ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineti Chopra) ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ಅವರ ಸಹೋದರ ಸಂಬಂಧಿ ಮೀರಾ ಚೋಪ್ರಾ (Meera Chopra) ಮದುವೆ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟಿಯ ಡೇಟ್ ಫಿಕ್ಸ್ ಆಗಿದೆ.

ಪ್ರಿಯಾಂಕಾ ಚೋಪ್ರಾ(Priyanka Chopra), ಪರಿಣಿತಿ ಚೋಪ್ರಾ ಸಹೋದರ ಸಂಬಂಧಿ ಮೀರಾ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆ (Wedding) ಪ್ಲ್ಯಾನ್ ಬಗ್ಗೆ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಾಟೇರ ರಿಲೀಸ್ ದಿನವೇ ರಮ್ಯಾ ನಿರ್ಮಾಣದ ಸಿನಿಮಾ ಒಟಿಟಿಗೆ

ಹೌದು.. ನಾನು ಮದುವೆ (Wedding) ಆಗುತ್ತಿದ್ದೇನೆ. 2024ರ ಫೆಬ್ರವರಿಯಲ್ಲಿ ಮದುವೆ ನಡೆಯಲಿದೆ. ಈಗಾಗಲೇ ನಮ್ಮ ಕುಟುಂಬದ ಸದಸ್ಯರು ಮದುವೆಗೆ ತಯಾರಿ ಮಾಡುತ್ತಿದ್ದಾರೆ. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ. ಮದುವೆಗೆ 150 ಜನರಿಗೆ ಕರೆಯಲು ಚಿಂತನೆ ಮಾಡಿದ್ದೇವೆ ಎಂದು ಮೀರಾ ತಿಳಿಸಿದ್ದಾರೆ. ಆದರೆ ಹುಡುಗ ಯಾರು ಎಂಬುದನ್ನ ನಟಿ ರಿವೀಲ್ ಮಾಡಿಲ್ಲ.

ರಾಜಸ್ಥಾನದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಬಳಿಕ ಮುಂಬೈನಲ್ಲಿ ಸ್ನೇಹಿತರಿಗೆ ಆಪ್ತರಿಗಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ನಟಿ ಹೇಳಿದ್ದಾರೆ. ಇದನ್ನೂ ಓದಿ:ಕಾಟೇರ ರಿಲೀಸ್ ದಿನವೇ ರಮ್ಯಾ ನಿರ್ಮಾಣದ ಸಿನಿಮಾ ಒಟಿಟಿಗೆ
ಇನ್ನೂ ಕನ್ನಡದ ಸ್ಟಾರ್ ನಟ ದರ್ಶನ್ (Darshan) ನಟಿಸಿರುವ ‘ಅರ್ಜುನ್’ (Arjun) ಸಿನಿಮಾದಲ್ಲಿ ಮೀರಾ ಚೋಪ್ರಾ ನಾಯಕಿಯಾಗಿ ನಟಿಸಿದ್ದರು. ಇದೀಗ ಸೌತ್- ಬಾಲಿವುಡ್ ಚಿತ್ರಗಳಲ್ಲಿ ಮೀರಾ ಆ್ಯಕ್ಟೀವ್ ಆಗಿದ್ದಾರೆ.


ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ, ವೃತ್ತಿಯಲ್ಲಿ ಇನ್ನೂ ಹೆಚ್ಚಿನದ್ದನ್ನು ಸಾಧಿಸಲು ಹಾಲಿವುಡ್ ಸೇರಿದಂತೆ ಬೇರೆ-ಬೇರೆ ಸಿನಿಮಾ ರಂಗಗಳಿಗೆ ಹೋಗುವ ಪ್ರಯತ್ನ ಮಾಡುತ್ತೀರ? ಎಂಬ ಪ್ರಶ್ನೆಗೆ ಉತ್ತರಿಸಿರುವ ದೀಪಿಕಾ ಪಡುಕೋಣೆ, ಗ್ಲೋಬಲ್ ಸ್ಟಾರ್ ಆಗಲು ಭಾರತವನ್ನು ಬಿಟ್ಟು ಹೋಗಬೇಕು ಎಂದೇನೂ ಇಲ್ಲ ಎಂದಿದ್ದಾರೆ. ಇದನ್ನೂಓದಿ:


















