Tag: priyanka chopra

  • ಮುಂಬೈನಲ್ಲಿ ನಿಲ್ಲದ ವರುಣಾರ್ಭಟ – ಬಾಲಿವುಡ್ ನಟ, ನಟಿಯರ ಮನೆಗಳು ಜಲಾವೃತ

    ಮುಂಬೈನಲ್ಲಿ ನಿಲ್ಲದ ವರುಣಾರ್ಭಟ – ಬಾಲಿವುಡ್ ನಟ, ನಟಿಯರ ಮನೆಗಳು ಜಲಾವೃತ

    – ನಟ ಅಮಿತಾಬ್ ಬಚ್ಚನ್, ಕಾಜೋಲ್, ರಾಣಿ ಮುಖರ್ಜಿ ಮನೆಗೆ ಜಲದಿಗ್ಬಂಧನ

    ಮುಂಬೈ: ಮಹಾನಗರಿ ಮುಂಬೈನಲ್ಲಿ ಕಳೆದು ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಖ್ಯಾತ ಬಾಲಿವುಡ್ ನಟ, ನಟಿಯರ ಮನೆ ಜಲಾವೃತಗೊಂಡಿವೆ. ಬುಧವಾರ ಕೂಡ ಮುಂಬೈನಲ್ಲಿ ಭಾರೀ ಮಳೆಯಾಗಿದ್ದು, ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಅಪಾರ ಪ್ರಮಾಣದ ಹಾನಿಯುಂಟಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.

    ಧಾರಾಕಾರ ಮಳೆಯಿಂದಾಗಿ ಬಾಲಿವುಡ್ ಸೆಲೆಬ್ರೆಟಿಗಳ ಮನೆಗೂ ನೀರು ನುಗ್ಗಿದೆ. ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಸನ್ನಿ ಡಿಯೋಲ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವರ ಮನೆಗಳಿಗೆ ನೀರು ನುಗ್ಗಿ ಅವಾಂತರ ಉಂಟಾಗಿದೆ.ಇದನ್ನೂ ಓದಿ: Video: ‘ಪಬ್ಲಿಕ್‌ ಟಿವಿ’ ಜೊತೆ ಅನನ್ಯಾ ಭಟ್‌ ಬಗ್ಗೆ ಸುಜಾತಾ ಭಟ್‌ ರಿಯಾಕ್ಷನ್‌

    ಈ ಕುರಿತು ವ್ಲಾಗರ್ ಓರ್ವ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜುಹುವಿನಲ್ಲಿರುವ ಅಮಿತಾಬ್ ಬಚ್ಚನ್ ಅವರ ಎರಡನೇ ಮನೆಯಾದ `ಪ್ರತೀಕ್ಷಾ’ದ ಹೊರಗೆ ಕೆಸರು ತುಂಬಿಕೊಂಡಿದೆ. ಸ್ವತಃ ಅಮಿತಾಬ್ ಬಚ್ಚನ್ ಅವರೇ ವೈಪರ್‌ನಿಂದ ನೆಲ ಒರೆಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಎಷ್ಟೇ ಶ್ರೀಮಂತರಾಗಿದ್ದರೂ, ಮುಂಬೈ ಮಳೆಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

    ಇನ್ನೂ ರಾಜ್ಯದಲ್ಲಿಯೂ ಮಳೆ ಅಬ್ಬರ ಜೋರಾಗಿದ್ದು, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದ ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿ ಬಂದ್ ಆಗಿದೆ. ಗೋಕಾಕ್ ನಗರದ ನದಿ ತೀರದ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಲೋಳಸೂರ ಸೇತುವೆ ಜಲಾವೃತಗೊಂಡಿದ್ದು, ಮಹಾರಾಷ್ಟ್ರದ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಳಿಸಲಾಗಿದೆ.

    ಹಾವೇರಿ ಜಿಲ್ಲೆ ಮತ್ತು ಮಲೆನಾಡು ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆ ವರದಾ ನದಿ ಮೈದುಂಬಿ ಹರಿಯುತ್ತಿದೆ. ನದಿಯ ದಂಡೆಯಲ್ಲಿರೋ ಈಶ್ವರನ ದೇವಸ್ಥಾನ ಜಲದಿಗ್ಬಂಧನವಾಗಿದೆ. ಗಡಿಜಿಲ್ಲೆ ಬೀದರ್‌ನಲ್ಲಿ ನಿರಂತರವಾಗಿ ಮಹಾಮಳೆ ಹಾಗೂ ಕಾರಂಜ ಜಲಾಶಯದಿಂದ ಅಪಾರ ಪ್ರಮಾಣದ ನೀರು ಮಾಂಜ್ರಾನದಿಗೆ ಬಿಡುಗಡೆ ಮಾಡಲಾಗಿದೆ. ಐತಿಹಾಸಿಕ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ಮಳೆ ಆಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ, ಯೂರಿಯಾ ಗೊಬ್ಬರಕ್ಕಾಗಿ ಕೊಪ್ಪಳದಲ್ಲಿ ರೈತರನ್ನು ನಿಯಂತ್ರಿಸಲು ಪೊಲೀಸರು ಸುಸ್ತಾಗಿದ್ದಾರೆ.ಇದನ್ನೂ ಓದಿ: ಧರ್ಮಸ್ಥಳ ಕೇಸಲ್ಲಿ ಯೂಟ್ಯೂಬರ್‌ಗಳಿಗೆ ಫಾರಿನ್ ಫಂಡ್ – ಪರಿಶೀಲನೆಗೆ ಮುಂದಾದ ಇ.ಡಿ

  • ಬೀಚ್‌ನಲ್ಲಿ ಡೀಪ್‌ ಕಿಸ್‌ – ಪತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ

    ಬೀಚ್‌ನಲ್ಲಿ ಡೀಪ್‌ ಕಿಸ್‌ – ಪತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ

    ಬಾಲಿವುಡ್ ನ ಹೆಸರಾಂತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇಂದು ತಮ್ಮ 43ನೇ ಹುಟ್ಟುಹಬ್ಬವನ್ನ ವಿದೇಶದಲ್ಲಿ ಆಚರಿಸಿಕೊಂಡಿದ್ದಾರೆ. ಹುಟ್ಟು ಹಬ್ಬವನ್ನು (Priyanka Chopra Birthday) ಆಚರಿಸಿಕೊಳ್ಳುವುದಕ್ಕಾಗಿಯೇ ಅವರು ಪತಿ ಮತ್ತು ಮಗಳ ಜೊತೆ ವಿದೇಶ ಪ್ರಯಾಣ ಬೆಳೆಸಿದ್ದರು. ಸಮುದ್ರ ತೀರದಲ್ಲಿ ಬಿಂದಾಸ್ ಆಗಿ ಕಳೆದಿದ್ದಾರೆ.

    ಪತಿ ಜೊತೆ ಬಿಂದಾಸ್ ಆಗಿ ಕಳೆದಿರುವ ಕ್ಷಣಗಳನ್ನು ಅವರು ವಿಡಿಯೋ ರೂಪದಲ್ಲಿ ಪ್ರಕಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಓಡಿ ಬಂದು ಪತಿಯನ್ನು ಅಪ್ಪಿಕೊಳ್ಳುವುದು, ತುಟಿ ತುಟಿ ಸೇರಿಸಿ ಚುಂಬಿಸುವುದು, ಮಗಳ ಜೊತೆ ಸಮಯ ಕಳೆಯುವುದು ಮತ್ತು ಸಮುದ್ರದಲ್ಲಿ ಡ್ರೈವ್ ಮಾಡಿರುವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪಾರ್ವತಮ್ಮ ರಾಜ್‌ಕುಮಾರ್ ಕನಸಿನ ಕೂಸಿಗೆ 50 ವರ್ಷ

    ಪ್ರತಿ ವರ್ಷವೂ ಅವರು ತಮ್ಮ ಹುಟ್ಟು ಹಬ್ಬದ ವೇಳೆ ಬೇರೆ ಬೇರೆ ದೇಶಗಳನ್ನು ಸುತ್ತುತ್ತಾ ಇರುತ್ತಾರೆ. ಈ ಬಾರಿಯೂ ಅದನ್ನೇ ಮುಂದುವರೆಸಿದ್ದಾರೆ. ಆ ಕ್ಷಣಗಳನ್ನು ಒಟ್ಟು ಮಾಡಿ, ಫ್ಯಾನ್ಸ್ ಮುಂದೆ ಇಟ್ಟಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಸಂಜಯ್‌ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಸಫಾರಿಗೆ ಪ್ಲ್ಯಾನ್‌ – ಪ್ರವಾಸಿಗರಿಗೆ ಸಿಗಲಿದೆ ಥ್ರಿಲ್ಲಿಂಗ್‌ ಅನುಭವ

  • ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ಬಾಲಿವುಡ್ ಸ್ಟಾರ್ಸ್‌

    ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ಬಾಲಿವುಡ್ ಸ್ಟಾರ್ಸ್‌

    ಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದಿರುವ ವಿಶ್ವಾಸಘಾತುಕ ಕೃತ್ಯ ಮತ್ತು ಅಮಾನವೀಯ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳು ಸಾಲದು ಎಂದು ಶಾರುಖ್ ಖಾನ್ ಖಂಡಿಸಿದ್ದಾರೆ. ಉಗ್ರರ ಅಟ್ಟಹಾಸದ ಕುರಿತು ಶಾರುಖ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಹಲ್ಗಾಮ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳಿಲ್ಲ. ದುಃಖದಲ್ಲಿರುವ ಕುಟುಂಬಗಳಿಗೆ ದೇವರಲ್ಲಿ ಪ್ರಾರ್ಥಿಸೋಣ. ಈ ಹೇಯ ಕೃತ್ಯದ ವಿರುದ್ಧ ನಾವು ಒಗ್ಗಟ್ಟಾಗಿ, ಬಲವಾಗಿ ನಿಂತು ಈ ಕೃತ್ಯ ಮಾಡಿದವರಿಗೆ ತಕ್ಕ ಶಾಸ್ತಿಯಾಗಲಿ ಎಂದು ಹಾರೈಸೋಣ ಎಂದು ಶಾರುಖ್ ಖಾನ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

    ಭೂಮಿಯ ಮೇಲಿನ ಸ್ವರ್ಗವಾದ ಕಾಶ್ಮೀರ ನರಕವಾಗಿ ಬದಲಾಗುತ್ತಿದೆ. ಅಮಾಯಕ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ. ನನ್ನ ಹೃದಯ ಅವರ ಕುಟುಂಬಗಳಿಗಾಗಿ ಮಿಡಿಯುತ್ತದೆ. ಒಬ್ಬ ಅಮಾಯಕ ವ್ಯಕ್ತಿಯನ್ನು ಕೊಲ್ಲುವುದು ಇಡೀ ರಾಷ್ಟ್ರವನ್ನೇ ಕೊಂದಂತೆ ಎಂದು ಸಲ್ಮಾನ್‌ ಖಾನ್‌ (Salman Khan) ಬರೆದಿದ್ದಾರೆ.

    ಕಂಗನಾ ರಣಾವತ್ (Kangana Ranaut) ಹಂಚಿಕೊಂಡಿರುವ ಸ್ಟೋರಿಯಲ್ಲಿ, ಆ ದುರುಳರು ಅಮಾಯಕರ ಮೇಲೆ ದಾಳಿ ಮಾಡಿದ್ದಾರೆ. ಅಮಾಯಕರ ಮೇಲೆ ದಾಳಿ ಮಾಡಿ ನಪುಂಸಕತನ ಮೆರೆದಿದ್ದಾರೆ. ಇತಿಹಾಸದಲ್ಲಿ ಪ್ರತಿ ಯುದ್ಧವೂ ಸಹ ಯುದ್ಧಭೂಮಿಯಲ್ಲೇ ನಡೆದಿದೆ. ಆದರೆ ಈ ನಪುಂಸಕರು ಅಮಾಯಕರ ಮೇಲೆ ನಿರಸ್ತ್ರರಾಗಿರುವವರ ಮೇಲೆ ದಾಳಿ ಮಾಡಿದ್ದಾರೆ. ಯುದ್ಧಭೂಮಿಯ ಹೊರಗೆ ಕಾದಾಟ ಮಾಡುತ್ತಿರುವ ಈ ನಪುಂಸಕರ ಮೇಲೆ ಯುದ್ಧವಾದರೂ ಮಾಡುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಭಯೋತ್ಪಾದಕರಿಗೆ ಧರ್ಮ ಇದೆ, ಸಂತ್ರಸ್ತರಿಗೂ ಧರ್ಮ ಇದೆ ಎಂದಿದ್ದಾರೆ. ಭಯೋತ್ಪಾದಕರ ಧರ್ಮದ ಬಗ್ಗೆ ಬಹಿರಂಗವಾಗಿ ಹೇಳದೆ, ಮುಸ್ಲಿಂ ಭಯೋತ್ಪಾದಕರಿಂದ ಹಿಂದುಗಳು ದಶಕಗಳಿಂದಲೂ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

     

    View this post on Instagram

     

    A post shared by Priyanka (@priyankachopra)

    ಪ್ರಿಯಾಂಕಾ ಚೋಪ್ರಾ (Priyanka Chopra) ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಪಹಲ್ಗಾಮ್ ದಾಳಿಯ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಇದೊಂದು ಅತ್ಯಂತ ಹೇಯ ಕೃತ್ಯ ಎಂದು ಬರೆದುಕೊಂಡಿದ್ದಾರೆ. ಭಯೋತ್ಪಾದನೆಯ ಈ ಅಮಾನವೀಯ ಕೃತ್ಯವನ್ನು ಅವರು ಖಂಡಿಸಿದ್ದಾರೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರ ಕುಟುಂಬದೊಂದಿಗೆ ಇವೆ. ಗಾಯಗೊಂಡಿರುವ ದಂಪತಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

     

    View this post on Instagram

     

    A post shared by Anupam Kher (@anupampkher)

    ಈ ಬಗ್ಗೆ ಅನುಪಮ್ ಖೇರ್‌ (Anupam Kher) ಮಾತನಾಡಿ, ಇಂದು ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ. 27 ಹಿಂದೂಗಳನ್ನು ಹುಡುಕಿ ಹುಡುಕಿ ಕೊಲ್ಲಲಾಗಿದೆ. ದುಃಖದ ಜೊತೆ ಕ್ರೋಧ, ಸಿಟ್ಟು ಬರುತ್ತದೆ. ನಾನು ಇದನ್ನು ಜೀವನದಲ್ಲಿ ಬಹಳಷ್ಟು ನೋಡಿದ್ದೇನೆ. ಕಾಶ್ಮೀರದಲ್ಲಿ ಹಿಂದೂಗಳ ಜನರೊಂದಿಗೆ ಜೊತೆ ಹೀಗೆ ಆಗ್ತಾನೇ ಇದೆ. ‘ಕಾಶ್ಮೀರ್ ಫೈಲ್ಸ್’ ಅವರ ಕಥೆಯಾಗಿದ್ದು, ಇದನ್ನು ಸಿನಿಮಾ ಮಾಡಿದಾಗ ಪ್ರೊಪಗಾಂಡ ಎಂದು ಕರೆದ್ರಿ. ದೇಶದ ವಿವಿಧ ಭಾಗಗಳಿಂದ ಜನರು ತಮ್ಮ ರಜಾದಿನಗಳನ್ನು ಕಳೆಯಲು ಕುಟುಂಬದ ಜೊತೆ ಕಾಶ್ಮೀರಕ್ಕೆ ಬಂದರು. ಈ ವೇಳೆ, ಅವರ ಧರ್ಮವನ್ನು ತಿಳಿದು ಕೊಲ್ಲಲಾಗಿದೆ ಎಂದು ಕೃತ್ಯವನ್ನು ಖಂಡಿಸಿದ್ದಾರೆ.

    ಇದರ ಬಗ್ಗೆ ಮಾತನಾಡೋಕೆ ಶಬ್ದವೇ ಸಿಗೋದಿಲ್ಲ. ಪತಿಯ ಮೃತ ದೇಹದ ಜೊತೆಗಿದ್ದ ಮಹಿಳೆಯನ್ನು ನಾನು ಮರೆಯಲು ಸಾಧ್ಯವಿಲ್ಲ. ನಾನು ಪಲ್ಲವಿ ಜಿ ಅವರ ಸಂದರ್ಶನ ನೋಡಿದೆ. ಪತಿಯನ್ನ ಕಣ್ಣೆದುರೇ ಸಾಯಿಸಿದಾಗ ನನ್ನನ್ನು ನನ್ನ ಮಗನನ್ನು ಸಾಯಿಸಿ ಅಂದಾಗ, ನಿಮ್ಮನ್ನು ಸಾಯಿಸಲ್ಲ ಮೋದಿಗೆ ಹೋಗಿ ಹೇಳಿ ಅಂದ್ರಲ್ಲ. ಬಹುಶಃ ಅವನು ಒಂದು ಸಂದೇಶವನ್ನು ನೀಡಲು ಬಯಸಿದ್ದಿರಬಹುದು ಎಂದಿದ್ದಾರೆ. ಮೋದಿಯವರು ಹಾಗೂ ಅಮಿತ್ ಶಾ ಅವರ ಬಳಿ ನಾನು ಕೇಳಿಕೊಳ್ಳುವುದೇನಂದರೆ ಉಗ್ರರಿಗೆ ನಾವು ಎಂಥಹ ಪಾಠ ಕಲಿಸಬೇಕು ಅಂದರೆ ಇನ್ನೂ ಏಳು ಜನ್ಮ ಎತ್ತಿ ಬಂದ್ರೂ ಇಂಥಹ ದುಷ್ಟ ಕೆಲಸ ಮಾಡುವ ಯೋಚನೆನೇ ಅವರಿಗೆ ಬರಬಾರದು ಎಂದಿದ್ದಾರೆ.

  • ಮತ್ತೆ ಹೃತಿಕ್ ರೋಷನ್‌ಗೆ ಜೊತೆಯಾದ ಪ್ರಿಯಾಂಕಾ ಚೋಪ್ರಾ

    ಮತ್ತೆ ಹೃತಿಕ್ ರೋಷನ್‌ಗೆ ಜೊತೆಯಾದ ಪ್ರಿಯಾಂಕಾ ಚೋಪ್ರಾ

    ಬಾಲಿವುಡ್ ನಟ ಹೃತಿಕ್ ರೋಷನ್ ‘ಕ್ರಿಶ್ 4’ (Krrish 4) ಸಿನಿಮಾ ಮೂಲಕ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ. ಈ ಚಿತ್ರಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಇದರ ನಡುವೆ ಚಿತ್ರದ ಬಗ್ಗೆ ಕ್ರೇಜಿ ಅಪ್‌ಡೇಟ್‌ವೊಂದು ಸಿಕ್ಕಿದೆ. ಹೃತಿಕ್ ರೋಷನ್‌ಗೆ ನಾಯಕಿಯಾಗಿ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ (Priyanka Chopra) ಕಾಣಿಸಿಕೊಳ್ಳಲಿದ್ದಾರೆ.

    ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಿದ್ದ ನಟಿ ಬಾಲಿವುಡ್ ಸಿನಿಮಾದಲ್ಲಿ ಯಾವಾಗ ನಟಿಸ್ತಾರೆ ಎಂಬುದನ್ನು ಎದುರು ನೋಡುತ್ತಿದ್ದ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ‘ಕ್ರಿಶ್ 4’ನಲ್ಲಿ ಮುಖ್ಯ ಪಾತ್ರದಲ್ಲಿ ಹೃತಿಕ್ (Hrithik Roshan) ಜೊತೆ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ. ಸೂಪರ್ ಹೀರೋ ಕಾನ್ಸೆಪ್ಟ್‌ನ ಈ ಸಿನಿಮಾ ಈಗಾಗಲೇ 3 ಸಿರೀಸ್‌ನಲ್ಲಿ ಸಕ್ಸಸ್ ಕಂಡಿದೆ. ‘ಕ್ರಿಶ್ 4’ ಸಿನಿಮಾ ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿ ಫ್ಯಾನ್ಸ್‌ಗೆ ಜಾಸ್ತಿಯಾಗಿದೆ. ಇದನ್ನೂ ಓದಿ: ‘ಅಯ್ಯನ ಮನೆ’ ಕಥೆ ಹೇಳಲು ಬಂದ ‘ದಿಯಾ’ ನಟಿ- ರಮೇಶ್ ಇಂದಿರಾ ಆ್ಯಕ್ಷನ್ ಕಟ್

    ಈ ಹಿಂದೆ ‘ಕ್ರಿಶ್’ ಹಾಗೂ ‘ಕ್ರಿಶ್ 3’ ಸರಣಿಯಲ್ಲಿ ಹೃತಿಕ್‌ಗೆ ಜೊತೆಯಾಗಿ ಪ್ರಿಯಾಂಕಾ ನಟಿಸಿದ್ದರು. ಈಗ ಹಲವು ವರ್ಷಗಳ ಬಳಿಕ ಮತ್ತೆ ‘ಕ್ರಿಶ್ 4’ಗೆ ನಟಿ ಸಾಥ್ ನೀಡುತ್ತಿದ್ದಾರೆ. ಇದನ್ನೂ ಓದಿ:ಚಂದನ್ ಶೆಟ್ಟಿ ಜೊತೆಗಿನ ‘ಮುದ್ದು ರಾಕ್ಷಸಿ’ ಶೂಟಿಂಗ್ ಮುಗಿಸಿದ ನಿವೇದಿತಾ ಗೌಡ

    ಸದ್ಯ ರಾಜಮೌಳಿ ನಿರ್ದೇಶನದ ಹಾಗೂ ಮಹೇಶ್ ಬಾಬು ನಟನೆಯ ಹೊಸ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಅವರು 30 ಕೋಟಿ ರೂ. ಸಂಭಾವನೆ ಚಾರ್ಜ್ ಮಾಡಿದ್ದಾರೆ.

  • ಮಹೇಶ್ ಬಾಬು ಜೊತೆ ನಟಿಸಲು ಪ್ರಿಯಾಂಕಾ ಚೋಪ್ರಾಗೆ 30 ಕೋಟಿ ಸಂಭಾವನೆ

    ಮಹೇಶ್ ಬಾಬು ಜೊತೆ ನಟಿಸಲು ಪ್ರಿಯಾಂಕಾ ಚೋಪ್ರಾಗೆ 30 ಕೋಟಿ ಸಂಭಾವನೆ

    ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಸ್ಟಾರ್ ನಟಿಯರಾದ ಆಲಿಯಾ ಭಟ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ನಯನತಾರಾರನ್ನೇ ಹಿಂದಿಕ್ಕಿದ್ದಾರೆ. ಮಹೇಶ್ ಬಾಬು ನಟನೆಯ ಹೊಸ ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ ಚೋಪ್ರಾ 30 ಕೋಟಿ ರೂ. ಸಂಭಾವನೆಗೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಸ್ಟಾರ್ ನಟಿಯರಿಗೆ ಪ್ರಿಯಾಂಕಾ ಸೆಡ್ಡು ಹೊಡೆದಿದ್ದಾರೆ.

    ಕಿಯಾರಾ, ಆಲಿಯಾ, ದೀಪಿಕಾ ಪಡುಕೋಣೆ ಸೇರಿದಂತೆ ಕೆಲ ಟಾಪ್ ನಟಿಯರು ಒಂದು ಸಿನಿಮಾಗೆ 5ರಿಂದ 15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಹೀಗಿರುವಾಗ 30 ಕೋಟಿ ರೂ. ಸಂಭಾವನೆಯನ್ನು ಪ್ರಿಯಾಂಕಾ ಪಡೆಯುವ ಮೂಲಕ ಎಲ್ಲರ ಹುಬ್ಬೆರಿಸಿದ್ದಾರೆ. ಒಂದು ಸಿನಿಮಾಗೆ 30 ಕೋಟಿ ರೂ. ಸಂಭಾವನೆ ಪಡೆದ ಭಾರತದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

    ಕಳೆದ ಕೆಲವು ವರ್ಷಗಳಿಂದ ದೇಸಿ ಗರ್ಲ್ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇದೀಗ ಮಹೇಶ್ ಬಾಬು (Mahesh Babu) ನಟನೆಯ 29ನೇ ಚಿತ್ರಕ್ಕೆ (SSMB29) ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ, ಒಡಿಶಾ, ವಿಶಾಖಪಟ್ಟಣಂ, ಹೈದರಾಬಾದ್‌ನಲ್ಲಿ ಈಗಾಗಲೇ ಶೂಟಿಂಗ್ ನಡೆಯುತ್ತಿದ್ದು, ನಟಿ ಕೂಡ ಭಾಗಿಯಾಗಿದ್ದಾರೆ. ಈ ಸಿನಿಮಾವನ್ನು ರಾಜಮೌಳಿ (Rajamouli) ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ:‘ಡ್ರ್ಯಾಗನ್’ ಚಿತ್ರದ ಬಳಿಕ ಹೆಚ್ಚಿದ ಬೇಡಿಕೆ- ‘ಮುಗಿಲ್‌ಪೇಟೆ’ ನಟಿಗೆ ಬಂಪರ್ ಆಫರ್

    ಈ ಹಿಂದೆ ರಾಮ್ ಚರಣ್, ದಳಪತಿ ವಿಜಯ್ ಜೊತೆ ತೆಲುಗು ಸಿನಿಮಾಗಳಲ್ಲಿ ಪ್ರಿಯಾಂಕಾ ನಟಿಸಿದ್ದಾರೆ. ಈಗ ಮಹೇಶ್ ಬಾಬುಗೆ ನಾಯಕಿಯಾಗಿ ಬರೋಬ್ಬರಿ 20 ವರ್ಷಗಳ ಬಳಿಕ ಸೌತ್ ಸಿನಿಮಾರಂಗಕ್ಕೆ ನಟಿ ಕಮ್ ಬ್ಯಾಕ್ ಆಗ್ತಿದ್ದಾರೆ.

  • ಹೊಕ್ಕಳಿಗೆ 2.7 ಕೋಟಿ ಮೌಲ್ಯದ ಡೈಮಂಡ್ ರಿಂಗ್ ಧರಿಸಿದ ಪ್ರಿಯಾಂಕಾ ಚೋಪ್ರಾ- ಬೆಲೆ ಕೇಳಿ ಫ್ಯಾನ್ಸ್‌ ಶಾಕ್

    ಹೊಕ್ಕಳಿಗೆ 2.7 ಕೋಟಿ ಮೌಲ್ಯದ ಡೈಮಂಡ್ ರಿಂಗ್ ಧರಿಸಿದ ಪ್ರಿಯಾಂಕಾ ಚೋಪ್ರಾ- ಬೆಲೆ ಕೇಳಿ ಫ್ಯಾನ್ಸ್‌ ಶಾಕ್

    ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಮಹೇಶ್ ಬಾಬು ನಟನೆಯ ಸಿನಿಮಾಗಾಗಿ ಭಾರತಕ್ಕೆ ಬಂದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಹೊಕ್ಕಳಿಗೆ ಧರಿಸಿದ 2.7 ಕೋಟಿ ರೂ. ಮೌಲ್ಯದ ಡೈಮಂಡ್ ರಿಂಗ್ ವಿಚಾರವಾಗಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇದನ್ನೂ ಓದಿ:ಶಿವಣ್ಣ ನಿವಾಸಕ್ಕೆ ಯಶ್‌ ದಂಪತಿ ಭೇಟಿ

    ಮುಂಬೈ ಏರ್‌ಪೋರ್ಟ್‌ನಿಂದ ಹೊರಬರುವಾಗ ಪ್ರಿಯಾಂಕಾ ಚೋಪ್ರಾ ಬ್ಲ್ಯಾಕ್ ಕೋ-ಆರ್ಡ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ಟೈಲೀಶ್ ಲುಕ್ ಫ್ಯಾನ್ಸ್ ಗಮನ ಸೆಳೆದಿದೆ. ಅದರಲ್ಲೂ ಪ್ರಿಯಾಂಕಾ ಹೊಕ್ಕಳಿಗೆ ಧರಿಸಿದ ಬೆಲ್ಲಿ ಬಟನ್ ಡೈಮಂಡ್ ಪಿನ್ ಇದರ ಬೆಲೆ ಕೇಳಿ ಗಾಬರಿಯಾಗಿದ್ದಾರೆ. ಇದರ ಬೆಲೆ ಬರೋಬ್ಬರಿ 2.7 ಕೋಟಿ ರೂ. ಮೌಲ್ಯದಾಗಿದೆ ಎಂದು ಕೇಳಿಯೇ ಅಭಿಮಾನಿಗಳು ದಂಗಾಗಿದ್ದಾರೆ.

     

    View this post on Instagram

     

    A post shared by Manav Manglani (@manav.manglani)

    ಇನ್ನೂ ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾದಲ್ಲಿ ಲೀಡ್ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಎಂದೂ ನಟಿಸಿರದ ವಿಭಿನ್ನ ಪಾತ್ರದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ತಿದ್ದಾರೆ.

    ಈಗಾಗಲೇ ಹೈದರಾಬಾದ್, ಒಡಿಶಾ, ವಿಶಾಖಪಟ್ಟಣಂ ಸೇರಿದಂತೆ ಹಲವೆಡೆ ಚಿತ್ರೀಕರಣದಲ್ಲಿ ನಟಿ ಭಾಗಿಯಾಗಿದ್ದಾರೆ. ಚಿತ್ರೀಕರಣ ಭರದಿಂದ ನಡೆಯುತ್ತಿದೆ.‌ ಸಿನಿಮಾದ ಹೆಚ್ಚಿನ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.

  • Oscars Award 2025: 97ನೇ ಸಾಲಿನ ಆಸ್ಕರ್‌ ಪ್ರಶಸ್ತಿ ಗೆದ್ದವರ ಲಿಸ್ಟ್‌ ಇಲ್ಲಿದೆ

    Oscars Award 2025: 97ನೇ ಸಾಲಿನ ಆಸ್ಕರ್‌ ಪ್ರಶಸ್ತಿ ಗೆದ್ದವರ ಲಿಸ್ಟ್‌ ಇಲ್ಲಿದೆ

    ಪ್ರತಿಷ್ಠಿತ 2025ರ ಆಸ್ಕರ್ ಪ್ರಶಸ್ತಿ (Oscars 2025) ಪ್ರಕಟವಾಗಿದ್ದು, ಅಮೆರಿಕದ ಲಾಸ್ ಏಜಂಲಿಸ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ 97ನೇ ವರ್ಷದ ಅವಾರ್ಡ್ ಫಂಕ್ಷನ್ ಜರುಗಿದೆ. ‘ಅನೋರಾ’ (Anora) ಹಾಗೂ ‘ದಿ ಬ್ರೂಟಲಿಸ್ಟ್’ (The Brutalist) ಚಿತ್ರಗಳು ಹೆಚ್ಚಿನ ಅವಾರ್ಡ್ ಪಡೆದವು. ಈ ಪೈಕಿ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ.

    ಅಮೆರಿಕದಲ್ಲಿ ಉಂಟಾದ ಕಾಡ್ಗಿಚ್ಚಿನ ಕಾರಣಕ್ಕೆ ಈ ಬಾರಿ ಆಸ್ಕರ್ ಅವಾರ್ಡ್ ನಡೆಯುವುದಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೆ ಅದ್ಧೂರಿಯಾಗಿ ಕಾರ್ಯಕ್ರಮ ಜರುಗಿದೆ. ಕಾಡ್ಗಿಚ್ಚಿನ ವಿರುದ್ಧ ಹೋರಾಡಿದ ಅಗ್ನಿಶಾಮಕ ದಳದವರಿಗೆ ವೇದಿಕೆ ಮೇಲೆ ಗೌರವ ಸೂಚಿಸಲಾಯ್ತು. ಹಲವು ಸಿನಿಮಾಗಳಿಗೆ ಪ್ರಶಸ್ತಿ ಅನೌನ್ಸ್ ಮಾಡಲಾಗಿದೆ.

    97ನೇ ಸಾಲಿನ 2025ರ ಆಸ್ಕರ್ ಅವಾರ್ಡ್ ಗೆದ್ದವರ ಸಂಪೂರ್ಣ ವಿವರ ಇಲ್ಲಿದೆ.

    ಅತ್ಯುತ್ತಮ ನಟ : ಆಡ್ರಿಯನ್ ಬ್ರಾಡಿ (ದಿ ಬ್ರೂಟಲಿಸ್ಟ್)

    ಅತ್ಯುತ್ತಮ ನಟಿ : ಮೈಕಿ ಮ್ಯಾಡಿಸನ್ (ಅನೋರಾ)

    ಅತ್ಯುತ್ತಮ ಚಿತ್ರ : ಅನೋರಾ

    ಅತ್ಯುತ್ತಮ ನಿರ್ದೇಶಕ : ಸೀನ್ ಬೇಕರ್ (ಅನೋರಾ)

    ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ – ಫ್ಲೋ

    ಅತ್ಯುತ್ತಮ ವಸ್ತ್ರವಿನ್ಯಾಸ – ಪಾಲ್ ತಾಜ್‌ವೆಲ್ (ವಿಕೆಡ್)

    ಅತ್ಯುತ್ತಮ ಮೂಲ ಚಿತ್ರಕಥೆ – ಸೀನ್ ಬೇಕರ್ (ಅನೋರಾ)

    ಅತ್ಯುತ್ತಮ ಮೇಕಪ್, ಕೇಶವಿನ್ಯಾಸ – ದಿ ಸಬ್‌ಸ್ಟೆನ್ಸ್

    ಅತ್ಯುತ್ತಮ ಮೂಲ ಗೀತೆ – ಎಲ್ ಮಾಲ್

    ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ – ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟಾç

    ಅತ್ಯುತ್ತಮ ಸಾಕ್ಷ್ಯಚಿತ್ರ – ನೋ ಅದರ್ ಲ್ಯಾಂಡ್

    ಅತ್ಯುತ್ತಮ ಎಡಿಟಿಂಗ್ – ಸೀನ್ ಬೇಕರ್ (ಅನೋರಾ)

    ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ – ಇನ್ ದಿ ಶ್ಯಾಡೋ ಆಫ್ ದಿ ಸೈಪ್ರೆಸ್

    ಅತ್ಯುತ್ತಮ ಧ್ವನಿ ವಿಭಾಗ – ಡ್ಯೂನ್ – ಭಾಗ 2 ಚಲನಚಿತ್ರ

    ಅತ್ಯುತ್ತಮ ದೃಶ್ಯ ಪರಿಣಾಮಗಳು – ಡ್ಯೂನ್ ಭಾಗ 2

    ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ – ಐ ಆಮ್ ನಾಟ್ ಎ ರೋಬೋಟ್

    ಅತ್ಯುತ್ತಮ ಛಾಯಾಗ್ರಹಣ – ದಿ ಬ್ರೂಟಲಿಸ್ಟ್

    ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ – ಐ ಆಮ್ ಸ್ಟಿಲ್ ಹಿಯರ್ (ಬ್ರೆಜಿಲ್)

  • ಭಾರತದ ಕನಸು ಭಗ್ನ: ಪ್ರಿಯಾಂಕಾ ಚೋಪ್ರಾ ‘ಅನುಜಾ’ ಚಿತ್ರಕ್ಕೆ ಸಿಗಲಿಲ್ಲ ಆಸ್ಕರ್ ಪ್ರಶಸ್ತಿ

    ಭಾರತದ ಕನಸು ಭಗ್ನ: ಪ್ರಿಯಾಂಕಾ ಚೋಪ್ರಾ ‘ಅನುಜಾ’ ಚಿತ್ರಕ್ಕೆ ಸಿಗಲಿಲ್ಲ ಆಸ್ಕರ್ ಪ್ರಶಸ್ತಿ

    ಲಾಸ್ ಏಂಜಲೀಸ್‌ನ ಡಾಲ್ಬಿ ಚಿತ್ರಮಂದಿರದಲ್ಲಿ ಚಿತ್ರಮಂದಿರದಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ (Oscars Award 2025) ಸಮಾರಂಭದಲ್ಲಿ ಹಲವಾರು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇನ್ನೂ ಭಾರತದ ಯಾವುದೇ ಸಿನಿಮಾಗಳು ಈ ಬಾರಿ ಆಸ್ಕರ್ ಅವಾರ್ಡ್ ಗೆದ್ದಿಲ್ಲ. ಪ್ರಿಯಾಂಕಾ ಚೋಪ್ರಾ (Priyanka Chopra) ನಿರ್ಮಾಣದ ‘ಅನುಜಾ’ (Anuja) ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿಲ್ಲ ಅನ್ನೋದು ಬೇಸರದ ಸಂಗತಿ.

    ಪ್ರಿಯಾಂಕಾ ಚೋಪ್ರಾ ನಿರ್ಮಾಣದ ‘ಅನುಜಾ’ ಶಾರ್ಟ್ ಫಿಲ್ಮ್ ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ‘ಅನುಜಾ’ ವಿಶೇಷವಾದ ಚಿತ್ರವೇ ಆಗಿದೆ. ಈ ಚಿತ್ರದಲ್ಲಿ ಅನುಜಾ ಅನ್ನೋ 9 ವರ್ಷದ ಹುಡುಗಿಯ ಕಥೆ ಇದೆ. ಈ ಕಥೆಯಲ್ಲಿ ದೆಹಲಿ ಗಾರ್ಮೆಂಟ್ ಫ್ಯಾಕ್ಟರಿಯ ಚಿತ್ರವೂ ಇದೆ. ಅನುಜಾಳ ಬದುಕಿನ ಸತ್ಯವೂ ಇದೆ. ಕುಟುಂಬದ ಜವಾಬ್ದಾರಿ ಹೊತ್ತ ಒಬ್ಬ ಹೆಣ್ಣುಮಗಳ ಜೀವನ ಎಷ್ಟು ಕಠಿಣ, ಸವಾಲಿನ ಹಾದಿ ಆಗಿರುತ್ತದೆ ಎಂಬುದನ್ನು ಅನುಜಾ ಮೂಲಕ ಪ್ರೇಕ್ಷಕರಿಗೆ ಕಟ್ಟಿಕೊಡಲಾಗಿದೆ. ಆದರೆ ‘ಅನುಜಾ’ ಆಸ್ಕರ್ ಗೆಲ್ಲೋ ಕನಸು ಭಗ್ನವಾಗಿದೆ. ಇದನ್ನೂ ಓದಿ:ಡಿಕೆಶಿ ಪರ ಬ್ಯಾಟ್ ಬೀಸಿದ ರಮ್ಯಾ

    ‘ಅನುಜಾ’ (Anuja) ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್ಂ ಆಗಿದೆ. ಇದನ್ನು ಆಡಮ್ ಜೆ. ಗ್ರೇವ್ಸ್ ಡೈರೆಕ್ಷನ್ ಮಾಡಿದ್ದಾರೆ. ಈ ಕಿರುಚಿತ್ರವನ್ನು ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ನಿರ್ಮಿಸಿದ್ದಾರೆ.

  • ದೇಸಿ ಗರ್ಲ್ ಈಗ ದುಬಾರಿ- ರಾಜಮೌಳಿ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

    ದೇಸಿ ಗರ್ಲ್ ಈಗ ದುಬಾರಿ- ರಾಜಮೌಳಿ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

    ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಹಿಂದಿ ಸಿನಿಮಾದಲ್ಲಿ ನಟಿಸದೇ ಹಲವು ವರ್ಷಗಳೇ ಕಳೆದಿದೆ. ಹಾಲಿವುಡ್ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿರುವ ನಟಿ ಈಗ ಮತ್ತೆ ಸೌತ್ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ರಾಜಮೌಳಿ (Rajamouli) ನಿರ್ದೇಶನದಲ್ಲಿ ಮಹೇಶ್ ಬಾಬು (Mahesh Babu) ಜೊತೆ ನಟಿಸಲು 30 ಕೋಟಿ ರೂ. ಸಂಭಾವನೆಯನ್ನು ನಟಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಪ್ರಿಯಾಂಕಾಗೆ 42 ವರ್ಷವಾದ್ರೂ ನಟಿಯ ಚಾರ್ಮ್ ಇನ್ನೂ ಕಮ್ಮಿಯಾಗಿಲ್ಲ. ಅವರಿಗೆ ಇನ್ನೂ ಬೇಡಿಕೆಯಿದೆ. ಹಾಲಿವುಡ್‌ನಲ್ಲಿ ಆ್ಯಕ್ಷನ್ ಕ್ವೀನ್ ಆಗಿ ಮಿಂಚುತ್ತಿದ್ದಾರೆ. ಹೀಗಿರುವಾಗ ಬಹುನಿರೀಕ್ಷಿತ ಸಿನಿಮಾ ರಾಜಮೌಳಿ ಮತ್ತು ಮಹೇಶ್ ಬಾಬು ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ 30 ಕೋಟಿ ರೂ. ಕೇಳಿದ್ದಾರೆ. ಅದಕ್ಕೆ ಚಿತ್ರತಂಡ ಕೂಡ ಸಮ್ಮತಿ ಸೂಚಿಸಿದೆ ಎನ್ನಲಾದ ವಿಚಾರವೊಂದು ಚರ್ಚೆಗೆ ಗ್ರಾಸವಾಗಿದೆ.

    ಇನ್ನೂ ಭಾರತದ ಯಾವುದೇ ನಟಿ ಇಷ್ಟು ಸಂಭಾವನೆ ಪಡೆದಿಲ್ಲ. ಹಾಗಾಗಿ ಪ್ರಿಯಾಂಕಾ ಭಾರತದ ಅತ್ಯಂತ ದುಬಾರಿ ನಟಿ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಅನಿಮಲ್’ ನಿರ್ದೇಶಕನ ಜೊತೆ ಪ್ರಭಾಸ್ ಸಿನಿಮಾ ಶುರುವಾಗೋದು ಯಾವಾಗ?- ಸಿಕ್ತು ಅಪ್‌ಡೇಟ್

    ಮಹೇಶ್ ಬಾಬು ಈ ಸಿನಿಮಾಗೆ ಕಳೆದ 2 ವರ್ಷಗಳಿಂದ ತಯಾರಿ ನಡೆಯುತ್ತಿದೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನೆರವೇರಿದೆ. ಸಿನಿಮಾದ ಶೂಟಿಂಗ್ ಕೂಡ ಶುರುವಾಗಿದೆ.

  • 2025ರ ಆಸ್ಕರ್‌ ಗೆಲ್ಲುತ್ತಾ ಭಾರತದ ‘ಅನುಜಾ’?

    2025ರ ಆಸ್ಕರ್‌ ಗೆಲ್ಲುತ್ತಾ ಭಾರತದ ‘ಅನುಜಾ’?

    ಹುನಿರೀಕ್ಷಿತ 2025ನೇ ಸಾಲಿನ 97ನೇ ಆಸ್ಕರ್ ಪ್ರಶಸ್ತಿಗೆ (Oscars Nominations 2025) ನಾಮನಿರ್ದೇಶನಗೊಂಡವರ ಸಂಪೂರ್ಣ ಪಟ್ಟಿ ಹೊರಬಿದ್ದಿದೆ. ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡವರ ವಿವರವನ್ನು ಆಸ್ಕರ್ ಅಕಾಡೆವಿಯು ಘೋಷಿಸಿದೆ. ಅದರಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ಗುನೀತ್ ಮೊಂಗಾ ನಿರ್ಮಾಣದ ‘ಅನುಜಾ’ (Anuja) ಕಿರುಚಿತ್ರವು ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್ ವಿಭಾಗಕ್ಕೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

    ಆಂಗ್ಲ ಮಾಧ್ಯಮವೊಂದಕ್ಕೆ ನಟ ನಾಗೇಶ್‌ ಬೋಸ್ಲೆ ಮಾತನಾಡಿ, ‘ಅನುಜಾ’ ಬಾಲ ಕಾರ್ಮಿಕ ಪದ್ಧತಿ ಕುರಿತ ಸಿನಿಮಾ. ಚಿತ್ರದಲ್ಲಿ ನಟಿಸಿದ ಮಗು ನಿಜ ಜೀವನದಲ್ಲೂ ಬಾಲ ಕಾರ್ಮಿಕಳಾಗಿದ್ದು, ಕೊಳೆಗೇರಿಯಿಂದ ಬಂದವಳು. ಇದು ಹೆಚ್ಚು ಪ್ರಸ್ತುತವಾದ ಸಿನಿಮಾ. ಬಾಲ ಕಾರ್ಮಿಕರು ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಸಿನಿಮಾ ಒಳನೋಟ ಹೊಂದಿದೆ ಎಂದು ತಿಳಿಸಿದ್ದಾರೆ.

    ಆ ಹುಡುಗಿ ದೆಹಲಿಯಲ್ಲಿ ವಾಸಿಸುತ್ತಾಳೆ. ಆಕೆ ತುಂಬಾ ಬುದ್ಧಿವಂತೆ. ಯಾವುದೇ ವಿಷಯಗಳನ್ನು ಬೇಗನೆ ಅರ್ಥಮಾಡಿಕೊಳ್ಳುತ್ತಿದ್ದಳು. ಹೇಳಿದ ಕೆಲಸ ಮಾಡುವಷ್ಟು ಬುದ್ದಿವಂತಿಕೆ ಇರುವ ಹುಡುಗಿ ಎಂದು ಬೋಸ್ಲೆ ಹೇಳಿದ್ದಾರೆ.

    ನಾಮನಿರ್ದೇಶನಗೊಂಡವರ ಸಂಪೂರ್ಣ ಪಟ್ಟಿ ಹೊರಬಿದ್ದಿದೆ. 

    ಅತ್ಯುತ್ತಮ ಸಿನಿಮಾ
    ಅನೋರಾ
    ದಿ ಬ್ರೂಟಲಿಸ್ಟ್
    ಎ ಕಂಪ್ಲೀಟ್
    ಅನೌನ್
    ಕಾನ್ಕ್ಲೇವ್
    ಡ್ಯೂನ್ ಪಾರ್ಟ್ 2
    ಎಮಿಲಿಯಾ ಪೆರೆಜ್
    ಎ ರಿಯಲ್ ಪೇನ್
    ಸಿಂಗ್ ಸಿಂಗ್
    ದಿ ಸಬ್‌ಸ್ಟೇನ್ಸ್
    ವೀಕ್ಡ್

    ಅತ್ಯುತ್ತಮ ನಿರ್ದೇಶಕ
    ಜಾಕ್ವೆಸ್ ಆಡಿಯಾರ್ಡ್, ಎಮಿಲಿಯಾ ಪೆರೆಜ್
    ಸೀನ್ ಬೇಕರ್, ಅನೋರಾ
    ಎಡ್ವರ್ಡ್ ಬರ್ಗರ್, ಕಾನ್ಕ್ಲೇವ್
    ಬ್ರಾಡಿ ಕಾರ್ಬೆಟ್, ದಿ ಬ್ರೂಟಲಿಸ್ಟ್

    ಅತ್ಯುತ್ತಮ ನಟಿ
    ಸಿಂಥಿಯಾ ಎರಿವೊ, ವಿಕೆಡ್
    ಮರಿಯಾನ್ನೆ ಜೀನ್- ಬ್ಯಾಪ್ಟಿಸ್ಟ್, ಹಾರ್ಡ್ ಟ್ರೂತ್
    ಮೈಕಿ ಮ್ಯಾಡಿಸನ್, ಅನೋರಾ
    ಡೆಮಿ ಮೂರ್, ದಿ ಸಬ್ಸ್ಟೆನ್ಸ್
    ಫೆರ್ನಾಂಡಾ ಟೊರೆಸ್, ಐ ಆ್ಯಮ್ ಸ್ಟಿಲ್ ಹಿಯರ್

    ಅತ್ಯುತ್ತಮ ನಟ
    ಆಡ್ರಿಯನ್ ಬ್ರಾಡಿ- ದಿ ಬ್ರೂಟಲಿಸ್ಟ್
    ತಿಮೋತಿ ಚಾಲಮೆಟ್- ಎ ಕಂಪ್ಲೀಟ್ ಅನೌನ್
    ಡೇನಿಯಲ್ ಕ್ರೇಗ್- ಕ್ವೀರ್
    ಕೋಲ್ಮನ್ ಡೊಮಿಂಗೊ- ಸಿಂಗ್ ಸಿಂಗ್
    ರಾಲ್ಫ್ ಫಿಯೆನ್ನೆಸ್- ಕಾನ್ಕ್ಲೇವ್

    ಅತ್ಯುತ್ತಮ ಪೋಷಕ ನಟಿ
    ಮೋನಿಕಾ ಬಾರ್ಬರೋ- ಎ ಕಂಪ್ಲೀಟ್ ಅನೌನ್
    ಜೇಮೀ ಲೀ ಕರ್ಟಿಸ್- ದಿ ಲಾಸ್ಟ್ ಶೋಗರ್ಲ್
    ಅರಿಯಾನಾ ಗ್ರಾಂಡೆ- ವಿಕೆಡ್
    ಇಸಾಬೆಲ್ಲಾ ರೋಸೆಲ್ಲಿನಿ- ಕಾನ್ಕ್ಲೇವ್
    ಜೊಯಿ ಸಲ್ಡಾನಾ- ಎಮಿಲಿಯಾ ಪೆರೆಜ್

    ಅತ್ಯುತ್ತಮ ಪೋಷಕ ನಟ
    ಯುರಾ ಬೊರಿಸೊವ್- ಅನೋರಾ
    ಕೀರನ್ ಕುಲ್ಕಿನ್- ಎ ರಿಯಲ್ ಪೇನ್
    ಜೆರೆಮಿ ಸ್ಟ್ರಾಂಗ್- ದಿ ಅಪ್ರೆಂಟಿಸ್
    ಎಡ್ವರ್ಡ್ ನಾರ್ಟನ್- ಎ ಕಂಪ್ಲೀಟ್ ಅನ್‌ನೋನ್
    ಗೈ ಪಿಯರ್ಸ್- ದಿ ಬ್ರೂಟಲಿಸ್ಟ್

    ಅತ್ಯುತ್ತಮ ಮೂಲ ಚಿತ್ರಕಥೆ
    ದಿ ಸಬ್‌ಸ್ಟೆನ್ಸ್ (ಕೊರಾಲಿ ಫರ್ಗೆಟ್)
    ಅನೋರಾ (ಸೀನ್ ಬೇಕರ್)
    ದಿ ಬ್ರೂಟಲಿಸ್ಟ್ (ಬ್ರಾಡಿ ಕಾರ್ಬೆಟ್, ಮೋನಾ ಫಾಸ್ಟ್‌ವೋಲ್ಡ್)
    ಎ ರಿಯಲ್ ಪೇನ್ (ಜೆಸ್ಸಿ ಐಸೆನ್‌ಬರ್ಗ್)
    ಸೆಪ್ಟೆಂಬರ್ 5 (ಟಿಮ್ ಫೆಹ್ಲ್‌ಬಾಮ್ ಮತ್ತು ಮೊರಿಟ್ಜ್ ಎಸ್ ಬೈಂಡರ್)

    ಅತ್ಯುತ್ತಮ ರೂಪಾಂತರಿತ ಚಿತ್ರಕಥೆ
    ಎ ಕಂಪ್ಲೀಟ್‌ ಅನ್ನೌನ್‌
    ಕಾನ್‌ಕ್ಲೇವ್‌
    ಎಮಿಲಿಯಾ ಪೆರೆಜ್
    ಸಿಂಗ್‌ ಸಿಂಗ್
    ನಿಕಲ್ ಬಾಯ್ಸ್‌

    ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ
    ಎಮಿಲಿಯಾ ಪೆರೆಜ್
    ದಿ ಗರ್ಲ್ ವಿತ್ ದಿ ನೀಡ್ಲ್‌
    ಐ ಆಮ್‌ ಸ್ಟಿಲ್‌ ಹಿಯರ್‌
    ದಿ ಸೀಡ್ ಆಫ್ ದಿ ಸೇಕ್ರೆಡ್ ಫಿಗ್
    ಫ್ಲೋ

    ಅತ್ಯುತ್ತಮ ಅನಿಮೇಟೆಡ್ ಫೀಚರ್‌
    ಫ್ಲೋ
    ಇನ್‌ಸೈಡ್ ಔಟ್ 2
    ಮೆಮೊಯಿರ್ ಆಫ್ ಎ ಸ್ನೇಲ್
    ವ್ಯಾಲೇಸ್ & ಗ್ರೋಮಿಟ್: ವೆಂಜನ್ಸ್ ಮೋಸ್ಟ್ ಫೌಲ್
    ದಿ ವೈಲ್ಡ್ ರೋಬೋಟ್

    ಅತ್ಯುತ್ತಮ ಸಾಕ್ಷ್ಯಚಿತ್ರ ಫೀಚರ್‌
    ಬ್ಲಾಕ್ ಬಾಕ್ಸ್ ಡೈರೀಸ್
    ನೋ ಅದರ್ ಲ್ಯಾಂಡ್
    ಪೋರ್ಸಲೇನ್ ವಾರ್
    ಕಪ್ ಡಿ’ಎಟಾಟ್‌ಗೆ ಡಿ’ಎಟಾಟ್
    ಶುಗರ್‌ಕೇನ್

    ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ
    ಡೆತ್‌ ಬೈ ನಂಬರ್ಸ್‌
    ಐ ಆಮ್‌ ರೆಡಿ, ವಾರ್ಡನ್
    ಇನ್‌ಸಿಡೆನ್ಟ್‌
    ಇನ್‌ಸ್ಟ್ರುಮೆಂಟ್‌ ಆಫ್‌ ಎ ಬೀಟನ್‌ ಹಾರ್ಟ್ಸ್‌
    ದಿ ಓನ್ಲಿ ಗರ್ಲ್‌ ಇನ್‌ ದಿ ಆರ್ಕೆಸ್ಟ್ರಾ

    ಅತ್ಯುತ್ತಮ ಲೈವ್ ಆಕ್ಷನ್ ಶಾರ್ಟ್
    ಅನುಜಾ
    ಐ ಆಮ್‌ ನಾಟ್‌ ಎ ರೋಬೋಟ್‌
    ದಿ ಲಾಸ್ಟ್ ರೇಂಜರ್
    ಏಲಿಯನ್
    ದಿ ಮ್ಯಾನ್ ಹೂ ಕುಡ್ ರಿಮೇನ್ ಸೈಲೆಂಟ್

    ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ
    ಬ್ಯೂಟಿಫುಲ್‌ ಮೆನ್
    ‌ಇನ್‌ ದಿ ಶ್ಯಾಡೊ ಆಫ್‌ ಸೈಪ್ರೆಸ್
    ಮ್ಯಾಜಿಕ್ ಕ್ಯಾಂಡೀಸ್
    ವಂಡರ್ ಟು ವಂಡರ್
    ಯಕ್

    ಅತ್ಯುತ್ತಮ ಮೂಲ ಸಂಗೀತ
    ದಿ ಬ್ರೂಟಲಿಸ್ಟ್
    ಕಾನ್ಕ್ಲೇವ್
    ಎಮಿಲಿಯಾ ಪೆರೆಜ್
    ವಿಕೆಡ್
    ದಿ ವೈಲ್ಡ್ ರೋಬೋಟ್

    ಅತ್ಯುತ್ತಮ ಧ್ವನಿ
    ಎ ಕಂಪ್ಲೀಟ್‌ ಅನ್ನೌನ್‌
    ಡ್ಯೂನ್: ಪಾರ್ಟ್‌ ಟು
    ಎಮಿಲಿಯಾ ಪೆರೆಜ್
    ದಿ ವೈಲ್ಡ್ ರೋಬೋಟ್
    ವಿಕೆಡ್

    ಅತ್ಯುತ್ತಮ ಸಿನಿಮಾಟೋಗ್ರಫಿ
    ದಿ ಬ್ರೂಟಲಿಸ್ಟ್
    ಡ್ಯೂನ್: ಪಾರ್ಟ್‌ ಟು
    ಎಮಿಲಿಯಾ ಪೆರೆಜ್
    ಮರಿಯಾ
    ನೊಸ್ಫೆರಾಟು

    ಅತ್ಯುತ್ತಮ ಚಲನಚಿತ್ರ ಸಂಪಾದನೆ
    ಅನೋರಾ
    ದಿ ಬ್ರೂಟಲಿಸ್ಟ್
    ಕಾನ್ಕ್ಲೇವ್
    ಎಮಿಲಿಯಾ ಪೆರೆಜ್
    ವಿಕೆಡ್