Tag: priyanka chopra

  • ತಾಕತ್ತಿದ್ರೆ ಪ್ರಿಯಾಂಕಾರಂತೆ ಬಟ್ಟೆ ಧರಿಸಿ – ನೆಟ್ಟಿಗರಿಗೆ ನಟಿ ಹೀನಾ ಸವಾಲ್

    ತಾಕತ್ತಿದ್ರೆ ಪ್ರಿಯಾಂಕಾರಂತೆ ಬಟ್ಟೆ ಧರಿಸಿ – ನೆಟ್ಟಿಗರಿಗೆ ನಟಿ ಹೀನಾ ಸವಾಲ್

    ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಬೋಲ್ಡ್ ಡ್ರೆಸ್ ಧರಿಸಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚಿಗಷ್ಟೇ ಪ್ರಿಯಾಂಕಾ ಅವರ ತಾಯಿ ಟ್ರೋಲಿಗರ ಚಳಿ ಬಿಡಿಸಿದ್ದರು. ಇದರ ಬೆನ್ನಲೇ ನಟಿ ಹೀನಾ ಖಾನ್ ಪ್ರಿಯಾಂಕಾ ಅವರ ಪರ ಬ್ಯಾಟ್ ಬೀಸುವ ಮೂಲಕ ನೆಟ್ಟಿಗರಿಗೆ ಸವಾಲ್ ಹಾಕಿದ್ದಾರೆ.

    ಇತ್ತೀಚೆಗೆ ಪ್ರಿಯಾಂಕಾ ತಮ್ಮ ಪತಿ ನಿಕ್ ಜೋನಸ್ ಜೊತೆ ಗ್ರ್ಯಾಮಿ ಅವಾರ್ಡ್ 2020 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಗ್ಲಾಮರಸ್ ಡ್ರೆಸ್ ಹಾಕಿದ್ದ ಕಾರಣ ಸಿಕ್ಕಪಟ್ಟೆ ಟ್ರೋಲ್ ಆಗುತ್ತಿದ್ದರು. ಈ ಬಗ್ಗೆ ಕಿರುತೆರೆ ನಟಿ ಹೀನಾ ಖಾನ್ ಪ್ರತಿಕ್ರಿಯಿಸಿ, ತಾಕತ್ ಇದ್ರೆ ಪ್ರಿಯಾಂಕಾರಂತೆ ಬಟ್ಟೆ ಧರಿಸಿ ಎಂದು ಚಾಲೆಂಜ್ ಮಾಡಿದ್ದಾರೆ.

     

    View this post on Instagram

     

    This guy. #Grammys2020

    A post shared by Priyanka Chopra Jonas (@priyankachopra) on

    ಸಂದರ್ಶನದಲ್ಲಿ ಮಾತನಾಡಿದ ಹೀನಾ, ಇಂತಹ ಉಡುಪು ಧರಿಸಲು ಧೈರ್ಯ ಬೇಕಾಗುತ್ತದೆ. ತಾಕತ್ ಇದ್ದರೆ ಪ್ರಿಯಾಂಕಾ ಚೋಪ್ರಾ ಅವರಂತೆ ಬಟ್ಟೆ ಧರಿಸಿ ಎಂದು ಚಾಲೆಂಜ್ ಮಾಡಿದ್ದಾರೆ. ಅಲ್ಲದೆ ಪ್ರಿಯಾಂಕಾ ಅವರು ಟ್ರೋಲ್‍ಗಳಿಗೆ ತಲೆ ಕಡಿಸಿಕೊಳ್ಳುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ಮೊದಲು ಪ್ರಿಯಾಂಕಾ ಅವರ ತಾಯಿ ಮಧು ಅವರು, ಪ್ರಿಯಾಂಕಾ ಯಾರಿಗೂ ನೋವು ಮಾಡದಂತೆ ತನ್ನದೇ ಆದ ರೀತಿಯಲ್ಲಿ ಜೀವನ ನಡೆಸುತ್ತಾಳೆ. ಅದು ಅವಳ ದೇಹ. ಅವಳಿಗೆ ಹೇಗೆ ಇಷ್ಟ ಇದೆಯೋ ಹಾಗೇ ಇರಲಿ ಎಂದು ಟ್ರೋಲ್ ಮಾಡಿದವರಿಗೆ ಚಾಟಿ ಬೀಸಿದ್ದರು.

  • ಗಂಡನ ತುಟಿಗೆ ಮುತ್ತಿಟ್ಟು  ಲಿಪ್‍ಸ್ಟಿಕ್ ಒರೆಸಿದ ಪ್ರಿಯಾಂಕ – ವಿಡಿಯೋ

    ಗಂಡನ ತುಟಿಗೆ ಮುತ್ತಿಟ್ಟು ಲಿಪ್‍ಸ್ಟಿಕ್ ಒರೆಸಿದ ಪ್ರಿಯಾಂಕ – ವಿಡಿಯೋ

    ವಾಷಿಂಗ್ಟನ್: ಬಾಲಿವುಡ್ ಬ್ಯೂಟಿಫುಲ್ ಜೋಡಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್ ಪರಸ್ಪರ ಲಿಪ್‍ಲಾಕ್ ಮಾಡಿಕೊಂಡಿದ್ದು, ಕೊನೆಯಲ್ಲಿ ಪ್ರಿಯಾಂಕ ಪತಿಯ ತುಟಿ ಒರೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಇತ್ತೀಚೆಗೆ ಅಮೆರಿಕದಲ್ಲಿ ನಡೆದ 77 ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾಂಕ ಮತ್ತು ನಿಕ್ ಜೋಡಿ ನಿರೂಪಕರು ಹೇಳಿದಂತೆ ಲಿಪ್ ಲಾಕ್ ಮಾಡಿದ್ದಾರೆ. ಈ ವೇಳೆ ಪ್ರಿಯಾಂಕ ಹಾಕಿದ್ದ ರೆಡ್ ಕಲರ್ ಲಿಪ್‍ಸ್ಟಿಕ್ ನಿಕ್ ತುಟಿಗೆ ಅಂಟಿಕೊಂಡಿದ್ದು, ಇದನ್ನು ಸ್ವತಃ ಪ್ರಿಯಾಂಕ ಅವರೇ ಒರೆಸಿದ್ದಾರೆ.

    https://www.instagram.com/p/B690uF7peSI/?utm_source=ig_embed

    77 ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪಿಂಕ್ ಕಲರ್ ಗೌನ್ ತೊಟ್ಟು ಬಂದಿದ್ದ ಪ್ರಿಯಾಂಕ ಸಖತ್ ಸ್ಟೈಲಿಶ್ ಲುಕ್‍ನಲ್ಲಿ ಮಿಂಚುತ್ತಿದ್ದರು. ಜೊತೆಗೆ ಬಂದಿದ್ದ ಪತಿ ನಿಕ್ ಜೊನಸ್ ಕಪ್ಪು ಬಣ್ಣದ ಸೂಟ್ ಧರಿಸಿ ಬಂದಿದ್ದರು. 77 ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್ ಅತ್ಯುತ್ತಮ ಟಿವಿ ಸರಣಿ – ಸಂಗೀತ ಅಥವಾ ಹಾಸ್ಯ ಪ್ರಶಸ್ತಿಯನ್ನು ನೀಡಿದರು.

    ಈ ಸಮಾರಂಭಕ್ಕೆ ಆಗಮಿಸಿದ ಪ್ರಿಯಾಂಕ ಮತ್ತು ನಿಕ್ ಜೋಡಿಯನ್ನು ಆರಂಭದಲ್ಲೇ ರೆಡ್ ಕಾರ್ಪೆಟ್ ನಿರೂಪಕರು ಅಡ್ಡಗಟ್ಟಿ ಮಾತನಾಡಿಸಿದರು. ಈ ವೇಳೆ ನಿರೂಪಕನೋರ್ವ ನೀವು ಈಗ ನಿಮ್ಮ ಪತಿಗೆ ಇಲ್ಲಿಯೇ ಮುತ್ತು ಕೊಡಿ ಎಂದು ಹೇಳುತ್ತಾರೆ. ಆಗ ನಿಕ್ ಮುತ್ತು ಕೊಡಲು ಮುಂದೆ ಬರುತ್ತಾರೆ. ಆಗ ಹಿಂದೆ ಹೋದ ಪ್ರಿಯಾಂಕ ನಂತರ ಪತಿಯ ತುಟಿಗೆ ಮುತ್ತು ನೀಡುತ್ತಾರೆ. ಆಗ ಪ್ರಿಯಾಂಕ ಹಾಕಿದ್ದ ಕೆಂಪು ಬಣ್ಣದ ಲಿಪ್‍ಸ್ಟಿಕ್ ನಿಕ್ ಅವರ ತುಟಿಗೆ ಅಂಟಿಕೊಳ್ಳುತ್ತದೆ. ಆಗ ಪ್ರಿಯಾಂಕ ಅವರು ಅದನ್ನು ಒರೆಸುತ್ತಾರೆ.

    https://www.instagram.com/p/B691iIXAE6D/?utm_source=ig_embed

    ಈ ಜೊಡಿ 2018 ಡೆಸೆಂಬರ್ ಒಂದರಲ್ಲಿ ಮದುವೆಯಾಗಿತ್ತು. ಕಳೆದ ಡಿಸೆಂಬರ್ 1 ಗೆ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವನ್ನು ಆಚರಿಸಿಕೊಂಡಿದ್ದ ನಿಕ್ ಪ್ರಿಯಾಂಕ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಪರಸ್ಪರ ಶುಭಾಶಯ ಕೋರಿಕೊಂಡಿದ್ದರು.

  • ಮದ್ವೆ ವಾರ್ಷಿಕೋತ್ಸವಕ್ಕೆ ಪ್ರಿಯಾಂಕಾ ಜೀವನದಲ್ಲಿ ಹೊಸ ಸದಸ್ಯನ ಎಂಟ್ರಿ

    ಮದ್ವೆ ವಾರ್ಷಿಕೋತ್ಸವಕ್ಕೆ ಪ್ರಿಯಾಂಕಾ ಜೀವನದಲ್ಲಿ ಹೊಸ ಸದಸ್ಯನ ಎಂಟ್ರಿ

    ಮುಂಬೈ: ಸ್ಟಾರ್ ಜೋಡಿ ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಮಗು ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿದ ನೆಟ್ಟಿಗರು ಪರ್ಫೆಕ್ಟ್ ಫ್ಯಾಮಿಲಿ ಎಂದು ಹೇಳುತ್ತಿದ್ದಾರೆ.

    ಪ್ರಿಯಾಂಕಾ ಹಾಗೂ ನಿಕ್ ಇಂದು ತಮ್ಮ ಮೊದಲನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಸಂಭ್ರಮವನ್ನು ಹೆಚ್ಚಿಸಲು ಅಭಿಮಾನಿಗಳು ಪ್ರಿಯಾಂಕಾ ಹಾಗೂ ನಿಕ್ ತೋಳಿನಲ್ಲಿ ಮಗುವಿರುವ ಫೋಟೋವನ್ನು ಫೋಟೋಶಾಪ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಿಕ್ – ಪ್ರಿಯಾಂಕಾ

    ನಿಕ್ ಹಾಗೂ ಪ್ರಿಯಾಂಕಾ ಮಗು ಜೊತೆಗಿರುವ ಫೋಟೋಶಾಪ್ ಫೋಟೋ ನೋಡಿ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಇದು ತುಂಬಾ ಸುಂದರವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅದ್ಭುತವಾಗಿ ಫೋಟೋಶಾಪ್ ಮಾಡಿದ್ದೀರಾ ಎಂದು ಬರೆದಿದ್ದಾರೆ

    ಈ ಹಿಂದೆ ಸಂದರ್ಶನದಲ್ಲಿ ಪ್ರಿಯಾಂಕಾ, ನಾನು ಸುಮಾರು ದಿನಗಳಿಂದ ಲಾಸ್ ಏಂಜಲೀಸ್‍ನಲ್ಲಿ ಮನೆ ಹುಡುಕುತ್ತಿದ್ದೇನೆ. ಈಗಾಗಲೇ ಮುಂಬೈ ಹಾಗೂ ನ್ಯೂಯಾರ್ಕ್ ನಲ್ಲಿ ನನ್ನ ಮನೆ ಇದೆ. ಮುಂಬೈ ನೆನಪಾಗಲಿ ಎಂದು ನಾನು ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಲು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದರು.

    ಅಲ್ಲದೆ, ನನ್ನ ಸುತ್ತಮುತ್ತ ನಾನು ಪ್ರೀತಿಸುವ ಜನರಿದ್ದರೆ ನಾನು ತುಂಬಾ ಖುಷಿಯಾಗಿರುತ್ತೇನೆ. ಈಗ ನನಗಾಗಿ ಒಂದು ಮನೆ ಖರೀದಿಸುವುದು ಹಾಗೂ ಮಗುವಿಗೆ ಜನ್ಮ ನೀಡುವುದು ನನ್ನ ಟಾಪ್ ಲಿಸ್ಟ್ ನಲ್ಲಿ ಇದೆ ಎಂದು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದರು.

  • ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಿಕ್ – ಪ್ರಿಯಾಂಕಾ

    ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಿಕ್ – ಪ್ರಿಯಾಂಕಾ

    ಮುಂಬೈ: ಇಂಟರ್‌ನ್ಯಾಷನಲ್ ಜೋಡಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಇಂದು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ನಿಕ್ ಹಾಗೂ ಪ್ರಿಯಾಂಕಾ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಪರಸ್ಪರ ಶುಭ ಕೋರಿದ್ದಾರೆ.

    ಪ್ರಿಯಾಂಕಾ ತನ್ನ ಇನ್‍ಸ್ಟಾದಲ್ಲಿ ಮದುವೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ, “ನಾನು ನೀಡಿದ ಮಾತು ಅಂದು, ಇಂದು ಹಾಗೂ ಶಾಶ್ವತವಾಗಿರುತ್ತೆ. ನೀವು ನನಗೆ ಖುಷಿ, ಗೌರವ, ಉತ್ಸಾಹ ಎಲ್ಲವನ್ನು ಒಂದೇ ಕ್ಷಣದಲ್ಲಿ ಕೊಟ್ಟಿದ್ದೀರಿ. ನನ್ನನ್ನು ಹುಡುಕಿದ್ದಕ್ಕಾಗಿ ಧನ್ಯವಾದಗಳು. ನನ್ನ ಪತಿ ನಿಕ್ ಜೋನಸ್‍ಗೆ ಮೊದಲ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಹಾಗೆಯೇ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು. ನಾವು ತುಂಬಾ ಅದೃಷ್ಟಶಾಲಿ ಎಂದು ಎನಿಸುತ್ತಿದೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಇತ್ತ ನಿಕ್ ಜೋನಸ್ ಕೂಡ ಮದುವೆಯ ಸ್ಪಷೆಲ್ ಫೋಟೋವನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. “ಒಂದು ವರ್ಷದ ಹಿಂದೆ ಈ ದಿನ ನಾವು ಜೊತೆಯಾಗಿ ಇರುವುದಾಗಿ ಪ್ರತಿಜ್ಞೆ ಮಾಡಿದ್ದೇವೆ. ನಾನು ನಿನ್ನನ್ನು ಮನಸ್ಫೂರ್ವಕವಾಗಿ ಇಷ್ಟಪಡುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ನಿಕ್ ಹಾಗೂ ಪ್ರಿಯಾಂಕಾ ಅವರ ಪೋಸ್ಟ್ ಗೆ ಕಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ.

    ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಸ್ ಅವರಿಗೆ ಸ್ಪೆಷಲ್ ಸರ್ಪ್ರೈಸ್ ಆಗಿ ಗಿನೋ ಹೆಸರಿನ ನಾಯಿಯನ್ನು ಉಡುಗೊರೆಯಾಗಿ ನೀಡಿದ್ದರು. ಈ ಸರ್ಪ್ರೈಸ್ ನೋಡಿ ನಿಕ್ ಮೊದಲು ಶಾಕ್ ಆಗಿದ್ದರು. ಗಿನೋ ನಾಯಿಯ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಅದಕ್ಕೆ “ಒಂದೇ ಫ್ರೇಮ್ ನಲ್ಲಿ ಎಷ್ಟು ಕ್ಯೂಟ್ ಇದೆ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಬರೆದುಕೊಂಡಿದ್ದರು.

    ಕಳೆದ ವರ್ಷ ಡಿಸೆಂಬರ್ 1 ಮತ್ತು 2ರಂದು ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಇಬ್ಬರೂ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಕ್ರಿಶ್ಚಿಯನ್ ಹಾಗೂ ಹಿಂದೂ ಎರಡೂ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದರು. ಪ್ರಿಯಾಂಕಾ ಹಾಗೂ ನಿಕ್ ಒಟ್ಟು ಮೂರು ಆರತಕ್ಷತೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನಾಲ್ಕನೇ ಆರತಕ್ಷತೆಯನ್ನು ಅವರು ಅಮೆರಿಕದಲ್ಲಿ ಮಾಡಿಕೊಂಡಿದ್ದರು.

  • ನಿಕ್- ಪ್ರಿಯಾಂಕಾ ಜೀವನದಲ್ಲಿ ಹೊಸ ಸದಸ್ಯನ ಎಂಟ್ರಿ: ವಿಡಿಯೋ

    ನಿಕ್- ಪ್ರಿಯಾಂಕಾ ಜೀವನದಲ್ಲಿ ಹೊಸ ಸದಸ್ಯನ ಎಂಟ್ರಿ: ವಿಡಿಯೋ

    ಮುಂಬೈ: ಸ್ಟಾರ್ ಜೋಡಿ ನಿಕ್ ಜೋನಸ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಕೆಲವೇ ದಿನಗಳಿವೆ. ವಾರ್ಷಿಕೋತ್ಸವದ ಮೊದಲೇ ನಿಕ್ ಹಾಗೂ ಪ್ರಿಯಾಂಕಾ ಮನೆಗೆ ಹೊಸ ಸದಸ್ಯನ ಎಂಟ್ರಿಯಾಗಿದೆ.

    ಪ್ರಿಯಾಂಕಾ ತಮ್ಮ ಪತಿ ನಿಕ್ ಅವರಿಗೆ ಸ್ಪೆಷಲ್ ಸರ್ಪ್ರೈಸ್ ನೀಡಿದ್ದಾರೆ. ಈ ಸರ್ಪ್ರೈಸ್ ನೋಡಿ ನಿಕ್ ಮೊದಲು ಶಾಕ್ ಆದರು. ಬಳಿಕ ಅವರು ಪ್ರಿಯಾಂಕಾ ಅವರು ನೀಡಿದ ಸರ್ಪ್ರೈಸ್ ನೋಡಿ ಖುಷಿಪಟ್ಟಿದ್ದಾರೆ. ಪ್ರಿಯಾಂಕಾ, ಗಿನೋ ಜೋನಸ್ ಎಂಬ ನಾಯಿಮರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

    ವಿವಾಹ ವಾರ್ಷಿಕೋತ್ಸವಕ್ಕೂ ಮೊದಲೇ ಪ್ರಿಯಾಂಕಾ ತಮ್ಮ ಪತಿ ನಿಕ್ ಅವರಿಗೆ ನಾಯಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಗಿನೋ ನಾಯಿಯ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ “ಒಂದೇ ಫ್ರಮ್‍ನಲ್ಲಿ ಎಷ್ಟು ಕ್ಯೂಟ್ ಇದೆ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

    ವಿಡಿಯೋದಲ್ಲಿ ನಿಕ್ ಬೆಡ್ ಮೇಲೆ ಮಲಗಿರುತ್ತಾರೆ. ಆಗ ಪ್ರಿಯಾಂಕಾ ತಮ್ಮ ಪತಿಯನ್ನು ಎಚ್ಚರಗೊಳಿಸಿ ಗಿನೋ ಅನ್ನು ಹಾಸಿಗೆ ಮೇಲೆ ಬಿಡುತ್ತಾರೆ. ನಾಯಿಯನ್ನು ನೋಡಿದಾಗ ನಿಕ್ ಅವರಿಗೆ ಮೊದಲು ಏನೂ ಅರ್ಥವಾಗಲಿಲ್ಲ. ಬಳಿಕ ಅವರಿಗೆ ಈ ಸ್ಪೆಷಲ್ ಸರ್ಪ್ರೈಸ್ ಅರ್ಥವಾಗಿದೆ. ಅಂದಹಾಗೆ ನಿಕ್ ಹಾಗೂ ಪ್ರಿಯಾಂಕಾಗೆ ಪ್ರಾಣಿಗಳೆಂದರೆ ತುಂಬಾನೇ ಇಷ್ಟ. ಅವರು ಗಿನೋ ಅನ್ನು ತಮ್ಮ ಮಗನಂತೆ ಭಾವಿಸುತ್ತಾರೆ.

    ಕಳೆದ ವರ್ಷ ಡಿಸೆಂಬರ್ 1 ಮತ್ತು 2ರಂದು ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಇಬ್ಬರೂ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಕ್ರಿಶ್ಚಿಯನ್ ಹಾಗೂ ಹಿಂದೂ ಎರಡೂ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದರು. ಪ್ರಿಯಾಂಕಾ ಹಾಗೂ ನಿಕ್ ಒಟ್ಟು ಮೂರು ಆರತಕ್ಷತೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನಾಲ್ಕನೇ ಆರತಕ್ಷತೆಯನ್ನು ಅವರು ಅಮೆರಿಕದಲ್ಲಿ ಮಾಡಿಕೊಂಡಿದ್ದರು.

  • ‘ನಿಕ್’ಗೆ ದೇಸಿ ನೇಮ್ ಇಟ್ಟ ಪ್ರಿಯಾಂಕ

    ‘ನಿಕ್’ಗೆ ದೇಸಿ ನೇಮ್ ಇಟ್ಟ ಪ್ರಿಯಾಂಕ

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಸ್ ಗೆ ಹೊಸ ದೇಸಿ ಹೆಸರಿಟ್ಟಿದ್ದಾರೆ.

    ದೇಸಿ ಗರ್ಲ್ ಎಂದೇ ಕರೆಸಿಕೊಳ್ಳುವ ಪ್ರಿಯಾಂಕ ಚೋಪ್ರಾ 2018ರಲ್ಲಿ ವಿದೇಶಿ ಹುಡುಗನನ್ನು ಮದುವೆಯಾದರು. ಕೆಲವೇ ದಿನಗಳಲ್ಲಿ ಜೋಡಿ ಮೊದಲ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದೆ. ಪ್ರಿಯಾಂಕ ವಾರ್ಷಿಕೋತ್ಸವ ಮುನ್ನವೇ ಪತಿಗೆ ಗಿನೋ ಹೆಸರಿನ ಜರ್ಮನ್ ಶೆಫರ್ಡ್ ನಾಯಿಯನ್ನು ಗಿಫ್ಟ್ ನೀಡಿದ್ದಾರೆ.

    https://www.instagram.com/p/B5WDDuNH0Bs/

    ಗಿಫ್ಟ್ ಪಡೆದಿರುವ ನಿಕ್ ಜೋನಸ್ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಕಮೆಂಟ್ ಮಾಡಿರುವ ಪ್ರಿಯಾಂಕ ವಾರ್ಷಿಕೋತ್ಸವದ ಶುಭಾಶಯಗಳು ಬಾಬು. ನಿಮ್ಮ ಮುಖ ಮಸ್ತ್ ಆಗಿದೆ ಬಾಬು ಎಂದು ಉತ್ತರಿಸಿದ್ದಾರೆ. ಕಮೆಂಟ್ ಮೂಲಕ ಪತಿಗೆ ತಾವು ಪ್ರೀತಿಯಿಂದ ಬಾಬು ಎಂದು ಕರೆಯೋದನ್ನು ಪ್ರಿಯಾಂಕ ರಿವೀಲ್ ಮಾಡಿದ್ದಾರೆ.

  • ತನಗಿದ್ದ ರೋಗದ ಬಗ್ಗೆ ಪ್ರಿಯಾಂಕ ಪತಿ ಭಾವನಾತ್ಮಕ ಪೋಸ್ಟ್

    ತನಗಿದ್ದ ರೋಗದ ಬಗ್ಗೆ ಪ್ರಿಯಾಂಕ ಪತಿ ಭಾವನಾತ್ಮಕ ಪೋಸ್ಟ್

    ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಸ್ 14 ವರ್ಷಗಳ ಹಿಂದೆ ತಮ್ಮನ್ನು ಕಾಡಿದ್ದ ರೋಗದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಕೆಲವು ದಿನಗಳ ಹಿಂದೆ ಪ್ರಿಯಾಂಕ, ನನ್ನ ಪತಿ ಅಸ್ತಮಾದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು. ಇದೀಗ ನಿಕ್ ಜೋನಸ್ ಚಿಕ್ಕ ವಯಸ್ಸಿನಲ್ಲಿಯೇ ಟೈಪ್-1 ಡಯಾಬಿಟಿಸ್ ನಿಂದ ಬಳಲುತ್ತಿದ್ದ ವಿಷಯವನ್ನು ಹಂಚಿಕೊಂಡು ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿಕೊಂಡಿದ್ದಾರೆ.

    ನಿಕ್ ಪೋಸ್ಟ್:
    14 ವರ್ಷಗಳ ಹಿಂದೆ ಇದೇ ದಿನದಂದು ನನಗೆ ಡಯಾಬಿಟಿಸ್ ಇರೋದು ಗೊತ್ತಾಯ್ತು. ಹೀಗಾಗಿ ಚಿಕ್ಕ ವಯಸ್ಸಿನಿಂದಲೇ ನನ್ನ ಆರೋಗ್ಯದ ಬಗ್ಗೆ ಗಮನ ಕೊಡುತ್ತಿದ್ದೇನೆ. ಧ್ಯಾನ, ವರ್ಕೌಟ್, ಪೌಷ್ಠಿಕಾಂಶ ಆಹಾರ ಸೇವೆನ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇನೆ. ಬ್ಲಡ್ ಶುಗರ್ ಮತ್ತು ಇನ್ಸುಲಿನ್ ತೆಗೆದುಕೊಳ್ಳವುದರ ಬಗ್ಗೆ ಜಾಗೃತನಾಗಿರಬೇಕಾಗುತ್ತಿತ್ತು. ಈ ರೋಗ ಬಾಹ್ಯವಾಗಿ ಕಾಣದಿದ್ದರೂ ಆಂತರಿಕವಾಗಿ ನನ್ನನ್ನು ಕುಗ್ಗಿಸಿತ್ತು. ಡಯಾಬಿಟಿಸ್ ನನಗೆ ಒಂಟಿತನದ ಅನುಭವವನ್ನು ನೀಡಿತ್ತು.

    ಈ ಕಾರಣದಿಂದಲೇ 2015ರಲ್ಲಿ @BeyondType1 ಆರಂಭಿಸಿದೆ. ಈ ಮೂಲಕ ಡಯಾಬಿಟಿಸ್ ನಿಂದ ಬಳಲುವರಿಗೆ ಜೊತೆಯಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ನವೆಂಬರ್ ಡಯಾಬಿಟಿಸ್ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತದೆ. ಹಾಗಾಗಿ ನಮ್ಮೊಂದಿಗೆ ಸೇರಿ ನಿಮ್ಮ ನೋವುಗಳನ್ನು ಹಂಚಿಕೊಳ್ಳಿ. ಯಾವುದೇ ರೋಗವು ನಿಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಲಾರದು.

    https://www.instagram.com/p/B4VZ-SLDpTB/

    ಗಾಯಕರಾಗಿರುವ ನಿಕ್ ಜೋನಸ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರು ತಮಗಿಂತ ಹಿರಿಯ ವಯಸ್ಸಿನ ಪ್ರಿಯಾಂಕರನ್ನ ಮದುವೆ ಆಗುವ ಮೂಲಕ ಸುದ್ದಿಯಾಗಿದ್ದರು.

  • ಪ್ರಿಯಾಂಕಾ ಪತಿಯನ್ನು ಅಶ್ಲೀಲವಾಗಿ ಮುಟ್ಟಲು ಮುಂದಾದ ಮಹಿಳಾ ಅಭಿಮಾನಿ: ವಿಡಿಯೋ

    ಪ್ರಿಯಾಂಕಾ ಪತಿಯನ್ನು ಅಶ್ಲೀಲವಾಗಿ ಮುಟ್ಟಲು ಮುಂದಾದ ಮಹಿಳಾ ಅಭಿಮಾನಿ: ವಿಡಿಯೋ

    ವಾಷಿಂಗ್ಟನ್: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೋನಸ್ ಅವರನ್ನು ಮಹಿಳಾ ಅಭಿಮಾನಿಯೊಬ್ಬಳು ಅಶ್ಲೀಲವಾಗಿ ಮುಟ್ಟಲು ಪ್ರಯತ್ನಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಇತ್ತೀಚೆಗೆ ನಿಕ್ ಜೋನಸ್ ಮ್ಯೂಸಿಕ್ ಕಾನ್ಸಾರ್ಟ್ ತಮ್ಮ ತಂಡದ ಜೊತೆ ಪರ್ಫಾಮ್ ಮಾಡುತ್ತಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬಳು ನಿಕ್ ಅವರನ್ನು ಅಶ್ಲೀಲವಾಗಿ ಮುಟ್ಟಲು ಮುಂದಾಗುತ್ತಾಳೆ. ಆಗ ನಿಕ್ ಆಕೆಯನ್ನು ತಡೆಯುತ್ತಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಮಹಿಳೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

    ವಿಡಿಯೋದಲ್ಲಿ ಅಭಿಮಾನಿಗಳಿಗೆ ಹತ್ತಿರವಾಗಲಿ ಎಂದು ನಿಕ್ ತಮ್ಮ ತಂಡದ ಜೊತೆ ಫ್ಯಾನ್ಸ್ ಮಧ್ಯೆದಲ್ಲಿ ನಿಂತುಕೊಂಡು ಹಾಡುತ್ತಿದ್ದರು. ಈ ವೇಳೆ ನಿಕ್ ಹಿಂದೆ ನಿಂತಿದ್ದ ಮಹಿಳೆ ಪದೇಪದೇ ಅವರ ಮೇಲೆ ಕೈ ಹಾಕುತ್ತಿದ್ದಳು. ಮೊದಲು ನಿಕ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ಬಳಿಕ ಆಕೆ ಅಶ್ಲೀಲವಾಗಿ ಮುಟ್ಟಲು ಬಂದಾಗ ಆಕೆಯನ್ನು ತಡೆದಿದ್ದಾರೆ.

    ಮಹಿಳೆಯನ್ನು ತಡೆದ ನಂತರ ನಿಕ್ ಹಾಡು ಹಾಡುತ್ತಲೇ ಹಿಂದೆ ತಿರುಗಿ ನೋಡಿದ್ದಾರೆ. ಆದರೆ ಕೈ ಹಾಕಿದವರು ಯಾರು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಏಕೆಂದರೆ ಅಲ್ಲಿ ಸಾಕಷ್ಟು ಮಹಿಳೆಯರು ಇದ್ದರು. ನಿಕ್ ಹಾಡು ಹಾಡುತ್ತಿದ್ದರಿಂದ ಅಲ್ಲಿದ್ದ ಜನರಿಗೆ ಈ ಘಟನೆ ತಿಳಿಯಲಿಲ್ಲ.

    ಕಾನ್ಸರ್ಟ್ ಮುಗಿದ ನಂತರ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿತ್ತು. ಸದ್ಯ ವಿಡಿಯೋ ನೋಡಿದ ಅಭಿಮಾನಿಗಳು ಮಹಿಳೆಯ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಮತ್ತೆ ಕೆಲವು ಅಭಿಮಾನಿಗಳು ಮಹಿಳೆ ಪರವಾಗಿ ನಿಕ್ ಬಳಿ ಕ್ಷಮೆ ಕೇಳಿದ್ದಾರೆ.

    https://twitter.com/NickJDaily/status/1186789261732765696?ref_src=twsrc%5Etfw%7Ctwcamp%5Etweetembed%7Ctwterm%5E1186789261732765696&ref_url=https%3A%2F%2Fhindi.news18.com%2Fnews%2Fentertainment%2Fbollywood-priyanka-chopra-husband-nick-jonas-groped-by-woman-at-music-concert-video-going-viral-on-twitter-utk-2554741.html

  • ಲೀಕ್ ಆಯ್ತು ಫರ್ಹಾನ್-ಪ್ರಿಯಾಂಕ ಬೆಡ್‍ರೂಮ್ ಹಾಟ್ ಕ್ಲಿಪ್

    ಲೀಕ್ ಆಯ್ತು ಫರ್ಹಾನ್-ಪ್ರಿಯಾಂಕ ಬೆಡ್‍ರೂಮ್ ಹಾಟ್ ಕ್ಲಿಪ್

    ಮುಂಬೈ: ಬಾಲಿವುಡ್ ದೇಸಿ ಗರ್ಲ್, ನಿಕ್ ಮಡದಿ ಪ್ರಿಯಾಂಕ ಚೋಪ್ರಾ ನಟನೆಯ ‘ದ ಸ್ಕೈ ಇಸ್ ಪಿಂಕ್’ ಇದೇ ವಾರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜೊತೆಯಾಗಿ ನಟಿಸಿರುವ ಫರ್ಹಾನ್ ಅಖ್ತರ್ ನಟಿಸಿದ್ದು, ಇಬ್ಬರ ರೊಮ್ಯಾಂಟಿಕ್ ಹಾಟ್ ಕ್ಲಿಪ್ ಲೀಕ್ ಆಗಿದೆ.

    ಲೀಕ್ ಆಗಿರುವ ವಿಡಿಯೋ ಸಿನಿಮಾ ಶೂಟಿಂಗ್ ವೇಳೆಯದ್ದು ಎನ್ನಲಾಗಿದ್ದು, ಚಿತ್ರದಲ್ಲಿ ಈ ಕ್ಲಿಪ್ ಕಟ್ ಮಾಡಲಾಗಿದ ಎಂದು ವರದಿಯಾಗಿದೆ. ಬೆಡ್ ರೂಮಿನೊಳಗೆ ಜೋಡಿ ಒಳಉಡುಪಿನಲ್ಲಿರುವ ವಿಡಿಯೋ ಇದಾಗಿದ್ದು, ಪ್ರಿಯಾಂಕ ನೀವು ತಪ್ಪಾಗಿ ನನ್ನ ಒಳ ಉಡುಪು ಧರಿಸಿದ್ದೀರಿ ಎಂದು ಫರ್ಹಾನ್ ಗೆ ಹೇಳುತ್ತಾರೆ. ಈ ವಿಡಿಯೋವನ್ನು ಚಿತ್ರದ ಪ್ರೋಮೋ ಸಹ ಎಂದು ಹೇಳಲಾಗುತ್ತಿದೆ.

    ಮದುವೆ ಬಳಿಕ ಪ್ರಿಯಾಂಕ ನಟನೆಯ ಮೊದಲ ಚಿತ್ರ ಇದಾಗಿದ್ದು, ನೈಜ ಘಟನೆಯಾಧರಿತ ಸಿನಿಮಾವಾಗಿದೆ. ದ ಸ್ಕೈ ಇಸ್ ಪಿಂಕ್ ಸಿನಿಮಾ ವಿಭಿನ್ನ ಕಥೆ ಎಂದು ಬಿಡುಗಡೆಗೊಂಡಿರುವ ಟ್ರೈಲರ್ ಮತ್ತು ಹಾಡುಗಳು ಹೇಳುತ್ತಿವೆ. ಮದುವೆಗೂ ಮುನ್ನ ಪತಿಯ ಮನೆಯ ಬರುವ ಪ್ರಿಯಾಂಕ, ಸಂಸಾರದಲ್ಲಿ ವೈಮನಸ್ಸಿನಿಂದ ಪತಿಯಿಂದ ದೂರವಾಗ್ತಾಳೆ. ಮತ್ತೆ ಮಗಳಿಗಾಗಿ ಯಾವ ಕಾರಣಕ್ಕಾಗಿ ಜೋಡಿ ಒಂದಾಗುತ್ತೆ ಸಣ್ಣ ಪ್ರಶ್ನೆಯೊಂದು ಟ್ರೈಲರ್ ಹುಟ್ಟುಹಾಕಿದೆ. ಈಗಾಗಲೇ ಬಣ್ಣದ ಲೋಕಕ್ಕೆ ವಿದಾಯ ಹೇಳಿರುವ ದಂಗಲ್ ಗರ್ಲ್ ಖ್ಯಾತಿಯ ಯುವ ನಟಿ, ಝೈರಾ ವಾಸೀಂ ನಟನೆಯ ಕೊನೆಯ ಚಿತ್ರ ಇದಾಗಿದೆ.

    ದ ಸ್ಕೈ ಇಸ್ ಪಿಂಕ್ ಹಲವು ಹೊಸತನದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಇದೇ ಅಕ್ಟೋಬರ್ 11ರಂದು ಚಿತ್ರಮಂದಿರಗಳಿಗೆ ಬರಲಿದೆ. ಈಗ ಹಾಟ್ ಕ್ಲಿಪ್ ಮೂಲಕ ದ ಸ್ಕೈ ಇಸ್ ಪಿಂಕ್ ನೋಡಲು ಪಡ್ಡೆ ಹೈಕಳು ತುದಿಗಾಲಿನಲ್ಲಿ ನಿಂತಿದ್ದಾರೆ.

    https://www.instagram.com/p/B3TXU8bJ-lW/

  • ಪೊಲೀಸರ ಕೈಗೆ ಸಿಕ್ಕಿ ಬಿದ್ದ ದೇಸಿ ಗರ್ಲ್- 7 ವರ್ಷ ಶಿಕ್ಷೆ

    ಪೊಲೀಸರ ಕೈಗೆ ಸಿಕ್ಕಿ ಬಿದ್ದ ದೇಸಿ ಗರ್ಲ್- 7 ವರ್ಷ ಶಿಕ್ಷೆ

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅವರು ಸದಾ ಸಾಮಾಜಿಕ ಜಾಲತಾಣಗಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದರು. ಇದೀಗ ಮಹಾರಾಷ್ಟ್ರ ಪೊಲೀಸರ ಕೈಗೆ ಪ್ರಿಯಾಂಕ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದು, ಪೊಲೀಸರು ಐಪಿಸಿ ಸೆಕ್ಷನ್ 393ರ ಅಡಿಯಲ್ಲಿ ಏಳು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.

    ಹೌದು.. ನಟಿ ಪ್ರಿಯಾಂಕಾ ಅವರಿಗೆ ಪೊಲೀಸರು ಏಳು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವುದಾಗಿ ಹೇಳಿದ್ದಾರೆ. ಆದರೆ ನಿಜ ಜೀವನದಲ್ಲಿ ಅಲ್ಲ. ಬದಲಿಗೆ ಪೊಲೀಸರು ಅವರ ಸಿನಿಮಾ ನೋಡಿ ಹೇಳಿದ್ದಾರೆ. ಅಸಲಿಗೆ ಏನಾಯಿತೆಂದರೆ ಪ್ರಿಯಾಂಕ ಅಭಿನಯದ ‘ಸ್ಕೈ ಈಸ್ ಪಿಂಕ್’ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ.

    ಸಾಕಷ್ಟು ಕುತೂಹಲ ಮೂಡಿಸಿರುವ ಈ ಟ್ರೈಲರ್ ನಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಮಗಳ ಚಿಕಿತ್ಸೆಗಾಗಿ, ಸದ್ಯದಲ್ಲೇ ನಾವು ಬ್ಯಾಂಕ್ ದರೋಡೆ ಮಾಡೋಣ ಎಂದು ಪ್ರಿಯಾಂಕ ಫರಾನ್ ಅಖ್ತರ್‍ಗೆ ಹೇಳುವ ದೃಶ್ಯವಿದೆ. ಈ ಒಂದು ದೃಶ್ಯದ ಸ್ಕ್ರೀನ್ ಶಾಟ್ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆ ಫೋಟೋ ವೈರಲ್ ಆಗುತ್ತಿದೆ.

    ಈ ಫೋಟೋವನ್ನು ನೋಡಿದ ಮಹಾರಾಷ್ಟ್ರ ಪೊಲೀಸರು ಈ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿ “ಈ ಘಟನೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 393ರ ಅಡಿಯಲ್ಲಿ 7 ವರ್ಷ ಶಿಕ್ಷೆ ಹಾಗೂ ದಂಡವನ್ನು ಕಟ್ಟಬೇಕು” ಎಂದು ಟ್ವೀಟ್ ಮಾಡಿ ಪ್ರಿಯಾಂಕ ಅವರ ಕಾಲೆಳೆದಿದ್ದಾರೆ. ಇತ್ತ ಪ್ರಿಯಾಂಕಾ ಅವರು ಕೂಡ ಪೊಲೀಸರ ಟ್ವೀಟ್ ನೋಡಿ, “ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದೇವೆ. ಆದ್ದರಿಂದ ನಾನು ಪ್ಲಾನ್ ಬಿ ಆಕ್ಟಿವೇಟ್ ಮಾಡುವ ಸಮಯ” ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ಸಿನಿಮಾದಲ್ಲಿ ಪ್ರಿಯಾಂಕ ಜೊತೆಗೆ ಫರಾನ್ ಅಖ್ತರ್ ಹಾಗೂ ಝೈರಾ ವಾಸಿಂ ನಟಿಸಿದ್ದಾರೆ. ಪೊಲೀಸರು ಮತ್ತು ಪ್ರಿಯಾಂಕಾ ಅವರ ಟ್ವೀಟ್‍ಗಳನ್ನು ನೋಡಿ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.