಕಿಸಿದ ಫೋಟೋಶೂಟ್‌ ಇದಾಗಿದೆ. ಇದನ್ನೂ ಓದಿ:ಹೈಕೋರ್ಟ್ ಮೆಟ್ಟಿಲೇರಿದ ಬಿಗ್ ಬಿ ಮೊಮ್ಮಗಳು- ಅಷ್ಟಕ್ಕೂ ಆಗಿದ್ದೇನು?

     

    View this post on Instagram

     

    A post shared by Priyanka (@priyankachopra)

    ‘ಸಿಟಾಡೆಲ್’ (Citadel) ಪ್ರೀಮಿಯರ್ ಶೋ ಲಂಡನ್‌ನಲ್ಲಿ ನಡೆದಿದೆ. ಪ್ರಿಯಾಂಕಾ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ವೆಬ್ ಸರಣಿಯಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಏ.28ಕ್ಕೆ ‘ಸಿಟಾಡೆಲ್’ ಒಟಿಟಿಯಲ್ಲಿ ಪ್ರಸಾರವಾಗಲಿದೆ.

  • 7 ಕೋಟಿ ಮೌಲ್ಯದ ಆಸ್ತಿ ಸೇಲ್- ಶಾಶ್ವತವಾಗಿ ತವರಿಗೆ ವಿದಾಯ ಹೇಳ್ತಾರಾ ಪ್ರಿಯಾಂಕಾ

    7 ಕೋಟಿ ಮೌಲ್ಯದ ಆಸ್ತಿ ಸೇಲ್- ಶಾಶ್ವತವಾಗಿ ತವರಿಗೆ ವಿದಾಯ ಹೇಳ್ತಾರಾ ಪ್ರಿಯಾಂಕಾ

    ಬಾಲಿವುಡ್ (Bollywood) ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್‌ನ ‘ಸಿಟಾಡೆಲ್’ (Citadel) ವೆಬ್ ಸಿರೀಸ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮುಂಬೈನಿಂದ ಹಿಂದಿರುಗಿದ ಬೆನ್ನಲ್ಲೇ ಸಿನಿಮಾ ಕೆಲಸಗಳಲ್ಲಿ ತೊಡಗಿದ್ದಾರೆ. ಈಗ ತಮ್ಮ ಖಾಸಗಿ ವಿಚಾರವಾಗಿ ನಟಿ ಸುದ್ದಿಯಾಗಿದ್ದಾರೆ. ಮುಂಬೈನಲ್ಲಿರುವ 7 ಕೋಟಿ ಮೌಲ್ಯದ ಆಸ್ತಿಯನ್ನು ಪ್ರಿಯಾಂಕಾ ಚೋಪ್ರಾ ಮಾರಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಪ್ರಿಯಾಂಕಾ ವಿವಾದದ ಕಾರಣದಿಂದ ಸುದ್ದಿ ಆಗಿದ್ದಾರೆ. ತುಂಬ ವರ್ಷಗಳ ಹಿಂದೆ ಬಾಲಿವುಡ್‌ನಲ್ಲಿ ತಾವು ಅನುಭವಿಸಿದ ಕಷ್ಟದ ಬಗ್ಗೆ ಈಗ ಮಾತನಾಡಿದ್ದಕ್ಕಾಗಿ ಅವರು ನಟಿ ಟೀಕೆಗೆ ಒಳಗಾದರು. ಈ ಬಗ್ಗೆ ಪರ- ವಿರೋಧದ ಚರ್ಚೆಯಾಗಿತ್ತು. ಈ ಎಲ್ಲ ಕಿರಿಕ್‌ಗಳ ಬೆನ್ನಲ್ಲೇ ಅವರೊಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂಬೈನಲ್ಲಿ ತಮಗೆ ಸೇರಿದ ಆಸ್ತಿಯೊಂದನ್ನು ಅವರು ಮಾರಿದ್ದಾರೆ. ಬರೋಬ್ಬರಿ 7 ಕೋಟಿ ರೂಪಾಯಿ ಬೆಲೆ ಬಾಳುವ ಪ್ರಾಪರ್ಟಿಯನ್ನು (Property) ಅವರು ಮಾರಾಟ ಮಾಡಿದ್ದಾರೆ. ಈ ಮೂಲಕ ಅವರು ಶಾಶ್ವತವಾಗಿ ಮುಂಬೈ (Mumbai) ಜೊತೆಗಿನ ನಂಟಿಗೆ ವಿದಾಯ ಹೇಳುತ್ತಾರಾ ಎಂಬ ಅನುಮಾನ ಮೂಡಿದೆ. ಇದನ್ನೂ ಓದಿ: Hombale Films ನಿರ್ಮಾಣದ ‘ಧೂಮಂ’ ಫಸ್ಟ್ ಲುಕ್ ಔಟ್

    ನಿಕ್ ಜೋನಸ್ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ 2018ರಲ್ಲಿ ಅಮೆರಿಕಕ್ಕೆ ಶಿಫ್ಟ್ ಆದರು. ಈಗ ಅವರು ಅಲ್ಲಿಯೇ ಸೆಟ್ಲ್ ಆಗಿದ್ದಾರೆ. ಹಾಲಿವುಡ್ ಸಿನಿಮಾಗಳಿಂದ ಅವರಿಗೆ ಅವಕಾಶಗಳು ಸಿಗುತ್ತಿವೆ. ಸದ್ಯ ಅವರು ಹಿಂದಿಯಲ್ಲಿ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅವರ ಸಂಪೂರ್ಣ ಗಮನ ಹಾಲಿವುಡ್ ಮೇಲಿದೆ. ಇಷ್ಟು ವರ್ಷಗಳ ಕಾಲ ಆ ಜಾಗವನ್ನು ಅವರು ಬಾಡಿಗೆಗೆ ನೀಡಿದ್ದರು. ಆದರೆ ಈಗ ಮಾರಾಟ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಪರವಾಗಿ ಅವರ ತಾಯಿ ಮಧು ಚೋಪ್ರಾ ಮನೆ ಮಾರಾಟದ ವ್ಯವಹಾರ ನಡೆಸಿದ್ದಾರೆ.

    ನಟಿಗೆ ಪ್ರಿಯಾಂಕಾ ಚೋಪ್ರಾ ಅವರಿಗೆ ಮುಂಬೈ ನಗರದ ಜೊತೆ ವಿಶೇಷ ನಂಟು ಇದೆ. ಅವರ ಬಾಲ್ಯ, ವೃತ್ತಿ ಜೀವನ, ಸೋಲು- ಗೆಲುವು ಈ ಎಲ್ಲವನ್ನು ಅವರು ನೋಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮಕ್ಕಾಗಿ ಮುಂಬೈಗೆ ಬಂದಿದ್ದ ಅವರು ಕೆಲವು ದಿನಗಳ ಕಾಲ ಇಲ್ಲಿಯೇ ಉಳಿದುಕೊಂಡಿದ್ದರು. ಮಗಳು ಮಾಲ್ತಿ ಮೇರಿ ಜೊತೆ ಅವರು ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

  • Femina Miss India 2023: 19ರ ಯುವತಿ ನಂದಿನಿ ಗುಪ್ತಾಗೆ ಮಿಸ್ ಇಂಡಿಯಾ ಕಿರೀಟ

    Femina Miss India 2023: 19ರ ಯುವತಿ ನಂದಿನಿ ಗುಪ್ತಾಗೆ ಮಿಸ್ ಇಂಡಿಯಾ ಕಿರೀಟ

    ಇಂಫಾಲ್: ರಾಜಸ್ಥಾನದ ಮೂಲದ 19ರ ಹರೆಯದ ನಂದಿನಿ ಗುಪ್ತಾ (Nandini Gupta) ಅವರು ಈ ಬಾರಿಯ ʻಫೆಮಿನಾ ಮಿಸ್ ಇಂಡಿಯಾ 2023ʼ (Femina Miss India 2023) ಕಿರೀಟ ಧರಿಸಿದ್ದಾರೆ.

     

    View this post on Instagram

     

    A post shared by Femina Miss India (@missindiaorg)

    ದೆಹಲಿ ಮೂಲದ ಶ್ರೇಯಾ ಪೂಂಜಾ (Shreya Poonja) ಅವರು ಮೊದಲ ರನ್ನರ್ ಅಪ್ ಆಗಿದ್ದರೆ, ಮಣಿಪುರ ಮೂಲದ ತೌನೊಜಮ್ ಸ್ಟ್ರೆಲಾ ಅವರು 2ನೇ ರನ್ನರ್ ಅಪ್ ಸ್ಥಾನಕ್ಕೆ ಭಾಜನರಾಗಿದ್ದಾರೆ. ಇದನ್ನೂ ಓದಿ: ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – ನಾಲ್ವರು ಭಾರತೀಯರು ಸೇರಿದಂತೆ 16 ಮಂದಿ ಸಾವು

    ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಮಿಸ್ ಇಂಡಿಯಾ ಆಯೋಜಕರು ಮಾಹಿತಿ ಹಂಚಿಕೊಂಡಿದ್ದು, ‘ಈ ಎಲ್ಲ ಮಹಿಳೆಯರು ತುಂಬಾ ಪವರ್‌ಫುಲ್ ಆದ ದನಿ ಹೊಂದಿದ್ದಾರೆ. ಅವರು ನಂಬುವ ಎಲ್ಲಾ ವಿಚಾರಗಳನ್ನ ಸಾಕಾರಗೊಳಿಸಲು ಈ ವೇದಿಕೆಯನ್ನು ಅವರು ಬಳಸಿಕೊಂಡಿದ್ದಾರೆ ಅನ್ನೋದು ನಮಗೆ ಖಚಿತವಾಗಿದೆ. ಈ ಸ್ಥಾನಗಳಿಗೆ ಅವರು ಬರಲು ಪಟ್ಟ ಶ್ರಮವನ್ನ ನಾವು ನೋಡಿದ್ದೇವೆ. ಇವರೆಲ್ಲರಿಗೂ ಶುಭಾಶಯಗಳು. ಇದು ಸಂಭ್ರಮವನ್ನು ಸೆಲೆಬ್ರೇಟ್ ಮಾಡುವ ಸಮಯ.. ಎಂದು ಬರೆದುಕೊಂಡಿದೆ.

    ಯಾರಿದು ನಂದಿನಿ ಗುಪ್ತಾ?
    ನಂದಿನಿ ಮೂಲತಃ ರಾಜಸ್ಥಾನದ ಕೋಟ ನಗರದವರು. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ನಂದಿನಿ, ಬ್ಯುಸಿನೆಸ್ ಮ್ಯಾನೇಜ್ಮೆಂಟ್‌ನಲ್ಲಿ ಪದವಿ ಕೂಡ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಸೆಕ್ಸ್‌ – 6 ಮಂದಿ US ಶಿಕ್ಷಕಿಯರು ಅರೆಸ್ಟ್‌

    ನಂದಿನಿ ಗುಪ್ತಾ ಅವರ ಬದುಕಿಗೆ ಹಿರಿಯ ಉದ್ಯಮಿ ರತನ್ ಟಾಟಾ (Ratan Tata) ಅವರು ಸಾಕಷ್ಟು ಸ್ಫೂರ್ತಿಯಾಗಿದ್ದಾರೆ. ಅವರ ಹಾದಿಯಲ್ಲೇ ಮುಂದೆ ಉದ್ಯೋಗಾವಕಾಶಗಳನ್ನ ಸೃಷ್ಟಿಸುವ ಗುರಿ ಹೊಂದಿದ್ದಾರೆ. ಅವರ ಮಾನವೀಯತೆ ಹಾಗೂ ದಾನ ಮಾಡುವ ಗುಣಗಳನ್ನ ಹೆಚ್ಚು ಇಷ್ಟಪಡುತ್ತಾರೆ.

    ಅಲ್ಲದೇ ನಟಿ ಹಾಗೂ ಮಾಜಿ ವಿಶ್ವಸುಂದರಿ ಪ್ರಿಯಾಂಕ ಚೋಪ್ರಾ (Priyanka Chopra) ಅವರ ಸಾಧನೆಗಳು ಹಾಗೂ ಸಮಾಜಕ್ಕೆ ಏನು ಕೊಡಬೇಕೆಂಬ ಬಗ್ಗೆ ಅವರಿಗಿರುವ ಬದ್ಧತೆಗಳಿಂದಲೂ ನಂದಿನಿ ಹೆಚ್ಚು ಸ್ಫೂರ್ತಿ ಪಡೆದುಕೊಂಡಿದ್ದಾರೆ ಎಂದು ಮಿಸ್‌ ಇಂಡಿಯಾ ಆಯೋಜಕರು ತಿಳಿಸಿದ್ದಾರೆ.